Wednesday, March 11, 2026
Google search engine
Home Blog Page 51

ಪ್ರೀತಿ

0

ಡಾ. ರಜನಿ ಎಂ


ಪ್ರೀತಿಯಲ್ಲಿ
ಸೋತು ಹೋಗುತ್ತೀಯ ಎಂದರು
ಸೋಲೇ ಬೇಕು ನನಗೆ
ಆಗಲೇ ತಾನೇ ಪ್ರೀತಿಗೆ ಗೆಲುವು.

ಕಣ್ಣು ಕಾಣುತ್ತಿಲ್ಲ
ನಿನಗೆ ಎಂದರು..
ನಾನೂ ಒಪ್ಪಿದೆ..
ಹೃದಯಕ್ಕೆ
ಕಂಡಿದ್ದು ಎಂದು ಹೇಳಿದೆ.

ಪ್ರೀತಿಯಲ್ಲಿ
ಮುಳುಗಿ ಹೋಗಿದ್ದೀಯ
ಎಂದರು…
ನೀನು ಹೇಳಿದೆ ಸಾಲದು
ಇನ್ನೂ ಮುಳುಗಬೇಕೆಂದು…

ಪ್ರೀತಿಸಿ ಹೋಗಿದ್ದೀಯ
ಬರಬೇಡ ಮತ್ತೆ ಎಂದರು..
ಅದೇ ಕೊನೆ ನಿಲುಗಡೆ
ಎಂದು ಹೇಳಿದೆ.

ಪ್ರೀತಿಯೇ ಹೆಚ್ಚಾಯಿತೇ
ಎಂದರು
ನಾನು ಹೇಳಿದೆ
ಇಲ್ಲ ಕಡಿಮೆಯಾಗಿದೆ.

ನಿನಗೆ ಪ್ರೀತಿಯೇ ಗೊತ್ತಿಲ್ಲ
ಎಂದರು..
ಗೊತ್ತಾಗಿಸುವೆಯಲ್ಲ ನೀನು.

ಹುಚ್ಚಿ ಎಂದರು..
ಹುಚ್ಚಿಗೆ
ಔಷಧಿ ನೀನೇ ಅಲ್ಲವೇ.

ಷಡಕ್ಷರಿ, ಕಿರಣ್ ಗೆ ಕಾಂಗ್ರೆಸ್ ಟಿಕೆಟ್

ತುಮಕೂರು: ವಿಧಾನಸಭಾ ಚುನಾವಣೆಯ ಕಾಂಗ್ರೆಸ್ ಟಿಕೆಟ್ ಘೋಷಣೆಯಾಗಿದ್ದು, ತಿಪಟೂರಿನಲ್ಲಿ ಮಾಜಿ ಶಾಸಕ ಕೆ.ಷಡಕ್ಷರಿ ಅವರಿಗೆ ಟಿಕೆಟ್ ಘೋಷಣೆಯಾಗಿದೆ.

ಇಲ್ಲಿ ಟಿಕೆಟಗಾಗಿ ಷಡಕ್ಷರಿ, ಟೂಡಾ ಶಶಿಧರ್ ನಡುವೆ ಪೈಪೋಟಿ ಇತ್ತು. ಕಳೆದ ಸಲ ಇದೇ ಕಾರಣಕ್ಕಾಗಿ ಷಡಕ್ಷರಿ ಅವರಿಗೆ ಅಳೆದು ತೂಗಿ ಕಡೇ ಗಳಿಗೆಯಲ್ಲಿ ಟಿಕೆಟ್ ನೀಡಲಾಗಿತ್ತು.

ಈ ಸಲ ಯಾವುದೇ ಗೊಂದಲಕ್ಕೆ ಅವಕಾಶ ಇಲ್ಲದಂತೆ ಷಡಕ್ಷರಿ ಅವರಿಗೆ ನೀಡಲಾಗಿದೆ.

ಶಿರಾದಲ್ಲೂ ಸಹ ಟಿ.ಬಿ.ಜಯಚಂದ್ರ ಅವರಿಗೆ ಟಿಕೆಟ್ ನೀಡುವ ಬಗ್ಗೆ ಅನುಮಾನಗಳನ್ನು ಹರಿಯಬಿಡಲಾಗಿತ್ತು. ಈಗ ಅವರಿಗೇನೆ ನೀಡಲಾಗಿದೆ. ಸಾಸಲು ಸತೀಶ್ ಇಲ್ಲಿ ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿದ್ದರು. ಸಾಸಲು ಸತೀಶ್ ಜೆಡಿಎಸ್ ಗೆ ಸೇರಬಹುದು ಎಂಬ ವದಂತಿ ಸಹ ಇದೆ.

ಚಿಕ್ಕನಾಯಕನಹಳ್ಳಿ ಕ್ಷೇತ್ರದಿಂದ ಮಾಜಿ ಶಾಸಕ, ಬಿಜೆಪಿಯಿಂದ ಬಂದ ಕೆ.ಎಸ್.ಕಿರಣ್ ಕುಮಾರ್ ಅವರಿಗೆ ನೀಡಲಾಗಿದೆ.‌ಇಲ್ಲಿ ಡಾ. ಪರಮೇಶ್ವರಪ್ಪ ಪಕ್ಷ ಕಟ್ಟಲು ಹರಸಾಸಹ ಪಟ್ಟಿದ್ದರು. ಅವರಿಗೇನೆ ಟಿಕೆಟ್ ಎಂಬ ಸ್ಥಿತಿ ಇತ್ತು. ಆದರೆ ಕಿರಣ್ ಕುಮಾರ್ ಅವರು ಬಂದ ಕಾರಣ ಅವರಿಗೆ ನೀಡಲಾಗಿದೆ.

ತುಮಕೂರು ಗ್ರಾಮಾಂತರಕ್ಕೆ ಯಾರ ಹೆಸರನ್ನು ಘೋಷಿಸಿಲ್ಲ. ಇಲ್ಲಿ ಮಾಜಿ ಶಾಸಕ ಎಚ್.ನಿಂಗಪ್ಪ ಸ್ಪರ್ಧಿಸುವ ಬಗ್ಗೆ ಖಚಿತ ನಿರ್ಧಾರಕ್ಕೆ ಬಾರದ ಕಾರಣ ಪಕ್ಷ ಮೌನವಾಗಿದೆ.

ತುರುವೇಕೆರೆಯಿಂದ ಬೆಮಕ್ ಕಾಂತರಾಜ್, ಪಾವಗಡದಿಂದ ಶಾಸಕ ವೆಂಕಟರಮಣಪ್ಪ ಮಗ ವೆಂಕಟೇಶ್, ಮಧುಗಿರಿಯಿಂದ ಕೆ.ಎನ್.ರಾಜಣ್ಣ, ಕೊರಟಗೆರೆಯಿಂದ ಡಾ. ಜಿ.ಪರಮೇಶ್ವರ್ ಗೆ ಟಿಕೆಟ್ ಘೋಷಣೆಯಾಗಿದೆ.

ಕವನ:ತಂಗಳು ಸಾರು

0

ಡಾ ರಜನಿ ಎಂ


ಒಬ್ಬಟ್ಟಿನ ಸಾರು
ನಿನ್ನೆಯದು ಭಾಳ ರುಚಿ.
ಹುರುಳಿ ಕಟ್ಟು ಸಾರು ತಂಗಳು
ತುಪ್ಪ ಹಾಕಿ ಕುದಿಸಿದರೆ ..

ತಂಗಳನ್ನ
ಒಗ್ಗರಣೆ …
ಹಂದಿಮಾಂಸ ಸಾರು
ನಾಳೆಗೆನೇ ರುಚಿ

ತoಗಳನ್ನ ನೀರಲ್ಲಿ
ನೆನಸಿ ..ಹಸಿಮೆಣಸು

ತಂಗಳ ಮಹತ್ವ
ಬಲ್ಲವರೇ ಬಲ್ಲರು

ಮಾಡಿ ದಣಿದ
ಕೈಗಳಿಗೆ ತಂಗಳು …
ಕೊಟ್ಟ ವಿರಾಮ

ಅಟ್ಟ ಅಡುಗೆ
ಖಾಲಿ ಆಗುವ
ಬಗೆ

ಕೆಲವಕ್ಕೆ
ಆರೋಗ್ಯದ
ಗುಟ್ಟು.

ತಂಗಳು
ಉಣ್ಣದ
ಜೀವ ಇದ್ದೀತೆ
ಇದ್ದರೂ .. ಯಾಕೋ.

ತoಗಳು ತಿನ್ನೋ
ಗಂಡು ತಂಪು
ಮನಸ್ಸು ತಣ್ಣಗೆ..
ಅಡುಗೆ ವಾರ್ತೆ
ಬಲ್ಲವ…

ತಂಬಿಟ್ಟು ರಸಬಾಳೆ
ಕಿವುಚಿ
ಹುಗ್ಗೆದನ್ನ
ಕೆನೆ ಮೊಸರು

ರೊಟ್ಟಿ ಈರುಳ್ಳಿ
ಕಡಲೆ ಪುರಿ ಬತಾಸು
ಬೆಲ್ಲ ,ಕಡಲೆ ಕಾಯಿ
ಕೆನೆ ಮೊಸರು ಉಪ್ಪಿನಕಾಯಿ
ಜೋಡಿಗಳ ಗಮ್ಮತ್ತು…

ಜೀವನದ ಮಧುರ
ನೆನಪುಗಳ
ತಂಗಳು ….
ತಿಂಗಳು ಸವೆಸುವ
ಮಧ್ಯೆ ಹಾಸು ಹೊಕ್ಕು.

ತಂಗಳು ರುಚಿಯಾಗಿ
ಇರಬೇಕಾದರೆ
ಸರಿಯಾಗಿ ಹದವಾಗಿ
ಮಾಡಿ
ಹೂರಣ ಸರಿಯಾಗಿ ಹುರಿದು
ಕುದಿಸಿ
ಕಾಯಿ ಕಡಿಮೆ ಹಾಕಿ,
ಈರುಳ್ಳಿ ಕಡಿಮೆ ಹಾಕಿದರೆ ವಡೆ ಕೆಡದು.

ನೀರು ಬೀಳದಂತೆ
ಇಟ್ಟು
ಮತ್ತೆ ಕುದಿಸದೆ
ಉಂಡು..

ಹೇಗೆ ಕಂಡುಹಿಡಿದರು
ಇವುಗಳ ರುಚಿ
ಹದ?

ಅನುಭವದ ಮೂಸೆಯಿಂದ
..
ನಾಳೆಯ ತಂಗಳು
ರುಚಿಸಬೇಕಾದರೆ
ಇವತ್ತು ಸರಿಯಾಗಿ ಅಟ್ಟು
ಉಣ್ಣಬೇಕು..

ಅದೇ ಅಲ್ಲವೇ
ಒಳಗುಟ್ಟು

ತಂಗಳು ತಿನ್ನುವ
ಮುನ್ನ ಸರಿಯಾದ
ಜೋಡಿ ಬೇಕು …
ನೆನಪಿನ ತಂಗಳ ಬುತ್ತಿ
ಬಿಚ್ಚಲು …

ತಂಗಳು ತಿನ್ನದ ಮನೆ ಇಲ್ಲ. ತಂಗಳಿಗೆ ತನ್ನದೇ ಗುಣವಿದೆ.ಬೆಳಗ್ಗೆ ಎದ್ದು ಕೂಲಿಗೆ ಹೋಗುವವರಿಂದ ಹಿಡಿದು ಉಳ್ಳವರೂ ತಂಗಳಿನ ಮಹಿಮೆ ಬಲ್ಲವರೇ ಇದ್ದಾರೆ .ತಂಗಳು ಪೆಟ್ಟಿಗೆ ಇಲ್ಲದ
ಕಾಲದಲ್ಲೂ ತಂಗಳು ತಿಂದು ಉಂಡಿದ್ದೇವೆ.
ಹಬ್ಬಗಳ ನಂತರದ ತಂಗಳು ರುಚಿ. ಕೆಲವು ವಿಶೇಷ ತಂಗಳು ಪದಾರ್ಥ ಇವೆ. ನೆನಪಿನ ಬುತ್ತಿ ತಂಗಳೂ
ಊಟದ ತಂಗಳು ಸಮೀಕರಿಸಿ ,ನಮ್ಮ ಪೂರ್ವಜರ ಜಾಣ್ಮೆ ಯನ್ನು ವಿವರಿಸಿದ್ದಾರೆ ತಂಪಾದ ಕವನದ ಮೂಲಕ ಡಾಕ್ಟರ್ ರಜನಿ.

ಯುಗಾದಿಯ ಕವನ :ಒಬ್ಬಟ್ಟು

0
ರಜನಿ ಎಂ

ಸಿಹಿ ಸರಿಯಾಗಿರಬೇಕು
ಹೆಚ್ಚೂ ಆಗಬಾರದು
ಕಡಿಮೆ ಎನಿಸಬಾರದು.

ಹೂರಣ ಅತೀ
ನುಣ್ಣಗೆ ರುಬ್ಬಬಾರದು.
ಕಣಕ ತೆಳ್ಳಗೆ…
ಹರಿಷಿನ ಕಂಡೂ ಕಾಣದಂತೆ

ಏಲಕ್ಕಿ
ರುಚಿ ತಿಂದರೆ
ಮತ್ತೇರುವಂತೆ

ಮೆಂತ್ಯ ಎಲೆ ತೊಟ್ಟು
ಹಾಕಿ ಕಾಯಿಸಿದ ತುಪ್ಪ
ಬಿಸಿ ಮಾಡಿ…ಒಬ್ಬಟ್ಟಿನ
ಮೇಲೆ ಬಿಟ್ಟು..

ತುಪ್ಪದಲ್ಲಿ
ನೆಂದು
ಮಿದ್ದು ಕೊಂಡು
ತಿನ್ನಬೇಕು

ಮಕಚಿಟ್ಟು
ಆದಾಗ
ಮಧ್ಯೆ ಕಳ್ಳೆ ಗೊಜ್ಜು
ತಿಂದು ತೇಗಿ..

ಹೊಂಗೆ ಮರದಡಿ
ಮಲಗಿದರೆ
..ಅರಳಿದ ವಸಂತ
ಮುಂದಿನ ದಿನಗಳಿಗೆ

ಒಳ್ಳೇ ಮುನ್ನುಡಿ
ಬರೆದ ಹಾಗೆ..

ಒಬ್ಬಟ್ಟು ಹಬ್ಬದ ಸಂದರ್ಭದಲ್ಲಿ ಮಾಡುವ ಒಂದು ಸಿಹಿ ಖಾದ್ಯವಷ್ಟೆ ಅಲ್ಲ ಅದೊಂದು ಬಾಂದವ್ಯ ಬೆರೆತ ಅಡುಗೆ, ಒಬ್ಬಟ್ಟು ಮಾಡುವ ಕಲೆಯೂ ಕೂಡ ವಿಶೇಷ. ಹಿತಮಿತವಾದ ಸಿಹಿ ಯೊಂದಿಗೆ ಹದವರಿತ ಬೇಯುವಿಕೆ ಜೀವನದಲ್ಲೂ ಹಾಗೆ ಅಲ್ಲವೇ ಹಿತ ಮಿತವಾದ ನಡವಳಿಕೆ ಸೊಗಸು. ಬೇಸಿಗೆಯ ಬಿಸಿಲಿನ ಝಳಕ್ಕೆ ಹೊಂಗೆಯ ತಂಪು. ಬೇವುಬೆಲ್ಲದ ಜೀವನ ತತ್ವ ಕೂಡ ಸೊಗಸು ಯುಗಾದಿಯ ವಿಶೇಷ‌ ಖಾದ್ಯಕೂಡ ಹೌದು

ಮತ್ತೆ ಬಂದ ವಸಂತ

1

ಬೋಳಾದ
ಮರಗಳಿಗೆ
ಹೂವಿನ ಹೊದಿಕೆ.

ಒಣಗಿ ಅದುರಿ
ಉದುರಿದ
ಎಲೆಗಳ ಹಾಸಿಗೆ
ಗೊಬ್ಬರ…ಚಿಗುರಿದ ಗಟ್ಟಿ
ಎಳೆಯ ಎಲೆಗಳಿಗೆ.

ಮಣ್ಣಿನ ಹೆಂಟೆಗಳೂ
ಹಸಿರು ಹುಲ್ಲಿನ
ಬಟ್ಟೆ ತೊಟ್ಟು.

ತೂರಿ ಬಂದ
ಹೊಂಗೆ ಹೂವ
ಗಮಲು ತಂದ ಮತ್ತು.

ದುಂಬಿ.. ಜೇನ್ನೊಣ
ಗಳ.. ಹೊಟ್ಟೆ ತುಂಬಿದ
ಮರುಳು
ಮಾಡುವ ರಾಗ.

ನಿನಗೆ ಹೊಸ
ಹಸುರುಡುಗೆ ಎಂದು
ನಾನೂ ಹೊಸ ಬಟ್ಟೆ ತೊಟ್ಟು…

ಒಣಗಿದ್ದ
ಬೋಳು ಬರಿದು
ಮರದ ಒಳಗೆ
ಅವಿತಿದ್ದ ಜೀವ ಚೈತನ್ಯ.

ಕಾದು ಕುಳಿತಿದ್ದ
ಜೀವ ಸೆಲೆ
ಮೊಳಕೆಯೊಡೆಯಲು.

ಕಳಚಿದ ಎಲೆ
ಕರೆಯಲಿಲ್ಲ
ಕೊರಗಲಿಲ್ಲ…
ಮತ್ತೆ ಮರು ಹುಟ್ಟು ಪಡೆದು…

ಭೂಮಿಯೊಳಗಡೆ
ಯಿoದ ಹೊರಟ
ಅಷ್ಟೂ ಬಣ್ಣಗಳೂ
ಎಲ್ಲಿ ಅವಿತ್ತಿದ್ದೋ?

ಯುಗಾದಿಗೂ
ವಸಂತನಿಗೂ
ತಳುಕು….
ಮಾವಿನ ಚಿಗುರು
ಬೇವಿನ ಹೂ…ಅರಳುವ ಸಮಯ..

ವಸಂತದಲ್ಲೇ
ಚಿತ್ರಿಸುವ
ಚಿತ್ರಗಾರ …

ಕಾಮನ ಸುಟ್ಟ
ಮೇಲೆ …ಎರಚಿದ
ರಂಗುನೋಕುಳಿ … ಕಾರಣ?

ಕುಹೂ ಕುಹೂ
ಕೂಗಿ ಕರೆದು..
ಮಾನವ ಬರೇ ಕಣ್ಸನ್ನೆ…

ಮತ್ತು ಬರಿಸುವ
ಹೊಂಗೆ ನೆರಳೂ..
ಅರಳಿದ ಜಾಲಾರ…
ಹಸಿರ ಹುಲ್ಲ ಹಾಸಿಗೆ…

ಯಾರಿಗೆ ವಸಂತ
ನಿನ್ನ ತಯಾರಿ…

ಪ್ರೀತಿಸುವ ಹೃದಯಕ್ಕೂ
ಆಸ್ವಾದಿಸುವ ಕಣ್ಣಿಗೂ..

ಅರಳಿ ಪ್ರತಿ ದಿನ
ಮಾಗಿದ ಹೂವೂ

ಬಿದ್ದ ಹನಿಗೆ
ಮಣ್ಣಿನ ವಾಸನೆ..

ರಜನಿ

ಜೂಜಾಟ: ಎಚ್ಚರಿಕೆ ಕೊಟ್ಟ ಅರ್ಜುನ್ ಗೌಡ

0

ಪಾವಗಡ : ತಾಲ್ಲೂಕಿನ ವೈ.ಎನ್. ಹೊಸಕೋಟೆ ಹೋಬಳಿ ನಾಗರಿಕರು ಯುಗಾದಿ ಹಬ್ಬ ಆಚರಣೆ ಸಮಯದಲ್ಲಿ ಮನೆಗಳು ಕ್ಲಬ್ ಗಳು ಇನ್ನಿತರ ಸ್ಥಳಗಳು ಮತ್ತು ರಸ್ತೆ ಬದಿಗಳಲ್ಲಿ ಟೆಂಟ್ ನಿರ್ಮಿಸಿಕೊಂಡು ಜೂಜಾಡೋದನ್ನು ನಿಷೇಧಿಸಲಾಗಿದೆ ಎಂದು ವೈ ಎನ್ ಹೊಸಕೋಟೆ ಠಾಣೆಯ ಪಿಎಸ್ಐ ಅರ್ಜುನ್ ಗೌಡರವರು ಪತ್ರಿಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಈ ಸಂಬಂಧ ಯಾವುದೇ ರೀತಿಯ ಜೂಜಾಟ ಕಂಡು ಬಂದಲ್ಲಿ ಅವರ ಮೇಲೆ ಕಠಿಣ ಕ್ರಮ ಜರುಗಿಸಲಾಗುತ್ತದೆ ಹಾಗೂ ಇದಕ್ಕೆ ಪ್ರೋತ್ಸಾಹಿಸಿದ ಸ್ಥಳದ ಮಾಲೀಕರು ಮತ್ತು ಮಧ್ಯವರ್ತಿಗಳ ಮೇಲೆ ಕಾನೂನ ರೀತಿ ಕ್ರಮ ಜರುಗಿಸಲಾಗುವುದೆಂದು ಅಕ್ರಮ ಜುಜಾಟದಲ್ಲಿ ತೊಡಗಿರುವವರ ವಿರುದ್ಧ ಗುಂಡ ಕಾಯ್ದೆ ಅಡಿಯಲ್ಲಿ ಕ್ರಮ ಜರುಗಿಸಲಾಗುವುದೆಂದು ಈ ಮೂಲಕ ಪಿ ಎಸ್ ಎ ಅರ್ಜುನ್ ಗೌಡರವರು ಎಚ್ಚರಿಕೆ ನೀಡಿದ್ದಾರೆ.

ಸಾರ್ವಜನಿಕರು ಯಾವುದೇ ರೀತಿಯ ಜೂಜಾಟದಲ್ಲಿ ತೊಡಗುವುದಾಗಲಿ ಅದಕ್ಕೆ ಅವಕಾಶ ಮಾಡಿಕೊಡುವುದಾಗಲಿ, ಪ್ರೋತ್ಸಾಹ ಕೊಡುವುದಾಗಲಿ ಮಾಡಬಾರದು ಮಾಡಿದವರ ಮೇಲೆ ಕಠಿಣ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಎಚ್ಚರಿಕೆ ಗಂಟೆಯನ್ನು ಬಾರಿಸಿದರು.

ವರದಿ :ಕುಮಾರ ನಾಗಲಾಪುರ

ಕಾಂಗ್ರೆಸ್ ಗೆ ಬಂದ ಅಜ್ಜೇನಹಳ್ಳಿ ಯತಿರಾಜ

ಕೊರಟಗೆರೆ; 28 ವರ್ಷಗಳಿಂದ ತಾಲ್ಲೂಕಿನಲ್ಲಿ ಜೆ.ಡಿ.ಎಸ್. ಕಟ್ಟುವಲ್ಲಿ ಪ್ರಬಲ ಪಾತ್ರವಹಿಸಿದ್ದ ಪ್ರಭಾವಿ ನಾಯಕ ಅಜ್ಜೇನಹಳ್ಳಿ ಯತಿರಾಜು ಅವರು ಡಾ.ಜಿ.ಪರಮೇಶ್ವರ ಸಮ್ಮುಖದಲ್ಲಿ ಕಾಂಗ್ರೆಸ್ ಸೇರಿದರು.

ತಾಲ್ಲೂಕಿನ ತೋವಿನಕೆರೆ ಪಂಚಾಯತಿ ವ್ಯಾಪ್ತಿಯ ಅಜ್ಜೇನಹಳ್ಳಿ ಗ್ರಾಮದ ಯತಿರಾಜು ಜೆ.ಡಿ.ಎಸ್. ಪಕ್ಷ ಪಾಲಿಗೆ ಸಂಜೀವಿನಿಯಂತೆ ಕೆಲಸ ಮಾಡುತ್ತಿದ್ದರು. ಗೆಲುವಿನಲ್ಲಿ ಮುಖ್ಯ ಪಾತ್ರವಹಿಸುತ್ತಿದ್ದರು.

ಪರಮೇಶ್ವರ್ ಅವರು ಗೆದ್ದರೆ ಸರ್ಕಾರದಲ್ಲಿ ಉನ್ನತ ಸ್ಥಾನ ಪಡೆಯುತ್ತಾರೆ. ಈ ಭಾಗದ ಹಲವು ವರ್ಷಗಳ ಬೇಡಿಕೆಯಾದ ಹುಣಸೆ ಅಭಿವೃದ್ಧಿ ಮಂಡಳಿ ರಚಿಸಲು ಪ್ರಯತ್ನ ಮಾಡುವ ಭರವಸೆ ಸಿಕ್ಕಿದೆ. ಹೀಗಾಗಿ ಕಾಂಗ್ರೆಸ್ ಸೇರಿದ್ದೇನೆ. ಪರಮೇಶ್ವರ್ ಪರ ತಾಲ್ಲೂಕಿನ ಜನರು ಈ ಸಲ ಗಟ್ಟಿಯಾಗಿ ನಿಂತಿದ್ದಾರೆ. ನಮಗೆ, ತಾಲ್ಲೂಕಿನ ಅಭಿವೃದ್ಧಿಯೇ ಮುಖ್ಯ ಎನಿಸಿದೆ ಎಂದು ಪ್ರತಿಕ್ರಿಯಿಸಿದರು.


ನನ್ನ ರಾಜಕೀಯ ಪ್ರಾರಂಭವಾಗಿದ್ದು ಜೆ.ಡಿ.ಎಸ್. ಪಕ್ಷದಿಂದ, ಇದುವರೆಗೂ ಆ ಪಕ್ಷಕ್ಕೆ ನಿಷ್ಠೆ ಯಿಂದ ಕೆಲಸ ಮಾಡಿದ್ದೇನೆ. ಹೊರತು ದ್ರೋಹ ಮಾಡಿಲ್ಲ. ಇತ್ತೀಚಿನ ಕೆಲವು ಬೆಳವಣಿಗೆ ಬಹಳ ನೋವು ತಂದಿತು. ಅದಕ್ಕಾಗಿ ಪಕ್ಷವನ್ನು ಬಿಡ ಬೇಕಾ ಯಿತು. ತಾಲ್ಲೂಕಿನಲ್ಲಿ ಆ ಪಕ್ಷದಲ್ಲಿ ಎಲ್ಲವೂ ಸರಿ ಇಲ್ಲ. ಎಂದು ನೋವಿನಿಂದ ಹೇಳಿದರು.

ಕಾಂಗ್ರೆಸ್ ಗೆ ಬಂದ ಲಾಯರ್ ಭಗವಂತಪ್ಪ

ಪಾವಗಡ: ಪಟ್ಟಣದ ಹಿರಿಯ ವಕೀಲರಾದ ಭಗವಂತಪ್ಪ ರವರು ಜೆಡಿಎಸ್ ತೊರೆದ ಸೋಮವಾರ ಮಾಜಿ ಉಪಮುಖ್ಯಮಂತ್ರಿಗಳಾದ ಡಾ ಜಿ ಪರಮೇಶ್ವರ್ ಶಾಸಕರಾದ ವೆಂಕಟರಮಣಪ್ಪ ನೇತೃತ್ವದಲ್ಲಿ ಹಚ್.ವಿ.ವೆಂಕಟೇಶ್ ರವರ ಸಮ್ಮುಖದಲ್ಲಿ ಅಧಿಕೃತವಾಗಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು.

ನಂತರ ಮಾತನಾಡಿದ ಹಿರಿಯ ವಕೀಲ ಭಗವಂತಪ್ಪ ಮಾದ್ಯಮ ಬಳಿ ಮಾತನಾಡಿದ ಅವರು ಸೋಮವಾರ ಖಾಸಗಿ ಕಾರ್ಯಕ್ರಮ ಅನ್ವಯ ಮಾಜಿ ಮುಖ್ಯಮಂತ್ರಿ ಜಿ.ಪರಮೇಶ್ವರ ರವರು ರಾಮಕೃಷ್ಣ ಸೇವ ಶ್ರಮಕ್ಕೆ ಬೇಟಿ ನೀಡಿದಂತೆ ವೇಳೆ ಶಾಸಕ ವೆಂಕಟರಮಣಪ್ಪ ರವರ ಸಂಮುಕರ ಮುಂದೆ ಕಾಂಗ್ರೆಸ್ ಪಕ್ಷದ ಸೇರಿದ್ದೆನೆ ಯುಗಾದಿ ಹಬ್ಬದ ನಂತರ ಸಾವಿರಾರು ನನ್ನ ಬೆಂಬಲಿಗ ರೊಂದಿಗೆ ಬೃಹತ್ ಸೇರ್ಪಡೆ ಕಾರ್ಯಕ್ರಮ ಸಹ ಇಟ್ಟಿಕೊಂಡಿದ್ದೆನೆ.

ಜೆಡಿಎಸ್ ನವರೇ ಕಾಂಗ್ರೆಸ್ ಸೇರಲು ಪ್ರಚೋದನೆ ಮಾಡಿದ್ದಾರೆ.ಜೆಡಿಎಸ್ ನಲ್ಲಿ ಯಾವುದೇ ಹುದ್ದೆಗಾಗಿ ಆಸೆ ಪಟ್ಟಿರಲಿಲ್ಲ ಅದರೆ ನನ್ನನು ಪಕ್ಷದಲ್ಲಿ ಗಡೆಗಣಿಸಲಾದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಸೇರ್ಪಡೆ ಕೊಂಡಿದ್ದೇನೆ.
ಈ ವೇಳೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಹೆಚ್ ವಿ ವೆಂಕಟೇಶ್ ರವರು,ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಸುದೇಶ್ ಬಾಬು ರವರು ಸೇರಿ ಇನ್ನೂ ಹಲವು ಗಣ್ಯರು ಉಪಸ್ಥಿತರಿದ್ದರು.

ವರದಿ:ಕುಮಾರ ನಾಗಲಾಪುರ

ಅನಕ್ಷರಸ್ಥ ತಾಯಿ ನೀಡಿದ ಅನರ್ಘ್ಯ ರತ್ನ

ಇಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್,ತುಮಕೂರು, ಡಾ.ಸಿ.ಸೋಮಶೇಖರ ಅಭಿಮಾನಿ ಬಳಗ,ಬೆಂಗಳೂರು ಸಪ್ನ ಬುಕ್ ಹೌಸ್,ಬೆಂಗಳೂರು ಇವರುಗಳ ಸಂಯುಕ್ತಾಶ್ರಯದಲ್ಲಿ ಡಾ.ಸಿ.ಸೋಮಶೇಖರ ಆತ್ಮ ಕಥನ “ನೀ ನೊಲಿದ ಬದುಕು” ಕೃತಿ ಲೋಕರ್ಪಣೆ ಕಾರ್ಯಕ್ರಮ ಆಯೋಜಿಸಲಾಗಿತ್ತು.ದಿವ್ಯ ಸಾನಿದ್ಯ ವಹಿಸಿದ್ದ ತುಮಕೂರಿನ ರಾಮಕೃಷ್ಣಾಶ್ರಮದ ಶ್ರೀ ಶ್ರೀ ವೀರೇಶಾನಂದ ಸರಸ್ವತಿ ಸ್ವಾಮೀಜಿ ಆಶಿವ೯ಚನ ನೀಡುತ್ತಾ ಅನಕ್ಷರಸ್ಥ ತಾಯಿ ನೀಡಿದ ಅನಘ್ಯ೯ ರತ್ನ ಸೋಮಶೇಖರ ಎಂದು ನುಡಿದರು.ಸೋಮಶೇಖರ ಹೊಸಕೋಟೆಯಿಂದ ಕೆಂಪುಕೋಟೆ ವರೆಗೆ ಹೋಗಲಿ ಎಂದು ಹಾರೈಸಿದರು.

ಕೃತಿ ಬಿಡುಗಡೆ ಮಾಡಿದ ಖ್ಯಾತ ಸಾಹಿತಿಗಳಾದ ಶ್ರೀ ದೊಡ್ಡ ರಂಗೆಗೌಡರು ಮಾತನಾಡುತ್ತಾ ಸೋಮಶೇಖರ ಅವರಂಥ ಹೃದಯವಂತರು ಸಾವ೯ಜನಿಕ ಜೀವನದಲ್ಲಿ ಇರಬೇಕು ಕಡತದಲ್ಲಿ ವ್ಯಕ್ತಿಯನ್ನು ಕಾಣುವ ವಿಶಿಷ್ಟ ಅಧಿಕಾರಿ ಅವರು ಎಂದರು. ಇಂತಹ ಅಧಿಕಾರಿಗಳು ಲೋಕ ಸಭೆಯ ಸದಸ್ಯರಾದರೇ ಉತ್ತಮ ಪಾಲಿ೯ಮೆಂಟೆರಿಯನ್ ಆಗುತ್ತಾರೆ ಎಂದರು.

ತುಮಕೂರು ಜಿಲ್ಲಾಧಿಕಾರಿಗಳಾದ ಶ್ರೀ ವೈ ಎಸ್ ಪಾಟೀಲ್ ಅವರು ಮಾತನಾಡುತ್ತಾ ಸರಸ್ವತಿ ಪುತ್ರ ಡಾ.ಸೋಮಶೇಖರ ಎನಗಿಂತ ಕಿರಿಯರಿಲ್ಲ ಎಂಬ ಬಸವಣ್ಣನವರ ವಚನದಂತೆ ಬದುಕುತ್ತಿರುವವರು ಎಂದು ನುಡಿದರು

ತುಮಕೂರು ನಗರದ ಶಾಸಕ ಶ್ರೀ ಜ್ಯೋತಿ ಗಣೇಶ ಅವರು ಮಾತನಾಡುತ್ತಾ ಡಾ.ಸೋಮಶೇಖರ ಅವರ ಬದುಕು ಒಂದು ದಂತ ಕಥೆ ಅವರ ನಿವಾಸಕ್ಕೆ ಯಾರೇ ಹೋದರು ಅವರನ್ನು ಅತ್ಯಂತ ಪ್ರೀತಿಯಿಂದ ಕಾಣುತ್ತಿದ್ದರು ಎಂದು ಹೇಳಿದರು

ಸಮಾರಂಭವನ್ನು ಉದ್ದೇಶಿಸಿ ಕೃತಿಕಾರರಾದ ಡಾ.ಸಿ.ಸೋಮಶೇಖರ, ಐ ಎ ಎಸ್(ನಿ) ತಮ್ಮ ಆತ್ಮಕಥನದ ಬದುಕಿನ ನೋವು ನಲಿವಿನ ಮಜಲುಗಳನ್ನು ಮೆಲಕು ಹಾಕಿದರು.ತುಮಕೂರಿನಲ್ಲಿ ಜಿಲ್ಲಾಧಿಕಾರಿಯಾಗಿ ಸೇವೆ ಸಲ್ಲಿಸಿದ ಅವದಿ ಸಾಂಸ್ಕೃತಿಕ ಮಯವಾಗಿತ್ತು ಜನರೇ ನಮಗೆ ಸ್ಪೂರ್ತಿ ಎಂದು ನುಡಿದರು. ಈ ಆತ್ಮ ಕಥನದಿಂದ ಸಾರಸ್ವತ ಲೋಕಕ್ಕೆ ಕಿಂಚಿತ್ ಉಪಯೋಗವಾದರೆ ಅದು ನನ್ನ ಭಾಗ್ಯ ನಾನು ಕಾಯ೯ನಿವ೯ಹಿಸಿದ ನಾಡಿಗೆ ಸಂದ ಋಣ ಸಂದಾಯ ಎಂದು ಹೇಳಿದರು.

ಕೃತಿ ಕುರಿತು ವಿದ್ಯಾ ವಾಚಸ್ಪತಿ ಡಾ.ಕವಿತಾಕೃಷ್ಣ ಮಾತನಾಡಿದರು,ಕಾರ್ಯಕ್ರಮದಲ್ಲಿ ಪ್ರಜಾ ಪ್ರಗತಿ ಪತ್ರಿಕೆ ಸಂಪಾದಕ ಶ್ರೀ ಎಸ್ ನಾಗಣ್ಣ,ತುಮಕೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಶ್ರೀಚಂದ್ರಶೇಖರ್,,ಶ್ರೀಮತಿ ಸವ೯ಮಂಗಳ ಸೋಮಶೇಖರ್,ತುಮಕೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಶ್ರೀ ಕೆ ಎಸ್ ಸಿದ್ದಲಿಂಗಪ್ಪ ಹಾಗೂ ಇನ್ನಿತರ ಗಣ್ಯರು ಉಪಸ್ಥಿತರಿದ್ದರು.

ಪಾವಗಡದಲ್ಲಿ ಕಾಂಗ್ರೆಸ್ ಗೆಲ್ಲುವು: ನಿಖಿತ್ ರಾಜ್ ಮೌರ್ಯ

ವರದಿ :ಕುಮಾರ ನಾಗಲಾಪುರ


ಪಾವಗಡ : ರಾಜ್ಯದಲ್ಲಿ 2023 ರ ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದೆಗೆಲುತ್ತದೆ ಅದೇ ರೀತಿ ಪಾವಗಡದಲ್ಲೂ ಕಾಂಗ್ರೆಸ್ ಗೆಲ್ಲುವುದು ಶತಸಿದ್ಧ ಎಂದು ಕೆಪಿಸಿಸಿ ವಕ್ತರರಾದ ನಿಖಿತ್ ರಾಜ್ ಮೌರ್ಯ ಹೇಳಿದರು.
ಪಟ್ಟಣದಲ್ಲಿ ಇಂದು ನಡೆದ ಯುವ ಕಾಂಗ್ರೆಸ್‌ ಕಾರ್ಯಕರ್ತರ ಸಭೆಯಲ್ಲಿ ಭಾಗವಹಿ ಮಾತನಾಡುತ್ತಾ ಡಾ ನಂಜುಂಡಪ್ಪ ವರದಿಯಂತೆ ತಾಲ್ಲೂಕು ಬಹಳ ಹಿಂದುಳಿದ ಪ್ರದೇಶವಾಗಿತ್ತು ಇಂದು,ಕೃಷಿ,ರೇಷ್ಮೆ, ತೋಟಗಾರಿಕೆ ಬೆಳೆಗಳನ್ನುಅತೀ ಹೆಚ್ಚು ಬೆಳೆಯುವ ಜಿಲ್ಲೆಯೆಲೇ ಪ್ರಥಮ ಎಂದು ಅವರು ಡಿ ಕೆ ಶಿವಕುಮಾರ್ ದೂರದೃಷ್ಟಿ ಯಿಂದ ಇಡೀ ಪ್ರಪಂಚವೇ ಪಾವಗಡದತ್ತ ತಿರುಗಿ ನೋಡುವಂತೆ ಸೊಲಾರ್ ಪಾರ್ಕ್ ನಿರ್ಮಾಣ ಮಾಡಿದ್ದಾರೆ. ಎತ್ತಿನಹೊಳೆ, ಭದ್ರ ಮೇಲ್ದಂಡೆ ಯೋಜನೆ,ತುಂಗಭದ್ರ ಹಿನ್ನಿರು ಯೋಜನೆಗಳಡಿ ತಾಲ್ಲೂಕಿಗೆ ನೀರಾವರಿ ಸೌಲಭ್ಯಗಳು ಕಾಂಗ್ರೆಸ್ ಸರ್ಕಾರ ಕಲ್ಪಸಿದೆ ಎಂದು ನುಡಿದರು.

ನಮ್ಮದು ಡಬಲ್ ಇಂಜನ್ ಸರ್ಕಾರ ಎನ್ನುತ್ತಾರೆ ದೇಶದಲ್ಲಿ ಪೆಟ್ರೋಲ್, ಡಿಸೇಲ್, ಸೇರಿದಂತೆ ದಿನ ನಿತ್ಯ ಆಗತ್ಯ ವಸ್ತುಗಳ ಬೆಲೆ ಏರಿಕೆ ಮಾಡುತ್ತಿದೆ ಸುಳ್ಳಿನ ಭರವಸೆಗಳನ್ನೇ ನೀಡಿ ಜನರನ್ನು ದಾರಿತಪ್ಪಿಸುವ ಕೆಲಸ ಮಾಡುತ್ತಿದೆ ಜನ ಈ ಸುಳ್ಳಗಳನ್ನು ಗಮನಿಸುತ್ತಿದೆ ಮುಂದಿನ ಚುನಾವಣೆಯಲ್ಲಿ ಬಿಜೆಪಿ ಈ ಸುಳ್ಳುಗಳೇ ಸೋಲಿಗೆ ಕಾರಣವಾಗಬಹುದು ಎಂದು ಅಭಿಪ್ರಾಯಪಟ್ಟರು.

ಮಾಜಿ ಸಚಿವ ವೆಂಕಟರಮಣಪ್ಪ ಮಾತನಾಡಿ ತಾಲ್ಲೂಕಿನಲ್ಲಿ ಎಲ್ಲರ ಆಶಿರ್ವಾದದಿಂದ ನೂರಾರು ಜನ ಮೆಚ್ಚುವಂತಹನಾನು ಮಾಡಿದ ಶಾಶ್ವತ ಕಾಮಾಗಾರಿಗಳನ್ನು ಮಾಡಿದೇನೆ.ಹಾಸ್ಟೆಲ್ ಕಟ್ಟಡಗಳು, ವಿದ್ಯುತ್ ಉಪಸ್ಥವರಗಳು,ನೀರಾವರಿ ಸೌಲಭ್ಯಗಳು, ವಸತಿ ಸೌಕರ್ಯ ಗಳು, ಸೋಲಾರ್ ಪಾರ್ಕ್,ಸುಸಜ್ಜಿತ ರಸ್ತೆಗಳನ್ನು ನಿರ್ಮಾಣ ಮಾಡಿದೇವೆ .ಪಾವಗಡ ಪಟ್ಟಣದಲ್ಲಿನ ಬಡ ಜನರಿಗೆ ವೆಂಕಟರಮಣಪ್ಪ 500 ಮನೆ ನಿರ್ಮಾಣ ಮಾಡಿಕೊಟ್ಟರೆ ಅದಕ್ಕೆ ಕುಮಾರಸ್ವಾಮಿ ಲೇಔಟ್ ಅಂತರೇ ಎಂದು ವ್ಯಂಗ್ಯವಾಡಿದರು.

ನನ್ನ ಮಗ ವೆಂಕಟೇಶ್ ಶಾಸಕರಾದರು ನಾನು ಶಾಸಕ ಸ್ಥಾನದಿಂದ ನಿವೃತ್ತಿ ಆಗಬಹುದು, ಸಕ್ರಿಯ ರಾಜಕಾರಣದಿಂದ ಅಲ್ಲ ಇನ್ನೂ ದೈಹಿಕವಾಗಿ ಸದೃಡವಾಗಿದೇನೆ. ಜನರ ಸೇವೆ ಮಾಡಲು ರಾಜಕಾರಣವು ಅಗತ್ಯವಿಲ್ಲ‌ಎಂದರು

ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಶಶಿ ಹುಲ್ಲಿಕುಂಟೆ ಮಠ್ ಮಾತನಾಡಿ ಪಾವಗಡ ತಾಲ್ಲೂಕಿನಲ್ಲಿ ವೆಂಕಟರಮಣಪ್ಪ ಅವರು ಮಾಡಿರುವ ಅಭಿವೃದ್ಧಿ ಕಾರ್ಯಗಳನ್ನು ಮುಂದಿಟ್ಟುಕೊಂಡು ಬೂತ್ ಮಟ್ಟದಲ್ಲಿ ಪ್ರಚಾರ ನಡೆಸಿ ಹೆಚ್ ವಿ ವೆಂಕಟೇಶ್ ಗೆಲ್ಲುವಿಗೆ ಶ್ರಮಿಸಬೇಕು ಎಂದು ಹೇಳಿದರು.

ನಗರ ಬ್ಲಾಕ್ ಅಧ್ಯಕ್ಷ
ಬಾಬು ಮಾತನಾಡಿ ನಲವತ್ತೈದು ಸಾವಿರ ಮತದಾರರು ಕಾಂಗ್ರೆಸ್ ಪಕ್ಷದ ಸದಸ್ಯತ್ವ ಪಡೆದಿದ್ದಾರೆ ಒಬ್ಬರು ತಮ್ಮ ಮತದ ಜೊತೆಗೆ ಮತ್ತೊಬ್ಬರ ಮತ ಹಾಕಿಸಿದರೆ ಕಾಂಗ್ರೆಸ್ ತಾಲ್ಲೂಕಿನಲ್ಲಿ ಅಧಿಕಾರ ಬರುತ್ತದೆ ಆ ನಿಟ್ಟಿನಲ್ಲಿ ಎಲ್ಲರೂ ಕಾರ್ಯ ಪ್ರವೃತ್ತರಾಗಬೇಕೆಂದು ಹೇಳಿದರು.

ಜನರ ಕಷ್ಟಗಳಿಗೆ ಮಿಡಿಯುವ ಮನಸ್ಸಿಲ್ಲ ತಿಮ್ಮರಾಯಪ್ಪ ನಿಗೆ


ಜಿ ಪಂ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಸಂಭವನೀಯ ಅಭ್ಯರ್ಥಿ ಹೆಚ್ ವಿ ವೆಂಕಟೇಶ್ ‌ಮಾತನಾಡಿ.
ಕೆ ಎಂ ತಿಮ್ಮರಾಯಪ್ಪ ನಾನು ಬಡವ ಬಡವ ಎನ್ನುತಲೆ ದುಂಡುಗಾಗುತ್ತಿದ್ದಾರೆ ಎಂದು ಟೀಕಿಸಿದರು.

ಜೆಡಿಎಸ್ ಕಾರ್ಯಕರ್ತರು,ಹಾಗೂ ಸಾರ್ವಜನಿಕರಿಗೆ ಮಂಕು ಬುದ್ದಿ ಎರಚಿ ರಾಜಕಾರಣ ಮಾಡುತ್ತಿ ದ್ದಾರೆ.ರಾಜಕಾರಣದಿಂದ ಮಾಡಿದ ಹಣವನ್ನು ಸಹ ಜನರ ಕಷ್ಟಗಳಿಗೆ ಬಳಸುತ್ತಿಲ್ಲ .ಕರೋನ ಕಾಲದಲ್ಲಿ ಮಾಜಿ ಶಾಸಕರು ದೇಣಿಗೆ ಎತ್ತಿ ಸಹಾಯ ಮಾಡುತ್ತಾರೆಎಂದರೆ ಜನರ ಬಗ್ಗೆ ಎಷ್ಟು ವಿಶ್ವಾಸ ಇದೇ ಎಂದು ಜನ ಮನವರಿಕೆ ಮಾಡಿಕೊಳ್ಳಿ ಎಂದರು.

ತಾಲ್ಲೂಕಿನ ಹಿರಿಯರನ್ನು ಕಡೆಗಣಿಸಲ್ಲ. ಪ್ರತಿ ಹಳ್ಳಿಯಲ್ಲೂ ಯುವ ಕಾರ್ಯಕರ್ತರ ನೇತೃತ್ವದಲ್ಲಿ ಈ ಬಾರಿ ಚುನಾವಣೆ ನಡೆಸಲು ತಿರ್ಮಾನಿಸಿದೇವೆ ಎಂದು ಹೇಳಿದ ವೆಂಕಟೇಶ್, ಮುಂದಿನ ದಿನದಲ್ಲಿ ತಾಲ್ಲೂಕಿನಲ್ಲಿ ಹತ್ತು ಸಾವಿರ ಉದ್ಯೋಗ ಸೃಷ್ಟಿಸಲು ಗಾರ್ಮೆಂಟ್ಸ ನಿರ್ಮಿಸವುದಾಗಿ ತಿಳಿಸಿದರು.


ಕಾಂಗ್ರೆಸ್ ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಮಾಂಜಿನಪ್ಪ,ಮಾಜಿ‌ಪುರಸಭೆ ಅಧ್ಯಕ್ಷೆ ಸುಮ ಅನಿಲ್ ಕುಮಾರ್,ಐಟಿ ಘಟಕದ ಯುವ ಮುಖಂಡರಾದ ಭರತ್ ಪಾಳೇಗಾರ,ನಜೀರ್ ಮಾತನಾಡಿದರು.

ಕಾರ್ಯಕ್ರಮ ಕ್ಕೂ ಮುನ್ನ ಚಳ್ಳಕೆರೆ ಕ್ರಾಸ್ ನಿಂದ ಎಸ್ ಎಸ್ ಕೆ ಬಯಲು ರಂಗಮಂದಿರದವರೆಗೆ ಬೈಕ್ ರ್ಯಾಲಿ ನಡೆಸಿದರು.

ಕಾರ್ಯಕ್ರಮದಲ್ಲಿ ,ಪುರಸಭಾ ಸದಸ್ಯರಾದ ರಾಜೇಶ್,ರವಿ, ಗ್ರಾಮೀಣ ಮಹಿಳಾ ಕಾಂಗ್ರೆಸ್ ಉಪಾಧ್ಯಕ್ಷರಾದ ಉಷರಾಣಿ ಮಾಜಿ ಪುರಸಭೆ ಸುಮ , ಅನಿಲ್,ವೇಲ್ ರಾಜು , ವೀಣಾ ಅಂಜನಕುಮಾರ್, ಗುತ್ತಿಗೆದಾರ ಶಂಕರ್ ರೆಡ್ಡಿ, ಮುಖಂಡರಾದ ಬತ್ತಿನೇನಿ ನಾನಿ,ಪುರಸಭೆ ಅಧ್ಯಕ್ಷರಾದ ಧನಲಕ್ಮೀ ,ತಾಲ್ಲೂಕು ಯುವ ಕಾಂಗ್ರೆಸ್ ಅಧ್ಯಕ್ಷ ಸುಜೀತ್ ಕುಮಾರ್. ಎಸ್ ಸಿ ಘಟಕದ ಅಧ್ಯಕ್ಷ ಚಿನ್ನಮ್ಮನಹಳ್ಳಿ ಶ್ರೀರಾಮ,ಮದನ್ ರೆಡ್ಡಿ, ತಿಪ್ಪೇಸ್ವಾಮಿ, ಅನಿಲ್ ಕುಮಾರ್ ,ಆರ್ ಕೆ ನಿಸ್ಸಾರ್ ,ಬಿಂದು ಮಾಧವರಾವ್ ಮತ್ತಿತರರು ಹಾಜರಿದ್ದರು.