ಡಾ ರಜನಿ ಎಂ

ಒಬ್ಬಟ್ಟಿನ ಸಾರು
ನಿನ್ನೆಯದು ಭಾಳ ರುಚಿ.
ಹುರುಳಿ ಕಟ್ಟು ಸಾರು ತಂಗಳು
ತುಪ್ಪ ಹಾಕಿ ಕುದಿಸಿದರೆ ..
ತಂಗಳನ್ನ
ಒಗ್ಗರಣೆ …
ಹಂದಿಮಾಂಸ ಸಾರು
ನಾಳೆಗೆನೇ ರುಚಿ
ತoಗಳನ್ನ ನೀರಲ್ಲಿ
ನೆನಸಿ ..ಹಸಿಮೆಣಸು
ತಂಗಳ ಮಹತ್ವ
ಬಲ್ಲವರೇ ಬಲ್ಲರು
ಮಾಡಿ ದಣಿದ
ಕೈಗಳಿಗೆ ತಂಗಳು …
ಕೊಟ್ಟ ವಿರಾಮ
ಅಟ್ಟ ಅಡುಗೆ
ಖಾಲಿ ಆಗುವ
ಬಗೆ
ಕೆಲವಕ್ಕೆ
ಆರೋಗ್ಯದ
ಗುಟ್ಟು.
ತಂಗಳು
ಉಣ್ಣದ
ಜೀವ ಇದ್ದೀತೆ
ಇದ್ದರೂ .. ಯಾಕೋ.
ತoಗಳು ತಿನ್ನೋ
ಗಂಡು ತಂಪು
ಮನಸ್ಸು ತಣ್ಣಗೆ..
ಅಡುಗೆ ವಾರ್ತೆ
ಬಲ್ಲವ…
ತಂಬಿಟ್ಟು ರಸಬಾಳೆ
ಕಿವುಚಿ
ಹುಗ್ಗೆದನ್ನ
ಕೆನೆ ಮೊಸರು
ರೊಟ್ಟಿ ಈರುಳ್ಳಿ
ಕಡಲೆ ಪುರಿ ಬತಾಸು
ಬೆಲ್ಲ ,ಕಡಲೆ ಕಾಯಿ
ಕೆನೆ ಮೊಸರು ಉಪ್ಪಿನಕಾಯಿ
ಜೋಡಿಗಳ ಗಮ್ಮತ್ತು…
ಜೀವನದ ಮಧುರ
ನೆನಪುಗಳ
ತಂಗಳು ….
ತಿಂಗಳು ಸವೆಸುವ
ಮಧ್ಯೆ ಹಾಸು ಹೊಕ್ಕು.
ತಂಗಳು ರುಚಿಯಾಗಿ
ಇರಬೇಕಾದರೆ
ಸರಿಯಾಗಿ ಹದವಾಗಿ
ಮಾಡಿ
ಹೂರಣ ಸರಿಯಾಗಿ ಹುರಿದು
ಕುದಿಸಿ
ಕಾಯಿ ಕಡಿಮೆ ಹಾಕಿ,
ಈರುಳ್ಳಿ ಕಡಿಮೆ ಹಾಕಿದರೆ ವಡೆ ಕೆಡದು.
ನೀರು ಬೀಳದಂತೆ
ಇಟ್ಟು
ಮತ್ತೆ ಕುದಿಸದೆ
ಉಂಡು..
ಹೇಗೆ ಕಂಡುಹಿಡಿದರು
ಇವುಗಳ ರುಚಿ
ಹದ?
ಅನುಭವದ ಮೂಸೆಯಿಂದ
..
ನಾಳೆಯ ತಂಗಳು
ರುಚಿಸಬೇಕಾದರೆ
ಇವತ್ತು ಸರಿಯಾಗಿ ಅಟ್ಟು
ಉಣ್ಣಬೇಕು..
ಅದೇ ಅಲ್ಲವೇ
ಒಳಗುಟ್ಟು
ತಂಗಳು ತಿನ್ನುವ
ಮುನ್ನ ಸರಿಯಾದ
ಜೋಡಿ ಬೇಕು …
ನೆನಪಿನ ತಂಗಳ ಬುತ್ತಿ
ಬಿಚ್ಚಲು …
ತಂಗಳು ತಿನ್ನದ ಮನೆ ಇಲ್ಲ. ತಂಗಳಿಗೆ ತನ್ನದೇ ಗುಣವಿದೆ.ಬೆಳಗ್ಗೆ ಎದ್ದು ಕೂಲಿಗೆ ಹೋಗುವವರಿಂದ ಹಿಡಿದು ಉಳ್ಳವರೂ ತಂಗಳಿನ ಮಹಿಮೆ ಬಲ್ಲವರೇ ಇದ್ದಾರೆ .ತಂಗಳು ಪೆಟ್ಟಿಗೆ ಇಲ್ಲದ
ಕಾಲದಲ್ಲೂ ತಂಗಳು ತಿಂದು ಉಂಡಿದ್ದೇವೆ.
ಹಬ್ಬಗಳ ನಂತರದ ತಂಗಳು ರುಚಿ. ಕೆಲವು ವಿಶೇಷ ತಂಗಳು ಪದಾರ್ಥ ಇವೆ. ನೆನಪಿನ ಬುತ್ತಿ ತಂಗಳೂ
ಊಟದ ತಂಗಳು ಸಮೀಕರಿಸಿ ,ನಮ್ಮ ಪೂರ್ವಜರ ಜಾಣ್ಮೆ ಯನ್ನು ವಿವರಿಸಿದ್ದಾರೆ ತಂಪಾದ ಕವನದ ಮೂಲಕ ಡಾಕ್ಟರ್ ರಜನಿ.