ಕೊರಟಗೆರೆ; 28 ವರ್ಷಗಳಿಂದ ತಾಲ್ಲೂಕಿನಲ್ಲಿ ಜೆ.ಡಿ.ಎಸ್. ಕಟ್ಟುವಲ್ಲಿ ಪ್ರಬಲ ಪಾತ್ರವಹಿಸಿದ್ದ ಪ್ರಭಾವಿ ನಾಯಕ ಅಜ್ಜೇನಹಳ್ಳಿ ಯತಿರಾಜು ಅವರು ಡಾ.ಜಿ.ಪರಮೇಶ್ವರ ಸಮ್ಮುಖದಲ್ಲಿ ಕಾಂಗ್ರೆಸ್ ಸೇರಿದರು.
ತಾಲ್ಲೂಕಿನ ತೋವಿನಕೆರೆ ಪಂಚಾಯತಿ ವ್ಯಾಪ್ತಿಯ ಅಜ್ಜೇನಹಳ್ಳಿ ಗ್ರಾಮದ ಯತಿರಾಜು ಜೆ.ಡಿ.ಎಸ್. ಪಕ್ಷ ಪಾಲಿಗೆ ಸಂಜೀವಿನಿಯಂತೆ ಕೆಲಸ ಮಾಡುತ್ತಿದ್ದರು. ಗೆಲುವಿನಲ್ಲಿ ಮುಖ್ಯ ಪಾತ್ರವಹಿಸುತ್ತಿದ್ದರು.
ಪರಮೇಶ್ವರ್ ಅವರು ಗೆದ್ದರೆ ಸರ್ಕಾರದಲ್ಲಿ ಉನ್ನತ ಸ್ಥಾನ ಪಡೆಯುತ್ತಾರೆ. ಈ ಭಾಗದ ಹಲವು ವರ್ಷಗಳ ಬೇಡಿಕೆಯಾದ ಹುಣಸೆ ಅಭಿವೃದ್ಧಿ ಮಂಡಳಿ ರಚಿಸಲು ಪ್ರಯತ್ನ ಮಾಡುವ ಭರವಸೆ ಸಿಕ್ಕಿದೆ. ಹೀಗಾಗಿ ಕಾಂಗ್ರೆಸ್ ಸೇರಿದ್ದೇನೆ. ಪರಮೇಶ್ವರ್ ಪರ ತಾಲ್ಲೂಕಿನ ಜನರು ಈ ಸಲ ಗಟ್ಟಿಯಾಗಿ ನಿಂತಿದ್ದಾರೆ. ನಮಗೆ, ತಾಲ್ಲೂಕಿನ ಅಭಿವೃದ್ಧಿಯೇ ಮುಖ್ಯ ಎನಿಸಿದೆ ಎಂದು ಪ್ರತಿಕ್ರಿಯಿಸಿದರು.
ನನ್ನ ರಾಜಕೀಯ ಪ್ರಾರಂಭವಾಗಿದ್ದು ಜೆ.ಡಿ.ಎಸ್. ಪಕ್ಷದಿಂದ, ಇದುವರೆಗೂ ಆ ಪಕ್ಷಕ್ಕೆ ನಿಷ್ಠೆ ಯಿಂದ ಕೆಲಸ ಮಾಡಿದ್ದೇನೆ. ಹೊರತು ದ್ರೋಹ ಮಾಡಿಲ್ಲ. ಇತ್ತೀಚಿನ ಕೆಲವು ಬೆಳವಣಿಗೆ ಬಹಳ ನೋವು ತಂದಿತು. ಅದಕ್ಕಾಗಿ ಪಕ್ಷವನ್ನು ಬಿಡ ಬೇಕಾ ಯಿತು. ತಾಲ್ಲೂಕಿನಲ್ಲಿ ಆ ಪಕ್ಷದಲ್ಲಿ ಎಲ್ಲವೂ ಸರಿ ಇಲ್ಲ. ಎಂದು ನೋವಿನಿಂದ ಹೇಳಿದರು.