Friday, March 13, 2026
Google search engine
Home Blog Page 52

ನಿನೊಲಿದ ಬದುಕು ಕೃತಿ ಬಿಡುಗಡೆ

ನಾಳೆ ತುಮಕೂರಿನಲ್ಲಿ ನಿನೊಲಿದ ಬದುಕು ಕೃತಿ ಬಿಡುಗಡೆ ಕಾರ್ಯಕ್ರಮವನ್ನು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್, ಸ್ವಪ್ನ ಬುಕ್ ಹೌಸ್ ಇವರ ಸಹಯೋಗದಲ್ಲಿ ಡಾ. ಸಿ ಸೋಮಶೇಖರ್ ಅವರ ಅಭಿಮಾನಿ ಬಳಗ ಪುಸ್ತಕ ಬಿಡುಗಡೆ ಕಾರ್ಯಕ್ರಮವನ್ನು ಆಯೋಜಿಸಿದೆ.

ಕರ್ನಾಟಕ ಸರ್ಕಾರದ ಹಿರಿಯ ಐ.ಎ.ಎಸ್. ಅಧಿಕಾರಿಯಾಗಿ ನಿವೃತ್ತರಾಗಿರುವ ಸಿ.ಸೋಮಶೇಖರ ಅವರ ವ್ಯಕ್ತಿತ್ವ ಬಹುಮುಖ ಹಾಗೂ ಅತ್ಯಂತ ಸೃಜನಶೀಲವಾದದ್ದು. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆಯಲ್ಲಿ ಶರಣ ಸಂಸ್ಕೃತಿಯ ಹಿನ್ನೆಲೆಯಲ್ಲಿನ ಕುಟುಂಬದಲ್ಲಿ ಜೆ.ವಿ.ಚಿಕ್ಕವೀರಪ್ಪ ಮತ್ತು ನಂಜಮ್ಮನವರ ಸುಪುತ್ರರಾಗಿ 09-08-1954ರಲ್ಲಿ ಜನಿಸಿದ ಸಿ.ಸೋಮಶೇಖರ ಅವರು ಬಾಲ್ಯದಿಂದಲೇ ಶರಣ ಸಂಸ್ಕೃತಿಯನ್ನು ಬದುಕಿನಲ್ಲಿ ಅಳವಡಿಸಿಕೊಂಡವರು. ವಿದ್ಯಾರ್ಥಿ ದೆಸೆಯಿಂದಲೇ ಶೈಕ್ಷಣಿಕ ಪ್ರತಿಭೆಯ ಜೊತೆಗೆ ಉತ್ತಮ ವಾಗ್ಮಿಯಾಗಿ ಚರ್ಚಾಸ್ಪರ್ಧೆ, ಭಾಷಣ ಸ್ಪರ್ಧೆ ಮುಂತಾದ ಸಾಹಿತ್ಯಕ ಸ್ಪರ್ಧಾ ಚಟುವಟಿಕೆಗಳಲ್ಲಿ ನೂರಾರು ಪ್ರಶಸ್ತಿ, ಬಹುಮಾನಗಳನ್ನು ಗಳಿಸಿದ ಹಿರಿಮೆಗೆ ಪಾತ್ರರಾಗಿದ್ದವರು. ಬೆಂಗಳೂರು ವಿಶ್ವವಿದ್ಯಾನಿಲಯದಿಂದ ಎಂ.ಕಾಂ. ಪದವಿ ಪಡೆದು ಮೊದಲು ಬೆಂಗಳೂರಿನ ಕೆ.ಎಲ್.ಇ. ಕಾಲೇಜಿನಲ್ಲಿ ವಾಣಿಜ್ಯ ಅಧ್ಯಾಪಕರಾಗಿ ಕಾರ್ಯ ನಿರ್ವಹಿಸಿದವರು, ತದನಂತರ ರಾಜ್ಯ ಸರ್ಕಾರದಲ್ಲಿ 1982ರಲ್ಲಿ ಅಸಿಸ್ಟೆಂಟ್ ಕಮೀಷನರ್ ಆಗಿ ಆಯ್ಕೆಯಾಗಿ ಪ್ರಮುಖ ಇಲಾಖೆಯಲ್ಲಿ ದಕ್ಷತೆ ಹಾಗೂ ಮಾನವೀಯ ಸಂವೇದನೆಯೊಂದಿಗೆ ಕಾರ್ಯ ನಿರ್ವಹಿಸಿದವರು. ಭಾರತೀಯ ಲೋಕಸೇವಾ ಆಯೋಗದಿಂದ ಕೇಂದ್ರ ಪ್ರಥಮ ದರ್ಜೆ ಸೇವೆಗೆ ಆಯ್ಕೆಯಾಗಿದ್ದರೂ ನಾಡು ನುಡಿ ಮೇಲಿನ ಅಭಿಮಾನದಿಂದ ಅವರು ರಾಜ್ಯಸೇವೆಯನ್ನೇ ಆಯ್ಕೆ ಮಾಡಿಕೊಂಡರು.

ರಾಜ್ಯ ಸರ್ಕಾರದಿಂದ ಕನ್ನಡ ಸಂಸ್ಕೃತಿ ಇಲಾಖೆ, ಪ್ರವಾಸೋದ್ಯಮ ಇಲಾಖೆ, ಕೃಷಿ ಮಾರುಕಟ್ಟೆ ಇಲಾಖೆ, ಅಬಕಾರಿ ಇಲಾಖೆಗಳಂತಹ ಹಲವಾರು ಪ್ರಮುಖ ಇಲಾಖೆಗಳಲ್ಲಿ ಅತ್ಯಂತ ಕ್ರಿಯಾಶೀಲರಾಗಿ ದಕ್ಷತೆಯಿಂದ ಕಾರ್ಯ ನಿರ್ವಹಿಸಿದ ಶ್ರೀಯುತರಿಗೆ ತುಮಕೂರು ಜಿಲ್ಲಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದ ಅವಧಿ ಹೆಚ್ಚಿನ ಜನಮನ್ನಣೆಯನ್ನು ತಂದುಕೊಟ್ಟಿತು. ಸಹಕಾರ ಇಲಾಖೆಯ ಕಾರ್ಯದರ್ಶಿಯಾಗಿ 2014 ಜೂನ್‌ನಲ್ಲಿ ನಿವೃತ್ತರಾದ ಡಾ. ಸಿ.ಸೋಮಶೇಖರ ಅವರು ಇದೀಗ ಸಾರ್ವಜನಿಕ ಬದುಕಿನಲ್ಲಿ ಸಾಹಿತ್ಯ ಮತ್ತು ಸಾಮಾಜಿಕ ಸೇವೆಯಲ್ಲಿ ಹೆಚ್ಚು ಕ್ರಿಯಾಶೀಲರಾಗಿದ್ದಾರೆ. ಬಾಲ್ಯದಿಂದಲೂ ವಚನಾಧ್ಯಯನ ಅವರ ಆದ್ಯತೆಯ ವಿಷಯ, ಡಾ. ಎಚ್ಚೆಸ್ಕೆ ಅವರು ಹೇಳಿರುವಂತೆ ತತ್ವದಲ್ಲಿ ಅದ್ದಿದ ಮನಸ್ಸು”. ”ಸೋಮಶೇಖರ ಅವರದು ಬಸವ

ರಾಜ್ಯದ ಶರಣ ಸಾಹಿತ್ಯ ಪ್ರಸಾರದ ಪ್ರಧಾನ ಸಂಸ್ಥೆಗಳಲ್ಲಿ ಒಂದಾದ ಬಸವ ವೇದಿಕೆಯನ್ನು ಸಮಾನ ಮನಸ್ಕರೊಂದಿಗೆ 1991ರಲ್ಲಿ ಸ್ಥಾಪನೆ ಮಾಡಿ ಈ ಸಂಸ್ಥೆಯ ವತಿಯಿಂದ ಪ್ರತಿಷ್ಠಿತ ‘ಬಸವಶ್ರೀ’ ಮತ್ತು ‘ವಚನಸಾಹಿತ್ಯಶ್ರೀ’ ಪ್ರಶಸ್ತಿಗಳನ್ನು ಪ್ರದಾನ ಮಾಡುತ್ತಿರುವ ಡಾ. ಸಿ.ಸೋಮಶೇಖರ ಅವರು ತಮ್ಮ ನಿವೃತ್ತಿಯ ನಂತರ 2015ರಲ್ಲಿ ‘ಡಾ. ಸಿ.ಸೋಮಶೇಖರ-ಶ್ರೀಮತಿ ಎನ್ .ಸರ್ವಮಂಗಳ ಸಾಹಿತ್ಯ ಸೇವಾ ಪ್ರತಿಷ್ಠಾನ’ವನ್ನು ಸ್ಥಾಪಿಸಿ ಈ ಎರಡೂ ಸಂಸ್ಥೆಗಳ ಅಧ್ಯಕ್ಷರಾಗಿದ್ದು ನಾಡಿನ ಸಾಹಿತ್ಯಕ, ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ವಿಶೇಷವಾಗಿ ವಚನ ಸಾಹಿತ್ಯ ಕ್ಷೇತ್ರದಲ್ಲಿ ಅಪಾರವಾದ ಸೇವೆಯನ್ನು ಸಲ್ಲಿಸುತ್ತಾ ಬಂದಿದ್ದಾರೆ. ಬಾಲ್ಯದಿಂದಲೂ ವಚನ ಸಾಹಿತ್ಯದ ಬಗ್ಗೆ ಅಪಾರವಾದ ಆಸಕ್ತಿಯೊಂದಿಗೆ ಅವರು ನಡೆಸಿದ ತಳಸ್ಪರ್ಶಿ ಅಧ್ಯಯನದ ಫಲವಾಗಿ ಅವರು ರಚಿಸಿದ ‘ವಚನಗಳಲ್ಲಿ ಸಾಮಾಜಿಕ ಚಿಂತನೆ’ ಎಂಬ ಮಹಾಪ್ರಬಂಧಕ್ಕೆ ಹಂಪಿ ವಿಶ್ವವಿದ್ಯಾನಿಲಯವು ಡಿ.ಲಿಟ್ ನೀಡಿ ಗೌರವಿಸಿದೆ. ಶ್ರೀಯುತರಿಗೆ ಅನೇಕ ಗೌರವಾನ್ವಿತವಾದ ರಾಜ್ಯ ಹಾಗೂ ರಾಷ್ಟ್ರಮಟ್ಟದ ಪ್ರಶಸ್ತಿಗಳು ಅರ್ಹವಾಗಿಯೇ ಸಂದಾಯವಾಗಿವೆ.

ಒಬ್ಬ ಅಪರೂಪದ ವಾಗ್ಮಿಗಳಾಗಿ ವಿವಿಧ ವಿಷಯಗಳ ಬಗ್ಗೆ ಅನೇಕ ರಾಷ್ಟ್ರ ಹಾಗೂ ಅಂತರಾಷ್ಟ್ರೀಯ ಸಮ್ಮೇಳನಗಳಲ್ಲಿ ಪಾಲ್ಗೊಂಡು ಅತ್ಯಂತ ವಿಚಾರಪೂರ್ವಕ ಉಪನ್ಯಾಸಗಳನ್ನು ನೀಡುತ್ತಾ ಬಂದಿರುವ ಜನಪ್ರಿಯ ಡಾ. ಸಿ.ಸೋಮಶೇಖರ ಅವರು “ಎನಗಿಂತ ಕಿರಿಯರಿಲ್ಲ” ಎನ್ನುವ ಶರಣರ ಸಂದೇಶಕ್ಕೆ ತಕ್ಕಂತೆ ತನ್ನ ಬದುಕನ್ನು ರೂಪಿಸಿಕೊಂಡಿರುವವರು.

ನಿವೃತ್ತಿಯ ನಂತರ ಕರ್ನಾಟಕ ರೆಡ್ ಕ್ರಾಸ್ ಸಂಸ್ಥೆಯ ರಾಜ್ಯ ಉಪಾಧ್ಯಕ್ಷರಾಗಿ, ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಕಾರ್ಯಾಧ್ಯಕ್ಷರಾಗಿ ಕಾರ್ಯ ನಿರ್ವಹಿಸಿರುವ ಇವರು ಪ್ರಸ್ತುತ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ಕರ್ನಾಟಕ ಗಡಿಭಾಗದಲ್ಲಿ ವಿಶ್ವತವಾಗಿ ಸಂಚಾರ ಮಾಡಿ ಕನ್ನಡ ಅಸ್ಮಿತೆಯನ್ನು ಸಂರಕ್ಷಿಸುವಲ್ಲಿ ಪ್ರಾಮಾಣಿಕವಾಗಿ ಶ್ರಮಿಸುತ್ತಿದ್ದಾರೆ. ಇವರ ಬದುಕು ಒಂದು ರೀತಿಯಲ್ಲಿ ಹೋರಾಟದ ಬದುಕು, ಸ್ನೇಹ, ಪ್ರೀತಿ, ದಯೆ, ಮಾನವೀಯ ಅನುಕಂಪಗಳಂತಹ ಜೀವನ ಮೌಲ್ಯಗಳನ್ನು ತಮ್ಮ ಆಡಳಿತ ಹಾಗೂ ಸಾರ್ವಜನಿಕ ಬದುಕಿನಲ್ಲಿ ಅಳವಡಿಸಿಕೊಂಡು ಬಂದಿರುವ ಇವರು ಒಬ್ಬ ಅಜಾತಶತ್ರು ಅವರ ಆತ್ಮಕಥನ “ನೀನೊಲಿದ ಬದುಕು” ಅವರ ಬದುಕಿನ ಪಯಣದ ಒಂದು ವಿಶಿಷ್ಟ ಕಥಾನಕವಾಗಿದೆ.

ಪುಸ್ತಕ ಬಿಡುಗಡೆಯ ಕಾರ್ಯಕ್ರಮವು ಶ್ರೀ ಶ್ರೀ ವೀರೇಶಾನಂದ ಸರಸ್ವತಿ ಸ್ವಾಮೀಜಿ ಅವರ ದಿವ್ಯ ಸಾನಿದ್ಯದಲ್ಲಿ, ಮಾನ್ಯ ಶಾಸಕರಾದ ಶ್ರೀ ಜಿ.ಬಿ.ಜ್ಯೋತಿಗಣೇಶ್‌ ಅವರ ಅಧ್ಯಕ್ಷತೆಯಲ್ಲಿ ಡಾ ವೈ ಎಸ್ ಪಾಟೀಲ್, ಭಾ.ಆ.ಸೇ ಉದ್ಘಟಿಸಲಿದ್ದಾರೆ, ಡಾ. ದೊಡ್ಡರಂಗೇಗೌಡ ಅವರು ಕೃತಿ ಲೋಕಾರ್ಪಣೆ ಮಾಡಲಿದ್ದಾರೆ. ಕೃತಿ ಕುರಿತು ಪರಿಚಯವನ್ನು ವಿದ್ಯಾವಾಚಸ್ಪತಿ ಡಾ. ಕವಿತಾಕೃಷ್ಣ ಅವರು ಮಾಡಲಿದ್ದಾರೆ. ಕೆ ಎಸ್ ಸಿದ್ದಲಿಂಗಪ್ಪ,ಡಾ. ಎಂ ವೆಂಕಟೇಶ್ವರಲು, ಡಾ ಕೆ ವಿದ್ಯಾಕುಮಾರಿ ಭಾ,ಆ,ಸೇ ತುಮಕೂರು ಇವರು ಉಪಸ್ಥಿತಲಿರಲಿದ್ದಾರೆ.

ಸುರೇಶಗೌಡರು ಗೆದ್ದರೆ ಕೋಲ್ಡ್ ಸ್ಟೋರೇಜ್, ಮಹಿಳಾ ಕಾಲೇಜು

0

ನಾಗವಲ್ಲಿ: ತುಮಕೂರು ಗ್ರಾಮಾಂತರ ಕ್ಷೇತ್ರದಲ್ಲಿ ಸುರೇಶಗೌಡರನ್ನು ಗೆಲ್ಲಿಸಿದರೆ ರೈತರು ತಮ್ಮ‌ಉತ್ಪನ್ನಗಳನ್ನು ಕೆಡದಂತೆ ಇಡಲು ಕೋಲ್ಡ್ ಸ್ಟೋರೇಜ್, ಹೆಣ್ಣು ಮಕ್ಕಳಿಗಾಗಿ ಮಹಿಳಾ ಕಾಲೇಜು ಸ್ಥಾಪಿಸುವ ಭರವಸೆಯನ್ನು ಕೇಂದ್ರ ಕೃಷಿ ಸಚಿವೆ ಶೋಭಾ ಕರಂದ್ಲಾಜೆ ನೀಡಿದರು.

ಶಕ್ತಿಸೌಧದಲ್ಲಿ ನಡೆದ ಬೃಹತ್ ಮಹಿಳಾ ಸಮಾವೇಷದಲ್ಲಿ ಮಾತನಾಡಿದ ಅವರು ಮಹಿಳೆಯರಿಗೆ ಕೇಂದ್ರ ಸರ್ಕಾರ ನೀಡುತ್ತಿರುವ ಯೋಜನೆಗಳು, ಕಾರ್ಯಕ್ರಮಗಳ ಪಟ್ಟಿಯನ್ನು ಮುಂದಿಟ್ಟರು. ಪಾಪ, ಈ ಯೋಜನೆಗಳ ಬಗ್ಗೆ ಇಲ್ಲಿ‌ನ ಶಾಸಕರಿಗೆ ಗೊತ್ತಿಲ್ಲದೆಯೋ, ಇಲ್ಲವೋ ಎಂದು ಗೇಲಿ ಮಾಡಿದರು.


ಡಬಲ್ ಎಂಜಿನ್ ಸರಕಾರ ಮಹಿಳಾ ಸಬಲೀಕರಣ ಮತ್ತು ಮಹಿಳೆಯರ ಶಿಕ್ಷಣಕ್ಕೆ ಒತ್ತು ನೀಡಿ,ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ತಿಳಿಸಿದ್ದಾರೆ.

ರಾಜ್ಯದಲ್ಲಿ ಹೆಣ್ಣುಮಕ್ಕಳು ಕಡಿಮೆ ಆಗುತ್ತಿದ್ದಾರೆ ಎನ್ನುವುದನ್ನು ಗಮನಿಸಿ 2008 ರಲ್ಲಿ ಯಡಿಯೂರಪ್ಪ ಅವರು ಸಿಎಂ ಆಗಿದ್ದಾಗ ಭಾಗ್ಯಲಕ್ಷ್ಮೀ ಯೋಜನೆಯನ್ನು ಜಾರಿಗೆ ತಂದರು.ಹೆಣ್ಣುಮಕ್ಕಳ ಬಗ್ಗೆ ಚಿಂತಿಸುವ ಸರಕಾರ ಎಂದರೆ ಅದು ಬಿಜೆಪಿ ಮಾತ್ರ, ಮೋದಿ ಸರಕಾರ ಉದ್ಯೋಗಸ್ಥ ಮಹಿಳೆಯರಿಗೆ 26 ವಾರಗಳ ಹೆರಿಗೆ ರಜೆ ಮಾಡಿದ್ದಾರೆ, ಆರೋಗ್ಯಕ್ಕಾಗಿ ಆಯುಷ್ಮಾನ್ ಕಾರ್ಡ್ ಅನ್ನು ಜಾರಿಗೆ ತಂದಿದೆ.ಇಲ್ಲಿರುವ ಶಾಸಕರಿಗೆ ಜನರ ಆರೋಗ್ಯದ ಕಾಳಜಿ ಇದೆಯೋ ಇಲ್ಲವೋ ಗೊತ್ತಿಲ್ಲ, ಸುರೇಶ್ ಗೌಡರು ಶಾಸಕರಾಗಿದ್ದರೆ ಮನೆ ಮನೆಗೆ ಯೋಜನೆ ತಲುಪಿಸುತ್ತಿದ್ದರು ಎಂದರು.

,ದೇಶದ ಎಲ್ಲ ಮನೆಗಳಿಗೆ ನಲ್ಲಿ ನೀರು ಕೊಡಲು ಮೋದಿ ಅವರು ಗ್ರಾಮಾಂತರ ಕ್ಷೇತ್ರಕ್ಕೆ 140 ಕೋಟಿ ಅನುದಾನ ನೀಡಿದ್ದಾರೆ.ಕಳೆದ ಐದು ವರ್ಷಗಳಲ್ಲಿ ಅಭಿವೃದ್ದಿ ಎಂಬುದು ಶೂನ್ಯ.ಶಾಸಕರು ಇದ್ದಾರೋ ಇಲ್ಲವೋ ಎಂಬುದೇ ಜನರಿಗೆ ತಿಳಿಯದಾಗಿದೆ.ಕ್ಷೇತ್ರ ಮತ್ತೊಮ್ಮೆ ಅಭಿವೃದ್ದಿ ಕಾಣಬೇಕಾದರೆ ಸುರೇಶ್‌ಗೌಡ ಶಾಸಕರಾಗುವಂತೆ ನೀವೆಲ್ಲರೂ ಆಶೀರ್ವಾದ ಮಾಡಬೇಕೆಂದು ಶೋಭಾ ಕರಂದ್ಲಾಜೆ ಮನವಿ ಮಾಡಿದರು.


ತುಮಕೂರು ಗ್ರಾಮಾಂತರ ಕ್ಷೇತ್ರದ ಶಾಸಕರಾಗಿ ಬಿ.ಸುರೇಶಗೌಡ ಮಾಡಿರುವ ಅಭಿವೃದ್ದಿ ಕಾರ್ಯಗಳು ಇಡೀ 224 ಕ್ಷೇತ್ರಗಳಿಗೂ ಮಾದರಿಯಾಗಿವೆ.ಎಲ್ಲಾ ಗ್ರಾಮಗಳಿಗೂ ರಸ್ತೆ,ಸಿಸಿ.ಚರಂಡಿಗಳನ್ನು ಮಾಡಿ,ಕ್ಷೇತ್ರವನ್ನು ಮಾದರಿಯಾಗಿದ್ದಾರೆ. ವಿದ್ಯುತ್ ಇಲಾಖೆಯಿಂದ 500 ಕೋಟಿ ರೂ ತಂದು,ರೈತರ ಎಲ್ಲಾ ಐಪಿ ಸೆಟ್‌ಗಳಿಗೆ ತಲಾ 25 ಕೆ.ವಿ.ಟಿ.ಸಿಗಳನ್ನು ಆಳವಡಿಸಿದ ಏಕೈಕ ಕ್ಷೇತ್ರ ತುಮಕೂರು ಗ್ರಾಮಾಂತರ.ಇದರ ರೂವಾರಿ ಸುರೇಶಗೌಡ ಎಂಬುದನ್ನು ನಾವ್ಯಾರು ಮರೆಯುವಂತಿಲ್ಲ ಎಂದರು.


ಈ ಕ್ಷೇತ್ರದ ಮಾಜಿ ಶಾಸಕರಾದ ಸುರೇಶಗೌಡರು ಕೇಂದ್ರದ ಕೃಷಿ ಇಲಾಖೆಯ ಮುಂದೆ ಕೆಲವು ಬೇಡಿಕೆಗಳನ್ನು ಇಟ್ಟಿದ್ದಾರೆ.ಕೃಷಿ ಮೂಲಭೂತ ಸೌಕರ್ಯ ನಿಧಿಯ ಅಡಿಯಲ್ಲಿ ಕ್ಷೇತ್ರದಲ್ಲಿ ರೈತರು ಬೆಳೆಯುವ ಕೃಷಿ ಉತ್ಪನ್ನಗಳ ಸಂರಕ್ಷಣೆಗೆ ಶೀಥಲೀಕರಣ ಘಟಕದ ಜೊತೆಗೆ, ಕೃಷಿ ಉತ್ಪನ್ನಗಳಿಗೆ ಒಳ್ಳೆಯ ಬೆಲೆ ಸಿಗುವಂತಹ ಯೋಜನೆ ರೂಪಿಸಲು ಮನವಿ ಮಾಡಿದ್ದಾರೆ. ಸದಾ ಜನಪರ ಕಾಳಜಿ ಇರುವ ಸುರೇಶ್‌ಗೌಡ ಹಾಗೂ ದೇಶದ ಅಭಿವೃದ್ದಿಗಾಗಿ ದುಡಿಯುತ್ತಿರುವ ಬಿಜೆಪಿ ಪಕ್ಷವನ್ನು ನಾವೆಲ್ಲರೂ ಬೆಂಬಲಿಸಬೇಕಾಗಿದೆ ಎಂದು ಶೋಭಾ ಕರಂದ್ಲಾಜೆ ನುಡಿದರು.

ಮಾಜಿ ಸಂಸದ ಎಸ್.ಪಿ.ಮುದ್ದಹನುಮೇಗೌಡ ಮಾತನಾಡಿ, ಹೊನ್ನಾವರ-ಬೆಂಗಳೂರು ರಸ್ತೆ ಅಭಿವೃದ್ಧಿ ಕಾಮಗಾರಿಗೆ ಸಚಿವೆ ಶೋಭಾ ಕರಂದ್ಲಾಜೆ ಕಾರಣ, ಈ ಯೋಜನೆಗೆ ಬಿಎಸ್ ವೈ ಅವರು ಬೆಂಬಲ ನೀಡಿದ್ದರಿಂದ ಇಂದು ರಸ್ತೆ ಅಭಿವೃದ್ಧಿ ಕಾರ್ಯ ನಡೆಯುತ್ತಿದೆ ಎಂದರು.
ದೇಶಕ್ಕೆ ಇಂದು ಮೋದಿ ಹಾಗೂ ಬಿಜೆಪಿ ಅನಿವಾರ್ಯವಾಗಿದೆ, ತನ್ನನ್ನು ತಾನೇ ನೋಡಿಕೊಳ್ಳದ ರಾಹುಲ್‌ಗಾಂಧಿಗೆ ದೇಶವನ್ನು ನೋಡಿಕೊಳ್ಳುವ ಯೋಗ್ಯತೆ ಇಲ್ಲ.ಹೊರದೇಶಕ್ಕೆ ಹೋಗಿ ದೇಶದ ಪ್ರಜಾಪ್ರಭುತ್ವ ಟೀಕಿಸುವ ವ್ಯಕ್ತಿಯಿಂದ ದೇಶವನ್ನು ಸುಭದ್ರಗೊಳಿಸಲು ಸಾಧ್ಯವಿಲ್ಲ ಎಂದರು.

ರಾಜ್ಯ ಮತ್ತು ರಾಷ್ಟ್ರದಲ್ಲಿ ಸುಭದ್ರ ಸರಕಾರ ತರಲು ಗ್ರಾಮಾಂತರ ಕ್ಷೇತ್ರದಲ್ಲಿ ಬಿಜೆಪಿ ಗೆಲ್ಲಬೇಕು.ಸುರೇಶ್ ಗೌಡರು ಉತ್ತಮ ಕೆಲಸಗಾರರು.ದೆವ್ವದಂತೆ ಕೆಲಸ ಮಾಡುವ ಮೂಲಕ ಜನರ ಮನಸ್ಸು ಗೆದ್ದಿದ್ದಾರೆ.ಮತ್ತೊಮ್ಮೆ ಗ್ರಾಮಾಂತರದಲ್ಲಿ ಕ್ರಿಯಾಶೀಲ ರಾಗಿರುವ ಸುರೇಶ್ ಗೌಡರು ಗೆಲ್ಲಿಸಬೇಕೆಂದು ಎಂದು ಮನವಿ ಮಾಡಿದರು.


ಶಾಸಕ ಜಿ.ಬಿ.ಜೋತಿಗಣೇಶ್ ಮಾತನಾಡಿ,ಕ್ಷೇತ್ರಗಳ ಅಭಿವೃದ್ದಿಯಲ್ಲಿ ನಮ್ಮೆಲ್ಲರಿಗೂ ಮಾದರಿ ಯಾಗಿದ್ದಾರೆ. ಮಂತ್ರಿಗಳು,ಅಧಿಕಾರಗಳ ಜೊತೆಗೆ ಜಗಳವಾಡಿ, ಕ್ಷೇತ್ರದ ಅಭಿವೃದ್ದಿಗೆ ಹಣ ತಂದಿದ್ದಾರೆ. ಅವರನ್ನುಮತ್ತೊಮ್ಮೆ ಕ್ಷೇತ್ರದ ಜನತೆ ಶಾಸಕರಾಗಿ ಮಾಡಿ, ಕ್ಷೇತ್ರವನ್ನು ಉನ್ನತ ಮಟ್ಟಕ್ಕೆ ತೆಗೆದುಕೊಂಡು ಹೋಗಲು ಸಹಕಾರಿಯಾಗಬೇಕೆಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಾಜಿ ಶಾಸಕ ಬಿ.ಸುರೇಶ್‌ಗೌಡ ಮಾತನಾಡಿ,ನನ್ನ 10 ವರ್ಷದ ಅವಧಿಯಲ್ಲಿ ಕ್ಷೇತ್ರದ ಜನರಿಗೆ ಕುಡಿಯುವ ನೀರು,ರಸ್ತೆ, ಚರಂಡಿ,ಬೀದಿ ದೀಪ ಹಾಗೂ ಆರೋಗ್ಯ ಸೇವೆಗಳಿಗಾಗಿ ಆಸ್ಪತ್ರೆ ಮತ್ತು ಶಾಲೆ ದೇವಸ್ಥಾನ ಗಳನ್ನು ನಿರ್ಮಿಸಿ ಕೊಡಲಾಗಿದೆ.ಮಹಿಳಾ ಶಕ್ತಿ ಒಂದಾಗಿ ಈ ಬಾರಿಯ ಚುನಾವಣೆಯಲ್ಲಿ ನನ್ನನ್ನು ಬೆಂಬಲಿಸಿದರೆ, ಇಡೀ ವಿಶ್ವವೇ ತುಮಕೂರು ಗ್ರಾಮಾಂತರ ಕ್ಷೇತ್ರದತ್ತ ತಿರುಗಿ ನೋಡುವಂತೆ ಅಭಿವೃದ್ದಿ ಕಾರ್ಯಗಳನ್ನು ಮಾಡಿ ತೋರಿಸುತ್ತೇನೆ ಎಂದರು.

ಕಾಂಗ್ರೆಸ್ ಸರಕಾರವಿದ್ದಾಗಲೂ ಸುಮಾರು 500 ಕೋಟಿ ರೂಗಳ ಅನುದಾನ ತಂದು ಕ್ಷೇತ್ರದ ಅಭಿವೃದ್ದಿಗೆ ಬಳಕೆ ಮಾಡಿದ್ದೇನೆ.ಆದರೆ ನನ್ನ ಕಾಲದಲ್ಲಿ ಅಭಿವೃದ್ದಿಗೊಂಡ ಶಾಲೆಗಳ ಶೌಚಾಲಯಗಳಿಗೆ ನೀರಿಲ್ಲ, ಬಳಕೆಗೆ ಯೋಗ್ಯವಿಲ್ಲ ದಂತಾಗಿವೆ.ಕಂಪ್ಯೂಟರ್ ಲ್ಯಾಬ್ ಉಪಯೋಗಕ್ಕೆ ಬರುತ್ತಿಲ.ನಾಗವಲ್ಲಿಯಲ್ಲಿ ಹೆಣ್ಣು ಮಕ್ಕಳಿಗಾಗಿ ಪ್ರಥಮದರ್ಜೆ ಕಾಲೇಜು ತೆರೆದು, ಗ್ರಾಮೀಣ ಭಾಗದ ಹೆಣ್ಣು ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ದೊರಕಿಸುವ ಗುರಿ ಹೊಂದಿದ್ದೇನೆ ಎಂದರು.


ಕಾರ್ಯಕ್ರಮದಲ್ಲಿ ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷರಾದ ಅಂಬಿಕಾ ಹುಲಿನಾಯ್ಕರ್,ತಾಲೂಕು ಅಧ್ಯಕ್ಷ ರೇಣುಕಮ್ಮ,ಮಹಿಳಾ ಮುಖಂಡರಾದ ತಾರಾಮಣಿ,ಜಿ.ಪಂ.ಮಾಜಿ ಅಧ್ಯಕ್ಷೆ ಶಾರದ ನರಸಿಂಹಮೂರ್ತಿ,ಸುಮಿತ್ರಾದೇವಿ,ಎಲ್ಲಾ ತಾಲೂಕುಗಳ ಮಹಿಳಾ ಮೋರ್ಚಾ ಅಧ್ಯಕ್ಷರು, ಪದಾಧಿಕಾರಿಗಳು, ಜಿ.ಪಂ, ತಾ.ಪಂ. ಹಾಗೂ ಗ್ರಾ.ಪಂಗಳ ಸದಸ್ಯರುಗಳು ಉಪಸ್ಥಿತರಿದ್ದರು.

ಸಂಸ್ಕೃತಿಯೇ ಪ್ರಗತಿಯ ಮೂಲ

ಕನಾ೯ಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಹಾಗೂ ಕನಾ೯ಟಕ ಲೇಖಕಿಯರ ಸಂಘ ಮತ್ತು ಕನ್ನಡ ಸಂಘ,ಶೇಷಾದ್ರಿ ಪುರಂ ಕಾಲೇಜು ಇವರ ಸಹಯೋಗದಲ್ಲಿ ಭಾರತ ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ಗಡಿನಾಡು ಪ್ರದೇಶದ ಲೇಖಕಿಯರ ಸಮಾವೇಶ ಸಾಂಸ್ಕೃತಿಕ ಕಾಯ೯ಕ್ರಮಗಳು,ವಿಚಾರ ಸಂಕಿರಣ ಹಾಗೂ ಕವಿಗೋಷ್ಠಿ ಸಮಾರಂಭವನ್ನು ಆಯೋಜಿಸಲಾಗಿತ್ತು.

ಕಾರ್ಯಕ್ರಮವನ್ನು ಉದ್ಘಾಟಿಸಿ ನಿವೃತ್ತ ಐಎಎಸ್ ಅಧಿಕಾರಿ ಹಾಗೂ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಡಾ.ಸಿ.ಸೋಮಶೇಖರ ರವರು ಮಾತನಾಡಿದರು, ಗಡಿ ಪ್ರದೇಶಗಳಲ್ಲಿ ಕನ್ನಡ ಅಸ್ಮಿತೆ ಉಳಿಯಬೇಕು,ಕನ್ನಡ ಭಾಷೆ ಮತ್ತು ಸಾಹಿತ್ಯ,ಸಂಸ್ಕೃತಿ ಪ್ರಥಮ ಆದ್ಯತೆಯಾಗ ಬೇಕು ಮಾತೃ ಭಾಷೆ ಯಾವುದೇ ಆಗಿರಲಿ ನೆಲದ ಭಾಷೆಗೆ ಪ್ರಾಮುಖ್ಯತೆ ನೀಡಬೇಕು,ಸಂಸ್ಕೃತಿ ಪ್ರಗತಿಯ ಮೂಲ, ಕನ್ನಡಿಗರು ಸಾಮರಸ್ಯ ಪ್ರಿಯರು ಸಂಘಷ೯ ಮನೋಭಾವನೆಯವರಲ್ಲ ಎಂದು ನುಡಿದರು.

ಕನ್ನಡದ ಕೆಲಸಕ್ಕೆ ಸದಾ ಕೈ ಜೊಡಿಸುತ್ತೇವೆ.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ನಾಡೋಜ ಡಾ ವೂಡೇ ಪಿ ಕೃಷ್ಣ ಅವರು ಅಧ್ಯಕ್ಷೀಯ ನುಡಿಗಳನ್ನಾಡಿದರು ತಮ್ಮ ಮೂಲ ಊರಾದ ವೂಡೇಯ ಬಗ್ಗೆ ಹೇಳುತ್ತಾ ತಮ್ಮ ಊರು ವೂಡೇ ಕೂಡ ಗಡಿ ಪ್ರದೇಶದ ಊರು ಆಗಾಗಿ ಗಡಿನಾಡಿನ ಸಮಸ್ಯೆಗಳಿಂದ ಹೊರತಾಗಿಲ್ಲ. ಕನ್ನಡದ ಕೆಲಸಕ್ಕೆ ಯಾವಾಗಲೂ ನಮ್ಮ ಶೇಷಾದ್ರಿಪುರಂ ಶಿಕ್ಷಣ ದತ್ತಿ ಸದಾ ಕೈ ಜೊಡಿಸುತ್ತದೆ ಎಂದರು.

ಅಪರ ಮುಖ್ಯ ಕಾಯ೯ದಶಿ೯ ಡಾ ಶಾಲಿನಿ ರಜನೀಶ್ ಅವರು ಮಾತನಾಡಿ ಕೆಲವು ಅಂಕಿ ಅಂಶಗಳನ್ನು ತೆರೆದಿಟ್ಟರು. ವಾರ್ಷಿಕ ಜಿಡಿಪಿ ಪ್ರಕಾರ ಹೆಣ್ಣುಮಕ್ಕಳ ವಿದ್ಯಾಭ್ಯಾಸ ಪಡೆಯುವ ೭೦% ಮಕ್ಕಳಲ್ಲಿ ಉದ್ಯೋಗ ಕ್ಷೇತ್ರದಲ್ಲಿ ಶೇಕಡಾ ೩೦ ರಷ್ಟು ಮಾತ್ರ. ಯಾಕೆಂದರೆ ಮಕ್ಕಳು ಮತ್ತು ಮನೆಯ ಜವಾಬ್ದಾರಿಯನ್ನು ನಿರ್ವಹಿಸುವ ಕಾರಣದಿಂದ ಸಾಕಷ್ಟು ಜನ ಹೆಣ್ಣು ಆದಾಯ ರಹಿತ ಕೆಲಸ ಮಾಡುತ್ತಿದ್ದಾರೆ. ಇದನ್ನು ಜಿಡಿಪಿಗೆ ಗಣನೆಗೆ ತೆಗೆದು ಕೊಳ್ಳುವುದಿಲ್ಲ. ಆಗಿದ್ದರೆ ಹೆಣ್ಣಿನ ಶ್ರಮ ಆದಾಯಕ್ಕೆ ಸೇರಿಲ್ಲವೇ ?

ಮಾಜಿ ಸಚಿವೆ ಡಾ. ಲೀಲಾದೇವಿ ಆರ್ ಪ್ರಸಾದ್ ಅವರು ತಮ್ಮ ತೊಂಬತ್ತೊಂದನೆಯ ವಯಸ್ಸಿನಲ್ಲಿ ಕೂಡ ಕ್ರಿಯಾಶೀಲವಾಗಿರುವ ಅವರು ಲೇಖಕಿಯರ ಸಂಘದ ಹುಟ್ಟಿ ಬಂದ ಬಗೆ ಹಾಗೂ ಅದರ ಹಿಂದಿನ ಪರಿಶ್ರಮವನ್ನು ತಿಳಿಸಿದರು. ಲೇಖಕಿಯರ ಸಂಘ ಉತ್ತಮವಾಗಿ ನಡೆಸಿಕೊಂಡು ಹೋಗಲು ಸಾಮರಸ್ಯ, ಏಕತೆ, ಪರಿಶ್ರಮದ ಕೆಲವು ಕಿವಿಮಾತನ್ನು ಹೇಳಿದರು.

ಶ್ರೀಮತಿ ಹೇಮಲತಾ ಮಹಿಷಿ ನಿವೃತ್ತ ನ್ಯಾಯಾದೀಶರು, ಮಾತನಾಡಿದರು ಗಡಿಭಾಗದ ಅವ್ಯವಸ್ಥೆಯನ್ನು ಕೇಳುವವರು ಯಾರು.. ? ಗಡಿನಾಡಿನ ಕಷ್ಟಗಳನ್ನು ಬೆಂಗಳೂರಿನವರು ತಿಳಿದುಕೊಳ್ಳಬೇಕು. ಅಭಿವೃದ್ಧಿಗಾಗಿ ಶ್ರಮಿಸಬೇಕು ಎಂದರು. ಇತಿಹಾಸವನ್ನು ಇಂದಿನ ಯುವ ಜನತೆ ತಿಳಿಯಬೇಕು ಎಂದರು. ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಕಾಯ೯ದಶಿ೯ಯಾದ ಪ್ರಕಾಶ್ ಮತ್ತೀಹಳ್ಳಿ ಲೇಖಕಿಯರ ಸಂಘದ ಅಧ್ಯಕರಾದ ಹೆಚ್ ಎಲ್ ಪುಷ್ಪಾ, ಇನ್ನಿತರ ಗಣ್ಯರು ಉಪಸ್ಥಿತರಿದ್ದರು.

ಸಂಸ್ಕೃತಿಯೇ ಪ್ರಗತಿಯ ಮೂಲ

ಕನಾ೯ಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಹಾಗೂ ಕನಾ೯ಟಕ ಲೇಖಕಿಯರ ಸಂಘ ಮತ್ತು ಕನ್ನಡ ಸಂಘ,ಶೇಷಾದ್ರಿ ಪುರಂ ಕಾಲೇಜು ಇವರ ಸಹಯೋಗದಲ್ಲಿ ಭಾರತ ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ಗಡಿನಾಡು ಪ್ರದೇಶದ ಲೇಖಕಿಯರ ಸಮಾವೇಶ ಸಾಂಸ್ಕೃತಿಕ ಕಾಯ೯ಕ್ರಮಗಳು,ವಿಚಾರ ಸಂಕಿರಣ ಹಾಗೂ ಕವಿಗೋಷ್ಠಿ ಸಮಾರಂಭವನ್ನು ಆಯೋಜಿಸಲಾಗಿತ್ತು.

ಕಾರ್ಯಕ್ರಮವನ್ನು ಉದ್ಘಾಟಿಸಿ ನಿವೃತ್ತ ಐಎಎಸ್ ಅಧಿಕಾರಿ ಹಾಗೂ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಡಾ.ಸಿ.ಸೋಮಶೇಖರ ರವರು ಮಾತನಾಡಿದರು, ಗಡಿ ಪ್ರದೇಶಗಳಲ್ಲಿ ಕನ್ನಡ ಅಸ್ಮಿತೆ ಉಳಿಯಬೇಕು,ಕನ್ನಡ ಭಾಷೆ ಮತ್ತು ಸಾಹಿತ್ಯ,ಸಂಸ್ಕೃತಿ ಪ್ರಥಮ ಆದ್ಯತೆಯಾಗ ಬೇಕು ಮಾತೃ ಭಾಷೆ ಯಾವುದೇ ಆಗಿರಲಿ ನೆಲದ ಭಾಷೆಗೆ ಪ್ರಾಮುಖ್ಯತೆ ನೀಡಬೇಕು,ಸಂಸ್ಕೃತಿ ಪ್ರಗತಿಯ ಮೂಲ, ಕನ್ನಡಿಗರು ಸಾಮರಸ್ಯ ಪ್ರಿಯರು ಸಂಘಷ೯ ಮನೋಭಾವನೆಯವರಲ್ಲ ಎಂದು ನುಡಿದರು.

ಕನ್ನಡದ ಕೆಲಸಕ್ಕೆ ಸದಾ ಕೈ ಜೊಡಿಸುತ್ತೇವೆ.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ನಾಡೋಜ ಡಾ ವೂಡೇ ಪಿ ಕೃಷ್ಣ ಅವರು ಅಧ್ಯಕ್ಷೀಯ ನುಡಿಗಳನ್ನಾಡಿದರು ತಮ್ಮ ಮೂಲ ಊರಾದ ವೂಡೇಯ ಬಗ್ಗೆ ಹೇಳುತ್ತಾ ತಮ್ಮ ಊರು ವೂಡೇ ಕೂಡ ಗಡಿ ಪ್ರದೇಶದ ಊರು ಆಗಾಗಿ ಗಡಿನಾಡಿನ ಸಮಸ್ಯೆಗಳಿಂದ ಹೊರತಾಗಿಲ್ಲ. ಕನ್ನಡದ ಕೆಲಸಕ್ಕೆ ಯಾವಾಗಲೂ ನಮ್ಮ ಶೇಷಾದ್ರಿಪುರಂ ಶಿಕ್ಷಣ ದತ್ತಿ ಸದಾ ಕೈ ಜೊಡಿಸುತ್ತದೆ ಎಂದರು.

ಅಪರ ಮುಖ್ಯ ಕಾಯ೯ದಶಿ೯ ಡಾ ಶಾಲಿನಿ ರಜನೀಶ್ ಅವರು ಮಾತನಾಡಿ ಕೆಲವು ಅಂಕಿ ಅಂಶಗಳನ್ನು ತೆರೆದಿಟ್ಟರು. ವಾರ್ಷಿಕ ಜಿಡಿಪಿ ಪ್ರಕಾರ ಹೆಣ್ಣುಮಕ್ಕಳ ವಿದ್ಯಾಭ್ಯಾಸ ಪಡೆಯುವ ೭೦% ಮಕ್ಕಳಲ್ಲಿ ಉದ್ಯೋಗ ಕ್ಷೇತ್ರದಲ್ಲಿ ಶೇಕಡಾ ೩೦ ರಷ್ಟು ಮಾತ್ರ. ಯಾಕೆಂದರೆ ಮಕ್ಕಳು ಮತ್ತು ಮನೆಯ ಜವಾಬ್ದಾರಿಯನ್ನು ನಿರ್ವಹಿಸುವ ಕಾರಣದಿಂದ ಸಾಕಷ್ಟು ಜನ ಹೆಣ್ಣು ಆದಾಯ ರಹಿತ ಕೆಲಸ ಮಾಡುತ್ತಿದ್ದಾರೆ. ಇದನ್ನು ಜಿಡಿಪಿಗೆ ಗಣನೆಗೆ ತೆಗೆದು ಕೊಳ್ಳುವುದಿಲ್ಲ. ಆಗಿದ್ದರೆ ಹೆಣ್ಣಿನ ಶ್ರಮ ಆದಾಯಕ್ಕೆ ಸೇರಿಲ್ಲವೇ ?

ಮಾಜಿ ಸಚಿವೆ ಡಾ. ಲೀಲಾದೇವಿ ಆರ್ ಪ್ರಸಾದ್ ಅವರು ತಮ್ಮ ತೊಂಬತ್ತೊಂದನ್ನೆ ವಯಸ್ಸಿನಲ್ಲಿ ಕೂಡ ಕ್ರಿಯಾಶೀಲವಾಗಿರುವ ಅವರು ಲೇಖಕಿಯರ ಸಂಘದ ಹುಟ್ಟಿ ಬಂದ ಬಗೆ ಹಾಗೂ ಅದರ ಹಿಂದಿನ ಪರಿಶ್ರಮವನ್ನು ತಿಳಿಸಿದರು. ಲೇಖಕಿಯರ ಸಂಘ ಉತ್ತಮವಾಗಿ ನಡೆಸಿಕೊಂಡು ಹೋಗಲು ಸಾಮರಸ್ಯ, ಏಕತೆ, ಪರಿಶ್ರಮದ ಕೆಲವು ಕಿವಿಮಾತನ್ನು ಹೇಳಿದರು.

ಶ್ರೀಮತಿ ಹೇಮಲತಾ ಮಹಿಷಿ ನಿವೃತ್ತ ನ್ಯಾಯಾದೀಶರು, ಮಾತನಾಡಿದರು ಗಡಿಭಾಗದ ಅವ್ಯವಸ್ಥೆಯನ್ನು ಕೇಳುವವರು ಯಾರು.. ? ಗಡಿನಾಡಿನ ಕಷ್ಟಗಳನ್ನು ಬೆಂಗಳೂರಿನವರು ತಿಳಿದುಕೊಳ್ಳಬೇಕು. ಅಭಿವೃದ್ಧಿಗಾಗಿ ಶ್ರಮಿಸಬೇಕು ಎಂದರು. ಇತಿಹಾಸವನ್ನು ಇಂದಿನ ಯುವ ಜನತೆ ತಿಳಿಯಬೇಕು ಎಂದರು. ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಕಾಯ೯ದಶಿ೯ಯಾದ ಪ್ರಕಾಶ್ ಮತ್ತೀಹಳ್ಳಿ ಇನ್ನಿತರ ಗಣ್ಯರು ಉಪಸ್ಥಿತರಿದ್ದರು.

ಸುರೇಶಗೌಡರ ಬಿರುಸಿನ ಪ್ರಚಾರಕ್ಕೆ ಮನಸೋತ ಜನರು

ತುಮಕೂರು: ತುಮಕೂರು ಗ್ರಾಮಾಂತರ ಕ್ಷೇತ್ರದ ಮಾಜಿ ಶಾಸಕ ಬಿ.ಸುರೇಶಗೌಡರು ಕ್ಷೇತ್ರದೆಲ್ಲೆಡೆ ಮಿಂಚಿನ ಸಂಚಾರ ನಡೆಸುತ್ತಿದ್ದು, ಎಲ್ಲಾ ಕಡೆಯು ಜನಸಂದಣಿ ಕಂಡು ಬರುತ್ತಿದೆ.

ಈಚೆಗೆ ಸಮಾವೇಶಗಳ ಮೂಲಕ ಗಮನ ಸೆಳೆದಿರುವ ಮಾಜಿ ಶಾಸಕರು ಊರೂರು ಭೇಟಿ ಮೂಲಕವು ಜನಮನ ಗೆಲ್ಲತೊಡಗಿದ್ದಾರೆ.

ಕೆಲವು ಊರುಗಳಲ್ಲಿ ಜನರು ಕಷ್ಟಸುಖ ಹೇಳಿಕೊಳ್ಳುತ್ತಿದ್ದಾರೆ. ಗ್ರಾಮಕ್ಕೆ ಬೇಕಾದ ಕೆಲಸಗಳ ಅಭಿವೃದ್ಧಿ ಪಟ್ಟಿ ಮುಂದಿಡುತ್ತಿದ್ದಾರೆ. ಮಾಜಿ ಶಾಸಕರು ಸಹ ತಾಳ್ಮೆಯಿಂದ ಆಲಿಸಿ ಭರವಸೆ ನೀಡುತ್ತಿದ್ದಾರೆ ಎಂದು ಬಿಜೆಪಿ ಮುಖಂಡರಾದ ಬಳ್ಳಗೆರೆ ವೆಂಕಟೇಶ್ ತಿಳಿಸಿದರು.

ಶುಕ್ರವಾರ ಕೆಸರಮಡು ಗ್ರಾಮದಲ್ಲಿ ಮುಳುಕಟ್ಟಮ್ಮ ನೂತನ ದೇವಾಲಯಕ್ಕೆ ವಾಸಕಲ್ಲು ಪೂಜೆಯಲ್ಲಿ ಪಾಲ್ಗೊಂಡು ದೇವರ ಆಶೀರ್ವಾದ ಪಡೆದರು.

ದೇವರ ಆರ್ಶೀವಾದ ಪಡೆದಾಗ…

ಅಲ್ಲದೇ ಹುಳ್ಳೇನಹಳ್ಳಿ ಆಂಜನೇಯಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿ ಆಂಜನೇಯಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿದರು. ಗ್ರಾಮದ ಅನೇಕ ಮುಖಂಡರು, ವಿಶೇಷವಾಗಿ ಯುವಕರು ಹಾಜರಿದ್ದರು.

ಮಾನ0ಗಿ ಮತ್ತು ವೀರನಾಯಕನಹಳ್ಳಿ ಗ್ರಾಮದ ಕಾರ್ಯಕರ್ತರ ಮದುವೆ ಮಹೂರ್ಥ ಸಮಾರಂಭದಲ್ಲಿ ಪಾಲ್ಗೊಂಡು ವಧು ವರರಿಗೆ ಶುಭ ಕೋರಿದರು.

ವಾಲಿಬಾಲ್ ಪಂದ್ಯಾವಳಿ ಹುಡುಗರ ಜತೆ

ಕಸಬಾ ಹೋಬಳಿಯ ಕುಂದೂರಿನಲ್ಲಿ ವಾಲಿಬಾಲ್ ಪಂದ್ಯಾವಳಿಯನ್ನು ಉದ್ಘಾಟನೆ ಮಾಡಿ ದಿವಂಗತ ಶ್ರೀ ಪುನೀತ್ ರಾಜಕುಮಾರ್ ರವರ ಹುಟ್ಟುಹಬ್ಬವನ್ನು ಆಚರಿಸಿದರು.

ಪಾವಗಡ; ಕಂದಾಯ ಸಚಿವರ ಆರ್ಭಟ

ಪಾವಗಡ : ನಿಮ್ಮದೇ ಆದಂತಹ 14 ತಿಂಗಳು ಸಮ್ಮಿಶ್ರ ಸರ್ಕಾರ ಹಾಗೂ ಅದರ ಹಿಂದೆ ಪೂರ್ಣಾವಧಿ ಕಾಂಗ್ರೆಸ್ ಸರ್ಕಾರ ವಿದ್ದು ಸಿದ್ದರಾಮಯ್ಯ ಮುಖ್ಯಮಂತ್ರಿ ಕಾಲದಲ್ಲಿ ಕೊಡದಂತಹ ಗೃಹಿಣೀಯರಿಗೆ ಎರಡು ಸಾವಿರ ರೂ ಅಧಿಕಾರಕ್ಕೆ ಬಂದರೆ ಕೊಡುತ್ತೇವೆ ಎಂದು ಸುಳ್ಳು ಆಶ್ವಾಸನೆ ನೀಡುತ್ತಿದ್ದಾರೆ. ಸಿದ್ದರಾಮಯ್ಯನಿಗೆ ಕೊರಳು ಪಟ್ಟಿ ಹಿಡಿದು ಕೇಳಿ ಎಂದು ಜನತೆಗೆ ಕಂದಾಯ ಸಚಿವ ಆರ್ ಅಶೋಕ್ ತಿಳಿಸಿದರು.

ಶುಕ್ರವಾರ ಪಾವಗಡ ಪಟ್ಟಣದ ಬಿಜೆಪಿ ಪಕ್ಷದ ವತಿಯಿಂದ ಆಯೋಜಿಸಿದ ವಿಜಯ ಸಂಕಲ್ಪ ರಥಯಾತ್ರೆ ಗೆ ಚಾಲನೆ ನೀಡಿ ಶನಿಮಹಾತ್ಮ ಸರ್ಕಲ್ ವೃತ್ತದಿಂದ ಹಿಡಿದು ಟೋಲ್ ಗೇಟ್ ಬಳಿ ಅಂಬೇಡ್ಕರ್ ಪುತ್ತಳಿಗೆ ಮಾಲಾರ್ಪಣೆ ಮಾಡಿ ಮಾತನಾಡಿದ ಅವರು

ಹಿಂದೆ ಸಿದ್ದರಾಮಯ್ಯ ಕಾಲದಲ್ಲಿ ಪವರ್ ಫುಲ್ ಮಿನಿಸ್ಟರ್ ಪವರ್ ಮಿನಿಸ್ಟರ್ ಆಗಿರುವ ಡಿಕೆ ಶಿವಕುಮಾರ್ ಆದಂತ ಕಾಲದಲ್ಲಿ 200 ಯೂನಿಟ್ ಅಲ್ಲ 500 ಯೂನಿಟ್ ವಿದ್ಯುತ್ ಕೊಟ್ಟಿದ್ದರು ಯಾರು ಕೇಳುತ್ತಿರಲಿಲ್ಲ ಯಾಕೆ ಇವರು ಕೊಟ್ಟಿಲ್ಲ ಎಂದು ನೀವು ಕೊರಳು ಪಟ್ಟಿ ಇಟ್ಟುಕೊಂಡು ಡಿಕೆ ಶಿವಕುಮಾರ್ ಅವರನ್ನು ಕೇಳಿ ಎಂದರು.

ದಾವಣಗೆರೆ ಚಿತ್ರದುರ್ಗ ತುಮಕೂರು ಸೇರಿದಂತೆ ಈ ಭಾಗಗಳಲ್ಲಿ ಸುಮಾರು ಒಂದು ಲಕ್ಷ ಬಡ ಜನರಿಗೆ ನಿವೇಶನಗಳನ್ನು ನೀಡಲಾಗುತ್ತಿದೆ. ಹಾಗೆ ಕಂದಾಯ ಗ್ರಾಮಗಳೆಂದು ಮಾಡಿದ್ದು ನಾವೇ ಎಂದು ಕಂದಾಯ ಸಚಿವ ಆರ್ ಅಶೋಕ್ ಹೇಳಿದರು.

ಮುಂದಿನ ತಿಂಗಳು ನಡೆಯುವ ಚುನಾವಣೆಯಲ್ಲಿ ಯಡಿಯೂರಪ್ಪ ಹಾಗೂ ಬಸವರಾಜ ಬೊಮ್ಮಾಯಿ ಅವರ ನೇತೃತ್ವ ಭಾರತೀಯ ಜನತಾ ಪಾರ್ಟಿ ಪಕ್ಷದ ಸರ್ಕಾರ ನೂರಕ್ಕೆ ನೂರರಷ್ಟು ಅಧಿಕಾರಕ್ಕೆ ಬರುವುದು ಸತ್ಯ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕರ್ನಾಟಕ ರತ್ನ ಹಾಗೂ ಅಪ್ಪು ಎಂದು ಬಿರುದು ಕೊಟ್ಟಿರುವ ಸರ್ಕಾರ ನಮ್ಮದು ಬಿಜೆಪಿ ಸರ್ಕಾರ ಹಾಗೆ 12 ಕಿ.ಮೀ.ಉದ್ದವಿರುವ ರಿಂಗ್ ರಸ್ತೆಗೆ ಪುನೀತ್ ರಾಜಕುಮಾರ್ ರವರ ಹೆಸರು ಇಡುವ ಮುಖಾಂತರ ಶ್ರದ್ಧಾಂಜಲಿ ಅರ್ಪಿಸಿದ್ದೇವೆ ಎಂದು ಪುನೀತ್ ರಾಜಕುಮಾರ್ ಅವರನ್ನು ಆರ್ ಅಶೋಕ್ ರವರು ಸ್ಮರಿಸಿದರು.

ಈ ಸಂದರ್ಭದಲ್ಲಿ ಕೇಂದ್ರ ಸಚಿವ ಎ ನಾರಾಯಣಸ್ವಾಮಿ, ಮಧುಗಿರಿ ಶಕ್ತಿ ಕೇಂದ್ರದ ಅಧ್ಯಕ್ಷ ತಿಪ್ಪೇಸ್ವಾಮಿ, ತಾಲೂಕ ಅಧ್ಯಕ್ಷ ರವಿಶಂಕರ್ ನಾಯ್ಕ್, ತಾಲೂಕಿನ ಬಿಜೆಪಿ ಪಕ್ಷದ ಪ್ರಬಲ ಆಕಾಂಕ್ಷಿಗಳಾದ ಕೃಷ್ಣ ನಾಯಕ್ ಹಾಗೂ ಕೊತ್ತೂರು ಹನುಮಂತರಾಯಪ್ಪ, ಕಡಪಲಕೆರೆ ನವೀನ್, ದೊಡ್ಡಹಳ್ಳಿ ಅಶೋಕ್, ಸೇರಿದಂತೆ ಬಿಜೆಪಿ ಪಕ್ಷದ ಕಾರ್ಯಕರ್ತರು ಹಾಗೂ ಇನ್ನಿತರರು ಉಪಸ್ಥಿತರಿದ್ದರು.

ಜಲಗನ್ನಡಿ ಕೃತಿ ತುಮಕೂರಿನ ಅಸ್ಮಿತೆ: ಎಸ್ ಜಿಎಸ್

ತುಮಕೂರು: ಉದಯೋನ್ಮುಖ ಬರಹಗಾರರಲ್ಲಿ ಸಂಶೋಧನಾ ಅನನ್ಯತೆ ಹೆಚ್ಚು ಬೆಳೆಯಬೇಕು . ಜಲಗನ್ನಡಿ ಕೃತಿಯ ಈ ನೆಲದ ಸಾಂಸ್ಕೃತಿಕ ಅಸ್ಮಿತೆಯಂತಿದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷರಾದ ಪ್ರೊ ಎಸ್ ಜಿ ಸಿದ್ದರಾಮಯ್ಯ ಮೆಚ್ಚುಗೆ ಸೂಚಿಸಿದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ,ಅರುಣೋದಯ ಶೈಕ್ಷಣಿಕ ಮತ್ತು ಗ್ರಾಮೀಣಾಭಿವೃದ್ಧಿ ಟ್ರಸ್ಟ್ ,ಕರ್ನಾಟಕ ಲೇಖಕಿಯರ ಸಂಘ ತುಮಕೂರು ಇವರ ಸಂಯುಕ್ತಾಶ್ರಯದಲ್ಲಿ ಗುರುವಾರ ಕನ್ನಡ ಭವನದಲ್ಲಿ ಡಾ ಎಸ್ ಬಿ ಹನುಮಂತರಾಯರಪ್ಪ ರವರ ಜನಗನ್ನಡಿ ಪುಸ್ತಕ ಬಿಡುಗಡೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಸನಾತನ ಎನ್ನುವ ಸಂಸ್ಕೃತಿಗೆ ಪ್ರತಿರೋದವಾಗಿ ಈ ನೆಲದಲ್ಲಿ ಪುರಾತನ ಸಂಸ್ಕೃತಿ ಅನೇಕ ಆಯಾಮಗಳಲ್ಲಿ ಸೃಜನಶೀಲಗೊಂಡಿದೆ. ಇಂದಿನ ಅನೇಕ ಕಾಲೇಜ್ ಗಳಲ್ಲಿ ಕನ್ನಡ ಭಾಷೆ ಮಾತನಾಡುವುದು ಕೀಳು ಎನ್ನುವ ವಾತಾವರಣದಲ್ಲಿ ಹನುಮಂತರಾಯಪ್ಪ ವಿದ್ಯಾರ್ಥಿಗಳಲ್ಲಿ ನೈಜ ಕನ್ನಡ ಪ್ರೇಮ ತುಂಬಿ ಪ್ರೇರಣೆ ನೀಡಿ ಕನ್ನಡ ಬೆಳಸಿ ಕನ್ನಡ ಅಧ್ಯಾಪಕರಾಗಿದ್ದಾರೆ ಎಂದರು.

ಈ ಕೃತಿ ಕಾವ್ಯ ಪ್ರತಿಭೆಯಾಗಿ ಹೊರ ಬಂದಿದೆ. ವಿಮರ್ಶೆ ಇಂದಿಗೆ ಬಹಳ ಕೆಟ್ಟಿದೆ .ಕಾರಣ ವಿಮರ್ಶೆ ಮಾಡುವ ವಿಮರ್ಶಕರು ಸಾಹಿತ್ಯ ನಿಷ್ಠತೆ ಬಿಟ್ಟು ರಾಜಕೀಯ ಉಪೇಕ್ಷೆಗೆ ಒಳಗಾಗಿ ಸಂವೇದನೆ ಮರೆತಿದ್ದಾರೆ ಎಂದು ಕಳವಳ ವ್ಯಕ್ತ ಪಡಿಸಿದರು.

ಜಲಗನ್ನಡಿ ಪುಸ್ತಕ ಬಿಡುಗಡೆ ಮಾಡಿದ ಕೇಂದ್ರ ಸಾಹಿತ್ಯ ಆಕಾಡೆಮಿ ಪುರಸ್ಕೃತರಾದ ಡಾ ಮೂಡ್ನಕೂಡು ಚಿನ್ನಸ್ವಾಮಿ ರವರು ಮಾತನಾಡಿ ಜಲಗನ್ನಡಿ ಎನ್ನುವ ಶೀರ್ಷಿಕೆ ಸಮಾಜವನ್ನು ಆಕರ್ಷಣೆಗಳು ಮಾಡುತ್ತದೆ ಸೃಜನಶೀಲತೆಯಿಂದ ಸಂಶೋಧನೆಯ ಮೂಲಕ ವಿಮರ್ಶೆ ಕಂಡುಕೊಳ್ಳುತ್ತಿರುವುದು ಹೆಮ್ಮೆಯ ವಿಷಯ .ದಲಿತ ವಿಮರ್ಶೆ ಎಂದರೆ ಸಮಷ್ಟಿಯ ಪ್ರಜ್ಞೆ .ದಲಿತ ಮತ್ತು ಹಿಂದುಳಿದ ಸಮಾಜದಲ್ಲಿ ವಿಮರ್ಶೆ ಕಂಡುಕೊಂಡ ರೀತಿ ಈ ದೇಶದಲ್ಲಿ ಜಾತಿ ಎಂಬ ಪ್ರೇತ ನಿರಂತರವಾಗಿ ಕಾಡುತ್ತಿದರೂ ಅದರಲ್ಲಿನ ಅನನ್ಯತೆ ಜವಾಬ್ದಾರಿತನದಿಂದ ಬರೆಯಬೇಕಿದೆ ಎಂದರು.

ಕೃತಿ ಕುರಿತು ಡಾ.ರವಿಕುಮಾರ್ ನಿ.ಹ ರವರು ಮಾತನಾಡಿದರು. ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆ ಮಲ್ಲಿಕಾ ಬಸವರಾಜು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.

ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಕೆ ಎಸ್ ಸಿದ್ದಲಿಂಗಪ್ಪ ಯುವ ಮುಖಂಡ ವಿರುಪಾಕ್ಷ ಡ್ಯಾಗೇರಹಳ್ಳಿ, ಅರುಣೋದಯ ಟ್ರಸ್ಟ್ ನ ಅಧ್ಯಕ್ಷ ಡಾ.ಮುಕುಂದ ಜಲಗನ್ನಡಿ ವಿಮರ್ಶ ಕೃತಿ ಲೇಖಕ ಡಾ ಎಸ್ ಬಿ ಹನುಮಂತರಾಯಪ್ಪ ಉಪಸ್ಥಿತರಿದ್ದರು .ಡಾ.ಕುಮಾರ್ ಇಂದ್ರಬೆಟ್ಟ ಸ್ವಾಗತಿಸಿ ಸುಲೋಚನ ರವರು ಕಾರ್ಯಕ್ರಮ ನಿರೂಪಿಸಿದರು

60‌ ಜನರಿಗೆ ಭೂಮಿ ಹಂಚಿದ ಶಾಸಕ

0

ಪಾವಗಡ ;- ತಾಲೂಕಿನಲ್ಲಿ ವಾಸಿಸುತ್ತಿರುವ ಬಡ ರೈತರಿಗೆ ಇಂದಿನ ಬಗರ್ ಹುಕುಂ ಸಭೆಯಲ್ಲಿ 66 ಜನ ರೈತರಿಗೆ ಸಾಗುವಳಿ ಚೀಟಿಯನ್ನು ವಿತರಿಸಲಾಗಿದೆ ಎಂದು ಬಗರ್ ಹುಕುಂ ಸಾಗುವಳಿ ಚೀಟಿ ವಿತರಣಾ ಸಮಿತಿಯ ಅಧ್ಯಕ್ಷ ಶಾಸಕ ವೆಂಕಟರವಣಪ್ಪ ತಿಳಿಸಿದರು.

ಗುರುವಾರ ಪಟ್ಟಣದ ತಹಶೀಲ್ದಾರ್ ಕಚೇರಿಯಿಂದ ಹಮ್ಮಿಕೊಂಡಿದ್ದ ಬಗರ್ ಹುಕುಂ ಸಾಗುವಳಿ ಚೀಟಿ ವಿತರಣಾ ಕಾರ್ಯಕ್ರಮದಲ್ಲಿ 66 ರೈತರಿಗೆ ಸಾಗುವಳಿ ಚೀಟಿ ವಿತರಿಸಿ ಮಾತನಾಡಿದ ಅವರು ,

ಒಟ್ಟು 2785 ಅರ್ಜಿಗಳ ಪೈಕಿ ವಿವಿಧ ಕಾರಣಗಳಿಂದ 1423 ವಜಾಗೊಳಿಸಲಾಗಿದ್ದು ಇಲ್ಲಿಯವರೆಗೂ 603 ಸಾಗುವಳಿ ಚೀಟಿ ವಿತರಿಸಿದ್ದು ಬಗರ್ ಹುಕುಂ ಸಾಗುವಳಿ ಚೀಟಿಗಳನ್ನು ವಿತರಿಸಲಾಗಿದೆ ಮಾಹಿತಿ ಹೇಳಿದರು.

ಸರ್ಕಾರಿ ಜಮೀನನ್ನು ಸಾಗುವಳಿ ಮಾಡುತ್ತಿರುವ ರೈತರಿಂದ ಅರ್ಜಿಗಳನ್ನು ಪಡೆದು ಸಾಗುವಳಿ ಚೀಟಿ ವಿತರಿಸಲಾಗುತ್ತಿದೆ, ಇದೇ ತಿಂಗಳು 25 ರಂದು ಸಭೆ ನಡೆಸಿ ಬಾಕಿ ಉಳಿದಿರುವ ಅರ್ಜಿಗಳನ್ನು ಪರಿಶೀಲಿಸಿ ಹೋಬಳಿವಾರು ಸಾಗುವಳಿ ಚೀಟಿಗಳನ್ನು ವಿತರಿಸಲು ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿದರು.

ತಹಶೀಲ್ದಾರ್ ಸುಜಾತರವರು ಮಾತನಾಡಿ, ಸುಮಾರು ವರ್ಷಗಳಿಂದ ಸರ್ಕಾರಿ ಜಮೀನನ್ನು ಉಳುಮೆಮಾಡಿಕೊಳ್ಳುತ್ತಿರುವ ರೈತರುಗಳಿಂದ ಅರ್ಜಿ ಸ್ವೀಕರಿಸಿ ನಂತರ ಗ್ರಾಮ ಅಡಳಿತಾಧಿಕಾರಿಗಳು ಸ್ಥಳ ಪರೀಶೀಲನೆ ನಡೆಸಿ ಬೀಡು ಬಿಡದೆ ಬೆಳಿ ಇಟ್ಟಿದ್ದು 5 ಎಕರೆ ಒಳಗೆ ಮಾತ್ರ ಸಾಗುವಳಿ ಚೀಟಿ ಮೂಂಜುರು ಮಾಡಲಾಗುತ್ತದೆ ನಂತರ ಏಳು ದಿನಗಳೊಳಗಾಗಿ ಅವರ ಹೆಸರಿಗೆ ಪಹಣಿ ನೀಡಲಾಗುತ್ತದೆ ಎಂದು ತಿಳಿಸಿದರು.

ಈ ವೇಳೆ ಬಗರ್ ಹುಕುಂ ಸಮಿತಿಯ ಸದಸ್ಯರಾದ ಕಡಪಲಕೆರೆನವೀನ್, ಬೆಳ್ಳಿಬಟ್ಟಲುಪಾಲಯ್ಯ, ಕನ್ನಮೇಡಿಸಿದ್ದಲಿಂಗಮ್ಮ, ಶಿರಸ್ತೇದಾರರಾದ ಎನ್. ಮೂರ್ತಿ, ಕಸಬಾ ಆರ್.ಐ. ರಾಜಗೋಪಾಲ್ , ವೈ.ಎನ್.ಹೊಸಕೋಟೆ ಹೋಬಳಿ ಆರ್.ಐ. ಕಿರಣ್ ಕುಮಾರ್, ನಾಗಲಮಡಿಕೆ ಹೋಬಳಿ ಆರ್.ಐ. ರವಿಕುಮಾರ್, ನಿಡಗಲ್ ಹೋಬಳಿ ಆರ್.ಐ. ಶ್ರೀನಿವಾಸ್, ಗ್ರಾಮಅಡಳಿತಾಧಿಕಾರಿಗಳಾದ ಮಧುಕುಮಾರ್, ಶ್ರಿನಿವಾಸ್ ಮೂರ್ತಿ, ರಂಜಿತ್, ಷಣ್ಮುಕಾರಾದ್ಯ, ಅರುಣ್ ಕುಮಾರ್, ಕಛೇರಿ ಸಿಬ್ಭಂದಿ ಸೋಮನಾಥ್, ಹರ್ಷಿತಾ, ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ಮಕ್ಕಳಿಂದ ಇಟ್ಟಿಗೆ ಭಟ್ಟಿ ಕೆಲಸ: ನೋಟಿಸ್

0

ಪಾವಗಡ :ತಂದೆ ತಾಯಿ ಕೂಲಿ ಮಾಡಿ ಮಕ್ಕಳನ್ನು ಖಾಸಗಿ ಶಾಲೆಗಳಿಗೆ ಸೇರಿಸಿ ಉತ್ತಮ ಶಿಕ್ಷಣ ಕೊಡಿಸಲು ಮುಂದಾದರೆ, ಅದೇ ಮಕ್ಕಳಿಂದ ಇಟ್ಟಿಗೆ ಕೆಲಸ ಮಾಡಿಸಿದ ಘಟನೆ ಬೆಳಕಿಗೆ ಬಂದಿದೆ.

ತಾಲೂಕಿನ ಲಿಂಗದಹಳ್ಳಿ ಗ್ರಾಮದ ನಿಸರ್ಗ ಖಾಸಗಿ ಶಾಲೆಯಲ್ಲಿನ ಮಕ್ಕಳು ಶಾಲೆಗೆ ತೆರಳಿದ್ದ ವೇಳೆ ಆಡಳಿತ ಮಂಡಳಿ ಇಟ್ಟಿಗೆಗೂಡು ಕಟ್ಟುವ ಕೆಲಸಕ್ಕೆ ಮಕ್ಕಳನ್ನು ಬಳಸಿಕೊಂಡಿದೆ ಎಂಬ ಆರೋಪ ಕೇಳಿಬಂದಿದೆ.

ಅಕ್ಷರ ಕಲಿಯಬೇಕಾದ ಮಕ್ಕಳು ಖಾಸಗಿ ಶಾಲೆಯ ಆಡಳಿತ ಮ೦ಡಳಿಯ ನಿರ್ಲಕ್ಷ್ಯಕ್ಕೆ ಬಿರು ಬಿಸಿಲಿನಲ್ಲಿ ಇಟ್ಟಿಗೆ ಜೋಡಿಸುತ್ತಿದ್ದು, ಸಾರ್ವಜನಿಕ ವಲಯದಲ್ಲಿ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.

ಲಿಂಗದಹಳ್ಳಿ ಗ್ರಾಮದ ನಿಸರ್ಗ ಖಾಸಗಿ ಶಾಲೆಯಲ್ಲಿ ಮಕ್ಕಳನ್ನು ಇಟ್ಟಿಗೆ ಗೂಡಿನ ಕೆಲಸಕ್ಕೆ ಬಳಸಿಕೊಂಡಿದ್ದಾರೆ ಎಂದು ಆರೋಪಿಸಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಸಾರ್ವಜನಿಕ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.

ಪಾವಗಡದ ಖಾಸಗಿ ಶಾಲೆಯ ನಡೆಗೆ ಸಾರ್ವಜನಿಕರಿಂದ ವ್ಯಾಪಕ ಆಕ್ರೋಶ

ನಾವು ಮಕ್ಕಳಿಗೆ ಇಟ್ಟಿಗೆ ಕೆಲಸ ಮಾಡುವಂತೆ ಹೇಳಿಲ್ಲ. ಮಕ್ಕಳು ಗೂಡನ್ನು ಹತ್ತಿರುವ ವಿಡಿಯೋ ಮಾಡಿ ಹರಿ ಬಿಡಲಾಗಿದೆ ಅಷ್ಟೆ, ನಾವು ಕೆಲಸ ಮಾಡುವಂತೆ ಹೇಳಿಲ್ಲ, ಇದೆಲ್ಲ ಸತ್ಯಕ್ಕೆ ದೂರವಾದದ್ದು. -ತಿಪ್ಪೇಸ್ವಾಮಿ, ನಿಸರ್ಗ ಶಾಲೆಯ ಮುಖ್ಯ ಶಿಕ್ಷಕ, ಲಿಂಗದಹಳ್ಳಿ

ಘಟನೆಯ ಬಗ್ಗೆ ಮಾಹಿತಿ ತಿಳಿದ ಕೂಡಲೇ ಸ್ಥಳಕ್ಕೆ ಭೇಟಿ ನೀಡಿ ಮಕ್ಕಳಿಂದ ಮಾಹಿತಿ ಸಂಗ್ರಹಿಸಿ ನೋಟಿಸ್‌ ನೀಡಲಾಗಿದೆ. ಮೂರು ದಿನದೊಳಗೆ ಉತ್ತರ ನೀಡಬೇಕು. ಇಲ್ಲದಿದ್ದರೆ ಶಾಲೆಯ ಮಾನ್ಯತೆ ರದ್ದು ಮಾಡಲಾಗುವುದು. -ಅಶ್ವತ್ಥನಾರಾಯಣ, ಬಿಇಒ, ಪಾವಗಡ

ಮಕ್ಕಳನ್ನು ಕೂಲಿ ಕೆಲಸಕ್ಕೆ ಬಳಸಿಕೊಂಡಿರುವುದೇ ಅಕ್ಷಮ ಅಪರಾಧ, ತಕ್ಷಣ ಯಾವುದೇ ಮುಲಾಜಿಲ್ಲದೆ ಪ್ರಕರಣ ದಾಖಲಿಸಿ ಶಾಲೆಯ ಮಾನ್ಯತೆ ರದ್ದು ಮಾಡಬೇಕು, ಮಾನ್ಯ ನವೀಕರಣ ಕೂಡ ಮಾಡಬಾರದು, ಕಾರ್ಮಿಕ ಇಲಾಖೆ ಅಧಿಕಾರಿಗಳು ಕೂಡ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಬೇಕು
ಲಿಂಗದಹಳ್ಳಿ ಗ್ರಾಮದ ಪೋಷಕರೊಬ್ಬರು ಒತ್ತಾಯಿಸಿದರು.

ಚಿಕ್ಕ ಜಾಲೋಡು: ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ

ಪಾವಗಡ : ತಾಲೂಕಿನ ವೈ ಎನ್ ಹೊಸಕೋಟೆ ಹೋಬಳಿಯ ಚಿಕ್ಕಜಾಲೋಡು ಗ್ರಾಮದ ಕೆಲವು ಜೆಡಿಎಸ್ ಕಾರ್ಯಕರ್ತರು ಕಾಂಗ್ರೆಸ್ ಪಕ್ಷಕ್ಕೆ ಈರಣ್ಣ, ದೇವರಾಜು, ರಾಘವೇಂದ್ರ, ಮಂಜು, ಮೈಲಾರಿ, ಭಕ್ತಪ್ಪ , ಸೇರಿದಂತೆ ಶಾಸಕ ವೆಂಕಟರಮಣಪ್ಪ ಹಾಗೂ ಎಚ್‌ವಿ ವೆಂಕಟೇಶ್ ರವರ ಸಮ್ಮುಖದಲ್ಲಿ ಸೇರ್ಪಡೆಯಾದರು.

ಈ ಸಂದರ್ಭದಲ್ಲಿ ಗ್ರಾಪಂ ಮಾಜಿ ಅಧ್ಯಕ್ಷ ನಾಗಣ್ಣ, ಮಾಜಿ ಗ್ರಾಪಂ ಅಧ್ಯಕ್ಷ ಅಂಜಿನಪ್ಪ,ಮುಖಂಡರಾದ ಈರರೆಡ್ಡಿ, ಜಾಲಪ್ಪ, ನಾಗರಾಜು , ಕಿಶೋರ್,ಗಂಗಾಧರ, ಈರಣ್ಣ, ರಾಮಯ್ಯ,ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ವರದಿ :ಕುಮಾರ ನಾಗಲಾಪುರ