ಪಾವಗಡ ;- ತಾಲೂಕಿನಲ್ಲಿ ವಾಸಿಸುತ್ತಿರುವ ಬಡ ರೈತರಿಗೆ ಇಂದಿನ ಬಗರ್ ಹುಕುಂ ಸಭೆಯಲ್ಲಿ 66 ಜನ ರೈತರಿಗೆ ಸಾಗುವಳಿ ಚೀಟಿಯನ್ನು ವಿತರಿಸಲಾಗಿದೆ ಎಂದು ಬಗರ್ ಹುಕುಂ ಸಾಗುವಳಿ ಚೀಟಿ ವಿತರಣಾ ಸಮಿತಿಯ ಅಧ್ಯಕ್ಷ ಶಾಸಕ ವೆಂಕಟರವಣಪ್ಪ ತಿಳಿಸಿದರು.
ಗುರುವಾರ ಪಟ್ಟಣದ ತಹಶೀಲ್ದಾರ್ ಕಚೇರಿಯಿಂದ ಹಮ್ಮಿಕೊಂಡಿದ್ದ ಬಗರ್ ಹುಕುಂ ಸಾಗುವಳಿ ಚೀಟಿ ವಿತರಣಾ ಕಾರ್ಯಕ್ರಮದಲ್ಲಿ 66 ರೈತರಿಗೆ ಸಾಗುವಳಿ ಚೀಟಿ ವಿತರಿಸಿ ಮಾತನಾಡಿದ ಅವರು ,
ಒಟ್ಟು 2785 ಅರ್ಜಿಗಳ ಪೈಕಿ ವಿವಿಧ ಕಾರಣಗಳಿಂದ 1423 ವಜಾಗೊಳಿಸಲಾಗಿದ್ದು ಇಲ್ಲಿಯವರೆಗೂ 603 ಸಾಗುವಳಿ ಚೀಟಿ ವಿತರಿಸಿದ್ದು ಬಗರ್ ಹುಕುಂ ಸಾಗುವಳಿ ಚೀಟಿಗಳನ್ನು ವಿತರಿಸಲಾಗಿದೆ ಮಾಹಿತಿ ಹೇಳಿದರು.
ಸರ್ಕಾರಿ ಜಮೀನನ್ನು ಸಾಗುವಳಿ ಮಾಡುತ್ತಿರುವ ರೈತರಿಂದ ಅರ್ಜಿಗಳನ್ನು ಪಡೆದು ಸಾಗುವಳಿ ಚೀಟಿ ವಿತರಿಸಲಾಗುತ್ತಿದೆ, ಇದೇ ತಿಂಗಳು 25 ರಂದು ಸಭೆ ನಡೆಸಿ ಬಾಕಿ ಉಳಿದಿರುವ ಅರ್ಜಿಗಳನ್ನು ಪರಿಶೀಲಿಸಿ ಹೋಬಳಿವಾರು ಸಾಗುವಳಿ ಚೀಟಿಗಳನ್ನು ವಿತರಿಸಲು ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿದರು.
ತಹಶೀಲ್ದಾರ್ ಸುಜಾತರವರು ಮಾತನಾಡಿ, ಸುಮಾರು ವರ್ಷಗಳಿಂದ ಸರ್ಕಾರಿ ಜಮೀನನ್ನು ಉಳುಮೆಮಾಡಿಕೊಳ್ಳುತ್ತಿರುವ ರೈತರುಗಳಿಂದ ಅರ್ಜಿ ಸ್ವೀಕರಿಸಿ ನಂತರ ಗ್ರಾಮ ಅಡಳಿತಾಧಿಕಾರಿಗಳು ಸ್ಥಳ ಪರೀಶೀಲನೆ ನಡೆಸಿ ಬೀಡು ಬಿಡದೆ ಬೆಳಿ ಇಟ್ಟಿದ್ದು 5 ಎಕರೆ ಒಳಗೆ ಮಾತ್ರ ಸಾಗುವಳಿ ಚೀಟಿ ಮೂಂಜುರು ಮಾಡಲಾಗುತ್ತದೆ ನಂತರ ಏಳು ದಿನಗಳೊಳಗಾಗಿ ಅವರ ಹೆಸರಿಗೆ ಪಹಣಿ ನೀಡಲಾಗುತ್ತದೆ ಎಂದು ತಿಳಿಸಿದರು.
ಈ ವೇಳೆ ಬಗರ್ ಹುಕುಂ ಸಮಿತಿಯ ಸದಸ್ಯರಾದ ಕಡಪಲಕೆರೆನವೀನ್, ಬೆಳ್ಳಿಬಟ್ಟಲುಪಾಲಯ್ಯ, ಕನ್ನಮೇಡಿಸಿದ್ದಲಿಂಗಮ್ಮ, ಶಿರಸ್ತೇದಾರರಾದ ಎನ್. ಮೂರ್ತಿ, ಕಸಬಾ ಆರ್.ಐ. ರಾಜಗೋಪಾಲ್ , ವೈ.ಎನ್.ಹೊಸಕೋಟೆ ಹೋಬಳಿ ಆರ್.ಐ. ಕಿರಣ್ ಕುಮಾರ್, ನಾಗಲಮಡಿಕೆ ಹೋಬಳಿ ಆರ್.ಐ. ರವಿಕುಮಾರ್, ನಿಡಗಲ್ ಹೋಬಳಿ ಆರ್.ಐ. ಶ್ರೀನಿವಾಸ್, ಗ್ರಾಮಅಡಳಿತಾಧಿಕಾರಿಗಳಾದ ಮಧುಕುಮಾರ್, ಶ್ರಿನಿವಾಸ್ ಮೂರ್ತಿ, ರಂಜಿತ್, ಷಣ್ಮುಕಾರಾದ್ಯ, ಅರುಣ್ ಕುಮಾರ್, ಕಛೇರಿ ಸಿಬ್ಭಂದಿ ಸೋಮನಾಥ್, ಹರ್ಷಿತಾ, ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.