ಜಸ್ಟ್ ನ್ಯೂಸ್

ಜಲಗನ್ನಡಿ ಕೃತಿ ತುಮಕೂರಿನ ಅಸ್ಮಿತೆ: ಎಸ್ ಜಿಎಸ್

ತುಮಕೂರು: ಉದಯೋನ್ಮುಖ ಬರಹಗಾರರಲ್ಲಿ ಸಂಶೋಧನಾ ಅನನ್ಯತೆ ಹೆಚ್ಚು ಬೆಳೆಯಬೇಕು . ಜಲಗನ್ನಡಿ ಕೃತಿಯ ಈ ನೆಲದ ಸಾಂಸ್ಕೃತಿಕ ಅಸ್ಮಿತೆಯಂತಿದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷರಾದ ಪ್ರೊ ಎಸ್ ಜಿ ಸಿದ್ದರಾಮಯ್ಯ ಮೆಚ್ಚುಗೆ ಸೂಚಿಸಿದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ,ಅರುಣೋದಯ ಶೈಕ್ಷಣಿಕ ಮತ್ತು ಗ್ರಾಮೀಣಾಭಿವೃದ್ಧಿ ಟ್ರಸ್ಟ್ ,ಕರ್ನಾಟಕ ಲೇಖಕಿಯರ ಸಂಘ ತುಮಕೂರು ಇವರ ಸಂಯುಕ್ತಾಶ್ರಯದಲ್ಲಿ ಗುರುವಾರ ಕನ್ನಡ ಭವನದಲ್ಲಿ ಡಾ ಎಸ್ ಬಿ ಹನುಮಂತರಾಯರಪ್ಪ ರವರ ಜನಗನ್ನಡಿ ಪುಸ್ತಕ ಬಿಡುಗಡೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಸನಾತನ ಎನ್ನುವ ಸಂಸ್ಕೃತಿಗೆ ಪ್ರತಿರೋದವಾಗಿ ಈ ನೆಲದಲ್ಲಿ ಪುರಾತನ ಸಂಸ್ಕೃತಿ ಅನೇಕ ಆಯಾಮಗಳಲ್ಲಿ ಸೃಜನಶೀಲಗೊಂಡಿದೆ. ಇಂದಿನ ಅನೇಕ ಕಾಲೇಜ್ ಗಳಲ್ಲಿ ಕನ್ನಡ ಭಾಷೆ ಮಾತನಾಡುವುದು ಕೀಳು ಎನ್ನುವ ವಾತಾವರಣದಲ್ಲಿ ಹನುಮಂತರಾಯಪ್ಪ ವಿದ್ಯಾರ್ಥಿಗಳಲ್ಲಿ ನೈಜ ಕನ್ನಡ ಪ್ರೇಮ ತುಂಬಿ ಪ್ರೇರಣೆ ನೀಡಿ ಕನ್ನಡ ಬೆಳಸಿ ಕನ್ನಡ ಅಧ್ಯಾಪಕರಾಗಿದ್ದಾರೆ ಎಂದರು.

ಈ ಕೃತಿ ಕಾವ್ಯ ಪ್ರತಿಭೆಯಾಗಿ ಹೊರ ಬಂದಿದೆ. ವಿಮರ್ಶೆ ಇಂದಿಗೆ ಬಹಳ ಕೆಟ್ಟಿದೆ .ಕಾರಣ ವಿಮರ್ಶೆ ಮಾಡುವ ವಿಮರ್ಶಕರು ಸಾಹಿತ್ಯ ನಿಷ್ಠತೆ ಬಿಟ್ಟು ರಾಜಕೀಯ ಉಪೇಕ್ಷೆಗೆ ಒಳಗಾಗಿ ಸಂವೇದನೆ ಮರೆತಿದ್ದಾರೆ ಎಂದು ಕಳವಳ ವ್ಯಕ್ತ ಪಡಿಸಿದರು.

ಜಲಗನ್ನಡಿ ಪುಸ್ತಕ ಬಿಡುಗಡೆ ಮಾಡಿದ ಕೇಂದ್ರ ಸಾಹಿತ್ಯ ಆಕಾಡೆಮಿ ಪುರಸ್ಕೃತರಾದ ಡಾ ಮೂಡ್ನಕೂಡು ಚಿನ್ನಸ್ವಾಮಿ ರವರು ಮಾತನಾಡಿ ಜಲಗನ್ನಡಿ ಎನ್ನುವ ಶೀರ್ಷಿಕೆ ಸಮಾಜವನ್ನು ಆಕರ್ಷಣೆಗಳು ಮಾಡುತ್ತದೆ ಸೃಜನಶೀಲತೆಯಿಂದ ಸಂಶೋಧನೆಯ ಮೂಲಕ ವಿಮರ್ಶೆ ಕಂಡುಕೊಳ್ಳುತ್ತಿರುವುದು ಹೆಮ್ಮೆಯ ವಿಷಯ .ದಲಿತ ವಿಮರ್ಶೆ ಎಂದರೆ ಸಮಷ್ಟಿಯ ಪ್ರಜ್ಞೆ .ದಲಿತ ಮತ್ತು ಹಿಂದುಳಿದ ಸಮಾಜದಲ್ಲಿ ವಿಮರ್ಶೆ ಕಂಡುಕೊಂಡ ರೀತಿ ಈ ದೇಶದಲ್ಲಿ ಜಾತಿ ಎಂಬ ಪ್ರೇತ ನಿರಂತರವಾಗಿ ಕಾಡುತ್ತಿದರೂ ಅದರಲ್ಲಿನ ಅನನ್ಯತೆ ಜವಾಬ್ದಾರಿತನದಿಂದ ಬರೆಯಬೇಕಿದೆ ಎಂದರು.

ಕೃತಿ ಕುರಿತು ಡಾ.ರವಿಕುಮಾರ್ ನಿ.ಹ ರವರು ಮಾತನಾಡಿದರು. ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆ ಮಲ್ಲಿಕಾ ಬಸವರಾಜು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.

ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಕೆ ಎಸ್ ಸಿದ್ದಲಿಂಗಪ್ಪ ಯುವ ಮುಖಂಡ ವಿರುಪಾಕ್ಷ ಡ್ಯಾಗೇರಹಳ್ಳಿ, ಅರುಣೋದಯ ಟ್ರಸ್ಟ್ ನ ಅಧ್ಯಕ್ಷ ಡಾ.ಮುಕುಂದ ಜಲಗನ್ನಡಿ ವಿಮರ್ಶ ಕೃತಿ ಲೇಖಕ ಡಾ ಎಸ್ ಬಿ ಹನುಮಂತರಾಯಪ್ಪ ಉಪಸ್ಥಿತರಿದ್ದರು .ಡಾ.ಕುಮಾರ್ ಇಂದ್ರಬೆಟ್ಟ ಸ್ವಾಗತಿಸಿ ಸುಲೋಚನ ರವರು ಕಾರ್ಯಕ್ರಮ ನಿರೂಪಿಸಿದರು

Comment here