Wednesday, March 11, 2026
Google search engine
Home Blog Page 56

10 ಸಾವಿರ ನಿವೇಶನ, ರಫ್ತೋದ್ಯಮ ಕೇಂದ್ರ: ಸುರೇಶಗೌಡ ಭರವಸೆ

0

ತುಮಕೂರು; ಈ ಸಲ ಗೆಲುವು ನೀಡಿದರೆ ಕ್ಷೇತ್ರದ 10 ಸಾವಿರ ಜನರಿಗೆ ಉಚಿತ ನಿವೇಶನ ನೀಡುತ್ತೇನೆ. ಗ್ರಾಮಾಂತರ ಕ್ಷೇತ್ರದಲ್ಲಿ ಕೃಷಿ ರಫ್ತೋದ್ಯಮ ಕೇಂದ್ರ ಆರಂಭಿಸಿ ಇಡೀ ಜಗತ್ತಿನ ದೇಶಗಳಿಗೆ ಇಲ್ಲಿಂದ ಕೃಷಿ ಉತ್ಪನ್ನ ಗಳ ರಫ್ತು ಮಾಡುವಂತೆ ಮಾಡಲಾಗುವುದು ಎಂದು ಮಾಜಿ ಶಾಸಕ ಸುರೇಶಗೌಡ ಭರವಸೆ ನೀಡಿದರು.

ನಾಗವಲ್ಲಿ ಸಮೀಪ ನಡೆದ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು. ಮಾಜಿ ಮುಖ್ಯ ಮಂತ್ರಿ ಡಿ.ವಿ.ಸದಾನಂದಗೌಡ, ಜಿಲ್ಲಾ ಬಿಜೆಪಿ ಅಧ್ಯಕ್ಷ ರವಿ ಹೆಬ್ಬಾಕ, ವೈ.ಎಚ್.ಹುಚ್ಚಯ್ಯ ಸೇರಿದಂತೆ ಅನೇಕರು ಇದ್ದರು.

ಪ್ರತಿ ರೈತನಿಗೆ ಉಚಿತ ಟಿ.ಸಿ.ಗಳನ್ನು ನೀಡುವ ಕಾರ್ಯಕ್ರಮವನ್ನೂ ಮುಂದುವರೆಸುತ್ತೇನೆ. ಉಳಿದಿರುವ ಎಲ್ಲ ರೈತರಿಗೂ ಉಚಿತವಾಗಿ ಬೋರ್ ವೆಲ್ ಗಳಿಗೆ ಟಿ.ಸಿ. ಕೊಡಿಸುತ್ತೇನೆ ಎಂದರು.

ನಾಗವಲ್ಲಿ ಸಮೀಪ ಬಿದರೆಕಟ್ಟೆಯ ವಿ.ವಿ. ಬಳಿ ಹೊಸದಾಗಿ ಪದವಿ ಕಾಲೇಜು ಆರಂಭಿಸಿ ಇಲ್ಲಿನ ಬಡ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಒತ್ತು ನೀಡುವೆ ಎಂದು ಭರವಸೆ ನೀಡಿದರು.

Pay MLA: ಶಶಿಗೆ ಜಾಮೀನು

ತುಮಕೂರು; ಪೇ ಎಂ ಎಲ್ ಎ ಭಿತ್ತಿ ಪತ್ರ ಅಂಟಿಸಿದ ಆರೋಪದಲ್ಲಿ ಬಂಧನಕ್ಕೆ ಒಳಗಾಗಿದ್ದ ಜಿಲ್ಲಾ ಯುವ ಕಾಂಗ್ರೆಸ್ ಮುಖಂಡ ಶಶಿಧರ್ ಹುಲಿಕುಂಟೆ ಮಠ ಅವರನ್ನು ಮೂರನೇ ಅಧಿಕ ಸಿವಿಲ್ ನ್ಯಾಯಾಲಯ ಜಾಮೀನು ಮೇಲೆ ಕೂಡಲೇ ಬಿಡುಗಡೆ ಮಾಡುವಂತೆ ಆದೇಶಿತು.

ಇಂದು ವಿಚಾರಣೆ ನ್ಯಾಯಾಧೀಶರು ಕೂಡಲೇ ಬಂಧಿತನನ್ನು ಬಿಡುಗಡೆ ಮಾಡಬೇಕು ಎಂದು ಸೂಚಿಸಿತು.

ಆರೋಪಿ ಪರವಾಗಿ ಹಿರಿಯ ವಕೀಲರಾದ ಸೂರ್ಯಮುಕುಂದರಾಜ್, ಬಿ.ಜೆ.ಮಹಾವೀರ ಜೈನ್ ವಾದಿಸಿದರು.

ತುಮಕೂರು ನಗರ ವಿಧಾನ ಸಭಾ ಕ್ಷೇತ್ರದ ಶಾಸಕ ಜಿ.ಬಿ.ಜ್ಯೋತಿ ಗಣೇಶ್ ಫೋಟೋ ಹಾಕಿ ಪೇ ಎಂಎಲ್ಎ ಅಂತ ಪೋಸ್ಟರ್ ಮುದ್ರಿಸಿ ನಗರದ ಬಸ್ ನಿಲುಗಡೆ ಹಾಗೂ ಗೋಡೆಗಳ ಮೇಲೆ ಅಂಟಿಸಿದ ಆರೋಪದ ಮೇಲೆ ಕಾಂಗ್ರೆಸ್ ನಾಯಕ ಶಶಿ ಹುಲಿಕುಂಟೆ ಮಠ್ ಅವರನ್ನು ಪೊಲೀಸರು ಬಂಧಿಸಿದ್ದರು.

ಇದು ₹ 16 ಸಾವಿರ ಹುಣುಸೆ!

0

ಅಬ್ಬಬ್ಬಾ! ಮತ್ತೇ ಹುಣುಸೆ ಬೆಳೆಗಾರರ ಮುಖದಲ್ಲಿ ನಗು ಮೂಡಿದೆ. ಪಾತಾಳ ಗರಡಿ ಸೇರಿದ್ದ ಹುಣುಸೆ ಹಣ್ಣಿನ ಬೆಲೆ ಮತ್ತೇ ಹೆಚ್ಚ ತೊಡಗಿದೆ.

ಚಿತ್ರದಲ್ಲಿ ಕಾಣುವ ಹುಣುಸೆ ಹಣ್ಣು 100, ಕೆಜಿಗೆ ₹16 ಸಾವಿರ ರೂಪಾಯಿಗೆ ಮಾರಾಟವಾಗಿದೆ. ಒಳ್ಳೆಯ ಹಣ್ಣಿಗಾಗಿ ಮರ ಮರ ಸುತ್ತುತ್ತಿದ್ದಾರೆ ವ್ಯಾಪಾರಿಗಳು.

ಹುಣಸೆಗೆ ಬೆಲೆ ಇದೆ ಬೆಳೆ ಇಲ್ಲ.
ಜಿಲ್ಲೆಯಲ್ಲಿ ಹುಣಸೆ ಹಣ್ಣಿನ ಋತು ಪ್ರಾರಂಭವಾಗಿದ್ದು, ಉತ್ತಮ ಬೆಲೆ ಇದ್ದರೂ ಉತ್ತಮ ಹಣ್ಣು ಸಿಗುತ್ತಿಲ್ಲ.

ಕಳೆದ ವರ್ಷ ಇದ್ದ ಬೆಲೆಗಿಂತ ಎರಡರಷ್ಟು ಬೆಲೆ ರೈತರುಗಳಿಗೆ ಮಧ್ಯವರ್ತಿ ಗಳಿಗೆ ಸಿಗುತ್ತಿದೆ.

ಕಳೆದ ವರ್ಷ ಪೆಬ್ರವರಿ ಮತ್ತು ಮಾರ್ಚ್ ನಲ್ಲಿ ನಷ್ಟವಾಗದ ಬೆಲೆ ಸಿಕ್ಕಿತು. ಏಪ್ರಿಲ್ ಮೇ ನಲ್ಲಿ ತೀವ್ರ ವಾಗಿ ಕುಸಿತವಾಗಿ ನೂರು ಕೇಜಿ ಹುಣಸೆ ಹಣ್ಣಿನ ಬೆಲೆ 10-15 ಸಾವಿರ ಕುಸಿತವಾಯಿತು.
ನೂರು ಕೇಜಿ ಸಿದ್ದ ಪಡಿಸಲು ಸುಮಾರು 6ಸಾವಿರ ಖರ್ಚು ಬಂದರೆ ಮಾರುಕಟ್ಟೆಯಲ್ಲಿ ಹಣ್ಣಿನ ಬೆಲೆಯು ಅಷ್ಟೇ ಅಗಿತು. ಮರದಲ್ಲಿನ ಬೆಳೆಯನ್ನು ಖರೀದಿ ಮಾಡಿ ಶುಚಿ ಗೊಳಿಸಿ ಮಾರಾಟ ಮಾಡುತ್ತಿದ್ದ ಮದ್ಯವರ್ತಿಗಳು ಲಕ್ಷಾಂತರ ರೂಗಳನ್ನು ಕಳೆದು ಕೊಂಡರು.


ನೂರಾರು ಮರಗಳಲ್ಲಿ ಹುಣಸೆ ಹಣ್ಣು ಮರದಲ್ಲಿ ಉಳಿದು ಹಾಳಾಯಿತು.
ಪ್ರತಿವರ್ಷ ನವೆಂಬರ್ ತಿಂಗಳ ಒಳಗೆ ಮರಗಳ ವಾರ್ಷಿಕ ಬೆಳೆಯನ್ನು ಗುತ್ತಿಗೆ ಪಡೆಯುತ್ತಿದ್ದರು. ಈ ವರ್ಷ ಡಿಸೆಂಬರ್ ತಿಂಗಳ ವರೆಗೂ ಒಂದು ಮರವೂ ಮಾರಾಟ ವಾಗಲಿಲ್ಲ. ನೂರಾರು ವರ್ಷಗಳಿಲ್ಲಿ ಪ್ರಥಮ ಬಾರಿಗೆ ಬೆಳೆಗಾರರಲ್ಲಿ ಅತಂಕ ಪ್ರಾರಂಭವಾಯಿತು.

ಕಳೆದ ವರ್ಷ ಬಿದ್ದ ಮಳೆಯಿಂದ ಇಳುವರಿ ಕಡಿಮೆಯಾಯಿತು. ಜನವರಿ ಯಲ್ಲಿ ಮಾರುಕಟ್ಟೆ ಯಲ್ಲಿ ಉತ್ತಮ ಬೆಲೆ ಕಂಡಿತು.

ಮದ್ಯವರ್ತಿಗಳು ಮರಗಳ ಹತ್ತಿರ ಬರಲು ಪ್ರಾರಂಭಿಸಿದರು.

ಸದ್ಯಕ್ಕೆ ಹುಣಸೆ ಹಣ್ಣು ಉತ್ತಮ ಬೆಲೆಗೆ ಮಾರಾಟವಾಗುತ್ತಿದೆ.

ಶಿಕ್ಷಕರಿಗೆ ಬುದ್ದಿ ಇರಬೇಕು: ಬೆಟ್ಟದಹಳ್ಳಿ ಶ್ರೀ

ಗುಬ್ಬಿ : ನಾಲ್ಕು ಗೋಡೆಗಳ ಮದ್ಯೆ ಪಡೆಯುವ ಶಿಕ್ಷಣಕಿಂತ ಹೊರಗಡೆ ಪಡೆಯುವ ಶಿಕ್ಷಣ ಜೀವನದಲ್ಲಿ ಹೆಚ್ಚು ಕೌಶಲ್ಯ ವನ್ನು ಕಲಿಸುತ್ತದೆ ಎಂದು ಬೆಟ್ಟದಹಳ್ಳಿ ಮಠದ ಚಂದ್ರಶೇಖರ್ ಸ್ವಾಮೀಜಿ ಅಭಿಪ್ರಾಯ ಪಟ್ಟರು.

ಪಟ್ಟಣದ ಪಟ್ಟಣದ ಸರ್ಕಾರಿ ಹಿರಿಯ ಬಾಲಕರ ಪಾಠಶಾಲೆಯಲ್ಲಿ ಏರ್ಪಡಿಸಿದ್ದ ವಾರ್ಷಿಕೋತ್ಸವ ಸಮಾರಂಭದಲ್ಲಿ ಮಾತನಾಡಿ, ಶಿಕ್ಷಕರಿಗೆ ವಿಶೇಷ ಜ್ಞಾನ ಇರಬೇಕು, ಖಾಸಗಿಯಾದರು ಸರಿ, ಸರ್ಕಾರಿ ಆದರು ಸರಿ ಉತ್ತಮ ವಿದ್ಯೆ ಕಲಿತರೆ ಉತ್ತಮ ಸ್ಥಾನಮಾನ ಪಡೆಯಬಹುದು ಎಂದರು.


ಪಟ್ಟಣ ಪಂಚಾಯತಿ ಅಧ್ಯಕ್ಷ ಜಿ.ಎನ್ ಅಣ್ಣಪ್ಪಸ್ವಾಮಿ ಮಾತನಾಡಿ, ಸರ್ಕಾರಿ ಶಾಲೆಯಲ್ಲಿ ಉತ್ತಮ ಶಿಕ್ಷಣ ದೊರೆಯುತ್ತದೆ. ಸರ್ಕಾರಿ ಶಾಲೆಯಲ್ಲಿ ಓದಿದಂತಹ ವ್ಯಕ್ತಿಗಳು ಉನ್ನತ ಹುದ್ದೆ ಅಲಂಕರಿಸಿರುತ್ತಾರೆ ಎಂದರು.


ಕಾರ್ಯಕ್ರಮದಲ್ಲಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಯತೀಶ್, ಪಪಂ ಸದಸ್ಯ ಶಶಿಕುಮಾರ್, ಕೃಷ್ಣಮೂರ್ತಿ, ಬಿಜೆಪಿ ಮುಖಂಡರಾದ ಜಿ.ಎನ್ ಬೆಟ್ಟಸ್ಚಾಮಿ, ದಿಲೀಪ್,ಜೆಡಿಎಸ್ ಮುಂಖಂಡ ಬಿಎಸ್ ನಾಗರಾಜು, ಚಿತ್ರಕಲಾ ಶಿಕ್ಷಕ ಸಂಘದ ಅಧ್ಯಕ್ಷ ರವೀಶ್ , ವೈದ್ಯ ನಾಗಭೂಷಣ್, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಜಗದೀಶ್ ಶಂಕರ್ ಕುಮಾರ್, ಮುಖ್ಯೋಪಾಧ್ಯಾಯ ಸುಬ್ರಹ್ಮಣ್ಯ, ಎಸ್‌ಟಿಎಂಸಿ ಸದಸ್ಯರು, ಪದಾಧಿಕಾರಿಗಳು ಪೋಷಕರು ಇತರರು ಇದ್ದರು

ಪೇ ಎಂಎಲ್ಎ: ಶಶಿಹುಲಿಕುಂಟೆ ಬಂಧನ

ತುಮಕೂರು ನಗರ ವಿಧಾನ ಸಭಾ ಕ್ಷೇತ್ರದ ಶಾಸಕ ಜಿ.ಬಿ.ಜ್ಯೋತಿ ಗಣೇಶ್ ಫೋಟೋ ಹಾಕಿ ಪೇ ಎಂಎಲ್ಎ ಅಂತ ಪೋಸ್ಟರ್ ಮುದ್ರಿಸಿ ನಗರದ ಬಸ್ ನಿಲುಗಡೆ ಹಾಗೂ ಗೋಡೆಗಳ ಮೇಲೆ ಅಂಟಿಸಿದ ಆರೋಪದ ಮೇಲೆ ಕಾಂಗ್ರೆಸ್ ನಾಯಕ ಶಶಿ ಹುಲಿಕುಂಟೆ ಮಠ್ ಅವರನ್ನು ಪೊಲೀಸರು ಬಂಧಿಸಿದ್ದಾರೆ.

ಪೊಲೀಸರು ಶಶಿ ಅವರನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದು, ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ.

ಗುಬ್ಬಿ ರಥೋತ್ಸವಕ್ಕೆ ನಾಟಕ ರಂಗು

0

ಗುಬ್ಬಿ : ಪಟ್ಟಣದ ಇತಿಹಾಸ ಪ್ರಸಿದ್ಧ ಶ್ರೀ ಚನ್ನಬಸವೇಶ್ವರ ಸ್ವಾಮಿಯ ರಥೋತ್ಸವ ಮಾ.1ರಂದು ಮಧ್ಯಾಹ್ನ 1:45ಕ್ಕೆ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ನೆರವೇರುವುದು.

ರಥೋತ್ಸವಕ್ಕೆ ಆಗಮಿಸುವ ಎಲ್ಲಾ ಭಕ್ತಾರಿಗೂ ಮಧ್ಯಾಹ್ನ 1 ಗಂಟೆಯಿಂದ ರಾತ್ರಿ 11 ಗಂಟೆಯವರೆಗೆ ನಿರಂತರ ಮಹಾದಾಸೋಹ ಇರುತ್ತದೆ.
ರಥೋತ್ಸವದ ಅಂಗವಾಗಿ ಪ್ರಾರಂಭಗೊಂಡ ಧಾರ್ಮಿಕ ಕಾರ್ಯಕ್ರಮಗಳು ಮಾ.13 ಬಸವ ವಾಹನದೊಂದಿಗೆ ಮುಕ್ತಾಯಗೊಳ್ಳುವುದು.

ಮಾ.1ರಂದು ಶ್ರೀ ಚನ್ನಬಸವೇಶ್ವರ ಸ್ವಾಮಿ ಕೃಪಾಪೋಷಿತ ನಾಟಕ ಮಂಡಳಿ ವತಿಯಿಂದ ಸಂಪೂರ್ಣ ರಾಮಾಯಣ ನಾಟಕವನ್ನು ರಾತ್ರಿ 7:30ಕ್ಕೆ ಏರ್ಪಡಿಸಲಾಗಿದೆ. ಮಾ.3 ರಂದು ಗುಬ್ಬಿಯಪ್ಪ ಕಲಾಸಂಘದ ವತಿಯಿಂದ ರಾತ್ರಿ7.30ಕ್ಕೆ ಕುರುಕ್ಷೇತ್ರ ಎಂಬ ಪೌರಾಣಿಕ ನಾಟಕವನ್ನು ಏರ್ಪಡಿಸಲಾಗಿದೆ.

ಮಾ.7ರಂದು ಬೆಳ್ಳಿ ಪಲ್ಲಕ್ಕಿಯ ಉತ್ಸವ ನಡೆಯುವುದು.ಇದೇ ದಿನ ಶ್ರೀ ಗುಬ್ಬಿಯಪ್ಪ ಕಲಾಸಂಘದ ವತಿಯಿಂದ ರಾತ್ರಿ 7:30ಕ್ಕೆ ರಾಮಾಯಣ ಎಂಬ ಪೌರಾಣಿಕ ನಾಟಕವನ್ನು ಏರ್ಪಡಿಸಲಾಗಿದೆ.

ಹಳ್ಳಿಗೆ ವಿ.ವಿ ತಂದ ಹೆಮ್ಮೆ: ಸುರೇಶಗೌಡ

ನಾಗವಲ್ಲಿ: ಹಳ್ಳಿಗೆ ತುಮಕೂರು ವಿಶ್ವವಿದ್ಯಾಲಯವನ್ನು ತಂದ ಹೆಮ್ಮೆ ನನಗೆ ಇದೆ. ಶಿಕ್ಷಣ ಕ್ಷೇತ್ರದ ಅಭಿವೃದ್ಧಿಯೇ ನನ್ನ ಕನಸಾಗಿದೆ ಎಂದು ಮಾಜಿ ಶಾಸಕ ಬಿ.ಸುರೇಶಗೌಡ ಹೇಳಿದರು.

ಇಲ್ಲಿಗೆ ಸಮೀಪದ ಸೀನಪ್ಪನಹಳ್ಳಿ ದೊಡ್ಡಮ್ಮ ಚಿಕ್ಕಮ್ಮ ದೇವಿಯ ಜಾತ್ರಾ ಮಹೋತ್ಸವದಲ್ಲಿ ಸಾವಿರಾರು ಜನರನ್ನು ಉದ್ದೇಶಿಸಿ ಅವರು ಮಾತನಾಡಿದರು.

ಬಿದರೆ ಕಟ್ಟೆ ಗೆ ವಿಶ್ವವಿದ್ಯಾಲಯ ತಂದಿರುವುದರಿಂದ ಈ ಭಾಗದ ಹಳ್ಳಿ ಮಕ್ಕಳಿಗೆ ಕೈ ಅಳತೆ ದೂರದಲ್ಲಿ ಶಿಕ್ಷಣ ಸಿಗಲಿದೆ. ಉನ್ನತ ಶಿಕ್ಷಣದ ಕನಸು ನೆರವೇರಲಿದೆ ಎಂದರು.

ಹೆಬ್ಬೂರು- ಗೂಳೂರು ಏತ ನೀರಾವರಿ ಯೋಜ‌ನೆಯನ್ನು ನೆ‌ನಪು ಮಾಡಿಕೊಂಡ ಅವರು ಹೇಮಾವತಿ ನದಿ ನೀರು ತಂದಿದ್ದರಿಂದ ಈ ಭಾಗವು ಕೃಷಿಕರಿಗೆ ನೆರವಾಗಿದೆ ಎಂದರು.

ಕ್ಷೇತ್ರ ಅಭಿವೃದ್ಧಿಯೇ ನನ್ನ ಗುರಿಯಾಗಿದೆ. ಈ ಸಲ ಜನರು ನನಗೆ ಆರ್ಶೀವದಿಸಬೇಕು. ಅಭಿವೃದ್ಧಿಯಲ್ಲಿ ಗ್ರಾಮಾಂತರ ಕ್ಷೇತ್ರ ನಂಬರ್ ಒನ್ ಆಗಬೇಕಾಗಿದೆ. ಇದೇ ನನ್ನ ಕನಸು ಎಂದರು.

ಗ್ರಾಮದ ಹಲವು ಮುಖಂಡರು, ಬಿಜೆಪಿ ಕಾರ್ಯಕರ್ತರು, ಮುಖಂಡರು ಇತರರು ಇದ್ದರು.

ಅಪಘಾತ: ಮಕ್ಕಳು ಸೇರಿ 4 ಮಂದಿ ಸಾವು

ಹಾಸನ: ಇಲ್ಲಿನ ತಿಪಟೂರು ಮುಖ್ಯ ರಸ್ತೆಯ ನವಿಲೇ ಗೇಟ್ ಬಳಿ ಟ್ಯಾಕ್ಟರ್ ಹಾಗೂ ದ್ವಿಚಕ್ರ ಅಪಘಾತದಲ್ಲಿ ಒಂದೇ ಕುಟುಂಬದ 4 ಮಂದಿ ಸಾವಿಗೀಡಾಗಿದ್ದಾರೆ.

ಇವರುಗಳನ್ನು ತಿಪಟೂರು ತಾಲೂಕಿನ ಎಡಗರಹಳ್ಳಿ ಗ್ರಾಮದ ಯೋಗೇಶ್ ಆಚಾರಿ (35) ಅವರ ಪತ್ನಿ ಲಕ್ಷ್ಮಿ(27) ಹಾಗೂ ಯೋಗೇಶ್ ಆಚಾರಿ ತಂಗಿಯ ಮಕ್ಕಳಾದ ಗಾನವಿ(12) ತೇಜು(4) ಎಂದು ಗುರುತಿಸಲಾಗಿದೆ.

ಶನಿವಾರ ತಮ್ಮ ಹುಟ್ಟೂರಿನಿಂದ ನವಲೆ ಗೇಟ್ ಗೆ ಬರುವಾಗ ಈ ಅಪಘಾತ ನಡೆದಿದೆ.

ಡೀಸೆಲ್ ಖಾಲಿಯಾದ ಹಿನ್ನೆಲೆಯಲ್ಲಿ ಟ್ಯಾಕ್ಟರ್ ಅನ್ನು ಚಾಲಕ ರಸ್ತೆಯ ಮಧ್ಯದಲ್ಲಿ ಬಿಟ್ಟು ಹೋಗಿದ್ದ. ದಿಚಕ್ರ ವಾಹನ ನಿಂತಿದ್ದ ಟ್ರ್ಯಾಕ್ಟರ್ ಗೆ ಡಿಕ್ಕಿ ಹೊಡೆದು ಅಪಘಾತ ನಡೆದಿದೆ.

ಈ ಸಂಬಂಧ ನುಗ್ಗೇಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಾಸನ ಮನೆಯವರಿಗಿಲ್ಲ ಟಿಕೆಟ್: ಎಚ್ಡಿಕೆ

ಚಿಕ್ಕಬಳ್ಳಾಪುರ: ಹಾಸ‌ನ ವಿಧಾನಸಭಾ ಕ್ಷೇತ್ರದಲ್ಲಿ ಸಾಮಾನ್ಯ ಕಾರ್ಯಕರ್ತರೊಬ್ಬ ರಿಗೆ ಟಿಕೆಟ್ ನೀಡುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಹೇಳಿದರು.

ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಹಾಸನ ಕ್ಷೇತ್ರದ ಬಗ್ಗೆ ಎಲ್ಲರಿಗೂ ಕುತೂಹಲ ಹೆಚ್ಚಿದೆ. ನಮ್ಮ ಮನೆಯವರಿಗೆ ಟಿಕೆಟ್ ಕೊಡುವುದಿಲ್ಲ ಎಂಬ ಮಾತಿಗೆ ಈಗಲೂ ಬದ್ಧ ಎಂದರು.

ಹಾಸನ ಕ್ಚೇತ್ರಕ್ಕೆ ಜಿಲ್ಲಾ ಪಂಚಾಯತ್ ಸದಸ್ಯರು, ನಗರಸಭೆ ಸದಸ್ಯರು ಸಹಿತ ಮುನ್ನೂರು ಮುಖಂಡರ ಸಭೆಯನ್ನು ಕರೆದಿದ್ದೇನೆ. ಎಲ್ಲರ ಅಭಿಪ್ರಾಯ ಪಡೆದು ಟಿಕೆಟ್ ನಿರ್ಧರಿಸುವೆ ಎಂದರು.

ಕೆಲಸಕ್ಕೆ ಬರೋಲ್ಲ; ಸರ್ಕಾರಿ ನೌಕರರ ಪ್ರತಿಜ್ಞೆ

ತುರುವೇಕೆರೆ:

ತಾಲ್ಲೂಕಿನ ಎಲ್ಲ ಇಲಾಖೆಗಳ ಸರ್ಕಾರಿ ನೌಕರರು, ಅನುದಾನಿತ ಹಾಗು ಅನುದಾನ ರಹಿತ ಶಾಲೆಗಳ ನೌಕರರು ಮಾರ್ಚ್ 1 ರಂದು ತಮ್ಮ ಮನೆಯಲ್ಲಿಯೇ ಇದ್ದು ಕರ್ತವ್ಯಕ್ಕೆ ಗೈರು ಹಾಜರಿ ಆಗುವ ಮೂಲಕ ಬೆಂಗಳೂರಿನಲ್ಲಿ ನಡೆಯುತ್ತಿರುವ ರಾಜ್ಯ ಸರ್ಕಾರಿ ನೌಕರರ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಸಾಥ್ ನೀಡ ಬೇಕೆಂದು ಸಕರ್ಾರಿ ನೌಕರರ ಸಂಘದ ತಾಲ್ಲೂಕು ಅಧ್ಯಕ್ಷ ನಂರಾಜು ಮುನಿಯೂರು ನೌಕರರಿಗೆ ಮನವಿ ಮಾಡಿದರು.

ಪಟ್ಟಣದ ಮಾಯಸಂದ್ರ ರಸ್ತೆಯಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಕಚೇರಿಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಮಾಚ್ 1 ರ ಸರ್ಕಾರಿ ನೌಕರರ ಅನಿರ್ದಿಷ್ಟಾವಧಿ ಮುಷ್ಕರದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.

ಫೆ.21ರಂದು ಬೆಂಗಳೂರಿನಲ್ಲಿ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಷಡಕ್ಷರಿಯವರ ಅಧ್ಯಕ್ಷತೆಯ ಕಾರ್ಯಕಾರಣಿ ಸಭೆಯಲ್ಲಿ ಸರ್ವರ ಅಭಿಪ್ರಾಯ ತೆಗೆದುಕೊಂಡು ಎರಡು ನ್ಯಾಯುತ ಎರಡು ಬೇಡಿಕೆಗಳನ್ನು ಮಾತ್ರ ಸರ್ಕಾರದ ಮುಂದೆ ಇಡಲಿ ತೀರ್ಮಾನಿಸಲಾಯಿತು.

ಅವುಗಳಲ್ಲಿ ಒಂದು 7ನೇ ವೇತನ ಆಯೋಗದಿಂದ ಮಧ್ಯಂತರ ವರದಿಯನ್ನು ಪಡೆದು ಶೇ.40ರಷ್ಟು ವೇತನ ಹೆಚ್ಚಳ ಮಾಡುವ ಆದೇಶ ಹೊರಡಿಸಬೇಕು. ಆಗೆಯೇ ಪಂಚಾಬ್, ರಾಜಾಸ್ಥಾನ, ಜಾರ್ಖಂಡ್, ಹಿಮಾಚಲ ಪ್ರದೇಶ, ಛತೀಸ್ಗಡ, ರಾಜ್ಯಗಳ ಮಾದರಿಯಲ್ಲಿ ಎನ್ಪಿಎಸ್ ರದ್ದುಪಡಿಸಿ ಹಳೆಪಿಂಚಣಿ ಯೋಜನೆಯನ್ನು ಜಾರಿಗೊಳಿಸಬೇಕು.

ಇವುಗಳಲ್ಲಿ ಯಾವುದಾರು ಒಂದು ಬೇಡಿಕೆ ಕೈಬಿಟ್ಟರೂ ಸಹ ಹೋರಾಟ ನಿಲ್ಲುವುದಿಲ್ಲ. ಹಾಗಾಗಿ ಎಲ್ಲ ಇಲಾಖೆಗಳ ನೌಕರರು ಈ ಎರಡು ಬೇಡಿಕೆಗಳು ಈಡೇರುವ ಹೊರೆವಿಗೂ ಬಿಡದೆ ಸಂಘದ ಶಕ್ತಿಯನ್ನು ಪ್ರದರ್ಶಿಸಿ ಸರ್ಕಾರಕ್ಕೆ ಎಚ್ಚರಿಕೆ ರವಾನಿಸಬೇಕಿದೆ.

ಪ್ರತಿಯೊಬ್ಬ ಅಧಿಕಾರಿ, ನೌಕರರು ಬುಧವಾರ ಯಾವುದೇ ಪ್ರತಿಭಟನೆ, ಘೋಷಣೆ ಕೂಗುವಹಾಗಿಲ್ಲ, ಯಾರ ವಿರುದ್ದವೂ ಮಾತನಾಡದೇ ಕೇವಲ ಮನೆಯಲ್ಲಿಯೇ ಇದ್ದು ತಮ್ಮ ಭವಿಷ್ಯದ ಬದುಕಿಗಾಗಿ ಹೋರಾಟ ತೀವ್ರಗೊಳಿಸೋಣ ಎಂದರು.

ಈ ಸಂದರ್ಭದಲ್ಲಿ ಸಂಘದ ಕಾರ್ಯದಶರ್ಿ ನಟೇಶ್, ಉಪಾಧ್ಯಕ್ಷರಾದ ಚಂದ್ರಹಾಸು, ವೀರಪ್ರಸನ್ನ, ಬಾಲಾಜಿ, ರಾಜ್ಯಪರಿಷತ್ ಸದಸ್ಯ ಗಿಡ್ಡೇಗೌಡ, ಶಿಕ್ಷಕರ ಸಂಘದ ಅಧ್ಯಕ್ಷ ಬಸವಾರಾಜು, ಕಂದಾಯ ನೌಕರರ ಸಂಘದ ಅಧ್ಯಕ್ಷ ಸುನಿಲ್ ಕುಮಾರ್, ಗ್ರಾಮಲೆಕ್ಕಿಗರ ಸಂಘದ ಅಧ್ಯಕ್ಷ ಜಗದೀಶ್, ಜಿಲ್ಲಾ ಖಜಾಂಚಿ ಷಣ್ಮಖಪ್ಪ, ತಾಲ್ಲೂಕಿನ ಎಲ್ಲಾ ಇಲಾಖೆಗಳ ನಿರ್ದೇಶಕರು, ಎನ್ಪಿಎಸ್, ಒಪಿಎಸ್ ನೌಕರರು, ನಿಗಮ ಮಂಡಳಿಗಳ ಅಧ್ಯಕ್ಷರು ಇನ್ನಿತರರು ಭಾಗವಹಿಸಿದ್ದರು.