ಅಬ್ಬಬ್ಬಾ! ಮತ್ತೇ ಹುಣುಸೆ ಬೆಳೆಗಾರರ ಮುಖದಲ್ಲಿ ನಗು ಮೂಡಿದೆ. ಪಾತಾಳ ಗರಡಿ ಸೇರಿದ್ದ ಹುಣುಸೆ ಹಣ್ಣಿನ ಬೆಲೆ ಮತ್ತೇ ಹೆಚ್ಚ ತೊಡಗಿದೆ.
ಚಿತ್ರದಲ್ಲಿ ಕಾಣುವ ಹುಣುಸೆ ಹಣ್ಣು 100, ಕೆಜಿಗೆ ₹16 ಸಾವಿರ ರೂಪಾಯಿಗೆ ಮಾರಾಟವಾಗಿದೆ. ಒಳ್ಳೆಯ ಹಣ್ಣಿಗಾಗಿ ಮರ ಮರ ಸುತ್ತುತ್ತಿದ್ದಾರೆ ವ್ಯಾಪಾರಿಗಳು.
ಹುಣಸೆಗೆ ಬೆಲೆ ಇದೆ ಬೆಳೆ ಇಲ್ಲ.
ಜಿಲ್ಲೆಯಲ್ಲಿ ಹುಣಸೆ ಹಣ್ಣಿನ ಋತು ಪ್ರಾರಂಭವಾಗಿದ್ದು, ಉತ್ತಮ ಬೆಲೆ ಇದ್ದರೂ ಉತ್ತಮ ಹಣ್ಣು ಸಿಗುತ್ತಿಲ್ಲ.
ಕಳೆದ ವರ್ಷ ಇದ್ದ ಬೆಲೆಗಿಂತ ಎರಡರಷ್ಟು ಬೆಲೆ ರೈತರುಗಳಿಗೆ ಮಧ್ಯವರ್ತಿ ಗಳಿಗೆ ಸಿಗುತ್ತಿದೆ.
ಕಳೆದ ವರ್ಷ ಪೆಬ್ರವರಿ ಮತ್ತು ಮಾರ್ಚ್ ನಲ್ಲಿ ನಷ್ಟವಾಗದ ಬೆಲೆ ಸಿಕ್ಕಿತು. ಏಪ್ರಿಲ್ ಮೇ ನಲ್ಲಿ ತೀವ್ರ ವಾಗಿ ಕುಸಿತವಾಗಿ ನೂರು ಕೇಜಿ ಹುಣಸೆ ಹಣ್ಣಿನ ಬೆಲೆ 10-15 ಸಾವಿರ ಕುಸಿತವಾಯಿತು.
ನೂರು ಕೇಜಿ ಸಿದ್ದ ಪಡಿಸಲು ಸುಮಾರು 6ಸಾವಿರ ಖರ್ಚು ಬಂದರೆ ಮಾರುಕಟ್ಟೆಯಲ್ಲಿ ಹಣ್ಣಿನ ಬೆಲೆಯು ಅಷ್ಟೇ ಅಗಿತು. ಮರದಲ್ಲಿನ ಬೆಳೆಯನ್ನು ಖರೀದಿ ಮಾಡಿ ಶುಚಿ ಗೊಳಿಸಿ ಮಾರಾಟ ಮಾಡುತ್ತಿದ್ದ ಮದ್ಯವರ್ತಿಗಳು ಲಕ್ಷಾಂತರ ರೂಗಳನ್ನು ಕಳೆದು ಕೊಂಡರು.
ನೂರಾರು ಮರಗಳಲ್ಲಿ ಹುಣಸೆ ಹಣ್ಣು ಮರದಲ್ಲಿ ಉಳಿದು ಹಾಳಾಯಿತು.
ಪ್ರತಿವರ್ಷ ನವೆಂಬರ್ ತಿಂಗಳ ಒಳಗೆ ಮರಗಳ ವಾರ್ಷಿಕ ಬೆಳೆಯನ್ನು ಗುತ್ತಿಗೆ ಪಡೆಯುತ್ತಿದ್ದರು. ಈ ವರ್ಷ ಡಿಸೆಂಬರ್ ತಿಂಗಳ ವರೆಗೂ ಒಂದು ಮರವೂ ಮಾರಾಟ ವಾಗಲಿಲ್ಲ. ನೂರಾರು ವರ್ಷಗಳಿಲ್ಲಿ ಪ್ರಥಮ ಬಾರಿಗೆ ಬೆಳೆಗಾರರಲ್ಲಿ ಅತಂಕ ಪ್ರಾರಂಭವಾಯಿತು.
ಕಳೆದ ವರ್ಷ ಬಿದ್ದ ಮಳೆಯಿಂದ ಇಳುವರಿ ಕಡಿಮೆಯಾಯಿತು. ಜನವರಿ ಯಲ್ಲಿ ಮಾರುಕಟ್ಟೆ ಯಲ್ಲಿ ಉತ್ತಮ ಬೆಲೆ ಕಂಡಿತು.
ಮದ್ಯವರ್ತಿಗಳು ಮರಗಳ ಹತ್ತಿರ ಬರಲು ಪ್ರಾರಂಭಿಸಿದರು.
ಸದ್ಯಕ್ಕೆ ಹುಣಸೆ ಹಣ್ಣು ಉತ್ತಮ ಬೆಲೆಗೆ ಮಾರಾಟವಾಗುತ್ತಿದೆ.