Friday, March 13, 2026
Google search engine
Home Blog Page 57

ಸಿ.ಎಸ್.ಪುರದಲ್ಲಿ ಹನುಮಂತನಾಥ ಶ್ರೀ

0

ಗುಬ್ಬಿ : ಮಕ್ಕಳಿಗೆ ಉತ್ತಮ ಸಂಸ್ಕಾರ ಕಲಿಸಿಕೊಟ್ಟಾಗಮಾತ್ರ ಸಮಾಜದಲ್ಲಿ ಉತ್ತಮ ಸ್ಥಾನಮಾನ ಪಡೆಯಲು ಸಾಧ್ಯ ಎಂದು ಕುಂಚಿಟಿಗರ ಮಹಾಸಂಸ್ಥಾನ ಮಠಾಧ್ಯಕ್ಷ ಡಾ.ಹನುಮಂತನಾಥ ಸ್ವಾಮೀಜಿ ಹೇಳಿದರು.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ಗುಬ್ಬಿ, ಶ್ರೀ ಮಾತೃ ಪೂಜಾ ಸಮಿತಿ ಸಿಎಸ್ ಪುರ ವಲಯ, ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟ ಆಶಯದಲ್ಲಿ ಮಾತೃ ಪೂಜಾ ಕಾರ್ಯಕ್ರಮ ಹಾಗೂ ಧಾರ್ಮಿಕ ಸಭೆ ಕಾರ್ಯಕ್ರಮದಲ್ಲಿ ಮಾತನಾಡಿ, ಹೆಣ್ಣು ಮಕ್ಕಳು ಬೆಳಗ್ಗೆ ಏಳುವುದರಿಂದ ಪ್ರಾರಂಭಗೊಂಡು ರಾತ್ರಿ ಮಲಗುವವರೆಗೂ ಕ್ರಿಯಾಶೀಲತೆಯಿಂದ ಕೂಡಿರುತ್ತಾರೆ. ಆದ್ದರಿಂದ ಹೆಣ್ಣು ಮಕ್ಕಳನ್ನು ಗೌರವಿಸುವುದು, ಪ್ರತಿಯೊಬ್ಬರ ಜವಾಬ್ದಾರಿ ಎಂದರು.

ಹಿರಿಯ ಜಲ್ಲಾ ನಿರ್ದೇಶಕಿ ದಯಾಶೀಲ ಮಾತನಾಡಿ, ಶ್ರೀ ಕ್ಷೇತ್ರದ ಕಾರ್ಯಕ್ರಮ ಗುರುಹಿರಿಯರ ಸಹಕಾರದಿಂದ ಕ್ಷೇತ್ರ ವಿಸ್ತರಣೆಯಾಗುತ್ತದೆ. ಕುಡಿತಕ್ಕೆ ಒಳಪಟ್ಟ ವ್ಯಕ್ತಿಗಳಿಗೆ ಮದ್ಯವರ್ಜನ ಶಿಬಿರಗಳನ್ನು ಮಾಡಿ, ಅವರು ಸಮಾಜದಲ್ಲಿ ಉತ್ತಮ ವ್ಯಕ್ತಿಗಳಾಗಲು ಶ್ರೀ ಕ್ಷೇತ್ರ ಶ್ರಮಿಸುತ್ತಿದೆ. ಹತ್ತು ಹಲವು ಸಾಮಾಜಿಕ ಸೇವೆಯನ್ನು ಸಲ್ಲಿಸುತ್ತಿದೆ ಎಂದರು.

ಮಧ್ಯವರ್ಜನ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಅ ನಾ ಲಿಂಗಪ್ಪ ಮಾತನಾಡಿ, ನಮ್ಮ ಸಂಸ್ಕೃತಿಯ ನೆಲಗಟ್ಟು ಉಳಿಸಬೇಕಾದರೆ ಮಾತೃ ಪೂಜಾ ಕಾರ್ಯಕ್ರಮಗಳ ನಡೆಯಬೇಕು. ಶ್ರೀ ಕ್ಷೇತ್ರ ಹತ್ತು ಹಲವು ಸಂಸ್ಕಾರ ಕಲಿಸುವ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿದೆ. ಮೊದಲು ನಾವುಗಳ ಸಂಸ್ಕಾರ ಕಲಿತು ತಮ್ಮ ಮಕ್ಕಳಿಗೂ ಸಂಸ್ಕಾರ, ಸಂಸ್ಕತಿ ಕಲಿಸಬೇಕು ಎಂದರು. ಕಾರ್ಯಕ್ರಮದಲ್ಲಿ ಹಳ್ಳಿಕಾರ್ ಮಠದ ಪೀಠಾಧಿಪತಿ ಬಾಲಕೃಷ್ಣಾನಂದ ಸ್ವಾಮೀಜಿ ಮಾತನಾಡಿ, ಮಕ್ಕಳು ದುಷ್ಟಕ್ಕೆ ಬಲಿಯಾಗದಂತೆ ಗುರುಹಿರಿಯರು ಗಮನಿಸುವುದು ಅತ್ಯಗತ್ಯ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಯೋಜನಾಧಿಕಾರಿ ರಾಜೇಶ್, ಗ್ರಾಮ ಪಂಚಾಯತಿ ಅಧ್ಯಕ್ಷರಾ ಸುಮಿತ್ರಾಶಿವಯ್ಯ ,ಗುರುರುದ್ರಮುನಿ ದೇವಾಂಗ ಸಂಘದ ಅಧ್ಯಕ್ಷ ಕೆ.ಎಸ್.ಲಿಂಗಣ್ಣ, ಸಿಬ್ಬಂದಿಗಳಾದ ಮೇಲ್ವಿಚಾರಕಿ ರೇಣುಕಾ, ಚಂದ್ರಶೇಖರ್ ಗುರುಪ್ರಕಾಶ್, ಶಿವ ನಾಗಪ್ಪ, ವೀಣಾ, ಸ್ಥಳೀಯ ಚುನಾಯಿತ ಪ್ರತಿನಿಧಿಗಳು ಸಂಘದ ಸದಸ್ಯರುಗಳು, ಸಾರ್ವಜನಿಕರು ಹಾಗೂ ಇದ್ದರು ಇತರರು ಇದ್ದರು.

ನಾನೇ ಅಭ್ಯರ್ಥಿ: ಶಿವಣ್ಣ ಘೋಷಣೆ

ತುಮಕೂರು: ತುಮಕೂರು‌ ನಗರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ನಾನೇ. ಯಾರು ಏನೇ ಹೇಳಿಕೊಳ್ಳಲಿ ಎಂದು ಮಾಜಿ ಶಾಸಕ ಸೊಗಡು ಶಿವಣ್ಣ ಪ್ರಕಟಿಸಿದರು.

ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 1975 ರಿಂದ ಪಕ್ಷ ಕಟ್ಟಿದ್ದೇನೆ. ಜನಸಂಘದ ರಕ್ತ ನನ್ನದು. ನಾಲ್ಕು ಸಲ ಗೆದ್ದಿದ್ದೇನೆ. ಕ್ಷೇತ್ರದಲ್ಲಿ ಶಾಂತಿ‌ ನೆಲೆಸುವುದೇ ನನ್ನ ಗುರಿಯಾಗಿದೆ ಎಂದು ಹೇಳಿದರು.

ನನ್ನ ಅಭಿಮಾನಿಗಳು, ಹಿತೈಷಿಗಳೇ ಚುನಾವಣಾ ವೆಚ್ಚ ಭರಿಸಲಿದ್ದಾರೆ. ಎನ್.ಅರ್.ಕಾಲೊನಿಯಿಂದ ಚುನಾವಣಾ ಪ್ರಚಾರ ಆರಂಭಿಸುವೆ. ಮತ ಭಿಕ್ಷೆ ಪಾದಯಾತ್ರೆ ನಡೆಸುವೆ ಎಂದು ವಿವರಿಸಿದರು.

ಮಾಜಿ ಶಾಸಕ ಕಿರಣ್ ಕುಮಾರ್ ಕಾಂಗ್ರೆಸ್ ಸೇರ್ಪಡೆ ಬಗ್ಗೆ ಪ್ರತಿಕ್ರಿಯಿಸಿದ ಅವರು ನನ್ನದು ಜನ ಸಂಘದ ರಕ್ತ. ಪಕ್ಷಾಂತರಿ ಅಲ್ಲ ಎಂದರು.

ನಾನು ಬೇರೆ ಪಕ್ಷಕ್ಕೆ ಹೋಗಲಾರೆ: ಶಾಸಕ ಜ್ಯೋತಿಗಣೇಶ್

ತುಮಕೂರು: ನಾನು ಬೇರೆ ಪಕ್ಷಕ್ಕೆ ಹೋಗಲಾರೆ. ಬಿಜೆಪಿಯಿಂದ ನಗರಕ್ಕೆ ನಾನೇ ಅಭ್ಯರ್ಥಿ ಎಂದು ಶಾಸಕ ಜ್ಯೋತಿ ಗಣೇಶ್ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಂಗಳವಾರ ಮಾತನಾಡಿದ ಅವರು, ಅಂತರರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆಯುವಂಥ ಅಭಿವೃದ್ಧಿ ಕೆಲಸಗಳನ್ನು ನಾನು ಮಾಡಿದ್ದೇನೆ. ಮುಖ್ಯಮಂತ್ರಿ ಸಹಿತ ಹಲವು ಸಚಿವರು ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ನಗರಕ್ಕೆ ಬರುತ್ತಿದ್ದಾರೆ ಎಂದರು.

ಹಾಲಿ ಶಾಸಕರಿಗೆ ಟಿಕೆಟ್ ನೀಡುವುದು ಬಿಜೆಪಿಯಲ್ಲಿ ಲಾಗಾಯ್ತನಿಂದಲೂ ನಡೆದುಕೊಂಡು ಬಂದಿದೆ. ಈ ಸಲವೂ ಪಕ್ಷ ನನಗೆ ಟಿಕೆಟ್ ನೀಡಲಿದೆ ಎಂದು ಸ್ಪಷ್ಟಪಡಿಸಿದರು.

ಹಲವು ಮಂದಿ ಟಿಕೆಟ್ ಬಯಸುತ್ತಿರುವುದರಲ್ಲಿ ತಪ್ಪೇನಿಲ್ಲ. ಪ್ರಜಾಪ್ರಭುತ್ವದಲ್ಲಿ ಎಲ್ಲರಿಗೂ ಹಕ್ಕು ಇದೆ. ಆದರೆ ಪಕ್ಷ ಈ ಬಗ್ಗೆ ನಿರ್ಧಾರ ಮಾಡಲಿದೆ ಎಂದರು.

ಮುಂದಿನ ಸಲವೂ ರಾಜ್ಯದಲ್ಲಿ ಬಿಜೆಪಿಯೇ ಅಧಿಕಾರ ಕ್ಕೆ ಬರಲಿದೆ. ಕೇಂದ್ರದಲ್ಲಿ ಬಿಜೆಪಿಯೇ ಬರಲಿದೆ. ಪಕ್ಷ ಅಧಿಕಾರಕ್ಕೆ ಬರಬೇಕೆಂದು ಕೆಲಸ ಮಾಡುತ್ತಿದ್ದೇನೆ ಎಂದರು.

ಕಳೆದ ಸಲವು ನನಗೆ ಟಿಕೆಟ್ ನೀಡಲು ವಿರೋಧ ಇತ್ತು. ಈ ವಿರೋಧದ ನಡುವೆಯೇ ನಾನು ಗೆದ್ದು ಬರಲಿಲ್ಲವೇ ಎಂದು ಪ್ರಶ್ನಿಸಿದರು.

ಬಾಣಂತಿ

0
ತಾಯ್ತನ ಎಂಬುದು ಮಾತಿಗೆ ದಕ್ಕದ ಅನುಭವ, ಅಂತಹ ತಾಯ್ತನ ಮಗುವಿನ ಆರೈಕೆ ಸುಲಭದ್ದಲ್ಲ. ಹೆಣ್ಣಿನ ಸಂತೋಷ ಮತ್ತು ಸಂಕಟದ ಸಮಯವದು ಅದನ್ನು ಕವನದ ಸಾಲುಗಳಲ್ಲಿ ಸರಳವಾಗಿ ಹಿಡಿದಿಟ್ಟಿದ್ದಾರೆ ಡಾ. ರಜನಿ ಎಂ.

ನೀ ಹೆತ್ತಿರುವೆಯಂತೆ…?
ಎಲ್ಲರೂ ಬರುವರು
ಮಗುವ ನೋಡಲು…
ಛೆ
ಮಗೂಗೆ
ಏನು ಗೊತ್ತು ನನ್ನ ಸಂಕಟ…
ಹಾಲು ಕುಡಿದು
ಮಲುಗುವುದ ಬಿಟ್ಟು …

ನನ್ನ ನೋವು
ಕೇಳ ಬಾರದೆ
ನೀವು ?

ಎದೆ ಹಾಲು
ಬಾರದ ಭಯ
ಎದೆ ಭಾವು
ತಂದ ನೋವು

ಎದೆ ತೊಟ್ಟು
ಕೊಟ್ಟಾಗಲೆಲ್ಲ
ಕಿಬ್ಬೊಟ್ಟೆ ಕಿವುಚಿ

ಹೊಟ್ಟೆ ಖಾಲಿ
ಖಾಲಿ ..
ಕೈ ತುಂಬಾ ಮಗು..

ಬಿಡು ಬೀಸು ಇದ್ದ
ನನಗೆ
ಮಗುವೆಂಬ… ಜತನ..

ರಕ್ತ ಬಸಿದು
ಹೆತ್ತದ್ದು ನಾನೇ?

ಕೂರಲೂ ಆಗದೆ
ಹೇಳಲೂ ಆಗದೆ
ಹಾಲು ಊಡಿಸಿ
ಲಾಲಿ ಹಾಡುವ ಜವಾಬುದಾರಿ.

ಮರೆತು ಎಲ್ಲ
ಮಗುವ ತಬ್ಬಲು
ಏನೋ ತುಮುಲ
ಕೇಳೇ ಅಮ್ಮ
ಇದ್ಯಾವ ಹೊರೆ ನನಗೆ…

ನಿನಗೂ
ಹೀಗೆ ಆಗಿತ್ತೇನೆ?
ಬಾರೆ ಸಂತೈಸು
ನನ್ನನು..
ನೀಗ ಬಾರೆ
ಮನದ ದುಗುಡವನ್ನು…

ಮಗು ಹೆತ್ತದ್ದು
ನಾನಲ್ಲವೇನೆ??

ಹೆತ್ತ ಮಗುವಿಗಿಂತ
ಹೆಚ್ಚಲ್ಲವೇನೆ?

ನಾ ತಾಯಾದ
ಗಳಿಗೆ….
ಹೊತ್ತಿರುವೆ
ಹೆಚ್ಚು ಭಾರ. .

ಹೊಟ್ಟೆ ಇಳಿಸಿದರೇನೆ??
ಹೊರ ಬೇಕಲ್ಲವೇ
ಮಗುವನ್ನು
ಎದೆ ತುಂಬ
ಮನದ ತುಂಬಾ
ಹೃದಯ ತುಂಬಾ

..ನನ್ನ ಕರುಳ ಬಳ್ಳಿ
ಹರಿಯುವ ತನಕ…
ಸಹಕರಿಸಿರೇ
ಅಕ್ಕ ತಂಗಿಯರೇ
ಕಂದನ ಕಾಯಲು .

ಶಿವೋತ್ಸವದ ಗಣೆ ಗೌರವಕ್ಕೆ ಮೀರಸಾಬಿಹಳ್ಳಿ ಶಿವಣ್ಣ ಆಯ್ಕೆ

ತುಮಕೂರು:ಜಿಲ್ಲೆಯ ಸಿರಾ ಸೀಮೆ ಸಾಂಸ್ಕೃತಿಕ ವೇದಿಕೆಯ ಅಹೋರಾತ್ರಿ ಸಾಂಸ್ಕೃತಿಕ ಜಾಗರಣೆ ಶಿವೋತ್ಸವದ ‘ಗಣೆ ಗೌರವ’ಕ್ಕೆ ಈ ಬಾರಿ ಜಾನಪದ ವಿದ್ವಾಂಸರಾದ ಡಾ.ಮೀರಸಾಬಿಹಳ್ಳಿ ಶಿವಣ್ಣ ಅವರು ಆಯ್ಕೆಯಾಗಿದ್ದಾರೆ.

ಶಿವರಾತ್ರಿಯಂದು ಉತ್ಸವ ಇಡೀ ರಾತ್ರಿ ನಡೆಯುತ್ತದೆ.

ಡಾ.ಶಿವಣ್ಣನವರು ಕಾಡುಗೊಲ್ಲರ ಬುಡಕಟ್ಟು ಸಾಂಸ್ಕೃತಿಕ ವೀರರ ಬಗ್ಗೆ ಅಧ್ಯಯನ ಮಾಡಿದ್ದಾರೆ. ಅದರಲ್ಲಿಯೂ ಎತ್ತಪ್ಪ ಮತ್ತು ಜುಂಜಪ್ಪನ ಕುರಿತು ಆಳವಾಗಿ ತಳಸ್ಪರ್ಶಿ ಅಧ್ಯಯನ ಮಾಡಿದ್ದಾರೆ. ಇದುವೇ ಅವರಿಗೆ ‘ಗಣೆ ಗೌರವ’ ನೀಡಲು ಪ್ರಮುಖ ಕಾರಣ ಎಂದು ಶಿವೋತ್ಸವ ಸಮಿತಿಯ ಡಾ.ಹೊನ್ನಗಾನಹಳ್ಳಿ ಕರಿಯಣ್ಣ ಹೇಳಿದ್ದಾರೆ.

ಒಂದು ನಾಡಿನ ಸಾಂಸ್ಕೃತಿಕ ಪರಂಪರೆಯ ಮುಖ್ಯಧಾರೆಯಿಂದಾಚೆಗೆ, ಅಂದರೆ ಪರಿಧಿಯಾಚೆಗೆ ತಳ್ಳಲ್ಪಟ್ಟ ಮೌಖಿಕ ರೂಪಗಳ ಬೆನ್ನು ಹತ್ತಿ ಅವುಗಳಿಗೆ ಸಾಂಸ್ಕೃತಿಕ ಅನನ್ಯತೆ ತಂದುಕೊಡುವುದು ಡಾ.ಶಿವಣ್ಣನವರ ಪ್ರಧಾನ ಆಸಕ್ತಿಯಾಗಿದೆ.

ಜಾನಪದವನ್ನು ಶುದ್ಧಾಂಗ ಪಠ್ಯವನ್ನಾಗಿ ಗ್ರಹಿಸದೆ,ಅದನ್ನು ನಾಗರಿಕತೆ ಇತಿಹಾಸ ಸಮಾಜ ಸಂಸ್ಕೃತಿ ಆರ್ಥಿಕ ಮತ್ತು ಅಧಿಕಾರ ಸಂಬಂಧಗಳ ಮೊತ್ತವಾಗಿ ಅಧ್ಯಯನ ಮಾಡುವವರ ಸಾಲಿನಲ್ಲಿ ಡಾ.ಶಿವಣ್ಣ ಮುಖ್ಯರಾಗಿದ್ದಾರೆ.
ಪ್ರಶಸ್ತಿಯನ್ನು ಶನಿವಾರ ಶಿವರಾತ್ರಿಯ ಆಹೋರಾತ್ರಿ ಕಾರ್ಯಕ್ರಮದಲ್ಲಿ ಪ್ರದಾನ‌ಮಾಡಲಾಗುವುದು ಎಂದು ಅವರು ತಿಳಿಸಿದ್ದಾರೆ.

ಈ ಗೌರವದ ಪ್ರಮುಖ ಅಕರ್ಷಣೆ ಗಣೆ. ಈ ವಾದ್ಯ ಮಾಡಿಕೊಡುವುದು ಕುಂಬಾರ ಹಳ್ಳಿ ಗೊಲ್ಲರಹಟ್ಟಿ ಕುಕ್ಕುಡದಮ್ಮನ ಪೂಜಾರಿ ಈರಣ್ಣ. ಬಿದಿರಮ್ಮತಾಯಿ ಕುಕ್ಕುಡದಮ್ಮನ ಮೂಲ ನೆಲೆ ಚನ್ನಗಿರಿ ತಾಲ್ಲೂಕಿನ ಅಮ್ಮನ ಗುಡ್ಡಕ್ಕೆ ಹೋಗಿ ಬಿದಿರು ತಂದು ಈ ಬಾರಿ ಗಣೆ ಮಾಡಿದ್ದೇನೆಂದು ಈರಣ್ಣ ತಿಳಿಸಿದ್ದಾರೆ.

ಏನಿದು ‘ಗಣೆ ಗೌರವ’?:

ಶಿವೋತ್ಸವದ ಆತ್ಮದ ಸಾಂಸ್ಕೃತಿಕ ಸದ್ದೇ ಗಣೆ ಗೌರವ. ನಾಡಿನಲ್ಲಿ ಎಲೆಮರೆಕಾಯಂತಿರುವ ಪ್ರಮುಖರೊಬ್ಬರಿಗೆ ಕಂಬಳಿ ಗದ್ದುಗೆ ಮೇಲೆ ಬುಡಕಟ್ಟು ಸಂಗೀತ ವಾದ್ಯ ಗಣೆ ನೀಡಿ ಗೌರವಿಸುವುದೇ ಗಣೆ ಗೌರವ ಎಂದು ಕಾರ್ಯಕ್ರಮ‌ ಸಂಘಟಕ, ರಂಗ ಕರ್ಮಿ ಪಿ.ಮಂಜುನಾಥ್ ತಿಳಿಸಿದ್ದಾರೆ.

ಈವರೆಗೆ ಗಣೆ ಗೌರವಕ್ಕೆ ರೈತ ನಾಯಕ ಕಡಿದಾಳು ಶಾಮಣ್ಣ, ದೇಶಿ ಪ್ರಸನ್ನ, ಪ್ರೊ. ಕಾಳೇಗೌಡ ನಾಗವರ, ವೈ ಎಸ್ ವಿ ದತ್ತ, ಡಾ. ಬಿ ಟಿ ಲಲಿತಾ ನಾಯ್ಕ್, ಕೋಟಿಗಾನಹಳ್ಳಿ ರಾಮಣ್ಣ ಅವರು ಪಾತ್ರರಾಗಿದ್ದಾರೆ.

ಕೊಚ್ಚಿ ಏರ್ ಪೋರ್ಟ್ ಗೆ ಮುಟ್ಟಿಸಲು ಅಲೀಡಾ ಬರಬೇಕಾಯ್ತು…

0

ಜಿ ಎನ್ ಮೋಹನ್

ನೀವು ನಂಬಲೇ ಬೇಕು..
ಫೋರ್ಟ್ ಕೊಚ್ಚಿಯಲ್ಲಿದ್ದ ನನ್ನನ್ನು ಬೆಳ್ಳಂಬೆಳಗ್ಗೆ ಏರ್ ಪೋರ್ಟ್ ಗೆ ದಾಟಿಸಲು ಚೆಗೆವಾರನ ಮಗಳು ಅಲೀಡಾನೇ ಬರಬೇಕಾಯ್ತು

ವಾರಕ್ಕೂ ಹೆಚ್ಚು ಕಾಲ ಕೇರಳದಲ್ಲಿರಬೇಕಾಯ್ತು. ಇದಕ್ಕೆ ಮುಖ್ಯ ಕಾರಣ ತ್ರಿಸ್ಸೂರಿನಲ್ಲಿ ಜರುಗಿದ ಅಂತಾರಾಷ್ಟ್ರೀಯ ನಾಟಕ ಉತ್ಸವ ಹಾಗೂ ಕೊಚ್ಚಿಯಲ್ಲಿ ಜರುಗುತ್ತಿದ್ದ ಬಿನಾಲೆ.

ತ್ರಿಸ್ಸೂರಿನ ಅಷ್ಟೂ ಕಾರ್ಯಕ್ರಮಗಳನ್ನು ಮುಗಿಸಿ ಕೊಚ್ಚಿಗೆ ಹೋಗಿ ಅಲ್ಲಿಂದಲೇ ವಿಮಾನ ನಿಲ್ದಾಣ ಸೇರಿಕೊಳ್ಳುವುದು ಎಂದು ನಿರ್ಧರಿಸಿದೆ. ಹೋಗಿ ನೋಡಿದರೆ ಫೋರ್ಟ್ ಕೊಚ್ಚಿಯಿಂದ ವಿಮಾನ ನಿಲ್ದಾಣ ಒಂದು ಗಂಟೆಗೂ ಹೆಚ್ಚು ದೂರದ ದಾರಿ. ಆದರೆ ವಿಮಾನ ಸಂಸ್ಥೆ ಕೈಕೊಟ್ಟಿತ್ತು. 9 ಕ್ಕೆ ಹೊರಡಬೇಕಾದ ವಿಮಾನ ಬೆಳಗ್ಗೆ 6 ಕ್ಕೆ ಹಿಂದೂಡಲ್ಪಟ್ಟಿದೆ.

ಏರ್ ಪೋರ್ಟ್ ಗೆ ಹೋಗಬೇಕೆಂದರೆ 4 ಗಂಟೆಗೆಲ್ಲಾ ನಾನು ಫೋರ್ಟ್ ಕೊಚ್ಚಿಯಿಂದ ಹೊರಬೀಳಬೇಕು. ಗೊತ್ತಿಲ್ಲದ ಜಾಗದಲ್ಲಿ ಕ್ಯಾಬ್ ಇದೆಯೋ, ಬೇರೆ ಏನಾದರೂ ವಾಹನ ಸಿಗುತ್ತದೋ ಏನೂ ಗೊತ್ತಾಗದೆ ಗಲಿಬಿಲಿ. ಇರಲಿ ಬಿಡು ಹೊರಡುವಾಗ ನೋಡಿಕೊಳ್ಳೋಣ ಎನ್ನುವಂತೆಯೂ ಇಲ್ಲ.

ಇಷ್ಟೆಲ್ಲಾ ಯೋಚನೆಯ ಮಧ್ಯೆಯೇ ನಾನು ಫೋರ್ಟ್ ಕೊಚ್ಚಿ ದರ್ಶನ ಮಾಡಿಕೊಂಡು ರಾತ್ರಿ 12 ದಾಟಿದ ಸಮಯದಲ್ಲಿ ಹೋಟೆಲ್ ಗೆ ಹಿಂದಿರುಗಲು ಒಂದು ಆಟೋಗೆ ಕೈ ಅಡ್ಡ ಹಾಕಿದೆ.

ಒಳಗೆ ಹೊಕ್ಕವನಿಗೆ ಚೆಗೆವಾರ ಕಾಣಬೇಕೇ.. ಅಷ್ಟೇ ಅಲ್ಲ ಚೆಗೆವಾರನ ಎಷ್ಟೊಂದು ‘ಕೋಟ್’ಗಳು ಆಟೋ ತುಂಬಾ. ಎಲ್ಲವನ್ನೂ ಕಣ್ಣು ಬಿಟ್ಟುಕೊಂಡು ನೋಡುತ್ತಿರುವಾಗಲೇ ಇನ್ನೂ ಒಂದು ಆಶ್ಚರ್ಯ ಕಂಡಿತು. ಆ ಆಟೋ ಡ್ರೈವರ್ ಅಲೀಡಾ ಜೊತೆಗೆ ತೆಗೆಸಿಕೊಂಡಿದ್ದ ಫೋಟೋ ಸಹಾ ಅಲ್ಲಿ ರಾರಾಜಿಸುತ್ತಿತ್ತು.

ನನಗೆ ಗೊತ್ತಿಲ್ಲದಂತೆ ಅಲೀಡಾ ಅನ್ನುವ ಉದ್ಘಾರ ಹೊರಬಿತ್ತು. ಅವನು ಆಟೋ ನಿಲ್ಲಿಸಿದವನೇ ನಿಮಗೆ ಅಲೀಡಾ ಗೊತ್ತಾ ಎಂದ.

ನಾನು ಮೊಬೈಲ್ ತೆಗೆದವನೇ ಅಲೀಡಾ ಬಾಗೇಪಲ್ಲಿಗೆ, ಬೆಂಗಳೂರಿಗೆ ಬಂದಿದ್ದಾಗ ಅವರ ಜೊತೆ ಕಾರ್ಯಕ್ರಮದಲ್ಲಿದ್ದ ಹತ್ತು ಹಲವಾರು ಫೋಟೋ ತೋರಿಸಿದೆ. ಅವನೋ ಫೋರ್ಟ್ ಕೊಚ್ಚಿಗೆ ಅಲೀಡಾ ಬಂದಾಗ ಅವರ ಜೊತೆ ತೆಗೆಸಿಕೊಂಡ ಫೋಟೋಗಳ ರಾಶಿಯನ್ನು ಅವನ ಮೊಬೈಲ್ ನಲ್ಲಿ ತೋರಿಸಿದ.

ಅವನ ಮಲಯಾಳಂ ನನ್ನ ಇಂಗ್ಲಿಷ್ ಅರ್ಥ ಮಾಡಿಕೊಳ್ಳದೆ ಢಿಕ್ಕಿ ಹೊಡೆದುಕೊಳ್ಳುತ್ತಿದ್ದರೂ ಸಹಾ ನಾವು ಅಲೀಡಾ ಹಾಗೂ ಚೆಗೆವಾರ ಹೆಸರಲ್ಲಿ ಒಂದಾಗಿಬಿಟ್ಟಿದ್ದೆವು.

ಆಗ ನಾನು ನನ್ನ ಸಮಸ್ಯೆ ಮುಂದಿಟ್ಟೆ. ಬೆಳ್ಳಂ ಬೆಳಗ್ಗೆ ಏರ್ ಪೋರ್ಟ್ ಸೇರಿಕೊಳ್ಳೋದು ಹೇಗಪ್ಪಾ ಅಂತ. ಅವನೋ ಅಲೀಡಾರನ್ನೇ ಏರ್ ಪೋರ್ಟ್ ಗೆ ಕಳಿಸುತ್ತಿದ್ದೀನೇನೋ ಅನ್ನುವಷ್ಟು ಕಾಳಜಿ ತೆಗೆದುಕೊಂಡು ಅಲ್ಲಿಗೆ ಇಲ್ಲಿಗೆ ಫೋನ್ ಮಾಡಿ ಡೋಂಟ್ ವರಿ ಎನ್ನುವಂತೆ ಮುಖ ಮಾಡಿದ.

ಆ ಗಡಿಬಿಡಿಯಲ್ಲಿ ಅವನ ಹಾಗೂ ಅವನ ಆಟೋ ಜೊತೆ ಫೋಟೋ ತೆಗೆಸಿಕೊಳ್ಳುವುದನ್ನೇ ಮರೆತೆ. ಈಗ ಇನ್ಸ್ಟಾ ತುಂಬಾ ಹುಡುಕಿ ಅವನು ಇರುವ ಕೊಚ್ಚಿ ಕ್ಲಬ್ ಫೋಟೋ ಸೇರಿಸಿದ್ದೇನೆ.

ಬೆಳಗ್ಗೆ 4 ಗಂಟೆಗೆ ನಾನು ಲಗೇಜ್ ಸಮೇತ ಕೆಳಗಿಳಿದಾಗ ಕ್ಯಾಬ್ ಕಾಯುತ್ತಿತ್ತು. ಸರಿಯಾದ ಸಮಯಕ್ಕೆ ಏರ್ ಪೋರ್ಟ್ ತಲುಪಿಕೊಂಡೆ.

ಅಂತೂ ಇಂತೂ ಅಲೀಡಾ ನನ್ನನ್ನು ದಡ ಸೇರಿಸಿಬಿಟ್ಟರು..

ಕೋಳಾಲ: ಪಿಡಿಒ ಅಮಾನತು; ಕಾರಣವೇನು?

ಕೊರಟಗೆರೆ ತಾಲ್ಲೂಕಿನ ಕೋಳಾಲ ಗ್ರಾಮ ಪಂಚಾಯತಿ ಪಿಡಿಒ ಎಚ್.ವಿ.ಕೋಮಲ ಅವರನ್ನು ಸೇವೆಯಿಂದ ಅಮಾನತುಗೊಳಿಸಿ ಜಿ.ಪಂ.ಸಿಇಒ ಗುರುವಾರ ಆದೇಶ ಹೊರಡಿಸಿದ್ದಾರೆ.

ಬಿದರೆಗುಟ್ಟೆ ಗ್ರಾಮದ ಅಂಗನವಾಡಿ ಕಟ್ಟಡದ 5 ಲಕ್ಷ ರೂಪಾಯಿಯನ್ನು ಬೇರೆ ಉದ್ದೇಶಕ್ಕೆ ಬಳಕೆ ಮಾಡಿಕೊಂಡ ಆರೋಪ ಹಾಗೂ ಹದಿನಾಲ್ಕನೇ ಹಣಕಾಸು ಯೋಜನೆಯ ಹಣ ದುರುಪಯೋಗ ಆರೋಪ ಹಿನ್ನೆಲೆಯಲ್ಲಿ ಇಲಾಖಾ ವಿಚಾರಣೆಗೆ ಕಾದಿರಿಸಿ ಅಮಾನತುಗೊಳಿಸಲಾಗಿದೆ.

ಹೋರಾಟದ ಕಥನ

ಪಿಡಿಒ ಆಡಳಿತದ ವಿರುದ್ದ ವಕೀಲ ಕೋಳಾಲ ಚಿನ್ಮಯ ಅವರು ದೂರು ನೀಡಿದ್ದರು.

ಹಣ ದುರುಪಯೋಗದ ಕುರಿತು ಅವರು ಓಬಡ್ಸ್ ಮನ್ ನ್ಯಾಯಾಲಯದಲ್ಲೂ ದೂರು ದಾಖಲಿಸಿದ್ದಾರೆ.

ಇಲ್ಲಿ ಹಗಲು ದರೋಡೆಯನ್ನೇ ನಡೆಸಲಾಗಿದೆ. ನನ್ನ ಹೋರಾಟವನ್ನು ಹತ್ತಿಕ್ಕಲು ಹಲವು ಪ್ರಯತ್ನಗಳನ್ನು ನಡೆಸಿದರು. ಆದರೂ ನಾನು ಧೃತಿಗೆಡದೆ ಹೋರಾಟ ಮುಂದುವರೆಸಿದೆ. ಗ್ರಾ.ಪಂ.ಗಳಲ್ಲಿ ನಡೆಯುತ್ತಿರುವ ಬಗ್ಗೆ ಸ್ಥಳೀಯ ಯುವಕರು ಹೋರಾಟ ಆರಂಭಿಸಬೇಕು ಎಂದು ವಕೀಲ ಕೋಳಾಲ ಚಿನ್ಮಯ ಹೇಳಿದ್ದಾರೆ.

ತುಮಕೂರು ಗ್ರಾಮಾಂತರ: ಜೆಡಿಎಸ್ ನಿಂದ ಬಿಜೆಪಿಗೆ ಸಾಮೂಹಿಕ ವಲಸೆ

0

ತುಮಕೂರು: ತುಮಕೂರು ಗ್ರಾಮಾಂತರ ಕ್ಷೇತ್ರದ ಜೆಡಿಎಸ್ ನ ಘಟಾನುಘಟಿ ಮುಖಂಡರು ಸಾಮೂಹಿಕವಾಗಿ ಬುಧವಾರ ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಸಮ್ಮುಖದಲ್ಲಿ ಬಿಜೆಪಿಗೆ ಸೇರಿದರು. ಮಾಜಿ ಶಾಸಕ ಬಿ.ಸುರೇಶಗೌಡ ಇದ್ದರು.

ಇಷ್ಟು ದೊಡ್ಡ ಪ್ರಮಾಣದ ನಾಯಕರ ವಲಸೆ ತುಮಕೂರು ರಾಜಕಾರಣದಲ್ಲಿ ಇದೇ ಮೊದಲು. ಜೆಡಿಎಸ್ ಬಹುತೇಕ ತನ್ನ ಎಲ್ಲ ಮುಖಂಡರನ್ನು ಕಳೆದುಕೊಂಡಂತಾಗಿದೆ.

ಜೆಡಿಎಸ್ ನ ತುಮಕೂರು ಎಪಿಎಂಸಿ ಮಾಜಿ ಅಧ್ಯಕ್ಷ, ಕಳೆದ ಜಿ.ಪಂ. ಚುನಾವಣೆಯ ಪರಾರ್ಜಿತ ಅಭ್ಯರ್ಥಿ ವೈ.ಟಿ.ನಾಗರಾಜ್, ಬೆಳಗುಂಬ ಜಿ.ಪಂ.ನ ಪರಾರ್ಜಿತ ಅಭ್ಯರ್ಥಿ ಕೆಂಪರಾಜು, ಹೆಗ್ಗರೆ ಜಿ.ಪಂ. ಪರಾಜಿತ ಅಭ್ಯರ್ಥಿ ಜಿ.ವೆಂಕಟೇಶ್, ಹೊನ್ನುಡಿಕೆ ಜಿ.ಪಂ. ಪರಾಜಿತ ಅಭ್ಯರ್ಥಿ ಹನುಮಂತರಾಯಪ್ಪ, ಊರ್ಡಿಗೆರೆ ಜಿ.ಪಂ. ಪರಾಜಿತ ಅಭ್ಯರ್ಥಿ ವೆಂಕಟೇಶಬಾಬು, ತುಮಕೂರು ಗ್ರಾಮಾಂತರ ಜಿ.ಪಂ. ಮಾಜಿ ಸದಸ್ಯ ರಾಮಾಂಜಿನಪ್ಪ, ತುಮಕೂರು ಎಪಿಎಂಸಿ ಮಾಜಿ ಅಧ್ಯಕ್ಷೆ ತಾರಾದೇವಿ, ತುಮಕೂರು ಗ್ರಾಮಾಂತರದ ಕಾರ್ಯಾಧ್ಯಕ್ಷ ಜಯಂತ್ ಗೌಡ, ತುಮಕೂರು ಪಾಲಿಕೆ ಮಾಜಿ ಸದಸ್ಯ ಜನಾರ್ದನ್, ಪಿಎಲ್ ಡಿ ಬ್ಯಾಂಕ್ ಅಧ್ಯಕ್ಷ ಯೋಗೀಶ್ ಪ್ರಮುಖರು.

ಇಷ್ಟೇ ಅಲ್ಲದೇ ಅರೆಯೂರು ತಾ.ಪಂ. ಸದಸ್ಯ ಮುನೇಶ್, ಕೆಸರುಮಡು ಗ್ರಾ.ಪಂ. ಮಾಜಿ ಅಧ್ಯಕ್ಷ ಮಾರೇಗೌಡ, ಪಿಎಲ್ ಡಿ ಬ್ಯಾಂಕ್ ನಿರ್ದೇಶಕ ಮುನಿರಾಜು, ಹೆಗ್ಗರೆ ಗ್ರಾ.ಪಂ‌ ಸದಸ್ಯ ಶಿವಣ್ಣ, ಮಾಜಿ ಸದಸ್ಯ ನಾಗರಾಜು, ಹೆಗ್ಗರೆಯ ಪ್ರಮುಖ ಮುಖಂಡರಾದ ರೇಣುಕಪ್ರಸಾದ್, ಸಿರಿವಾರದ ನಾರಾಯಣಪ್ಪ, ಹರಳೂರು ಗ್ರಾ.ಪಂ. ಸದಸ್ಯ ಕೃಷ್ಣಪ್ಪ, ವಡೆಯರಪುರದ ಸ್ವಾಮಿ, ಅರೆಯೂರು ಗ್ರಾ.ಪಂ. ಸದಸ್ಯ ಶ್ರೀನಿವಾಸ್, ಹೆಗ್ಗರೆಯ ಅಲ್ಪ ಸಂಖ್ಯಾತರ ಘಟಕದ ಮುಖಂಡ ಮುಬಾರಕ್ ಪಾಷಾ ಸೇರ್ಪಡೆಗೊಂಡ ಪ್ರಮುಖರಾಗಿದ್ದಾರೆ.

ಜಿಲ್ಲಾ ಪಂಚಾಯತ್ ನ ಎಲ್ಲ ಕ್ಷೇತ್ರದಲ್ಲೂ ಬಿಜೆಪಿ ಸದಸ್ಯರೇ ಇದ್ದರು.ಕಳೆದ ಜಿ.ಪಂ.ನಲ್ಲಿ ಜೆಡಿಎಸ್ ನಿಂದ ಸೋತಿದ್ದ ಎಲ್ಲರೂ ಈಗ ಬಿಜೆಪಿ ಸೇರುವ ಮೂಲಕ ಗ್ರಾಮಾಂತರದಲ್ಲಿ ಜೆಡಿಎಸ್ ನ ಮನೆಯೇ ಖಾಲಿಯಾದಂತೆ ಆಗಿದೆ.

ಸಿಎಂ ಜತೆ ಸಭೆ: ಮುಖಂಡರು ಜೆಡಿಎಸ್ ತೊರೆದು ಬಿಜೆಪಿಗೆ ಸೇರುವ ಮುನ್ನ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಔಪಚಾರಿಕವಾಗಿ ಮಾತನಾಡಿದರು.
ಜೆಡಿಎಸ್ ನ ಬಹುತೇಕ ಉನ್ನತ, ಹಿರಿಯ ಮುಖಂಡರೇ ಬಿಜೆಪಿ ಸೇರುತ್ತಿರುವುದಕ್ಕೆ ಸಂಸತ ವ್ಯಕ್ತಪಡಿಸಿದರು.

ನಿಮ್ಮೆಲ್ಲರ ಸೇರ್ಪಡೆಯಿಂದ ಗ್ರಾಮಾಂತರದಲ್ಲಿ ಬಿಜೆಪಿಯ ದೊಡ್ಡ ಅಲೆಯೇ ಹೇಳಲಿದೆ. ಸುರೇಶಗೌಡರು ಅತಿ ಹೆಚ್ಚು ಅಂತರದಿಂದ ಗೆಲುವುದು ಖಚಿತ ಎಂದರು.

ನಾನು ಮಾಡಿರುವುದಕ್ಕಿಂತಲೂ ಹೆಚ್ಚು ಕೆಲಸ ಸುರೇಶಗೌಡರು ಮಾಡಿದ್ದಾರೆ. ಹೆಬ್ಬೂರು- ಗೂಳೂರು ಏತ ನೀರಾವರಿ ಯೋಜನೆಯನ್ನು ವರ್ಷದಲ್ಲೇ ಮುಗಿಸಿದರು. ಈ ಸಲ ಕ್ಷೇತ್ರದ ಅಭಿವೃದ್ಧಿಗೆ ವಿಶೇಷ ಒತ್ತು ನೀಡಲಾಗುವುದು ಎಂದು ಮುಖ್ಯಮಂತ್ರಿ ಭರವಸೆ ನೀಡಿದರು.
ನಂತರ ಎಲ್ಲರನ್ನು ಪಕ್ಷಕ್ಕೆ ಬರಮಾಡಿಕೊಂಡರು.

ಬಿಜೆಪಿ ಗ್ರಾಮಾಂತರ ಘಟಕದ ಕಾರ್ಯಾಧ್ಯಕ್ಷ ಶಂಕರಣ್ಣ, ಹಿರಿಯ ಮುಖಂಡರಾದ ವೈ.ಎಚ್.ಹುಚ್ಚಯ್ಯ, ಜಿ.ಪಂ.ಮಾಜಿ ಸದಸ್ಯರಾದ ಸಿದ್ದೇಗೌಡ, ನರಸಿಂಹಮೂರ್ತಿ, ಗೂಳೂರು ಶಿವಕುಮಾರ್, ನರಸಿಂಹಮೂರ್ತಿ ಸಹಿತ ಹಲವು ಬಿಜೆಪಿ ಮುಖಂಡರು ಇದ್ದರು.