Saturday, July 27, 2024
Google search engine
HomeUncategorizedತುಮಕೂರು ಗ್ರಾಮಾಂತರ: ಜೆಡಿಎಸ್ ನಿಂದ ಬಿಜೆಪಿಗೆ ಸಾಮೂಹಿಕ ವಲಸೆ

ತುಮಕೂರು ಗ್ರಾಮಾಂತರ: ಜೆಡಿಎಸ್ ನಿಂದ ಬಿಜೆಪಿಗೆ ಸಾಮೂಹಿಕ ವಲಸೆ

ತುಮಕೂರು: ತುಮಕೂರು ಗ್ರಾಮಾಂತರ ಕ್ಷೇತ್ರದ ಜೆಡಿಎಸ್ ನ ಘಟಾನುಘಟಿ ಮುಖಂಡರು ಸಾಮೂಹಿಕವಾಗಿ ಬುಧವಾರ ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಸಮ್ಮುಖದಲ್ಲಿ ಬಿಜೆಪಿಗೆ ಸೇರಿದರು. ಮಾಜಿ ಶಾಸಕ ಬಿ.ಸುರೇಶಗೌಡ ಇದ್ದರು.

ಇಷ್ಟು ದೊಡ್ಡ ಪ್ರಮಾಣದ ನಾಯಕರ ವಲಸೆ ತುಮಕೂರು ರಾಜಕಾರಣದಲ್ಲಿ ಇದೇ ಮೊದಲು. ಜೆಡಿಎಸ್ ಬಹುತೇಕ ತನ್ನ ಎಲ್ಲ ಮುಖಂಡರನ್ನು ಕಳೆದುಕೊಂಡಂತಾಗಿದೆ.

ಜೆಡಿಎಸ್ ನ ತುಮಕೂರು ಎಪಿಎಂಸಿ ಮಾಜಿ ಅಧ್ಯಕ್ಷ, ಕಳೆದ ಜಿ.ಪಂ. ಚುನಾವಣೆಯ ಪರಾರ್ಜಿತ ಅಭ್ಯರ್ಥಿ ವೈ.ಟಿ.ನಾಗರಾಜ್, ಬೆಳಗುಂಬ ಜಿ.ಪಂ.ನ ಪರಾರ್ಜಿತ ಅಭ್ಯರ್ಥಿ ಕೆಂಪರಾಜು, ಹೆಗ್ಗರೆ ಜಿ.ಪಂ. ಪರಾಜಿತ ಅಭ್ಯರ್ಥಿ ಜಿ.ವೆಂಕಟೇಶ್, ಹೊನ್ನುಡಿಕೆ ಜಿ.ಪಂ. ಪರಾಜಿತ ಅಭ್ಯರ್ಥಿ ಹನುಮಂತರಾಯಪ್ಪ, ಊರ್ಡಿಗೆರೆ ಜಿ.ಪಂ. ಪರಾಜಿತ ಅಭ್ಯರ್ಥಿ ವೆಂಕಟೇಶಬಾಬು, ತುಮಕೂರು ಗ್ರಾಮಾಂತರ ಜಿ.ಪಂ. ಮಾಜಿ ಸದಸ್ಯ ರಾಮಾಂಜಿನಪ್ಪ, ತುಮಕೂರು ಎಪಿಎಂಸಿ ಮಾಜಿ ಅಧ್ಯಕ್ಷೆ ತಾರಾದೇವಿ, ತುಮಕೂರು ಗ್ರಾಮಾಂತರದ ಕಾರ್ಯಾಧ್ಯಕ್ಷ ಜಯಂತ್ ಗೌಡ, ತುಮಕೂರು ಪಾಲಿಕೆ ಮಾಜಿ ಸದಸ್ಯ ಜನಾರ್ದನ್, ಪಿಎಲ್ ಡಿ ಬ್ಯಾಂಕ್ ಅಧ್ಯಕ್ಷ ಯೋಗೀಶ್ ಪ್ರಮುಖರು.

ಇಷ್ಟೇ ಅಲ್ಲದೇ ಅರೆಯೂರು ತಾ.ಪಂ. ಸದಸ್ಯ ಮುನೇಶ್, ಕೆಸರುಮಡು ಗ್ರಾ.ಪಂ. ಮಾಜಿ ಅಧ್ಯಕ್ಷ ಮಾರೇಗೌಡ, ಪಿಎಲ್ ಡಿ ಬ್ಯಾಂಕ್ ನಿರ್ದೇಶಕ ಮುನಿರಾಜು, ಹೆಗ್ಗರೆ ಗ್ರಾ.ಪಂ‌ ಸದಸ್ಯ ಶಿವಣ್ಣ, ಮಾಜಿ ಸದಸ್ಯ ನಾಗರಾಜು, ಹೆಗ್ಗರೆಯ ಪ್ರಮುಖ ಮುಖಂಡರಾದ ರೇಣುಕಪ್ರಸಾದ್, ಸಿರಿವಾರದ ನಾರಾಯಣಪ್ಪ, ಹರಳೂರು ಗ್ರಾ.ಪಂ. ಸದಸ್ಯ ಕೃಷ್ಣಪ್ಪ, ವಡೆಯರಪುರದ ಸ್ವಾಮಿ, ಅರೆಯೂರು ಗ್ರಾ.ಪಂ. ಸದಸ್ಯ ಶ್ರೀನಿವಾಸ್, ಹೆಗ್ಗರೆಯ ಅಲ್ಪ ಸಂಖ್ಯಾತರ ಘಟಕದ ಮುಖಂಡ ಮುಬಾರಕ್ ಪಾಷಾ ಸೇರ್ಪಡೆಗೊಂಡ ಪ್ರಮುಖರಾಗಿದ್ದಾರೆ.

ಜಿಲ್ಲಾ ಪಂಚಾಯತ್ ನ ಎಲ್ಲ ಕ್ಷೇತ್ರದಲ್ಲೂ ಬಿಜೆಪಿ ಸದಸ್ಯರೇ ಇದ್ದರು.ಕಳೆದ ಜಿ.ಪಂ.ನಲ್ಲಿ ಜೆಡಿಎಸ್ ನಿಂದ ಸೋತಿದ್ದ ಎಲ್ಲರೂ ಈಗ ಬಿಜೆಪಿ ಸೇರುವ ಮೂಲಕ ಗ್ರಾಮಾಂತರದಲ್ಲಿ ಜೆಡಿಎಸ್ ನ ಮನೆಯೇ ಖಾಲಿಯಾದಂತೆ ಆಗಿದೆ.

ಸಿಎಂ ಜತೆ ಸಭೆ: ಮುಖಂಡರು ಜೆಡಿಎಸ್ ತೊರೆದು ಬಿಜೆಪಿಗೆ ಸೇರುವ ಮುನ್ನ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಔಪಚಾರಿಕವಾಗಿ ಮಾತನಾಡಿದರು.
ಜೆಡಿಎಸ್ ನ ಬಹುತೇಕ ಉನ್ನತ, ಹಿರಿಯ ಮುಖಂಡರೇ ಬಿಜೆಪಿ ಸೇರುತ್ತಿರುವುದಕ್ಕೆ ಸಂಸತ ವ್ಯಕ್ತಪಡಿಸಿದರು.

ನಿಮ್ಮೆಲ್ಲರ ಸೇರ್ಪಡೆಯಿಂದ ಗ್ರಾಮಾಂತರದಲ್ಲಿ ಬಿಜೆಪಿಯ ದೊಡ್ಡ ಅಲೆಯೇ ಹೇಳಲಿದೆ. ಸುರೇಶಗೌಡರು ಅತಿ ಹೆಚ್ಚು ಅಂತರದಿಂದ ಗೆಲುವುದು ಖಚಿತ ಎಂದರು.

ನಾನು ಮಾಡಿರುವುದಕ್ಕಿಂತಲೂ ಹೆಚ್ಚು ಕೆಲಸ ಸುರೇಶಗೌಡರು ಮಾಡಿದ್ದಾರೆ. ಹೆಬ್ಬೂರು- ಗೂಳೂರು ಏತ ನೀರಾವರಿ ಯೋಜನೆಯನ್ನು ವರ್ಷದಲ್ಲೇ ಮುಗಿಸಿದರು. ಈ ಸಲ ಕ್ಷೇತ್ರದ ಅಭಿವೃದ್ಧಿಗೆ ವಿಶೇಷ ಒತ್ತು ನೀಡಲಾಗುವುದು ಎಂದು ಮುಖ್ಯಮಂತ್ರಿ ಭರವಸೆ ನೀಡಿದರು.
ನಂತರ ಎಲ್ಲರನ್ನು ಪಕ್ಷಕ್ಕೆ ಬರಮಾಡಿಕೊಂಡರು.

ಬಿಜೆಪಿ ಗ್ರಾಮಾಂತರ ಘಟಕದ ಕಾರ್ಯಾಧ್ಯಕ್ಷ ಶಂಕರಣ್ಣ, ಹಿರಿಯ ಮುಖಂಡರಾದ ವೈ.ಎಚ್.ಹುಚ್ಚಯ್ಯ, ಜಿ.ಪಂ.ಮಾಜಿ ಸದಸ್ಯರಾದ ಸಿದ್ದೇಗೌಡ, ನರಸಿಂಹಮೂರ್ತಿ, ಗೂಳೂರು ಶಿವಕುಮಾರ್, ನರಸಿಂಹಮೂರ್ತಿ ಸಹಿತ ಹಲವು ಬಿಜೆಪಿ ಮುಖಂಡರು ಇದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?