Saturday, March 14, 2026
Google search engine
Home Blog Page 64

ಗುಜರಾತ್ ಗೆಲುವು: ಸುರೇಶಗೌಡ ಹೇಳಿದ್ದೇನು?

0

ತುಮಕೂರು: ಗುಜರಾತಿನಲ್ಲಿ ಬಿಜೆಪಿಯ ಅಭೂತಪೂರ್ವ ಗೆಲುವು ಪ್ರಧಾನಿ ನರೇಂದ್ರ ಮೋದಿ ಅವರ ಅಭಿವೃದ್ಧಿ ಮಂತ್ರಕ್ಕೆ ಸಿಕ್ಕ ಗೆಲುವು ಆಗಿದೆ ಎಂದು ಬಿಜೆಪಿ ಹಿರಿಯ ಮುಖಂಡ, ಮಾಜಿ ಶಾಸಕ ಬಿ.ಸುರೇಶಗೌಡ ಹೇಳಿದ್ದಾರೆ.

ಅಭಿವೃದ್ಧಿಗಷ್ಟೇ ಜನ ಮನ್ನಣೆ ಹಾಕುತ್ತಾರೆ ಎಂಬುದನ್ನು ಎತ್ತಿ ತೋರಿಸಿದ್ದಾರೆ. ಮೋದೀಜಿ ಅವರು ಹೇಳಿರುವಂತೆ ಬಿಜೆಪಿಯ ಪ್ರತಿ ಕಾರ್ಯಕರ್ತನು ಅಭಿವೃದ್ಧಿಗಾಗಿ ದುಡಿಯುತ್ತಾನೆ. ಗುಜರಾತ್ ಫಲಿತಾಂಶ ಕರ್ನಾಟಕದ ಮೇಲೂ ಪರಿಣಾಮ ಬೀರಲಿದೆ. ಡಬ್ಬಲ್ ಎಂಜಿನ್ ಸರ್ಕಾರವೇ ಬರಲಿದೆ ಎಂದು ಭವಿಷ್ಯ ನುಡಿದಿದ್ದಾರೆ.

ಸುರೇಶಗೌಡರ ಕೊಲೆಗೆ ಸುಫಾರಿ: ತನಿಖೆಗೆ ಮುಂದಾದ ಪೊಲೀಸರು

0

ತುಮಕೂರು: ಮಾಜಿ ಶಾಸಕ ಸುರೇಶ್ ಗೌಡ ಕೊಲೆಗೆ ಸುಫಾರಿ ಕೊಟ್ಟಿರುವ ಪ್ರಕರಣದ ಕುರಿತು ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಈ ಪ್ರಕರಣವನ್ನು ಪೊಲೀಸರು ಗಂಭೀರವಾಗಿ ತೆಗೆದುಕೊಂಡು ತನಿಖೆ ನಡೆಸುತ್ತಿದ್ದಾರೆ ಎಂದು ಹೇಳಿದ್ದಾರೆ.

ಸುರೇಶ್ ಗೌಡರ ಕೊಲೆಗೆ ಹಾಲಿ ಶಾಸಕ ಗೌರಿಶಂಕರ್ ಸುಫಾರಿ ನೀಡಿದ್ದಾರೆ ಎಂಬ ಆರೋಪ ರಾಜ್ಯದೆಲ್ಲಡೆ ಅಲ್ಲೋಲ ಕಲ್ಲೋಲ ಉಂಟಾಗಿತ್ತು. ಸರ್ಕಾರವೂ ಸಹ ಗಂಭೀರವಾಗಿ ತೆಗೆದುಕೊಂಡಿದೆ. ಎಫ್ ಐ ಆರ್ ನಲ್ಲಿ ಶಾಸಕ ಗೌರಿಶಂಕರ್ ಎರಡನೇ ಆರೋಪಿಯಾಗಿದ್ದಾರೆ.

ಸುದ್ದಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ಈ ಬಗ್ಗೆ ಇದೀಗ ತನಿಖೆ ನಡೆಯುತ್ತಿದ್ದು, ಇದಕ್ಕೆ ಯಾರು ಕಾರಣರಾಗಿದ್ದಾರೆ ಎಂದು ತಿಳಿದ ಮೇಲೆ ಕ್ರಮ ಕೈಗೊಳ್ಳುತ್ತಾರೆ ಎಂದು ತಿಳಿಸಿದರು.

ಇದೊಂದು ಗಂಭೀರ ಪ್ರಕರಣ.‌ ಈ ಬಗ್ಗೆ ನಾನು ಈಗಾಗಲೇ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳೊಂದಿಗೆ ಮಾತನಾಡಿದ್ದೇನೆ. ಎಲ್ಲ ಆಯಾಮದಲ್ಲೂ ತನಿಖೆ ನಡೆಸಲಾಗುವುದು ಎಂದು ಹೇಳಿದರು.

ಜೆಡಿಎಸ್, ಕಾಂಗ್ರೆಸ್ ನಾಟಕ: ಸುರೇಶಗೌಡ ವ್ಯಂಗ್ಯ

ತುಮಕೂರು: ಹೆಬ್ಬೂರು- ಗೂಳೂರು ಭಾಗದ ಜನರ ಕಷ್ಟಗಳನ್ನು ಜೆಡಿಎಸ್, ಕಾಂಗ್ರೆಸ್ ರಾಜಕೀಯ ನೆಲೆಗೆ ಬಳಸಿಕೊಂಡವೆ ಹೊರತು ಅಧಿಕಾರದಲ್ಲಿದ್ದಾಗ ಜನರಿಗೆ ನೀರು ಕೊಡಲಿಲ್ಲ. ನಾನು ಶಾಸಕನಾದ ಮೇಲೆ ಬಿಜೆಪಿ ನೀರು ನೀಡಿತು. ಈ ಯೋಜನೆಗೆ ಅನುಮತಿ ನೀಡಿದ್ದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ. ಆಗ ಅವರು ನೀರಾವರಿ ಸಚಿವರಾಗಿದ್ದರು. ಅವರಿಗೆ ನಾನು, ಕ್ಷೇತ್ರದ ಜನರು ಋಣಿಯಾಗಿದ್ದೇವೆ ಎಂದು ಮಾಜಿ ಶಾಸಕ ಬಿ.ಸುರೇಶಗೌಡರು ಹೇಳಿದರು.


ಬುಧವಾರ ಶಕ್ತಿ ಸೌಧ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಮಾಜಿ ಶಾಸಕನಾಗಿದ್ದರೂ ಸಹ ಕ್ಷೇತ್ರದ ದೇವಸ್ಥಾನಗಳಿಗೆ ಅನುದಾನ ತಂದು ಅಭಿವೃದ್ಧಿ ಪಡಿಸಿರುವೆ ಎಂದು.

ವೃಷಭಾವತಿ ನದಿ ನೀರು ಯೊಜನೆಗೆ ತಾಲ್ಲೂಕಿನ ಕೆರೆಗಳನ್ನು ಸೇರಿಸಿದ್ದೇನೆ. ಕಾಲುವೆ ಮೂಲಕ ಹೇಮಾವತಿ ನದಿ ನೀರಿನ ಯೋಜನೆಗೆ ನನ್ನ ಕನಸಾಗಿದೆ ಎಂದರು.


ಜೆಡಿಎಸ್ ಅಧಿಕಾರಕ್ಕೆ ಬಂದರೂ ಯೋಜನೆ ಜಾರಿಗೊಳಿಸಲಿಲ್ಲ. ಯೋಜನೆ ನಾನು ಜಾರಿಗೊಳಿಸಿದೆ. ಜೆಡಿಎಸ್ ಶಾಸಕ ಕೆರೆಗಳಿಗೆ ನೀರು ತುಂಬದಂತೆ ತಡೆದರು ಎಂದು ಆರೋಪಿಸಿದರು.


20 ಸಾವಿರ ರೈತರಿಗೆ ಉಚಿತ ಟಿ.ಸಿ. ಕೊಡಿಸಿದ್ದೇನೆ. ರಸ್ತೆ, ಶಾಲೆಗಳ ಅಭಿವೃದ್ಧಿ ಗಾಗಿ ಕ್ಷೇತ್ರ ನಾಡಿನ ಗಮನ ಸೆಳೆದಿದೆ. ಮುಂದಿನ ಸಲ ನಾನು ಗೆದ್ದರೆ ಕ್ಷೇತ್ರವನ್ನು ದೇಶದ ನಂ 1 ಅಭಿವೃದ್ಧಿ ಕ್ಷೇತ್ರವಾಗಿ ಮಾರ್ಪಡಿಸುವೆ ಎಂದರು.


ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬೊಮ್ಮಾಯಿ,
ಸಿದ್ದಗಂಗಾ ಮಠಾದೀಶರಾದ ಸಿದ್ದಲಿಂಗ ಸ್ವಾಮೀಜಿ, ಸಚಿವರಾದ ಗೋವಿಂದ ಕಾರಜೋಳ, ಗೋಪಾಲಯ್ಯ, ಶಾಸಕ ಜ್ಯೋತಿ ಗಣೇಶ ಇತರರು ಇದ್ದರು.

ಕವಿತೆ ಓದಿ: ಸಂಜೆ

0

ಸಂಜೆ ಒಬ್ಬೊಬ್ಬರಿಗೆ ಒಂದು ರೀತಿ.ಕೃತಜ್ಞತೆಯ ಭಾವ.
ದಿನದ ದುಗುಡ ಕಳೆದು.. ವಿರಮಿಸುವ ಕಾಲ.
ಹೆಂಡತಿಗೆ ಎಲ್ಲಿ ಬಿಡುವು..ಅವಳ ಸಂಜೆ ಸಂಸಾರದ ನೊಗ ನೂಕಲು ಮೀಸಲು. ಆದರೂ ಅವಳ ತ್ಯಾಗ
ಆಸ್ವಾದಿಸುವ ಪತಿರಾಯ.ಅವಳ ನಸು ನಗುವಿನ ಸಂಜೆ ಇರದಿದ್ದರೆ ಈ ಭೂಮಿ ಬರಡು.
ರಜನಿರವರ ಲೇಖನಿಯಿಂದ ಸಂಜೆಯನು ಓದಿ.


ಸಂಜೆ


ಇಳಿ ಸಂಜೆಯಲಿ
ನಿನ್ನ ಮೃದುವಾದ ಬೆಚ್ಚನೆ
ಅಂಗೈ..ನನಗೆ
ಭರವಸೆಯನೀಯುತ್ತದೆ.

ಇಳಿ ಸಂಜೆಯಲಿ
ನನಗಾಗಿ ಕಾಯುವ
ಪರಿ…ಬದುಕಲು
ಹೂಸ ಉತ್ಸಾಹ ವನೀಯುತ್ತದೆ.

ನೀನೂ ದುಡಿದು ದಣಿದು
ಬಂದಿದ್ದರೂ..
ನನಗಾಗಿ ನೀನು ಮಾಡುವ
ಅಡುಗೆ… ಯಾವ ಜನ್ಮದ ನಂಟು..

ಇಳಿ ಸಂಜೆಯಲಿ
ನಿನ್ನ ಚದುರಿದ ಮುಂಗುರುಳು
ಬಸವಳಿದ ಮುಖ
ಹೂಸ ರೂಪವನ್ನೇ ಇತ್ತಿವೆ.

ಇಳಿ ಸಂಜೆಯಲಿ
ಬಾಡಿದ ನಿನ್ನ ಮುಡಿ
ಮಲ್ಲಿಗೆಯ ಘಮ
ಮನಸ್ಸಿಗೆ ಅಮಲು.

ನೀ ಬೆಳಗ್ಗಿನ
ತಿಂಡಿಗೆ ನಡೆಸುವ
ತಯಾರಿ..ನನ್ನ ನಾಳೆಗೆ
ಖಾತ್ರಿ.

ಇಳಿಸಂಜೆಯಲಿ
ನಿನ್ನ ಕೆನ್ನೆ
ಕೆಂಪು ಸೂರ್ಯನಿಗೆ
ಸಡ್ಡು…

ಇಳಿಸಂಜೆಯಲಿ
ನಿನ್ನ ನಸುನಗು
ನನ್ನೆಲ್ಲಾ… ದಿನದ
ದುಡಿಮೆಯ
ಸಿಹಿ ಪ್ರತಿಫಲ.

ಇಳಿಸಂಜೆಯಲಿ
ನೀನುಸುರುವ
ಪಿಸು ಮಾತು.‌..
ಸೂರ್ಯ ನಿಗೆ
ಪೂರ್ತಿ ಮುಳುಗಲು ಹೇಳುವ
ಸನ್ನೆ.

ಡಾll ರಜನಿ

ಸುರೇಶಗೌಡರ ಗೆಲುವು ಖಚಿತ: ಮುಖ್ಯಮಂತ್ರಿ

Publicstory


ತುಮಕೂರು: ತುಮಕೂರು ಗ್ರಾಮಾಂತರ ಕ್ಷೇತ್ರದಲ್ಲಿ ಸುರೇಶಗೌಡರ ಗೆಲುವು ಖಚಿತ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿಶ್ವಾಸ ವ್ಯಕ್ತಪಡಿಸಿದರು.

ಸಿದ್ದಗಂಗಾ ಮಠಾಧೀಶರಾದ ಸಿದ್ದಲಿಂಗ ಸ್ವಾಮೀಜಿ, ಸಚಿವ ಬಿ.ಸಿ.ನಾಗೇಶ್, ಗೋವಿಂದ ಕಾರಜೋಳ, ಶಾಸಕ ಜ್ಯೋತಿ ಗಣೇಶ್, ವಿಧಾನ ಪರಿಷತ್ ಸದಸ್ಯ ಎನ್. ರವಿಕುಮಾರ್ ಅವರುಗಳು ಈ ಮಾತಿಗೆ ಸಾಕ್ಷಿಯಾದರು.

ಇದು ನಡೆದಿದ್ದು ನಾಗವಲ್ಲಿ ಸಮೀಪದಲ್ಲಿ ಸುರೇಶಗೌಡರು ಪಕ್ಷದ ಕಾರ್ಯಕರ್ತ ರಿಗಾಗಿ ನೂತನವಾಗಿ ನಿರ್ಮಿಸಿರುವ ಶಕ್ತಿ ಸೌಧದ ಉದ್ಘಾಟನಾ ಸಮಾರಂಭದಲ್ಲಿ.


ಸುರೇಶಗೌಡರಂಥಹ ಶಾಸಕರು ಸಿಗುವುದು ಪುಣ್ಯ. ಯಾರೊ ಯಾರೊ ಜನಪ್ರಿಯ ಶಾಸಕರು ಹುಟ್ಟಿಕೊಳ್ಳುತ್ತಾರೆ. ಆದರೆ ಸುರೇಶಗೌಡರು ಜನಮನದ ಶಾಸಕರು. ಈ ಸಲ ಅವರು ವಿಧಾನಸೌಧದಲ್ಲಿ ಇರದೆ ಇರಬಹುದು. ಅದರೆ ಜನರ ನಡುವೆ ನಿಂತು ಕೆಲಸ ಮಾಡಿದ್ದಾರೆ.ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ



ಬುಧವಾರ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಮುಖ್ಯಮಂತ್ರಿಗಳು, ತಾವು ಯಡಿಯೂರಪ್ಪ ಅವರ ಸರ್ಕಾರದಲ್ಲಿ ನೀರಾವರಿ ಸಚಿವರಾಗಿದ್ದಾಗ ಹೆಬ್ಬೂರು- ಗೂಳೂರು ನೀರಾವರಿ ಯೋಜನೆಗೆ ಶಾಸಕರಾಗಿ ಸುರೇಶಗೌಡರು ಅನುಮೋದನೆ ಪಡೆದುಕೊಂಡ ಬಗ್ಗೆ ಹೇಳಿದರು.


ಕರ್ನಾಟಕದ ಮೊದಲ ಮಹತ್ವದ ಈ ಏತ ನೀರಾವರಿ ಯೋಜನೆಗೆ ಅಡಿಗಲ್ಲು ಹಾಕುವ ಕಾರ್ಯಕ್ರಮಕ್ಕೆ ಸಿದ್ದಗಂಗೆಯ ಶ್ರೀ ಶಿವಕುಮಾರ ಸ್ವಾಮೀಜಿ, ಅದಿ ಚುಂಚ‌ನಗಿರಿಯ ಶ್ರೀ ಬಾಲ ಗಂಗಾಧರನಾಥ ಸ್ವಾಮೀಜಿ ಸಾಕ್ಷಿಗಳಾಗಿದ್ದರು. ಯೋಜನೆಯ ಉದ್ಘಾಟನೆಗೂ ಈ ಇಬ್ಬರೂ ಬಂದಿದ್ದರು. ಸುರೇಶಗೌಡರು ಜನರ ಮನಸ್ಸಿನಲ್ಲಿರುವ ಶಾಸಕ. ಕಳೆದ ಸಲ ಅವರು ಸೋಲುವಂತಿರಲಿಲ್ಲ. ಆದರೆ ಕೆಲವೊಮ್ಮೆ ಹೀಗಾಗುತ್ತದೆ ಎಂದರು.


ನಾನೂ ನನ್ನ ಕ್ಷೇತ್ರದಲ್ಲಿ ಮಾಡದಷ್ಟು ಕೆಲಸ ಸುರೇಶಗೌಡರು ಮಾಡಿದ್ದಾರೆ. ಈ ಸಲ ಅವರು 25 ಸಾವಿರ ಮತಗಳ ಅಂತರದಿಂದ ಗೆಲವು ಸಾಧಿಸುವುದು ಖಚಿತ ಎಂದರು.
ಬಿಜೆಪಿ ಕಾರ್ಯಕರ್ತರು ನಾನೇ ಸುರೇಶಗೌಡ ಎಂಬ ಮನೋಭಾವದಲ್ಲಿ ಚುನಾವಣೆಯಲ್ಲಿ ಕೆಲಸ ಮಾಡಬೇಕು ಎಂದು ಕರೆ ನೀಡಿದರು.



ತನ್ನನ್ನು ತಾನೇ ಪಣಕ್ಕಿಟ್ಟುಕೊಂಡ ಮಹಿಳೆ

ಉತ್ತರಪ್ರದೇಶ: ಇಲ್ಲಿನ ನಗರ್‌ ಕೊತ್ಲಾಲಿಯಲ್ಲಿ ಲೂಡೊ ಚಟಕ್ಕೆ ಬಿದ್ದ ವಿವಾಹಿತ ಮಹಿಳೆ ಒಬ್ಬಳು ಹಣವನ್ನೆಲ್ಲ ಕಳೆದುಕೊಂಡು, ಕೊನೆಯಲ್ಲಿ ತನ್ನನ್ನೇ ತಾನು ಪಣವಿಟ್ಟುಕೊಂಡು ಸೋತಿರುವ ಘಟನೆ ನಡೆದಿದೆ.


ಎರಡು ಮಕ್ಕಳ ತಾಯಿ ಆಗಿರುವ ಈಕೆಯ ಗಂಡ ಜೈಪುರದಲ್ಲಿ ಕೆಲಸ ಮಾಡುತ್ತಿದ್ದಾ‌ನೆ. ಈಕೆ ತನ್ನ ಭೂ ಮಾಲೀಕನೊಂದಿಗೆ ಲೂಡೋ ಜೂಜಾಟ ಆಡುವುದನ್ನು ಚಟ ಮಾಡಿಕೊಂಡಿದ್ದಳು.

ಬಳಸು

ಪ್ರತಿನಿತ್ಯ ಇಬ್ಬರೂ ಬೆಟ್ಟಿಂಗ್‌ ಕಟ್ಟಿಕೊಂಡು ಲೂಡೋ ಆಡುತ್ತಿದ್ದರು. ಈಚೆಗೆ
ಹಿಂದಿನ ವಾರ

ಈಕೆ ಪೂರ್ತಿ ಹಣ ಸೋತಿದ್ದಾಳೆ.  ಬಳಿಕ ಆಟದಲ್ಲಿ ತನ್ನನ್ನೇ ತಾನು ಪಣಕ್ಕಿಟ್ಟುಕೊಂಡಿದ್ದಾಳೆ ಎನ್ನಲಾಗಿದೆ.

. ಪತಿ ಈ ಕುರಿತು ಸ್ಥಳೀಯ ಠಾಣೆಯಲ್ಲಿ ದೂರು ನೀಡಿದ್ದು, ಘಟನೆ

ಸಾಮಾಜಿಕ ಜಾಲತಾಣದಲ್ಲಿ ಎಲ್ಲೆಡೆ ಹರಿದಾಡುತ್ತಿದೆ. 

ವೈದ್ಯೆ ಆತ್ಮಹತ್ಯೆ

0

ಚಿತ್ರದುರ್ಗದ ಜಿಲ್ಲಾ ಕುಷ್ಠರೋಗ ನಿಯಂತ್ರಣಾಧಿಕಾರಿ ಡಾ.ರೂಪಾ (50)

ಅವರು ತಲೆಗೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಘಟನೆ ಅನುಮಾನಾಸ್ಪದವಾಗಿದೆ.

ವಿ.ಪಿ. ಬಡಾವಣೆಯ ತಮ್ಮ ಮನೆಯಲ್ಲಿ ಘಟನೆ ನಡೆದಿದೆ. ರೂಪಾ ಅವರು ಗಿರಿಶಾಂತ ಆರ್ಥೋ ಕೇರ್‌ ಸೆಂಟರ್‌ನ ಡಾ.ಕೆ.ಜಿ.ರವಿ ಅವರ ಪತ್ನಿ.

ಸೋಮವಾರ ಬ

ರೂಪಾ ರಕ್ತದ ಮಡುವಿನಲ್ಲಿ ಬಿದ್ದಿರುವುದನ್ನು ಮನೆಯ ಕೆಲಸಗಾರರು ನೋಡಿ ಮಾಹಿತಿ ನೀಡಿದ್ದಾರೆ. . ಮಾಹಿತಿ ತಿಳಿದು ಸ್ಥಳಕ್ಕೆ ಧಾವಿಸಿದ ಡಾ.ಕೆ.ಜಿ.ರವಿ ಪರಿಶೀಲಿಸಿದಾಗ ಪತ್ನಿ ಮೃತಪಟ್ಟಿದ್ದು ಖಚಿತವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಬೆಡ್‌ರೂಮಿನ ಟೇಬಲ್‌ ಮೇಲೆ ಡೆತ್‌ನೋಟ್ ಸಿಕ್ಕಿದ್ದು, ಮಾಹಿತಿ ಇನ್ನಷ್ಟೇ ಸಿಗಬೇಕಾಗಿದೆ.

. ಇದರ ಆಧಾರದ ಮೇರೆಗೆ ವೈದ್ಯೆ ಆತ್ಮಹತ್ಯೆ ಮಾಡಿಕೊಂಡಿರುವ ಸಾಧ್ಯತೆ ಇದೆ

‘ರಿವಾಲ್ವರ್‌ನಿಂದ ಹಾರಿದ ಗುಂಡು ತಲೆಗೆ ತಗುಲಿ ರೂಪಾಮೃತಪಟ್ಟಿದ್ದಾರೆ.

ಕ್ರಯದಂತೆ ಖಾತೆ ಮಾಡಲು ಲಂಚವೇಕೆ?

0

ಲಕ್ಷ್ಮೀಕಾಂತರಾಜು ಎಂ.ಜೆ.


ಎಸಿಬಿ ರದ್ದಾದ ಬಳಿಕ ಲೋಕಾಯುಕ್ತ ಚುರುಕುಗೊಂಡಿದೆ. ಕಳೆದ ವಾರ ಬೆಂಗಳೂರು ನಗರ ಜಿಲ್ಲೆಯ ಉತ್ತರ ತಾಲ್ಲೂಕಿನ ತಹಸೀಲ್ದಾರ್ ಖಾತೆ ಬದಲಾವಣೆಗೆ ಲಂಚಕ್ಕೆ ಬೇಡಿಕೆ ಇಟ್ಟ ದೂರಿನ‌ ಮೇರೆಗೆ ಲೋಕಾಯುಕ್ತ ಪೊಲೀಸರು ಬಲೆಗೆ ಬೀಳಿಸಿಕೊಂಡು ಜೈಲಿಗಟ್ಟಿದ ಸುದ್ದಿ ಮಾಸುವ ಮುನ್ನವೇ ಬೆಳಗಾವಿ ಜಿಲ್ಲೆಯ ಕಿತ್ತೂರಿನ ತಹಸೀಲ್ದಾರ್ ಅವರೂ ಖಾತೆ ಬದಲಾವಣೆ ಮಾಡಲು ಲಂಚಕ್ಕೆ ಬೇಡಿಕೆ ಇಟ್ಟು ಲೋಕಾಯುಕ್ತ ಪೊಲೀಸರಿಗೆ ಆಹಾರವಾಗಿರುವುದು ಶನಿವಾರ ವರದಿಯಾಗಿದೆ.

ಜಮೀನುಗಳ ಖಾತೆ ಬದಲಾವಣೆಯ ವಹಿವಾಟುಗಳಾದ ಕ್ರಯ,ವಿಭಾಗ, ದಾನ, ವಿಲ್, ಮರಣ ಶಾಸನ ಮುಂತಾದ ವಹಿವಾಟುಗಳ ನೋಂದಣಿಯಂತೆ ಬರೆದುಕೊಟ್ಟ ಪಹಣಿಯಲ್ಲಿನ ಮೂಲ ಮಾಲೀಕರಿಂದ ಬರೆಯಿಸಿಕೊಂಡವರ ಹೆಸರನ್ನು ಪಹಣಿಯಲ್ಲಿ ದಾಖಲಿಸುವ ಪ್ರಕ್ತಿಯೆಗೆ ತಹಸೀಲ್ದಾರ್, ರಾಜಸ್ವ ನಿರೀಕ್ಷಕ, ಗ್ರಾಮಲೆಕ್ಕಿಗರು ತನಿಖಾ ಸಂಸ್ಥೆಗಳಿಗೆ ಅಹಾರವಾಗುತ್ತಲೇ ಇದ್ದು ಕೇವಲ ದೂರು ಕೊಟ್ಟ ಪ್ರಕರಣಗಳಲ್ಲಿ ಮಾತ್ರ ಅಧಿಕಾರಿಗಳ ಬಂಧನವಾಗುತ್ತಿದ್ದು ಉಳಿದ ಪ್ರಕರಣಗಳಲ್ಲಿ ಅಧಿಕಾರಿಗಳು ಲಂಚದ ಹಣ ಗಳಿಸುತ್ತಲೇ ಇದ್ದಾರೆ.

ಖಾತೆ ಬದಲಾವಣೆ ಸಂಬಂಧ ಕಾಲ ಕಾಲಕ್ಕೆ ಚಾಲ್ತಿಯಲ್ಲಿರುವ ತನಿಖಾ ಸಂಸ್ಥೆಗಳಿಗೆ ಆಹಾರವಾಗುತ್ತಿರುವುದು ತಹಸೀಲ್ದಾರ್ ಗಳು ಮಾತ್ರವಲ್ಲ. ಕಂದಾಯ ಇಲಾಖೆಯ ತಳಹಂತದ ಗ್ರಾಮಲೆಕ್ಕಿಗರಿಂದ ಹಿಡಿದು ರಾಜಸ್ವ ನಿರೀಕ್ಷಕ , ಹಾಗೂ ತಹಸೀಲ್ದಾರ್ ಗಳು ತನಿಖಾ ಸಂಸ್ಥೆಗಳ ಪೊಲೀಸರ ಬಲೆಗೆ ಬೀಳುತ್ತಲೇ ಇದ್ದಾರೆ. ಇಲ್ಲಿ ಮತ್ತೊಂದು ಗಮನಿಸಬೇಕಾದ ವಿಷಯ ಏನೆಂದರೆ, ತನಿಖಾ ಸಂಸ್ಥೆಗಳಿಗೆ ಬಲಿಯಾಗಿರುವ ನೌಕರ,ಅಧಿಕಾರಿಗಳ ಪೈಕಿ ಹೆಚ್ಚಿನವರು ಕಂದಾಯ ಇಲಾಖೆಯವರು ಮಾತ್ರ.

ದಾನ,ವಿಭಾಗ, ಮರಣ ಶಾಸನ, ವಿಲ್ ವಹಿವಾಟುಗಳು ಕುಟುಂಬದೊಳಗೆ ನಡೆಯುವಂತಹ ಹಕ್ಕುಬದಲಾವಣೆಗಳು ಹಾಗಾಗಿ ಇಲ್ಲಿ ಲಂಚ ಕೊಡುವ ಅಗತ್ಯವೂ ಇಲ್ಲ. ನಿಯಮ ಬಾಹಿರವಾಗಿ ನಡೆಯುವ ಯಾವ ಪ್ರಕ್ರಿಯೆಯೂ ಇಲ್ಲ. ಇನ್ನು ಕ್ರಯದ ವಹಿವಾಟಿನ ಮೂಲಕ ಹಕ್ಕು ಬದಲಾವಣೆಯ ಸಂದರ್ಭದಲ್ಲಿ ಈ ಹಿಂದೆ ಕೆಲ ನಿಯಮಗಳ ಉಲ್ಲಂಘನೆಯಾಗುತ್ತಿದ್ದು ಹಣದ ಕೈ ಬದಲಾವಣೆಯೂ ಯಾವ ದೂರುಗಳಿಲ್ಲದೆಯೂ ಸರಾಗವಾಗಿ ನಡೆಯುತ್ತಿತ್ತು.

2020 ರಲ್ಲಿ ಪ್ರಸ್ತುತ ಆಡಳಿತ ಸರ್ಕಾರ ಭೂ ಖರೀದಿಗಿದ್ದ ನಿರ್ಬಂಧ ಗಳನ್ನ ರದ್ದುಪಡಿಸುವ ಮೂಲಕ , ಭೂ ಖರೀದಿಗೆ ನಿರ್ಭಂದವಿದ್ದ 79 a & b ಕಾಯಿದೆಯನ್ನ ರದ್ದು ಪಡಿಸಲಾಗಿದೆ. ಈಗ ಭೂ ಖರೀದಿಗೆ ಮುಕ್ತ ವಾತಾವರಣವಿದೆ . 79 a & b ರದ್ದಾದ ಬಳಿಕ ಕೃಷಿಕರಲ್ಲದವರೂ ಕೃಷಿ ಭೂಮಿ ಖರೀದಿಸಬಹುದಾಗಿದ್ದು, ಹೊರ ರಾಜ್ಯದವರೂ ಸಹ ನಮ್ಮಲ್ಲಿ ಭೂ ಖರೀದಿಯನ್ನ ಯಾವ ಅಡಚಣೆ ಇಲ್ಲದೆಯೂ ಖರೀದಿಸಬಹುದಾಗಿದೆ.ಖರೀದಿಯೂ ನಡೆಯುತ್ತಿದೆ.

79 a & b ಚಾಲ್ತಿಯಲ್ಲಿದ್ದ ಸಮಯದಲ್ಲಿ ಕೃಷಿಕ ಕುಟುಂಬದವರೂ ಮಾತ್ರ ಕೃಷಿ ಭೂಮಿ ಖರೀದಿಸಬೇಕಿತ್ತು. ಆ ಕುರಿತು ಪ್ರಮಾಣ ಪತ್ರ ಹೊಂದಿದವರಿಗೆ ಮಾತ್ರ ಖರೀದಿಯ ನೋಂದಣಿ ಮಾಡಲಾಗುತ್ತಿತ್ತು‌. ಕೆಲವೊಮ್ಮೆ ನಕಲಿ ದಾಖಲೆಗಳನ್ನ ಸೃಷ್ಠಿಸಿ ಖರೀದಿ ಮಾಡಿ, ಲಂಚ ನೀಡುವ ಮೂಲಕ ಹಕ್ಕು ಬದಲಾವಣೆಯನ್ನ ಮಾಡಿಸಿಕೊಳ್ಳುತ್ತಿದ್ದರು.

ಆದರೀಗ , ಖರೀದಿಗೆ ಮುಕ್ತ ಅವಕಾಶವಿದೆ. ಕೃಷಿಕರಲ್ಲದವರೂ ಯಾವ ನಿರ್ಭಂಧವಿಲ್ಲದೇ ಭೂ ಖರೀದಿ ಮಾಡುತ್ತಿದ್ದಾರೆ‌. ನೋಂದಣಿಯ ಹಕ್ಕುಬದಲಾವಣೆಗೆ ಯಾವುದೇ ತೊಡಕಿಲ್ಲ. ಆದರೂ ಹಕ್ಕು ಬದಲಾವಣೆಗೆ ಕಂದಾಯ ಇಲಾಖೆಯ ಅಧಿಕಾರಿಗಳು ಲಂಚಕ್ಕೆ ಬೇಡಿಕೆ ಇಟ್ಟು ಲೋಕಾಯುಕ್ತಕ್ಕೆ ಸಿಕ್ಕಿಬೀಳುತ್ತಿದ್ದಾರೆ. ದೂರು ನೀಡಿದ ಪ್ರಕರಣಗಳಲ್ಲಿ ಮಾತ್ರ. ದೂರು ನೀಡದೇ ಸಲೀಸಾಗಿ ಸಾಕಷ್ಟು ಪ್ರಕರಣಗಳು ಸುಖಾಂತ್ಯವಾಗಿ ಲಂಚದಲ್ಲಿ ಮುಗಿದುಹೋಗುತ್ತವೆ.

ಈ ಎಲ್ಲ ಪ್ರಕರಣಗಳನ್ನ ನೋಡಿದಾಗ ಹಕ್ಕುಬದಲಾವಣೆಯ ಕುರಿತು ಸರ್ಕಾರ ನಿಯಮಗಳನ್ನ ಸರಳೀಕರಣ ಮಾಡಿದಾಗ್ಯೂ ಅಧಿಕಾರಿಗಳಿಗೆ ಒಂದಷ್ಟು ಟಿಪ್ಸ್ ರೀತಿ ಹಣ ಕೊಡಲೇ ಬೇಕೆಂಬ ಅಲಿಖಿತ ನಿಯಮ ಹಾಗೂ ಮನೋಭಾವ ಹೊಂದಿರುವ ಕಾರಣ ಕಂದಾಯ ಇಲಾಖೆಯಲ್ಲಿ ಲಂಚ ಎಂಬುದು ದೊಡ್ಡದಾಗಿಯೇ ಉಳಿದಿದೆ. ರೈತರುಗಳು, ಭೂ ಖರೀದಿದಾರರು ಹೆಚ್ಚು ಜಾಗ್ರತೆ ಹೆಚ್ಚು ದೂರುದಾರರು
ಮುಂದೆ ಬರದ ಹೊರತು ಈ ವ್ಯವಸ್ಥೆ ಹೀಗೆಯೆ ಮುಂದುವರೆಯುವದರಲ್ಲಿ ಅನುಮಾನವಿಲ್ಲ.

………….

ಲಕ್ಷ್ಮೀಕಾಂತರಾಜು ಎಂ ಜಿ
lakshmikantharajumg@gmail.com

ಕವನ ಓದಿ: ಹೂವು

2

ಹೂವು ಹಲವರಿಗೆ ಹಲವು ಭಾವ. ಮಲ್ಲಿಗೆ,ಜಾಜಿ
ಪಾರಿಜಾತ ಸುಗಂಧಕ್ಕೆ ಮಾರು ಹೋಗದವರಿಲ್ಲ.
ಆದರೂ ಹೂವನ್ನು ಹೆಣ್ಣಿಗೆ ಹೋಲಿಸವ ಭಾವನೆಗಳೇ
ಹೆಚ್ಚು. ನೀರೆಯರಿಗೂ ಹೂವಿಗೂ ಅವಿನಾಭಾವ ಸಂಬಂಧವಿದೆ. ಹೂಗಳನ್ನು ಆಸ್ವಾದಿಸಿ ರಜನಿಯವರ ಕಣ್ಣಲ್ಲಿ

ಹೂವು


ನೋಯಿಸಬೇಡಿ ಹೂವು..
ಅರಳಲು
ಅರಳಿ ಸುಗಂಧ
ಸೂಸಲು…ದೇವರು
ಸೃಷ್ಟಿಸಿದ್ದಾನೆ.

ಹತ್ತಿರ ಹೋಗಿ
ಮೂಗಿಗೆ ಹಿಡಿದು
ಹಿಂಸಿಸುವಿರಿ ಏಕೆ?
ದೂರಕ್ಕೂ
ಸುವಾಸನೆ ಬೀರುತ್ತವೆ.

ಮನಸ್ಸುಗಳನ್ನು
ಅರಳಿಸಿ
ಹೃದಯಗಳನ್ನು
ಬೆಸೆಯುವ
ಜವಾಬ್ದಾರಿ ಇವೆ ಹೂಗಳಿಗೆ.

ಎಲ್ಲಿದ್ದರೂ
ಸುಗಂಧ ಸೂಸುತ್ತವೆ..
ಮುಡಿಯಲ್ಲಿ..
ಮಸಣದಲ್ಲಿ.

ಅರಳುವುದೆ
ಅದರ ಕೆಲಸ..
ಅರಳಿದ ನಂತರವೇ
ಮುದುರುವುದು.

ಅರಳುವಾಗಲೂ
ಅರಳಿ ನಿಂತ ಮೇಲೂ
ಮುದುಡಿ ಸಾಯುವಾಗಲೂ
ಕೂನೆಗೆ ಸತ್ತು ಉದುರುವಾಗಲೂ
ಅದು ಸದ್ದು ಮಾಡುವುದಿಲ್ಲ.

ಹೂವನ್ನು
ಜಜ್ಜಿದರೂ
ಸುಗಂಧ ದ್ರವ್ಯ
ದೂರಕುತ್ತದೆ.

ಹೂವು
ಅರಳಿಸದ
ಹೃದಯವಾಗಿದ್ದರೆ
ದೂರ ಇರಿ.

ಹೂವು
ಬೇರೆ ಹೂವಿನೂಂದಿಗೆ
ಹದವಾಗಿ
ಹೂಂದಿಕೂಳ್ಳುತ್ತದೆ.

ಹೂವು
ಮುಳ್ಳಿನ ಜೂತೆಯೇ
ಇದ್ದರೂ
ಅದರ ಬುದ್ಧಿ ಕಲಿಯುವುದಿಲ್ಲ.

ಹೂವು
ದೇವರಿಗೆ ಸಂದರೂ
ಹಮ್ಮಿಲ್ಲ.

ಹೂವು ಅಳುತ್ತದೆ
ಯಾವಾಗ
ಎಂದರೆ
ಅದನ್ನು ಮುಡಿದವಳು
ಅತ್ತಾಗ.

ಡಾllರಜನಿ

ಸಂಸಾರದ ನೊಗ ಹೊತ್ತೂ ತಹಶೀಲ್ದಾರ್ ಆದ ಆರತಿ

0

ಸಂಸಾರದ ನೊಗ ಹೊತ್ತೂ ಕೆಎಎಸ್ ಅಧಿಕಾರಿಯಾದ
ಗುಬ್ಬಿ ತಹಸೀಲ್ದಾರ್ ಆರತಿ ಬಿ ಻ಅವರ ಸಾಧನೆ ಮಹಿಳೆಯರಿಗೆ ಮಾದರಿಯಾಗಿದೆ.
……………………………
ಲಕ್ಷ್ಮೀಕಾಂತರಾಜು ಎಂ ಜಿ
lakshmikantharajumg@gmail.com


ಕಾಲೇಜು ಸಮಯದಲ್ಲಿಯೇ ವಿವಾಹವಾಗಿ ಸಂಸಾರದ ಜೊತೆಯೂ ವಿದ್ಯೆ ಸಾಧಕನ ಸ್ವತ್ತೇ ಹೊರತು ಸೋಮಾರಿಗಳ ಸ್ವತ್ತಲ್ಲ, ಸಾಧನೆಗೆ ಕುಟುಂಬದ ಕಾರಣಗಳು ಅಡ್ಡಿಯಾಗದು ಎಂಬ ಮಾತನ್ನ 13 ವಿವಿಧ ಸರ್ಕಾರಿ ಹುದ್ದೆಗಳನ್ನ ಪಡೆಯುವ ಮೂಲಕ ಅಕ್ಷರಶಃ ನಿಜವಾಗಿಸಿದವರು ತುಮಕೂರು ಜಿಲ್ಲೆ ಗುಬ್ಬಿ ತಹಸೀಲ್ದಾರ್ ಆಗಿರುವ ಆರತಿ ರವರು.

ಹೌದು. ಮಹಿಳೆಯೊಬ್ಬಳು ಮದುವೆಯಾಗಿ ಸಂಸಾರಕ್ಕೆ ಕಾಲಿಟ್ಟಳೆಂದರೆ ಅವಳ ಬದುಕು ಇನ್ನು ಕುಟುಂಬಕ್ಕೆ ಸೀಮಿತ ಎಂಬ ವಾತಾವರಣದ ನಡುವೆ , ತನ್ನ ಕಾಲೇಜು ಅವಧಿಯಲ್ಲಿಯೇ ಮದುವೆಯಾಗಿ ಆನಂತರ ಮಕ್ಕಳು ಮತ್ತು ಸಂಸಾರದ ಜಂಜಾಟಗಳ ನಡುವೆಯೂ ಆರತಿಯವರು ಸಾಧನೆಗೈದಿರುವುದು ದೊಡ್ಡ ಸಾಧನೆಯಾಗಿದೆ.

ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೆಪಲ್ಲಿ ತಾಲ್ಲೂಕಿನ ಕೃಷಿಕ ಕುಟುಂಬದ ಗಾಣಿಗ ಸಮಾಜದ ಆರತಿಯವರಿಗೆ 18 ತುಂಬಿದ ಕೂಡಲೇ ವಿವಾಹವಾಗುತ್ತೆ. ಆಗ ಅವರು ಪಿಯುಸಿಯಲ್ಲಿ ವ್ಯಾಸಂಗ ಮಾಡುತ್ತಿದ್ದು,ಆನಂತರ ದಿನಗಳಲ್ಲಿ ಮದುವೆಯಾದ ಕಾರಣಕ್ಕೆ ವಿದ್ಯಾಭ್ಯಾಸ ಮೊಟಕು ಗೊಳಿಸದೇ ಮುಂದುವರೆಸಿ ಬಾಗೆಪಲ್ಲಿಯ ನ್ಯಾಷನಲ್ ಕಾಲೇಜಿನಲ್ಲಿ ಪಿಯು ,ಬೆಂಗಳೂರಿನ ಜಿಕೆವಿಕೆ ಯಲ್ಲಿ ಬಿಎಸ್ಸಿ ಮತ್ತು ಎಂಎಸ್ಸಿ ಪದವಿಯನ್ನ ಪಡೆದಿರುತ್ತಾರೆ.


ಪದವಿಯಲ್ಲಿ ಬಿಎಸ್ಸಿ ಎಜಿ ಆಯ್ಕೆ ಮಾಡಿಕೊಂಡು ಮೊದಲ ವರ್ಷದ
ಬಿಎಸ್ಸಿಯಲ್ಲಿಯೇ ತಾಯಿಯೂ ಆಗುವ ಮೂಲಕ ಸಂಸಾರದ ಜವಬ್ದಾರಿಗಳನ್ನ ಹೊತ್ತೂ ಛಲ ಬಿಡದೇ ಓದುತ್ತಾ ಬಿಎಸ್ಸಿಯ ಅಂತಿಮ ವರ್ಷದಲ್ಲಿಯೇ ಕೆಪಿಎಸ್ಸಿಯ ಪರೀಕ್ಷೆ ತೆಗೆದುಕೊಂಡು 2014 ರ ಬ್ಯಾಚಿನಲ್ಲಿ ಮೊದಲ ಪ್ರಯತ್ನದಲ್ಲಿಯೇ ಯಶಸ್ಸು ಕಂಡು ಕರ್ನಾಟಕ ಆಡಳಿತ ಸೇವೆಗೆ ಆಯ್ಕೆಯಾಗಿ ಜಿಲ್ಲೆಯ ತಿಪಟೂರು ತಹಸೀಲ್ದಾರ್ ಆಗಿ 2019 ರಲ್ಲಿ ನೇಮಕವಾಗುವ ಮೂಲಕ ಮದುವೆಯಾದ ಮಹಿಳೆ ಸಂಸಾರಕ್ಕೆ ಸೀಮಿತ ಎಂಬ ಮಾತನ್ನ ಸುಳ್ಳಾಗಿಸಿದ್ದಾರೆ.


ಇದಿಷ್ಟೇ ಅಲ್ಲದೆ , ಪೊಲೀಸ್ ಸಬ್ ಇನ್ಸ್ ಪೆಕ್ಟರ್, ಸಬ್ ರಿಜಿಸ್ಟಾರ್ ಸೇರಿದಂತೆ ವಿವಿಧ 13 ಹುದ್ದೆಗಳಿಗೆ ಆಯ್ಕೆಯಾಗಿ ಆ ಹುದ್ದೆಗಳಿಗೆ ವರದಿ ಮಾಡಿಕೊಳ್ಳದೇ ಅಂತಿಮವಾಗಿ ತಹಸೀಲ್ದಾರ್ ಹುದ್ದೆಯನ್ನ ಆಯ್ಕೆ ಮಾಡಿಕೊಳ್ಳುವ ಮೂಲಕ ಕಂದಾಯ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.


ಬಿಎಸ್ಸಿಯಲ್ಲಿ ಚಿನ್ನದ ಪದಕಗಳೊಂದಿಗೆ ಪದವಿ ಪಡೆದಿರುವುದು ಇವರ ಅರ್ಹತೆಯನ್ನ ಗುರುತಿಸುತ್ತಿದೆ.
ಆರತಿಯವರ ಪತಿ ವಕೀಲರಾಗಿದ್ದು ,ಇವರ ಪ್ರಯತ್ನಕ್ಕೆ ಸದಾ ಬೆನ್ನಲುಬಾಗಿ ನಿಂತಿದ್ದು ಇವರ ಸಾಧನೆಗೆ ತಮ್ಮ ಪತಿಯವರ ಬೆಂಬಲವನ್ನ ಆರತಿಯವರು ಸ್ಮರಿಸುತ್ತಾರೆ.ಶಿಕ್ಷಣ ಸಂಪೂರ್ಣ ಮುಗಿದ ಮೇಲೆ ನಾಗರಿಕ ಸೇವೆಗಳ ಹುದ್ದೆಗಳನ್ನ ಪಡೆದಿರುವವರು ಇರಬಹುದು‌. ಆದರೆ, ಪಿಯು ಹಂತದಲ್ಲೇ ಮದುವೆ ಯಾಗಿ ,ನಂತರದಲ್ಲಿ ಕಾಲೇಜು ದಿನಗಳನ್ನ ಎದುರಿಸಿ ದೊಡ್ಡ ಹುದ್ದೆ ಪಡೆದಿರುವ ಆರತಿಯವರ ಸಾಧನೆ ವಿಶೇಷವೇ ಸರಿ.


ಇವರ ತಂದೆಗೆ ಆರತಿಯವರು ಸೇರಿದಂತೆ ಮೂವರು ಹೆಣ್ಣುಮಕ್ಕಳು. ಮೂವರ ಪೈಕಿ ಆರತಿ ತಹಸೀಲ್ದಾರ್ ಆಗಿದ್ದರೆ ಕೊನೆಯ ಸಹೋದರಿ ಸಹಾಯಕ ಇಂಜಿನಿಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಈ ಹಿಂದೆ ಕುಟುಂಬ ಕಲ್ಯಾಣ ಯೋಜನೆಯಲ್ಲಿ ” ಆರತಿಗೊಬ್ಬಳು ಮಗಳು, ಕೀರ್ತಿಗೊಬ್ಬ ಮಗ” ಎಂಬ ಘೋಷವಾಕ್ಯವಿತ್ತು. ಈ ಕುಟುಂಬದಲ್ಲಿ ಆರತಿಗು ಕೀರ್ತಿಗೂ ಈ ಹೆಣ್ಣುಮಕ್ಕಳೇ ಪಾತ್ರರಾಗಿದ್ದಾರೆ.

ಮದುವೆಯಾದ ಮೇಲೆ ಶಿಕ್ಷಣ ,ಉದ್ಯೋಗ ಪಡೆಯುವ ಅವಕಾಶಗಳ ಬಾಗಿಲು ಮುಚ್ಚಿ ಹೋಯ್ತು ಎಂಬುವ ಸನ್ನಿವೇಶದಲ್ಲಿ , ಮದುವೆಯ ನಂತರ ಶಿಕ್ಷಣ,ಉದ್ಯೋಗ ಪಡೆಯಲಿಚ್ಛಿಸುವ ಯುವತಿಯರಿಗೆ ಆರತಿ ಮಾದರಿಯಾಗಬಲ್ಲರು.


ನಮ್ಮ ತಂದೆ ಕೃಷಿಯ ಜೊತೆಗೆ ಕೆಸ್ಸಾರ್ಟಿಸಿಯಲ್ಲಿ ನಿರ್ವಾಹಕರಾಗಿದ್ದರು. ನಮ್ಮ ಓದಿಗೆಂದೇ ಬಾಗೆಪಲ್ಲಿಗೆ ನಮ್ಮ ಕುಟುಂಬ ಸ್ಥಳಾಂತರಗೊಂಡಿತ್ತು. ನನ್ನದೇನಾದರೂ ಸಾಧನೆ ಅಂತಿದ್ದರೆ ಅದರ ಹಿಂದೆ ನನ್ನ ತಂದೆ ಹಾಗೂ ನನ್ನ ಪತಿಯ ಸಹಕಾರ ಸಾಕಷ್ಟಿದೆ.

  • ಆರತಿ ಬಿ.ಕೆಎಎಸ್