ತುಮಕೂರು: ಹೆಬ್ಬೂರು- ಗೂಳೂರು ಭಾಗದ ಜನರ ಕಷ್ಟಗಳನ್ನು ಜೆಡಿಎಸ್, ಕಾಂಗ್ರೆಸ್ ರಾಜಕೀಯ ನೆಲೆಗೆ ಬಳಸಿಕೊಂಡವೆ ಹೊರತು ಅಧಿಕಾರದಲ್ಲಿದ್ದಾಗ ಜನರಿಗೆ ನೀರು ಕೊಡಲಿಲ್ಲ. ನಾನು ಶಾಸಕನಾದ ಮೇಲೆ ಬಿಜೆಪಿ ನೀರು ನೀಡಿತು. ಈ ಯೋಜನೆಗೆ ಅನುಮತಿ ನೀಡಿದ್ದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ. ಆಗ ಅವರು ನೀರಾವರಿ ಸಚಿವರಾಗಿದ್ದರು. ಅವರಿಗೆ ನಾನು, ಕ್ಷೇತ್ರದ ಜನರು ಋಣಿಯಾಗಿದ್ದೇವೆ ಎಂದು ಮಾಜಿ ಶಾಸಕ ಬಿ.ಸುರೇಶಗೌಡರು ಹೇಳಿದರು.
ಬುಧವಾರ ಶಕ್ತಿ ಸೌಧ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಮಾಜಿ ಶಾಸಕನಾಗಿದ್ದರೂ ಸಹ ಕ್ಷೇತ್ರದ ದೇವಸ್ಥಾನಗಳಿಗೆ ಅನುದಾನ ತಂದು ಅಭಿವೃದ್ಧಿ ಪಡಿಸಿರುವೆ ಎಂದು.
ವೃಷಭಾವತಿ ನದಿ ನೀರು ಯೊಜನೆಗೆ ತಾಲ್ಲೂಕಿನ ಕೆರೆಗಳನ್ನು ಸೇರಿಸಿದ್ದೇನೆ. ಕಾಲುವೆ ಮೂಲಕ ಹೇಮಾವತಿ ನದಿ ನೀರಿನ ಯೋಜನೆಗೆ ನನ್ನ ಕನಸಾಗಿದೆ ಎಂದರು.
ಜೆಡಿಎಸ್ ಅಧಿಕಾರಕ್ಕೆ ಬಂದರೂ ಯೋಜನೆ ಜಾರಿಗೊಳಿಸಲಿಲ್ಲ. ಯೋಜನೆ ನಾನು ಜಾರಿಗೊಳಿಸಿದೆ. ಜೆಡಿಎಸ್ ಶಾಸಕ ಕೆರೆಗಳಿಗೆ ನೀರು ತುಂಬದಂತೆ ತಡೆದರು ಎಂದು ಆರೋಪಿಸಿದರು.
20 ಸಾವಿರ ರೈತರಿಗೆ ಉಚಿತ ಟಿ.ಸಿ. ಕೊಡಿಸಿದ್ದೇನೆ. ರಸ್ತೆ, ಶಾಲೆಗಳ ಅಭಿವೃದ್ಧಿ ಗಾಗಿ ಕ್ಷೇತ್ರ ನಾಡಿನ ಗಮನ ಸೆಳೆದಿದೆ. ಮುಂದಿನ ಸಲ ನಾನು ಗೆದ್ದರೆ ಕ್ಷೇತ್ರವನ್ನು ದೇಶದ ನಂ 1 ಅಭಿವೃದ್ಧಿ ಕ್ಷೇತ್ರವಾಗಿ ಮಾರ್ಪಡಿಸುವೆ ಎಂದರು.
ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬೊಮ್ಮಾಯಿ,
ಸಿದ್ದಗಂಗಾ ಮಠಾದೀಶರಾದ ಸಿದ್ದಲಿಂಗ ಸ್ವಾಮೀಜಿ, ಸಚಿವರಾದ ಗೋವಿಂದ ಕಾರಜೋಳ, ಗೋಪಾಲಯ್ಯ, ಶಾಸಕ ಜ್ಯೋತಿ ಗಣೇಶ ಇತರರು ಇದ್ದರು.