ಉತ್ತರಪ್ರದೇಶ: ಇಲ್ಲಿನ ನಗರ್ ಕೊತ್ಲಾಲಿಯಲ್ಲಿ ಲೂಡೊ ಚಟಕ್ಕೆ ಬಿದ್ದ ವಿವಾಹಿತ ಮಹಿಳೆ ಒಬ್ಬಳು ಹಣವನ್ನೆಲ್ಲ ಕಳೆದುಕೊಂಡು, ಕೊನೆಯಲ್ಲಿ ತನ್ನನ್ನೇ ತಾನು ಪಣವಿಟ್ಟುಕೊಂಡು ಸೋತಿರುವ ಘಟನೆ ನಡೆದಿದೆ.
ಎರಡು ಮಕ್ಕಳ ತಾಯಿ ಆಗಿರುವ ಈಕೆಯ ಗಂಡ ಜೈಪುರದಲ್ಲಿ ಕೆಲಸ ಮಾಡುತ್ತಿದ್ದಾನೆ. ಈಕೆ ತನ್ನ ಭೂ ಮಾಲೀಕನೊಂದಿಗೆ ಲೂಡೋ ಜೂಜಾಟ ಆಡುವುದನ್ನು ಚಟ ಮಾಡಿಕೊಂಡಿದ್ದಳು.
ಬಳಸು
ಪ್ರತಿನಿತ್ಯ ಇಬ್ಬರೂ ಬೆಟ್ಟಿಂಗ್ ಕಟ್ಟಿಕೊಂಡು ಲೂಡೋ ಆಡುತ್ತಿದ್ದರು. ಈಚೆಗೆ
ಹಿಂದಿನ ವಾರ
ಈಕೆ ಪೂರ್ತಿ ಹಣ ಸೋತಿದ್ದಾಳೆ. ಬಳಿಕ ಆಟದಲ್ಲಿ ತನ್ನನ್ನೇ ತಾನು ಪಣಕ್ಕಿಟ್ಟುಕೊಂಡಿದ್ದಾಳೆ ಎನ್ನಲಾಗಿದೆ.
. ಪತಿ ಈ ಕುರಿತು ಸ್ಥಳೀಯ ಠಾಣೆಯಲ್ಲಿ ದೂರು ನೀಡಿದ್ದು, ಘಟನೆ
ಸಾಮಾಜಿಕ ಜಾಲತಾಣದಲ್ಲಿ ಎಲ್ಲೆಡೆ ಹರಿದಾಡುತ್ತಿದೆ.