Monday, May 27, 2024
Google search engine
Homeಜಸ್ಟ್ ನ್ಯೂಸ್ಸುರೇಶಗೌಡರ ಗೆಲುವು ಖಚಿತ: ಮುಖ್ಯಮಂತ್ರಿ

ಸುರೇಶಗೌಡರ ಗೆಲುವು ಖಚಿತ: ಮುಖ್ಯಮಂತ್ರಿ

Publicstory


ತುಮಕೂರು: ತುಮಕೂರು ಗ್ರಾಮಾಂತರ ಕ್ಷೇತ್ರದಲ್ಲಿ ಸುರೇಶಗೌಡರ ಗೆಲುವು ಖಚಿತ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿಶ್ವಾಸ ವ್ಯಕ್ತಪಡಿಸಿದರು.

ಸಿದ್ದಗಂಗಾ ಮಠಾಧೀಶರಾದ ಸಿದ್ದಲಿಂಗ ಸ್ವಾಮೀಜಿ, ಸಚಿವ ಬಿ.ಸಿ.ನಾಗೇಶ್, ಗೋವಿಂದ ಕಾರಜೋಳ, ಶಾಸಕ ಜ್ಯೋತಿ ಗಣೇಶ್, ವಿಧಾನ ಪರಿಷತ್ ಸದಸ್ಯ ಎನ್. ರವಿಕುಮಾರ್ ಅವರುಗಳು ಈ ಮಾತಿಗೆ ಸಾಕ್ಷಿಯಾದರು.

ಇದು ನಡೆದಿದ್ದು ನಾಗವಲ್ಲಿ ಸಮೀಪದಲ್ಲಿ ಸುರೇಶಗೌಡರು ಪಕ್ಷದ ಕಾರ್ಯಕರ್ತ ರಿಗಾಗಿ ನೂತನವಾಗಿ ನಿರ್ಮಿಸಿರುವ ಶಕ್ತಿ ಸೌಧದ ಉದ್ಘಾಟನಾ ಸಮಾರಂಭದಲ್ಲಿ.


ಸುರೇಶಗೌಡರಂಥಹ ಶಾಸಕರು ಸಿಗುವುದು ಪುಣ್ಯ. ಯಾರೊ ಯಾರೊ ಜನಪ್ರಿಯ ಶಾಸಕರು ಹುಟ್ಟಿಕೊಳ್ಳುತ್ತಾರೆ. ಆದರೆ ಸುರೇಶಗೌಡರು ಜನಮನದ ಶಾಸಕರು. ಈ ಸಲ ಅವರು ವಿಧಾನಸೌಧದಲ್ಲಿ ಇರದೆ ಇರಬಹುದು. ಅದರೆ ಜನರ ನಡುವೆ ನಿಂತು ಕೆಲಸ ಮಾಡಿದ್ದಾರೆ.ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಬುಧವಾರ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಮುಖ್ಯಮಂತ್ರಿಗಳು, ತಾವು ಯಡಿಯೂರಪ್ಪ ಅವರ ಸರ್ಕಾರದಲ್ಲಿ ನೀರಾವರಿ ಸಚಿವರಾಗಿದ್ದಾಗ ಹೆಬ್ಬೂರು- ಗೂಳೂರು ನೀರಾವರಿ ಯೋಜನೆಗೆ ಶಾಸಕರಾಗಿ ಸುರೇಶಗೌಡರು ಅನುಮೋದನೆ ಪಡೆದುಕೊಂಡ ಬಗ್ಗೆ ಹೇಳಿದರು.


ಕರ್ನಾಟಕದ ಮೊದಲ ಮಹತ್ವದ ಈ ಏತ ನೀರಾವರಿ ಯೋಜನೆಗೆ ಅಡಿಗಲ್ಲು ಹಾಕುವ ಕಾರ್ಯಕ್ರಮಕ್ಕೆ ಸಿದ್ದಗಂಗೆಯ ಶ್ರೀ ಶಿವಕುಮಾರ ಸ್ವಾಮೀಜಿ, ಅದಿ ಚುಂಚ‌ನಗಿರಿಯ ಶ್ರೀ ಬಾಲ ಗಂಗಾಧರನಾಥ ಸ್ವಾಮೀಜಿ ಸಾಕ್ಷಿಗಳಾಗಿದ್ದರು. ಯೋಜನೆಯ ಉದ್ಘಾಟನೆಗೂ ಈ ಇಬ್ಬರೂ ಬಂದಿದ್ದರು. ಸುರೇಶಗೌಡರು ಜನರ ಮನಸ್ಸಿನಲ್ಲಿರುವ ಶಾಸಕ. ಕಳೆದ ಸಲ ಅವರು ಸೋಲುವಂತಿರಲಿಲ್ಲ. ಆದರೆ ಕೆಲವೊಮ್ಮೆ ಹೀಗಾಗುತ್ತದೆ ಎಂದರು.


ನಾನೂ ನನ್ನ ಕ್ಷೇತ್ರದಲ್ಲಿ ಮಾಡದಷ್ಟು ಕೆಲಸ ಸುರೇಶಗೌಡರು ಮಾಡಿದ್ದಾರೆ. ಈ ಸಲ ಅವರು 25 ಸಾವಿರ ಮತಗಳ ಅಂತರದಿಂದ ಗೆಲವು ಸಾಧಿಸುವುದು ಖಚಿತ ಎಂದರು.
ಬಿಜೆಪಿ ಕಾರ್ಯಕರ್ತರು ನಾನೇ ಸುರೇಶಗೌಡ ಎಂಬ ಮನೋಭಾವದಲ್ಲಿ ಚುನಾವಣೆಯಲ್ಲಿ ಕೆಲಸ ಮಾಡಬೇಕು ಎಂದು ಕರೆ ನೀಡಿದರು.RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?