Publicstory
ತುರುವೇಕೆರೆ: ಕಬ್ಬಳ್ಳಿ ಬಸವೇಶ್ವರ ಸ್ವಾಮಿಯ ಮಾಲಾಧಾರಿಗಳ ಸಮಿತಿಯ ವತಿಯಿಂದ ಕಬ್ಬಳ್ಳಿ ಬಸವೇಶ್ವರ ಸ್ವಾಮಿ ಸನ್ನಿಧಿಗೆ ತಾಲ್ಲೂಕಿನ ಸಂಗ್ಲಾಪುರ ಗೇಟ್ ನಿಂದ ನೂರಾರು ಭಕ್ತರು ಪಾದಯಾತ್ರೆಯನ್ನು ಕೈಗೊಂಡರು.
ತಾಲ್ಲೂಕಿನ ಆಸುಪಾಸಿನ ಭಕ್ತರು ಕಳೆದ 25 ವರ್ಷಗಳಿಂದ ಕಬ್ಬಳ್ಳಿ ಬಸವೇಶ್ವರನಿಗೆ ಚಿಕ ಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಮಾಲೆ ಧರಿಸುತ್ತಾ ಬಂದಿದ್ದಾರೆ.
ಬುಧವಾರ ಬೆಳಗ್ಗೆ ಮಾಲೆಧಾರಿಗಳಿಂದ ಹುಣ್ಣೆಬಸವೇಶ್ವರ ಸ್ವಾಮಿಗೆ ಹೂವಿನ ಅಲಂಕಾರ ಮಾಡಿ ಪೂಜೆ ಸಲ್ಲಿಸಿದರು.
ತದನಂತರ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ವೀರಗಾಸೆ ಕುಣಿತ ಮತ್ತು ಡೋಲು ಬಡಿತದೊಂದಿಗೆ ಮೆರವಣಿಗೆ ಮಾಡಲಾಯಿತು.
ಇದೇ ವೇಳೆ ಹುಲಿಕೆರೆ ಪ್ರಕಾಶ್ ಅವರಿಂದ ಆಕರ್ಷಕವಾದ ಎತ್ತುಗಳ ಮೆರವಣಿಗೆಯನ್ನು ಮಾಡಲಾಯಿತು. ನಂತರ ಮಧ್ಯಾಹ್ನ ಪೂಜೆಗೆ ಬಂದಿದ್ದ ಸಾರ್ವಜನಿಕರಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.
ಈ ಸಂದರ್ಭದಲ್ಲಿ ಶ್ರೀಸಾಯಿ ಎಲೆಕ್ಟ್ರಿಕಲ್ ಮಾಲೀಕ ತೇಜು, ತುಮಕೂರಿನ ಬಿಜೆಪಿ ಮುಖಂಡ ರವಿ ಗೌಡ, ಮಾಲಾಧಾರಿ ಸಮಿತಿಯ ಪದಾಧಿಕಾರಿಗಳಾದ ಸಂಗಲಾಪುರ ಶಂಕರಯ್ಯ, ಶಿವಣ್ಣ, ಬಸವಣ್ಣ ಸೇರಿದಂತೆ ಹಲವರು ಉಪಸ್ಥಿತರಿದ್ದರು.