ಪಾವಗಡ: ಆರ್ಥಿಕವಾಗಿ ಹಿಂದುಳಿದಿರುವ ಪತ್ರಿಕಾ ವಿತರಕರ ಶಿಕ್ಷಣಕ್ಕೆ ಅಗತ್ಯ ಸಹಕಾರ ನೀಡಲಾಗುವುದು ಎಂದು ರಾಮಕೃಷ್ಣ ಸೇವಾಶ್ರಮದ ಅಧ್ಯಕ್ಷ ಸ್ವಾಮಿ ಜಪಾನಂದ ಜಿ ತಿಳಿಸಿದರು.
ಪಟ್ಟಣದ ರಾಮಕೃಷ್ಣಾ ಸೇವಾಶ್ರಮದಲ್ಲಿ ಭಾನುವಾರ ನಡೆದ ಹೊದಿಕೆ ವಿತರಣಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮಧುಗಿರಿ ತಾಲ್ಲೂಕಿನ ವಿತರಕರಿಗೂ ಹೊದಿಕೆ ವಿತರಿಸುವ ಯೋಜನೆ ಇದೆ. ಸೋಮವಾರ ರಾತ್ರಿ ವಿತರಕರಿಗೆ ಹೊದಿಕೆ ವಿತರಿಸಲಾಗುವುದು ಎಂದರು.
ಆಶ್ರಮದ ಕಾರ್ಯಗಳನ್ನು ಅವಲೋಕಿಸಿ ಪ್ರಧಾನಿ ನರೇಂದ್ರ ಮೋದಿ ಅವರು ಅಭಿನಂದನಾ ಪತ್ರವನ್ನು ಬರೆದಿರುವುದು ಸಂತಸ ತಂದಿದೆ. ಶ್ರೀರಕ್ಷಾ ಯೋಜನೆಯಡಿ ಸುಮಾರು 5ಸಾವಿರಕ್ಕೂ ಹೆಚ್ಚಿನ ನಿರ್ಗತಿಕರಿಗೆ ಹೊದಿಕೆ ವಿತರಿಸಲಾಗಿದೆ. ಇನ್ನು ಹೆಚ್ಚಿನ ಸಂಖ್ಯೆಯ ಜನರಿಗೆ ಹೊದಿಕೆ ವಿತರಿಸುವ ಯೋಜನೆ ಇದೆ ಎಂದರು.