Sunday, December 7, 2025
Google search engine
Home Blog Page 18

ಕೊಬ್ಬರಿ ಖರೀದಿ: ಬೆಮೆಲ್ ಹೇಳಿದ್ದೇನು?

0

ತುರುವೇಕೆರೆ: ನಫೆಡ್ ಕೊಬ್ಬರಿ ಖರೀದಿ ನೋಂದಣಿ ಪ್ರಕ್ರಿಯೆಯನ್ನು ದಿಢೀರ್ ನಿಲ್ಲಿಸಿರುವುದರಿಂದ ತಾಲ್ಲೂಕಿನ ರೈತರಿಗೆ ಬಾರಿ ಅನ್ಯಾಯವಾಗಿದ್ದು ಕೇಂದ್ರಸರ್ಕಾರ ಕೂಡಲೇ ನಫೆಡ್ ನೋಂದಣಿ ಅವಧಿಯನ್ನು ವಿಸ್ತರಿಬೇಕೆಂದು ವಿಧಾನ ಪರಿಷತ್ ಮಾಜಿ ಸದಸ್ಯ ಬೆಮೆಲ್ ಕಾಂತರಾಜು ಆಗ್ರಹಿಸಿದ್ದಾರೆ.

ಪಟ್ಟಣದ ಮಾಯಸಂದ್ರ ರಸ್ತೆಯಲ್ಲಿರುವ ಕಾಂಗ್ರೆಸ್ ಕಚೇರಿಯಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಅವರು ಕಳೆದ ಎರಡು ವರ್ಷಗಳಿಂದ ಕೊಬ್ಬರಿ ಬೆಲೆ ಪಾತಾಳಕಂಡಿದ್ದು ಕೊಬ್ಬರಿಯನ್ನೇ ನಂಬಿ ಬದುಕುತ್ತಿರುವ ರೈತರ ಬದುಕು ಬೀದಿಗೆ ಬಂದಿದೆ.

ರಾಜ್ಯ ಸರ್ಕಾರ ಸೇರಿದಂತೆ ಹಲವು ರೈತ ಮುಖಂಡರುಗಳು ಕೊಬ್ಬರಿಗೆ ಬೆಂಬಲ ಬೆಲೆಯನ್ನು ಘೋಷಿಸಬೇಕು ಹಾಗು ನಫೆಡ್ ಕೇಂದ್ರ ತೆರೆಯ ಬೇಕೆಂದು ಮನವಿ ಮಾಡುತ್ತಾ ಬಂದಿದ್ದರ ಪರಿಣಾಮವಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಹಾಯ ದನ ಸೇರಿ ಕ್ವಿಂಟಾಲ್ಗೆ 13500 ನೀಡುವುದಾಗಿ ಹೇಳಿ ನಫೆಡ್ ಖರೀದಿ ಕೇಂದ್ರವನ್ನು ಸೋಮವಾರ ತೆರೆಯಲಾಗಿತು. ಆದರೆ ನಫೆಡ್ ಅಧಿಕಾರಿಗಳ ನಿರ್ಲಕ್ಷ್ಯತನದಿಂದ ಸರ್ವರ್ ಸೇರಿದಂತೆ ಹಲವು ಸಮಸ್ಯೆಗಳು ತಲೆದೋರಿ ಸಾಕಷ್ಟು ಮಂದಿ ರೈತರು ನಫೆಡ್ ಕೇಂದ್ರದ ಬಳಿ ಕಾದು ಕುಳಿತರೂ ನೋಂದಿಣಿಯ ಅವಕಾಶದಿಂದ ವಂಚಿತರಾಗಿದ್ದಾರೆ.

ನಫೆಡ್ ಅಧಿಕಾರಿಗಳು ಜನಸಂದಣಿ ಹೆಚ್ಚಾಗುತ್ತದೆಂದು ಹೋಬಳಿ ಕೇಂದ್ರದಲ್ಲಿ ನಫೆಡ್ ಸೆಂಟರ್ ಮಾಡುತ್ತೇವೆಂದು ಕಾಲಹರಣ ಮಾಡಿ ಈಗ ಮೂರೇ ದಿನಕ್ಕೆ ನೋಂದಣಿ ಪ್ರಕ್ರಿಯೆ ಮುಗಿಸಿದ್ದಾರೆಂದು ಸಿಡಿಮಿಡಿಗೊಂಡರು.

ಜಿಲ್ಲಾಧಿಕಾರಿಗಳು, ನಫೆಡ್ ಎಂ.ಡಿ ಸೇರಿದಂತೆ ತಾಲ್ಲೂಕು ಮಟ್ಟದ ಅಧಿಕಾರಿಗಳು ರೈತರಿಗೆ ನಫೆಡ್ ತೆರೆಯುವ ಬಗ್ಗೆ ವ್ಯವಸ್ಥಿತವಾಗಿ ಪ್ರಚಾರ ನಡೆಸಿಲ್ಲ. ಸರ್ವರ್ ಸಮಸ್ಯೆ ಎಂದೇ ಮೂರ್ನಾಲ್ಕು ದಿನ ವಿಳಂಬ ಮಾಡಿದರು ರೈತರ ಸಮಸ್ಯೆ ಅರಿತು ನೋಂದಣಿ ಪ್ರಕ್ರಿಯೆ ಮಾಡಿಲ್ಲವೆಂದು ದೂರಿದರು.

ಈಗ ಕೊಬ್ಬರಿಗೆ ನೀಡುತ್ತಿರುವ ಬೆಂಬಲ ಬೆಲೆಯಿಂದ ರೈತರ ಸಮಸ್ಯೆ ನಿವಾರಣೆಯಾಗದು ಹಾಗಾಗಿ ವೈಜ್ಞಾನಿಕ ಬೆಲೆಯಾಗಿ ಕನಿಷ್ಠ 15 ರಿಂದ 20 ಸಾವಿರದ ತನಕ ಬೆಲೆ ಘೋಷಿಸಬೇಕೆಂದು ಕೇಂದ್ರ ಸರ್ಕಾರವನ್ನು ಒತ್ತಾಯಿಸುವುದಾಗಿ ಹೇಳಿದರು.

ಕೇಂದ್ರ ಸರ್ಕಾರದ ಈಚಿನ ಬಜೆಟ್ ನಲ್ಲಿ ರಾಜ್ಯಕ್ಕೆ ಅನ್ಯಾಯವಾಗಿದೆ. ಇಡೀ ದೇಶದಲ್ಲೆ ಕರ್ನಾಟಕ ಹೆಚ್ಚು ಜಿ.ಎಸ್.ಟಿ ಹಾಗು ಇನ್ನಿತರ ತೆರಿಗೆಯನ್ನು ಕಟ್ಟುತ್ತದೆ. ಆದರೆ ಬಿಜೆಪಿ ಆಡಳಿತಾ ರೂಢ ರಾಜ್ಯಗಳಿಗೆ ಮಾತ್ರ ಹೆಚ್ಚಿನ ಅನುದಾನ ನೀಡಿ ನಮ್ಮ ರಾಜ್ಯಕ್ಕೆ ಕಡಿಮೆ ಅನುದಾನ ನೀಡಿ ಮಲತಾಯಿಧೋರಣೆ ಮಾಡುತ್ತಿದೆ ಎಂದರು.

ಈ ಬಗ್ಗೆ ರಾಜ್ಯದಿಂದ ಆಯ್ಕೆಯಾಗಿರುವ ಸಂಸದರಾಗಲಿ ಅಥವಾ ಬಿಜೆಪಿ ರಾಜ್ಯಧ್ಯಕ್ಷ ವಿಜೆಯೇಂದ್ರ ಕೂಡ ತುಟಿಬಿಚ್ಚಿಲ್ಲ. ಬಿಜೆಪಿಯವರು ಧರ್ಮ, ಜಾತಿಗಳ ನಡುವೆ ಸಂಘರ್ಷ ಭಿತ್ತಿ ಜನರ ಸಾವಿನ ಮೇಲೆ ರಾಜಕಾರಣ ಮಾಡುತ್ತಿದ್ದಾರೆ. ಬಿಜೆಪಿಯವರಿಗೆ ತಾಕತ್ತಿದ್ದರೆ ಕೇಂದ್ರ ಬಳಿ ಹೋಗಿ ರಾಜ್ಯದ ಪಾಲು ತರಲಿ ಎಂದು ಸವಾಲಾಕಿದರು.

ಮುಖ್ಯ ಮಂತ್ರಿ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಸೇರಿದಂತೆ ಹಲವು ಕಾಂಗ್ರೆಸ್ ನಾಯಕರು ದೆಹಲಿಗೆ ಹೋಗಿ ರಾಜ್ಯದ ಪಾಲಿನ ಬಗ್ಗೆ ಹೋರಾಟ ಮಾಡಿ ಕೇಂದ್ರಕ್ಕೆ ಎಚ್ಚರಿಗೆ ಸಂದೇಶ ನೀಡಿದ್ದಾರೆ.

ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಸಂವಿಧಾನ ಜಾಗೃತಿ ಜಾಥ ತಾಲ್ಲೂಕಿಗೆ ಆಗಮಿಸುತ್ತಿದ್ದು ಸಂವಿಧಾನ ನಮ್ಮೆಲ್ಲರ ಹಕ್ಕು ಅದಕ್ಕೆ ಗೌರವ ಕೊಡುವ ಮೂಲಕ ತಾಲ್ಲೂಕಿನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಸೇರಿ ಹಬ್ಬದೋಪಾದಿಯಲ್ಲಿ ಸ್ವಾಗತಿಸೋಣ ಎಂದರು.

ಸಿ.ಎಸ್.ಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೊಳಾಲ ನಾಗರಾಜು ಮಾತನಾಡಿ, ತಾಲ್ಲೂಕಿನ ನಫೆಡ್ ನೋಂದಣಿ ಪ್ರಕ್ರಿಯೆಯಲ್ಲಿ ಭಾರೀ ಅವ್ಯವಹಾರ ನಡೆದಿದ್ದು ಇದಕ್ಕೆ ಕಾರಣರಾದ ಅಧಿಕಾರಿಗಳು ಬಗ್ಗೆ ತನಿಖೆ ನಡೆಸಿ ಶಿಕ್ಷೆಯಾಗ ಬೇಕು. ಮತ್ತು ಈಗಾಗಲೇ ನೋಂದಾವಣಿಯಾಗಿರುವ ಪಟ್ಟಿಯನ್ನು ವಜಾ ಮಾಡಿ ಹೊಸದಾಗಿ ನಫೆಡ್ ನೋಂದಣಿ ಪ್ರಕ್ರಿಯೆಯನ್ನು ಪ್ರಾರಂಭಿಸಬೇಕೆಂದು ಆಗ್ರಹಿಸಿದರು.

ಸುದ್ದಿ ಗೋಷ್ಠಿಯಲ್ಲಿ ಮುಖಂಡರುಗಳಾದ ಪ್ರಸನ್ನಕುಮಾರ್, ರಾಜಣ್ಣ, ನಂಜುಂಡಪ್ಪ, ಮಾಳೆಕೃಷ್ಣಪ್ಪ, ಅಪ್ಝಲ್, ಮಹೇಂದ್ರ ಇನ್ನಿತರರು ಇದ್ದರು.

ಓದುವ ಸಂಸ್ಕೃತಿ ಹರಡಲು ಲೇಖಕರ ಕರೆ

ಪರಾಗ್ ಹಾಗೂ ಬಹುರೂಪಿಯಿಂದ ಭಾಷಾಂತರ ಕಾರ್ಯಾಗಾರ

ಸಂವಿಧಾನ ಅರಿವಿಗೆ ಇರುವ ಬಾಗಿಲು. ಅರಿವು ಬದಲಾವಣೆಗೆ ಇರುವ ದಾರಿದೀಪ. ಹಾಗಾಗಿ ಓದುವ ಸಂಸ್ಕೃತಿಯನ್ನು ಹರಡಬೇಕಾದ ತುರ್ತು ನಮ್ಮ ಮುಂದಿದೆ ಎಂದು ಹಿರಿಯ ಸಾಹಿತಿ, ಭಾಷಾಂತರಕಾರರಾದ ಎಂ ಅಬ್ದುಲ್ ರೆಹಮಾನ್ ಪಾಷ ಅವರು ಅಭಿಪ್ರಾಯಪಟ್ಟರು.

‘ ಪರಾಗ್ ‘ ಸಂಸ್ಥೆ ಹಾಗೂ ‘ ಬಹುರೂಪಿ ‘ ಪ್ರಕಾಶನ ಹಮ್ಮಿಕೊಂಡಿರುವ ‘ಬಿಂಬ ಪ್ರತಿಬಿಂಬ’ ಮೂರು ದಿನಗಳ ಮಕ್ಕಳ ಕೃತಿಗಳ ಭಾಷಾಂತರ ಕಲಿಕಾ ಕಾರ್ಯಾಗಾರವನ್ನು ಉದ್ದೇಶಿಸಿ ಅವರು ಮಾತನಾಡಿದರು.

ಸಂವಿಧಾನದ ದಿನದ ಅಂಗವಾಗಿ ಸಂವಿಧಾನದ ಪೀಠಿಕೆಯನ್ನು ಅನಾವರಣ ಮಾಡಿ ಪ್ರತಿಜ್ಞಾ ವಿಧಿಯನ್ನು ಕೈಗೊಳ್ಳಲಾಯಿತು.

ಬಹುರೂಪಿ ಪ್ರಕಟಿಸಿರುವ ಗುಜ್ಜಾರ್ ಅವರ ‘ಎಲ್ಲರಿಗಾಗಿ ಅಂಬೇಡ್ಕರ್ ‘ ಸಚಿತ್ರ ಪುಸ್ತಕವನ್ನು ಬಿಡುಗಡೆ ಮಾಡಲಾಯಿತು.

ಸಂವಿಧಾನ ಜನರಿಗೆ ನೀಡಿರುವ ಭರವಸೆ ದೊಡ್ಡದು. ಈ ಭರವಸೆಯನ್ನು ಉಳಿಸಿಕೊಳ್ಳಬೇಕಾದ ತುರ್ತು ಎಲ್ಲರ ಮುಂದಿದೆ ಎಂದು ಪಾಷಾ ಅಭಿಪ್ರಾಯಪಟ್ಟರು.

ಪರಾಗ್ ಸಂಸ್ಥೆಯ ಮುಖ್ಯಸ್ಥರಾದ ಲಕ್ಷ್ಮಿ ಕರುಣಾಕರನ್ ಅವರು ಮಾತನಾಡಿ ಇಂದು ಸಂವಿಧಾನದ ಆಶಯವನ್ನು ಎಲ್ಲರೆಡೆಗೆ ಕೊಂಡೊಯ್ಯಬೇಕಾದ ತುರ್ತು ಇದೆ. ಪರಾಗ್ ಮಕ್ಕಳ ಕೃತಿಗಳಿಗೆ ಪ್ರೋತ್ಸಾಹ ನೀಡುವ ಮೂಲಕ ಅದನ್ನು ಯಶಸ್ವಿಯಾಗಿ ನಿರ್ವಹಿಸುತ್ತಿದೆ ಎಂದರು

ಅಂಬೇಡ್ಕರ್ ಅವರ ಕಾಲಾನುಕಾಲದ ಹೇಳಿಕೆಗಳ ಮೂಲಕ ಅವರ ಮಹತ್ವವನ್ನು ಮನಗಾಣಿಸುವ ಪ್ರಯತ್ನವನ್ನು ಎಲ್ಲರಿಗಾಗಿ ಅಂಬೇಡ್ಕರ್ ಕೃತಿಯ ಮೂಲಕ ಮಾಡಲಾಗಿದೆ ಎಂದು ಬಹುರೂಪಿ ಸಹ ಸಂಸ್ಥಾಪಕರಾದ ಶ್ರೀಜಾ ವಿ. ಎನ್. ತಿಳಿಸಿದರು.

ಮಕ್ಕಳ ಸಾಹಿತ್ಯ ತಜ್ಞರಾದ ತೇಜಸ್ವಿ ಶಿವಾನಂದ್, ಪರಾಗ್ ನ ತುಹಿನಾ ಶರ್ಮ, ವಿವೇಕ್, ಬಹುರೂಪಿಯ ಜಿ ಎನ್ ಮೋಹನ್ ಉಪಸ್ಥಿತರಿದ್ದರು.

ಪರಾಗ್ ಹಾಗೂ ಬಹುರೂಪಿ ಪ್ರಕಾಶನ ಜಂಟಿಯಾಗಿ ಹಮ್ಮಿಕೊಂಡಿದ್ದ ಮಕ್ಕಳ ಕೃತಿಗಳ ಭಾಷಾಂತರ ಕಾರ್ಯಾಗಾರವನ್ನು ಹಿರಿಯ ಸಾಹಿತಿ ಎಂ ಅಬ್ದುಲ್ ರೆಹಮಾನ್ ಪಾಷ ಉದ್ಘಾಟಿಸಿದರು. ಚಿತ್ರದಲ್ಲಿ ಮಕ್ಕಳ ಸಾಹಿತ್ಯ ತಜ್ಞರಾದ ತೇಜಸ್ವಿ ಶಿವಾನಂದ್, ಪರಾಗ್ ನ ಲಕ್ಷ್ಮಿ ಕರುಣಾಕರನ್, ಬಹುರೂಪಿಯ ಶ್ರೀಜಾ ವಿ ಎನ್ ಹಾಗೂ ಜಿ ಎನ್ ಮೋಹನ್ ಇದ್ದಾರೆ.

ಚಾಕುವಳ್ಳಿಗೆ ಬಂತು ಶುದ್ಧ ಕುಡಿಯುವ ನೀರು

ಅಮ್ಮಸಂದ್ರ ಹೈಡಲ್ ಬರ್ಗ್ ಸಿಮೆಂಟ್ ಕಾರ್ಖಾನೆಯಿಂದ ಚಾಕುವಳ್ಳಿಯಲ್ಲಿ ಶುದ್ದ ಕುಡಿಯುವ ನೀರಿನ ಘಟಕಕ್ಕೆ ಸ್ಥಾಪನೆ

ತುರುವೇಕೆರೆ: ತಾಲ್ಲೂಕಿನಾದ್ಯಂತ ಸಾಮಾಜಿಕ,ಆರೋಗ್ಯ, ಶಿಕ್ಷಣ ಸೇರಿದಂತೆ ಹಲವು ಜನುಪಯೋಗಿ ಸೇವಾ ಚಟುವಟಿಕೆಗಳನ್ನು ಪ್ರತಿ ವರ್ಷವೂ ಅಮ್ಮಸಂದ್ರ ಹೈಡಲ್ ಬರ್ಗ್ ಸಿಮೆಂಟ್ ಇಂಡಿಯಾದಿಂದ ಮಾಡಲಾಗುತ್ತಿದೆ ಎಂದು ಕಾರ್ಖಾನೆಯ ಮುಖ್ಯಸ್ಥ ಪಿ.ಎಸ್.ಮೂರ್ತಿ ತಿಳಿಸಿದರು.

ತಾಲ್ಲೂಕಿನ ದಂಡಿನಶಿವರ ಹೋಬಳಿಯ ಅಮ್ಮಸಂದ್ರ ಹೈಡಲ್ ಬರ್ಗ್ ಸಿಮೆಂಟ್ ಇಂಡಿಯಾ ವತಿಯಿಂದ ಸಿ.ಎಸ್.ಆರ್ ಯೋಜನೆಯಡಿಯಲ್ಲಿ ಚಾಕುವಳ್ಳಿ ಗ್ರಾಮದಲ್ಲಿ ಶುದ್ದ ಕುಡಿಯುವ ನೀರಿನ ಘಟಕಕ್ಕೆ ಬುಧವಾರ ಚಾಲನೆ ನೀಡಿ ಮಾತನಾಡಿದರು.

ಚಾಕುವಳ್ಳಿ ಗ್ರಾಮದಲ್ಲಿ ಸುಮಾರು ಒಂದು ನೂರು ಮನೆಗಳಿವೆ. ಸುಮಾರು 800 ಜನರು ವಾಸಿಸುತ್ತಿದ್ದಾರೆ. ಗ್ರಾಮಸ್ಥರಿಂದ ಹಲವು ಬಾರಿ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಿಕೊಡಬೇಂದು ಮನವಿ ಮಾಡಿದ್ದರು. ಈಗಾಗಲೇ ಬೇಸಿಗೆ ಸಮೀಪಿಸುತ್ತಿದ್ದು ಜನರಿಗೆ ಕುಡಿಯುವ ನೀರಿಗೆ ತೊಂದರೆಯಾಗಬಾರದೆಂದು ಮನಗಂಡು 3 ಲಕ್ಷ ರೂಪಾಯಿಗಳ ವೆಚ್ಚದಲ್ಲಿ ಶುದ್ದಕುಡಿಯುವ ನೀರಿನ ಘಟಕ ನಿರ್ಮಾಣ ಮಾಡಿ ಈಗ ಗ್ರಾಮಸ್ಥರ ಬಳಕೆಗೆ ಅನುವು ಮಾಡಿಕೊಟ್ಟಿದ್ದೇವೆ ಎಂದರು.

ಅಮ್ಮಸಂದ್ರ ಹೈಡಲ್ ಬರ್ಗ್ ಸಿಮೆಂಟ್ ಇಂಡಿಯಾದ ಡಿಜಿಎಂ ಎಚ್.ಆರ್.ಮಂಜುನಾಥ್ ಮಾತನಾಡಿ, ನಮ್ಮ ಪ್ಯಾಕ್ಟರಿಯಿಂದ ಈ ಭಾಗದ ಸಾವಿರಾರು ಜನರಿಗೆ ಉದ್ಯೋಗ ನೀಡಿ ಇದೀಗ ನಷ್ಟದಲ್ಲಿದ್ದರೂ ಸಿ.ಎಸ್.ಆರ್ ಯೋಜನೆಯಡಿಯಲ್ಲಿ ದಂಡಿನಶಿವರ ಪಬ್ಲಿಕ್ ಶಾಲೆಗೆ ಒಂದು ಕಟ್ಟಡ ನಿರ್ಮಾಣ ಮತ್ತು ಡೆಸ್ಕ್ ನೀಡಲಾಗಿದೆ.

ಗುಡ್ಡೇನಹಳ್ಳಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ 15 ಲಕ್ಷ ರೂಪಾಯಿಗಳ ವೆಚ್ಚದಲ್ಲಿ ಕಂಪ್ಯೂಟರ್ ಲ್ಯಾಬ್, ಸಂಪಿಗೆಹೊಸಹಳ್ಳಿ, ಮುಗಳೂರು, ಸಿಗೇಹಳ್ಳಿ ಸರ್ಕಾರಿ ಪ್ರೌಢ ಶಾಲೆಗಳಿಗೆ ಡಿಜಿಟಲ್ ಕೊಠಡಿಗಳ ನಿರ್ಮಾಣ, ಇಡೀ ತಾಲ್ಲೂಕಿನ ಗ್ರಾಮೀಣ ಶಾಲೆಗಳಿಗೆ 500 ಡೆಸ್ಕ್, ಅಂಗನವಾಡಿ ಕೇಂದ್ರಗಳಿಗೆ ಸಾಮಗ್ರಿ ನೀಡುವುದು ಸೇರಿದಂತೆ ಹಲವು ಸೇವೆಗಳನ್ನ ಒದಗಿಸುತ್ತಾ ಬಂದಿದ್ದೇವೆ. ಅಮ್ಮಸಂದ್ರ ಮತ್ತು ಕೊಂಡ್ಲಿ ಕ್ರಾಸ್ ನಲ್ಲಿ ಬೃಹತ್ ವೈದ್ಯಕೀಯ ಮತ್ತು ಆರೋಗ್ಯ ತಪಸಣಾ ಶಿಬಿರವನ್ನು ಮಾಡಲಾಗಿದೆ. ಶಾಲೆಗಳಿಗೆ ಪೀಠೋಪಕರಣಗಳು, ನೋಟ್ ಬುಕ್, ಬ್ಯಾಗ್ ವಿತರಿಸುತ್ತಾ ಬಂದಿದ್ದೇವೆ. ಕೋವಿಡ್ ವೇಳೆ ಫುಡ್ ಕಿಟ್ಟಿಗಳನ್ನು ಸಹ ವಿತರಣೆ ಮಾಡಿದ್ದು ಹೀಗೆ ಸಾಕಷ್ಟು ಕಾರ್ಯಗಳು ಮಾಡುತ್ತಾ ಬಂದಿದ್ದೇವೆ ಎಂದರು.

ಈ ಸಂದರ್ಭಲ್ಲಿ ಹಡವನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಯೋಗೀಶ್, ಪಿಡಿಒ ಎನ್.ರವಿ, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರಾದ ಸುಧಾರಂಗಸ್ವಾಮಿ, ಗ್ರಾಮದ ಮುಖಂಡರುಗಳಾದ ಗೋಪಾಲ್ , ನಾಗರಾಜು, ಸಂಪತ್, ಮಧು ಸೇರಿದಂತೆ ಕಾರ್ಖಾನೆಯ ಸಿಬ್ಬಂದಿಗಳು, ಗ್ರಾಮಸ್ಥರು ಉಪಸ್ಥಿತರಿದ್ದರು.

ಮಕ್ಕಳ ಶ್ರೇಯೋಭಿವೃದ್ಧಿಗೆ ಶ್ರಮಿಸಲಿ

ಶಿಕ್ಷಕರು ತಮ್ಮ ಕೆಲಸಗಳಿಗೆ ಕಛೇರಿಗೆ ಅಲೆಯದೆ, ತಮಗೆ ದೊರೆಯುವ ಬೋಧನಾ ಸಮಯವನ್ನು ಸಂಪೂರ್ಣವಾಗಿ ಬಳಸಿಕೊಂಡು, ಮಕ್ಕಳ ಶ್ರೇಯೋಭಿವೃದ್ಧಿಗೆ ಶ್ರಮಿಸಲಿ ಎಂಬ ಉದ್ದೇಶದಿಂದ ಗುರುಸ್ಪಂದನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಎನ್.ಕೃಷ್ಣಪ್ಪ ಹೇಳಿದರು.


ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ವತಿಯಿಂದ ಬುಕ್ಕಾಪಟ್ಟಣ ಸರ್ಕಾರಿ ಪ್ರೌಢಶಾಲೆಯಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಗುರುಸ್ಪಂದನಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ನೌಕರನಿಗೂ ಅವರ ಸೇವಾ ವಹಿ ಹಾಗೂ ಸಿಗುವ ಸೌಲಭ್ಯಕ್ಕೆ ಸಂಬಂಧಿಸಿದ ಅನೇಕ ಮಾಹಿತಿಗಳನ್ನು ಪಡೆಯಬೇಕೆಂಬ ಉದ್ದೇಶದಿಂದ ಇಂತಹ ಕಾರ್ಯಕ್ರಮಗಳು ಅವಶ್ಯಕ. ಸೇವಾ ಸೌಲಭ್ಯಗಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಸಿಬ್ಬಂದಿಗಳು ಪರಿಶೀಲಿಸಿ, ಸ್ಥಳದಲ್ಲೇ ಪರಿಹಾರ ಒದಗಿಸಲಾಗುತ್ತದೆ. ಎಲ್ಲಾ ಶಿಕ್ಷಕರು ತಮ್ಮ ಸೇವಾ ವಹಿಯಲ್ಲಿ ಪ್ರತಿಯೊಂದು ವಿಷಯವನ್ನೂ ತುಂಬಾ ಸೂಕ್ಷ್ಮವಾಗಿ ಪರಿಶೀಲಿಸಿಕೊಳ್ಳುವಂತೆ ತಿಳಿಸಿದರು.


ವಿವಿಧ ವಿಭಾಗಗಳಲ್ಲಿ ಶಿಕ್ಷಕರಿಗೆ ಸ್ಥಳಾವಕಾಶದ ವ್ಯವಸ್ಥೆ ಮಾಡಲಾಗಿತ್ತು. ಶಿಕ್ಷಕರು ತಮ್ಮ ಸೇವಾ ವಹಿಯಲ್ಲಿ ನಾಮನಿರ್ದೇಶನ, ಕುಟುಂಬ ಸದಸ್ಯರ ವಿವರ, ಕಾಲಮಿತಿ ವೇತನ ಬಡ್ತಿ, ಗಳಿಕೆ ರಜೆ ನಮೂದು, ಸೇವಾ ಬಡ್ತಿ, ಆರ್ಥಿಕ ಸೌಲಭ್ಯ, ಮುಂತಾದ ಅಂಶಗಳನ್ನು ಪರಿಶೀಲಿಸಿ, ಅಧಿಕಾರಿಗಳಿಂದ ನಮೂದು ಮಾಡಿಸಿಕೊಂಡು, ಎಲ್ಲಾ ಸಮಸ್ಯೆಗಳನ್ನು ಸ್ಥಳದಲ್ಲಿಯೇ ಪರಿಹಾರ ಕಂಡುಕೊಂಡರು.
ಕಾರ್ಯಕ್ರಮದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದ ಪತ್ರಾಂಕಿತ ವ್ಯವಸ್ಥಾಪಕ ಕೆ.ಶಿವಪ್ರಸಾದ್‌, ಅಧೀಕ್ಷಕ ಕೆ.ಎಚ್.ಜಯರಾಮು, ಪ್ರೌಢಶಾಲಾ ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷ ಮೂರ್ತಪ್ಪ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಹನುಮಂತರಾಜು, ಕಾರ್ಯದರ್ಶಿ ಗೀತಾ, ನಿರ್ದೇಶಕರಾದ ಸಿ.ಎಂ.ಮಲ್ಲೇಶ್‌, ಆರ್.ದೇವರಾಜು, ಪ್ರಭಾಕರ್‌, ಶಿಕ್ಷಣ ಸಂಯೋಜಕ ಎಂ.ಅಣ್ಣಯ್ಯ, ಹೋಬಳಿಯ ಎಲ್ಲಾ ಸಿ.ಆರ್.ಪಿ.ಗಳು ಹಾಜರಿದ್ದರು.

ಸಂಬಳ ತಾರತಮ್ಯ; ಶಾಸಕ ಕೃಷ್ಣಪ್ಪ ಗರಂ

ತುರುವೇಕೆರೆ:’ಪ್ರಸ್ತುತ ದಿನಗಳ ಬೆಲೆಗೆ ಅನುಗುಣವಾಗಿ ಸರ್ಕಾರಿ ನೌಕರರಿಗೆ ಸಂಬಳವನ್ನು ಕೊಡಬೇಕೆಂಬುದು ಸಂವಿಧಾನದಲ್ಲೇ ಹೇಳಿರುವಾಗ ಸರ್ಕಾರಗಳು ಕೇಂದ್ರಕ್ಕೆ ಒಂದು ಮಾದರಿ, ರಾಜ್ಯಕ್ಕೆ ಒಂದು ಮಾದರಿ ವೇತನ ಅಂತ ತಾರತಮ್ಯ ಮಾಡುವುದು ಅಸಂವಿಧಾನಿಕ ನಡೆ ಎಂದು ಸರ್ಕಾರಿ ನೌಕರರ ಸಂಘದ ಮಾಜಿ ರಾಜ್ಯ ಅಧ್ಯಕ್ಷ ಹಾಗು ಶಾಸಕ ಎಂ.ಟಿ.ಕೃಷ್ಣಪ್ಪ ಎಂದು ಪ್ರತಿಪಾದಿಸಿದರು.’

ಪಟ್ಟಣದ ಮಾಯಸಂದ್ರ ರಸ್ತೆಯಲ್ಲಿನ ತಾಲ್ಲೂಕು ಸರ್ಕಾರಿ ನೌಕರರ ಸಂಘದ ಸಮುದಾಯ ಭವನದ ಶಂಕು ಸಂಸ್ಥಾಪನೆ ಹಾಗು ಹಳೆಪಿಂಚಣಿ ಯೋಜನೆ ಸೇರಿದಂತೆ ವಿವಿಧ ಬೇಡಿಕೆಗಳ ಮನವಿ ಪತ್ರ ಸ್ವೀಕರಿಸಿ ಶುಕ್ರವಾರ ಸಂಜೆ ಮಾತನಾಡಿದರು.

ಬಿ.ಎಸ್.ಯಡಿಯೂರಪ್ಪನವರು ಮುಖ್ಯ ಮಂತ್ರಿಯಾಗಿದ್ದಾಗ ಸರ್ಕಾರಿ ನೌಕರರ ಸಂಬಳದ ವಿಚಾರದಲ್ಲಿ ಉದಾರ ಮನೋಭಾವನೆ ತೋರುತ್ತಿದ್ದರು ಆದರೆ ಈಗಿರುವ ಮುಖ್ಯ ಮಂತ್ರಿಗಳು ಕಂಜೂಸ್ ಗಿರಾಕಿ ಎಂದು ಲೇವಡಿ ಮಾಡಿದರು.

ಸಕರ್ಾರಿ ನೌಕರರಿಗೆ ಸಂಬಳಬಿಟ್ಟರೆ ಬೇರೆ ಸವಲತ್ತು ಇಲ್ಲ. ರಾಜ್ಯದ ಸರ್ಕಾರಿ ನೌಕರರು ಸುಮಾರು 140 ಲಕ್ಷ ಕೋಟಿಗೂ ಅಧಿಕ ತೆರಿಗೆ ಕಟ್ಟುತ್ತಾರೆ. ಹೀಗಿರುವಾಗ ಸರ್ಕಾರ ನೌಕರರಿಗೆ ಸಂಬಳಕೊಡಲು ಏನು ಕಷ್ಟ. ಅಲ್ಲದೆ 7ನೇ ವೇತನ ಆಯೋಗವನ್ನು ಶೀಘ್ರ ಜಾರಿ ಮಾಡುವ ಬಗ್ಗೆ ಮುಖ್ಯ ಮಂತ್ರಿಗಳು ನಿರ್ಲಕ್ಷ್ಯ ವಹಿಸಿರುವುದು ಆಶ್ಚರ್ಯ ತಂದಿದೆ. ವಿಧಾನ ಸಭೆಯಲ್ಲಿ 7ನೇ ವೇತನ ಆಯೋಗದ ಬಗ್ಗೆ ಪ್ರಸ್ತಾಪಿಸುವೆ.

ಸರ್ಕಾರಿ ನೌಕರರಿಗಿಂತ ಖಾಸಗಿ ಕಂಪನಿಗಳಲ್ಲಿ ಹೆಚ್ಚು ಸಂಬಳ ಕೊಡುವಾಗಿ ಎಲ್ಲರೂ ಸರ್ಕಾರಿ ಕೆಲಸಕ್ಕೆ ಏತಕ್ಕೆ ಸೇರುತ್ತಾ ಅವರು ನಿವೃತ್ತಿಯ ನಂತರ ಜೀವನೋಪಾಯಕ್ಕೆ ಪಿಂಚಣಿ ಸಿಗುತ್ತದೆ ಎಂಬ ಉದ್ದೇಶದಿಂದ. ಪಿಂಚಣಿಕೊಡುವ ವ್ಯವಸ್ಥೆ ಬ್ರಿಟಿಷರ ಕಾಲದಿಂದಲೂ ಬಂದದ್ದು. ಕೆಲವು ಸಕರ್ಾರಿ ಅಧಿಕಾರಿಗಳು, ನೌಕರರು ಹೆತ್ತವರನ್ನು ವೃದ್ಧಾಶ್ರಮಕ್ಕೆ ತಳ್ಳುತ್ತಾರೆ ಅಂತಹ ಸಂದರ್ಭದಲ್ಲಿ ಈ ಪಿಂಚಣಿ ಸಹಾಯಕ್ಕೆ ಬರಲಿದೆ ಹಾಗಾಗಿ ಹಳೆಪಿಂಚಣಿ ನೀಡಬೇಕೆಂಬುದು ನನ್ನ ಆಗ್ರಹವಾಗಿದೆ.

ರಾಜ್ಯದ ನೌಕರರು ಸೆಟೆದು ನಿಂತರೆ ಯಾವ ಸಕರ್ಾರಗಳೂ ಏನೂ ಮಾಡಲಾಗದು ಹಾಗಾಗಿ ನೀವು ಸರ್ಕಾರ ಕೊಡುತ್ತದೆ ಎಂದು ಕೂರದೆ ಲೋಕಸಭಾ ಚುನಾವಣೆಗೂ ಮುನ್ನವೇ ನೌಕರರು 7ನೇ ವೇತನ ಆಯೋಗ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಾಜ್ಯವ್ಯಾಪಿ ಹೋರಾಟಕ್ಕೆ ಕರೆಕೊಟ್ಟರೆ ನಿಮ್ಮ ಬೇಡಿಕೆಗಳು ಈಡೇರಲಿವೆ ಎಂದು ರಾಜ್ಯಧ್ಯಕ್ಷರಿಗೆ ಕಿವಿ ಮಾತು ಹೇಳಿದರು. ಸರ್ಕಾರ ಮಾಡುವ ಪ್ರತಿಯೊಂದು ಯೋಜನೆಗಳನ್ನು ನೌಕರರು ಮಾಡಬೇಕು ಅದುಬಿಟ್ಟು ಸಚಿವರು, ಶಾಸಕರು ಮಾಡುವುದಕ್ಕೆ ಆಗುತ್ತದಯೇ? ಸರ್ಕಾರ ನೌಕರರನ್ನು ವಿಶ್ವಾಕ್ಕೆ ತೆಗೆದುಕೊಂಡು ಮುನ್ನಡೆಯಬೇಕು.

ಬಂಗಾರಪ್ಪನವರು ಮುಖ್ಯ ಮಂತ್ರಿಗಳಾಗಿದ್ದಾಗ ಶಿಕ್ಷಣ ಇಲಾಖೆ ಸೇರಿದಂತೆ ವಿವಿಧ ಇಲಾಖಾ ನೌಕರರಿಗೆ ಮೂರು ಸ್ಟ್ಯಾಗ್ ನೆಂಟ್ ಅನ್ನು ನಾನು ಅಧ್ಯಕ್ಷನಾಗಿದ್ದಾಗ ಕೊಡಿಸಿದ್ದೆ. ಈಗ ರಾಜ್ಯದ ಸಂಘದ ಹೆಸರಿನಲ್ಲಿ 24 ಕೋಟಿ ರೂಪಾಯಿ ಇದೆ ಎಂಬುದು ಖುಷಿ ನೀಡಿದೆ. ಆದರೆ ನಾನು ಸಂಘದ ಅಧ್ಯಕ್ಷನಾಗಿದ್ದ ಅವಧಿಯಲ್ಲಿ ಟೆಲಿಪೋನ್ ಬಿಲ್ಲನ್ನು ಕಟ್ಟಲು ಸಹ ಸಂಘದಲ್ಲಿ ಹಣವಿಲ್ಲದೆ ಸ್ವಂತ ಹಣದಿಂದ ಕಟ್ಟಿದ್ದೇನೆ.

ಸತತ ಎರಡು ಬಾರಿ ಎಂ.ಟಿ.ಕೃಷ್ಣಪ್ಪ ಹಾಗು ಷಡಕ್ಷರಿಯಂತವರನ್ನು ರಾಜ್ಯ ಸಕರ್ಾರಿ ನೌಕರರ ಸಂಘದ ಅಧ್ಯಕ್ಷರನ್ನಾಗಿ ಕೊಡುಗೆಯಾಗಿ ನೀಡಿದ್ದು ತುಮಕೂರು ಜಿಲ್ಲೆ.

ತಾಲ್ಲೂಕು ಸರ್ಕಾರಿ ನೌಕರರ ಹಿತ ದೃಷ್ಟಿಯಿಂದ ಒಂದು ದೊಡ್ಡ ಚೌಟರಿ ನಿರ್ಮಿಕೊಳ್ಳಲು ಸಂಘಕ್ಕೆ ಪಟ್ಟಣದಲ್ಲಿರುವ ಸಿ.ಎ ಸೈಟ್ ಗಳಲ್ಲಿ ಅರ್ಧ ಎಕೆರೆ ಭೂಮಿಯನ್ನು ಮಂಜೂರು ಮಾಡಿಕೊಡಿ ಎಂದು ಸ್ಥಳದಲ್ಲಿದ್ದ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿಗೆ ಸೂಚಿಸಿದರು.

ನೂತನ ಭವನದಲ್ಲಿ ಐ.ಎ.ಎಸ್, ಐ.ಪಿ.ಎಸ್ ಹಾಗು ಕೆ.ಪಿ.ಎಸ್.ಸಿ ನಂತಹ ಸ್ಪಧರ್ಾತ್ಮಕ ಪರೀಕ್ಷೆಗಳಿಗೆ ನೆರವಾಗುವ ಪುಸ್ತಕಗಳ ಗ್ರಂಥಾಲಯ ಮಾಡಿ ತಾಲ್ಲೂಕಿನವರು ಉನ್ನತಮಟ್ಟದ ಅಧಿಕಾರಿಗಳಾಗಲು ಪೂರಕವಾದ ವಾತಾವರಣ ಕಲ್ಪಿಸಿ ಎಂದು ತಾಲ್ಲೂಕು ಸಂಘದ ಅಧ್ಯಕ್ಷರಿಗೆ ಕಿವಿ ಮಾತು ಹೇಳಿದರು.

ಸರ್ಕಾರಿ ನೌಕರರ ಸಂಘದ ರಾಜ್ಯಧ್ಯಕ್ಷ ಸಿ.ಎಸ್.ಷಡಕ್ಷರಿ ಮಾತನಾಡಿ, ಇಡೀ ದೇಶದಲ್ಲೇ ರಾಜ್ಯ ಸಕರ್ಾರಿ ನೌಕರರ ಸಂಘವು ಇತರೆ ಸಂಘಗಳಿಗೆ ಆಡಳಿತಾತ್ಮಕವಾಗಿ ಮಾದರಿ ಎನಿಸಿ ಇಂದು 103 ವರ್ಷಗಳ ಶತಮಾನೋತ್ಸವ ಕಂಡಿದೆ. ನಮ್ಮ ಸಂಘಟನೆ ಸರ್ಕಾರದೊಂದಿಗೆ ಹೊಂದಾಣಿಕೆ ಮಾಡಿಕೊಳ್ಳದೆ ನೌಕರರ ಪರವಾಗಿ ಕೆಲಸ ಮಾಡುತ್ತದೆ. ಸಕರ್ಾರ ಕೊಡುವ ಸಂಬಳಕ್ಕೆ ಆತ್ಮವಂಚನೆ ಮಾಡದೆ ಪ್ರಾಮಾಣಿಕ ಕಾಯಕ ಮಾಡಿದರೆ ಸಕರ್ಾರಕ್ಕೆ ಗೌರವ ಬರುತ್ತದೆ. ಅಧಿಕಾರ, ಸ್ಥಾನ ಮಾನಗಳು ಶಾಶ್ವತವಲ್ಲ ಹಾಗಾಗಿ ನಮ್ಮ ಸಾಧನೆಗಳ ಹೆಜ್ಜೆ ಗುರುತುಗಳನ್ನು ಬಿಟ್ಟು ಹೋಗಬೇಕು.

ಮಾರ್ಚ್ ಕಳೆದ ನಂತರ ಸರಣಿ ಚುನಾವಣೆಗಳು ಬರಲಿದ್ದು ಹಾಗಾಗಿ ಫೆಬ್ರವರಿ ತಿಂಗಳಲ್ಲಿ ರಾಜ್ಯ ಸಕರ್ಾರಿ ನೌಕರರ ಸಮಾವೇಶ ಹಮ್ಮಿಕೊಂಡು ಅಲ್ಲಿ 7ನೇ ವೇತನ ಆಯೋಗ, ಹಳೆಪಿಂಚಣಿ ನೀಡುವುದು, ಆರೋಗ್ಯ ಸಂಜೀವಿನ ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆಗೆ ಪ್ರಸ್ತಾವನೆ ಇಡುವುದು. ಬೇಡಿಕೆಗಳು ಈಡೇರದಿದ್ದರೆ ರಾಜ್ಯದ್ಯಂತ ಹೋರಾಟ ಹಮ್ಮಿಕೊಂಡು ನಮ್ಮ ಹಕ್ಕು ಪಡೆದೇ ತೀರುತ್ತೇವೆ ಎಂದು ಎಚ್ಚರಿಕೆ ನೀಡಿದರು.

ರಾಜ್ಯದ 6 ಕೋಟಿಯಲ್ಲಿ ಜನರಲ್ಲಿ ಒಂದು ಪರ್ಸೆಂಟ್ ಸಕರ್ಾರಿ ನೌಕರರಿದ್ದಾರೆ ಅಂತಹ ಪವಿತ್ರವಾದ ಹುದ್ದೆಗೆ ನ್ಯಾಯ ಒದಗಿಸೋಣ. ಕೋವಿಡ್ ಮತ್ತು ಪ್ರವಾಹ ಸಂದರ್ಭದಲ್ಲಿ ಸುಮಾರು 650 ಕೋಟಿ ರೂಪಾಯಿಗಳ ನೌಕರರ ಹಣವನ್ನು ಸಕರ್ಾರಕ್ಕೆ ನೀಡಿದೇವೆ. ಮುಖ್ಯ ಮಂತ್ರಿಗಳು ನಮ್ಮ ಬೇಡಿಕೆಗಳಿಗೆ ಸ್ಪಂದಿಸುವ ಭರವಸೆ ಇದೆ.

ಶಿಕ್ಷಕರ ಸಮುದಾಯ ಭವನದ ಉದ್ಘಾಟನೆಯನ್ನು ಶಾಸಕರೊಂದಿಗೆ ಹಬ್ಬ ರೂಪದಲ್ಲಿ ಆಚರಿಸಿ ಇದಕ್ಕೆ ತಗುಲುವ ವೆಚ್ಚವನ್ನು ರಾಜ್ಯ ಸಂಘದಿಂದ ಭರಿಸುತ್ತೇನೆಂದು ಹೇಳಿದರು.

ಇದೇ ವೇಳೆ ತಾಲ್ಲೂಕು ಸಕರ್ಾರಿ ನೌಕರರ ಸಂಘದ ಅಧ್ಯಕ್ಷ ನಂರಾಜುಮುನಿಯೂರು ಪ್ರಾಸ್ತಾವಿಕ ನುಡಿ ನುಡಿದರು.

ಈ ಸಂದರ್ಭದಲ್ಲಿ ರಾಜ್ಯಕಾರ್ಯಕಾರಿಣಿ ಸಮಿತಿ ಉಪಾಧ್ಯಕ್ಷರಾದ ದುಂಡಾ ಬಸವರಾಜು, ಆನೇಕೆರೆ ಹರ್ಷ, ರಾಜ್ಯ ಖಜಾಂಚಿ ತಿಮ್ಮೇಗೌಡ, ರಾಜ್ಯಕಾರ್ಯದರ್ಶಿ ಡಾ.ನಲ್ಕುಂದ್ರಿ ಸದಾನಂದ, ತಾಲ್ಲೂಕು ಸಂಘದ ಅಧ್ಯಕ್ಷ ನಂರಾಜುಮುನಿಯೂರು, ಕಾರ್ಯದರ್ಶಿ ನಟೇಶ್, ಖಜಾಂಚಿ ನಾಗರಾಜು, ತಹಶೀಲ್ದಾರ್ ವೈ.ಎಂ.ರೇಣುಕುಮಾರ್, ಜಿಲ್ಲಾ ಅಕ್ಷರದಾಸೋಹ ಅಧಿಕಾರಿ ಸುಧಾಕರ್, ಬಿ.ಇ.ಒ ಸೋಮಶೇಖರ್, ಜಿಲ್ಲಾ ಮತ್ತು ತಾಲ್ಲೂಕು ಸಂಘದ ಪದಾಧಿಕಾರಿಗಳು ಭಾಗವಹಿಸಿದ್ದರು.

ಮಿಸ್ಡ್ ಕಾಲ್ ಕೊಟ್ಟು 10 ಲಕ್ಷ ಕಳೆದುಕೊಂಡ!

0

ತುಮಕೂರು: ವ್ಯಕ್ತಿಯೊಬ್ಬರು ಮಿಸ್ಡ್ ಕಾಲ್ ಕೊಟ್ಟ ತಪ್ಪಿಗಾಗಿ 10 ಲಕ್ಷ ರೂಪಾಯಿ ಕಳೆದುಕೊಂಡ ಪರಿತಪಿಸುವಂತಾಗಿದೆ.

ತುಮಕೂರಿನ ಜಯನಗರದ ನಿವಾಸಿ ಮೋಹನ್ ಕುಮಾರ್ ಅವರ ಮೊಬೈಲ್ ಗೆ ಮೆಸೇಜ್ ಕಳುಹಿಸಿ ಪಾನ್ ಕಾರ್ಡ್ ಅಪ್ ಡೇಟ್ ಮಾಡಲು ಮೆಸೇಜ್ ಲಿಂಕ್ ಬಳಸಿ ವಿವರ ಭರ್ತಿ ಮಾಡಿ ಎಂದು ಹೇಳಲಾಗಿದೆ. ಎಸ್ ಬಿ ಐ ಹೆಸರಿನಲ್ಲಿ ಮೆಸೇಜ್ ಬಂದ ಕಾರಣ ನಂಬಿದ ಅವರು ಮೆಸೇಜ್ ಲಿಂಕ್ ಮೇಲೆ ಕ್ಲಿಕ್ ಮಾಡಿ ಆಧಾರ್ ಕಾರ್ಡ್ ನಂಬರ್ ಎಲ್ಲ ಮಾಹಿತಿ ಅಪ್ ಲೌಡ್ ಮಾಡಿದ್ದಾರೆ.

ತದನಂತರ ಅಪರಿಚಿತರು ಬ್ಯಾಂಕ್ ನಿಂದ ಕರೆ ಮಾಡುತ್ತಿದ್ದೇವೆ. ನಿಮಗೆ ಒಂದು ಮೆಸೇಜ್ ಬರಲಿದೆ. ಆ ನಂಬರಕ್ಕೆ ಮಿಸ್ ಕಾಲ್ ಕೊಡಿ ಎಂದಿದ್ದಾರೆ. ಅದರಂತೆ ಅವರು ಮಿಸ್ ಕಾಲ್ ಕೊಟ್ಟ ಬಳಿಕ ಅವರ ಖಾತೆಯಿಂದ ಹಂತ ಹಂತವಾಗಿ 10 ಲಕ್ಷ ಎಗರಿಸಿದ್ದಾರೆ. ಈ ಸಂಬಂಧ ಅವರು ಪೊಲೀಸ್ ಠಾಣೆ ಗೆ ದೂರು ನೀಡಿದ್ದಾರೆ

ಶಾಸಕ ಸುರೇಶಗೌಡ ಅವರೆಂದರೆ ನನಗ್ಯಾಕಿಷ್ಟ ಗೊತ್ತಾ?

0

ರವಿಗೌಡ, ಹಿರಿಯ ವಕೀಲರು



ಇತ್ತೀಚಿನ ದಿನಗಳಲ್ಲಿ ಕರ್ನಾಟಕ ರಾಜ್ಯ ಕಂಡ ಬಲು ಅಪರೂಪದ ರೈತ ನಾಯಕ ರೈತರ ಬವಣೆಗಳಿಗೆ ಮಿಡಿಯುವ ಮನಸ್ಸು, ತುಮಕೂರು ಗ್ರಾಮಾಂತರ ಕ್ಷೇತ್ರದಲ್ಲಿ ರೈತ ಸಮೂಹದಲ್ಲಿ ಎಂತದ್ದೇ ಅವಘಡಗಳು ನಡೆದರು ತತ್ ಕ್ಷಣದಲ್ಲಿ ನಾನಿದ್ದೇನೆ ಎಂದು ಹೆಗಲು ಕೊಡುವ ನಾಯಕ ಅದು ನಮ್ಮ ಸುರೇಶ್ ಗೌಡರು.

ಸಾಮಾನ್ಯ ರೈತ ಕುಟುಂಬದಿಂದ ಬಂದಿರುವ ಬಿ ಸುರೇಶ್ ಗೌಡರಿಗೆ ರೈತ ಸಂಕುಲದ ಮೇಲೆ ಅಪಾರ ಮಮತೆ. ರೈತರ ಅಭಿವೃದ್ಧಿಯ ಬಗ್ಗೆ ತಮ್ಮದೇ ಆದ ಚಿಂತನೆಗಳನ್ನು, ಯೋಚನೆಗಳನ್ನು ಹೊಂದಿರುವವರು. ಮಾಜಿ ಪ್ರಧಾನಿ ದೇವೇಗೌಡರಿಗೆ ಇರುವಷ್ಟೇ ರೈತರ ಅಭಿವೃದ್ಧಿ ಬಗ್ಗೆ ತಮ್ಮದೇ ಆದ ನೀಲನಕ್ಷೆ ಹೊಂದಿರುವ ಕರ್ನಾಟಕದ ಮತ್ತೊಬ್ಬ ನಾಯಕ ಎಂದರೆ ಅತಿಶಯೋಕ್ತಿ ಆಗಲಾರದು.

ಇದು ಇಂದು ನಡೆದ ಘಟನೆ. ನಮ್ಮ ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ನಿಡುವಳಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾರೆನಹಳ್ಳಿ ಗ್ರಾಮದಲ್ಲಿ ಚಿಕ್ಕಣ್ಣರವರ ಪಶುಗಳ ಶೆಡ್ಡಿಗೆ ಆಕಸ್ಮಿಕವಾಗಿ ಬೆಂಕಿ ಬಿದ್ದು ಹಸು ,ಎಮ್ಮೆ ಕರು ಹಾಗೂ ಮೇಕೆ ಸೇರಿದಂತೆ ಕೃಷಿ ಉಪಯೋಗಿ ಯಂತ್ರೋಪಕರಣಗಳು, ಅಡಿಕೆ, ಕೊಬ್ಬರಿ ಇನ್ನಿತರ ವಸ್ತುಗಳು ಸುಟ್ಟು ಕರಕಲಾದವು. ಈ ಸುದ್ದಿ ತಿಳಿಯುತ್ತಿದ್ದಂತೆ ಬೆಂಗಳೂರಿನಿಂದ ಗೌಡರು ಓಡೋಡಿ ಬಂದರು.

ಬೆಂಕಿಯಿಂದ ಆದಂತ ಅವಘಡಕ್ಕೆ ಆ ಒಂದು ರೈತ ಕುಟುಂಬಕ್ಕೆ ಧೈರ್ಯ ತುಂಬಿದರು. ನಿಮ್ಮ ಜೊತೆ ನಾನಿದ್ದೇನೆ ಎಂದು ಹೇಳಿ ವೈಯಕ್ತಿಕವಾಗಿ ಎರಡು ಲಕ್ಷ ಆರ್ಥಿಕ ಸಹಾಯ ಮಾಡಿದರು. ಸರ್ಕಾರದ ಮಟ್ಟದಲ್ಲಿ ಆಗಿರುವ ನಷ್ಟಕ್ಕೆ ಸೂಕ್ತ ಪರಿಹಾರವನ್ನು ಕೊಡಿಸುವ ಭರವಸೆ ನೀಡಿದರು.

ಪಶು ಸಂಗೋಪನೆ ಹಾಗೂ ತೋಟಗಾರಿಕೆ ಇಲಾಖೆಯ ಅಧಿಕಾರಿಗಳಿಗೆ ಸ್ಥಳದಲ್ಲಿಯೇ ಸೂಕ್ತ ನಿರ್ದೇಶನ ನೀಡಿ ಮುಂದೆ ಎಲ್ಲಿಯೂ ಈ ರೀತಿ ಆಗದಂತೆ ಎಚ್ಚರವಹಿಸಲು ಆದೇಶಿಸಿದರು. ಇಂತಹ ಘಟನೆಗಳು ಜರುಗಿದಾಗಲೆಲ್ಲ ಗೌಡರು ಅಂತಹ ರೈತ ಕುಟುಂಬದ ಸಹಾಯಕ್ಕೆ ಸದಾಕಾಲ ಏನೇ ಆದರೂ ನಾನಿರುವೆನೆಂಬ ಭರವಸೆ ಗ್ರಾಮೀಣ ಭಾಗದ ಜನರ ಜನಮಾನಸದಲ್ಲಿ ಅಚ್ಚಳಿಯದೆ ಉಳಿದಿದೆ. 🙏

ನನಗಿನ್ನು ನೆನಪಿದೆ ರಾಜಕೀಯಕ್ಕೆ ಪಾದಾರ್ಪಣೆ ಮಾಡಿದಂತ ಮೊದಲ ದಿನಗಳಲ್ಲಿ ಗೌಡರು ಗ್ರಾಮೀಣ ಭಾಗದಲ್ಲಿ ಯಾವುದೇ ಸಾವು ನೋವುಗಳ ಆದರೂ ವೈಯಕ್ತಿಕವಾಗಿ ತಮ್ಮಿಂದ ಆಗಬಹುದಾದ ಆರ್ಥಿಕ ಸಹಾಯವನ್ನು ಮಾಡುತ್ತಿದ್ದರು, ಗ್ರಾಮೀಣ ಭಾಗದ ಯಾವುದೇ ರೈತ ಕುಟುಂಬದವರು ಬೆಂಗಳೂರಿನ ಆಸ್ಪತ್ರೆಗಳಲ್ಲಿ ಅಡ್ಮಿಟ್ ಆಗಿದ್ದರೆ ಆರ್ಥಿಕ ಸಹಾಯದ ಜೊತೆ ಸಂಬಂಧಪಟ್ಟ ಡಾಕ್ಟರ್ ಗಳ ಜೊತೆ ಮಾತನಾಡಿ ನಿಗಾವಹಿಸುತ್ತಿದ್ದರು.

ದನ ಕರುಗಳು ಕುರಿ ಮೇಕೆಗಳು ಅಕಾಲಿಕ ಮರಣ ಹೊಂದಿದಾಗ ಅವುಗಳಿಗೂ ಸಹ ವೈಯಕ್ತಿಕವಾಗಿ ಆರ್ಥಿಕವಾಗಿ ಸಹಾಯ ನೀಡಿರುವುದನ್ನು ನಾನು ಕಣ್ಣಾರೆ ಕಂಡಿದ್ದೇನೆ. ಇಂತಹ ಸಮಯದಲ್ಲಿ ಕೆಲವು ಜನಪ್ರತಿನಿಧಿಗಳು ಏನು ಗೊತ್ತಿಲ್ಲದಂತೆ ಮೌನವಾಗಿರುವುದನ್ನು ಕಂಡಿದ್ದೇನೆ.

ರೈತ ಸಮುದಾಯಕ್ಕೆ ತಾನು ಸಾಕಿದ ಪ್ರಾಣಿಗಳನ್ನು ಕಳೆದುಕೊಂಡಾಗ ಆಗುವ ನೋವು ಆರ್ಥಿಕ ನಷ್ಟವನ್ನು ಸ್ವತಹ ರೈತ ಕುಟುಂಬದಿಂದ ಬಂದಿದ್ದಂತ ಗೌಡರು ಮನಗಂಡಿದ್ದರು.

ಗ್ರಾಮೀಣ ಭಾಗದ ರೈತರ ಯಾವುದಾದರೂ ಸರ್ಕಾರ ಮಟ್ಟದಲ್ಲಿ ವಿಧಾನಸೌಧದಲ್ಲಿ ಕೆಲಸ ಆಗಬೇಕಿದ್ದರೆ ಸ್ವತಹ ಅವರುಗಳನ್ನೇ secretriate ಕಾರ್ಯಾಲಯಗಳಿಗೆ ಕರೆದುಕೊಂಡು ಹೋಗಿ ಮಾಡಿಸಿಕೊಡುತ್ತಿದ್ದಿದ್ದು ಜಕ್ಕೂ ಕೂಡ ಅವರ ಅಂತಾಳದ ಧ್ವನಿ ಎಂತಹದು ಎಂದು ಎಂತಹವರು ಸಹ ಅರ್ಥಮಾಡಿಕೊಳ್ಳಬಹುದು 🙏ಗ್ರಾಮೀಣ ಭಾಗದ ರೈತರ ಬದುಕು ಅಸನಾಗಬೇಕೆಂದು ಪ್ರತಿ ಕ್ಷಣವೂ ಮಿಡಿಯುವ ಅವರ ಹೃದಯಂತರಾಳ ಅವರನ್ನು ಅರ್ಥ ಮಾಡಿಕೊಂಡವರಿಗಷ್ಟೇ ಗೊತ್ತು,

ಪ್ರತಿಯೊಬ್ಬ ರೈತನು ಸ್ವಾವಲಂಬೆಯಾಗಿ ಬದುಕಬೇಕೆಂದು ಬಯಸುವ ಗೌಡರು ರೈತರ ಮಕ್ಕಳು ವಿದ್ಯಾವಂತರಾಗಬೇಕೆಂದು ಗ್ರಾಮಾಂತರ ಕ್ಷೇತ್ರದ ಪ್ರತಿಯೊಂದು ಹಳ್ಳಿಯ ಶಾಲೆಗಳನ್ನು ಮೇಲ್ದರ್ಜೆಗೇರಿಸಿದ್ದು, ತಮ್ಮ ಕ್ಷೇತ್ರದುದ್ದಕ್ಕೂ ಪ್ರತಿಯೊಬ್ಬರಿಗೂ ಅವರ ತೋಟಗಳಿಗೆ ಒಂದು ಟ್ರಾನ್ಸ್ಫಾರ್ಮರ್ನಂತೆ ಪೈಲೆಟ್ ಪ್ರಾಜೆಕ್ಟ್ ನ ತಂದದ್ದು. ಮತ ಕ್ಷೇತ್ರದಲ್ಲಿ ಅತಿ ಮುಖ್ಯವಾಗಿ ಉತ್ತಮ ಗುಣಮಟ್ಟದ ರಸ್ತೆಗಳ ಸಂಪರ್ಕವನ್ನು ಕಲ್ಪಿಸಿದ್ದು. ಸರ್ಕಾರ ರೈತರಿಗಾಗಿ ಮೀಸಲಿಟ್ಟಿರುವ ಪ್ರತಿಯೊಂದು ಕಾರ್ಯಕ್ರಮಗಳನ್ನು ಜಾತಿ ಬೇಧ ಧರ್ಮ ಪಕ್ಷ ಬೇದಗಳನ್ನು ಮರೆತು ಪ್ರತಿಯೊಬ್ಬರಿಗೂ ನ್ಯಾಯವನ್ನು ಒದಗಿಸುವ ಗೌಡರು ಅವರಿಗೆ ಅವರೇ ಸಾಟಿ 🙏. ರಾಜ್ಯಕ್ಕೆ ಮಾದರಿಯಾದ ಇಂಥ ಶಾಸಕರಿಂದಲೇ ರಾಜ್ಯದ ಅಭಿವೃದ್ಧಿ ಭವಿಷ್ಯದ ಬಗ್ಗೆ ಕನಸು ಕಾಣಬಹುದಾಗಿದೆ.

ಸತ್ಯದ ಬಹುಮುಖ ಹುಡುಕಾಟ ನಡೆಸುವ ವಿಭಿನ್ನ ಕಥನ ಪ್ರಯೋಗಗಳು


ತುಮಕೂರು: ‘ನಕ್ಷತ್ರಕ್ಕಂಟಿದ ಮುಟ್ಟಿನ ನೆತ್ತರು’ ಸಂಕಲನದ ಕಥೆಗಳು ಸತ್ಯವನ್ನು ಬಹು ಆಯಾಮಗಳಿಂದ ಪರೀಕ್ಷಿಸಲು ಪ್ರಯತ್ನಿಸುತ್ತವೆ. ಜಾನಪದ, ಪೌರಾಣಿಕ, ಅಭಿಜಾತ ಸಾಹಿತ್ಯದ ಕಥನಗಳನ್ನು ಮರುವಿಶ್ಲೇಷಣೆಗೆ ಒಳಪಡಿಸಿ ಶೋಧನೆ ನಡೆಸುವ ಗುಣ ಈ ಸಂಕಲನದ ಉದ್ದಕ್ಕೂ ಕಾಣುತ್ತದೆ ಎಂದು ಹಿರಿಯ ಲೇಖಕ ಅಗ್ರಾಹಾರ ಕೃಷ್ಣಮೂರ್ತಿ ತಿಳಿಸಿದರು.

ನಗರದ ಕನ್ನಡ ಭವನ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಗೋವಿಂದರಾಜು ಎಂ ಕಲ್ಲೂರು ಅವರ ‘ನಕ್ಷತ್ರಕ್ಕಂಟಿದ ಮುಟ್ಟಿನ ನೆತ್ತರು’ ಕಥಾಸಂಕಲನ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ಗೋವಿಂದರಾಜು ತಮ್ಮ ಕಥೆಗಳ ಮೂಲಕ ಪರಂಪರೆಯ ಕಥನಗಳನ್ನು ಸಮಕಾಲೀನ ಸಂದರ್ಭದ ತಿಳುವಳಿಕೆಯ ಜೊತೆಗಿಟ್ಟು ವಿಶ್ಲೇಷಣೆ ನಡೆಸಲು ಪ್ರಯತ್ನಿಸುತ್ತಾರೆ. ಸಮಾಜದಲ್ಲಿರುವ ರೂಢಿ ಕಂದಾಚಾರಗಳನ್ನು ಪ್ರಶ್ನೆಮಾಡುವ ಗುಣ, ಕಥೆ ಹೇಳಲು ಬಳಸಿಕೊಂಡ ಭಾಷೆ, ತಂತ್ರಗಾರಿಕೆ ಈ ಸಂಕಲನವನ್ನು ವಿಶಿಷ್ಟವಾಗಿಸಿದೆ ಎಂದರು.

ವಿಮರ್ಶಕ ರವಿಕುಮಾರ್ ನೀಹ ಮಾತನಾಡಿ ಕಥಾಸ್ಪರ್ಧೆಗಳು, ಸೃಜನಶೀಲ ಚಟುವಟಿಕೆಗಳು ವಿಮರ್ಶೆ, ಸಂಶೋಧನೆಗೆ ಹಿನ್ನೆಡೆ ಉಂಟುಮಾಡುತ್ತವೆ ಎಂಬ ಮಾತುಗಳ ನಡುವೆ ಇಲ್ಲಿನ ಕಥೆಗಳು ಸಂಶೋಧನಾತ್ಮಕ ಸೃಜನೆಗಳಾಗಿವೆ. ಈ ಸಂಕಲನ ಸಂಶೋಧನೆ-ವಿಮರ್ಶೆ-ಸೃಜನಶೀಲತೆಯ ನಡುವಿನ ಗೆರೆಯನ್ನು ಅಳಿಸಿಹಾಕಿದೆ. ಇವು ವಿಮರ್ಶಾ ಸಂಶೋಧನಾತ್ಮಕ ಕಥೆಗಳು. ಎಂಟು ಕಥೆಗಳನ್ನು ಹೊಂದಿರುವ ಈ ಸಂಕಲನದಲ್ಲಿ ಏಕ ಮಾದರಿಯ ಸಂಸ್ಕೃತಿ ಹೇರಿಕೆಗೆ ಸಾಹಿತ್ಯಿಕ ಪ್ರತಿರೋಧವಿದೆ. ಇಡೀ ಸಂಕಲನದ ಉದ್ದಕ್ಕೂ ಕಾವ್ಯದ ರೂಪಕಗಳು ಎದುರಾಗುತ್ತವೆ. ಕೆಲವು ಕಥೆಗಳು ಕಾವ್ಯದಿಂದ ಆರಂಭವಾದರೆ ಕೆಲವು ಕಥೆಗಳು ಕಾವ್ಯದಿಂದ ಮುಕ್ತಾಯವಾಗುತ್ತವೆ. ಇವು ಕಾವ್ಯಾತ್ಮಕ ಕಥನ ಸೃಜನೆಗಳೂ ಹೌದು. ವೈಚಾರಿಕತೆಯನ್ನು ಸೃಜನಶೀಲತೆಗೆ ಅಳವಡಿಸುವಾಗ ಅದು ತೀರಾ ವಾಚ್ಯವಾಗಿಬಿಡುವ ಸಾಧ್ಯತೆಗಳಿವೆ ಆದರೆ ಇಲ್ಲಿನ ಕಥೆಗಳು ತಿಳಿಹಾಸ್ಯ ಬೆರೆತ ವೈಚಾರಿಕ ನಿರೂಪಣೆಗಳಾಗಿದ್ದು ಇದು ಈ ಕಾಲದ ಮುಖ್ಯ ಸಂಕಲನ ಎಂದರು.

ಖ್ಯಾತ ಕಥೆಗಾರ, ಅನುವಾದಕರಾದ ಕೇಶವ ಮಳಗಿ ಅವರು ಮಾತನಾಡಿ, ಕಥಾ ಪರಿಸರದ ಸಂಕೀರ್ಣತೆಯ ಬಗೆಗಿನ ತಿಳಿವು, ಕಥಾವಸ್ತುವಿನ ಚೆಲುವು, ನೋವು, ವಿಷಾದವನ್ನು ವಿವರಿಸಲು ಆಯ್ದುಕೊಂಡ ಭಾಷೆ ವಿಧಾನ, ಸ್ಥಳೀಯತೆ, ಪ್ರಾದೇಶಿಕತೆಯ ದಟ್ಟ ಪ್ರತಿಫಲನ, ಪ್ರತಿ ಕಥೆಗಳಿಗೂ ಭಿನ್ನವಾಗಿ ರೂಪಿಸಿಕೊಂಡ ನುಡಿಗಟ್ಟು ಮತ್ತು ವಿನ್ಯಾಸ, ಗಾಢ ವಾಸ್ತವ ಪ್ರಜ್ಞೆ, ಕನಸು ಕನವರಿಕೆ, ಬದುಕಿನ ರೂಕ್ಷತೆ, ಅಸಂಗತತೆಯನ್ನು ವಿವರಿಸಲು ಕಥೆಗಾರ ನೀಡುವ ರೂಪಕಗಳ ಗೊಂಚಲುಗಳು, ಸಿದ್ಧಮಾದರಿಯಿಂದ ಹೊರಬಂದು ನೇಯ್ದ ಭರವಸೆ ಹುಟ್ಟಿಸುವ ಕಥೆಗಳು ಇಲ್ಲಿವೆ ಎಂದರು.

ಲೇಖಕ, ಪ್ರಾಧ್ಯಾಪಕರಾದ ನಿತ್ಯಾನಂದ ಬಿ ಶೆಟ್ಟಿ ಮಾತನಾಡಿ ಕಥೆ ಏನು ಹೇಳುತ್ತದೆ, ಕಥೆ ಏನು ಮಾಡುತ್ತದೆ ಎನ್ನುವ ಪ್ರಶ್ನೆಗಳ ಜೊತೆಗೆ ಕಥೆಗಾರ ಏನು ಮಾಡಲು ಹೊರಟಿದ್ದಾನೆ ಎನ್ನುವ ಪ್ರಶ್ನೆಯೂ ಮುಖ್ಯವಾಗುತ್ತದೆ. ಭಾಷೆಯನ್ನು ಬಳಸಿ ಮಾಡುವ ಕೃತವೆಲ್ಲವು ರಾಜಕೀಯ ಚಟುವಟಿಕೆಯೇ ಆಗಿರುತ್ತವೆ. ಸಮಕಾಲೀನ ಕಥೆಗಾರರಿಗಿಂತ ಭಿನ್ನ, ಆಶಾದಾಯಕ ಬೆಳಕಿನ ಸೆಳಕೊಂದು ಗೋವಿಂದರಾಜುವಿನ ಕಥೆಗಳಲ್ಲಿದೆ. ಇಲ್ಲಿನ ಕಥೆಗಳಲ್ಲಿ ಕಂಡು ಬರುವ ಮುಖ್ಯ ಗುಣ ಆತ್ಮವಿಮರ್ಶೆ. ಕೆ.ಬಿ ಸಿದ್ಧಯ್ಯನವರ ‘ದಕ್ಲಕಥಾದೇವಿಕಾವ್ಯ’ ಎತ್ತುವ ತನಗಿಂತ ಮೇಲಿರುವವರನ್ನು ದ್ವೇಷಿಸದೆ, ವೈರಿಗಳು ಎಂದು ನೋಡದೆ, ತನಗಿಂತ ಕೆಳಗಿರುವವರನ್ನು ತನ್ನ ತೆಕ್ಕೆಗೆ ತಂದುಕೊಳ್ಳುವ ಕಾರುಣ್ಯ ಮೈತ್ರಿ ಮುಖ್ಯವಾಗಿ ಆತ್ಮವಿಮರ್ಶೆ ನಮ್ಮಲ್ಲಿ ಆಗಬೇಕಿದೆ. ಇಂತಹ ಆತ್ಮಾವಲೋಕನವನ್ನು ಕರ್ನಾಟಕದ ದಲಿತ ಚಳವಳಿ ಮಿಸ್ ಮಾಡ್ತಾ ಇದೆ ಅನ್ನಿಸುತ್ತದೆ. ಕೆಲವು ದಿನಗಳ ಹಿಂದೆ ಕೋಟಗಾನಹಳ್ಳಿ ರಾಮಯ್ಯ ಆದಿಮವನ್ನು ಶಾಶ್ವತವಾಗಿ ತ್ಯಜಿಸಬೇಕಾಗಿ ಬಂದಿರುವ ಸ್ಥಿತಿಯ ಬಗ್ಗೆ ಮಾತನಾಡಿದ್ದಾರೆ ಇದರ ಬಗ್ಗೆ ನಾಡಿನ ಇತರ ಸಂಘಟನೆಗಳು ಮುಖ್ಯವಾಗಿ ದಲಿತ ಸಂಘಟನೆಯಾದರೂ ಒಂದು ಗಂಭೀರ ಸಂವಾದ ಮಾಡಬೇಕಿತ್ತು. ಏಕೆಂದರೆ, ಕೋಟಿಗಾನ ರಾಮಯ್ಯ ಎತ್ತುತ್ತಿರುವ ಪ್ರತಿ ಮಾತೂ ಕೂಡ ಅತ್ಯಂತ ಬೆಲೆಯುಳ್ಳದ್ದು ನಮ್ಮ ನೆರಮನೆಯೊಬ್ಬರು ತಮ್ಮ ಸಮಾಜಕ್ಕೆ, ಕಾಲಕ್ಕೆ ಒದಗಿರುವ ಸಂಕಟಗಳ ಬಗ್ಗೆ ಆರ್ತವಾಗಿ ಮೊರೆಯಿಡುವ ಹಾಗೆ ಮಾತನಾಡುತ್ತಿರುವಾಗ ನಾವು ಅದರ ಬಗ್ಗೆ ಚಿಂತಿಸುವುದನ್ನು ಬಿಟ್ಟು ಗಾಂಧಿ ದೊಡ್ಡವರೋ, ಅಂಬೇಡ್ಕರ್ ದೊಡ್ಡವರೋ ಎಂದು ತೌಡು ಕುಟ್ಟುತ್ತಾ ಇರುವ ಈ ಸಮಾಜ ಯಾಕೆ ಸಂವೇದನೆ ಕಳೆದುಕೊಂಡಿದೆ ಎಂಬುದು ನನ್ನ ಬಹಳ ಮುಖ್ಯ ಪ್ರಶ್ನೆ. ಕೆಡುಕನ್ನು ಅನ್ಯದಲ್ಲಿ ಗುರುತಿಸುವುದು ಸುಲಭ. ಆದರೆ ನನ್ನೊಳಗಿನ ಕೆಡುಕಿನ ದಾರಿಯನ್ನು ಅನ್ವೇಷಿಸುವುದು ಕಷ್ಟ. ಈ ಕಥೆಗಾರ ಕಷ್ಟದ ಹಾದಿಯನ್ನು ಆರಿಸಿದ್ದಾರೆ ಎಂದರು.

ಹಿರಿಯ ಲೇಖಕ ಕರೀಗೌಡ ಬೀಚನಹಳ್ಳಿ ಮಾತನಾಡಿ ಮನಃಶಾಸ್ತ್ರೀಯ ಮತ್ತು ಸಂಶೋಧನೆಯ ಅನೇಕ ಥಿಯರಿಗಳ ತಳಹದಿಯ ಮೇಲೆ ಇಲ್ಲಿನ ಕತೆಗಳನ್ನು ಕಟ್ಟಲಾಗಿದೆ. ಇವು ಸಂಶೋಧಕನೊಬ್ಬ ಬರೆದ ಕಥೆಗಳು ಎಂದರು. ಮಲ್ಲಿಕಾ ಬಸವರಾಜು ಮಾತನಾಡಿ ಆಧುನಿಕತೆ-ಪುರಾಣವನ್ನು ಸೃಜನಶೀಲವಾಗಿ ಬೆರೆಸಿದ ಇಲ್ಲಿನ ಕಥೆಗಳಲ್ಲಿ ಬರುವ ಸ್ತಿçà ಪಾತ್ರಗಳಿಗೆ ಅಪಾರ ಗಟ್ಟಿ ಧ್ವನಿ ಇದೆ. ಸಮಕಾಲೀನ ಸಂದರ್ಭದಲ್ಲಿ ಗಮನಿಸಲೇಬೇಕಾದ ಸಂಕಲನವಾಗಿದೆ ಎಂದರು.

ಲೇಖಕ ಗೋವಿಂದರಾಜು ಎಂ ಕಲ್ಲೂರು, ಪ್ರಾಧ್ಯಾಪಕರಾದ ಗೀತಾವಸಂತ, ಆಶಾ ಬಗ್ಗನಡು, ಕಥೆಗಾರರಾದ ಗುರುಪ್ರಸಾದ್ ಕಂಟಲಗೆರೆ, ಎಸ್ ಗಂಗಾಧರಯ್ಯ, ಕುಂದೂರು ಮುರುಳಿ, ಚೈತ್ರಾ-ಕೊಟ್ಟಶಂಕರ್, ಮರಿಯಾಂಬಿ, ಎಂ ಎಚ್ ನಾಗರಾಜು, ಸುಧಾಕರ್ ಕೆ ಎಸ್, ಸಾಹಿತ್ಯಾಸಕ್ತರು ಇದ್ದರು.

ಇಂಡಿಯಾ ಸಂಚಾಲಕರಾಗಿ ಖರ್ಗೆ ಆಯ್ಕೆ

ಪ್ರತಿಪಕ್ಷಗಳ ಇಂಡಿಯಾ ಒಕ್ಕೂಟದ ಅಧ್ಯಕ್ಷರಾಗಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೇಮಕಕ್ಕೆ ಶನಿವಾರ ಒಮ್ಮತ ಮೂಡಿದೆ ಎಂದು ಮೂಲಗಳು ತಿಳಿಸಿವೆ.

ಬಣದ ನಾಯಕರು ವಾಸ್ತವಿಕವಾಗಿ ಭೇಟಿಯಾಗಿ ಮತ್ತು ಮೈತ್ರಿಯ ವಿವಿಧ ಅಂಶಗಳನ್ನು ಮತ್ತು ಏಪ್ರಿಲ್-ಮೇ ತಿಂಗಳಲ್ಲಿ ನಡೆಯಲಿರುವ ಲೋಕಸಭೆ ಚುನಾವಣೆಯ ಸಿದ್ಧತೆಗಳ ಕುರಿತು ಚರ್ಚಿಸಿದರು.

ತೃಣಮೂಲ ಕಾಂಗ್ರೆಸ್, ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ ಮತ್ತು ಸಮಾಜವಾದಿ ಪಕ್ಷದ ನಾಯಕರು ಸಭೆಗೆ ಹಾಜರಾಗಿಲ್ಲ ಎಂದು ಮೂಲಗಳು ತಿಳಿಸಿವೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಮೂಲಗಳ ಪ್ರಕಾರ ಖರ್ಗೆ ಅವರನ್ನು ಬಣದ ಅಧ್ಯಕ್ಷರನ್ನಾಗಿ ನೇಮಿಸುವ ಕುರಿತು ಒಮ್ಮತ ಮೂಡಿದೆ. ನೇಮಕಾತಿ ಕುರಿತು ಅಧಿಕೃತ ಪ್ರಕಟಣೆಯನ್ನು ನಿರೀಕ್ಷಿಸಲಾಗುತ್ತಿದೆ. ಬಿಹಾರದ ಮುಖ್ಯಮಂತ್ರಿ ಮತ್ತು ಜೆಡಿಯು ಅಧ್ಯಕ್ಷ ನಿತೀಶ್ ಕುಮಾರ್ ಅವರನ್ನು ಇಂಡಿಯಾ ಒಕ್ಕೂಟದ ಸಂಚಾಲಕರನ್ನಾಗಿ ಮಾಡಲು ನಾಯಕರು ನಿರ್ಧರಿಸಿದ್ದಾರೆ,

ಆದರೆ ಸಭೆಯಲ್ಲಿ ಭಾಗವಹಿಸದ ಪ್ರತಿನಿಧಿಗಳನ್ನು ಸಂಪರ್ಕಿಸಿದ ನಂತರ ಅಂತಿಮ ಕರೆಯನ್ನು ತೆಗೆದುಕೊಳ್ಳಲಾಗುವುದು ಎಂದು ಮೂಲಗಳು ತಿಳಿಸಿವೆ.

ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಎದುರಿಸಲು 28 ವಿರೋಧ ಪಕ್ಷಗಳು ಭಾರತೀಯ ರಾಷ್ಟ್ರೀಯ ಅಭಿವೃದ್ಧಿ ಅಂತರ್ಗತ ಅಲಯನ್ಸ್ (ಇಂಡಿಯಾ) ಬ್ಯಾನರ್ ಅಡಿಯಲ್ಲಿ ಒಗ್ಗೂಡಿವೆ.

ಸುಸ್ಥಿರ ಬದುಕಿನತ್ತ ಸಾಗುವ ತುರ್ತಿದೆ – ಪ್ರೊ.ಬಿ. ಕರಿಯಣ್ಣ.

ಮಾನವನು ಪ್ರಕೃತಿಯ ಒಂದು ಭಾಗವಾಗಬೇಕು. ಪ್ರತಿಯೊಬ್ಬರು ಸಹ ಪರಿಸರದೊಂದಿಗೆ ಬೆರೆತು ಸಹಜೀವನವನ್ನು ನಡೆಸುವುದರ ಮೂಲಕ ಪ್ರಕೃತಿಗೆ ಕೊಡುಗೆ ನೀಡಬೇಕು. ಪ್ರಕೃತಿಯು ಮಾನವನ ಅಗತ್ಯತೆಗಳನ್ನು ಪೂರೈಸುತ್ತದೆ ಹೊರತು ದುರಾಸೆಯನ್ನಲ್ಲ. ಆದ್ದರಿಂದ ನಾವುಗಳು ಪರಿಸರದ ಸಮತೋಲನವನ್ನು ಕಾಯ್ದುಕೊಳ್ಳಬೇಕಾದರೆ ಸುಸ್ಥಿರ ಬದುಕಿನತ್ತ ದಾಪುಗಲುಗಳನ್ನು ಇಡಬೇಕಾಗುತ್ತದೆ. ಎಂದು ವಿಶ್ವವಿದ್ಯಾನಿಲಯ ಕಲಾ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಬಿ ಕರಿಯಣ್ಣ ರವರು ರಾಷ್ಟ್ರೀಯ ಯುವ ದಿನದ ಅಂಗವಾಗಿ ಸ್ನಾತಕ ಸಮಾಜಕ್ಕಾಗಿ ವಿಭಾಗ ಮತ್ತು ಚಿಗುರು ಯುವಜನ ಸಂಘದ ಸಂಯೋಜನೆಯಲ್ಲಿ ಆಯೋಜಿಸಲಾಗಿದ್ದ ಹವಾಗುಣ ಬದಲಾವಣೆ ಮತ್ತು ಯುವಜನರು ಎಂಬ ವಿಷಯದ ಕುರಿತು ಯುವಜನರೊಂದಿಗೆ ಚಿಂತನ ಮಂಥನ ಕಾರ್ಯಕ್ರಮದಲ್ಲಿ ಯುವ ಸಮುದಾಯಕ್ಕೆ ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾದ ಮಂಜುನಾಥ್ ಅಮಲಗೊಂದಿ ರವರು ಮಾತನಾಡಿ, ಚಿಗುರು ಯುವಜನ ಸಂಘವು ಪರಿಸರಕ್ಕೆ ಪೂರಕವಾದ ಕಾರ್ಯಗಳನ್ನು ಮಾಡುತ್ತಿದ್ದು, ಯುವಜನರಿಗೆ ಪರಿಸರದ ಬಗೆಗಿನ ಪ್ರಜ್ಞೆಯನ್ನು ಮೂಡಿಸುತ್ತಿದೆ. ರಾಷ್ಟ್ರೀಯ ದಿನದ ಅಂಗವಾಗಿ ಯುವಜನರಿಗೆ ಹವಾಗುಣ ಬದಲಾವಣೆಯ ಬಗ್ಗೆ ಜಾಗೃತಿಯನ್ನು ಮೂಡಿಸುವ ಸಲುವಾಗಿ ಅನೇಕ ಶಾಲಾಕಾಲೇಜುಗಳಲ್ಲಿ ಅಭಿಯಾನವನ್ನು ಮಾಡಲಾಗುತ್ತಿದೆ. ಮಾನವರ ಅನೇಕ ಚಟುವಟಿಕೆಗಳಿಂದ ಹಸಿರು ಮನೆ ಅನಿಲಗಳು ಹೆಚ್ಚಾದ ಪರಿಣಾಮವಾಗಿ ತಾಪಮಾನ ಹೆಚ್ಚಾಗಿ ಪ್ರಸ್ತುತವಾಗಿ ಭೂಮಿಗೆ ಜ್ವರ ಬಂದಿದೆ. ಇದು ಯುವಜನ ಆರೋಗ್ಯ ಉದ್ಯೋಗ ಭವಿಷ್ಯದ ಮೇಲೆ ನಕಾರಾತ್ಮಕ ಪರಿಣಾಮವನ್ನು ಬೀರುತ್ತದೆ. ಇಂದು ಜಾಗತಿಕ ತಾಪಮಾನದಿಂದ ಹವಾಗುಣದಲ್ಲಿ ಬದಲಾವಣೆಯು ಉಂಟಾಗುತ್ತಿದೆ. ಇದನ್ನು ತಡೆಗಟ್ಟಲು ವ್ಯಕ್ತಿಯಿಂದ ಹಿಡಿದು ವಿಶ್ವದವರೆಗೆ ವೈಯಕ್ತಿಕವಾಗಿ, ಸಂಘಟಿತರಾಗಿ ಕಾರ್ಯನಿರ್ವಹಿಸುವ ಅನಿವಾರ್ಯ ಸ್ಥಿತಿ ಬಂದಿದೆ‌. ಮಾನವರ ಜೀವನಶೈಲಿಯಿಂದ ಕೊಳ್ಳುಬಾಕ ಸಂಸ್ಕೃತಿಯು ಹೆಚ್ಚುತ್ತಿದೆ. ಇದು ಪರಿಸರ ನಾಶಕ್ಕೆ ಮೂಲ ಕಾರಣವಾಗಿದೆ. ಭಾರತದಲ್ಲಿ ವ್ಯಕ್ತಿಗಳ ಇಂಗಾಲದ ಹೆಜ್ಜೆ ಗುರುತುಗಳನ್ನು ಗಮನಿಸಿದರೆ ಪ್ರತಿ ವರ್ಷ ಪ್ರತಿ ವ್ಯಕ್ತಿಯ ಇಂಗಾಲದ ಉತ್ಪಾದನೆಯು 750 ಕೆಜಿಯಷ್ಟಿದೆ. ಇದನ್ನು ಕಡಿಮೆ ಮಾಡುವುದ ಜೊತೆ ಸುಸ್ಥಿರ ಅಭಿವೃದ್ಧಿಗಾಗಿ ಸರ್ಕಾರಗಳನ್ನು ಸಾಮೂಹಿಕವಾಗಿ ಒತ್ತಾಯಿಸಬೇಕಿದೆ ಎಂದು ತಿಳಿಸಿದರು.

ಈ ಕಾರ್ಯಕ್ರಮದಲ್ಲಿ ವೈಲ್ಡ್ ಕರ್ನಾಟಕ ಸಾಕ್ಷ್ಯಚಿತ್ರವನ್ನು ಪ್ರದರ್ಶಿಸಲಾಯಿತು. ಹವಾಗುಣ ಬದಲಾವಣೆಯ ಬಗ್ಗೆ ಕ್ವಿಜ್ ಮಾಡುವ ಮೂಲಕ ಹವಾಗುಣ ಬದಲಾವಣೆಗೆ ಕಾರಣಗಳು ಮತ್ತು ಅದರಿಂದಾಗುವ ಪರಿಣಾಮಗಳನ್ನು ಚರ್ಚಿಸಲಾಯಿತು. ಜೀವನಶೈಲಿ ಬದಲಾವಣೆಯಿಂದ ಜಾಗತೀಕ ತಾಪಮಾನವನ್ನು ಹೇಗೆಲ್ಲಾ ಕಡಿಮೆಮಾಡಬಹುದೆಂದು ತಿಳಿಸಲಾಯಿತು. ಈ ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ಹೇಮಂತ್ ಕುಮಾರ್ ಕೆ ಪಿ, ಪ್ರಹ್ಲಾದ ಜಿ ಮತ್ತು ಸಮಾಜ ಕಾರ್ಯ ವಿದ್ಯಾರ್ಥಿಗಳು ಭಾಗವಹಿಸಿದ್ದರು.