Saturday, July 20, 2024
Google search engine
Homeಜಸ್ಟ್ ನ್ಯೂಸ್ಸಂಬಳ ತಾರತಮ್ಯ; ಶಾಸಕ ಕೃಷ್ಣಪ್ಪ ಗರಂ

ಸಂಬಳ ತಾರತಮ್ಯ; ಶಾಸಕ ಕೃಷ್ಣಪ್ಪ ಗರಂ

ತುರುವೇಕೆರೆ:’ಪ್ರಸ್ತುತ ದಿನಗಳ ಬೆಲೆಗೆ ಅನುಗುಣವಾಗಿ ಸರ್ಕಾರಿ ನೌಕರರಿಗೆ ಸಂಬಳವನ್ನು ಕೊಡಬೇಕೆಂಬುದು ಸಂವಿಧಾನದಲ್ಲೇ ಹೇಳಿರುವಾಗ ಸರ್ಕಾರಗಳು ಕೇಂದ್ರಕ್ಕೆ ಒಂದು ಮಾದರಿ, ರಾಜ್ಯಕ್ಕೆ ಒಂದು ಮಾದರಿ ವೇತನ ಅಂತ ತಾರತಮ್ಯ ಮಾಡುವುದು ಅಸಂವಿಧಾನಿಕ ನಡೆ ಎಂದು ಸರ್ಕಾರಿ ನೌಕರರ ಸಂಘದ ಮಾಜಿ ರಾಜ್ಯ ಅಧ್ಯಕ್ಷ ಹಾಗು ಶಾಸಕ ಎಂ.ಟಿ.ಕೃಷ್ಣಪ್ಪ ಎಂದು ಪ್ರತಿಪಾದಿಸಿದರು.’

ಪಟ್ಟಣದ ಮಾಯಸಂದ್ರ ರಸ್ತೆಯಲ್ಲಿನ ತಾಲ್ಲೂಕು ಸರ್ಕಾರಿ ನೌಕರರ ಸಂಘದ ಸಮುದಾಯ ಭವನದ ಶಂಕು ಸಂಸ್ಥಾಪನೆ ಹಾಗು ಹಳೆಪಿಂಚಣಿ ಯೋಜನೆ ಸೇರಿದಂತೆ ವಿವಿಧ ಬೇಡಿಕೆಗಳ ಮನವಿ ಪತ್ರ ಸ್ವೀಕರಿಸಿ ಶುಕ್ರವಾರ ಸಂಜೆ ಮಾತನಾಡಿದರು.

ಬಿ.ಎಸ್.ಯಡಿಯೂರಪ್ಪನವರು ಮುಖ್ಯ ಮಂತ್ರಿಯಾಗಿದ್ದಾಗ ಸರ್ಕಾರಿ ನೌಕರರ ಸಂಬಳದ ವಿಚಾರದಲ್ಲಿ ಉದಾರ ಮನೋಭಾವನೆ ತೋರುತ್ತಿದ್ದರು ಆದರೆ ಈಗಿರುವ ಮುಖ್ಯ ಮಂತ್ರಿಗಳು ಕಂಜೂಸ್ ಗಿರಾಕಿ ಎಂದು ಲೇವಡಿ ಮಾಡಿದರು.

ಸಕರ್ಾರಿ ನೌಕರರಿಗೆ ಸಂಬಳಬಿಟ್ಟರೆ ಬೇರೆ ಸವಲತ್ತು ಇಲ್ಲ. ರಾಜ್ಯದ ಸರ್ಕಾರಿ ನೌಕರರು ಸುಮಾರು 140 ಲಕ್ಷ ಕೋಟಿಗೂ ಅಧಿಕ ತೆರಿಗೆ ಕಟ್ಟುತ್ತಾರೆ. ಹೀಗಿರುವಾಗ ಸರ್ಕಾರ ನೌಕರರಿಗೆ ಸಂಬಳಕೊಡಲು ಏನು ಕಷ್ಟ. ಅಲ್ಲದೆ 7ನೇ ವೇತನ ಆಯೋಗವನ್ನು ಶೀಘ್ರ ಜಾರಿ ಮಾಡುವ ಬಗ್ಗೆ ಮುಖ್ಯ ಮಂತ್ರಿಗಳು ನಿರ್ಲಕ್ಷ್ಯ ವಹಿಸಿರುವುದು ಆಶ್ಚರ್ಯ ತಂದಿದೆ. ವಿಧಾನ ಸಭೆಯಲ್ಲಿ 7ನೇ ವೇತನ ಆಯೋಗದ ಬಗ್ಗೆ ಪ್ರಸ್ತಾಪಿಸುವೆ.

ಸರ್ಕಾರಿ ನೌಕರರಿಗಿಂತ ಖಾಸಗಿ ಕಂಪನಿಗಳಲ್ಲಿ ಹೆಚ್ಚು ಸಂಬಳ ಕೊಡುವಾಗಿ ಎಲ್ಲರೂ ಸರ್ಕಾರಿ ಕೆಲಸಕ್ಕೆ ಏತಕ್ಕೆ ಸೇರುತ್ತಾ ಅವರು ನಿವೃತ್ತಿಯ ನಂತರ ಜೀವನೋಪಾಯಕ್ಕೆ ಪಿಂಚಣಿ ಸಿಗುತ್ತದೆ ಎಂಬ ಉದ್ದೇಶದಿಂದ. ಪಿಂಚಣಿಕೊಡುವ ವ್ಯವಸ್ಥೆ ಬ್ರಿಟಿಷರ ಕಾಲದಿಂದಲೂ ಬಂದದ್ದು. ಕೆಲವು ಸಕರ್ಾರಿ ಅಧಿಕಾರಿಗಳು, ನೌಕರರು ಹೆತ್ತವರನ್ನು ವೃದ್ಧಾಶ್ರಮಕ್ಕೆ ತಳ್ಳುತ್ತಾರೆ ಅಂತಹ ಸಂದರ್ಭದಲ್ಲಿ ಈ ಪಿಂಚಣಿ ಸಹಾಯಕ್ಕೆ ಬರಲಿದೆ ಹಾಗಾಗಿ ಹಳೆಪಿಂಚಣಿ ನೀಡಬೇಕೆಂಬುದು ನನ್ನ ಆಗ್ರಹವಾಗಿದೆ.

ರಾಜ್ಯದ ನೌಕರರು ಸೆಟೆದು ನಿಂತರೆ ಯಾವ ಸಕರ್ಾರಗಳೂ ಏನೂ ಮಾಡಲಾಗದು ಹಾಗಾಗಿ ನೀವು ಸರ್ಕಾರ ಕೊಡುತ್ತದೆ ಎಂದು ಕೂರದೆ ಲೋಕಸಭಾ ಚುನಾವಣೆಗೂ ಮುನ್ನವೇ ನೌಕರರು 7ನೇ ವೇತನ ಆಯೋಗ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಾಜ್ಯವ್ಯಾಪಿ ಹೋರಾಟಕ್ಕೆ ಕರೆಕೊಟ್ಟರೆ ನಿಮ್ಮ ಬೇಡಿಕೆಗಳು ಈಡೇರಲಿವೆ ಎಂದು ರಾಜ್ಯಧ್ಯಕ್ಷರಿಗೆ ಕಿವಿ ಮಾತು ಹೇಳಿದರು. ಸರ್ಕಾರ ಮಾಡುವ ಪ್ರತಿಯೊಂದು ಯೋಜನೆಗಳನ್ನು ನೌಕರರು ಮಾಡಬೇಕು ಅದುಬಿಟ್ಟು ಸಚಿವರು, ಶಾಸಕರು ಮಾಡುವುದಕ್ಕೆ ಆಗುತ್ತದಯೇ? ಸರ್ಕಾರ ನೌಕರರನ್ನು ವಿಶ್ವಾಕ್ಕೆ ತೆಗೆದುಕೊಂಡು ಮುನ್ನಡೆಯಬೇಕು.

ಬಂಗಾರಪ್ಪನವರು ಮುಖ್ಯ ಮಂತ್ರಿಗಳಾಗಿದ್ದಾಗ ಶಿಕ್ಷಣ ಇಲಾಖೆ ಸೇರಿದಂತೆ ವಿವಿಧ ಇಲಾಖಾ ನೌಕರರಿಗೆ ಮೂರು ಸ್ಟ್ಯಾಗ್ ನೆಂಟ್ ಅನ್ನು ನಾನು ಅಧ್ಯಕ್ಷನಾಗಿದ್ದಾಗ ಕೊಡಿಸಿದ್ದೆ. ಈಗ ರಾಜ್ಯದ ಸಂಘದ ಹೆಸರಿನಲ್ಲಿ 24 ಕೋಟಿ ರೂಪಾಯಿ ಇದೆ ಎಂಬುದು ಖುಷಿ ನೀಡಿದೆ. ಆದರೆ ನಾನು ಸಂಘದ ಅಧ್ಯಕ್ಷನಾಗಿದ್ದ ಅವಧಿಯಲ್ಲಿ ಟೆಲಿಪೋನ್ ಬಿಲ್ಲನ್ನು ಕಟ್ಟಲು ಸಹ ಸಂಘದಲ್ಲಿ ಹಣವಿಲ್ಲದೆ ಸ್ವಂತ ಹಣದಿಂದ ಕಟ್ಟಿದ್ದೇನೆ.

ಸತತ ಎರಡು ಬಾರಿ ಎಂ.ಟಿ.ಕೃಷ್ಣಪ್ಪ ಹಾಗು ಷಡಕ್ಷರಿಯಂತವರನ್ನು ರಾಜ್ಯ ಸಕರ್ಾರಿ ನೌಕರರ ಸಂಘದ ಅಧ್ಯಕ್ಷರನ್ನಾಗಿ ಕೊಡುಗೆಯಾಗಿ ನೀಡಿದ್ದು ತುಮಕೂರು ಜಿಲ್ಲೆ.

ತಾಲ್ಲೂಕು ಸರ್ಕಾರಿ ನೌಕರರ ಹಿತ ದೃಷ್ಟಿಯಿಂದ ಒಂದು ದೊಡ್ಡ ಚೌಟರಿ ನಿರ್ಮಿಕೊಳ್ಳಲು ಸಂಘಕ್ಕೆ ಪಟ್ಟಣದಲ್ಲಿರುವ ಸಿ.ಎ ಸೈಟ್ ಗಳಲ್ಲಿ ಅರ್ಧ ಎಕೆರೆ ಭೂಮಿಯನ್ನು ಮಂಜೂರು ಮಾಡಿಕೊಡಿ ಎಂದು ಸ್ಥಳದಲ್ಲಿದ್ದ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿಗೆ ಸೂಚಿಸಿದರು.

ನೂತನ ಭವನದಲ್ಲಿ ಐ.ಎ.ಎಸ್, ಐ.ಪಿ.ಎಸ್ ಹಾಗು ಕೆ.ಪಿ.ಎಸ್.ಸಿ ನಂತಹ ಸ್ಪಧರ್ಾತ್ಮಕ ಪರೀಕ್ಷೆಗಳಿಗೆ ನೆರವಾಗುವ ಪುಸ್ತಕಗಳ ಗ್ರಂಥಾಲಯ ಮಾಡಿ ತಾಲ್ಲೂಕಿನವರು ಉನ್ನತಮಟ್ಟದ ಅಧಿಕಾರಿಗಳಾಗಲು ಪೂರಕವಾದ ವಾತಾವರಣ ಕಲ್ಪಿಸಿ ಎಂದು ತಾಲ್ಲೂಕು ಸಂಘದ ಅಧ್ಯಕ್ಷರಿಗೆ ಕಿವಿ ಮಾತು ಹೇಳಿದರು.

ಸರ್ಕಾರಿ ನೌಕರರ ಸಂಘದ ರಾಜ್ಯಧ್ಯಕ್ಷ ಸಿ.ಎಸ್.ಷಡಕ್ಷರಿ ಮಾತನಾಡಿ, ಇಡೀ ದೇಶದಲ್ಲೇ ರಾಜ್ಯ ಸಕರ್ಾರಿ ನೌಕರರ ಸಂಘವು ಇತರೆ ಸಂಘಗಳಿಗೆ ಆಡಳಿತಾತ್ಮಕವಾಗಿ ಮಾದರಿ ಎನಿಸಿ ಇಂದು 103 ವರ್ಷಗಳ ಶತಮಾನೋತ್ಸವ ಕಂಡಿದೆ. ನಮ್ಮ ಸಂಘಟನೆ ಸರ್ಕಾರದೊಂದಿಗೆ ಹೊಂದಾಣಿಕೆ ಮಾಡಿಕೊಳ್ಳದೆ ನೌಕರರ ಪರವಾಗಿ ಕೆಲಸ ಮಾಡುತ್ತದೆ. ಸಕರ್ಾರ ಕೊಡುವ ಸಂಬಳಕ್ಕೆ ಆತ್ಮವಂಚನೆ ಮಾಡದೆ ಪ್ರಾಮಾಣಿಕ ಕಾಯಕ ಮಾಡಿದರೆ ಸಕರ್ಾರಕ್ಕೆ ಗೌರವ ಬರುತ್ತದೆ. ಅಧಿಕಾರ, ಸ್ಥಾನ ಮಾನಗಳು ಶಾಶ್ವತವಲ್ಲ ಹಾಗಾಗಿ ನಮ್ಮ ಸಾಧನೆಗಳ ಹೆಜ್ಜೆ ಗುರುತುಗಳನ್ನು ಬಿಟ್ಟು ಹೋಗಬೇಕು.

ಮಾರ್ಚ್ ಕಳೆದ ನಂತರ ಸರಣಿ ಚುನಾವಣೆಗಳು ಬರಲಿದ್ದು ಹಾಗಾಗಿ ಫೆಬ್ರವರಿ ತಿಂಗಳಲ್ಲಿ ರಾಜ್ಯ ಸಕರ್ಾರಿ ನೌಕರರ ಸಮಾವೇಶ ಹಮ್ಮಿಕೊಂಡು ಅಲ್ಲಿ 7ನೇ ವೇತನ ಆಯೋಗ, ಹಳೆಪಿಂಚಣಿ ನೀಡುವುದು, ಆರೋಗ್ಯ ಸಂಜೀವಿನ ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆಗೆ ಪ್ರಸ್ತಾವನೆ ಇಡುವುದು. ಬೇಡಿಕೆಗಳು ಈಡೇರದಿದ್ದರೆ ರಾಜ್ಯದ್ಯಂತ ಹೋರಾಟ ಹಮ್ಮಿಕೊಂಡು ನಮ್ಮ ಹಕ್ಕು ಪಡೆದೇ ತೀರುತ್ತೇವೆ ಎಂದು ಎಚ್ಚರಿಕೆ ನೀಡಿದರು.

ರಾಜ್ಯದ 6 ಕೋಟಿಯಲ್ಲಿ ಜನರಲ್ಲಿ ಒಂದು ಪರ್ಸೆಂಟ್ ಸಕರ್ಾರಿ ನೌಕರರಿದ್ದಾರೆ ಅಂತಹ ಪವಿತ್ರವಾದ ಹುದ್ದೆಗೆ ನ್ಯಾಯ ಒದಗಿಸೋಣ. ಕೋವಿಡ್ ಮತ್ತು ಪ್ರವಾಹ ಸಂದರ್ಭದಲ್ಲಿ ಸುಮಾರು 650 ಕೋಟಿ ರೂಪಾಯಿಗಳ ನೌಕರರ ಹಣವನ್ನು ಸಕರ್ಾರಕ್ಕೆ ನೀಡಿದೇವೆ. ಮುಖ್ಯ ಮಂತ್ರಿಗಳು ನಮ್ಮ ಬೇಡಿಕೆಗಳಿಗೆ ಸ್ಪಂದಿಸುವ ಭರವಸೆ ಇದೆ.

ಶಿಕ್ಷಕರ ಸಮುದಾಯ ಭವನದ ಉದ್ಘಾಟನೆಯನ್ನು ಶಾಸಕರೊಂದಿಗೆ ಹಬ್ಬ ರೂಪದಲ್ಲಿ ಆಚರಿಸಿ ಇದಕ್ಕೆ ತಗುಲುವ ವೆಚ್ಚವನ್ನು ರಾಜ್ಯ ಸಂಘದಿಂದ ಭರಿಸುತ್ತೇನೆಂದು ಹೇಳಿದರು.

ಇದೇ ವೇಳೆ ತಾಲ್ಲೂಕು ಸಕರ್ಾರಿ ನೌಕರರ ಸಂಘದ ಅಧ್ಯಕ್ಷ ನಂರಾಜುಮುನಿಯೂರು ಪ್ರಾಸ್ತಾವಿಕ ನುಡಿ ನುಡಿದರು.

ಈ ಸಂದರ್ಭದಲ್ಲಿ ರಾಜ್ಯಕಾರ್ಯಕಾರಿಣಿ ಸಮಿತಿ ಉಪಾಧ್ಯಕ್ಷರಾದ ದುಂಡಾ ಬಸವರಾಜು, ಆನೇಕೆರೆ ಹರ್ಷ, ರಾಜ್ಯ ಖಜಾಂಚಿ ತಿಮ್ಮೇಗೌಡ, ರಾಜ್ಯಕಾರ್ಯದರ್ಶಿ ಡಾ.ನಲ್ಕುಂದ್ರಿ ಸದಾನಂದ, ತಾಲ್ಲೂಕು ಸಂಘದ ಅಧ್ಯಕ್ಷ ನಂರಾಜುಮುನಿಯೂರು, ಕಾರ್ಯದರ್ಶಿ ನಟೇಶ್, ಖಜಾಂಚಿ ನಾಗರಾಜು, ತಹಶೀಲ್ದಾರ್ ವೈ.ಎಂ.ರೇಣುಕುಮಾರ್, ಜಿಲ್ಲಾ ಅಕ್ಷರದಾಸೋಹ ಅಧಿಕಾರಿ ಸುಧಾಕರ್, ಬಿ.ಇ.ಒ ಸೋಮಶೇಖರ್, ಜಿಲ್ಲಾ ಮತ್ತು ತಾಲ್ಲೂಕು ಸಂಘದ ಪದಾಧಿಕಾರಿಗಳು ಭಾಗವಹಿಸಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?