Thursday, March 12, 2026
Google search engine
Home Blog Page 34

ಸ್ವಯಂ ಉದ್ಯೋಗಕ್ಕೆ ಮುಂದಾಗಿ:ಸಚಿವ

ಗುಬ್ಬಿ: ಸ್ವಯಂ ಉದ್ಯೋಗ ಮಾಡಿ ಆರ್ಥಿಕ ಮಟ್ಟವನ್ನು ಸುದರಿಸಿಕೊಳ್ಳುವುದರ ಜೊತೆಗೆ ನಾಲ್ಕಾರು ಜನರಿಗೆ ಉದ್ಯೋಗ ನೀಡುವಲ್ಲಿ ಯುವಜನರು ಮುಂದಾಗಬೇಕು ಎಂದು ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಎಲ್.ಜಾರಕಿಹೊಳಿ ತಿಳಿಸಿದರು.


ತಾಲ್ಲೂಕಿನ ನಾರನಹಳ್ಳಿ ಗ್ರಾಮದಲ್ಲಿ ತೇಜಸ್ ಎಂಟರ್ ಪ್ರೈಸಸ್ ಅರೆಕಾಪ್ಲೇಟ್ಉತ್ಪಾದನ ಘಟಕಕ್ಕೆ ಚಾಲನೆ ನೀಡಿ ಮಾತನಾಡಿದರು.

ಇಕೋ ಫ್ರೆಂಡ್ಲಿ ಕೈಗಾರಿಕೆಗಳನ್ನು ಸ್ಥಾಪಿಸುವುದರ ಮೂಲಕ ಪರಿಸರ ಸಂರಕ್ಷಣೆಯಾಗುತ್ತದೆ.
ಬ್ಯಾಂಕ್ ಗಳೊಂದಿಗೆ ಉತ್ತಮ ಸಂಬಂಧವನ್ನು ಇಟ್ಟುಕೊಂಡು ವ್ಯವಹಾರ ಯೋಜನೆಯನ್ನು ತಯಾರಿಸಿ ಕೊಟ್ಟರೆ, ಅದು ಸಮಂಜಸವಾಗಿದ್ದರೆ ಬ್ಯಾಂಕುಗಳು ಸಾಲ ಸೌಲಭ್ಯವನ್ನು ಒದಗಿಸುವಲ್ಲಿ ಮುಂದಾಗುತ್ತವೆ. ಸರ್ಕಾರವು ಕೆ.ಎಸ್.ಎಫ್.ಸಿ ಮೂಲಕ ಕಡಿಮೆ ಬಡ್ಡಿದರದಲ್ಲಿ 10 ಲಕ್ಷದವರೆಗೆ ಸಾಲ ಸೌಲಭ್ಯ ನೀಡುತ್ತಿದೆ ಎಂದರು.


ಮೀಸಲಾತಿ ನೀಡುವಲ್ಲಿ ಇರುವ ಸರ್ಕಾರವೆಂದರೆ ಸಿದ್ದರಾಮಯ್ಯನವರ ಸರ್ಕಾರ.
ವಿಶೇಷವಾಗಿ ಶಿಕ್ಷಣಕ್ಕೆ ಹೆಚ್ಚು ಮಹತ್ವ ಕೊಡುವ ಯೋಜನೆಗಳನ್ನು ಸರ್ಕಾರ ತರುತ್ತದೆ. ಈ ಸೌಲಭ್ಯಗಳನ್ನು ಬಳಸಿಕೊಂಡು ಮುಖ್ಯ ವಾಹಿನಿಯಲ್ಲಿ ಬರುವಲ್ಲಿ ಮುಂದಾಗಬೇಕು.
ಶಿಕ್ಷಣ ಪಡೆದರೆ ಬುದ್ಧ, ಬಸವ,ಅಂಬೇಡ್ಕರ್, ಜಗಜೀವನ್ ರಾಮ್ ರವರ ಚರಿತ್ರೆಯನ್ನು ತಿಳಿಯಲು ಅನುಕೂಲವಾಗುತ್ತದೆ.
ಆದಿಜಾಂಬವ ಬ್ರಿಗೇಡ್ ವತಿಯಿಂದ ತರಬೇತಿ ಪಡೆದು ಸ್ವಯಂ ಕೈಗಾರಿಕೆಗಳನ್ನು ಸ್ಥಾಪಿಸಿ ಸ್ವತಃ ಉದ್ದಿಮೆಯನ್ನು ಪ್ರಾರಂಭಿಸಿ ಸಮಾಜದಲ್ಲಿ ಮಾದರಿ ವ್ಯಕ್ತಿಯಾಗುವ ನಿಟ್ಟಿನಲ್ಲಿ ಆದಿಜಾಂಬವ ಜನಾಂಗ ಮುಂದೆಬರಬೇಕು.
ಮಾನವ ಬಂಧತ್ವ ವೇದಿಕೆಯಲ್ಲಿ ಅನೇಕ ತರಬೇತಿಗಳನ್ನು ನೀಡಲಾಗುತ್ತದೆ.
ಇದರ ಸದುಪಯೋಗ ಪಡೆದುಕೋಳ್ಳಲು ಸಲಹೆ ನೀಡಿದರು.


ಕಾರ್ಯಕ್ರಮದಲ್ಲಿ ಉದ್ಯಮಿ ಮಂಜು ಮಾತನಾಡಿ, ಸರಳ ಸಜ್ಜನಿಕೆಯ ಸಚಿವರು ನಮ್ಮ ಪುಟ್ಟ ಗ್ರಾಮಕ್ಕೆ ಬಂದು ಈ ಕೈಗಾರಿಕೆಯನ್ನು ಉದ್ಘಾಟಿಸಿರುವುದುಇತರೆ ಉದ್ಯಮಿಗಳಿಗೆ ಸ್ಪೂರ್ತಿ ನೀಡುತ್ತದೆ ಎಂದರು.


ಮಾಜಿ ವಿಧಾನ ಪರಿಷತ್ ಸದಸ್ಯ ಬೆಮಲ್ ಕಾಂತರಾಜು ಮಾತನಾಡಿ, ಸಿಎಸ್ ಪುರ ಹೋಬಳಿ ಅಭಿವೃದ್ಧಿಯಲ್ಲಿ ಹಿಂದುಳಿದಿರುವುದರಿಂದ ಹೆಚ್ಚು ಅನುದಾನವನ್ನು ಕೊಟ್ಟು ರಸ್ತೆಗಳ ಅಭಿವೃದ್ಧಿಗೆ ಸಹಕರಿಸಿ ಎಂದು ಕೇಳಿಕೊಂಡರು.


ಕಾರ್ಯಕ್ರಮದಲ್ಲಿ ಆದಿಜಾಂಬವ ಯುವ ಬ್ರಿಗೇಡ್ ರಾಜ್ಯ ಅಧ್ಯಕ್ಷ ಏಳುಕೊಟಪ್ಪ ಪಾಟೀಲ್ ಮಾತನಾಡಿದರು.

ಪಂಚಾಯತ್ ರಾಜ್ ಮತ್ತು ಗ್ರಾಮೀಣ ಅಭಿವೃದ್ಧಿ ಇಲಾಖೆಯ ಅಭಿಯಂತರ ಎನ್ .ಸಿ. ಕೃಷ್ಣಕಾಂತ್, ಉದ್ಯಮಿ ಮಂಜು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಪ್ರಸನ್ನ ಕುಮಾರ್, ಎಸ್ ಬಿ ಐ ಬ್ಯಾಂಕ್ ವ್ಯವಸ್ಥಾಪಕ ಶಿವಾನಂದ್, ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷ ರವಿ, ಚಾಲುಕ್ಯ ಆಸ್ಪತ್ರೆಯ ಸಿಇಓ ನಾಗಭೂಷಣ್, ಮುಖಂಡರಾದ ವೆಂಕಟರಮಣ, ಪುಟ್ಟರಾಜು, ತಿಮ್ಮೆಶ್, ಗುರುದತ್, ಮಂಜಣ್ಣ, ಮೂರ್ತಿ, ಶಿವನಂಜಪ್ಪ, ಡಿಎಸ್ಎಸ್ ಸಂಚಾಲಕ ಬಸವರಾಜು, ಗುತ್ತಿಗೆದಾರ ರಾಜಣ್ಣ ಇತರರು ಭಾಗವಹಿಸಿದ್ದರು.

ಕಾವ್ಯದೀವಿಗೆ ಲೋಕಾರ್ಪಣೆ

0

ವಿಚಾರ ಮಂಟಪ ಬಳಗದ ವತಿಯಿಂದ ವರುಣ್‌ರಾಜ್‌ ಜಿ ಮತ್ತು ಧನುಷ್‌ ಎಚ್‌ ಶೇಖರ್‌ ಇವರು ಸಂಪಾದಿಸಿರುವ ʼಕಾವ್ಯದೀವಿಗೆʼ ಕವನ ಸಂಕಲನವು ಲೋಕಾರ್ಪಣೆಗೆ ಸಿದ್ಧವಾಗಿದೆ. ಕೃತಿಯನ್ನು ಹಾಸನದ ʼಸ್ಪಂದನ ಸಿರಿʼ ಪ್ರಕಾಶನವು ಪ್ರಕಟಿಸುತ್ತಿದ್ದು, ಇದೇ ಭಾನುವಾರ ದಿನಾಂಕ: ೨೫.೦೬.೨೦೨೩ ರಂದು ಹಾಸನದಲ್ಲಿ ನಡೆಯಲಿರುವ ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆಯ ೧೨ನೇ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಪುಸ್ತಕ ಲೋಕಾರ್ಪಣೆಗೊಂಡಿತು.

ʼಕಾವ್ಯದೀವಿಗೆʼ ಕವನ ಸಂಕಲನವು ನಾಡಿನ ವಿವಿಧ ಪ್ರದೇಶಗಳ ಒಟ್ಟು ೬೨ ಯುವ ಬರಹಗಾರರ ಬರಹಗಳನ್ನೊಳಗೊಂಡ ಕೃತಿಯಾಗಿದ್ದು, ಯುವ ಬರಹಗಾರರ ಅಭಿವ್ಯಕ್ತಿಗೆ ವೇದಿಕೆಯನ್ನೊದಗಿಸುವ ಹಾಗೂ ಅವರನ್ನು ಪ್ರೋತ್ಸಾಹಿಸುವ ಉದ್ದೇಶವನ್ನು ಹೊಂದಿದೆ. ವಿಚಾರ ಮಂಟಪ ಬಳಗವು ೫ ವರ್ಷಗಳನ್ನು ಯಶಸ್ವಿಯಾಗಿ ಪೂರೈಸಿದ್ದು ಇದರ ನೆನಪಿಗಾಗಿ ʼಕಾವ್ಯದೀವಿಗೆʼಯನ್ನು ಹೊರತರುತ್ತಿದೆ. ಈ ಕೃತಿಗೆ ಅಮರ್ ಬಿ ಇವರ ಮುನ್ನುಡಿಯನ್ನು ಬರೆದಿದ್ದು, ದಾದಪೀರ್‌ ಜೈಮನ್‌, ದೇವರಾಜ್‌ ಹುಣಸೀಕಟ್ಟೆ ಹಾಗೂ ಗೌತಮ್‌ ಗೌಡ ಇವರು ಆಶಯ ನುಡಿಯನ್ನೂ ಹಾಗೂ ಚಂದನ್‌ ಡಿ.ಎನ್.‌ ಇವರು ಬೆನ್ನುಡಿಯನ್ನೂ ಬರೆದಿದ್ದಾರೆ.

ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಹಾಸನದ ಸಾಹಿತಿ ಶ್ರೀ ಗೊರೂರು ಅನಂತರಾಜು ಅವರು ಪುಸ್ತಕ ಬಿಡುಗಡೆಗೊಳಿಸಿ ಕೃತಿಯನ್ನು ಕುರಿತು ಮಾತನಾಡಲಿದ್ದು, ʼಸ್ಪಂದನ ಸಿರಿʼ ಸಾಹಿತ್ಯ ವೇದಿಕೆಯ ಶ್ರೀಮತಿ ಕಲಾವತಿ ಮಧುಸೂದನ, ಕಾದಂಬರಿಕಾರ್ತಿ ಶ್ರೀಮತಿ ಜಯಂತಿ ಚಂದ್ರಶೇಖರ್, ಕನ್ನಡ ಸಾಹಿತ್ಯ ಪರಿಷತ್ತು ಹಾಸನದ ಜಿಲ್ಲಾಧ್ಯಕ್ಷರಾದ ಡಾ. ಹೆಚ್. ಎಲ್.‌ ಮಲ್ಲೇಶ್‌ ಗೌಡ ಸೇರಿದಂತೆ ಹಲವರು ಗಣ್ಯರು ಹಾಜರಿರಲಿದ್ದಾರೆ.

ಕವಿ-ಸಹೃದಯರು ಕಾರ್ಯಕ್ರಮಕ್ಕೆ ಆಗಮಿಸಿ ಹೊಸ ಬರಹಗಾರರನ್ನು ಪ್ರೋತ್ಸಾಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಕೋರಲಾಗಿದೆ.

ನಿಯಮ ಮೀರದಿರಿ: ಕ್ರಷರ್ ಮಾಲೀಕರಿಗೆ ಕಿವಿಮಾತು

ತುಮಕೂರು:ಕ್ರಷರ್‌ನಲ್ಲಿ ಕಲ್ಲು ತೆಗೆಯಲು ಬ್ಲಾಸ್ಟ್ ಮಾಡುವ ಸಂದರ್ಭದಲ್ಲಿ ನಿಗಧಿಗಿಂತ ಹೆಚ್ಚಿನ ಸಿಡಿಮದ್ದು ಸಿಡಿಸುವುದರಿಂದ ಕ್ರಷರ್‌ಗಳ ಹತ್ತಿರದಲ್ಲಿರುವ ಹಳ್ಳಿಗಳ ಮನೆಗಳು ಬಿರುಕು ಬಿಡುತ್ತಿರುವ ಬಗ್ಗೆ ಸಾಕಷ್ಟು ದೂರುಗಳು ಬರುತ್ತಿದ್ದು, ಈ ನಿಟ್ಟಿನಲ್ಲಿ ಎಲ್ಲಾ ಕ್ರಷರ್ ಮಾಲೀಕರು ಕಂಟ್ರೋಲ್ ಬ್ಲಾಸ್ಟಿಂಗ್ ಸಿಸ್ಟಮ್ ಅಳವಡಿಸಿಕೊಳ್ಳಲು ಶಾಸಕ ಬಿ.ಸುರೇಶಗೌಡ ಸೂಚಿಸಿದ್ದಾರೆ.


ನಗರದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಕರೆದಿದ್ದ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ವ್ಯಾಪ್ತಿಗೆ ಬರುವ ಎಲ್ಲಾ ಕ್ರಷರ್ ಮತ್ತು ಗ್ರಾನೈಟ್ ಕ್ವಾರಿಗಳ ಮಾಲೀಕರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು,ಗ್ರಾಮೀಣ ಭಾಗದಲ್ಲಿ ಗಣಿ ಬ್ಲಾಸ್ಟ್ನಿಂದ ಮನೆಗಳು ಬಿರುಕು ಬಿಡುವುದು ಸಾಮಾನ್ಯವಾಗಿದೆ. ಹಾಗಾಗಿ ಇಲಾಖೆಯ ನಿಯಮದಂತೆ ಕಂಟ್ರೋಲ್ ಬ್ಲಾಸ್ಟಿಂಗ್ ಅಳವಡಿಸಿಕೊಂಡರೆ,ಬಡವರು ತೊಂದರೆಗೆ ಒಳಗಾಗುವುದು ತಪ್ಪುತ್ತದೆ ಎಂದರು.


ಗಣಿ ಮತ್ತು ಕ್ರಷರ್‌ನಿಂದ ಮನೆ ಬಿರುಕು ಬಿಡುವುದಲ್ಲದೆ,ರಸ್ತೆಗಳು ಹಾಳಾಗುವುದು,ಗಣಿ ಧೂಳಿನಿಂದ ಅಕ್ಕಪಕ್ಕದ ಹೊಲ, ಗದ್ದೆಗಳಲ್ಲಿ ಬೆಳೆದ ಬೆಳೆಗಳ ಮೇಲೆ ಕಲ್ಲಿನ ಧೂಳಿನ ಕಣಗಳು ಕುಳಿತು ದನಕರುಗಳು ಹುಲ್ಲು ತಿನ್ನದಂತಹ ಪರಿಸ್ಥಿತಿ ಇದೆ. ಅಲ್ಲದೆ ಹತ್ತಾರು ಟನ್ ತುಂಬಿದ ಲಾರಿಗಳು ಗ್ರಾಮೀಣ ರಸ್ತೆಗಳಲ್ಲಿ ಓಡಾಡಿ ರಸ್ತೆ ಹಾಳಾಗಿರುವ ದೂರು ಸಾಮಾನ್ಯವಾಗಿದೆ.ಈ ನಿಟ್ಟಿನಲ್ಲಿ ಕ್ರಷರ್ ಮತ್ತು ಗ್ರಾನೈಟ್ ಮಾಲೀಕರು ಹೆಚ್ಚಿನ ಗಮನ ಹರಿಸಬೇಕು.ಬಡವರು, ರೈತರು ಬದುಕುವಂತಹ ವಾತಾವರಣವನ್ನು ನೀವೇ ಸೃಷ್ಟಿಸಿಕೊಡುವಂತೆ ಸಲಹೆ ನೀಡಿದರು.


ಕ್ರಷರ್ ಮಾಲೀಕರ ಸಂಘದ ಅಧ್ಯಕ್ಷರಾದ ಆಶಾ ಪ್ರಸನ್ನಕುಮಾರ್ ಅವರ ಒತ್ತಾಯದಂತೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಇತ್ತೀಚಗೆ ಹೊರಡಿಸಿರುವ ಖನಿಜ ಸಾಗಿಸುವ ಎಲ್ಲಾ ವಾಹನಗಳಿಗೆ ಜಿ.ಪಿ.ಎಸ್. ಅಳವಡಿಸುವಂತೆ ಹೊರಡಿಸಿರುವ ಆದೇಶವನ್ನು ರದ್ದು ಮಾಡಲು ಸದನದಲ್ಲಿ ಒತ್ತಾಯ ಮಾಡಲಾಗುವುದು ಎಂದು ಭರವಸೆ ನೀಡಿದ ಶಾಸಕ ಸುರೇಶಗೌಡ, ಜಿಲ್ಲಾ ಖನಿಜ ನಿಧಿ(ಡಿಎಂಎಫ್)ನ್ನು ಗಣಿ ಭಾದಿತ ಪ್ರದೇಶಗಳಲ್ಲಿ ಮಾತ್ರ ಬಳಕೆ ಮಾಡಿ, ಅಭಿವೃದ್ದಿ ಪಡಿಸಲು ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಜಿಲ್ಲಾಧಿಕಾರಿಗಳ ಜೊತೆಗೆ ಮಾತನಾಡಿ, ನಮ್ಮ ತಾಲೂಕಿನಿಂದ ಸಂಗ್ರಹವಾದ ಹಣವನ್ನು ನಮ್ಮ ತಾಲೂಕಿನ ರಸ್ತೆ, ಕೆರೆ ಕಟ್ಟೆ, ಶಾಲಾ, ಕಾಲೇಜು ಅಭಿವೃದ್ದಿ,ಕುಡಿಯುವ ನೀರಿಗೆ ಬಳಕೆ ಮಾಡುವಂತೆ ಒತ್ತಾಯಿಸಲಾಗುವುದು ಎಂದರು.


ಕೇಂದ್ರ ಸರಕಾರದಿಂದ ವಸಂತ ನರಸಾಪುರ ಕೈಗಾರಿಕಾ ವಲಯದಿಂದ ಬಾಂಬೆ ವರೆಗೆ ಕೈಗಾರಿಕಾ ಕಾರಿಡಾರ್ ಆರಂಭವಾಗಿದ್ದು, ಎಲ್.ಎನ್.ಟಿ.ಕಂಪನಿ ಗುತ್ತಿಗೆ ಪಡೆದಿದೆ.ಈ ಸಂಸ್ಥೆ ಸ್ವತಃ ಕ್ರಷರ್ ತೆರೆಯದೆ ಸ್ಥಳೀಯ ಕ್ರಷರ್‌ಗಳಿಂದ ಕಚ್ಚಾವಸ್ತು ಖರೀದಿಸುವಂತೆ ಮನವಿ ಮಾಡಲಾಗುವುದು.ಸುಮಾರು 2000 ಕೋಟಿ ರೂಗಳ ಯೋಜನೆ ಆರಂಭಗೊಂಡರೆ, ವ್ಯಾಪಾರವಿಲ್ಲದೆ ಸೊರಗಿರುವ ಕ್ರಷರ್‌ಗಳಿಗೆ ಒಂದಷ್ಟು ವಹಿವಾಟು ನಡಸಲು ಸಾಧ್ಯವಾಗುತ್ತದೆ ಎಂದು ಬಿ.ಸುರೇಶಗೌಡ ತಿಳಿಸಿದರು.


ಕ್ರಷರ್ ಮಾಲೀಕರ ಸಂಘದ ಅಧ್ಯಕ್ಷೆ ಶ್ರೀಮತಿ ಆಶಾಪ್ರಸನ್ನಕುಮಾರ್ ಮಾತನಾಡಿ,ಜಿಲ್ಲೆಯಲ್ಲಿ ಅಕ್ರಮ ಗಣಿಗಾರಿಕೆ ಎಂಬುದಿಲ್ಲ. ನಮ್ಮ ಆದಾಯದ ಶೇ30ರಷ್ಟನ್ನು ಜಿಲ್ಲಾ ಖನಿಜ ನಿಧಿಗೆ ಸಲ್ಲಿಸುತ್ತಿದ್ದೇವೆ.ಭಾದಿತ ಪ್ರದೇಶಗಳಿಗೆ ಈ ಹಣದಲ್ಲಿ ಅಭಿವೃದ್ದಿ ಕಾಮಗಾರಿಗಳನ್ನು ಕೈಗೊಳ್ಳಬಹುದಾಗಿದೆ.ಗಣಿ ಮತ್ತು ಭೂ ವಿಜ್ಞಾನ ಇಲಾಖೆ 2023ರ ಜೂನ್ 30ರೊಳಗೆ ಖನಿಜ ಸಾಗಿಸುವ ಎಲ್ಲಾ ವಾಹನಗಳಿಗೆ ಜಿಪಿಎಸ್ ಅಳವಡಿಸಲು ಆದೇಶ ಹೊರಡಿಸಿದೆ.ಇಡೀ ದೇಶದಲ್ಲಿಯೇ ಈ ವ್ಯವಸ್ಥೆ ಜಾರಿಯಿಲ್ಲ. ಕರ್ನಾಟಕದಲ್ಲಿ ಮಾತ್ರ ಇದೆ.ಅದನ್ನು ರದ್ದು ಪಡಿಸುವಂತೆ ಒತ್ತಾಯಿಸಿದರು.


ಹಿಂದಿನ ಸರಕಾರದಲ್ಲಿ ಕ್ರಷರ್ ಮಾಲೀಕರ 23 ಮತ್ತು ಗ್ರಾನೈಟ್ ಮಾಲೀಕರ 4 ಬೇಡಿಕೆಗಳನ್ನು ಕ್ರಷರ್ ತಿದ್ದುಪಡಿ ಮಸೂದೆಯಲ್ಲಿ ಅಂಗೀಕರಿಸಿದೆ.ಆದರೆ ಜಾರಿಯಾಗಿಲ್ಲ.ಇದನ್ನು ಜಾರಿಗೆ ತರಲು ಸರಕಾರ ಮುಂದಾಗಬೇಕು. ಈ ನಿಟ್ಟಿನಲ್ಲಿ ಕ್ರಷರ್ ಮತ್ತು ಗ್ರಾನೈಟ್ ಪರವಾಗಿ ಸದನದಲ್ಲಿ ದ್ವನಿ ಎತ್ತುವಂತೆ ಮನವಿ ಮಾಡಿದರು.


ವೇದಿಕೆಯಲ್ಲಿ ಭೂ ವಿಜ್ಞಾನಿಗಳಾದ ನಾಗರಾಜು,ಸಂತೋಷಕುಮಾರ್ ಉಪಸ್ಥಿತರಿದ್ದರು. ತುಮಕೂರು ತಾಲೂಕಿನ ಮೂವತ್ತಕ್ಕೂ ಹೆಚ್ಚು ಕ್ರಷರ್ ಮತ್ತು ಗ್ರಾನೈಟ್ ಕಂಪನಿಗಳ ಮಾಲೀಕರು ಸಭೆಯಲ್ಲಿ ಭಾಗವಹಿಸಿದ್ದರು.

ಬಡವರ ಏಳಿಗೆಯ ದನಿಯಾಗಿ

ತುರುವೇಕೆರೆ:
ನೀವು ಕಲಿತ ವಿದ್ಯೆ ಕೇವಲ ತುತ್ತಿನ ಚೀಲಕ್ಕೆ ಮೀಸಲಾಗದೆ ನೊಂದವರ, ಅಸಹಾಯಕರ, ಶ್ರಮಿಕರ, ಬಡವರ ಏಳಿಗೆಯ ದನಿಯಾಗಬೇಕೆಂದು ಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಎಚ್.ಎನ್.ಮಹದೇವಯ್ಯ ನವರು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.

ತಾಲ್ಲೂಕಿನ ದಂಡಿನಶಿವರ ಹೋಬಳಿಯ ಹುಲ್ಲೇಕೆರೆ ಗ್ರಾಮದ ಬಸವೇಶ್ವರ ಸಂಯುಕ್ತ ಪದವಿ ಪೂರ್ವ ವಿದ್ಯಾಲಯದಲ್ಲಿ, ತುಮಕೂರು ಚಿರು ಫೈರ್ ಸರ್ವೀಸಸ್ ಹಾಗು 2001 ಸಾಲಿನ ಎಸ್ಸೆಸ್ಸೆಲ್ಸಿ ಹಳೇ ವಿದ್ಯಾರ್ಥಿಗಳ ಸಹಯೋಗದೊಂದಿಗೆ ಸೋಮವಾರ ಹಮ್ಮಿಕೊಂಡಿದ್ದ ಪ್ರತಿಭಾಪುರಸ್ಕಾರ, ಉಚಿತ ಸಮವಸ್ತ್ರ ವಿತರಣೆ, ಕಲಾಸಂಘದ ಉದ್ಘಾಟನೆ ಹಾಗು ನಿವೃತ್ತ ಶಿಕ್ಷಕರ ಅಭಿನಂಧನಾ ಸಮಾರಂಭದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಮಕ್ಕಳು ಪಠ್ಯ ವಿಷಯಗಳ ಜೊತೆ ಸಮಾಜದಲ್ಲಿ ಸಾಮರಸ್ಯದ ಬದುಕು ನಡೆಸುವ ಜೀವನ ಪಾಠದ ಮೌಲ್ಯಗಳನ್ನು ಕಲಿತು ಗುರು ಹಿರಿಯರು, ಪೋಷಕರನ್ನು ಗೌರವಿಸುವ ಮನಸ್ಥಿತಿ ಬೆಳೆಸಿಕೊಳ್ಳಿ ಆಗ ಗುರುಗಳು ಕಲಿಸಿದ ವಿದ್ಯೆ ಸಾರ್ಥಕವಾಗುತ್ತದೆ ಎಂದರು.


ಗ್ರಾಮೀಣ ಪ್ರದೇಶಗಳಲ್ಲಿ ಕನ್ನಡ ಶಾಲೆಗಳಿಗೆ ಬರುವ ಮಕ್ಕಳ ಸಂಖ್ಯೆಯೇ ಕ್ಷೀಣಿಸುತ್ತಿದ್ದು ಅವುಗಳ ಅಳಿವು ಉಳಿವಿನ ಪ್ರಶ್ನೆ ಎದುರಾಗಿದೆಂದು ಹತಾಶೆ ವ್ಯಕ್ತಪಡಿಸಿದರು.


ಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ.ಎಂ.ಎಸ್.ಮಹಲಿಂಗಪ್ಪ ಮಾತನಾಡಿ, ಹಳ್ಳಿಗಾಡಿನ ಪ್ರದೇಶದಲ್ಲಿ ಸಾಕಷ್ಟು ಪ್ರತಿಭಾವಂತ ಮಕ್ಕಳಿದ್ದು ಅದರಲ್ಲೂ ಹೆಣ್ಣು ಮಕ್ಕಳೇ ಮೇಲುಗೈ ಸಾಧಿಸುತ್ತಿದ್ದಾರೆ, ಅವರಿಗೆ ಸೂಕ್ತ ಮಾರ್ಗದರ್ಶನ ಸಿಕ್ಕರೆ ಉತ್ತಮ ವ್ಯಕ್ತಿಗಳಾಗಿ ರೂಪುಗೊಳ್ಳುತ್ತಾರೆ.
ಈ ವೇಳೆ ಹುಲ್ಲೇಕೆರೆ ಸಮಾಜ ಸೇವಕ ಎಚ್.ಬಿ.ಗಂಗಾಧರಯ್ಯನವರು ದಿವಂಗತ ಅಡಿಗೆ ಬಸಪ್ಪ, ಮಲ್ಲಮ್ಮ ಅವರ ಸ್ಮರಣಾರ್ಥ ಶಾಲಾ ಮಕ್ಕಳಿಗೆ ಉಚಿತ ನೋಟ್ ಬುಕ್ ವಿತರಣೆ ಮಾಡಿದರು.

ಹಳೆ ವಿದ್ಯಾರ್ಥಿಗಳಿಂದ 2023ನೇ ಸಾಲಿನ ಎಸ್ಸೆಸ್ಸೆಲ್ಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗು 8ನೇ ತರಗತಿ ಮಕ್ಕಳಿಗೆ ಉಚಿತ ಸಮವಸ್ತ್ರ ವಿತರಿಸಲಾಯಿತು.

ನಂತರ ನಿವೃತರಾದ ಎಚ್.ಕೆ.ರತ್ನಮ್ಮ, ಬಸವಯ್ಯ, ಸಿ.ಜಿ.ಮಹಲಿಂಗಯ್ಯ ಮತ್ತು ಅಮೃತ ಅವರನ್ನು ಅಭಿನಂಧಿಸಲಾಯಿತು.


ಸಮಾರಂಭದಲ್ಲಿ ಸಂಘದ ಸಹ ಕಾರ್ಯದರ್ಶಿ ಎಚ್.ಪಿ.ಪ್ರಸನ್ನ, ನಿರ್ದೇಶಕರಾದ ಗಂಗಾಮಣಿ, ಮುನಿರಾಮಣ್ಣ, ಮುಖಂಡರಾದ ಎಚ್.ಬಿ.ಗಂಗಾಧರಯ್ಯ, ಮುಖ್ಯ ಶಿಕ್ಷಕ ಹಾ.ಪಂ.ಸೋಮಶೇಖರಯ್ಯ, ಬಿ.ಎಸ್.ಶಾಂತರಾಜು, ಜಿ.ಟಿ.ರಘು, ಬಸವರಾಜು, ದೊಂಬರನಹಳ್ಳಿ ಜಯಣ್ಣ, ಹಿರಿಯ ವಿದ್ಯಾರ್ಥಿಗಳಾದ ಎಚ್.ಜಿ.ಧರಣೇಶ್, ಹಾಲೇಗೌಡ, ಮಕ್ಕಳು ಉಪಸ್ಥಿತರಿದ್ದರು.

ಅಪ್ಪನ ದಿನ: ಅಣ್ಣನ ಹುಡುಕುತಿರುವೆ…

0

ಪ್ರಖ್ಯಾತ ವೈದ್ಯೆ ಡಾ. ರಜನಿ ಅವರ ಅಪ್ಪನ ಕುರಿತ ಆಪ್ತ ಬರಹ. ಅಪ್ಪನ ದಿನಕ್ಕಾಗಿ ಪಬ್ಲಿಕ್ ಸ್ಟೋರಿ ಓದುಗರಿಗಾಗಿ


ಅಣ್ಣ ನನಗೆ ಯಾವಾಗಲೂ ಯಾರಿಗಾದರೂ
ಒಳ್ಳೆಯದು ಮಾಡುವ ವ್ಯಕ್ತಿಯಾಗಿ ಕಾಣುತ್ತಾನೆ.
ಆತ ಯಾರಿಗಾದರೂ ಒಳ್ಳೆಯದು ಆಗುತ್ತದೆ ಎಂದರೆ
ಬಿಳಿ ಸಫಾರಿ ಹಾಕಿಕೊಂಡು ಬೆಂಗಳೂರು ಪೇಟೆಗೆ ಹೋಗುತ್ತಿದ್ದ. ಅದೆಷ್ಟು ಜನಕ್ಕೆ ಆ ಕಾಲದಲ್ಲಿ ಕೆಲ್ಸ ಕೊಡಿಸಿದ್ದನೋ. ಎತ್ತರ ಇರುವ ಆಸಾಮಿಯನ್ನು ಬ್ಯಾಸ್ಕೆಟ್ ಬಾಲ್ ಪ್ಲೇಯರ್ ಮಾಡಿಸಿದ ಹೆಮ್ಮೆ ಆತನದು. ತನ್ನ ಸ್ಟೂಡೆಂಟ್ ಅನ್ನು ಗೋಗರೆದು ಆ ಕೆಲಸ ಮಾಡಿಸಿದ್ದನು.ಅದೇ ರೀತಿ ಅದೆಷ್ಟೋ ಜನಕ್ಕೆ ಟೀಚರ್ಸ್ ಟ್ರೈನಿಂಗ್ ಸೇರಿಸಿ ಹೊಟ್ಟೆ ಪಾಡು ಮಾಡಿಸಿ ಕೊಟ್ಟಿದ್ದಾನೆ .


ಮಕ್ಕಳು ಫಸ್ಟ್ rank ತಗೊಂಡ್ರ ಎಂದು ಯಾವತ್ತೂ ನೋಡಿಲ್ಲ.ಗೊತ್ತು ಆತನಿಗೆ ಮಕ್ಕಳು ಚೆನ್ನಾಗಿ ಓದುತ್ತಾರೆ ಎಂದು.
ಸಣ್ಣ ಸಂತೋಷಗಳನ್ನು ಕೂಡ ಅನುಭವಿಸುತ್ತ ಜೀವಿಸುತ್ತಾ ಇದ್ದನು.

ಸಂಕ್ರಾಂತಿ ಹಬ್ಬದ ಎಳ್ಳು ಹೆಂಡತಿ ಜೊತೆಗೆ ಮಾತಾಡುತ್ತಾ ತಿಂಗಳು ಗಟ್ಲೇ ರಾತ್ರಿ ತಿನ್ನುತ್ತಾ ಇದ್ದನು. ಅಮ್ಮ ವೀಳ್ಯದ ಎಲೆ ಮಡಚಿ ಕೊಟ್ಟರೆ ಮೆಲ್ಲುತ್ತಾ ರೀಡರ್ಸ್ ಡೈಜೆಸ್ಟ್ ಓದುತ್ತಾ ಇದ್ದನು. ಅಮ್ಮನಿಗೂ ಕೆಲವು ಜೋಕ್ಸ್ ಅನ್ನು ಓದಿ ಹೇಳುತ್ತಾ ಇದ್ದನು. Laughter the best medicine jokes.
ಕಸ್ತೂರಿ ಕನ್ನಡ ದ digest endu ಹೇಳುತ್ತಾ ಇದ್ದನು.


ಮಯೂರ,ಚಂದಮಾಮ, ಬೊಂಬೆ ಮನೆ,ಸುಧಾ,ಕಸ್ತೂರಿ ,ಪ್ರಜಾಮತ..ಪ್ರಜಾವಾಣಿ ಇವುಗಳ ನಿತ್ಯ ಓದು ಅವನದು.

.ಚಿಂಗಾರಿ, ಓದಿ ಹೆಂಡ್ತಿ ಗೆ ನಗಿಸುತ್ತಾ ಇದ್ದನು.ನಾವು ಶುಜಾ , ಡಾಬು, ಫಂಟಿಮ್ ಓದಿ ಹೇಳಬೇಕಿತ್ತು.
ಬೇಸಗೆ ರಜೆಯಲ್ಲಿ ಮುಂದಿನ ವರ್ಷದ ಎಲ್ಲ ಲೆಕ್ಕ ಮಾಡಿದರೆ ಲೆಕ್ಕಕ್ಕೆ 25ಪೈಸೆ ಪಾಕೆಟ್ money ಕೊಡುತ್ತಾ ಇದ್ದ.
ಆತನ ಶರ್ಟ್ ಪ್ಯಾಂಟ್ ಐರನ್ ಮಾಡಿಕೊಟ್ಟರೆ ಪಾಕೆಟ್ money ಕೊಡುತ್ತಾ ಇದ್ದ. ಆತನ shirt ಎಸ್ಟು ಅಗಲ ಎಂದರೆ ನಾನು ಅದರ ಮೇಲೆ ಓಡಾಡಿ ಐರನ್ ಮಾಡುತ್ತಾ ಇದ್ದೆ…ಎತ್ತರ ಅಗಲದ ಅಳು…ಪುಟ್ಟ ಕೈಗೆ ದೊಡ್ಡ ಶರ್ಟ್..
ಬಟ್ಟೆಯಲ್ಲಿ ಒಂದು ದಾರ ಬಿತ್ತಿಕೊಂಡ್ ರೋ ಕತ್ತರಿ ಯಲ್ಲಿ ಟ್ರಿಮ್ ಮಾಡಿ ಹಾಕಿಕೊಳ್ಳುತ್ತಾ ಇದ್ದನು.

ಬುದ್ಧಿ ಬರುವ ವರೆಗೂ ನನಗೆ ಸ್ನಾನ ಮಾಡಿಸಿ , ಕೂದಲು ಬಾಚಿ ..ಕಲರ್ ಸ್ಟಿಕ್ಕರ್ ಅಂಟಿ ಸುತ್ತ ಇದ್ದ. ಕಣ್ಣು ಕಪ್ಪು ವಿಂಗ್ ಮಾಡುತ್ತಾ ಇದ್ದ. ಅಮ್ಮನಿಗೆ ಹುಷಾರು ಇಲ್ಲದೆ ಹೋದರೆ ನನಗೆ ಇಡ್ಲಿ ವಡೆ ತಿನ್ನಿಸಿ ವಡೆ ರುಚಿ ಹತ್ತಿಸಿದ..
ಹೋಟೆಲಿನಲ್ಲಿ ಬೇಗ ಟೀ ಕುಡಿದು …ನಾನು ಬಿಸಿ ಕುಡಿಯಲು ಆಗದೆ ಒದ್ದಾಡುತ್ತಾ ಇದ್ದೆ.

ಒಮ್ಮೆ ಬೆಂಗಳೂರು magestic ಅಲ್ಲಿ ಅಣ್ಣ ಎಂದು ಕೊಂಡು ಬೇರೆಯವರ ಬೆರಳು ಹಿಡಿದುಕೊಂಡು ಹೋಗುತ್ತಾ ಇದ್ದೆ.. ಅಯ್ಯೋ ಅಣ್ಣನ ಬೆರಳ ತರ ಇಲ್ಲ ಎಂದು ನೋಡಿದಾಗ ಅಣ್ಣ ನಗುತ್ತ ನಿಂತಿದ್ದ.
ಮಂಡ್ಯ ಇಂದ ಬಂದು ಸಂಗಂ theatre ನಲ್ಲಿ ಜೇಮ್ಸ್ ಬಾಂಡ್ ,ಹಿಂದಿ ದೋಸ್ತಿ ,ಧರ್ಮಾತ್ಮಾmovie ತೋರಿಸುತ್ತಾ ಇದ್ದ.
ಉದಯ್ ಕುಮಾರ್ ಕನ್ನಡ ಫಿಲ್ಮ್ ಅಲ್ಲಿ ಹೊಡೆಸಿಕೊಂಡ ರೆ ..ನಾನು ಅಳುತ್ತ ಇದ್ದೆ,,,ಅಮ್ಮ ಅಣ್ಣನಿಗೆ ಹೊಡೀತಾ ಇದ್ದರೆ ಅಂಥ…ನಿಮ್ಮ ಯಜಮಾನರು ಉದಯ್ ಕುಮಾರ್ ತರ ಇದ್ದಾರಾ ಅಮ್ಮ ಎಂದು ಜನ ಅಮ್ಮನನ್ನು ಕೇಳುತ್ತಿದ್ದರು..
Hair dye Bryl cream ಸದಾ ಟ್ರಿಮ್ fellow.
ಜ್ವರ ಬಂದರೆ ಸರ್ಕಾರಿ ಆಸ್ಪತ್ರೆ ಗೆ ಕರೆದು ಕೊಂಡು ಹೋಗಿ .. ಪೆನಿಸಿಲಿನ್ ಇಂಜೆಕ್ಷನ್ ಕೊಡ್ಸಿ ಕೊಂಡು ಬರುತ್ತಾ ಇದ್ದನು.ಹಾಗೂ ಜ್ವರ ಬಿಡದೆ ಇದ್ದರೆ ಚಾಮುಂಡಿ ದೇವಸ್ತಾನಕ್ಕೆ ಹೋಗಿ ..ಯಂತ್ರ ಕಟ್ಟಿಸುತ್ತ ಇದ್ದನು.
ಸುಳ್ಳು ಅಂದರೆ ಕಡುಕೋಪ.ಯಾರಿಗೂ ತಲೆ ಬಾಗ ಲಿಲ್ಲ. ವಯಸ್ಸಾದರೂ ದುಡಿದು ಡಾಕ್ಟರ್ ಓದಿಸಿದ.
ದೋಸ್ತಿ, ದೊಬದನ್ ಹಾಡುಗಳನ್ನು ಆಸ್ವಾದಿಸುತ್ತಾ ಇದ್ದ. ರಫಿ ಎಂದರೆ ಪಂಚ ಪ್ರಾಣ. ನನಗೂ ರಫಿ ಹುಚ್ಚು ಹತ್ತಿಸಿದ.

ಚಿತುಕಿದ ಬೇಳೆ ಸಾರು ಆತನ ಫೇವರಿಟ್.ತನಗಿಂತ 14ವರ್ಷ ಚಿಕ್ಕವಳು ಹೆಂಡತಿ.
ಪ್ರತೀ ಹಬ್ಬಕ್ಕೂ ಅಮ್ಮನಿಗೆ full ವಾಯಲ್ ಸೀರೆ.ತಂದುಕೊಟ್ಟ.
ಸೇಬು , ರಸಬಾಳೆ,ಇಲ್ಲದೆ ಒಂದು ದಿನ ನಮ್ಮನ್ನು ಮಲಗಿಸಲಿಲ್ಲ. ಅಮ್ಮನಿಗೆ ಬಾಯಿ ಹುಣ್ಣು ಆದರೆ ಗುಲ್ಕನ್ , ಗಸೆ ಗಸೇ ಹಾಲು ರೆಡಿ.

ನಾನು ಲೈಬ್ರರಿ ಗೆ ಹೋಗಬೇಕಾಗುತ್ತದೆ ಎಂದು ದುಬಾರಿ ಪುಸ್ತಕ ಗಳನ್ನು ಕೊಂಡು ಕೊಡುತ್ತ ಇದ್ದ. ಮೂಲ ಇಂಗ್ಲಿಷ್ ಲೇಖಕರ ಪುಸ್ತಕ ಓದು ಗೈಡ್ಸ್ ಓದಬೇಡ ..ಇಂಗ್ಲಿಷ್ ಜಾಯಮಾನ ಅರ್ಥ ಆಗಲ್ಲ ಎಂದು ಹೇಳುತ್ತಿದ್ದ.
ಮೂಗು ಚುಚ್ಚಿಸಿ ಅದ ಗಂಟಿಗೆ, injection reaction ಆದಾಗ ಆಸ್ಪತ್ರೆ ಒಂದು ಮಾಡಿಬಿಟ್ಟ.
ನನ್ನ ಮಗಳು ಧೈರ್ಯ ಜಾಸ್ತಿ ಎಂದು ಹೇಳಿ ಹೇಳಿ ಎಲ್ಲ ಕೆಲಸ ಕಳಿಸಿ ಕೊಟ್ಟ.. ಆದರೆ ಸೈಕಲ್ ಹಿಡಿಯಲು ಬಿಡಲಿಲ್ಲ. ಬಿದ್ದು ಏಟು ಮಾಡಿಕೊಳ್ಳುತ್ತಾಳೆ ಎಂದು.
ಎಸ್ಟು ಜ್ವರ ಬಂದರೂ ಅಣ್ಣನ ತೊಡೆ ಮೇಲೆ ಮಲಗಿದರೆ ಜ್ವರ ಬಿಟ್ಟು ಹೋಗುತ್ತಾ ಇತ್ತು.
Varicose veins ಗೆ ಆತನಿಗೆ ದಿನಾ ಕಾಲು ತುಳಿಯಬೇಕಿತ್ತು ..ಅಷ್ಟು ಭಾರ ತಡೆದು ಕೊಳ್ಳುತ್ತ ಇದ್ದ.
ಒಂದು ವಾರಕ್ಕೆ ಒಮ್ಮೆ ಅಮ್ಮ ಬೆನ್ನು ಉಜ್ಜಲು ತಯಾರು ಆಗಬೇಕಿತ್ತು.
Wills filter,godrej shaving round, Bryl cream Charlie scent,ponds powder , ಲಿರಿಲ್ soap ಆತನನ್ನ ನೆನಪಿಸುತ್ತದೆ.
Show man ಆದರೂ ಯಾರಿಗೂ ಬಾಗದೆ ಮಕ್ಕಳನ್ನು ಸಾಕಿದ.. ಚಿಕ್ಕ ವಸ್ತುಗಳಲ್ಲಿ ಕುಷಿ ಇದೆ ಎಂದು ತೋರಿಸಿಕೊಟ್ಟ. ಇಂಗ್ಲಿಷ್ ಫಿಲ್ಮ್ ಬುಕ್ ಗಳ ಗೀಳು ಹತ್ತಿಸಿದ. ನೀನು Anne Frank ಪುನರ್ಜನ್ಮ ಎನುತ್ತ ಇದ್ದ ನನಗೆ.

ನನ್ನ ದೊಡ್ಡ ಕಣ್ಣುಗಳಿಗೆ ಗುಬೇ ಕಣ್ಣು ಎನ್ನುತ್ತ ಇದ್ದ.
ಸ್ವಾಭಿಮಾನಿ ಯಾರ ಬಳಿಯೂ ಸೇವೆ ಮಾಡಿಸಿಕೊಳ್ಳುವ ಇರಾದೆ ಇರಲಿಲ್ಲ.. ಅದೇ ರೀತಿ heart attack ಆಗಿ ಫಟ್ ಎಂದು ನರಳದೆ ಹೋಗಿಬಿಟ್ಟ.
ಆತನ ಶಿಷ್ಯ ಮುದ್ದು ರಾಮ..ಗೌಡ್ರು ನನ್ನ ಹೆಣ ಸುಡು ವಸ್ಟು.. wils filter ಸೆದಿದ್ದಾರೆ ಎಂದು ಹೇಳುತ್ತ ಇದ್ದ..ಹಾಗೆ heart attack ಅಲ್ಲಿ ಹೋಗಿಬಿಟ್ಟ.
ಅಕ್ಷರ ಬಹಳ ಸ್ಪುಟ,,gemoetry ಪ್ರಿಂಟ್ ಥರ.
ಜಡೆ ಮುನಿ ಎಂಬ ಕಾದಂಬರಿ ಬರೆದು ಪ್ರಕಟಿಸಿಲ್ಲ.
ರಾಮಮ್ಮನ ಕೆರೆ ಈ ಕಡೆ ಇಂದ ಆ ಕಡೆ ಈಜುತ್ತಾ ಇದ್ದ.
ದೆವ್ವ ಭೂತ ತನಗೆ ಹೆದರೂತಾವೆ ಎಂದು ಹೇಳುತ್ತ ಇದ್ದ. ದೆವ್ವ ಭೂತ ಇದ್ದವ ಎಂದರೆ 12ಗಂಟೆ ರಾತ್ರಿ ಓಡಾಡಿ ನೋಡು ಎನ್ನುತ್ತಾ ಇದ್ದ.
ಲಂಚ ಕೊಡಲು ಸಾಧ್ಯ ವಿಲ್ಲದೇ.. ಅನೇಕ ಅವಕಾಶಗಳನ್ನು ಕಳೆದು ಕೊಂಡಿದ್ದ.
ಬಿಯರ್ ಮತ್ತು ಇತರೆ hot drinks ಕುಡಿದರೂ ಒಂದು ದಿನವೂ ಅನುಚಿತ ಮಾತು ನಡತೆ ಇಲ್ಲ.
ಸ್ನೇಹಿತರೂ ಒಳ್ಳೆ .. ಅಧಿಕಾರದಲ್ಲಿ ಇದ್ದರೂ ಪ್ರಯೋಜನ ಪಡೆಯಲಿಲ್ಲ.
ಸ್ಥಿತ ಪ್ರಜ್ಞ ನಂತೆ ಬದುಕಿ… ಚಿಕ್ಕ ವಸ್ತುಗಳಲ್ಲಿ
ಕುಷಿ ಪಟ್ಟು.. ಯಾರಿಗೂ ಸುಳ್ಳು ಹೇಳದೆ .ಮೋಸ ಮಾಡದೆ ,ತಲೆ ಬಾಗದೆ … ಇಹ ಲೋಕ ತ್ಯಜಿಸಿದ ಶೋ ಮ್ಯಾನ್ … ಹೆಣ್ಣು ಮಗಳಿಗೆ .. ಧೈರ್ಯ ದಿಂದ ಬದುಕುವ ದ ಕಲಿಸಿದ.. ತಟ್ಟೆ ಎತ್ತಲೂ ಬಿಡದೆ ಮಗಳನ್ನು ಸಾಕಿದ..
ರಫಿ ಹಾಡುಗಳಲ್ಲಿ… Ponds powder ಘಮಲಿನಲ್ಲಿ.. ಟರ್ಕಿ ಟವಲ್ ನಲ್ಲಿ ಅಣ್ಣ ನನ್ನು ಹುಡುಕುತ್ತಾ ಇರುವೆ.


Dr rajani

ಬಸವೇಶ್ವರ ಕಾಲೇಜು ಪ್ರಾಂಶುಪಾಲ ಭದ್ರಪ್ಪ ಇನ್ನಿಲ್ಲ

ತುರುವೇಕೆರೆ: ತಾಲ್ಲೂಕಿನ ದಂಡಿನಶಿವರ ಹೋಬಳಿಯ ಹುಲ್ಲೇಕೆರೆ ಗ್ರಾಮದ ಶ್ರೀ ಬಸವೇಶ್ವರ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಎಸ್‍.ಎನ್‍. ಭದ್ರಪ್ಪ(80)ನವರು ಹೃದಯಾಘಾತದಿಂದ ಶನಿವಾರ ತಡ ರಾತ್ರಿ ಸಾವನ್ನಪ್ಪಿದ್ದಾರೆ.

ಮೃತ ಎಸ್‍್.ಎನ್‍. ಭದ್ರಪ್ಪನವರು ಇಬ್ಬರು ಹೆಣ್ಣುಮಕ್ಕಳು, ಒಬ್ಬ ಗಂಡು ಮಗ ಸೇರಿದಂತೆ ಅಪಾರ ಬಂಧು ಬಾಂಧವರನ್ನು ಅಗಲಿದ್ದಾರೆ.

ಇವರು ಹುಲ್ಲೇಕೆರೆಯ ಶ್ರೀ ಬಸವೇಶ್ವರ ಪ್ರೌಢ ಶಾಲೆಯಲ್ಲಿ ವಿಜ್ಞಾನ ಶಿಕ್ಷಕರಾಗಿ ತದ ನಂತರ ಶ್ರೀ ಬಸವೇಶ್ವರ ಪದವಿ ಪೂರ್ವ ಕಾಲೇಜಿನಲ್ಲಿ ರಾಜ್ಯಶಾಸ್ತ್ರ ಉಪನ್ಯಾಸಕರಾಗಿ, ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿದರು. ಹುಲ್ಲೇಕೆರೆಯ ಬಸವೇಶ್ವರ ಪ್ರೌಢ ಶಾಲೆಯ ಕಟ್ಟಡ ಕಟ್ಟಲು ಹಾಗು ಶ್ರೀ ಸೋಮೇಶ್ವರ ಪ್ರೌಢ ಶಾಲೆ ತೆರೆಯಲು ಸಾಕಷ್ಟು ಶ್ರಮಿಸಿದವರಾಗಿದ್ದರು.

ಇವರು ತನ್ನ ನಿವೃತ್ತಿಯ ನಂತರ ತಿಪಟೂರು ತಾಲ್ಲೂಕಿನ ಕೆರೆಗೋಡಿ ರಂಗಾಪುರ ಮಠದ ಶಾಲೆಗಳ ಆಡಳಿತಾಧಿಕಾರಿಯಾಗಿಯೂ ಹಲವು ವರ್ಷ ಸೇವೆ ಸಲ್ಲಿಸಿದ್ದರು. ಇವರು ದಂಡಿನಶಿವರ ಹೋಬಳಿ ವ್ಯಾಪ್ತಿ ಸಾಕಷ್ಟು ವಿದ್ಯಾರ್ಥಿ ಶಿಷ್ಯಂದಿರನ್ನು ಹೊಂದಿದ್ದು ಮಕ್ಕಳು, ಜನ ಸಾಮಾನ್ಯರ ಅಪಾರ ಪ್ರೀತಿಗಳಿಸಿ ಜನಮಾನಸದಲ್ಲಿ ಉಳಿದವರಾಗಿದ್ದರು.

ಮೃತರ ಅಂತ್ಯಕ್ರಿಯೆ ಕೆ.ಆರ್‍.ಪೇಟೆ ತಾಲ್ಲೂಕಿನ ಸಂತೆಬಾಚಿಹಳ‍್ಳಿಯಲ್ಲಿ ಭಾನುವಾರ ಮಧ್ಯಾಹ್ನ ನೆರೆವೇರಿತು.

ಕೆರೆಗೋಡಿ ರಂಗಾಪುರ ಮಠ: ಮಾಜಿ ಆಡಳಿತಾಧಿಕಾರಿ ನಿಧನ

0

ತುರುವೇಕೆರೆ: ತಾಲ್ಲೂಕಿನ ದಂಡಿನಶಿವರ ಹೋಬಳಿಯ ಹುಲ್ಲೇಕೆರೆ ಗ್ರಾಮದ ಶ್ರೀ ಬಸವೇಶ್ವರ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಎಸ್‍.ಎನ್‍. ಭದ್ರಪ್ಪ(80)ನವರು ಹೃದಯಾಘಾತದಿಂದ ಶನಿವಾರ ತಡ ರಾತ್ರಿ ಸಾವನ್ನಪ್ಪಿದ್ದಾರೆ.

ಮೃತ ಎಸ್‍.ಎನ್‍. ಭದ್ರಪ್ಪನವರು ಇಬ್ಬರು ಹೆಣ್ಣುಮಕ್ಕಳು, ಒಬ್ಬ ಗಂಡು ಮಗ ಸೇರಿದಂತೆ ಅಪಾರ ಬಂಧು ಬಾಂಧವರನ್ನು ಅಗಲಿದ್ದಾರೆ.

ಇವರು ಹುಲ್ಲೇಕೆರೆಯ ಶ್ರೀ ಬಸವೇಶ್ವರ ಪ್ರೌಢ ಶಾಲೆಯಲ್ಲಿ ವಿಜ್ಞಾನ ಶಿಕ್ಷಕರಾಗಿ ತದ ನಂತರ ಶ್ರೀ ಬಸವೇಶ್ವರ ಪದವಿ ಪೂರ್ವ ಕಾಲೇಜಿನಲ್ಲಿ ರಾಜ್ಯಶಾಸ್ತ್ರ ಉಪನ್ಯಾಸಕರಾಗಿ, ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿದರು. ಹುಲ್ಲೇಕೆರೆಯ ಬಸವೇಶ್ವರ ಪ್ರೌಢ ಶಾಲೆಯ ಕಟ್ಟಡ ಕಟ್ಟಲು ಹಾಗು ಶ್ರೀ ಸೋಮೇಶ್ವರ ಪ್ರೌಢ ಶಾಲೆ ತೆರೆಯಲು ಸಾಕಷ್ಟು ಶ್ರಮಿಸಿದವರಾಗಿದ್ದರು.

ಇವರು ತನ್ನ ನಿವೃತ್ತಿಯ ನಂತರ ತಿಪಟೂರು ತಾಲ್ಲೂಕಿನ ಕೆರೆಗೋಡಿ ರಂಗಾಪುರ ಮಠದ ಶಾಲೆಗಳ ಆಡಳಿತಾಧಿಕಾರಿಯಾಗಿಯೂ ಹಲವು ವರ್ಷ ಸೇವೆ ಸಲ್ಲಿಸಿದ್ದರು. ಇವರು ದಂಡಿನಶಿವರ ಹೋಬಳಿ ವ್ಯಾಪ್ತಿ ಸಾಕಷ್ಟು ವಿದ್ಯಾರ್ಥಿ ಶಿಷ್ಯಂದಿರನ್ನು ಹೊಂದಿದ್ದು ಮಕ್ಕಳು, ಜನ ಸಾಮಾನ್ಯರ ಅಪಾರ ಪ್ರೀತಿಗಳಿಸಿ ಜನಮಾನಸದಲ್ಲಿ ಉಳಿದವರಾಗಿದ್ದರು.

ಮೃತರ ಅಂತ್ಯಕ್ರಿಯೆ ಕೆ.ಆರ್‍.ಪೇಟೆ ತಾಲ್ಲೂಕಿನ ಸಂತೆಬಾಚಿಹಳ‍್ಳಿಯಲ್ಲಿ ಭಾನುವಾರ ಮಧ್ಯಾಹ್ನ ನೆರೆವೇರಿತು.

ಜಾತಿ, ಮತ ಮೀರಿದ ಬಸವ ತತ್ವ; ಎಂಟಿಕೆ

0

ತುರುವೇಕೆರೆ:

ಸಾಮಾಜಿಕ ನ್ಯಾಯ ಮತ್ತು ಮಾನವೀಯ ನೆಲೆಯಲ್ಲಿ ಬಸವ ತತ್ವವನ್ನು ಇಡೀ ಜಗತ್ತಿಗೆ ಸಾರಿದವರು ಬಸವಣ್ಣನವರು ಎಂದು ಶಾಸಕ ಎಂ.ಟಿ.ಕೃಷ್ಣಪ್ಪ ಅಭಿಪ್ರಾಯಪಟ್ಟರು.

ಪಟ್ಟಣದ ಗುರುಸಿದ್ದರಾಮೇಶ್ವರ ಸಮುದಾಯ ಭವನದಲ್ಲಿ ತಾಲ್ಲೂಕು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಹಾಗು ಎಲ್ಲ ವೀರಶೈವ ಲಿಂಗಾಯತ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಶನಿವಾರ ಹಮ್ಮಿಕೊಂಡಿದ್ದ ಬಸವ ಜಯಂತಿ, ನೂತನ ಶಾಸಕರಿಗೆ ಅಭಿನಂಧನಾ ಹಾಗು ಪ್ರತಿಭಾಪುರಸ್ಕಾರ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.

ಜಾತಿ, ಮತ ಪಂಥಗಳನ್ನು ಮೀರಿದ ವಿಚಾರಗಳನ್ನು ಬಸವ ತತ್ವ ಒಳಗೊಂಡಿದ್ದರಿಂದಲೇ ಕ್ರೈಸ್ತ, ಇಸ್ಲಾಂ, ಧರ್ಮಕ್ಕಿಂತ ಬಸವಣ್ಣನವರ ಬಸವ ತತ್ವ ಮೇರು ಸ್ಥಾನದಲ್ಲಿದ್ದು ಆನಂತರ ಬೌದ್ಧ ಧರ್ಮ ತನ್ನ ಸ್ಥಾನ ಪಡೆದುಕೊಂಡಿದೆ.

ಬಸವಣ್ಣನವರ ಬಸವ ತತ್ವಗಳು ಒಂದು ಕಾಲಘಟ್ಟಕ್ಕೆ ಸ್ಥ್ಥಿರವಾಗದೆ ಚಲನಶೀಲತೆಯನ್ನು ಪಡೆದುಕೊಂಡು ವಿಶ್ವಮಾನವ ರೂಪ ತಾಳಿತು ಆದರೆ ಕಾಲನಂತರದಲ್ಲಿ ಅದು ಒಂದು ಜಾತಿಗೆ ಸೀಮಿತವಾಗುವ ಮೂಲಕ ತನ್ನ ನೆಲೆಯ ಸ್ವರೂಪವನ್ನು ಕಳೆದುಕೊಂಡಿತು. ಹಾಗಾಗಿ ಬಸವಣ್ಣನ ವಿಚಾರಗಳನ್ನು, ತತ್ವಗಳನ್ನು ಮತ್ತು ಆಲೋಚನಾ ಕ್ರಮಗಳನ್ನು ಒಂದು ಸಮುದಾಯಕ್ಕೆ ಸಂಕುಚಿತಗೊಳಿಸಿದ ಎಲ್ಲ ಸಮುದಾಯಗಳ, ಧರ್ಮಗಳ ಏಳಿಗೆಯೆ ಸಾಧನವಾಗಿ ಬಳಕೆಯಾದರೆ ಬಸವಣ್ಣನವರ ಆಶಯಗಳು ಸಾರ್ಥಕಗೊಳುತ್ತದೆ ಎಂದರು.

ಮುಖ್ಯ ಮಂತ್ರಿ ಸಿದ್ದರಾಮಯ್ಯನವರು ಉದ್ದೇಶಿಸಿರುವ ಜಾತಿ ಸಮೀಕರಣದ ಬಹುದೊಡ್ಡ ಅಪಾಯ ಏನೆಂದರೆ ಶೋಷಿತ ಸಮುದಾಯಗಳಾದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳು ಹಾಗು ದುರ್ಬಲ ವರ್ಗಗಳ ಅಸ್ಮಿತೆಯನ್ನು ಬುಡಮೇಲು ಮಾಡುತ್ತದೆ ಹಾಗಾಗಿ ಇದನ್ನು ತಾತ್ವಿಕವಾಗಿ ವಿರೋಧಿಸುತ್ತೇನೆ ಎಂದರು.

ಎಪಿಎಂಸಿ ಕಾಯಿದೆ, ಕೊಬ್ಬರಿ ಮತ್ತು ತೆಂಗು ಬೆಳೆಗಳಿಗೆ ಬೆಂಬ ಬೆಲೆ ನೀಡುವಂತೆ ಸದನದಲ್ಲಿ ಪ್ರಸ್ತಾಪಿಸಿ ತೆಂಗು ಬೆಳೆಗಾರರಿಗೆ ನ್ಯಾಯ ಒದಗಿಸಲಾಗುವುದು ಎಂದರು.

ತಿಪಟೂರು ಶಾಸಕ ಕೆ.ಷಡಕ್ಷರಿ ಮಾತನಾಡಿ, ವಿರೋಧ ಪಕ್ಷದವರು ಎಷ್ಟೇ ಬೊಬ್ಬೆ ಹಾಕಿದರೂ ನಾವು ನೀಡಿರುವ 5 ಗ್ಯಾರಂಟಿಗಳನ್ನು ಹಂತ ಹಂತವಾಗಿ ನೀಡಲಾಗುವುದು. ಏಷ್ಯಾ ಖಂಡದಲ್ಲೇ ತಿಪಟೂರು ತೆಂಗು ಮತ್ತು ಅಲ್ಲಿನ ಕೊಬ್ಬರಿ ಮಾರುಕಟ್ಟೆ ಒಳ್ಳೆಯ ಜನಪ್ರಿಯತೆ ಪಡೆದುಕೊಂಡಿದೆ. ರಾಗಿಯನ್ನು ರೈತರಿಂದ ಬೆಂಬಲ ಬೆಲೆಯಲ್ಲಿ ಪಡೆದು ಪುನಃ ಜನಸಾಮಾನ್ಯರಿಗೆ ಪಡಿತರ ಚೀಟಿಯಲ್ಲಿ ಆಹಾರ ದಾನ್ಯಗಳನ್ನು ವಿತರಣೆ ಮಾಡಿದ ಮೊದಲ ಕೀರ್ತಿ ಕಾಂಗ್ರೆಸ್ ಗೆ ಸಲ್ಲುತ್ತದೆ ಎಂದು ಹೇಳಿದರು.

ಜಿಲ್ಲೆಗಳ ಸಂಪರ್ಕ ಕೇಂದ್ರವಾದ ಕೆ.ಬಿ.ಕ್ರಾಸ್ನಲ್ಲಿ ಸೂಪರ್ಸ್ಪೆಷಾಲಿಟಿ ಆಸ್ಪತ್ರೆಯನ್ನು ತರಲು ಚಿಂತಿಸಲಾಗಿದೆ ಎಂದು ಹೇಳಿದರು.

ಇದೇ ವೇಳೆ ವಿರಕ್ತಮಠದ ಕರಿವೃಷಭ ದೇಶಿ ಕೇಂದ್ರ ಹಾಗು ತಮ್ಮಡಿಹಳ್ಳಿ ಅಭಿನವ ಮಲ್ಲಿಕಾಜರ್ುನ ದೇಶಿ ಕೇಂದ್ರ ಸ್ವಾಮೀಜಿಗಳು ಆಶೀರ್ವಚನ ನೀಡಿದರು. ಎಸ್.ಎಸ್.ಎಲ್.ಸಿ ಮತ್ತು ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾಥರ್ಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಇದಕ್ಕೂ ಮೊದಲು ವಿವಿಧ ಜನಪದ ಕಲಾತಂಡಗಳೊಂದಿಗೆ ಬಸವಣ್ಣನವರ ಭಾವಚಿತ್ರದೊಂದಿಗೆ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಯಿತು. ಅಕ್ಕನ ಬಳಗದವರು ವಚನ ಗಾಯ ನಡೆಸಿಕೊಟ್ಟರು.

ಸಮಾರಂಭದಲ್ಲಿ ವೀರಶೈವ ಲಿಂಗಾಯತ ಮಹಾಸಭಾದ ತಾಲ್ಲೂಕು ಅಧ್ಯಕ್ಷ ಎಸ್.ಎಂ.ಕುಮಾರ ಸ್ವಾಮಿ, ಜಿಲ್ಲಾಧ್ಯಕ್ಷ ಮೋಹನ್ ಪಟೇಲ್, ಜಿಲ್ಲಾ ಪ್ರಧಾನ ಕಾರ್ಯದಶರ್ಿ ಕೆ.ಟಿ.ಶಿವಕುಮಾರ್, ಜಿಲ್ಲಾ ಖಜಾಂಚಿ ಎಂ.ಬಿ.ಶೇಖರ್, ತಾಲ್ಲೂಕು ಯುವಘಟಕದ ಅಧ್ಯಕ್ಷ ಎನ್.ಯೋಗೀಶ್, ದೊಂಬರನಹಳ್ಳಿ ಬಸವರಾಜು, ಸುನಿಲ್ ಬಾಬು ನಿರೂಪಿ, ದುಂಡಾ ಸುರೇಶ್ ವಂದಿಸಿದರು.

ಅಪ್ಪನ ದಿನದ ವಿಶೇಷ: ಒಂದು ಭತ್ತದ ಕಾಳು ಮತ್ತು ನನ್ನಣ್ಣ

0

ಆಗಿನ್ನು ನಾನು ಸಣ್ಣವನು. ಈಗ ನಮ್ಮೊಂದಿಗೆ ಇಲ್ಲದ ಅಣ್ಣ ಯಾವಾಗಲೂ ಆ ಘಟನೆಯಿಂದಲೇ ನನ್ನನ್ನು ಕಾಡುತ್ತಾರೆ. ನನ್ನಪ್ಪನನ್ನು ನಾವೆಲ್ಲ  ಅಣ್ಣ ಎಂದೇ ಕರೆಯುತ್ತಿದ್ದೆವು.

ರಾಶಿ ರಾಶಿ  ಭತ್ತ ಬಿದ್ದಿದ್ದರೂ ಭತ್ತ ಬಡಿಯುವಾಗ ರಾಶಿ ರಾಶಿಯಿಂದ ದೂರ ಚೆಲ್ಲಿ ಅಲ್ಲಲ್ಲಿ ಬಿದ್ದಿರುತ್ತಿದ್ದ ಒಂದೊಂದು ಭತ್ತದ ಕಾಳನ್ನು ಹೆಕ್ಕಿ ಅದನ್ನು ಮತ್ತೇ ಭತ್ತದ ರಾಶಿಗೆ ತಂದು ಹಾಕುತ್ತಿದ್ದ ಅಣ್ಣನ ಚಿತ್ರ, ಆಗಷ್ಟೇ ಜೈಲಿನಿಂದ ಬಂದವರು ನಮ್ಮಜ್ಜಿ ಮನೆಯಲ್ಲಿ ನೆಲದ ಮೇಲೆ ಕುಳಿತುಕೊಂಡು ಗಡ್ಡ ಶೇವ್ ಮಾಡಿಕೊಳ್ಳುತ್ತಿದ್ದ ಅಣ್ಣ, ಕೊನೆಯಲ್ಲಿ ಕೆಲವೇ ತಿಂಗಳಲ್ಲಿ ನಮ್ಮನ್ನೆಲ್ಲ ಬಿಟ್ಟು ಹೋಗುತ್ತಾರೆ ಎಂದ ದಿನದಿಂದ ಅವರು ನಮ್ಮನ್ನು ಬಿಟ್ಟು ಹೋಗುವವರೆಗೂ ಅವರ ಅರ್ಧಂಬರ್ಧ ಮುಖ ನೋಡಿ ಅವರ ಮುಖ ನೋಡಲಾಗದೇ ಮುಖ ತಪ್ಪಿಸಿಕೊಂಡು ನಾನು ಓಡಿ ಹೋದ ದಿನಗಳು ನನಗೆ ಈಗಲು ಕಾಡುತ್ತಿವೆ. ಅವರಿಗೆ ಮುಖವಿಟ್ಟು ಮುದ್ದಾಡಬೇಕಾಗಿತ್ತು, ಆದರೆ ಅಷ್ಟು ಧೈರ್ಯ ಸಾಲದೇ ಹೋಯಿತಲ್ಲ !!

ಅಪ್ಪಾ ಎಂದರೆ ಆಕಾಶ ಎಂದೇ ಬಣ್ಣಿಸುತ್ತಾರೆ. ಅಪ್ಪ ಎಂದರೆ ಆಕಾಶಕ್ಕಿಂತಲೂ ಅಗಲ ಎಂದೇ ನನ್ನ ನಂಬಿಕೆ.  ನನಗೆ ಅಪ್ಪ ಎಂದರೆ ಪ್ರೀತಿ ಅಷ್ಟೇ ಅಲ್ಲ, ಅದೊಂದು ಬಿಡಿಸಲಾಗದ ಆನಂದ. ಎರಡು  ಸಲ ಕಪಾಳ ಮೋಕ್ಷ ಮಾಡಿದ್ದು ಬಿಟ್ಟರೆ ನನಗೆಂದೂ ಅವರು ಒದೆಕೊಟ್ಟಿದ್ದೇ ಇಲ್ಲ. ನಮ್ಮ ಓದಿಗೂ, ದುಡಿಮೆಗೂ ಗಮನವೇ ಕೊಡದ ಅವರೆಂದರೆ ನನಗಿಷ್ಟ!

   ಪರೀಕ್ಷೆಯ ದಿನಗಳಲ್ಲಿ ಓದಿಸುವುನ್ನು ಬಿಟ್ಟು ಎಡಗೈನಲ್ಲಿ ಬರೆದರೂ ಮಗ ಪಾಸಾಗುತ್ತಾನೆ ಎಂದು ಹೇಳುತ್ತಲೇ ಓದಿನ ಬಗ್ಗೆ ನನಗೆ ಭಯವೇ ಇಲ್ಲದಂತೆ ಮಾಡಿಬಿಟ್ಟರು! ನಮ್ಮದು ಹಳ್ಳಿ, ಕುಗ್ರಾಮ. ನನಗೆ ಯಾವ ಶಾಲೆಯಲ್ಲೂ ಇಂಗ್ಲಿಷ್, ಹಿಂದಿ ಮೇಷ್ಟ್ರಿಲ್ಲ. ಕಾಲೇಜಿನಲ್ಲಿ ಇದ್ದಿದ್ದು ಕನ್ನಡ, ಅರ್ಥಶಾಸ್ತ್ರದ ಉಪನ್ಯಾಸಕರು ಇಬ್ಬರೇ!! ಆದರೂ ನಾನು ಪಸ್ಟ್ ಕ್ಲಾಸ್!!! ಇದು ಸಾಧ್ಯವಾಗಿದ್ದು ಅಣ್ಣನ ಕಾರಣದಿಂದ.

ಶ್ರೀಮಂತಿಕೆಯಿಂದ ಕಡುಬಡತನವನ್ನು ಆಯ್ಕೆ ಮಾಡಿಕೊಂಡ ಅಣ್ಣನ ಮನೆಯಲ್ಲಿ ಕೆಲ ದಿನಗಳಲ್ಲಿ ಒಂದು ಹಿಡಿ ಅಕ್ಕಿ ಇಲ್ಲದ ದಿನಗಳು ಇದ್ದವು. ಆದರೂ ಅವರು ಅದು ನಮಗೆ ತಾಕದಂತೆ ನೋಡಿಕೊಂಡರು. ಯಾವಾಗಲೂ ನಗುತ್ತಲೇ ನಮ್ಮ ಮುಂದೆ ಇರುತ್ತಿದ್ದ ಅವru ರಾತ್ರಿ ಹನ್ನೆರಡಾದರೂ ಮನೆಯ ಮುಂದಿನ ಸಿಮೆಂಟ್ ಜಾರಬಂಡಿ ಮೇಲೆ ಕುಳಿತು ಏನನ್ನೋ ಯೋಚಿಸುತ್ತಿದ್ದರು. ಆ ಯೋಚನೆಯ ಗುಟ್ಟನ್ನು ಕೊನೆಗೂ ನನಗೆ ಹೇಳಲೇ ಇಲ್ಲ.

ರಾಶಿಗಟ್ಟಲೆ ಭತ್ತ ಇದ್ದರೂ ದೂರದಲ್ಲಿ ಬಿದ್ದಿರುತ್ತಿದ್ದ ಭತ್ತದ ಕಾಳು ಹೆಕ್ಕಿ ಅದನ್ನು ರಾಶಿಗೆ ತಂದು ಹಾಕುತ್ತಿದ್ದರು. ಸಿ.ಎಸ್.ಪುರದ ಗದ್ದೆ ಬಯಲಿನಲ್ಲಿ ಭತ್ತದ ಕಣದಲ್ಲಿ ಯಾರೂ ಹೀಗೆ ಮಾಡುತ್ತಿರಲಿಲ್ಲ. ಹತ್ತಿರ ಹತ್ತಿರ ನೂರು ಚೀಲ ಭತ್ತ ಬೆಳೆಯುತ್ತಿದ್ದರು. ಒಂದು ಭತ್ತದ ಕಾಳನ್ನು ವೇಸ್ಟ್ ಮಾಡದಂತೆ  ಹೆಕ್ಕುತ್ತಿದ್ದ ಅಣ್ಣ ಅಲ್ಲಿಗೆ ಬರುತ್ತಿದ್ದ ಮಂಡರ, ಬುಡಬುಡಿಕೆಯವರಿಗೆ ಮೊರದ ತುಂಬಾ ಭತ್ತವನ್ನು ಕೊಡುತ್ತಿದ್ದರು. ಇದನ್ನೊಮ್ಮೆ ನಾನು ಕೇಳಿಯೇ ಬಿಟ್ಟೆ! ಒಂದೊಂದು ಭತ್ತ ಸೇರಿದರೆ ಅದು ರಾಶಿ ಭತ್ತ ಆಗೋದ್. ಒಂದೊಂದು ಕಾಳಿಗೂ ಬೆಲೆ ಇದೆ. ಬಡವರಿಗೆ, ಹಸಿದವರಿಗೆ ದೇವರು ಕೊಟ್ಟಿದ್ದನ್ನು ಕೊಟ್ಟುಬಿಡಬೇಕು. ಅವರ ಮನೆ ಮಕ್ಕಳು ಹಸಿದುಕೊಂಡು ಮಲಗಬಾರದು ಎಂದರು. ಆದರೆ ನಾವು ಹಸಿದ ದಿನಗಳಲ್ಲಿ ಅವರಿಂದ ಆ ಮಾತುಗಳೇ ಬರುತ್ತಿರಲಿಲ್ಲ.

ಆಗಿನ ಕಾಲಕ್ಕೆ ಅಂಬಾಸಿಡರ್ ಕಾರು ಇಟ್ಟುಕಂಡು ಜಮೀನ್ದಾರರ ಮಗನಾಗಿದ್ದವರು. ಹಿಸ್ಸೆ ಕೇಳಿದರು ಎಂಬ ಕಾರಣಕ್ಕಾಗಿ ಎಲ್ಲವನ್ನು ತನ್ನ ಸಹೋದರನಿಗೆ ಬಿಟ್ಟು ಬರಿಗೈಲಿ, ಹುಟ್ಟ ಬಟ್ಟೆಯಲ್ಲಿ ಆ ತಾಲ್ಲೂಕಿನಿಂದಲೇ ದೂರದ ಊರಿಗೆ ಬಂದ ಅಣ್ಣ ಬದುಕು ಕಟ್ಟಿಕೊಳ್ಳಲಿಕ್ಕಾಗಿ ಏನ್ನೆಲ್ಲ ಹೆಣಗಿದರು. ದೇವರು, ಧರ್ಮ ಎನ್ನುತ್ತಲೇ ಎರಡನ್ನೂ ಪರೀಕ್ಷಿಸಿ ನೋಡಿದ್ರ ಎಂದು ಸಹ ನನಗೆ ಅನ್ನಿಸಿದಿದೆ. ‘  ‘

ಹಣ ಕತ್ತೆ ತಿನ್ನುವ ಪೇಪರ್, ಬಡ ಜನರ ಕಲ್ಯಾಣಕ್ಕಾಗಿ ಬದುಕಬೇಕು ಎನ್ನುತ್ತಿದ್ದ ಅವರು ಕಡೇವರೆಗೂ ಆ ದಾರಿಯಲ್ಲೇ ಸಾಗಿದರು. ಇದೇ ಕಾರಣಕ್ಕಾಗಿಯೇ ಅಣ್ಣನ ಮಗ ಎಂದಾಕ್ಷಣ ಕಣ್ಣಲ್ಲಿ ನೀರು ತರಿಸಿಕೊಂಡು ಅಣ್ಣನನ್ನು ನೆನಪು ಮಾಡಿಕೊಳ್ಳುವ ಅನೇಕರು ನನಗೆ ಆಗಾಗ ಈಗಲೂ ಎದುರಾಗುತ್ತಿರುತ್ತಾರೆ. ಸಾಕಷ್ಟು ಸಂದರ್ಭಗಳಲ್ಲಿ ಸಹಾಯ ಪಡೆದವರೇ ಕೆಟ್ಟದಾಗಿ ಮಾತನಾಡಿದರೂ ಅವರು ಆ ಜನರಿಗೆ ಗೊತ್ತಾಗುವುದಿಲ್ಲ ಎನ್ನುತ್ತಿದ್ದರು. ನಾನೊಬ್ಬ ಕವಿ, ಪತ್ರಕರ್ತ, ಕಥೆಗಾರ, ರೈತ ಹೋರಾಟಗಾರ, ವಿದ್ಯಾರ್ಥಿ ನಾಯಕ ಹೀಗೆ ಏನ್ನೆಲ್ಲ ಆಗಿದ್ದೇನೋ ಅದಕ್ಕೆಲ್ಲವೂ ಅವರೇ ಕಾರಣ.  

ರೈತರ ಸರ್ಕಾರ ಬರಬೇಕು. ರೈತರ ಮಕ್ಕಳಿಗೆ ಉಚಿತ ಶಿಕ್ಷಣ, ರೈತರಿಗೆ ಪೆನ್ಷನ್ ಸಿಗಬೇಕೆಂದು ಬಲವಾಗಿ ವಾದಿಸುತ್ತಿದ್ದ ಅಣ್ಣ ರೈತರ ಹೋರಾಟದಲ್ಲಿ ಆರು ತಿಂಗಳ ಕಾಲ ಜೈಲು ಶಿಕ್ಷೆ ಅನುಭವಿಸಿ ಬಂದವರು. ಆ ಕಾಲದಲ್ಲಿ ಕ್ಲಾಸ್ ಒನ್ ಕಂಟ್ರಾಕ್ಟರ್ ಲೈಸೆನ್ಸ್ ಹೊಂದಿದ್ದ ಅವರು ರೈತರ ಹೋರಾಟಕ್ಕಾಗಿ ಅದನ್ನು ಎಸೆದುಬಂದರು. ಎಲ್ಲ ಹೋರಾಟಗಳಲ್ಲೂ ಪ್ರಾಮಾಣಿಕರು ಮೂಲೆ ಗುಂಪಾಗುವಂತೆ ಇವರು ಸಹ ಮೂಲೆಗುಂಪಾದರು. ‘

ರೈತರ ಹೋರಾಟದ ಕಹಿ ಅನುಭವಗಳಿದ್ದರೂ ನನ್ನನ್ನು ಸರ್ಕಾರಿ ಅಧಿಕಾರಿಯಾಗಬೇಕೆಂದು ಅವರು ಬಯಸಲಿಲ್ಲ.ಉದ್ಯಮಿಯಾಗಬೇಕೆಂದು ಹೇಳಲಿಲ್ಲ. ಗುತ್ತಿಗೆದಾರನಾಗಲು ಹೇಳಲಿಲ್ಲ. ರೈತ ಹೋರಾಟಗಾರನಾಗಬೇಕೆಂಬ ಆಸೆ ಅವರಲ್ಲಿತ್ತು. ಇದೇ ಕಾರಣಕ್ಕಾಗಿ ಅವರು ನನ್ನನ್ನು ರೈತ ಸಂಘಕ್ಕೆ ಸೇರುವಂತೆ ಪುಸಲಾಯಿಸುತ್ತಿದ್ರು. ಪ್ರೊ. ನಂಜುಂಡಸ್ವಾಮಿ ಅವರನ್ನು ಭೇಟಿಯಾಗುವಂತೆ ನನಗೆ ಹೇಳುತ್ತಿದ್ದರು. ಅಣ್ಣನ ಒತ್ತಾಸೆ ಇಲ್ಲದಿದ್ರೆ ನಾನು ಪ್ರಾಂತ ರೈತ ಸಂಘದ ಗುಬ್ಬಿ ತಾಲ್ಲೂಕು ಮುಖಂಡನಾಗಿ ಕೆಲಸ ಮಾಡಲು ಆಗುತ್ತಿರಲಿಲ್ಲ. ಎಂ.ಎ. ಮುಗಿಸಿ ನನ್ನೆಲ್ಲ ಸ್ನೇಹಿತರು ಸರ್ಕಾರಿ ಕೆಲಸಕ್ಕಾಗಿ ಹಾತೊರೆದು ಓದುತ್ತಿದ್ದರೆ ನಾನು, ಎಸ್.ಎಂ,ಕೃಷ್ಣ ಸರ್ಕಾರ ಜಾರಿಗೆ ತಂದಿದ್ದ ಕರಾಳ ವಿದ್ಯುತ್ ಕಳ್ಳತನ ಕಾಯ್ದೆ ವಿರುದ್ದ ಊರೂರುಗಳಲ್ಲಿ ಹೋರಾಟ ನಡೆಸುತ್ತಾ ತಿರುಗುತ್ತಿದ್ದೆ. ಇದು ಅಣ್ಣನಿಗೆ ಖುಷಿ ತರುತ್ತಿತ್ತು. !!

ನಾನು ವಿದ್ಯಾರ್ಥಿ ದೆಸೆಯಲ್ಲಿ ಸ್ಥಳೀಯ ಪತ್ರಿಕೆಗಳಲ್ಲಿ, ಪ್ರಜಾವಾಣಿ ಪತ್ರಿಕೆಯಲ್ಲಿ ಬರೆಯುತ್ತಿದ್ದ ಓದುಗರ ಪತ್ರಗಳು, ಕತೆಗಳು, ಲೇಖನಗಳನ್ನು ಅಣ್ಣ ಕತ್ತರಿಸಿ ಜೋಪಾನವಾಗಿ ಇಡುತ್ತಿದ್ದರು. ನನ್ನನ್ನು ಪತ್ರಕರ್ತನಾಗಿ ರೂಪಿಸಲು ಇದು ಸಹ ಕಾರಣವಾಯಿತು. ಅವರು ಕಷ್ಟದಲ್ಲಿದ್ದರೂ ಸಹ ನನ್ನಿಂದ ಹಣ ಕೇಳುತ್ತಿರಲಿಲ್ಲ. ನಾನೊಮ್ಮೆ ಊರಿಗೆ ಹೋದಾಗ ಅಮ್ಮನ ಬಳಿ ಹೇಳುತ್ತಿದ್ದ್ದು ಕೇಳಿ ಚಕಿತನಾದೆ. “ಅವನಿಗೆ ಹಣ ಕೇಳಬೇಡ. ಅವನ ಸಂಬಳ ಕಡಿಮೆ. ನಾವು ಹಣ ಕೇಳಿದರೆ ಬೇರೆ ರೀತಿಯಲ್ಲಿ ಹಣ ಸಂಪಾದನೆಗೆ ಇಳಿಯುತ್ತಾನೆ. ಅವನು ಪತ್ರಕರ್ತ’…  ನನ್ನ ಎದುರು ಹೇಳದಿದ್ರೂ ನನ್ನ ಆದರ್ಶದ ದಾರಿಯನ್ನು ಈ ರೀತಿ ಹೇಳಿಕೊಟ್ಟವರು ಅವರು.

ತುಂಬಾ ಪ್ರಾಮಾಣಿಕವಾಗಿ ಹೇಳಬೇಕೆಂದರೆ, ಕೆಲವೊಮ್ಮೆ ನಾನು ತುಂಬಾ ಕಷ್ಟದಲ್ಲಿದ್ದಾಗ,  ಕೆಲವು  ಸ್ನೇಹಿತರು ನನ್ನ ಆರ್ಥಿಕ ಸ್ಥಿತಿ ನೋಡಿ ಮರುಕಪಟ್ಟಾಗ, ಇನ್ನೂ, ಕೆಲವರು ನೀನು ಪ್ರಜಾವಾಣಿಯಲ್ಲಿದ್ದಾಗ ಎಷ್ಟು ಬೇಕಾದರೂ ದುಡಿಯಬಹುದಿತ್ತು. ಸಣ್ಣವರೆಲ್ಲ ಹೇಗಿದ್ದಾರೆ ನೋಡ್ರಿ ಎಂದು ನನ್ನ ಮುಖದ ಮುಂದೆಯೇ ಹೇಳುವಾಗ ‘ಅಣ್ಣ ನನಗೇಕೆ ಹಣ ಮಾಡು’ ಎಂದು ಹೇಳಲಿಲ್ಲ, ಹೇಳದಿದ್ದರೂ ಸರಿಯೇ, ‘ಹಣ ಕತ್ತೆ ತಿನ್ನೋ ಪೇಪರ್’ ಸಣ್ಣವನಿಂದಲೇ ಪದೇ ಪದೇ ಹೇಳುತ್ತಾ ನನ್ನ ಮನಸ್ಸು ಅತ್ತ ಕಡೆ ಹರಿಯದಂತೆ ತಡೆದಿದ್ದು ಏಕೆ ಎಂಬ,  ಗೊಂದಲ, ಪ್ರಶ್ನೆಗಳು ಸಹ ನನ್ನಲ್ಲಿ ಮೂಡಿಬಂದಿವೆ. ಆದರೆ ಅಣ್ಣ ಹೇಳಿಕೊಟ್ಟ ದಾರಿಯುಲ್ಲಿ ಜನಕಲ್ಯಾಣದ ಸುಖದ ಸುಪ್ಪರಿಗೆಯೇ ಇದೇ ಎಂಬುದನ್ನು ನಾನು ಜನರಿಗೆ ಹೇಳಲಾಗುವುದಿಲ್ಲ.  

ನನ್ನನ್ನು ಹೆಚ್ಚು ಪ್ರೀತಿಸುತ್ತಿದ್ದ ಅವರು ಕಷ್ಟದ ಸಮಯದಲ್ಲೂ ನಾನು ಓದಲೆಂದೇ ಒಂದು ಟೇಬಲ್ ಮಾಡಿಕೊಟ್ಟಿದ್ದರು. ಅವರು ನೆಲದ ಮೇಲೆ ಮಲಗಿ ನನಗಾಗಿಯೇ ಮಂಚವೊಂದನ್ನು ಮಾಡಿಸಿಕೊಟ್ಟರು. ನನ್ನ ಮನೆಯಲ್ಲಿ ಎಲ್ಲರೂ ನಕ್ಕರೂ ಸಹ ಅವನ ಬಗ್ಗೆ ನಿಮಗೆ ಗೊತ್ತಿಲ್ಲ ಎಂದೇ ಹೇಳುತ್ತಿದ್ದ ಅವರು ನನ್ನ ಬಗ್ಗೆ ಏನೆಂದುಕೊಂಡಿದ್ದರೂ ಅದು ಸಹ ನನಗೆ ಹೇಳಲಿಲ್ಲ.

ಆಗೆಲ್ಲ ಶಾಲೆಯಲ್ಲಿ ಪೊಲೀಸ್ ಕಲ್ಯಾಣ ನಿಧಿಗಾಗಿ 20 ಪೈಸೆಯ ಸ್ಟ್ಯಾಂಪ್ ಗಳನ್ನು ಮೇಷ್ಟ್ರುಗಳ ಮೂಲಕ ಮಾರಿಸುತ್ತಿದ್ದರು. ಮೇಷ್ಟ್ರುಗಳನ್ನು ಕಂಡರೆ ವಿಪರೀತ ಭಯಪಡುತ್ತಿದ್ದ ಕಾಲ ಅದು. ಆದರೆ ಅಣ್ಣ  ಆ ಹಣವನ್ನು ಸಹ ಕೊಡುತ್ತಿರಲಿಲ್ಲ. ನೀನು ಕೊಡಲು ಆಗಲ್ಲ ಅಂತಾ ಹೇಳು ಅನ್ನುತ್ತಿದ್ದರು. ಬಡವರಿಗೆ ಅದು ಕೊಡಲು ಕಷ್ಟ ಅನ್ನುತ್ತಿದ್ರು.  ಶಾಲೆಗೆ ಬರೋಲ್ಲ,ನೀನೇ ಹೇಳಬೇಕು ಎನ್ನುತ್ತಿದ್ದರು ಆ ಮೂಲಕ ಮೇಷ್ಟ್ರರ ಜತೆ ಮುಖಾಮುಖಿಯಾಗುವ ಸಂದರ್ಭಗಳು ಸಾಕಷ್ಟು ಬಂದವು. ಟಿ.ಸಿ ಪಡೆಯುವಾಗ, ಆದಾಯ ಪ್ರಮಾಣ ಪತ್ರ ಮಾಡಿಸುವಾಗ ಎಲ್ಲ ಕಡೆಯೂ ನಾನೊಬ್ಬನೇ ಹೋಗಬೇಕಾಗಿತ್ತು. ಎಲ್ಲೂ ಸಹ ಪೈಸೆ ಸಹ ಕೊಡದೇ ಕೆಲಸ ಮಾಡಿಸಿಕೊಂಡು ಬರುವ ಸ್ಥೈರ್ಯ, ಗಟ್ಟಿತನ ಕಲಿಸಿದರು.

ಜನರ ಕಷ್ಟಗಳು, ಸಮಸ್ಯೆಗಳು ಬಗ್ಗೆ ನಾನು ನಾಲ್ಕನೇ ಇಯತ್ತಿನಲ್ಲಿದ್ದಾಗಲೇ ಪ್ರಧಾನಿ, ರಾಷ್ಟ್ರಪತಿಗಳಿಗೆ ಪತ್ರ ಬರೆಯುತ್ತಿದ್ದೆ. ಇದನ್ನು ಕಲಿಸಿದವರು ಸಹ ಅವರೇ.  ನಮ್ಮ ಪತ್ರಕ್ಕೆ ಅಲ್ಲಿಂದ ಪ್ರತ್ಯುತ್ತರ ಬರುತ್ತಿದ್ವವು. ಸಂಬಂಧಪಟ್ಟ ಇಲಾಖೆಗೆ ದೂರು ಬಗೆಹರಿಸುವಂತೆ ನಿರ್ದೇಶನ ಬರುತ್ತಿತ್ತು. ಕಡುಬಡವರ ಅನೇಕ ಭೂಮಿ ಸಮಸ್ಯೆಗಳು ಇಂಥ ಅಂಚೆ ಕಾರ್ಡ್ ಗಳಿಂದಲೇ ಬಗೆಹರಿದವು. ನೀನಷ್ಟೇ ಅಲ್ಲ ಯಾರೂ ಬರೆದರೂ ಪ್ರಧಾನಿ, ರಾಷ್ಟ್ರಪತಿ ಕಚೇರಿ ಉತ್ತರಿಸುತ್ತದೆ ಎಂದು ಅಣ್ಣ ನನಗೆ ಆಗಲೇ ಹೇಳಿಕೊಟ್ಟಿದ್ರು, ತೋರಿಸಿಕೊಟ್ಟಿದ್ದರು.  ನನಗೆ ಆಗಾಧ ಪ್ರೀತಿ ತೋರಿಸಿದ ಅಣ್ಣನೇ ನನಗೆ ಆದರ್ಶದ ಮೇಷ್ಟ್ರು.  

ಲೇಖ‌ನ: ಸಿ.ಕೆ.ಮಹೇಂದ್ರ

ಅಪ್ಪನ ನೆನಪುಗಳ ಕುರಿತು ನೀವೂ ಬರೆದು ಕಳುಹಿಸಿ

ಡಾ. ಮರುಳಿಯೇ ಏಕೆ ಗುರಿ?

0

ತುರುವೇಕೆರೆ : ಪಟ್ಟಣದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯ ಬಹುಪಾಲು ವೈದ್ಯರು ಖಾಸಗಿ ಕ್ಲಿನಿಕ್ ನಡೆಸುತ್ತಾ ಅಕ್ರಮ ಎಸಗುತ್ತಿದ್ದರೂ ಕೂಡ ಕೇವಲ ಡಾ.ಮುರುಳಿಯವರನ್ನೇ ಗುರಿಯಾಗಿಸಿಕೊಂಡು ಅವರ ತೇಜೋವಧೆ ಮಾಡಲು ಮುಂದಾಗಿರುವ ಕ್ರಮ ಖಂಡನೀಯ ಎಂದು ತಾಲ್ಲೂಕು ಛಲವಾದಿ ಮಹಾಸಭಾ ಮುಖಂಡ ಕುಣಿಕೇನಹಳ್ಳಿ ಜಗದೀಶ್ ತಿಳಿಸಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಇಲ್ಲಿನ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿನ ಅವ್ಯವಸ್ಥೆಗಳಿಂದ ಸಾರ್ವಜನಿಕರಿಗೆ ಹಾಗು ರೋಗಿಗಳಿಗೆ ತುಂಬಾ ತೊಂದರೆ ಆಗುತ್ತಿದೆ. ಇದಕ್ಕೆ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಉತ್ತರಿಸಬೇಕಾಗಿದೆ ಎಂದರು.

ಆಸ್ಪತ್ರೆಯ ವೈದ್ಯ ಡಾ.ಮುರುಳಿಯವರು ಖಾಸಗಿ ಆಸ್ಪತ್ರೆ ನಡೆಸುತ್ತಿಲ್ಲ. ಇವರ ಮೇಲೆ ಇಲ್ಲ ಸಲ್ಲದ ಆರೋಪ ಹೊರಿಸಿ ತಪ್ಪಿಗೆ ಸಿಕ್ಕಿಸುವ ಷಡ್ಯಂತರ ನಡೆಯುತ್ತಿದೆ ಎಂದು ಆರೋಪಿಸಿದರು.

ಇಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕೆಲ ವೈದ್ಯರುಗಳು ಖಾಸಗಿ ಆಸ್ಪತ್ರೆಯನ್ನು ನಡೆಸುತಿದ್ದು, ಅಕ್ರಮ ಎಸಗಿದ್ದಾರೆ. ಇದಕ್ಕೆ ನಮ್ಮ ಬಳಿ ಆಧಾರಗಳಿವೆ ಎಂದು ಆರೋಪಿಸಿದರು.

ಆಸ್ಪತ್ರೆಯಲ್ಲಿ ಕಣ್ಣಿನ ವೈದ್ಯರು ಸರಿಯಾಗಿ ಕೆಲಸಕ್ಕೆ ಹಾಜರಾಗದಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಡಾ ಮುರುಳಿಯವರನ್ನು ಇಲಾಖಾ ತನಿಖೆ ನಡೆಸಿ ಅವರನ್ನು ತಪ್ಪಿತಸ್ಥರನ್ನಾಗಿಸುವುದು ಇವರ ಹುನ್ನಾರವಾಗಿದೆ ಇದನ್ನು ತಾಲ್ಲೂಕು ಛಲವಾದಿ ಮಹಾಸಭಾ ತೀವ್ರವಾಗಿ ಖಂಡಿಸುತ್ತದೆ ಎಂದರು.

ಆಸ್ಪತ್ರೆಯಲ್ಲಿ 5 ರೂಪಾಯಿಗಳನ್ನು ನೋಂದಣಿ ಶುಲ್ಕ ಎಂದು ರೋಗಿಗಳಿಂದ ತೆಗೆದುಕೊಳ್ಳುತ್ತಾರೆ. ಆದರೆ ಅದರ ಖರ್ಚು ವೆಚ್ಚವನ್ನು ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿಗಳು ಕಾಲಕಾಲಕ್ಕೆ ಬಹಿರಂಗ ಪಡಿಸಬೇಕು ಎಂದು ಒತ್ತಾಯಿಸಿದರು.

ಬಾಣಂತಿಯರಿಗೆ ಉಚಿತ ಊಟವನ್ನು ಸರ್ಕಾರ ಕೊಡುತ್ತಿದೆ. ಆದರೆ ಈ ಆಸ್ಪತ್ರೆಯಲ್ಲಿ ಕೊಡುತ್ತಿಲ್ಲ. ಇದರ ಬಗ್ಗೆ ಸ್ಪಷ್ಟನೆಯನ್ನು ಅವರು ಕೊಡಬೇಕಾಗುತ್ತದೆ ಹಾಗೂ ಹೊಣೆಯನ್ನು ಹೊರಬೇಕಾಗುತ್ತದೆ ಎಂದು ಎಚ್ಚರಿಸಿದರು.

ರಕ್ತ ಪರೀಕ್ಷಾ ಸೌಲಭ್ಯವಿದ್ದರೂ ಸರ್ಕಾರ ಲಕ್ಷಾಂತರ ರೂಪಾಯಿಗಳ ಯಂತ್ರೋಪಕರಣಗಳನ್ನು ಒದಗಿಸಿದ್ದರೂ ಸಹ ಖಾಸಗಿಯವರ ಜೊತೆ ಕೈಜೋಡಿಸಿ ಪರೀಕ್ಷೆಗಳನ್ನು ಹೊರಗೆ ಮಾಡಿಸಲು ಹೇಳುತ್ತಿರುವುದು ಇವರ ಅಕ್ರಮಗಳಿಗೆ ಸಾಕ್ಷಿಯಾಗಿದೆ ಎಂದರು.

ಅಲ್ಲದೇ ಆಕ್ಸಿಜನ್ ಪ್ಲಾಂಟ್ ಸೂಕ್ತ ನಿರ್ವಹಣೆ ಇಲ್ಲದೆ ಹಾಳಾಗಿದ್ದು ಇದರ ಹೊಣೆಯನ್ನು ಆಡಳಿತ ವೈದ್ಯಾಧಿಕಾರಿಗಳೆ ಹೊರ ಬೇಕಾಗಿದೆ. ಇವೆಲ್ಲ ಅಕ್ರಮಗಳ ರೂವಾರಿ ಇವರೇ ಆಗಿರುವುದರಿಂದ ಇವರನ್ನು ಲೋಕಾಯುಕ್ತ ಅಥವಾ ಸಿ.ಬಿ.ಐ ನಿಂದ ಸೂಕ್ತ ತನಿಖೆಮಾಡಬೇಕೆಂದು ಒತ್ತಾಯಿಸಿದರು.

ಇದೇ ರೀತಿ ಪರಿಶಿಷ್ಟ ವೈದ್ಯರ ಮೇಲೆ ನಡೆಸುತ್ತಿರುವ ದೌರ್ಜನ್ಯವನ್ನು ನಿಲ್ಲಿಸಬೇಕು ಇಲ್ಲವಾದಲ್ಲಿ ಉಗ್ರ ಪ್ರತಿಭಟನೆಯನ್ನು ನಡೆಸಲಾಗುವುದು ಎಂದು ಎಚ್ಚರಿಸಿದರು.

ಈ ಸಂದರ್ಭದಲ್ಲಿ ಛಲವಾದಿ ಮಹಾಸಭಾ ತಾಲ್ಲೂಕು ಅಧ್ಯಕ್ಷ ಡೊಂಕಿಹಳ್ಳಿ ರಾಮಣ್ಣ, ಪುರ ರಾಮಚಂದ್ರ, ಹೆಗ್ಗೆರೆ ನರಸಿಂಹಯ್ಯ, ಮಹದೇವಣ್ಣ, ಲೋಕೇಶ್ ಕುಣಿಕೇನಹಳ್ಳಿ, ಶ್ರೀನಿವಾಸ್, ಸುರೇಶ ಕುಣಿಕೇನಹಳ್ಳಿ, ಕೃಷ್ಣಮೂರ್ತಿ, ಪುಟ್ಟರಾಜು, ಪ್ರಸನ್ನ ಕಲ್ಲಬೊರನಹಳ್ಳಿ, ತಿಮ್ಮಣ್ಣ, ಬಾಳೆಕಾಯಿ ಶೇಕರ್, ಶ್ರೀನಿವಾಸ್, ಲೋಕೇಶ್, ಕುಣಕೇನಹಳ್ಳಿ ಲೋಕೇಶ್ ಮತ್ತಿತರರಿದ್ದರು.