Tuesday, July 23, 2024
Google search engine
HomeUncategorizedಜಾತಿ, ಮತ ಮೀರಿದ ಬಸವ ತತ್ವ; ಎಂಟಿಕೆ

ಜಾತಿ, ಮತ ಮೀರಿದ ಬಸವ ತತ್ವ; ಎಂಟಿಕೆ

ತುರುವೇಕೆರೆ:

ಸಾಮಾಜಿಕ ನ್ಯಾಯ ಮತ್ತು ಮಾನವೀಯ ನೆಲೆಯಲ್ಲಿ ಬಸವ ತತ್ವವನ್ನು ಇಡೀ ಜಗತ್ತಿಗೆ ಸಾರಿದವರು ಬಸವಣ್ಣನವರು ಎಂದು ಶಾಸಕ ಎಂ.ಟಿ.ಕೃಷ್ಣಪ್ಪ ಅಭಿಪ್ರಾಯಪಟ್ಟರು.

ಪಟ್ಟಣದ ಗುರುಸಿದ್ದರಾಮೇಶ್ವರ ಸಮುದಾಯ ಭವನದಲ್ಲಿ ತಾಲ್ಲೂಕು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಹಾಗು ಎಲ್ಲ ವೀರಶೈವ ಲಿಂಗಾಯತ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಶನಿವಾರ ಹಮ್ಮಿಕೊಂಡಿದ್ದ ಬಸವ ಜಯಂತಿ, ನೂತನ ಶಾಸಕರಿಗೆ ಅಭಿನಂಧನಾ ಹಾಗು ಪ್ರತಿಭಾಪುರಸ್ಕಾರ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.

ಜಾತಿ, ಮತ ಪಂಥಗಳನ್ನು ಮೀರಿದ ವಿಚಾರಗಳನ್ನು ಬಸವ ತತ್ವ ಒಳಗೊಂಡಿದ್ದರಿಂದಲೇ ಕ್ರೈಸ್ತ, ಇಸ್ಲಾಂ, ಧರ್ಮಕ್ಕಿಂತ ಬಸವಣ್ಣನವರ ಬಸವ ತತ್ವ ಮೇರು ಸ್ಥಾನದಲ್ಲಿದ್ದು ಆನಂತರ ಬೌದ್ಧ ಧರ್ಮ ತನ್ನ ಸ್ಥಾನ ಪಡೆದುಕೊಂಡಿದೆ.

ಬಸವಣ್ಣನವರ ಬಸವ ತತ್ವಗಳು ಒಂದು ಕಾಲಘಟ್ಟಕ್ಕೆ ಸ್ಥ್ಥಿರವಾಗದೆ ಚಲನಶೀಲತೆಯನ್ನು ಪಡೆದುಕೊಂಡು ವಿಶ್ವಮಾನವ ರೂಪ ತಾಳಿತು ಆದರೆ ಕಾಲನಂತರದಲ್ಲಿ ಅದು ಒಂದು ಜಾತಿಗೆ ಸೀಮಿತವಾಗುವ ಮೂಲಕ ತನ್ನ ನೆಲೆಯ ಸ್ವರೂಪವನ್ನು ಕಳೆದುಕೊಂಡಿತು. ಹಾಗಾಗಿ ಬಸವಣ್ಣನ ವಿಚಾರಗಳನ್ನು, ತತ್ವಗಳನ್ನು ಮತ್ತು ಆಲೋಚನಾ ಕ್ರಮಗಳನ್ನು ಒಂದು ಸಮುದಾಯಕ್ಕೆ ಸಂಕುಚಿತಗೊಳಿಸಿದ ಎಲ್ಲ ಸಮುದಾಯಗಳ, ಧರ್ಮಗಳ ಏಳಿಗೆಯೆ ಸಾಧನವಾಗಿ ಬಳಕೆಯಾದರೆ ಬಸವಣ್ಣನವರ ಆಶಯಗಳು ಸಾರ್ಥಕಗೊಳುತ್ತದೆ ಎಂದರು.

ಮುಖ್ಯ ಮಂತ್ರಿ ಸಿದ್ದರಾಮಯ್ಯನವರು ಉದ್ದೇಶಿಸಿರುವ ಜಾತಿ ಸಮೀಕರಣದ ಬಹುದೊಡ್ಡ ಅಪಾಯ ಏನೆಂದರೆ ಶೋಷಿತ ಸಮುದಾಯಗಳಾದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳು ಹಾಗು ದುರ್ಬಲ ವರ್ಗಗಳ ಅಸ್ಮಿತೆಯನ್ನು ಬುಡಮೇಲು ಮಾಡುತ್ತದೆ ಹಾಗಾಗಿ ಇದನ್ನು ತಾತ್ವಿಕವಾಗಿ ವಿರೋಧಿಸುತ್ತೇನೆ ಎಂದರು.

ಎಪಿಎಂಸಿ ಕಾಯಿದೆ, ಕೊಬ್ಬರಿ ಮತ್ತು ತೆಂಗು ಬೆಳೆಗಳಿಗೆ ಬೆಂಬ ಬೆಲೆ ನೀಡುವಂತೆ ಸದನದಲ್ಲಿ ಪ್ರಸ್ತಾಪಿಸಿ ತೆಂಗು ಬೆಳೆಗಾರರಿಗೆ ನ್ಯಾಯ ಒದಗಿಸಲಾಗುವುದು ಎಂದರು.

ತಿಪಟೂರು ಶಾಸಕ ಕೆ.ಷಡಕ್ಷರಿ ಮಾತನಾಡಿ, ವಿರೋಧ ಪಕ್ಷದವರು ಎಷ್ಟೇ ಬೊಬ್ಬೆ ಹಾಕಿದರೂ ನಾವು ನೀಡಿರುವ 5 ಗ್ಯಾರಂಟಿಗಳನ್ನು ಹಂತ ಹಂತವಾಗಿ ನೀಡಲಾಗುವುದು. ಏಷ್ಯಾ ಖಂಡದಲ್ಲೇ ತಿಪಟೂರು ತೆಂಗು ಮತ್ತು ಅಲ್ಲಿನ ಕೊಬ್ಬರಿ ಮಾರುಕಟ್ಟೆ ಒಳ್ಳೆಯ ಜನಪ್ರಿಯತೆ ಪಡೆದುಕೊಂಡಿದೆ. ರಾಗಿಯನ್ನು ರೈತರಿಂದ ಬೆಂಬಲ ಬೆಲೆಯಲ್ಲಿ ಪಡೆದು ಪುನಃ ಜನಸಾಮಾನ್ಯರಿಗೆ ಪಡಿತರ ಚೀಟಿಯಲ್ಲಿ ಆಹಾರ ದಾನ್ಯಗಳನ್ನು ವಿತರಣೆ ಮಾಡಿದ ಮೊದಲ ಕೀರ್ತಿ ಕಾಂಗ್ರೆಸ್ ಗೆ ಸಲ್ಲುತ್ತದೆ ಎಂದು ಹೇಳಿದರು.

ಜಿಲ್ಲೆಗಳ ಸಂಪರ್ಕ ಕೇಂದ್ರವಾದ ಕೆ.ಬಿ.ಕ್ರಾಸ್ನಲ್ಲಿ ಸೂಪರ್ಸ್ಪೆಷಾಲಿಟಿ ಆಸ್ಪತ್ರೆಯನ್ನು ತರಲು ಚಿಂತಿಸಲಾಗಿದೆ ಎಂದು ಹೇಳಿದರು.

ಇದೇ ವೇಳೆ ವಿರಕ್ತಮಠದ ಕರಿವೃಷಭ ದೇಶಿ ಕೇಂದ್ರ ಹಾಗು ತಮ್ಮಡಿಹಳ್ಳಿ ಅಭಿನವ ಮಲ್ಲಿಕಾಜರ್ುನ ದೇಶಿ ಕೇಂದ್ರ ಸ್ವಾಮೀಜಿಗಳು ಆಶೀರ್ವಚನ ನೀಡಿದರು. ಎಸ್.ಎಸ್.ಎಲ್.ಸಿ ಮತ್ತು ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾಥರ್ಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಇದಕ್ಕೂ ಮೊದಲು ವಿವಿಧ ಜನಪದ ಕಲಾತಂಡಗಳೊಂದಿಗೆ ಬಸವಣ್ಣನವರ ಭಾವಚಿತ್ರದೊಂದಿಗೆ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಯಿತು. ಅಕ್ಕನ ಬಳಗದವರು ವಚನ ಗಾಯ ನಡೆಸಿಕೊಟ್ಟರು.

ಸಮಾರಂಭದಲ್ಲಿ ವೀರಶೈವ ಲಿಂಗಾಯತ ಮಹಾಸಭಾದ ತಾಲ್ಲೂಕು ಅಧ್ಯಕ್ಷ ಎಸ್.ಎಂ.ಕುಮಾರ ಸ್ವಾಮಿ, ಜಿಲ್ಲಾಧ್ಯಕ್ಷ ಮೋಹನ್ ಪಟೇಲ್, ಜಿಲ್ಲಾ ಪ್ರಧಾನ ಕಾರ್ಯದಶರ್ಿ ಕೆ.ಟಿ.ಶಿವಕುಮಾರ್, ಜಿಲ್ಲಾ ಖಜಾಂಚಿ ಎಂ.ಬಿ.ಶೇಖರ್, ತಾಲ್ಲೂಕು ಯುವಘಟಕದ ಅಧ್ಯಕ್ಷ ಎನ್.ಯೋಗೀಶ್, ದೊಂಬರನಹಳ್ಳಿ ಬಸವರಾಜು, ಸುನಿಲ್ ಬಾಬು ನಿರೂಪಿ, ದುಂಡಾ ಸುರೇಶ್ ವಂದಿಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?