Monday, May 27, 2024
Google search engine
Homeಜಸ್ಟ್ ನ್ಯೂಸ್ಬಡವರ ಏಳಿಗೆಯ ದನಿಯಾಗಿ

ಬಡವರ ಏಳಿಗೆಯ ದನಿಯಾಗಿ

ತುರುವೇಕೆರೆ:
ನೀವು ಕಲಿತ ವಿದ್ಯೆ ಕೇವಲ ತುತ್ತಿನ ಚೀಲಕ್ಕೆ ಮೀಸಲಾಗದೆ ನೊಂದವರ, ಅಸಹಾಯಕರ, ಶ್ರಮಿಕರ, ಬಡವರ ಏಳಿಗೆಯ ದನಿಯಾಗಬೇಕೆಂದು ಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಎಚ್.ಎನ್.ಮಹದೇವಯ್ಯ ನವರು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.

ತಾಲ್ಲೂಕಿನ ದಂಡಿನಶಿವರ ಹೋಬಳಿಯ ಹುಲ್ಲೇಕೆರೆ ಗ್ರಾಮದ ಬಸವೇಶ್ವರ ಸಂಯುಕ್ತ ಪದವಿ ಪೂರ್ವ ವಿದ್ಯಾಲಯದಲ್ಲಿ, ತುಮಕೂರು ಚಿರು ಫೈರ್ ಸರ್ವೀಸಸ್ ಹಾಗು 2001 ಸಾಲಿನ ಎಸ್ಸೆಸ್ಸೆಲ್ಸಿ ಹಳೇ ವಿದ್ಯಾರ್ಥಿಗಳ ಸಹಯೋಗದೊಂದಿಗೆ ಸೋಮವಾರ ಹಮ್ಮಿಕೊಂಡಿದ್ದ ಪ್ರತಿಭಾಪುರಸ್ಕಾರ, ಉಚಿತ ಸಮವಸ್ತ್ರ ವಿತರಣೆ, ಕಲಾಸಂಘದ ಉದ್ಘಾಟನೆ ಹಾಗು ನಿವೃತ್ತ ಶಿಕ್ಷಕರ ಅಭಿನಂಧನಾ ಸಮಾರಂಭದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಮಕ್ಕಳು ಪಠ್ಯ ವಿಷಯಗಳ ಜೊತೆ ಸಮಾಜದಲ್ಲಿ ಸಾಮರಸ್ಯದ ಬದುಕು ನಡೆಸುವ ಜೀವನ ಪಾಠದ ಮೌಲ್ಯಗಳನ್ನು ಕಲಿತು ಗುರು ಹಿರಿಯರು, ಪೋಷಕರನ್ನು ಗೌರವಿಸುವ ಮನಸ್ಥಿತಿ ಬೆಳೆಸಿಕೊಳ್ಳಿ ಆಗ ಗುರುಗಳು ಕಲಿಸಿದ ವಿದ್ಯೆ ಸಾರ್ಥಕವಾಗುತ್ತದೆ ಎಂದರು.


ಗ್ರಾಮೀಣ ಪ್ರದೇಶಗಳಲ್ಲಿ ಕನ್ನಡ ಶಾಲೆಗಳಿಗೆ ಬರುವ ಮಕ್ಕಳ ಸಂಖ್ಯೆಯೇ ಕ್ಷೀಣಿಸುತ್ತಿದ್ದು ಅವುಗಳ ಅಳಿವು ಉಳಿವಿನ ಪ್ರಶ್ನೆ ಎದುರಾಗಿದೆಂದು ಹತಾಶೆ ವ್ಯಕ್ತಪಡಿಸಿದರು.


ಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ.ಎಂ.ಎಸ್.ಮಹಲಿಂಗಪ್ಪ ಮಾತನಾಡಿ, ಹಳ್ಳಿಗಾಡಿನ ಪ್ರದೇಶದಲ್ಲಿ ಸಾಕಷ್ಟು ಪ್ರತಿಭಾವಂತ ಮಕ್ಕಳಿದ್ದು ಅದರಲ್ಲೂ ಹೆಣ್ಣು ಮಕ್ಕಳೇ ಮೇಲುಗೈ ಸಾಧಿಸುತ್ತಿದ್ದಾರೆ, ಅವರಿಗೆ ಸೂಕ್ತ ಮಾರ್ಗದರ್ಶನ ಸಿಕ್ಕರೆ ಉತ್ತಮ ವ್ಯಕ್ತಿಗಳಾಗಿ ರೂಪುಗೊಳ್ಳುತ್ತಾರೆ.
ಈ ವೇಳೆ ಹುಲ್ಲೇಕೆರೆ ಸಮಾಜ ಸೇವಕ ಎಚ್.ಬಿ.ಗಂಗಾಧರಯ್ಯನವರು ದಿವಂಗತ ಅಡಿಗೆ ಬಸಪ್ಪ, ಮಲ್ಲಮ್ಮ ಅವರ ಸ್ಮರಣಾರ್ಥ ಶಾಲಾ ಮಕ್ಕಳಿಗೆ ಉಚಿತ ನೋಟ್ ಬುಕ್ ವಿತರಣೆ ಮಾಡಿದರು.

ಹಳೆ ವಿದ್ಯಾರ್ಥಿಗಳಿಂದ 2023ನೇ ಸಾಲಿನ ಎಸ್ಸೆಸ್ಸೆಲ್ಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗು 8ನೇ ತರಗತಿ ಮಕ್ಕಳಿಗೆ ಉಚಿತ ಸಮವಸ್ತ್ರ ವಿತರಿಸಲಾಯಿತು.

ನಂತರ ನಿವೃತರಾದ ಎಚ್.ಕೆ.ರತ್ನಮ್ಮ, ಬಸವಯ್ಯ, ಸಿ.ಜಿ.ಮಹಲಿಂಗಯ್ಯ ಮತ್ತು ಅಮೃತ ಅವರನ್ನು ಅಭಿನಂಧಿಸಲಾಯಿತು.


ಸಮಾರಂಭದಲ್ಲಿ ಸಂಘದ ಸಹ ಕಾರ್ಯದರ್ಶಿ ಎಚ್.ಪಿ.ಪ್ರಸನ್ನ, ನಿರ್ದೇಶಕರಾದ ಗಂಗಾಮಣಿ, ಮುನಿರಾಮಣ್ಣ, ಮುಖಂಡರಾದ ಎಚ್.ಬಿ.ಗಂಗಾಧರಯ್ಯ, ಮುಖ್ಯ ಶಿಕ್ಷಕ ಹಾ.ಪಂ.ಸೋಮಶೇಖರಯ್ಯ, ಬಿ.ಎಸ್.ಶಾಂತರಾಜು, ಜಿ.ಟಿ.ರಘು, ಬಸವರಾಜು, ದೊಂಬರನಹಳ್ಳಿ ಜಯಣ್ಣ, ಹಿರಿಯ ವಿದ್ಯಾರ್ಥಿಗಳಾದ ಎಚ್.ಜಿ.ಧರಣೇಶ್, ಹಾಲೇಗೌಡ, ಮಕ್ಕಳು ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?