Monday, October 14, 2024
Google search engine
HomeUncategorizedಡಾ. ಮರುಳಿಯೇ ಏಕೆ ಗುರಿ?

ಡಾ. ಮರುಳಿಯೇ ಏಕೆ ಗುರಿ?

ತುರುವೇಕೆರೆ : ಪಟ್ಟಣದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯ ಬಹುಪಾಲು ವೈದ್ಯರು ಖಾಸಗಿ ಕ್ಲಿನಿಕ್ ನಡೆಸುತ್ತಾ ಅಕ್ರಮ ಎಸಗುತ್ತಿದ್ದರೂ ಕೂಡ ಕೇವಲ ಡಾ.ಮುರುಳಿಯವರನ್ನೇ ಗುರಿಯಾಗಿಸಿಕೊಂಡು ಅವರ ತೇಜೋವಧೆ ಮಾಡಲು ಮುಂದಾಗಿರುವ ಕ್ರಮ ಖಂಡನೀಯ ಎಂದು ತಾಲ್ಲೂಕು ಛಲವಾದಿ ಮಹಾಸಭಾ ಮುಖಂಡ ಕುಣಿಕೇನಹಳ್ಳಿ ಜಗದೀಶ್ ತಿಳಿಸಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಇಲ್ಲಿನ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿನ ಅವ್ಯವಸ್ಥೆಗಳಿಂದ ಸಾರ್ವಜನಿಕರಿಗೆ ಹಾಗು ರೋಗಿಗಳಿಗೆ ತುಂಬಾ ತೊಂದರೆ ಆಗುತ್ತಿದೆ. ಇದಕ್ಕೆ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಉತ್ತರಿಸಬೇಕಾಗಿದೆ ಎಂದರು.

ಆಸ್ಪತ್ರೆಯ ವೈದ್ಯ ಡಾ.ಮುರುಳಿಯವರು ಖಾಸಗಿ ಆಸ್ಪತ್ರೆ ನಡೆಸುತ್ತಿಲ್ಲ. ಇವರ ಮೇಲೆ ಇಲ್ಲ ಸಲ್ಲದ ಆರೋಪ ಹೊರಿಸಿ ತಪ್ಪಿಗೆ ಸಿಕ್ಕಿಸುವ ಷಡ್ಯಂತರ ನಡೆಯುತ್ತಿದೆ ಎಂದು ಆರೋಪಿಸಿದರು.

ಇಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕೆಲ ವೈದ್ಯರುಗಳು ಖಾಸಗಿ ಆಸ್ಪತ್ರೆಯನ್ನು ನಡೆಸುತಿದ್ದು, ಅಕ್ರಮ ಎಸಗಿದ್ದಾರೆ. ಇದಕ್ಕೆ ನಮ್ಮ ಬಳಿ ಆಧಾರಗಳಿವೆ ಎಂದು ಆರೋಪಿಸಿದರು.

ಆಸ್ಪತ್ರೆಯಲ್ಲಿ ಕಣ್ಣಿನ ವೈದ್ಯರು ಸರಿಯಾಗಿ ಕೆಲಸಕ್ಕೆ ಹಾಜರಾಗದಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಡಾ ಮುರುಳಿಯವರನ್ನು ಇಲಾಖಾ ತನಿಖೆ ನಡೆಸಿ ಅವರನ್ನು ತಪ್ಪಿತಸ್ಥರನ್ನಾಗಿಸುವುದು ಇವರ ಹುನ್ನಾರವಾಗಿದೆ ಇದನ್ನು ತಾಲ್ಲೂಕು ಛಲವಾದಿ ಮಹಾಸಭಾ ತೀವ್ರವಾಗಿ ಖಂಡಿಸುತ್ತದೆ ಎಂದರು.

ಆಸ್ಪತ್ರೆಯಲ್ಲಿ 5 ರೂಪಾಯಿಗಳನ್ನು ನೋಂದಣಿ ಶುಲ್ಕ ಎಂದು ರೋಗಿಗಳಿಂದ ತೆಗೆದುಕೊಳ್ಳುತ್ತಾರೆ. ಆದರೆ ಅದರ ಖರ್ಚು ವೆಚ್ಚವನ್ನು ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿಗಳು ಕಾಲಕಾಲಕ್ಕೆ ಬಹಿರಂಗ ಪಡಿಸಬೇಕು ಎಂದು ಒತ್ತಾಯಿಸಿದರು.

ಬಾಣಂತಿಯರಿಗೆ ಉಚಿತ ಊಟವನ್ನು ಸರ್ಕಾರ ಕೊಡುತ್ತಿದೆ. ಆದರೆ ಈ ಆಸ್ಪತ್ರೆಯಲ್ಲಿ ಕೊಡುತ್ತಿಲ್ಲ. ಇದರ ಬಗ್ಗೆ ಸ್ಪಷ್ಟನೆಯನ್ನು ಅವರು ಕೊಡಬೇಕಾಗುತ್ತದೆ ಹಾಗೂ ಹೊಣೆಯನ್ನು ಹೊರಬೇಕಾಗುತ್ತದೆ ಎಂದು ಎಚ್ಚರಿಸಿದರು.

ರಕ್ತ ಪರೀಕ್ಷಾ ಸೌಲಭ್ಯವಿದ್ದರೂ ಸರ್ಕಾರ ಲಕ್ಷಾಂತರ ರೂಪಾಯಿಗಳ ಯಂತ್ರೋಪಕರಣಗಳನ್ನು ಒದಗಿಸಿದ್ದರೂ ಸಹ ಖಾಸಗಿಯವರ ಜೊತೆ ಕೈಜೋಡಿಸಿ ಪರೀಕ್ಷೆಗಳನ್ನು ಹೊರಗೆ ಮಾಡಿಸಲು ಹೇಳುತ್ತಿರುವುದು ಇವರ ಅಕ್ರಮಗಳಿಗೆ ಸಾಕ್ಷಿಯಾಗಿದೆ ಎಂದರು.

ಅಲ್ಲದೇ ಆಕ್ಸಿಜನ್ ಪ್ಲಾಂಟ್ ಸೂಕ್ತ ನಿರ್ವಹಣೆ ಇಲ್ಲದೆ ಹಾಳಾಗಿದ್ದು ಇದರ ಹೊಣೆಯನ್ನು ಆಡಳಿತ ವೈದ್ಯಾಧಿಕಾರಿಗಳೆ ಹೊರ ಬೇಕಾಗಿದೆ. ಇವೆಲ್ಲ ಅಕ್ರಮಗಳ ರೂವಾರಿ ಇವರೇ ಆಗಿರುವುದರಿಂದ ಇವರನ್ನು ಲೋಕಾಯುಕ್ತ ಅಥವಾ ಸಿ.ಬಿ.ಐ ನಿಂದ ಸೂಕ್ತ ತನಿಖೆಮಾಡಬೇಕೆಂದು ಒತ್ತಾಯಿಸಿದರು.

ಇದೇ ರೀತಿ ಪರಿಶಿಷ್ಟ ವೈದ್ಯರ ಮೇಲೆ ನಡೆಸುತ್ತಿರುವ ದೌರ್ಜನ್ಯವನ್ನು ನಿಲ್ಲಿಸಬೇಕು ಇಲ್ಲವಾದಲ್ಲಿ ಉಗ್ರ ಪ್ರತಿಭಟನೆಯನ್ನು ನಡೆಸಲಾಗುವುದು ಎಂದು ಎಚ್ಚರಿಸಿದರು.

ಈ ಸಂದರ್ಭದಲ್ಲಿ ಛಲವಾದಿ ಮಹಾಸಭಾ ತಾಲ್ಲೂಕು ಅಧ್ಯಕ್ಷ ಡೊಂಕಿಹಳ್ಳಿ ರಾಮಣ್ಣ, ಪುರ ರಾಮಚಂದ್ರ, ಹೆಗ್ಗೆರೆ ನರಸಿಂಹಯ್ಯ, ಮಹದೇವಣ್ಣ, ಲೋಕೇಶ್ ಕುಣಿಕೇನಹಳ್ಳಿ, ಶ್ರೀನಿವಾಸ್, ಸುರೇಶ ಕುಣಿಕೇನಹಳ್ಳಿ, ಕೃಷ್ಣಮೂರ್ತಿ, ಪುಟ್ಟರಾಜು, ಪ್ರಸನ್ನ ಕಲ್ಲಬೊರನಹಳ್ಳಿ, ತಿಮ್ಮಣ್ಣ, ಬಾಳೆಕಾಯಿ ಶೇಕರ್, ಶ್ರೀನಿವಾಸ್, ಲೋಕೇಶ್, ಕುಣಕೇನಹಳ್ಳಿ ಲೋಕೇಶ್ ಮತ್ತಿತರರಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?