Monday, May 27, 2024
Google search engine
HomeUncategorizedಅಪ್ಪನ ದಿನ: ಅಣ್ಣನ ಹುಡುಕುತಿರುವೆ...

ಅಪ್ಪನ ದಿನ: ಅಣ್ಣನ ಹುಡುಕುತಿರುವೆ…

ಪ್ರಖ್ಯಾತ ವೈದ್ಯೆ ಡಾ. ರಜನಿ ಅವರ ಅಪ್ಪನ ಕುರಿತ ಆಪ್ತ ಬರಹ. ಅಪ್ಪನ ದಿನಕ್ಕಾಗಿ ಪಬ್ಲಿಕ್ ಸ್ಟೋರಿ ಓದುಗರಿಗಾಗಿ


ಅಣ್ಣ ನನಗೆ ಯಾವಾಗಲೂ ಯಾರಿಗಾದರೂ
ಒಳ್ಳೆಯದು ಮಾಡುವ ವ್ಯಕ್ತಿಯಾಗಿ ಕಾಣುತ್ತಾನೆ.
ಆತ ಯಾರಿಗಾದರೂ ಒಳ್ಳೆಯದು ಆಗುತ್ತದೆ ಎಂದರೆ
ಬಿಳಿ ಸಫಾರಿ ಹಾಕಿಕೊಂಡು ಬೆಂಗಳೂರು ಪೇಟೆಗೆ ಹೋಗುತ್ತಿದ್ದ. ಅದೆಷ್ಟು ಜನಕ್ಕೆ ಆ ಕಾಲದಲ್ಲಿ ಕೆಲ್ಸ ಕೊಡಿಸಿದ್ದನೋ. ಎತ್ತರ ಇರುವ ಆಸಾಮಿಯನ್ನು ಬ್ಯಾಸ್ಕೆಟ್ ಬಾಲ್ ಪ್ಲೇಯರ್ ಮಾಡಿಸಿದ ಹೆಮ್ಮೆ ಆತನದು. ತನ್ನ ಸ್ಟೂಡೆಂಟ್ ಅನ್ನು ಗೋಗರೆದು ಆ ಕೆಲಸ ಮಾಡಿಸಿದ್ದನು.ಅದೇ ರೀತಿ ಅದೆಷ್ಟೋ ಜನಕ್ಕೆ ಟೀಚರ್ಸ್ ಟ್ರೈನಿಂಗ್ ಸೇರಿಸಿ ಹೊಟ್ಟೆ ಪಾಡು ಮಾಡಿಸಿ ಕೊಟ್ಟಿದ್ದಾನೆ .


ಮಕ್ಕಳು ಫಸ್ಟ್ rank ತಗೊಂಡ್ರ ಎಂದು ಯಾವತ್ತೂ ನೋಡಿಲ್ಲ.ಗೊತ್ತು ಆತನಿಗೆ ಮಕ್ಕಳು ಚೆನ್ನಾಗಿ ಓದುತ್ತಾರೆ ಎಂದು.
ಸಣ್ಣ ಸಂತೋಷಗಳನ್ನು ಕೂಡ ಅನುಭವಿಸುತ್ತ ಜೀವಿಸುತ್ತಾ ಇದ್ದನು.

ಸಂಕ್ರಾಂತಿ ಹಬ್ಬದ ಎಳ್ಳು ಹೆಂಡತಿ ಜೊತೆಗೆ ಮಾತಾಡುತ್ತಾ ತಿಂಗಳು ಗಟ್ಲೇ ರಾತ್ರಿ ತಿನ್ನುತ್ತಾ ಇದ್ದನು. ಅಮ್ಮ ವೀಳ್ಯದ ಎಲೆ ಮಡಚಿ ಕೊಟ್ಟರೆ ಮೆಲ್ಲುತ್ತಾ ರೀಡರ್ಸ್ ಡೈಜೆಸ್ಟ್ ಓದುತ್ತಾ ಇದ್ದನು. ಅಮ್ಮನಿಗೂ ಕೆಲವು ಜೋಕ್ಸ್ ಅನ್ನು ಓದಿ ಹೇಳುತ್ತಾ ಇದ್ದನು. Laughter the best medicine jokes.
ಕಸ್ತೂರಿ ಕನ್ನಡ ದ digest endu ಹೇಳುತ್ತಾ ಇದ್ದನು.


ಮಯೂರ,ಚಂದಮಾಮ, ಬೊಂಬೆ ಮನೆ,ಸುಧಾ,ಕಸ್ತೂರಿ ,ಪ್ರಜಾಮತ..ಪ್ರಜಾವಾಣಿ ಇವುಗಳ ನಿತ್ಯ ಓದು ಅವನದು.

.ಚಿಂಗಾರಿ, ಓದಿ ಹೆಂಡ್ತಿ ಗೆ ನಗಿಸುತ್ತಾ ಇದ್ದನು.ನಾವು ಶುಜಾ , ಡಾಬು, ಫಂಟಿಮ್ ಓದಿ ಹೇಳಬೇಕಿತ್ತು.
ಬೇಸಗೆ ರಜೆಯಲ್ಲಿ ಮುಂದಿನ ವರ್ಷದ ಎಲ್ಲ ಲೆಕ್ಕ ಮಾಡಿದರೆ ಲೆಕ್ಕಕ್ಕೆ 25ಪೈಸೆ ಪಾಕೆಟ್ money ಕೊಡುತ್ತಾ ಇದ್ದ.
ಆತನ ಶರ್ಟ್ ಪ್ಯಾಂಟ್ ಐರನ್ ಮಾಡಿಕೊಟ್ಟರೆ ಪಾಕೆಟ್ money ಕೊಡುತ್ತಾ ಇದ್ದ. ಆತನ shirt ಎಸ್ಟು ಅಗಲ ಎಂದರೆ ನಾನು ಅದರ ಮೇಲೆ ಓಡಾಡಿ ಐರನ್ ಮಾಡುತ್ತಾ ಇದ್ದೆ…ಎತ್ತರ ಅಗಲದ ಅಳು…ಪುಟ್ಟ ಕೈಗೆ ದೊಡ್ಡ ಶರ್ಟ್..
ಬಟ್ಟೆಯಲ್ಲಿ ಒಂದು ದಾರ ಬಿತ್ತಿಕೊಂಡ್ ರೋ ಕತ್ತರಿ ಯಲ್ಲಿ ಟ್ರಿಮ್ ಮಾಡಿ ಹಾಕಿಕೊಳ್ಳುತ್ತಾ ಇದ್ದನು.

ಬುದ್ಧಿ ಬರುವ ವರೆಗೂ ನನಗೆ ಸ್ನಾನ ಮಾಡಿಸಿ , ಕೂದಲು ಬಾಚಿ ..ಕಲರ್ ಸ್ಟಿಕ್ಕರ್ ಅಂಟಿ ಸುತ್ತ ಇದ್ದ. ಕಣ್ಣು ಕಪ್ಪು ವಿಂಗ್ ಮಾಡುತ್ತಾ ಇದ್ದ. ಅಮ್ಮನಿಗೆ ಹುಷಾರು ಇಲ್ಲದೆ ಹೋದರೆ ನನಗೆ ಇಡ್ಲಿ ವಡೆ ತಿನ್ನಿಸಿ ವಡೆ ರುಚಿ ಹತ್ತಿಸಿದ..
ಹೋಟೆಲಿನಲ್ಲಿ ಬೇಗ ಟೀ ಕುಡಿದು …ನಾನು ಬಿಸಿ ಕುಡಿಯಲು ಆಗದೆ ಒದ್ದಾಡುತ್ತಾ ಇದ್ದೆ.

ಒಮ್ಮೆ ಬೆಂಗಳೂರು magestic ಅಲ್ಲಿ ಅಣ್ಣ ಎಂದು ಕೊಂಡು ಬೇರೆಯವರ ಬೆರಳು ಹಿಡಿದುಕೊಂಡು ಹೋಗುತ್ತಾ ಇದ್ದೆ.. ಅಯ್ಯೋ ಅಣ್ಣನ ಬೆರಳ ತರ ಇಲ್ಲ ಎಂದು ನೋಡಿದಾಗ ಅಣ್ಣ ನಗುತ್ತ ನಿಂತಿದ್ದ.
ಮಂಡ್ಯ ಇಂದ ಬಂದು ಸಂಗಂ theatre ನಲ್ಲಿ ಜೇಮ್ಸ್ ಬಾಂಡ್ ,ಹಿಂದಿ ದೋಸ್ತಿ ,ಧರ್ಮಾತ್ಮಾmovie ತೋರಿಸುತ್ತಾ ಇದ್ದ.
ಉದಯ್ ಕುಮಾರ್ ಕನ್ನಡ ಫಿಲ್ಮ್ ಅಲ್ಲಿ ಹೊಡೆಸಿಕೊಂಡ ರೆ ..ನಾನು ಅಳುತ್ತ ಇದ್ದೆ,,,ಅಮ್ಮ ಅಣ್ಣನಿಗೆ ಹೊಡೀತಾ ಇದ್ದರೆ ಅಂಥ…ನಿಮ್ಮ ಯಜಮಾನರು ಉದಯ್ ಕುಮಾರ್ ತರ ಇದ್ದಾರಾ ಅಮ್ಮ ಎಂದು ಜನ ಅಮ್ಮನನ್ನು ಕೇಳುತ್ತಿದ್ದರು..
Hair dye Bryl cream ಸದಾ ಟ್ರಿಮ್ fellow.
ಜ್ವರ ಬಂದರೆ ಸರ್ಕಾರಿ ಆಸ್ಪತ್ರೆ ಗೆ ಕರೆದು ಕೊಂಡು ಹೋಗಿ .. ಪೆನಿಸಿಲಿನ್ ಇಂಜೆಕ್ಷನ್ ಕೊಡ್ಸಿ ಕೊಂಡು ಬರುತ್ತಾ ಇದ್ದನು.ಹಾಗೂ ಜ್ವರ ಬಿಡದೆ ಇದ್ದರೆ ಚಾಮುಂಡಿ ದೇವಸ್ತಾನಕ್ಕೆ ಹೋಗಿ ..ಯಂತ್ರ ಕಟ್ಟಿಸುತ್ತ ಇದ್ದನು.
ಸುಳ್ಳು ಅಂದರೆ ಕಡುಕೋಪ.ಯಾರಿಗೂ ತಲೆ ಬಾಗ ಲಿಲ್ಲ. ವಯಸ್ಸಾದರೂ ದುಡಿದು ಡಾಕ್ಟರ್ ಓದಿಸಿದ.
ದೋಸ್ತಿ, ದೊಬದನ್ ಹಾಡುಗಳನ್ನು ಆಸ್ವಾದಿಸುತ್ತಾ ಇದ್ದ. ರಫಿ ಎಂದರೆ ಪಂಚ ಪ್ರಾಣ. ನನಗೂ ರಫಿ ಹುಚ್ಚು ಹತ್ತಿಸಿದ.

ಚಿತುಕಿದ ಬೇಳೆ ಸಾರು ಆತನ ಫೇವರಿಟ್.ತನಗಿಂತ 14ವರ್ಷ ಚಿಕ್ಕವಳು ಹೆಂಡತಿ.
ಪ್ರತೀ ಹಬ್ಬಕ್ಕೂ ಅಮ್ಮನಿಗೆ full ವಾಯಲ್ ಸೀರೆ.ತಂದುಕೊಟ್ಟ.
ಸೇಬು , ರಸಬಾಳೆ,ಇಲ್ಲದೆ ಒಂದು ದಿನ ನಮ್ಮನ್ನು ಮಲಗಿಸಲಿಲ್ಲ. ಅಮ್ಮನಿಗೆ ಬಾಯಿ ಹುಣ್ಣು ಆದರೆ ಗುಲ್ಕನ್ , ಗಸೆ ಗಸೇ ಹಾಲು ರೆಡಿ.

ನಾನು ಲೈಬ್ರರಿ ಗೆ ಹೋಗಬೇಕಾಗುತ್ತದೆ ಎಂದು ದುಬಾರಿ ಪುಸ್ತಕ ಗಳನ್ನು ಕೊಂಡು ಕೊಡುತ್ತ ಇದ್ದ. ಮೂಲ ಇಂಗ್ಲಿಷ್ ಲೇಖಕರ ಪುಸ್ತಕ ಓದು ಗೈಡ್ಸ್ ಓದಬೇಡ ..ಇಂಗ್ಲಿಷ್ ಜಾಯಮಾನ ಅರ್ಥ ಆಗಲ್ಲ ಎಂದು ಹೇಳುತ್ತಿದ್ದ.
ಮೂಗು ಚುಚ್ಚಿಸಿ ಅದ ಗಂಟಿಗೆ, injection reaction ಆದಾಗ ಆಸ್ಪತ್ರೆ ಒಂದು ಮಾಡಿಬಿಟ್ಟ.
ನನ್ನ ಮಗಳು ಧೈರ್ಯ ಜಾಸ್ತಿ ಎಂದು ಹೇಳಿ ಹೇಳಿ ಎಲ್ಲ ಕೆಲಸ ಕಳಿಸಿ ಕೊಟ್ಟ.. ಆದರೆ ಸೈಕಲ್ ಹಿಡಿಯಲು ಬಿಡಲಿಲ್ಲ. ಬಿದ್ದು ಏಟು ಮಾಡಿಕೊಳ್ಳುತ್ತಾಳೆ ಎಂದು.
ಎಸ್ಟು ಜ್ವರ ಬಂದರೂ ಅಣ್ಣನ ತೊಡೆ ಮೇಲೆ ಮಲಗಿದರೆ ಜ್ವರ ಬಿಟ್ಟು ಹೋಗುತ್ತಾ ಇತ್ತು.
Varicose veins ಗೆ ಆತನಿಗೆ ದಿನಾ ಕಾಲು ತುಳಿಯಬೇಕಿತ್ತು ..ಅಷ್ಟು ಭಾರ ತಡೆದು ಕೊಳ್ಳುತ್ತ ಇದ್ದ.
ಒಂದು ವಾರಕ್ಕೆ ಒಮ್ಮೆ ಅಮ್ಮ ಬೆನ್ನು ಉಜ್ಜಲು ತಯಾರು ಆಗಬೇಕಿತ್ತು.
Wills filter,godrej shaving round, Bryl cream Charlie scent,ponds powder , ಲಿರಿಲ್ soap ಆತನನ್ನ ನೆನಪಿಸುತ್ತದೆ.
Show man ಆದರೂ ಯಾರಿಗೂ ಬಾಗದೆ ಮಕ್ಕಳನ್ನು ಸಾಕಿದ.. ಚಿಕ್ಕ ವಸ್ತುಗಳಲ್ಲಿ ಕುಷಿ ಇದೆ ಎಂದು ತೋರಿಸಿಕೊಟ್ಟ. ಇಂಗ್ಲಿಷ್ ಫಿಲ್ಮ್ ಬುಕ್ ಗಳ ಗೀಳು ಹತ್ತಿಸಿದ. ನೀನು Anne Frank ಪುನರ್ಜನ್ಮ ಎನುತ್ತ ಇದ್ದ ನನಗೆ.

ನನ್ನ ದೊಡ್ಡ ಕಣ್ಣುಗಳಿಗೆ ಗುಬೇ ಕಣ್ಣು ಎನ್ನುತ್ತ ಇದ್ದ.
ಸ್ವಾಭಿಮಾನಿ ಯಾರ ಬಳಿಯೂ ಸೇವೆ ಮಾಡಿಸಿಕೊಳ್ಳುವ ಇರಾದೆ ಇರಲಿಲ್ಲ.. ಅದೇ ರೀತಿ heart attack ಆಗಿ ಫಟ್ ಎಂದು ನರಳದೆ ಹೋಗಿಬಿಟ್ಟ.
ಆತನ ಶಿಷ್ಯ ಮುದ್ದು ರಾಮ..ಗೌಡ್ರು ನನ್ನ ಹೆಣ ಸುಡು ವಸ್ಟು.. wils filter ಸೆದಿದ್ದಾರೆ ಎಂದು ಹೇಳುತ್ತ ಇದ್ದ..ಹಾಗೆ heart attack ಅಲ್ಲಿ ಹೋಗಿಬಿಟ್ಟ.
ಅಕ್ಷರ ಬಹಳ ಸ್ಪುಟ,,gemoetry ಪ್ರಿಂಟ್ ಥರ.
ಜಡೆ ಮುನಿ ಎಂಬ ಕಾದಂಬರಿ ಬರೆದು ಪ್ರಕಟಿಸಿಲ್ಲ.
ರಾಮಮ್ಮನ ಕೆರೆ ಈ ಕಡೆ ಇಂದ ಆ ಕಡೆ ಈಜುತ್ತಾ ಇದ್ದ.
ದೆವ್ವ ಭೂತ ತನಗೆ ಹೆದರೂತಾವೆ ಎಂದು ಹೇಳುತ್ತ ಇದ್ದ. ದೆವ್ವ ಭೂತ ಇದ್ದವ ಎಂದರೆ 12ಗಂಟೆ ರಾತ್ರಿ ಓಡಾಡಿ ನೋಡು ಎನ್ನುತ್ತಾ ಇದ್ದ.
ಲಂಚ ಕೊಡಲು ಸಾಧ್ಯ ವಿಲ್ಲದೇ.. ಅನೇಕ ಅವಕಾಶಗಳನ್ನು ಕಳೆದು ಕೊಂಡಿದ್ದ.
ಬಿಯರ್ ಮತ್ತು ಇತರೆ hot drinks ಕುಡಿದರೂ ಒಂದು ದಿನವೂ ಅನುಚಿತ ಮಾತು ನಡತೆ ಇಲ್ಲ.
ಸ್ನೇಹಿತರೂ ಒಳ್ಳೆ .. ಅಧಿಕಾರದಲ್ಲಿ ಇದ್ದರೂ ಪ್ರಯೋಜನ ಪಡೆಯಲಿಲ್ಲ.
ಸ್ಥಿತ ಪ್ರಜ್ಞ ನಂತೆ ಬದುಕಿ… ಚಿಕ್ಕ ವಸ್ತುಗಳಲ್ಲಿ
ಕುಷಿ ಪಟ್ಟು.. ಯಾರಿಗೂ ಸುಳ್ಳು ಹೇಳದೆ .ಮೋಸ ಮಾಡದೆ ,ತಲೆ ಬಾಗದೆ … ಇಹ ಲೋಕ ತ್ಯಜಿಸಿದ ಶೋ ಮ್ಯಾನ್ … ಹೆಣ್ಣು ಮಗಳಿಗೆ .. ಧೈರ್ಯ ದಿಂದ ಬದುಕುವ ದ ಕಲಿಸಿದ.. ತಟ್ಟೆ ಎತ್ತಲೂ ಬಿಡದೆ ಮಗಳನ್ನು ಸಾಕಿದ..
ರಫಿ ಹಾಡುಗಳಲ್ಲಿ… Ponds powder ಘಮಲಿನಲ್ಲಿ.. ಟರ್ಕಿ ಟವಲ್ ನಲ್ಲಿ ಅಣ್ಣ ನನ್ನು ಹುಡುಕುತ್ತಾ ಇರುವೆ.


Dr rajani

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?