Friday, March 13, 2026
Google search engine
Home Blog Page 45

ಕಾಂಗ್ರೆಸ್ ಅಭ್ಯರ್ಥಿ ವೆಂಕಟೇಶ್ ಭರ್ಜರಿ ಪ್ರಚಾರ

ಪಾವಗಡ : ತಾಲ್ಲೂಕಿನ ಗಡಿಗ್ರಾಮ‌ ವೆಂಕಟಮ್ಮನಹಳ್ಳಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಹೆಚ್ ವಿ ವೆಂಕಟೇಶ್ ಇಂದು ಭರ್ಜರಿ ಪ್ರಚಾರ‌ನಡೆಸಿದರು.

ಬಿಜೆಪಿ ‌ಸರ್ಕಾರದ ಬೆಲೆ‌ ಏರಿಕೆ ನೀತಿಯಿಂದ ಜನರ ಜೀವನ ದುಸ್ಥರವಾಗಿದೆ, 40%ಕಮೀಷನ್ ಹಣ,,ಹಗರಣಗಳಿಂದ ಕೊಡಿದ ಸರ್ಕಾರ ಜನರ ಕಷ್ಟಗಳಿಗೆ‌ ಸ್ಪಂದಿಸಲೇ ಇಲ್ಲ ಎಂದರು .

ಸರ್ವೆಗಳ ಪ್ರಕಾರ ಜೆಡಿಎಸ್‌ಪಕ್ಷ 18 ರಿಂದ24 ಸ್ಥಾನ ಪಡೆಯಬಹುದು.ರಾಜ್ಯದಲ್ಲೂ ಕಾಂಗ್ರೆಸ್ ಸರ್ಕಾರ ಬರುವುದರಿಂದ ಪಾವಗಡದಲ್ಲೂ ಸಹ ಕಾಂಗ್ರೆಸ್ ಅಭ್ಯರ್ಥಿ ಯಾದ‌ ನನಗೆ ಮತ‌ನೀಡಿ‌ ಜಯಶೀಲರನ್ನಾಗಿ ಮಾಡಿ ,ರಾಜ್ಯದಲ್ಲಿ ‌ಕಾಂಗ್ರೆಸ್ ಪಾವಗಡದಲ್ಲೂ ಕಾಂಗ್ರೆಸ್ ‌ಗೆದ್ದರೆ ಅಭಿವೃದ್ಧಿ ಕಾಮಗಾರಿಗಳನ್ನೂ,ಶಾಶ್ವತ ಯೋಜನೆಗಳನ್ನು ಪಾವಗಡಕ್ಕೆ‌ ತರಬಹುದೆಂದು ಭರವಸೆಯ ನುಡಿಗಳನ್ನಾಡಿದರು.

ನನ್ನ ತಂದೆ ವೆಂಕಟರಮಣಪ್ಪ ತಾಲ್ಲೂಕಿಗೆ ಹಲವು ಶಾಶ್ವತ ಯೋಜನೆಗಳನ್ನು ‌ತಂದು‌ ಜನಮನ್ನಣೆ ಗಳಿಸಿದ್ದಾರೆ.ತಂದೆ ವೆಂಕಟರಮಣಪ್ಪ ಹಾದಿಯಲ್ಲೇ ಸಾಗಿ ತಾಲ್ಲೂಕನ್ನು ಮತ್ತಷ್ಟು ಅಭಿವೃದ್ಧಿ ಮಾಡಲು ಮತ ನೀಡಿ ಆಶೀರ್ವಾದಿಸುವಂತೆ ಜನರನ್ನು ಕೋರಿದರು.

ಕಾಂಗ್ರೆಸ್ ಮುಖಂಡರಾದ ಬತ್ತಿನೇನಿ ನಾನಿ, ಮಾನಂ ವೆಂಕಟಸ್ವಾಮಿ ನೇತೃತ್ವದಲ್ಲಿ ವೆಂಕಟಮ್ಮನಹಳ್ಳಿ, ಕ್ಯಾತಗನಚೇರ್ಲು,ವಳ್ಳೂರು, ಇಂಟುರಾಯನಹಳ್ಳಿ, ಬಳ್ಳಸಮುದ್ರ, ರಾಯಚೆರ್ಲು,ಆರ್ ಅಚ್ಚಮ್ಮನಹಳ್ಳಿ,ತಿರುಮಣಿ,ಅನ್ನದಾನಪುರ ಗ್ರಾಮಗಳಲ್ಲಿ ನೂರಾರು ಮಂದಿ ಗ್ರಾಮಸ್ಥರು ಅಭ್ಯರ್ಥಿ ವೆಂಕಟೇಶ್ ರಿಗೆ ಭವ್ಯ ‌ಸ್ವಾಗತವನ್ನು ಕೋರಿದರು.

ಈ ವೇಳೆಯಲ್ಲಿ ಸಣ್ಣ ಕೃಷ್ಣಪ್ಪ. ಚನ್ನಕೇಶವ. ಗೋಪಾಲರೆಡ್ಡಿ. ನಂಬರು ಪೋತಣ್ಣ. ಫಕೃದ್ದೀನ್. ತಾಳ್ಳೂರು ವೆಂಕಟಸ್ವಾಮಿ.ಮಾದಿಗ ನಾರಾಯಣಪ್ಪ. ಮೆಂಬರ್ ಮುತ್ಯಾಲು.ಸುದರ್ಶನ್ ಬಾಬು.ಮುತ್ಯಾಲಪ್ಪ. ಎರ್ರ ಸ್ವಾಮಿ.ಚಕ್ಕರಪ್ಪ. ಎವಿಎಂ ಅಶೋಕ್. ತಿರುಪತಿಯ್ಯ. ನಾಗರಾಜು. ರಾಮಲಿಂಗ.ರಾಮಚಂದ್ರರೆಡ್ಡಿ ಚಲಪತಿ. ನಾಗು. ನವೀನ್. ಮುರಳಿ. ಜಯರಾಮ.ಹಾಗೂ ನೂರಾರು ಕಾರ್ಯಕರ್ತರು ಹಾಜರಿದ್ದರು.


ಪಾವಗಡ ಪಟ್ಟಣದ ಕುಮಾರಸ್ವಾಮಿ ಬಡವಾಣೆಯ‌ಲ್ಲಿ ಪ್ರಚಾರ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಕಾಂಗ್ರೆಸ್ ಅಭ್ಯರ್ಥಿ ಹೆಚ್‌ವಿ ವೆಂಕಟೇಶ್ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಗೂ ಈ ಬಡವಾಣೆಗೂ‌ ಸಂಬಂಧವೇ ಇಲ್ಲ, ಪುರಸಭೆ ವ್ಯಾಪ್ತಿಯ ಬಡವರಿಗೆ ಅನುಕೂಲವಾಗಲೆಂದು ನನ್ನ‌ತಂದೆ ವೆಂಕಟರಮಣಪ್ಪ ಜಮೀನು ಮಂಜೂರು ಮಾಡಿಸಿ ಮನೆ ಕಟ್ಟಿಸುವ ಜೊತೆಗೆ ನಿವೇಶನವನ್ನು ಸಹ ಹಂಚಿದರು.ಈ ಬಡವಾಣೆಗೆ ಕುಮಾರಸ್ವಾಮಿ ಬದಲು ವೆಂಕಟರಮಣಪ್ಪ ಬಡವಾಣೆ ಎನ್ನುವುದೇ ಸಮಂಜಸ ಎಂದ ವೆಂಕಟೇಶ್ ಈ ವಾರ್ಡ್ ನ ಕೋಳಿ ಬಾಲಾಜಿ ಕಾಂಗ್ರೆಸ್ ಪಕ್ಷದಿoದ ಪುರಸಭೆ ಸದಸ್ಯೆಳಾಗಿ,ಅವರ ಪತ್ನಿಯನ್ನು ಉಪಾಧಕ್ಷರನ್ನಾಗಿ ಮಾಡಿದರು ಪಕ್ಷಕ್ಕೆ ದ್ರೊಹವೆಸಗಿ ಜೆಡಿಎಸ್ ಸೇರ್ಪಡೆಯಾಗಿದ್ದಾರೆ ಮುಂದಿನ ದಿನಗಳಲ್ಲಿ ಪಕ್ಷಕ್ಕೆ ದ್ರೋಹ ಎಸಗುವವರಿಗೆ ತಕ್ಕ ಪಾಠ ಕಲಿಸಬೇಕೆoದು ಜನರಿಗೆ ಕರೆ ನೀಡಿದರು.

ಇದೇ ಸಂದರ್ಭದಲ್ಲಿ ಪಟ್ಟಣದ ಸೈಯದ್ ತಾಮಿಜ್ ಹಾಗೂ ಸಹೋದರರು ಕುಟುಂಬಗಳು , ಕನ್ನಮ್ನಚೆರ್ಲು ಜೆಡಿಎಸ್ ಮುಖಂಡ ಖಲಿದ್ ಅಹಮ್ಮದ್ ಜೆಡಿಎಸ್ ಪಕ್ಷ ತೊರೆದು ಪುರಸಭೆ ಸದಸ್ಯೆ ಮಾಲಿನ್ ತಾಜ್ , ತಾಲ್ಲೂಕು ಅಲ್ಪಸಂಖ್ಯಾತರ ಘಟಕದ‌ ಅಧ್ಯಕ್ಷ ನಿಸ್ಸಾರ್ ಹಾಗೂ ಇಸ್ಮಾಯಿಲ್ ನೇತೃತ್ವದಲ್ಲಿ ನೂರಾರು ಜನ ಮುಸ್ಲಿಂ ಸಹೋದರರು ಜೆಡಿಎಸ್ ತೊರದು ಕಾಂಗ್ರೆಸ್ ಪಕ್ಷ ಸೇರ್ಪಡೆ ಯಾದರು.

ವರದಿ; ಕುಮಾರ ನಾಗಲಾಪುರ

PUC; ಮತ್ತಿಘಟ್ಟ ಕಾಲೇಜಿನ ಸಾಧನೆ

ಗುಬ್ಬಿ: ತಾಲ್ಲೂಕಿನ ಕೆ ಮತ್ತಿಘಟ್ಟ ಸರ್ಕಾರಿ ಪದವಿ ಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ಫಲಿತಾಂಶ 87.75% ಬಂದಿದೆ. ಒಟ್ಟು ಪರೀಕ್ಷೆ ಬರೆದ ವಿದ್ಯಾರ್ಥಿಗಳ ಸಂಖ್ಯೆ 65 ಇದರಲ್ಲಿ ಅತ್ಯುನ್ನತ ಶ್ರೇಣಿಯನ್ನು 8, ಪ್ರಥಮ ದರ್ಜೆಯಲ್ಲಿ 23, ದ್ವಿತೀಯ ದರ್ಜೆಯಲ್ಲಿ 13, ತೃತೀಯ ದರ್ಜೆಯಲ್ಲಿ 13 ವಿದ್ಯಾರ್ಥಿಗಳು ತೇರ್ಗಡೆಯಾಗಿರುತ್ತಾರೆ. ಒಟ್ಟು ಕಲಾ ವಿಭಾಗದ ಶೇಕಡ ಫಲಿತಾಂಶ 87.75%, ಹಾಗೂ ವಾಣಿಜ್ಯ ವಿಭಾಗದ ಶೇಕಡ ಫಲಿತಾಂಶ 80% ಆಗಿದ್ದು ಕಾಲೇಜಿನ ಒಟ್ಟು ಸರಾಸರಿ ಫಲಿತಾಂಶ 88.75% ಆಗಿದ್ದು ಸಮಾಜ ಶಾಸ್ತ್ರ ವಿಷಯದಲ್ಲಿ 100% ಫಲಿತಾಂಶ ಬಂದಿರುತ್ತದೆ ಗುಬ್ಬಿ ತಾಲೂಕಿನಲ್ಲಿ ಅತ್ಯುತ್ತಮ ಫಲಿತಾಂಶವನ್ನು ಈ ಕಾಲೇಜು ಹೊಂದಿರುತ್ತದೆ.

ನಾಮಪತ್ರ ತಿರಸ್ಕೃತಗೊಂಡ ಆ ಇಬ್ಬರು ಯಾರು?

0

ತುರುವೇಕೆರೆ: ತುರುವೇಕೆರೆ ವಿಧಾನ ಸಭಾ ಕ್ಷೇತ್ರದ ಚುನಾವಣೆಗೆ ವಿವಿಧ ಪಕ್ಷಗಳ 14 ಅಭ್ಯರ್ಥಿಗಳು ನಾಮ ಪತ್ರ ಸಲ್ಲಿಸಿದ್ದು; ಆ ಪೈಕಿ 2 ನಾಮ ಪತ್ರಗಳು ತಿರಸ್ಕೃತಗೊಂಡು 12 ನಾಮ ಪತ್ರಗಳು ಕ್ರಮವಾಗಿವೆ ಎಂದು ಚುನಾವಣಾಧಿಕಾರಿ ಎಂ.ಎನ್.ಮಂಜುನಾಥ್ ತಿಳಿಸಿದರು.

ನಾಮ ಪತ್ರ ಸಲ್ಲಿಕೆ ಏ.20 ಕೊನೆಯ ದಿನವಾಗಿದ್ದು ಈಗಾಗಲೇ ಸಲ್ಲಿಕೆಯಾಗಿರುವ ನಾಮ ಪತ್ರಗಳ ಪರಿಶೀಲನಾಕಾರ್ಯ ಶುಕ್ರವಾರ ನಡೆಯಿತು. ಆ ವೇಳೆ ಆಮ್ ಆದ್ಮಿ ಪಕ್ಷದ ಅಭ್ಯರ್ಥಿ ಶರತ್ ಟಿ.ಎನ್ ಅವರು ತಮ್ಮ ನಾಮ ಪತ್ರದಲ್ಲಿ ಸೂಚಕರು ಸಹಿ ಮತ್ತು ಅಭ್ಯರ್ಥಿಯ ಸಹಿ ಹಾಕದಿರುವುದು. ಹಾಗು ಮತ್ತೊರ್ವ ಅಭ್ಯರ್ಥಿ ಕೆ.ಹುಚ್ಚೇಗೌಡ ಅವರು ಕಾಂಗ್ರೆಸ್ ಪಕ್ಷ ಎಂದು ಸೂಚಿಸಿದ್ದು ಪಕ್ಷದ ಬಿಫಾರಂ ಹಾಕದಿರುವ ಕಾರಣ ತಿರಸ್ಕೃತಗೊಂಡಿವೆ.

ಜೆಡಿಎಸ್ ಅಭ್ಯರ್ಥಿ ಎಂ.ಟಿ.ಕೃಷ್ಣಪ್ಪ, ಬಿಜೆಪಿಯ ಜಯರಾಮ್ ಎ.ಎಸ್, ಕಾಂಗ್ರೆಸ್‍ನ ಕಾಂತರಾಜ್ ಬಿ.ಎಂ, ಆಮ್ ಆದ್ಮಿ ಪಕ್ಷದ ಜಯರಾಮ್ ಜಿ.ಸಿ, ಬಹುಜನ ಸಮಾಜ ಪಾರ್ಟಿಯ ಶ್ರೀನಿವಾಸ ಎಂ.ಸಿ, ಭಾರತೀಯ ಬಹುಜನ ಕ್ರಾಂತಿ ದಳ ಎಚ್.ಬಿ.ಪುಟ್ಟಪ್ಪ, ಉತ್ತಮ ಪ್ರಜಾಕೀಯ ಪಾರ್ಟಿಯ ಭರತ್ ಎಸ್, ಕರ್ನಾಟಕ ರಾಷ್ಟ್ರ ಸಮಿತಿಯ ರಾಮ್ ಪ್ರಸಾದ್, ರಿಪಬ್ಲಿಕನ್ ಪಾರ್ಟಿಆಫ್ ಇಂಡಿಯಾ ಭಾರತ ಹಟ್ಟಯ್ಯ ಎನ್, ಹಾಗು ಪಕ್ಷೇಯತರ ಅಭ್ಯರ್ಥಿಗಳಾದ ಎಂ.ಕೆ.ವರದರಾಜು, ಕಪನಿಗೌಡ, ನಾರಾಯಣರ ನಾಮ ಪತ್ರಗಳು ಕ್ರಮಬದ್ಧವಾಗಿವೆ ಎಂದು ತಿಳಿಸಿದರು.

ಹೆಬ್ಬೂರು ಬಿಜೆಪಿ ಕಡೆಗೆ ಜನಸ್ತೋಮ: ತಾಲ್ಲೂಕು ಕೇಂದ್ರದ ಭರವಸೆ

ಮನೆ ಮನೆ ಪ್ರಚಾರದ ವೇಳೆ ಕಂಡುಬಂದ ಜನಸ್ತೋಮ

ಹೆಬ್ಬೂರು: ಅಪಾರ ಜನರ ನಡುವೆ ಮನೆ ಮನೆಗೆ ಪ್ರಚಾರ ನಡೆಸುವ ಜನಾರ್ಶೀವಾದ ಯಾತ್ರೆಗೆ ಮಾಜಿ ಶಾಸಕ ಬಿ.ಸುರೇಶಗೌಡರು ಶುಕ್ರವಾರ ಇಲ್ಲಿ ಚಾಲನೆ ನೀಡಿದರು.

ಕಾರ್ಯಕರ್ತರು, ಜನರನ್ನು ಉದ್ದೇಶಿಸಿ ಮಾತನಾಡಿದ ಅವರು, ಹೆಬ್ಬೂರು ಹೋಬಳಿಯನ್ನು ಸಮಗ್ರವಾಗಿ ಅಭಿವೃದ್ಧಿ ಪಡಿಸುವ ಭರವಸೆ ನೀಡಿದರು.

ಹೆಬ್ಬೂರು ಐತಿಹಾಸಿಕ ಊರು. ಹೋಬಳಿಯನ್ನು ತಾಲ್ಲೂಕು ಕೇಂದ್ರವಾಗಿ ಮಾಡುವ ಸಲುವಾಗಿ ತಾವು ಶಾಸಕರಾಗಿದ್ದಾಗ ಹಲವು ಅಭಿವೃದ್ಧಿ ಕೆಲಸಗಳನ್ನು ಮಾಡಿದೆ. ಆದರೆ ಈಗಿನ ಶಾಸಕರು ಯಾವುದೇ ಕೆಲಸ ಮಾಡದೇ ಇಡೀ ಕ್ಷೇತ್ರವನ್ನು ಹಾಳು ಮಾಡಿದ್ದಾರೆ ಎಂದರು.

ಸುರೇಶಗೌಡರನ್ನು ಹೂವಿ‌ನ ಮಳೆಯಲ್ಲಿ ತೋಯಿಸಿದ ಹೆಬ್ಬೂರು ಜನರು

ಹೆಬ್ಬೂರಿಗೆ ಬಸ್ ನಿಲ್ದಾಣ ಮಾಡಿದೆ. ಪದವಿ ಕಾಲೇಜು ತಂದೆ.‌ ಹೇಮಾವತಿ ಏತ ನೀರಾವರಿ ಯೋಜನೆಯನ್ನು ನೆನಪು ಮಾಡಿಕೊಂಡರು.

ಹೆಬ್ಬೂರು ದೇವಸ್ಥಾನಗಳ ಊರು. ಬ್ಯಾಟರಾಯನ ದೇವಸ್ಥಾನವನ್ನು ಅಭಿವೃದ್ಧಿಗೊಳಿಸಿದೆ. ಇಲ್ಲಿರುವ ದೇವಸ್ಥಾನಗಳು, ಕಲ್ಯಾಣಿಗಳನ್ನು ಅಭಿವೃದ್ಧಿಪಡಿಸಿ ಜಿಲ್ಲೆಯ ಪ್ರವಾಸೋದ್ಯಮ ಕೇಂದ್ರವಾಗಿ ಅಭಿವೃದ್ಧಿಪಡಿಸುವುದಾಗಿ ಹೇಳಿದರು.
ಪ್ರಚಾರದ ವೇಳೆ ನೂರಾರು ಜನರು ಸೇರಿದ್ದರು. ಬಿಜೆಪಿ ಹಲವು ಮುಖಂಡರು ಇದ್ದರು.

BJP ಸೇರಿದ ಬೆಳ್ಳಿ; JDS ಕಳೆದುಕೊಂಡಿದ್ದೇನು?

0

ತುಮಕೂರು: ಚತುರ ಸಂಘಟಕ ಎಂದೇ ಹೆಸರಾಗಿರುವ JDS ಹಿರಿಯ ಮುಖಂಡ, ರಾಜ್ಯ ಪ್ರಧಾನ ಕಾರ್ಯದರ್ಶಿ ಬೆಳ್ಳಿ ಲೋಕೇಶ್ ಅವರು ಶುಕ್ರವಾರ ಬಿಜೆಪಿ ಸೇರುವ ಮೂಲಕ ಜೆಡಿಎಸ್ ಜಿಲ್ಲೆಯಲ್ಲಿ ಮತ್ತೊಬ್ಬ ಯುವ ನಾಯಕನನ್ನು ಕಳೆದುಕೊಂಡಂತಾಗಿದೆ.

ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಅವರ ಪುತ್ರ ನಿಖಿಲ್ ಕುಮಾರಸ್ವಾಮಿ ಅವರಿಗೆ ಹತ್ತಿರದಲ್ಲಿದ್ದ ಬೆಳ್ಳಿ ಲೋಕೇಶ್ ಅವರು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ತುಮಕೂರು ಲೋಕಸಭಾ ಸ್ಥಾನಕ್ಕೆ ಸ್ಪರ್ಧಿಸಿದಾಗ ಮಹತ್ವದ ಜವಾಬ್ದಾರಿ ನಿರ್ವಹಿಸಿದ್ದರು.

ವಿಧಾನ ಪರಿಷತ್ ಸದಸ್ಯ ತಿಪ್ಪೇಸ್ಚಾಮಿ ಅವರ ಜತೆ ದೇವೇಗೌಡರ ಚುನಾವಣೆಯ ಉಸ್ತುವಾರಿ ವಹಿಸಿದ್ದ ಬೆಳ್ಳಿ ಅವರಿಗೆ ಮಹತ್ವದ ಸ್ಥಾನಮಾನವನ್ನೇ ಪಕ್ಷ ನೀಡಿತ್ತು. ರಾಜ್ಯಮಟ್ಟದ ನಾಯಕತ್ವದ ಅವಕಾಶವನ್ನು ನೀಡಿತ್ತು. ಈಗ ಈ ನಾಯಕನನ್ನು ಬಿಜೆಪಿ ತನ್ನ ತೆಕ್ಕೆಗೆ ತೆಗೆದುಕೊಳ್ಳುವ ಮೂಲಕ ಜಿಲ್ಲೆಯಲ್ಲಿ ಒಕ್ಕಲಿಗರ ಮತವನ್ನು ಮತ್ತಷ್ಟು ಭದ್ರಪಡಿಸಿಕೊಂಡಿದೆ..

ಒಕ್ಕಲಿಗರ ಸಂಘದ ನಿರ್ದೇಶಕ ಸ್ಥಾನಕ್ಕೆ ಚುನಾವಣೆಗೆ ನಿಂತಾಗ ಜಿಲ್ಲೆಯ ಜೆಡಿಎಸ್ ಶಾಸಕರಾದ ಗೌರಿಶಂಕರ್, ಶ್ರೀನಿವಾಸ್, ಮಾಜಿ ಶಾಸಕ ಎಂ.ಟಿ.ಕೃಷ್ಣಪ್ಪ ಸಹಕರಿಸಲಿಲ್ಲ. ಅಲ್ಲದೇ ಕುಮಾರಸ್ವಾಮಿ ಹೇಳಿದರೂ ಈ ನಾಯಕರು ಕುಮಾರಸ್ವಾಮಿ ಅವರ ಮಾತಿಗೂ ಕೇರ್ ಮಾಡಲಿಲ್ಲ ಎಂಬ ಸಿಟ್ಟು, ಸೆಡವು, ನೋವಿನಲ್ಲೇ ಇದ್ದ ಬೆಳ್ಳಿ ಲೋಕೇಶ್ ಗೆ ಬಿಜೆಪಿ ಗಾಳ ಹಾಕುವಲ್ಲಿ ಯಶಸ್ಚಿಯಾಗಿದೆ.

ತುಮಕೂರು ನಗರ ಕ್ಷೇತ್ರದ ಅಭ್ಯರ್ಥಿ ಆಯ್ಕೆ ವಿಚಾರದಲ್ಲೂ ಬೆಳ್ಳಿ ಮತ್ತು ಕುಮಾರಸ್ವಾಮಿ ನಡುವೆ ಅಸಮಾಧಾನಕ್ಕೆ ಕಾರಣವಾಗಿತ್ತು. ಇದಕ್ಕೆ ಜೆಡಿಎಸ್ ನ ಜಿಲ್ಲೆಯ ಶಾಸಕರೊಬ್ಬರು ತುಪ್ಪ ಸುರಿದರು ಎಂಬ ಆರೋಪವೂ ಇದೆ.

ನಗರ ಕ್ಷೇತ್ರದ ಅಭ್ಯರ್ಥಿ ಗೋವಿಂದರಾಜು ಅವರು ಪಕ್ಷ ಕಟ್ಟಲಿಲ್ಲ. ಒಕ್ಕಲಿಗರನ್ನು ತುಚ್ಛವಾಗಿ ಕಾಣುತ್ತಾರೆ. ನನಗೂ ಗೌರವ ಕೊಡುತ್ತಿಲ್ಲ. ನೆಪಮಾತ್ರಕ್ಕೂ ಮಾತನಾಡಿಸುವುದಿಲ್ಲ. ಗೌರವ ಇಲ್ಲದ ಕಡೆ ಪಕ್ಷ ಕಟ್ಟುವುದು ಹೇಗೆ ಎಂದು ಬೆಳ್ಳಿ ಅವರು ಎಚ್. ಡಿ. ಕುಮಾರಸ್ವಾಮಿ ಅವರನ್ನು ಕೇಳಿದ್ದರು. ಆದರೆ ಅಡಿಯೊ ಬಹಿರಂಗ ವಿಚಾರದಲ್ಲಿ ಬೆಳ್ಳಿ ಅವರನ್ನು ಹಣಿಯಲು ಪಕ್ಷದ ಕೆಲವರು ಕುತಂತ್ರ ಮಾಡಿದ ನೋವು ಅವರಲ್ಲಿತ್ತು.

ಅವರೀಗ ಬಿಜೆಪಿ ಸೇರುವ ಮೂಲಕ ಅದರಲ್ಲೂ ತುಮಕೂರು ಗ್ರಾಮಾಂತರ, ತುಮಕೂರು‌ ನಗರದಲ್ಲಿ ಬಿಜೆಪಿ ಅಭ್ಯರ್ಥಿಗಳಿಗೆ ಅನುಕೂಲವಾಗಲಿದೆ ಎಂದು ವಿಶ್ಲೇಷಿಸಲಾಗುತ್ತದೆ.

ಬೆಳ್ಳಿ ಬ್ಲಡ್ ಬ್ಯಾಂಕ್ ಮೂಲಕ ಮೂರು ದಶಕಗಳಿಂದ ಸಾಮಾಜಿಕ ಸೇವೆಯಲ್ಲಿ ತೊಡಗಿರುವ ಬೆಳ್ಳಿ ಅವರಿಗೆ ತಮ್ಮದೆ ಹುಡುಗರ ತಂಡ ಇದೆ.

ಶಾಸಕ ಜ್ಯೋತಿಗಣೇಶ್ ಅವರ ಸುತ್ತಲೂ ಇದ್ದ ಯುವ ಮುಖಂಡರಲ್ಲಿ ಕೆಲವರು ಮಾಜಿ ಸಚಿವ ಸೊಗಡು ಶಿವಣ್ಣ ಅವರ ಜತೆ ಹೋಗಿರುವ ನಿರ್ವಾತವನ್ನು ಬೆಳ್ಳಿ ಲೋಕೇಶ್ ತುಂಬ ಬಲ್ಲರು ಎಂದು ವಿಶ್ಲೇಷಿಸಲಾಗುತ್ತದೆ.


ಇನ್ನೂ, ತುಮಕೂರು ಗ್ರಾಮಾಂತರ, ಕುಣಿಗಲ್, ತುರುವೇಕೆರೆ ಕ್ಷೇತ್ರಗಳ ಮೇಲೂ ಅವರಿಗೆ ಹಿಡಿತ ಇದ್ದು ಇಲ್ಲೂ ಬಿಜೆಪಿಗೆ ಅನುಕೂಲವಾಗಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಅಳುತ್ತಾ ಜೆಡಿಎಸ್ ಬಿಟ್ಟ ಬೆಳ್ಳಿ- ಕಾರಣ ಏನು?

0

ತುಮಕೂರು: ಜೆಡಿಎಸ್ ತುಮಕೂರು ನಗರ ಕ್ಷೇತ್ರದ ಅಭ್ಯರ್ಥಿ ಗೋವಿಂದರಾಜು ನಡವಳಿಕೆಯಿಂದ ಬೇಸರಗೊಂಡು ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುತ್ತಿರುವು ದಾಗಿ ಜೆಡಿಎಸ್ ಮುಖಂಡ ಬೆಳ್ಳಿ ಲೋಕೇಶ್ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ 20 ವರ್ಷಗಳಿಂದ ಜೆಡಿಎಸ್ ಪಕ್ಷವನ್ನು ಕಟ್ಟಲು ಶ್ರಮಿಸಿದ್ದೇನೆ, ಕೋಲಾರ, ಚಿಕ್ಕಬಳ್ಳಾಪುರದಲ್ಲಿ ಪಕ್ಷಕ್ಕೆ ಚೈತನ್ಯ ತುಂಬಿದ್ದೇನೆ,ಆದರೆ ತುಮಕೂರು ಜಿಲ್ಲೆಯಲ್ಲಿ ನನ್ನ ತೇಜೋವಧೆ ಮಾಡುವ ಹುನ್ನಾರ ಮಾಡಲಾಗಿದೆ ಎಂದರು.

2013ರಲ್ಲಿ ಚುನಾವಣೆಗೆ ಸ್ಪರ್ಧಿಸಲು ಟಿಕೆಟ್ ಕೇಳಿದೆ ಆಗ ನಿರಾಕರಿಸಲಾಯಿತು,ಪಕ್ಷಕ್ಕಾಗಿ ದುಡಿಯದವರಿಗೆ ಟಿಕೆಟ್ ನೀಡಲಾಯಿತು, ಚುನಾವಣೆ ಮುಗಿದ ಮೇಲೆ ಹೊರಟು ಹೋದರು,2018ರಲ್ಲಿಯೂ ಇದೇ ಪರಿಸ್ಥಿತಿ ಮುಂದುವರೆಯಿತು, ವರಿಷ್ಠರ ಮಾತಿಗೆ ಕಟ್ಟುಬಿದ್ದು ಪಕ್ಷಕ್ಕಾಗಿ ದುಡಿದಿದ್ದೇವೆ ಎಂದರು.

ನಿಖಿಲ್ ಕುಮಾರಸ್ವಾಮಿ ನಾಮಪತ್ರ ಸಲ್ಲಿಸಲು ತುಮಕೂರಿಗೆ ಬಂದರೆ ನನ್ನನ್ನು ಕರೆಯಲಿಲ್ಲ, ಪಂಚರತ್ನ ಯಾತ್ರೆ ಆರಂಭದಲ್ಲಿ ಟಿಕೆಟ್ ಘೋಷಣೆ ಮಾಡಿದರು, ಪಕ್ಷ ಸಂಘಟನೆ ಮಾಡುವಂತೆ ಅಭ್ಯರ್ಥಿಗೆ ಮನವಿ ಮಾಡಿದರು ಸಹ, ಕಿವಿಗೊಡಲಿಲ್ಲ ಎಂದು ಆರೋಪಿಸಿದರು.

ತಮ್ಮ ಹಿಂಬಾಲಕರಿಗಾಗಿ ಪಕ್ಷಕ್ಕಾಗಿ ದುಡಿದವರನ್ನು ಕಡೆಗಣಿಸಲಾಯಿತು,ಎಲ್ಲರನ್ನು ಒಟ್ಟಿಗೆ ಕೊಂಡೊಯ್ಯಬೇಕು ಎನ್ನುವ ಮನಸ್ಥಿತಿಯನ್ನು ಹೊಂದಿಲ್ಲದ ಅಭ್ಯರ್ಥಿಯ ನಡವಳಿಕೆಯಿಂದ ಬೇಸರಗೊಂಡು ಪಕ್ಷದ ಹುದ್ದೆಗೆ ರಾಜೀನಾಮೆ ನೀಡಿದ್ದೇನೆ, ಇಂತಹ ವ್ಯಕ್ತಿಗಳೊಂದಿಗೆ ರಾಜಕಾರಣ ಮಾಡಲು ಆಗುವುದಿಲ್ಲ ಎಂದು ಹೇಳಿದರು.

ಜೆಡಿಎಸ್ ಮುಖಂಡ ದೇವರಾಜು ಸಹ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಿವುದಾಗಿ ಹೇಳಿದರು.

ಸುದ್ದಿಗೋಷ್ಠಿಯ ಒಂದು ಹಂತದಲ್ಲಿ ದೇವೇಗೌಡರನ್ನು ನೆನೆದು ಕಣ್ಣಾಲಿಗಳನ್ನು ತುಂಬಿಕೊಂಡು ಗದ್ಗದಿತರಾದರು.

ಪಾವಗಡದಲ್ಲಿ ಪಂಜಿನ ಮೆರವಣಿಗೆ ಮಾಡಿದ್ದೇಕೆ?

0

ಪಾವಗಡ : 18 ವರ್ಷ ಮೇಲ್ಪಟ್ಟವರು ಕಡ್ಡಾಯವಾಗಿ ಮತದಾನ ಮಾಡುವಂತೆ ಉಪಕಾರ್ಯದರ್ಶಿ ಮತ್ತು ಚುನಾವಣ ಅಧಿಕಾರಿ ಅತೀಕ್ ಪಾಷ್ ಕರೆ ನೀಡಿದರು.

ತಾಲ್ಲೂಕು ಆಡಳಿತ ಹಾಗೂ ತಾಲ್ಲೂಕು ಸ್ವೀಪ್ ಸಮಿತಿ ವತಿಯಿಂದ ಆಯೋಜಿದ್ದ ಮತದಾನದ ಜಾಗೃತಿ ಕಾರ್ಯಕ್ರಮಕ್ಕೆ ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಅತೀಕ್ ಪಾಷ್ ರವರು ಚಾಲನೆ ನೀಡಿ ಮಾತನಾಡಿದ ಅವರು, ಸಂವಿಧಾನತ್ಮಕವಾಗಿ ಪ್ರಜೆಗಳಿಗೆ ಸಿಕ್ಕಿರುವ ಹಕ್ಕನ್ನು ಮತದಾನ ಮಾಡುವ ಮೂಲಕ ತಮ್ಮ ಹಕ್ಕನ್ನು ಚಲಾಯಿಸುವಂತೆ ಜನತೆಗೆ ಮನವಿ ಮಾಡಿದರು.

ತಹಶೀಲ್ದಾರ ಸುಜಾತ ರವರು ಮಾತನಾಡಿ ಎಲ್ಲರೂ ಚುನಾವಣೆಯಲ್ಲಿ ಮತದಾನ ಮಾಡುವ ಮೂಲಕ ಪ್ರಜಾಪ್ರಭುತ್ವದ ಹಬ್ಬದಲ್ಲಿ ಪಾಲ್ಗೊಳ್ಳ ಬೇಕು ಎಂದರು.

ನಂತರ ತಾಲ್ಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಶಿವರಾಜಯ್ಯ ಮಾತನಾಡಿ, ಸಾರ್ವಜನಿಕರು ಎಲ್ಲರು ಯಾವುದೇ ಆಸೆ ಅಮಿಷಗಳಿಗೆ ಬಲಿಯಾಗದೇ ನಿರ್ಭಯದಿಂದ ಮತ ಚಲಾಯಿಸಲು ಕೋರಿದರು.

ನಂತರ ಪಟ್ಟಣದ ಪ್ರಮುಖ ಬಡಾವಣೆಗಳಲ್ಲಿ ಮೇಣದ ಬತ್ತಿ ಹಿಡಿದು ಪಂಜಿನ ಮೆರವಣಿಗೆ ಮಾಡಿ, ಮತದಾನದ ಬಗ್ಗೆ ಅರಿವು ಮೂಡಿಸುವ ಘೋಷಣೆಗಳು ಕೂಗಿ ಜಾಗೃತಿ ಕಾರ್ಯಕ್ರಮ ಮಾಡಲಾಯಿತು.

ಈ ವೇಳೆ ತಾಲ್ಲೂಕು ಪಂಚಾಯತ್ ಯೋಜನಾಧಿಕಾರಿ ಮಲ್ಲಿಕಾರ್ಜುನ, ಸಹಾಯಕ ನಿರ್ದೇಶಕ ರಂಗನಾಥ್ ಜೆಬಿ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು, ಪಂಚಾಯತ್ ಅಭಿವೃದ್ದಿ ಅಧಿಕಾರಿಗಳು,
ತಾಲ್ಲೂಕು ಆಡಳಿ, ತಾಲ್ಲೂಕು ಪಂಚಾಯತ್ ಸಿಬ್ಬಂದಿ TAE’s,BFt’s & ಟಿಐಇಸಿ, ಆಶಾ ಕಾರ್ಯಕರ್ತರು, NRLM& ಗ್ರಾಪಂ ಸಿಬ್ಬಂದಿಗಳು ಇದ್ದರು.

ಒಳಮೀಸಲಾತಿ ವರದಿ ಸಮ್ಮತ: ಕೃಷ್ಣಾನಾಯ್ಕ

0

ಪಾವಗಡ : ಬಿಜೆಪಿ ಜಾರಿ ಮಾಡಿರುವ ಸದಾಶಿವ ಆಯೋಗ ವರದಿ ಸಮ್ಮತಿ ಯಾಗಿದೆ ಎಂದು ಪಾವಗಡ ಬಿಜೆಪಿ ಅಭ್ಯರ್ಥಿ ಕೃಷ್ಣ ನಾಯ್ಕ ಹೇಳಿದರು.

ಪಟ್ಟಣದ ಎಪಿಎಂಸಿ ಮಾರುಕಟ್ಟೆಯಿಂದ ಗುರುವಾರ ತೆರದ ವಾಹನದಲ್ಲಿ ನಗರದ ಪ್ರಮುಖ ರಸ್ತೆಗಳಲ್ಲಿ ಬೃಹತ್ ರೋಡ್ ಶೋ ನಡೆಸಿ ನಾಮ ಪ್ರತ ನಂತರ ಮಾತನಾಡಿದರು

ಸದಾಶಿವ ಆಯೋಗ ಜಾರಿಯೂ ನಮ್ಮ ಲಂಬಾಣಿ ಸಮುದಾಯಕ್ಕೆ ಸ್ವಾಗತ ಅರ್ಹವಾಗಿದೆ ಇದರಿಂದ ಯಾವುದೇ ಸಮಸ್ಯೆ ಆಗುವುದಿಲ್ಲ ಎಂದು ಹೇಳಿದರು.

ಜಾತಿಯ ಆಧಾರದ ಮೇಲೆ ಅವರವರ ಜಾತಿಗೆ ಅನುಗುಣವಾಗಿ ಮೀಸಲಾತಿ ನೀಡಿದ್ದಾರೆ. ನಮ್ಮ ಬಿಜೆಪಿ ಸರ್ಕಾರ ಮಾಡಿರುವುದು ಮೀಸಲಾತಿ ತಾಲೂಕಿನ ಜನರಿಗೆ ಸಮ್ಮತಿ ಆಗಿದೆ ಎಂದು ಹೇಳಿಕೊಂಡರು.

ತಾಲ್ಲೂಕಿನ ಸಮಗ್ರ ಅಭಿವೃದ್ಧಿ ಹಾಗೂ ಈ ಕ್ಷೇತ್ರದ ಬದಲಾವಣೆ ಬಯಸಿರುವ ಪ್ರಜ್ಞಾವಂತ ಮತದಾರರು ಈ ಬಾರಿ ಭಾರತೀಯ ಜನತಾ ಪಕ್ಷಕ್ಕೆ ಮತ ನೀಡಲಿದ್ದಾರೆ ಎಂದು ಬಿಜೆಪಿ ಅಭ್ಯರ್ಥಿ ಕೃಷ್ಣ ನಾಯ್ಕ ತಿಳಿಸಿದರು.

ಈ ಬಾರಿ ನನಗೆ ಮತವನ್ನು ಕೊಟ್ಟು ಗೆಲ್ಲಿಸಿ ನಿಮ್ಮ ಸೇವಕನಾಗಿ ನಿಮ್ಮ ಮನೆ ಮಗನಾಗಿ ನಿಮ್ಮ ಸೇವೆಯನ್ನು ಮಾಡುತ್ತೇನೆ. ಯಾವುದೇ ರೀತಿಯ ಭ್ರಷ್ಟಾಚಾರಕ್ಕೆ ಅವಕಾಶ ಕೊಡದೆ ನಿಷ್ಠೆ ಹಾಗೂ ಪ್ರಾಮಾಣಿಕವಾಗಿ ಈ ಕ್ಷೇತ್ರದ ಅಭಿವೃದ್ಧಿಯನ್ನು ಮಾಡುತ್ತೇನೆ. ಪ್ರತಿ ಹಳ್ಳಿಗಳಿಗೂ ತಿಂಗಳಿಗೆ ಎರಡು ಬಾರಿ ಭೇಟಿ ನೀಡಿ ಸ್ಥಳೀಯ ಸಮಸ್ಯೆಗಳನ್ನು ಬಗೆಹರಿಸುವ ಪ್ರಯತ್ನ ಮಾಡುತ್ತೇನೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಬಿಕೆ ಮಂಜುನಾಥ್ ಹರಿಯಾಣ ಬಿಜೆಪಿ ಮುಖಂಡ ಗಜೇಂದ್ರ ಸುಜಾಲ ಜಿಲ್ಲಾ ಚುನಾವಣೆ ಉಸ್ತುವಾರಿ ಎಚ್ ಎನ್ ಚಂದ್ರಶೇಖರ್, ಮಂಡಲ ಅಧ್ಯಕ್ಷ ರವಿಶಂಕರ್ ನಾಯಕ್ ಮುಖಂಡರಾದ ಡಾ|| ಜಿ. ವೆಂಕಟರಾಮಯ್ಯ ಕೊತ್ತೂರು ಹನುಮಂತರಾಯಪ್ಪ ಶಿವಕುಮಾರ್ ಸಾಕೆಲ್, ಡಾll ಚಕ್ಕರೆಡ್ಡಿ, ಡಾll ಶಶಿ ಕುಮಾರ್, ನವೀನ್ ಸೀತಾರಾಮ ನಾಯ್ಕ,
ಕಡಪಲಕೆರೆ ನವೀನ್, ಹಾಗೂ ಅನೇಕ ಕಾರ್ಯಕರ್ತರು ಹಾಜರಿದ್ದರು.

30 ಸಾವಿರ ಜನ: ನಾಮಪತ್ರ ಸಲ್ಲಿಸಿದ ಎಂಟಿಕೆ

ತುರುವೇಕೆರೆ: ‘ಈ ಬಾರಿ ಜೆಡಿಎಸ್ ವರಿಷ್ಠ ಎಚ್.ಡಿ.ಕುಮಾರ ಸ್ವಾಮಿಯವರು ರಾಜ್ಯದ ಮುಖ್ಯ ಮಂತ್ರಿಯಾದರೆ ನನಗೂ ಸಚಿವನಾಗುವ ಅವಕಾಶ ಸಿಗಲಿದ್ದು ನಿಮ್ಮೆಲ್ಲರ ಆಶೀರ್ವಾದದಿಂದ 20 ಸಾವಿರ ಲೀಡ್‍ನಲ್ಲಿ ನನ್ನನ್ನು ಗೆಲ್ಲಿಸಬೇಕು ಎಂದು ಜೆಡಿಎಸ್ ಅಭ್ಯರ್ಥಿ ಮಾಜಿ ಶಾಸಕ ಎಂ.ಟಿ.ಕೃಷ್ಣಪ್ಪ ಮತದಾರರಲ್ಲಿ ಮನವಿ ಮಾಡಿಕೊಂಡರು..

ಪಟ್ಟಣದ ತಿಪಟೂರು ವೃತ್ತದಲ್ಲಿ ಜೆಡಿಎಸ್ ಅಭ್ಯರ್ಥಿ ಎಂ.ಟಿ.ಕೃಷ್ಣಪ್ಪ ನಾಮ ಪತ್ರ ಸಲ್ಲಿಸುವ ಚುನಾವಣಾ ರ್ಯಾಲಿಯಲ್ಲಿ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡುತ್ತಾ

ಆಗ ತುರುವೇಕೆರೆಯನ್ನು ಜಿಲ್ಲಾ ಮುಖ್ಯ ಕೇಂದ್ರವನ್ನಾಗಿಸುವೆ ಜೊತೆಗೆ ಸಿ.ಎಸ್.ಪುರ ಹೋಬಳಿಯನ್ನು ತಾಲ್ಲೂಕು ಕೇಂದ್ರವನ್ನಾಗಿ ಮಾಡಿ ಜನರ ಋಣವನ್ನು ತೀರಿಸುವೆ.

ನನ್ನ ಅವಧಿಯಲ್ಲಿ ಆಸ್ಪತ್ರೆ, ಶಾಲಾ ಕಾಲೇಜು, ಬಸ್ ನಿಲ್ದಾಣ, ಏತ ನೀರಾವರಿ ಸೇರಿದಂತೆ ಹತ್ತಾರು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದೇನೆ ಆದರೆ ಬಿಜೆಪಿ ಶಾಸಕ ಜಯರಾಮ್ ಎ.ಎಸ್ ಕೇವಲ ಕಮಿಷನ್ ಬರುವ ಕಾಮಗಾರಿಗಳನ್ನು ಮಾತ್ರ ಮಾಡಿ ಅಭಿವೃದ್ದಿಗೆ ತಿಲಾಂಜಲಿ ಇಟ್ಟಿದ್ದಾರೆಂದು ದೂರಿದರು.

ಕೊಬ್ಬರಿ ಬೆಲೆ ಪಾತಾಳಕ್ಕೆ ಇಳಿದಿದ್ದು ಇಲ್ಲಿನ ಶಾಸಕರು ಸೇರಿದಂತೆ ಯಾವ ಸರ್ಕಾರಗಳೂ ರೈತ ಸಮಸ್ಯೆ ಆಲಿಸಿಲ್ಲ. ಈ ಬಗ್ಗೆ ನಾನು ಸಾಕಷ್ಟು ಹೋರಾಟ ಮಾಡಿದ್ದೇನೆ ಎಂದರು.

ಬಿಜೆಪಿ ಶಾಸಕರ ದುರಾಡಳಿತಕ್ಕೆ ಬೇಸತ್ತು ಶೇ 50 ರಷ್ಟು ಬಿಜೆಪಿ ಮುಖಂಡರು, ಕಾರ್ಯಕರ್ತರು ಜೆಡಿಎಸ್ ಪಾಳಯ ಸೇರಿದ್ದು ಆ ಮೂಲಕ ಜಯರಾಮ್ಗೆ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಗುಡುಗಿದರು. ಸಿ.ಎಸ್.ಪುರ ಗುಬ್ಬಿ ತಾಲ್ಲೂಕಿನ ಕ್ಷೇತ್ರವಲ್ಲ ಅದು ತುರುವೇಕೆರೆಗೆ ಸೇರಿದ್ದು ಅದು ಸಂಪೂರ್ಣ ಜೆಡಿಎಸ್ ಪರವಾಗಿದೆ ಇದರಲ್ಲಿ ಯಾವುದೇ ಸಂದೇಹ ಬೇಡ ಎಂದು ಸ್ಪಷ್ಟಪಡಿಸಿದರು.

ಮೇ10 ರಂದು ನಡೆಯುವ ಚುನಾವಣೆಯಲ್ಲಿ ಪ್ರತಿಯೊಬ್ಬ ಕಾರ್ಯಕರ್ತನೂ ತಮ್ಮ ಭೂತ್ನಲ್ಲಿ ಇದ್ದು ವೋಟ್ ಹಾಕಿಸುವ ಜವಬ್ದಾರಿ ನಿಮ್ಮದು. ನೀವೆಲ್ಲ ಗೆದ್ದಿದ್ದೇವೆ ಎಂದು ಬೀಗದೆ ಗೆಲ್ಲಬೇಕು ಎಂದು ಕೆಲಸ ಮಾಡಿ ಎಂದು ಕಾರ್ಯಕರ್ತರಿಗೆ ಕರೆ ಕೊಟ್ಟರು.

ಗುಬ್ಬಿ ವಿಧಾನ ಸಭಾ ಚುನಾವಣೆಯ ಪರಾಜಿತ ಅಭ್ಯರ್ಥಿ ಜಿ.ಎನ್.ಬೆಟ್ಟಸ್ವಾಮಿ ಎಂ.ಟಿ.ಕೃಷ್ಣಪ್ಪ ಪರ ಪ್ರಚಾರ ನಡೆಸುತ್ತಾ, ಗುಬ್ಬಿ ತಾಲ್ಲೂಕಿನ ಕುತಂತ್ರ ರಾಜಕಾರಣದಿಂದ ದೂರ ಉಳಿಯುವ ಸಂದರ್ಭದಲ್ಲಿ ನನ್ನನ್ನು ಜೆಡಿಸ್ ಪ್ರಮುಖರು ತಮ್ಮ ಪಕ್ಷಕ್ಕೆ ಬರಮಾಡಿಕೊಂಡರು. ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ಸೂಟ್ಕೇಸ್ ಸಂಸ್ಕೃತಿವುಳ್ಳ ಪಕ್ಷಗಳಾಗಿದ್ದು ನಿಷ್ಠಾವಂತರಿಗೆ ಬೆಲೆ ಇಲ್ಲದಾಗಿದೆಂದು ಬಿಜೆಪಿ ವಿರುದ್ದ ಹರಿಹಾಯ್ದರು.

ನಾನೂ ಈ ಬಾರಿ ಗುಬ್ಬಿ ಕ್ಷೇತ್ರದಲ್ಲಿ 30 ಸಾವಿರ ಲೀಡ್ನಲ್ಲಿ ಗೆಲ್ಲುವ ಭರವಸೆ ಇತ್ತು ಆದರೆ ಹಿಂದುಳಿದ ವರ್ಗಗಳ ವ್ಯಕ್ತಿಯೊಬ್ಬ ಶಾಸಕನಾಗುತ್ತಾನೆ ಎಂಬ ಸಣ್ಣತನದಿಂದ ರಾಜ್ಯ ಹಾಗು ಸ್ಥಳೀಯ ನಾಯಕರುಗಳ ಕುತಂತ್ರದಿಂದ ನನಗೆ ಟಿಕೇಟ್ ಕೈತಪ್ಪಿತು ಅದರಲ್ಲಿ ತುರುವೇಕೆರೆ ಶಾಸಕ ಜಯರಾಮ್ ಎ.ಎಸ್ ಅವರ ಪಾತ್ರವೂ ಇದೆ ಎಂದು ಆರೋಪಿಸಿದ ಅವರು

ಗುಬ್ಬಿ ಶಾಸಕ ಎಸ್.ಆರ್. ಶ್ರೀನಿವಾಸ್ ಮತ್ತು ತುರುವೇಕೆರೆ ಕ್ಷೇತ್ರದ ಶಾಸಕರಿಗೂ ನಂಟಿದ್ದು ನಗೆ ಟಿಕೇಟ್ ತಪ್ಪಿಸಲು ಕೈಜೋಡಿದವರೆಂದು ಗುಡುಗಿದ ಅವರು ಬಿಜೆಪಿಯವರು ತಾವು ಗೆಲ್ಲಲು ಹಿಂದುಳಿದ ವರ್ಗಗಳ ಮತ ಪಡೆದು ನನಗೆ ದ್ರೋಹವೆಸಗಿದರು. ಇವರೆಲ್ಲ ಕರುಣೆ ಇಲ್ಲದ ಕಟುಕರು. ನಾನು ಹೇಳುತ್ತಿದ್ದೇನೆ ಯಾದವ ಸಮುದಾಯದವರು ಬಿಜೆಪಿ ಮತ್ತು ಕಾಂಗ್ರೆಸ್ಗೆ ಮತಹಾಕಬೇಡಿ ಎಂದು ಆಕ್ರೋಶ ವ್ಯಕ್ತಪಡಿಸುತ್ತಾ ನಮ್ಮ ಪಕ್ಷದ ಅಭ್ಯಥರ್ಿ ಎಂ.ಟಿ.ಕೃಷ್ಣಪ್ಪ ಉತ್ತಮ ಆಡಳಿತಗಾರ, ನೊಂದವರ ಹರಿಕಾರ ಅವರಿಗೆ ವೋಟ್ ಕೊಡಿ ಅಪ್ಪಿತಪ್ಪಿಯೂ ಬಿಜೆಪಿ ಅಭ್ಯರ್ಥಿಗೆ ವೋಟ್ ಕೊಡಬೇಡಿ ಎಂದರು.

ಜೆಡಿಎಸ್ ರಾಜ್ಯ ಯುವ ಘಟಕದ ಅಧ್ಯಕ್ಷ ದೊಡ್ಡಾಘಟ್ಟಚಂದ್ರೇಶ್ ಮಾತನಾಡಿದರು. ನಂತರ ಅಭ್ಯರ್ಥಿ ಎಂ.ಟಿ.ಕೃಷ್ಣಪ್ಪ ತಾಲ್ಲೂಕು ಕಚೇರಿಗೆ ತೆರಳಿ ನಾಮ ಪತ್ರ ಸಲ್ಲಿಸಿದರು.

ಇದಕ್ಕೂ ಮುನ್ನಾ ಬಿಸಿಲು ಲೆಕ್ಕಿಸದೆ ಹರಿದು ಬಂದ ಜನಸಾಗರ ವೈಟಿ ರಸ್ತೆಯಲ್ಲಿ ಕೃಷ್ಣಾ ಚಿತ್ರಮಂದಿರದ ಬಳಿ ಸಾವಿರಾರು ಸಂಖ್ಯೆಯ ಕಾರ್ಯಕರ್ತಯರು, ಮುಖಂಡರು ಮತ್ತು ಅಭಿಮಾನಿಗಳು ಜಮಾವಣೆಗೊಂಡು ತೆರೆದ ವಾಹನದಲ್ಲಿ ಮೆರವಣಿಗೆ ಹೊರಟರು.

ಎರಡೂ ರಸ್ತೆಯಲ್ಲಿ ಸಾವಿರಾರು ಸಂಖ್ಯೆಯ ಯುವಕರು, ಅಭಿಮಾನಿಗಳು ಹಾಡಿಗೆ ನೃತ್ಯ ಹಾಕಿ ಕುಣಿದು ಕುಪ್ಪಳಿಸುತ್ತಾ ಎಂ.ಟಿ.ಕೃಷ್ಣಪ್ಪ, ಎಚ್‍.ಡಿ.ಕುಮಾರ್ ಸ್ವಾಮಿ ಮತ್ತು ದೇವೆಗೌಡರ ಪರ ಘೋಷಣೆ ಕೂಗುತ್ತಾ ತಾಲ್ಲೂಕು ಕಚೇರಿಯತ್ತಾ ಸಾಗಿದರು.

ಈ ಸಂದರ್ಭದಲ್ಲಿ ಜೆಡಿಎಸ್ ಜಿಲ್ಲಾ ಉಪಾಧ್ಯಕ್ಷ ಎಂ.ಡಿ.ರಮೇಶ್ಗೌಡ, ಮುಖಂಡರುಗಳಾದ ದೊಡ್ಡಾಘಟ್ಟಚಂದ್ರೇಶ್, ವೆಂಕಟಾಪುರ ಯೋಗೀಶ್, ರಾಜೀವ್ ಕೃಷ್ಣಪ್ಪ, ವೆಂಕಟೇಶ್, ಶಂಕರೇಗೌಡ ಬಾಣಸಂದ್ರ ರಮೇಶ್, ಧನಪಾಲ್, ಹಾವಾಳ ರಾಮೇಗೌಡ, ಕೊಪ್ಪಾ ಜಯರಾಮ್, ರಾಘು ಇದ್ದರು.

ವಿದ್ಯುತ್ ಸ್ಪರ್ಶಿಸಿ ಇಬ್ಬರು ಮಕ್ಕಳು ಸಾವು

ವಿದ್ಯುತ್ ಸ್ಪರ್ಶಿಸಿ ಇಬ್ಬರು ಮಕ್ಕಳು ಸಾವನ್ನಪ್ಪಿರುವ ಘಟನೆ ತುಮಕೂರು ಹೊರವಲಯದ ಬೆಳಗುಂಬದ ಸಿದ್ದರಾಮೇಶ್ವರ ಬಡಾವಣೆಯಲ್ಲಿ ಸಂಭವಿಸಿದೆ.

ಮೃತ ಮಕ್ಕಳು 8 ಮತ್ತು 9ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದು, ಅವರನ್ನು ಪ್ರಜ್ವಲ್ ಮತ್ತು ಯತೀಶ್ ಎಂದು ಗುರುತಿಸಲಾಗಿದೆ.

ಆಟವಾಡುತ್ತಿದ್ದಾಗ ಈ ದುರ್ಘಟನೆ ನಡೆದಿದೆ.

ಸಿದ್ದರಾಮೇಶ್ವರ ಬಡಾವಣೆಯಲ್ಲಿ ವಾಸವಿದ್ದ ವೀರಭದ್ರಯ್ಯ ಎಂಬುವರ ಪುತ್ರ ಯತೀಶ್ ಮತ್ತು ಸಿದ್ದಲಿಂಗಯ್ಯ ಅವರ ಪುತ್ರ ಪ್ರಜ್ವಲ್ ಮನೆಯ ಮೇಲೆ ಆಟವಾಡುತ್ತಿದ್ದಾಗ ವಿದ್ಯುತ್ ಸ್ಪರ್ಶಿಸಿ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.