ತುರುವೇಕೆರೆ: ತುರುವೇಕೆರೆ ವಿಧಾನ ಸಭಾ ಕ್ಷೇತ್ರದ ಚುನಾವಣೆಗೆ ವಿವಿಧ ಪಕ್ಷಗಳ 14 ಅಭ್ಯರ್ಥಿಗಳು ನಾಮ ಪತ್ರ ಸಲ್ಲಿಸಿದ್ದು; ಆ ಪೈಕಿ 2 ನಾಮ ಪತ್ರಗಳು ತಿರಸ್ಕೃತಗೊಂಡು 12 ನಾಮ ಪತ್ರಗಳು ಕ್ರಮವಾಗಿವೆ ಎಂದು ಚುನಾವಣಾಧಿಕಾರಿ ಎಂ.ಎನ್.ಮಂಜುನಾಥ್ ತಿಳಿಸಿದರು.
ನಾಮ ಪತ್ರ ಸಲ್ಲಿಕೆ ಏ.20 ಕೊನೆಯ ದಿನವಾಗಿದ್ದು ಈಗಾಗಲೇ ಸಲ್ಲಿಕೆಯಾಗಿರುವ ನಾಮ ಪತ್ರಗಳ ಪರಿಶೀಲನಾಕಾರ್ಯ ಶುಕ್ರವಾರ ನಡೆಯಿತು. ಆ ವೇಳೆ ಆಮ್ ಆದ್ಮಿ ಪಕ್ಷದ ಅಭ್ಯರ್ಥಿ ಶರತ್ ಟಿ.ಎನ್ ಅವರು ತಮ್ಮ ನಾಮ ಪತ್ರದಲ್ಲಿ ಸೂಚಕರು ಸಹಿ ಮತ್ತು ಅಭ್ಯರ್ಥಿಯ ಸಹಿ ಹಾಕದಿರುವುದು. ಹಾಗು ಮತ್ತೊರ್ವ ಅಭ್ಯರ್ಥಿ ಕೆ.ಹುಚ್ಚೇಗೌಡ ಅವರು ಕಾಂಗ್ರೆಸ್ ಪಕ್ಷ ಎಂದು ಸೂಚಿಸಿದ್ದು ಪಕ್ಷದ ಬಿಫಾರಂ ಹಾಕದಿರುವ ಕಾರಣ ತಿರಸ್ಕೃತಗೊಂಡಿವೆ.
ಜೆಡಿಎಸ್ ಅಭ್ಯರ್ಥಿ ಎಂ.ಟಿ.ಕೃಷ್ಣಪ್ಪ, ಬಿಜೆಪಿಯ ಜಯರಾಮ್ ಎ.ಎಸ್, ಕಾಂಗ್ರೆಸ್‍ನ ಕಾಂತರಾಜ್ ಬಿ.ಎಂ, ಆಮ್ ಆದ್ಮಿ ಪಕ್ಷದ ಜಯರಾಮ್ ಜಿ.ಸಿ, ಬಹುಜನ ಸಮಾಜ ಪಾರ್ಟಿಯ ಶ್ರೀನಿವಾಸ ಎಂ.ಸಿ, ಭಾರತೀಯ ಬಹುಜನ ಕ್ರಾಂತಿ ದಳ ಎಚ್.ಬಿ.ಪುಟ್ಟಪ್ಪ, ಉತ್ತಮ ಪ್ರಜಾಕೀಯ ಪಾರ್ಟಿಯ ಭರತ್ ಎಸ್, ಕರ್ನಾಟಕ ರಾಷ್ಟ್ರ ಸಮಿತಿಯ ರಾಮ್ ಪ್ರಸಾದ್, ರಿಪಬ್ಲಿಕನ್ ಪಾರ್ಟಿಆಫ್ ಇಂಡಿಯಾ ಭಾರತ ಹಟ್ಟಯ್ಯ ಎನ್, ಹಾಗು ಪಕ್ಷೇಯತರ ಅಭ್ಯರ್ಥಿಗಳಾದ ಎಂ.ಕೆ.ವರದರಾಜು, ಕಪನಿಗೌಡ, ನಾರಾಯಣರ ನಾಮ ಪತ್ರಗಳು ಕ್ರಮಬದ್ಧವಾಗಿವೆ ಎಂದು ತಿಳಿಸಿದರು.