Saturday, March 14, 2026
Google search engine
Home Blog Page 68

ಶತ್ರುಗಳನ್ನು ಅಹಿಂಸೆ ಮುಖಾಂತರವೂ ಸೋಲಿಸಬಹುದು : ಎಜಿಎಂ ರವಿ

Public story


ತುಮಕೂರು : ರಕ್ತಕ್ರಾಂತಿಯಾಗದೆ ಯಾವುದೇ ದೇಶಕ್ಕೆ ಸ್ವಾತಂತ್ರ್ಯ ದೊರೆತ ಉದಾಹರಣೆಗಳಿಲ್ಲ. ಆದರೆ, ಶತ್ರುಗಳನ್ನು ಅಹಿಂಸೆ ಮುಖಾಂತರವೂ ಸೋಲಿಸ ಬಹುದು ಎನ್ನುವುದನ್ನು ಗಾಂಧೀಜಿ ಭಾರತದಲ್ಲಿ ತೋರಿಸಿಕೊಟ್ಟಿದ್ದರು ಎಂದು ತುಮಕೂರು ಕೆನರಾ ಬ್ಯಾಂಕ್ ಎಜಿಎಂ ರವಿ ಬಣ್ಣಿಸಿದರು.

ನಗರದ ಮಹಾಲಕ್ಷ್ಮೀ ನಗರದಲ್ಲಿ ಗಾಂಧಿ ಜಯಂತಿ ಪ್ರಯುಕ್ತ ಕೆನರಾ ಬ್ಯಾಂಕ್ ನ ಪ್ರಾಂತೀಯ ಕಚೇರಿಯ ವತಿಯಿಂದ ಭಾನುವಾರ ಉದ್ಯಾನವನ ಸ್ವಚ್ಛತೆ ಮಾಡಲಾಯಿತು.

ಇದೇ ಸಂದರ್ಭದಲ್ಲಿ ಮಾತನಾಡಿದ ಅವರು, ಗಾಂಧೀಜಿ ಅಹಿಂಸಾ ತತ್ವದ ಮೂಲಕ ದೇಶಕ್ಕೆ ಸ್ವಾತಂತ್ರ್ಯ ದೊರಕಿಸಿಕೊಟ್ಟ ಮಹಾನ್ ಚೇತನ. ಅದಕ್ಕಾಗಿ ಅವರನ್ನು ಇಡೀ ವಿಶ್ವವೇ ಗೌರವಿಸುತ್ತದೆ ಎಂದರು.

ಮಹಾತ್ಮ ಗಾಂಧಿ ಜಯಂತಿ ಆಚರಣೆಗಷ್ಟೇ ಸೀಮಿತವಾಗಬಾರದು. ಅವರ ತತ್ತ್ವಾದರ್ಶ, ಮೌಲ್ಯಗಳನ್ನು ಜೀವನದಲ್ಲಿ ಎಲ್ಲರೂ ಪಾಲಿಸುವಂತಾಗಬೇಕು ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಕೆನರಾ ಬ್ಯಾಂಕ್ ಸಿಬ್ಬಂದಿ ಶ್ರಮದಾನ ಮಾಡುವ ಮೂಲಕ ಸ್ವಚ್ಛತಾ ಕಾರ್ಯ ನಿರ್ವಹಿಸಿದರು.

ಕಾರ್ಯಕ್ರಮದಲ್ಲಿ ಕೆನರಾ ಬ್ಯಾಂಕ್ ನ ವ್ಯವಸ್ಥಪಕಾರದ ವಿನಯ್ ಕುಮಾರ್, ರವೀಂದ್ರ ರೆಡ್ಡಿ, ಗಂಗಾಧರ್ ಇನ್ನಿತರರು ಉಪಸ್ಥಿತರಿದ್ದರು.


ಫೋಟೋ ಕ್ಯಾಪ್ಷನ್ :
ತುಮಕೂರು ನಗರದ ಮಹಾಲಕ್ಷ್ಮೀ ನಗರದಲ್ಲಿ ಗಾಂಧಿಜಯಂತಿ ಪ್ರಯುಕ್ತ ಕೆನರಾ ಬ್ಯಾಂಕ್ ನ ಪ್ರಾಂತೀಯ ಕಚೇರಿಯ ವತಿಯಿಂದ ಉದ್ಯಾನವನ ಸ್ವಚ್ಛತಾ ಕಾರ್ಯ ನಡೆಯಿತು.

ಗಾಂಧಿ ಬಗ್ಗೆ ಲಾ ಪ್ರೊಫೆಸರ್ ಹೇಳಿದ ಮಾತುಗಳೇನು?

Publicstory


ತುಮಕೂರು: ಮಹಾತ್ಮಗಾಂಧೀಜಿ ಅವರ ಚಿಂತನೆಗಳಲ್ಲೆ ಇಂದಿನ ಜಗತ್ತಿನ ಬಿಕ್ಕಟ್ಟಿಗೆ ಪರಿಹಾರ ಅಡಗಿದೆ. ಇದನ್ನು ಜಗತ್ತು ಮನಗಾಣಬೇಕಾಗಿದೆ ಎಂದು ಸುಫಿಯಾ ಕಾನೂನು ಕಾಲೇಜಿನ ಪ್ರಾಂಶುಪಾಲರಾದ ಡಾ.ಎಸ್.ರಮೇಶ್ ಹೇಳಿದರು.

ಕಾಲೇಜಿನಲ್ಲಿ ನಡೆದ ಗಾಂಧಿ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಗಾಂಧೀಜಿ ಅವರು ಬದುಕಿರುತ್ತಿದ್ದರೆ ಇಂದಿನ ಪರಿಸ್ಥಿತಿಗೆ ಅವರ ಪ್ರತಿಕ್ರಿಯೆ ಏನಿರುತ್ತಿತ್ತು ಎಂಬುದನ್ನು ನಾವೆಲ್ಲರೂ ಚಿಂತಿಸಬೇಕಾಗಿದೆ ಎಂದರು.

ಗಾಂಧೀಜಿ ಅವರ ಕೊಡುಗೆ ಅಗಾಧವಾದದ್ದು. ಅವರು ಮಾನವೀಯತೆಯ ಚಿಂತನೆಗಳು ಜಗತ್ತಿಗೆ ದಾರಿ ದೀಪವಾಗಿವೆ ಎಂದರು.

ಗಾ‌ಂಧೀಜಿ ಅವರ ದಾರ್ಶನಿಕ ವ್ಯಕ್ತಿ. ಅವರ ಅಹಿಂಸಾ ವಾದದ ಕಾರಣದಿಂದಲೇ ಜಗತ್ತಿನಲ್ಲಿ ಯುದ್ಧ ದಾಹ ನಿಂತಿದೆ ಎಂದರು.

ಕಾಲೇಜಿನ ಅಭಿವೃದ್ಧಿ ಅಧಿಕಾರಿ ಸಿ.ಕೆ.ಮಹೇಂದ್ರ, ಉಪನ್ಯಾಸಕ ಪುರುಷೋತ್ತಮ, ಸೂಪರಿಡಿಂಡ್ ಟೆಂಡ್ ಜಗದೀಶ್, ಶಿಲ್ಪಾ ಇದ್ದರು.

ಜಡ್ಜ್ ಮೆಂಟ್ ಅಲ್ಲ ಜಸ್ಟೀಸ್ ಮುಖ್ಯ: ನ್ಯಾಯಾಧೀಶೆ ನೂರುನ್ನೀಸಾ

Public story.in


Tumakuru: ಜಡ್ಜ್ ಮೆಂಟ್ ಎಲ್ಲರೂ ಕೊಡಬಹುದು. ಆದರೆ ಜಸ್ಟೀಸ್ ಕೊಡುವುದು ತುಂಬಾ ಕಷ್ಟ ಎಂದು ತುಮಕೂರು ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ, ನ್ಯಾಯಾಧೀಶರಾದ ನೂರುನ್ನೀಸಾ ಅವರು ಹೇಳಿದರು.

ನಗರದ ಸುಫಿಯಾ ಕಾನೂನು ಕಾಲೇಜಿನಲ್ಲಿ ಆಯೋಜಿಸಿದ್ದ ಅಂತಿಮ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿದರು.

https://youtu.be/-Ablcu9SKkY

ಕಾನೂನು ಪದವಿಗೆ ಹೆಚ್ಚು ಅವಕಾಶಗಳಿವೆ. ನನಗೆ ಸೇನೆಗೆ ಸೇರಬೇಕೆಂಬ ಆಸೆ ಇತ್ತು. ಅದಕ್ಕಾಗಿ ತಯಾರು ನಡೆಸಿದ್ದೆ.‌ ಪರೀಕ್ಷೆ ಪಾಸಾದಾರೂ ಕಾರಣಾಂತರಗಳಿಂದ ಹೋಗಲಾಗಲಿಲ್ಲ ಎಂದರು.

ವೈದ್ಯಕೀಯ, ಎಂಜಿನಿಯರಿಂಗ್ ಹುದ್ದೆಗಿಂತ ಹೆಚ್ಚು ಮಹತ್ವದ ಗೌರವಾನ್ವಿತ, ಘನತೆಯುಳ್ಳ, ದೈವಿಕ ರೂಪದ ಹುದ್ದೆ. ಇಲ್ಲಿ ಸಮಾಜದ ಲೋಪದೋಷಗಳನ್ನು ತಿದ್ದಬಹುದು. ಕಾನೂನು ಪದವೀಧರರು ಪತ್ರಿಕೋದ್ಯಮ ದಲ್ಲೂ ಸೇವೆಯಲ್ಲಿದ್ದಾರೆ ಎಂದರು.

ಕಾನೂನು ಸೇವಾ ಪ್ರಾಧಿಕಾರದಲ್ಲಿ ಸುಫಿಯಾ ಕಾಲೇಜು ವಿದ್ಯಾರ್ಥಿ ಗಳು ಸಕ್ರಿಯ ಪಾಲ್ಗೊಳ್ಳುವಿಕೆ ಯನ್ನು ಗಮನಿಸಿದ್ದೇನೆ. ಕಟಿಬದ್ದತೆ, ಪ್ರಾಮಾಣಿಕತೆಯಿಂದ ಕೆಲಸ ಮಾಡಬೇಕು. ಜನರಿಗೆ ಸಕರಾತ್ಮಕ ಅಭಿಪ್ರಾಯ ನ್ಯಾಯಾಲಯದ ಮೇಲಿದೆ. ಅದನ್ನು ಉಳಿಸಿಕೊಳ್ಳಬೇಕು ಎಂದು ತಿಳಿಸಿದರು.

ಎಲ್ಲೂ ಸಲ್ಲದವರು ವಕೀಲರಾಗ ಬಹುದು ಎಂಬ ಅಭಿಪ್ರಾಯ ತಪ್ಪು. ಆ ಥರಾ ವಾತಾವರಣ ಈಗ ಇಲ್ಲ. ವಕೀಲರಾಗಿ ಮಾತ್ರವಲ್ಲ ಆನೇಕ ಅವಕಾಶಗಳಿವೆ. ವಕೀಲರು ನ್ಯಾಯಾಂಗ ಇಲಾಖೆಯ ಸೈನಿಕರು. ನ್ಯಾಯಾಂಗವನ್ನು ಕಾಪಾಡಬೇಕು. ಮಾನವೀಯ ಮೌಲ್ಯದೊಂದಿಗೆ ಕೆಲಸ ಮಾಡಬೇಕು ಎಂದರು.

ಕಿರಿಯ ವಕೀಲರಿಗೆ ಓದುವ ಹವ್ಯಾಸ ಕಡಿಮೆಯಾಗುತ್ತಿದೆ. ಹಣವೇ ಮುಖ್ಯವಲ್ಲ. ಇದೊಂದು ಯಾವಾಗಲೂ ಕಲಿಕೆಯ ವೃತ್ತಿ. ವಕೀಲರಾಗಿ ಇರುವವರೆಗೂ ಓದುತ್ತಲೇ ಇರಬೇಕು ಎಂದು ಸಲಹೆ ನೀಡಿದರು.

ಹಳೆಯ ಕಾನೂನು ಸಹ ಅರಿಯಬೇಕು. ಸಾಮಾಜಿಕ ಜವಾಬ್ದಾರಿಯನ್ನು ಹೊರಬೇಕು. ಜನರ ಕಷ್ಟಸುಖಗಳನ್ನು ಸಹ ಕೇಳಬೇಕು. ಆಲಿಸುವುದನ್ನು ಕಡಿಮೆ ಮಾಡಿದ್ದೇವೆ. ಇದು ತಪ್ಪು. ಎಂದು ಸಲಹೆ ನೀಡಿದರು.

ವೃತ್ತಿ ಜೀವನದಲ್ಲಿ ವಕೀಲೆಯಾಗಿ ಕಡಿಮೆ ಅವಧಿಯಲ್ಲಿ ಕೆಲಸ ಮಾಡಿದ್ದೇನೆ. ಆದರೆ ನ್ಯಾಯಾಂಗ ಇಲಾಖೆಯಲ್ಲಿ ಹೆಚ್ಚು ಕೆಲಸ ಮಾಡಿದ್ದೇನೆ ಎಂದರು.

ಜನರು ಎಲ್ಲ ಕಚೇರಿಗಳನ್ನು ಅಲೆದು ಕಡೆಯ ಪ್ರಯತ್ನವಾಗಿ ವಕೀಲರ ಬಳಿ ಬರುತ್ತಾರೆ. ಅವರಿಗೆ ನಾವು ಸ್ಪಂದಿಸಬೇಕು. ಅವರಿಗೆ ಗೌರವ ಕೊಡಬೇಕು. ಆ ವ್ಯಕ್ತಿಯ ಸ್ಥಾನದಲ್ಲಿ ನಿಂತು ನೋಡಬೇಕು ಎಂದರು.


ಜಡ್ಜ್ ಮೆಂಟ್ ಎಲ್ಲರೂ ಕೊಡಬಹುದು. ಆದರೆ ಜಸ್ಟೀಸ್ ಎಲ್ಲರಿಗೂ ಕೊಡಲು ಸಾಧ್ಯವಿಲ್ಲ. ನೈಸರ್ಗಿಕ ನ್ಯಾಯವೇ ನ್ಯಾಯದಾನದ ಮೂಲವಾಗ ಬೇಕು ಎಂದರು.


ಮಾರ್ಕ್ ಕಡಿಮೆ ಬಂದಿದೆ ಎಂದು ಕೊರಗಬೇಡಿ. ಎಲ್ಲರಲ್ಲೂ ಒಂದೊಂದು ಶಕ್ತಿ ಇದೆ. ವಿಶೇಷ ಗುಣ ಇದೆ ಎಂದರು.

ಕನ್ನಡ ಮಾಧ್ಯಮದಲ್ಲಿ ಕಲಿತವರು ಎಂಬ ಹಿಂಜರಿಕೆ ಬೇಡ. ನಾ‌ನೂ ಸಹ ಕನ್ನಡದಲ್ಲೇ ಪದವಿವರೆಗೂ ಓದಿ ಈ ಸ್ಥಾನಕ್ಕೆ ಬಂದಿದ್ದೇನೆ ಎಂದು ತಿಳಿಸಿದರು.

ಸಾಪ್ಟವೇರ್, ಎಂಜಿನಿಯರಿಂಗ್, ವೈದ್ಯಕೀಯ ಕ್ಷೇತ್ರಕ್ಕೆ ಇರುವುದಕ್ಕಿಂತಲೂ ಹೆಚ್ಚು ಅವಕಾಶಗಳು ಕಾನೂನು ಪದವೀಧರರಿಗೆ ಇದೆ ಎಂದು ತಿಳಿಸಿದರು.


ಭಿನ್ನವಾಗಿ ಕೆಲಸ ಮಾಡುವುದನ್ನು ಕಲಿಯಿರಿ. ದಾವಣಗೆರೆಯಲ್ಲಿದ್ದಾಗ ಕನ್ನಡದಲ್ಲಿ ಜಡ್ಜ್ ಮೆಂಟ್ ಬರೆಯುತ್ತಿದ್ದೆ. ಜನ ಸಾಮಾನ್ಯರು, ವಕೀಲರು ಸಹ ಖುಷಿ ಪಡುತ್ತಿದ್ದರು. ನಾನೂ ಈಗಲೂ ಸಹ ಕಚೇರಿ ಟಿಪ್ಪಣೆ, ಪತ್ರವ್ಯವಹಾರ ಮಾಡುತ್ತಿದ್ದೇನೆ. ಕನ್ನಡದಲ್ಲಿ ವಕೀಲಿಕೆ ಮಾಡಲು ಹಿಂಜರಿಕೆ ಪಡುವುದು ಬೇಡ ಎಂದು ಹೇಳಿದರು.


ದೇವರು ಇದ್ದಂತೆ ದೆವ್ವವೂ ಇವೆ. ಅದೇ ರೀತಿ ಎಲ್ಲರಲ್ಲೂ ಒಳ್ಳೆಯ ಗುಣಗಳ ಜತೆ ಕೆಟ್ಟ ಗುಣಗಳು ಇರುತ್ತವೆ. ದ್ವಿಮುಖ ಮನುಷ್ಯರ ಲಕ್ಷಣವಾಗಿದೆ. ಒಳ್ಳೆಯದನ್ನು ಬಳಸಿ ಎಂದರು.

ಅಬ್ದುಲ್ ಕಲಾಂ, ಸ್ವಾಮಿ ವಿವೇಕಾನಂದ ಮತ್ತಿರರ ಆತ್ಮಚರಿತ್ರೆಯನ್ನು ಓದಿದ್ದೇನೆ. ಸಾಧಕರ ಆತ್ಮಚರಿತ್ರೆ ಓದುವುದು ನನ್ನ ಹವ್ಯಾಸವಾಗಿದೆ. ನಾನು ಕೊನೆಯ ಬೆಂಚ್ ಹುಡುಗಿ. ಅಬ್ದುಲ್ ಕಲಾಂರ ಪುಸ್ತಕ ನನ್ನ ಸಾಧನೆಗೆ ಕಾರಣವಾಯಿತು ಎಂದರು.

ಹಿರಿಯ ಪತ್ರಕರ್ತರಾದ ಕೆ.ಜೆ.ಮರಿಯಪ್ಪ ಮಾತನಾಡಿ, ಕಾನೂನು ಪದವೀಧರರಿಗೆ ಉತ್ತಮ ಒಳ್ಳೆಯ ಅವಕಾಶ ಗಳಿವೆ. ಸಮಾಜಮುಖಿ ಯಾಗಿ ಕೆಲಸ ಮಾಡಿ ಎಂದು ಸಲಹೆ ನೀಡಿದರು.

ವಕೀಲರು ಸರಿಯಾಗಿ ಓದದೇ ಕಕ್ಷಿಗಾರರಿಗೆ ಅನ್ಯಾಯ ಮಾಡಿದ ಘಟನೆಗಳನ್ನು ಕಂಡಿದ್ದೇನೆ. ಆದರೆ ಈ ರೀತಿ ಆಗಬಾರದು ಎಂದರು.

ಪ್ರಾಂಶುಪಾಲರಾದ ಡಾ.ಎಸ್. ರಮೇಶ್, ಸಂಸ್ಥೆಯ ಅಧ್ಯಕ್ಷರಾದ ಎಸ್.ಷಫೀ ಅಹಮದ್, ಉಪ ಪ್ರಾಂಶುಪಾಲರಾದ ಓಬಯ್ಯ ಇದ್ದರು.

ಕವನ ಓದಿ: ಹೃದಯ

0
ವಿಶ್ವ ಹೃದಯ ದಿನವನ್ನಾಗಿ ಸೆಪ್ಟೆಂಬರ್ 29 ಆಚರಿಸಲಾಗುತ್ತದೆ. ಈ ಸಂಧರ್ಭದಲ್ಲಿ ಕೂಬ್ಬು ,ನಿಯಮಿತ ವ್ಯಾಯಾಮ, ಕೋವಿಡ್ ನಂತರ ತಪಾಸಣೆ, ಇಸಿಜಿ ಯಲ್ಲಿ ಕಂಡು ಬರುವ ಬದಲಾವಣೆ, ಗ್ಯಾಸ್ಟ್ರಿಕ್ ಎಂದು ಹೃದಯ ಸಂಬಂಧಿ ಕಾಯಿಲೆ ಯನ್ನು ನಿರ್ಲಕ್ಷ ಮಾಡಬಾರದು.. ಇತ್ಯಾದಿಗಳನ್ನು ಕವನದ ಧಾಟಿಗೆ ಸಮೀಕರಿಸಿ ದ್ದಾರೆ ಡಾll ರಜನಿ

ಹೃದಯ
*******

ಹೃದಯದಲಿ
ನದಿ ಓಡಿದರೆ ಆಗದು❤️

ರಕ್ತ ಸಲೀಸಾಗಿ
ಸಾಗಬೇಕು😊

ನಲ್ಲನ ನೆನೆದಾಗ
ಬಡಿತ 150 ಆದರೇನು🤗

ಬೆಟ್ಟ ಹತ್ತಿದಾಗ
ಬಡಿದು ಸುಸ್ತಾಗ ಬಾರದು😩

ಎಷ್ಟೇ ಇದ್ದರೂ ಕೊಬ್ಬು
ಹೃದಯದ ಧಮನಿಯಲ್ಲಿ ಕಿಟ್ಟ
ಕಟ್ಟಬಾರದು😉

ನಲ್ಲೆ ಸಿಕ್ಕಾಗ ಎದೆ ಬಡಿತ ತಪ್ಪಬಹುದು
ಅದಾಗಿ ಅದೇ ತಪ್ಪಬಾರದು🥰

I love you too ಅಂದಾಗ ಉಬ್ಬು
ಆದರೆ ಇಸಿಜಿ ಯಲ್ಲಿ ST wave ಉಬ್ಬಬಾರದು😐

ಏದುಸಿರು….😁
ಮೆಟ್ಟಿಲು ಹತ್ತಿದಾಗ ಬರಬಾರದು😐

ಸಿಹಿಮುತ್ತು ಉಂಡಾಗಲೂ
ಸಕ್ಕರೆ ಹೆಚ್ಚಾಗಬಾರದು😘

ರಾಧೆ ಸಿಕ್ಕಾಗಲೂ
BP ಸಮವಾಗಿರಬೇಕು😊

ದಿನಾ ಓಡಬೇಕು
ಓಡಿ ಓಡಿ ಹೃದಯ💜💟

ಪ್ರೀತಿಯ ಬೆವರ ಹನಿ ಬೇಕು
ಸುಮ್ಮನೆ ಬೆವೆತು ಹಣ್ಣಾಗ ಬಾರದು😏

ಗ್ಯಾಸ್ಟ್ರಿಕ್ ಎಂದು
ಹೃದಯವನ್ನು ಮುಚ್ಚಿಡಬಾರದು😦

ಕೋವಿಡ್ ನಂತರ ಹೃದಯ
ಚೆಕ್ ಅಪ್ ಬೇಕು🙏

ನಲ್ಲೆಗಾಗಿ ಸೋಲು
ಬೆಟ್ಟ ಹತ್ತಲು ಸೋಲ ಬೇಡ ಓ ಹೃದಯವೇ😍

ಹೃದಯದಲಿ ಇದೇನಿದು
ನದಿಯೊಂದು ಓಡಿದೆ💝💝

ಡಾII ರಜನಿ

ಗುಬ್ಬಿ ಪಟ್ಟಣ‌ ಪಂಚಾಯ್ತಿ ಅಧ್ಯಕ್ಷರಿಗೆ ಜಾಮೀನು ನಿರಾಕರಣೆ

0

Publicstory


Tumakuru: ಗುಬ್ಬಿ ಭೂ ಹಗರಣದಲ್ಲಿ ಆರೋಪಿಯಾಗಿರುವ ಗುಬ್ಬಿ ಪಟ್ಟಣ ಪಂಚಾಯ್ತಿ ಅಧ್ಯಕ್ಷ ಜಿ.ಎನ್.ಅಣ್ಣಪ್ಪಸ್ವಾಮಿ ಅವರಿಗೆ ತುಮಕೂರಿನ ಒಂದನೇ ಹೆಚ್ಚುವರಿ ಜಿಲ್ಲಾ ಸೆಷನ್ಸ್ ನ್ಯಾಯಾಲಯ ನಿರೀಕ್ಷಣಾ ಜಾಮೀನು ನಿರಾಕರಿಸಿದೆ.

ಭೂ ಹಗರಣದಲ್ಲಿ ಅಣ್ಣಪ್ಪ ಸ್ವಾಮಿ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಪೊಲೀಸರು ಬಂಧಿಸುವ ಸಾಧ್ಯತೆ ಇರುವ ಕಾರಣ ಅಣ್ಣಪ್ಪಸ್ವಾಮಿ ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು.

ನಿರೀಕ್ಷಣಾ ಜಾಮೀನು ನೀಡಲು ತಕರಾರು ಸಲ್ಲಿಸಿದ ಸರ್ಕಾರಿ ವಕೀಲರು, ಅರೋಪಿಗೆ ಜಾಮೀನು ನೀಡಿದರೆ ಸಾಕ್ಷ್ಯ ನಾಶಪಡಿಸಬಹುದು ಎಂದು ಬಲವಾಗಿ ವಾದಿಸಿದರು.

ಆರೋಪಿಯು ತನ್ನ ತಾಯಿ ಗೌರಮ್ಮ‌ ಹೆಸರಿಗೆ‌ ನಾಲ್ಕು ಎಕರೆ, ತಂಗಿ ಶಾಂತಾ ಹೆಸರಿಗೆ 4 ಎಕರೆ ಭೂಮಿ ಪಡೆದುಕೊಂಡಿದ್ದಾರೆ. ಈ ದಾಖಲೆಗಳನ್ನು ತಿದ್ದಲು ಪ್ರಕರಣದ ಪ್ರಮುಖ ಆರೋಪಿಗೆ ಫೋನ್ ಪೇ ಮೂಲಕ ಹಣ ಪಾವತಿಸಿದ್ದಾರೆ ಎಂಬ ಅಂಶವನ್ನು ನ್ಯಾಯಾಲಯ ಗಂಭೀರವಾಗಿ ಪರಿಗಣಿಸಿತು.

ಸರ್ಕಾರಿ ಭೂಮಿಯನ್ನು ಅಕ್ರಮವಾಗಿ ಪಡೆಯುವುದು ಹೀನ ಕೃತ್ಯವಾಗಿದೆ. ಆರೋಪಿಗೆ ರಾಜಕೀಯ ಶಕ್ತಿ ಇರುವ ಕಾರಣ ಸಾಕ್ಷ್ಯ ಪಡಿಸುವ ಸಾಧ್ಯತೆ ಇದೆ ಎಂಬುದನ್ನು ಒತ್ತಿಹೇಳಿದ ನ್ಯಾಯಾಧೀಶರಾದ ಡಿ.ಟಿ.ಪಾಂಡುರಂಗಸ್ವಾಮಿ ಅವರು ಜಾಮೀನು ನಿರಾಕರಿಸಿದರು.

ತಿಪಟೂರು: ನಗರದ ಟ್ಯಾಗೋರ್ ವಿದ್ಯಾ ಸಂಸ್ಥೆಯ ಸಭಾಂಗಣದಲ್ಲಿ ತುಮಕೂರು ಜಿಲ್ಲೆಯ ಸಿ.ಐ.ಟಿ.ಯು. 7ನೇ ಜಿಲ್ಲಾ ಸಮ್ಮೇಳನ ಉದ್ಘಾಟನೆ ನೆರವೇರಿತು.

ಪ್ರಾರಂಭದಲ್ಲಿ ಎಸ್ ಡಿ ಪಾರ್ವತಮ್ಮ ಮತ್ತು ಪುಷ್ಪಾ ಸಂಗಡಿಗರು ಕ್ರಾಂತಿ ಗೀತೆ ಹಾಡಿದರು.

ಸಮ್ಮೇಳನ ಉದ್ಘಾಟನೆ ಮಾಡಿದ ಸಿ.ಐ.ಟಿ.ಯು. ರಾಜ್ಯ ಪ್ರಧಾನ ಕಾರ್ಯದರ್ಶಿ ಕಾಂ. ಮೀನಾಕ್ಷಿ ಸುಂದರಂ ಮಾತನಾಡಿ, ಜನರು ಅನುಭವಿಸುತ್ತಿರುವ ಸಮಸ್ಯೆಗಳು ಮುನ್ನೆಲೆಗೆ ಬಂದು ಪರಿ‌ಹಾರ ಕಾಣದಂತೆ ದೃಶ್ಯ ಮಾದ್ಯಮಗಳ ಮೂಲಕ ತೆಡೆಯಲಾಗುತ್ತಿದೆ. ಇಂದು ಸರ್ಕಾರ ನೀಡಿದ ಪತ್ರಿಕೆ ಜಾಹೀರಾತನ್ನು ಪ್ರಶ್ನಿಸಿದರು.

ದೇಶ ರಕ್ಷಿಸುವ ಸೈನ್ಯದ ನೇಮಕಾತಿಯನ್ನೇ ಗುತ್ತಿಗೆ ಆಧಾರದಲ್ಲಿ (ಅಗ್ನಿಪತ್) ಪ್ರಾರಂಬಿಸಿರುವುದನ್ನು ನೋಡಿದರೆ ಇನ್ನು ಮುಂದೆ ಯಾವ ಕಾರ್ಖಾನೆಯಲ್ಲಿ ಖಾಯಂ ಉದ್ಯೋಗ ಸಿಗುತ್ತಾ ಎನ್ನುವ ಅನುಮಾನ ಮೂಡುತ್ತಿದೆ. ಜನತೆ ಸೂಕ್ಷ್ಮವಾಗಿ ಗಮನಿಸಬೇಕಾದ ಹಾಗೂ ಪ್ರಶ್ನಿಸಲೇಬೇಕಾದ ಸಂದರ್ಭ ಬಂದಿದೆ ಎಂದರು.

ಸ್ವಾಗತ ಸಮಿತಿ ಪೋಷಕರು ಮತ್ತು ಜನಸ್ಪಂದನ ಟ್ರಸ್ಟ್ ಅಧ್ಯಕ್ಷ ಸಿ.ಬಿ. ಶೆಶಿಧರ್ ಮಾತನಾಡಿ ಸಂಘಟನೆಗಳ ಹೋರಾಟ ಆರ್ಥಿಕ ಬೇಡಿಕೆಗಳಿಗೆ ಸೀಮಿತಗೊಳಿಸದೆ ಪ್ರತಿ ಅನ್ಯಾಯದ ವಿರುದ್ಧ ಪ್ರಬಲ ಹಾಗೂ ಸಾರ್ವಜನಿಕ ಗಮನ ಸೆಳೆಯುವಂತೆ ಚಳುವಳಿ ಕಟ್ಟುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ ಎಂದರು.

ಸಮ್ಮೇಳನ ಸ್ವಾಗತ ಸಮಿತಿ ಅಧ್ಯಕ್ಷ ಡಾ. ಅನಿಲ್ ಹಿಂದಿನ ಚಳುವಳಿಗಾರರು ರೈತ ಕಾರ್ಮಿಕರ ಸಖ್ಯತೆಗೆ ಆದ್ಯತೆ ನೀಡುತ್ತಿದ್ದರು. ಇಂದು ಮುಖಂಡರಿಗೆ ಐಕ್ಯತೆ ಮತ್ತು ತಿಳುವಳಿಕೆ ಮಂತ್ರವಾಗಬೇಕೆಂದರು.

ಜಿಲ್ಲಾ ಕಾರ್ಯದರ್ಶಿ ಜಿ ಕಮಲ ಮಾತನಾಡಿ ಸಮ್ಮೇಳನ ಬೆಲೆ ಏರಿಕೆ, ರೈತ ಕಾರ್ಮಿಕರ ವಿರೋಧಿ ಕಾನೂನುಗಳು, ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತೆ, ಉದ್ಯೋಗ ಸೃಷ್ಟಿ, ತುಮಕೂರು ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಆಗ್ರಹಿಸಿ, ಕೋಮು ಸಾಮರಸ್ಯಕ್ಕೆ ಒತ್ತಾಯಿಸಿ ನಡೆಯುತ್ತಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಸೈಯದ್ ಮುಜೀಬ್ ದೇಶದಲ್ಲಿ ರೈತ ಕಾರ್ಮಿಕರ ಏಕತೆಗೆ ಕರೆ ನೀಡಿದೆ.

ದುಡಿಯುವ ವರ್ಗದ ರೈತರು, ಕಾರ್ಮಿಕರು ಸಂಕಷ್ಟಕ್ಕೆ ಸ್ಪಂದಿಸುವ ಬದಲು ಮಕ್ಕಳು ಮಹಿಳೆ ದಲಿತರ ಮೇಲೆ ಲೈಂಗಿಕ, ಜಾತಿ ದೌರ್ಜನ್ಯ ತಡೆಯುವಲ್ಲಿ ಕೇಂದ್ರ ರಾಜ್ಯ ಸರ್ಕಾರಗಳು ವಿಫಲವಾಗಿವೆ. ಅಮಾನುಷವಾಗಿ ಮಹಿಳೆಯ ಕುಟುಂಬದವರ ಎದುರೇ ಅತ್ಯಾಚಾರ ಮಾಡಿದ 11ಜನರನ್ನು ಸನ್ನಡತೆಯ ಮೇಲೆ ಜೀವಾವಧಿ ಶಿಕ್ಷೆಯಿಂದ ಬಿಡುಗಡೆ ಮಾಡಿರುವುದು ಅತ್ಯಂತ ಖಂಡನೀಯವೆಂದರು.

ವೇದಿಕೆಯಲ್ಲಿ ಪದಾಧಿಕಾರಿಗಳಾದ ಎಂ.ಲೋಕೇಶ್, ಬಿ.ಉಮೇಶ್, ಎಸ್.ಡಿ.ಪಾರ್ವತಮ್ಮ, ಯು. ಷಣ್ಮುಖಪ್ಪ, ಅಬ್ದುಲ್ ಮುನಾಫ್, ಅನುಸೂಯ ಗುಬ್ಬಿ, ಪ್ರಗತಿಪರ ಸಂಘಟನೆಗಳ ಅಲ್ಲಾಬಕಷ್ ಉಪಸ್ಥಿತರಿದ್ದರು.

ತಿಪಟೂರು ತಾಲ್ಲೂಕಿನ ಮುಖಂಡರಾದ ಬಿ.ಎಸ್.ಅನು ಸೂಯ ಸ್ವಾಗತಿಸಿ ಕಾರ್ಯದರ್ಶಿ ಎನ್.ಕೆ.ಸುಬ್ರಮಣ್ಯ ವಂದನಾ ರ್ಪಣೆ ಮಾಡಿದರು.

ಸಂಘಟನೆಯ ಮುಖಂಡರಾಗಿದ್ದ ಮಂಜುಳಾ ನಗರ, ನಿಸ್ಸಾರ್ ಅಹಮದ್ ಸಭಾಂಗಣ, ಕೋದಂಡರಾಮು ವೇದಿಕೆ, ಬಿ.ಡಿ. ರಾಮಯ್ಯನವರ ದ್ವಾರ ಎಂದು ಸ್ಥಾಪಿಸಿ ಸಮ್ಮೇಳನ ನಡೆದಿದೆ.

ಸುಜೀವನ: ಗುರುದತ್ ಹೇಳಿದ್ದೇನು?

ಗುಬ್ಬಿ : ಸಂಘಗಳು ನಿರಂತರವಾಗಿ ಉಳಿತಾಯದಲ್ಲಿ ತೊಡಗಿಕೊಳ್ಳ ಬೇಕು. ಬ್ಯಾಂಕಿನಲ್ಲಿ ಪಡೆದ ಸಾಲ ವನ್ನು ಸಮಯಕ್ಕೆ ಸರಿಯಾಗಿ ಮರುಪಾವತಿ ಮಾಡಿದಾಗ ಮಾತ್ರ ಸಂಘ ಮತ್ತು ಬ್ಯಾಂಕಿನ ಸಂಬಂಧ ಉತ್ತಮವಾಗಿರುತ್ತದೆ ಎಂದು ಐಡಿಎಫ್ ಸುಜೀವನ ಒಕ್ಕೂಟ ಅಧ್ಯಕ್ಷ ಕೆ.ಎನ್.ಗುರುದತ್ ತಿಳಿಸಿದರು.

ಪಟ್ಟಣದ ಎಸ್ಎಲ್ಎನ್ ರೈಸ್ ಮಿಲ್ ಆವರಣದಲ್ಲಿ ಐಡಿಎಫ್ ಸುಜೀವನ ಒಕ್ಕೂಟದ ವತಿಯಿಂದ ಏರ್ಪಡಿಸಿದ್ದ ವಾರ್ಷಿಕ ಮಹಾಸಭೆ ಯನ್ನು ಉದ್ಘಾಟಿಸಿ ಮಾತನಾಡಿದ ಅವರು, ರೈತರು ಮೌಲ್ಯವರ್ಧನೆ ಮಾಡಿಕೊಳ್ಳಲು ತರಬೇತಿಯನ್ನು ಒಕ್ಕೂಟದಿಂದ ನೀಡಲಾಗುತ್ತದೆ. ಆದ್ದರಿಂದ ಮಹಿಳಾ ಸದಸ್ಯರು ಮತ್ತು ಪುರಷರ ಸಂಘಗಳು ನಮ್ಮ ಸಿಬ್ಬಂದಿಗಳನ್ನು ಸಂಪರ್ಕಿಸಿ ಮಾಹಿತಿ ಪಡೆದುಕೊಳ್ಳಬೇಕು ಎಂದು ಹೇಳಿದರು.

ವಿದ್ಯಾರ್ಥಿ ಜೀವನ ಅಮೂಲ್ಯ, ಪ್ರತಿಯೊಬ್ಬರಲ್ಲೂ ವಿವಿಧ ರೀತಿಯ ಪ್ರತಿಭೆಗಳಿವೆ. ಅವುಗಳನ್ನು ಅವಕಾಶ ಸಿಕ್ಕಗ ಬಳಸಿಕೊಳ್ಳಬೇಕು ನಿಮ್ಮ ಶ್ರಮದಿಂದಲೇ ನೀವು ಅತ್ಯಂತ ಹೆಚ್ಚು ಅಂಕ ಗಳಿಸಿದ್ದರೂ ಸಹ ಈ ಸಾಧನೆಯ ಹಿಂದೆ ಪಾಲಕರು ಹಾಗೂ ಶಿಕ್ಷಕರ ಮಾರ್ಗದರ್ಶನವು ಮೂಲ ಕಾರಣವಾಗಿದೆ. ಮುಂದಿನ ಭವಿಷ್ಯ ಉಜ್ವಲವಾಗಲಿ ಎಂದರು.

ಇದೇ ಸಂದರ್ಭದಲ್ಲಿ ತಾಲ್ಲೂಕಿ ನಲ್ಲಿ ಉತ್ತಮವಾಗಿ ಸಂಘವನ್ನು ನಡೆಸಿಕೊಂಡ ಸಂಘಗಳಿಗೆ ಉತ್ತಮ ಸಂಘ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.

ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿದ ಸದಸ್ಯರ ೨೩ ವಿದ್ಯಾರ್ಥಿಗಳಿಗೆ ತಲಾ ೫ ಸಾವಿರದಂತೆ ಪ್ರೋತ್ಸಹಧನ ನೀಡಲಾಯಿತು ಎಂದರು.

ಮೂ.ಲ.ಕೆಂಪೇಗೌಡ ಮಾತನಾಡಿ, ರೈತರು ಸುಸ್ಥಿರ ಕೃಷಿ ಮಾಡಿ ಕೊಂಡು ಸುಸ್ಥಿರ ಜೀವನ ಸಾಗಿಸ ಬೇಕು. ತಾಲ್ಲೂಕಿನಲ್ಲಿ ಇರುವ ರೈತ ಉತ್ಪಾದಕರ ಕಂಪನಿಗಳಲ್ಲಿ ವ್ಯವಹಾರ ಮಾಡಿ ಕಂಪನಿಗಳನ್ನು ಲಾಭದಾಯಕವಾಗಿ ಮಾಡುವಲ್ಲಿ ಷೇರುದಾರರ ಕೊಡುಗೆ ಮಹತ್ವ ದ್ದಾಗಿರುತ್ತದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಐಡಿಎಫ್ ಸುಜೀವನ ಒಕ್ಕೂಟ ಉಪಾಧ್ಯಕ್ಷರು ಹರೀಶ್ ವೈ.ಆರ್. ದತ್ತಿಮಂಡಳಿ ಸದಸ್ಯರಾದ ಪುಟ್ಟ ಸ್ವಾಮಣ್ಣ, ರೇವಣ್ಣ, ಶಿವಶಂಕರ್, ಸೌಭಾಗ್ಯ, ಕವಿತಾ, ಮಾರುಕಟ್ಟೆ ವಿಭಾಗದ ಮುಖ್ಯಸ್ಥ ಕರುಣಾಕರ್, ಸಿಇಒ ಗುರುಪ್ರಸಾದ್, ಚನ್ನಶೆಟ್ಟಿ ಹಳ್ಳಿ ಯತೀಶ್ಕುಮಾರ್, ಬಾಬು, ಶಿವನಾಗಪ್ಪ, ಗಾಯಿತ್ರಿ, ಗಂಗೇ ಗೌಡ, ರಂಗಮ್ಮ, ರಂಗನಾಥ, ಕೆಂಪೇಗೌಡ, ಕೆನರಾ ಬ್ಯಾಂಕ್ ವ್ಯವಸ್ಥಾಪಕ ಎಂ.ಆರ್. ನಾಗಲಿಂಗಮೂರ್ತಿ, ಕೃಷಿ ವಿಸ್ತಾರ ಣಾಧಿಕಾರಿ ಸಿ.ಜಯಶ್ರೀ, ರಾಕೇಶ್ ಮತ್ತಿತರರು ಇದ್ದರು.

ಸಮ ಸಮಾಜದ ನಿರ್ಮಾತೃ : ಬಸವಣ್ಣ


ಶೇಷಾದ್ರಿಪುರಂ ಪದವಿ ಪೂರ್ವ ಕಾಲೇಜಿನ ಬಸವ ಅಧ್ಯಯನ ಕೇಂದ್ರ ವತಿಯಿಂದ ತುಮಕೂರು ಜಿಲ್ಲಾ ಲೇಖಕಿಯರ ಸಂಘದ ಸಹಭಾಗಿತ್ವದಲ್ಲಿ ವಚನ ನಿರ್ವಚನ ಹಾಗೂ ವಚನ ಗಾಯನ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು .

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ತುಮಕೂರು ಜಿಲ್ಲಾ ಲೇಖಕಿಯರ ಸಂಘದ ಅಧ್ಯಕ್ಷರಾದ ಮಲ್ಲಿಕಾ ಬಸವರಾಜು ಅವರು ಬಸವಣ್ಣನವರ ಒಂದೆರಡು ವಚನಗಳನ್ನಾದರೂ ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು.

ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಸಮಸಮಾಜದ ಕಲ್ಪನೆ ಬರುವ ಮೊದಲೇ 12ನೇ ಶತಮಾನದಲ್ಲಿಯೇ ಶರಣರು ಸಮತೆಯ ಬಗ್ಗೆ , ವೃತ್ತಿ ಘನತೆಯ ಬಗ್ಗೆ ,ಲಿಂಗ ತಾರತಮ್ಯದ ವಿರುದ್ದ ಮಾತಾನಾಡಿದ್ದರು.

ಶರಣಚಳುವಳಿಗೆ ವಚನಗಳೇ ಸಂವಿಧಾನ ,ಅನುಭವ ಮಂಟಪವೇ ಸಂಸತ್ತು.
ಸಮಾಜದ ಎಲ್ಲಾ ವೃತ್ತಿಗಳಲ್ಲಿ ತೊಡಗಿಸಿಕೊಂಡವರಿಗೂ ಅನುಭವ ಮಂಟಪಕ್ಕೆ ಸೇರಲು ಅವಕಾಶವಿತ್ತು .
ಮಕ್ಕಳು ವಚನಗಳಲ್ಲಿ ಹೇಳಿರುವ ಒಳ್ಳೆಯ ಗುಣಗಳನ್ನು ಮೈಗೂಡಿಸಿಕೊಂಡು ಉತ್ತಮ ಪ್ರಜೆಗಳಾಗಬೇಕು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಬಸವರಾಜು ಬಿ ವಿ ಅವರು
ತುಮಕೂರಿನ ನಾವುಗಳೇ ಧನ್ಯರು ಬಸವತತ್ವಗಳನ್ನು ನಡೆಸಿಕೊಂಡು ಬಂದಿರುವ ತ್ರಿವಿಧ ದಾಸೋಹಿಗಳಾದ ಶ್ರೀ ಶ್ರೀ ಶಿವಕುಮಾರ ಸ್ವಾಮಿಗಳ ತವರೂರು. ಶ್ರೀ ಶ್ರೀ ಶಿವಕುಮಾರ ಸ್ವಾಮೀಜಿಯವರು ಲಕ್ಷಾಂತರ ಕುಟುಂಬಕ್ಕೆ ಬೆಳಕಾದವರು ಎಂದರು.

ಕಾರ್ಯಕ್ರಮದಲ್ಲಿ ವಚನ ಗಾಯನವನ್ನು ತುಮಕೂರು ಜಿಲ್ಲಾ ಲೇಖಕಿಯರ ಸಂಘದ ಲೇಖಕಿರ ಸಂಘದ ಸುಮಾ ಪ್ರಸನ್ನ ಮತ್ತು ರಾಗಿಣಿ ತಂಡದವರು ನಡೆಸಿಕೊಟ್ಟರು. ಕಾಲೇಜಿನ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಒತ್ತುವರಿ ತೆರವು ಮಾಡಲು ಜಿಲ್ಲಾಡಳಿತ ಮೀನಾಮೇಷ

0

Publicstory

ವರದಿ, ದೇವರಾಜ್ ಗುಬ್ಬಿ

ಒತ್ತುರಿಯಾದ 68 ಕೆರೆಗಳು | ಪರಿಣಾಮ ಎದುರಿಸಿದ ಜಲಾವೃತ ಹಳ್ಳಿಗಳು

ಗುಬ್ಬಿ: ಕಾನೂನಾತ್ಮಕ ಕ್ರಮಗಳನ್ನು ಕಾಯದ ಮಳೆರಾಯ ಅಕ್ರಮವಾಗಿ ಒತ್ತುವರಿಯಾದ ಕೆರೆ ಕಟ್ಟೆಗಳನ್ನು ಸಕ್ರಮ ಮಾಡುವಲ್ಲಿ ಯಶಸ್ವಿಯಾಗಿ ತನ್ನ ಗಡಿ ಸೃಷ್ಟಿಸಿದರೂ ಕೂಡ ಜಿಲ್ಲಾಡಳಿತ ಮಾತ್ರ ಒತ್ತುವರಿ ತೆರವು ಮಾಡಲು ಮೀನಮೇಷ ಮಾಡಿರುವುದು ಸುರಿದ ಮಳೆಯಿಂದ ಬೆಳಕಿಗೆ ಬಂದಿದೆ.

ಗುಬ್ಬಿ ತಾಲೂಕಿನ ಒಟ್ಟು 203 ಕೆರೆಗಳ ಪೈಕಿ 62 ಕೆರೆಗಳ ಸರ್ವೆ ಕಾರ್ಯ ನಡೆದು 68 ಕೆರೆಗಳು ಒತ್ತುವರಿ ಆಗಿರುವ ಬಗ್ಗೆ ಸರ್ವೇ ಇಲಾಖೆ ದೃಡಪಡಿಸಿದೆ. ಉಳಿದ 28 ಕೆರೆಗಳು ಯಾವುದೇ ಒತ್ತುವರಿ ಯಾಗಿಲ್ಲ ಎಂಬ ಮಾಹಿತಿ ಇದ್ದು, ಉಳಿದ ಕೆರೆಗಳ ಸರ್ವೇ ಕಾರ್ಯವನ್ನು ಕೂಡಲೇ ಮಳೆಗಾಲದಲ್ಲಿ ಅಧಿಕಾರಿಗಳು ಗುರುತಿಸುವುದು ಅಗತ್ಯವಾಗಿದೆ.

ಎಡೆಬಿಡದೆ ಸುರಿಯುತ್ತಿರುವ ಮಳೆ ನೀರು ತನ್ನ ಮೂಲ ಸ್ಥಾನ ಹುಡುಕಿ ಹೊರಟ ಪರಿಣಾಮ ಇಂದು ಎಲ್ಲಡೆಯೂ ಕೆರೆ ಕಟ್ಟೆಗಳು ತುಂಬಿವೆ. ಇದಕ್ಕೆ ನಿದರ್ಶನವೆಂದರೆ ಗುಬ್ಬಿ ಪಟ್ಟಣದ ಮಾರನಕಟ್ಟೆ ಸರ್ವೇ ನ.17 ರ ಸುಮಾರು 46.01 ಎಕರೆ ವಿಸ್ತೀರ್ಣದ ಸಂಪೂರ್ಣ ಕೆರೆ ಜಾಗ ಒತ್ತುವರಿ ಆಗಿದೆ ಎಂಬುದನ್ನು ಗಮನಿಸಬಹುದು.

ಜಿಲ್ಲೆಯಾದ್ಯಂತ ನೀರು ಶೇಕರಣೆಯಾದ ಎಲ್ಲಾ ಕೆರೆ ಕಟ್ಟೆಗಳ ವಿಸ್ತೀರ್ಣವನ್ನು ಗಮನಿಸಿದರೆ, ಈ ಹಿಂದೆ ಕೆರೆ ಹೇಗಿತ್ತು. ಈಗ ಏನಾಗಿದೆ ಎಂಬುದನ್ನು ತಿಳಿಯಬಹುದು. ಅಂತರ್ಜಲ ವೃದ್ಧಿಗೆ ಕೆರೆ ಕಟ್ಟೆಗಳ ಅವಶ್ಯಕತೆಗಳ ಬಗ್ಗೆ ಸುಪ್ರೀಂ ಕೋರ್ಟ್ ತಿಳಿಸಿ ಕೆರೆಗಳ ಒತ್ತುವರಿ ತೆರವಿಗೆ ಆದೇಶಿಸಿದೆ. ಆದರೆ ಕೆರೆ ಕಟ್ಟೆ ಒತ್ತುವರಿ ಕಾರ್ಯವನ್ನು ಅನುಷ್ಟಾನಕ್ಕೆ ತರುವಲ್ಲಿ ಸರ್ಕಾರ ವಿಳಂಬ ಮಾಡಿರುವುದನ್ನು ಸುರಿದ ಭಾರಿ ಮಳೆ ಬಯಲು ಮಾಡಿದೆ.

ಕೆರೆಗಳ ಒತ್ತುವರಿಯಿಂದಾಗಿ ಈಗಾಗಲೇ ಜಿಲ್ಲಾದ್ಯಂತ ಅನೇಕ ಹಳ್ಳಿಗಳು ಜಲವೃತಗೊಂಡಿವೆ. ಇದರಿಂದಾಗಿ ಅನೇಕ ಸಮಸ್ಯೆಗಳು ತಲೆದೋರಿದ್ದು, ಕೂಡಲೇ ಜಿಲ್ಲಾಡಳಿತ ಒತ್ತುವರಿ ತೆರವು ಕಾರ್ಯಕ್ಕೆ ಚುರುಕು ಮುಟ್ಟಿಸುವ ಕೆಲಸ ಮಾಡಿದರೆ ಮುಂದೆ ತಲೆದೋರುವ ಅನೇಕ ಸಮಸ್ಯೆಗಳಿಗೆ ಮುಕ್ತಿ ನೀಡಬಹುದು ಎಂದು ಪ್ರಜ್ಞಾವಂತ ನಾಗರೀಕರ ಒತ್ತಾಸೆಯಾಗಿದೆ.

ಸಿದ್ದಲಿಂಗೇಗೌಡ, ಸಂಸ್ಥಾಪಕ ಅಧ್ಯಕ್ಷ,
ವಿಶ್ವ ಮಾನವ ಹಕ್ಕುಗಳ ಸೇವಾ ಕೇಂದ್ರ

ಜಿಲ್ಲೆಯಲ್ಲಿ ಒಟ್ಟು 2060 ಕೆರೆಗಳನ್ನು ಗುರ್ತಿಸಿ 760 ಕೆರೆಗಳ ಒತ್ತುವರಿ ಕಾರ್ಯ ಕೈಗೊಂಡಿದ್ದಾರೆಂದು ಹೇಳಲಾಗುತ್ತಿದೆ. ಜಿಲ್ಲೆಯಾದ್ಯಂತ ಸಂಬಂಧಪಟ್ಟ ಅಧಿಕಾರಿಗಳು ಪರಿಸರ ಪೀಡಕರಾದರೇ.. ಇದಕ್ಕೆ ಸಾಥ್ ನೀಡುವ ಜನಪ್ರತಿನಿಧಿಗಳು ಪ್ರಜಾ ಪೀಡಕರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಕೂಡಲೇ ಜಿಲ್ಲಾಡಳಿತ ಮತ್ತು ಸರ್ಕಾರ ಕೆರೆ ಕಟ್ಟೆಗಳ ಒತ್ತುವರಿ ತೆರವಿಗೆ ಮುಂದಾಗಿ ಅಂತರ್ಜಲ ವೃದ್ಧಿಗೆ ಸಹಕರಿಸಬೇಕು.

___________________________________________

ಆರತಿ.ಬಿ, ತಹಶಿಲ್ದಾರ್ ಗುಬ್ಬಿ.

ಜಿಲ್ಲಾಧಿಕಾರಿಗಳ ಆದೇಶದಂತೆ ಕೆರೆಗಳ ಮಾಲೀಕತ್ವ ಪಡೆದ ಆಯಾ ಇಲಾಖೆಗಳು ಒತ್ತುವರಿ ತೆರವಿಗೆ ಜವಾಬ್ದಾರಿ ಹೊರಬೇಕಿದೆ. ಈಗಾಗಲೇ ಎಲ್ಲಾ ಇಲಾಖೆಗಳಿಗೆ ಪತ್ರದ ಮೂಲಕ ಒತ್ತುವರಿ ತೆರವಿಗೆ ತಿಳಿಸಲಾಗಿದೆ. ಆದರೆ, ಯಾವ ಇಲಾಖೆಯಿಂದಲೂ ಇಲ್ಲಿಯವರೆಗೆ ಉತ್ತರ ಬಂದಿಲ್ಲ. ಒತ್ತುವರಿ ಸಮಯದಲ್ಲಿ ವಾಣಿಜ್ಯ ಬೆಳೆಯ ಮರ ಗಿಡಗಳನ್ನು ತೆಗೆಯಲು ಅರಣ್ಯ ಇಲಾಖೆ ಅನುಮತಿ ಬೇಕಾಗಿರುವುದಿಲ್ಲ.

___________________________________________

ಎಸ್ಸಿ ಎಸ್ಟಿ ಮೀಸಲಾತಿ ಹೆಚ್ಚಿಸುವಂತೆ ಒತ್ತಾಯಿಸಿ ಮನವಿ

Publicstory

ಗುಬ್ಬಿ: ಎಸ್ಸಿ ಎಸ್ಟಿ ಮೀಸಲಾತಿ ಹೆಚ್ಚಳಕ್ಕೆ ಆಗ್ರಹಿಸಿ ಮತ್ತು ಸದನದಲ್ಲಿ ಚರ್ಚಿಸಲು ಗುಬ್ಬಿ ಶಾಸಕ.ಎಸ್ ಆರ್ ಶ್ರೀನಿವಾಸ್ ಅವರಿಗೆ ತಾಲ್ಲೂಕು ವಾಲ್ಮೀಕಿ ನಾಯಕ ಸಮಾಜದಿಂದ ಮನವಿ ಸಲ್ಲಿಸಲಾಯಿತು.

ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಮೀಸಲಾತಿ ಹೆಚ್ಚಳಕ್ಕೆ ಆಗ್ರಹಿಸಿದ ಹಿನ್ನಲೆ ನಿವೃತ್ತ ನ್ಯಾಯಾಧೀಶ ನಾಗ ಮೋಹನದಾಸ್ ವರದಿ ಸಲ್ಲಿಸಿದ್ದು ಅದನ್ನು ಯಥಾವತ್ತಾಗಿ ಜಾರಿಗೊಳಿಸಲು ಸರ್ಕಾರ ಮೀನಾಮೇಷ ಎಣಿಸಿದೆ. ಈ ಹಿನ್ನಲೆ  ಮೀಸಲಾತಿ ಹೆಚ್ಚಳಕ್ಕೆ ಆಗ್ರಹಿಸಿ ಶ್ರೀ ಪ್ರಸನ್ನಾನಂದ ಸ್ವಾಮೀಜಿ ನಡೆಸಿರುವ ಅಹೋರಾತ್ರಿ ಧರಣಿ ನಡೆಸಿದ್ದಾರೆ. ಅವರ ಬೆಂಬಲಕ್ಕೆ ನಿಂತು ನಮ್ಮಗಳ ಮೀಸಲಾತಿ ಹೆಚ್ಚಳ ಬಗ್ಗೆ ಸದನದಲ್ಲಿ ಚರ್ಚಿಸಿ ನ್ಯಾಯ ಕೊಡಿಸಬೇಕು ಎಂದು ತಿಳಿಸಿದರು.

ತಾಲ್ಲೂಕಿನ ಮಣ್ಮಮ್ಮದೇವಿ ದೇವಾಲಯದ ಬಳಿ ಶಾಸಕರನ್ನು ಭೇಟಿ  ಮಾಡಿದ ವಾಲ್ಮೀಕಿ ಸಮಾಜದ ಬಂಧುಗಳು, ಜನಸಂಖ್ಯಾನುಗುಣವಾಗಿ ಮೀಸಲಾತಿ ಹೆಚ್ಚಳ ಮಾಡಿ ದಲಿತ ಸಮುದಾಯಕ್ಕೆ ಬದುಕು ಕಟ್ಟಿಕೊಡಬೇಕಾದ ಸರ್ಕಾರ ಸಲ್ಲದ ಕಾರಣ ಹೇಳುತ್ತಾ ಮೀಸಲಾತಿ ಹೆಚ್ಚಳ ಮಾಡಲು ವಿಳಂಬ ಅನುಸರಿಸುತ್ತಿದೆ ಈ ಬಗ್ಗೆ ನಮ್ಮಗಳ ಪರ ಚರ್ಚಿಸಬೇಕು ಎಂದು ಒತ್ತಾಯಿಸಿದರು.

ನಾಗಮೋಹನ ದಾಸ್ ಅವರ ವರದಿ ಪ್ರಕಾರ ಮೀಸಲಾತಿ ಪರಿಶಿಷ್ಟ ಜಾತಿಗೆ ಶೇಕಡಾ15 ರಿಂದ 17 ಕ್ಕೆ ಹಾಗೂ  ಪರಿಶಿಷ್ಟ ಪಂಗಡಕ್ಕೆ ಶೇಕಡಾ 03 ರಿಂದ 07 ಕ್ಕೆ ಏರಿಕೆ ಮಾಡಬೇಕು. ಈ ಬಗ್ಗೆ ರಾಜೇನಹಳ್ಳಿ ಶ್ರೀ ಪ್ರಸನ್ನಾನಂದ ಸ್ವಾಮೀಜಿ ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ಅಹೋರಾತ್ರಿ ಧರಣಿ ನಡೆಸಿದ್ದಾರೆ. ಸರ್ಕಾರ ಈ ಬಗ್ಗೆ ಉದಾಸೀನತೆ ತೋರುತ್ತಿದೆ. ನಮ್ಮಗಳ ಪರ ಶಾಸಕರು ಸದನದಲ್ಲಿ ದನಿಯಾಗಬೇಕು ಎಂದು ಮನವಿ ಮಾಡುತ್ತಾ, ಇಡೀ ರಾಜ್ಯದ 224 ಶಾಸಕರಿಗೂ ಮನವಿ ಸಲ್ಲಿಸಲಾಗುತ್ತಿದೆ. ಈ ನಿಟ್ಟಿನಲ್ಲಿ ಗುಬ್ಬಿ ಶಾಸಕರಿಗೂ ವಾಲ್ಮೀಕಿ ಸಮಾಜ ಪದಾಧಿಕಾರಿಗಳು ಮನವಿ ಸಲ್ಲಿಸಿದರು.

221 ದಿನಗಳ ಹೋರಾಟದಲ್ಲಿ ತಾಲ್ಲೂಕು ವಾಲ್ಮೀಕಿ ನಾಯಕ ಸಮಾಜದ ಅಧ್ಯಕ್ಷ ಕೆ.ಆರ್.ಗುರುಸ್ವಾಮಿ, ಪದಾಧಿಕಾರಿಗಳಾದ ಹೇರೂರು ನಾಗಣ್ಣ, ಎಚ್.ಡಿ.ಯಲ್ಲಪ್ಪ, ರಾಮಚಂದ್ರಪ್ಪ, ಕೃಷ್ಣಮೂರ್ತಿ, ರಂಗನಾಥ್, ಮೂರ್ತಪ್ಪ ಇತರರು ಇದ್ದರು.