ಪೊಲಿಟಿಕಲ್ಪ್ರತಿಭಟನೆ

ಎಸ್ಸಿ ಎಸ್ಟಿ ಮೀಸಲಾತಿ ಹೆಚ್ಚಿಸುವಂತೆ ಒತ್ತಾಯಿಸಿ ಮನವಿ

Publicstory

ಗುಬ್ಬಿ: ಎಸ್ಸಿ ಎಸ್ಟಿ ಮೀಸಲಾತಿ ಹೆಚ್ಚಳಕ್ಕೆ ಆಗ್ರಹಿಸಿ ಮತ್ತು ಸದನದಲ್ಲಿ ಚರ್ಚಿಸಲು ಗುಬ್ಬಿ ಶಾಸಕ.ಎಸ್ ಆರ್ ಶ್ರೀನಿವಾಸ್ ಅವರಿಗೆ ತಾಲ್ಲೂಕು ವಾಲ್ಮೀಕಿ ನಾಯಕ ಸಮಾಜದಿಂದ ಮನವಿ ಸಲ್ಲಿಸಲಾಯಿತು.

ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಮೀಸಲಾತಿ ಹೆಚ್ಚಳಕ್ಕೆ ಆಗ್ರಹಿಸಿದ ಹಿನ್ನಲೆ ನಿವೃತ್ತ ನ್ಯಾಯಾಧೀಶ ನಾಗ ಮೋಹನದಾಸ್ ವರದಿ ಸಲ್ಲಿಸಿದ್ದು ಅದನ್ನು ಯಥಾವತ್ತಾಗಿ ಜಾರಿಗೊಳಿಸಲು ಸರ್ಕಾರ ಮೀನಾಮೇಷ ಎಣಿಸಿದೆ. ಈ ಹಿನ್ನಲೆ  ಮೀಸಲಾತಿ ಹೆಚ್ಚಳಕ್ಕೆ ಆಗ್ರಹಿಸಿ ಶ್ರೀ ಪ್ರಸನ್ನಾನಂದ ಸ್ವಾಮೀಜಿ ನಡೆಸಿರುವ ಅಹೋರಾತ್ರಿ ಧರಣಿ ನಡೆಸಿದ್ದಾರೆ. ಅವರ ಬೆಂಬಲಕ್ಕೆ ನಿಂತು ನಮ್ಮಗಳ ಮೀಸಲಾತಿ ಹೆಚ್ಚಳ ಬಗ್ಗೆ ಸದನದಲ್ಲಿ ಚರ್ಚಿಸಿ ನ್ಯಾಯ ಕೊಡಿಸಬೇಕು ಎಂದು ತಿಳಿಸಿದರು.

ತಾಲ್ಲೂಕಿನ ಮಣ್ಮಮ್ಮದೇವಿ ದೇವಾಲಯದ ಬಳಿ ಶಾಸಕರನ್ನು ಭೇಟಿ  ಮಾಡಿದ ವಾಲ್ಮೀಕಿ ಸಮಾಜದ ಬಂಧುಗಳು, ಜನಸಂಖ್ಯಾನುಗುಣವಾಗಿ ಮೀಸಲಾತಿ ಹೆಚ್ಚಳ ಮಾಡಿ ದಲಿತ ಸಮುದಾಯಕ್ಕೆ ಬದುಕು ಕಟ್ಟಿಕೊಡಬೇಕಾದ ಸರ್ಕಾರ ಸಲ್ಲದ ಕಾರಣ ಹೇಳುತ್ತಾ ಮೀಸಲಾತಿ ಹೆಚ್ಚಳ ಮಾಡಲು ವಿಳಂಬ ಅನುಸರಿಸುತ್ತಿದೆ ಈ ಬಗ್ಗೆ ನಮ್ಮಗಳ ಪರ ಚರ್ಚಿಸಬೇಕು ಎಂದು ಒತ್ತಾಯಿಸಿದರು.

ನಾಗಮೋಹನ ದಾಸ್ ಅವರ ವರದಿ ಪ್ರಕಾರ ಮೀಸಲಾತಿ ಪರಿಶಿಷ್ಟ ಜಾತಿಗೆ ಶೇಕಡಾ15 ರಿಂದ 17 ಕ್ಕೆ ಹಾಗೂ  ಪರಿಶಿಷ್ಟ ಪಂಗಡಕ್ಕೆ ಶೇಕಡಾ 03 ರಿಂದ 07 ಕ್ಕೆ ಏರಿಕೆ ಮಾಡಬೇಕು. ಈ ಬಗ್ಗೆ ರಾಜೇನಹಳ್ಳಿ ಶ್ರೀ ಪ್ರಸನ್ನಾನಂದ ಸ್ವಾಮೀಜಿ ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ಅಹೋರಾತ್ರಿ ಧರಣಿ ನಡೆಸಿದ್ದಾರೆ. ಸರ್ಕಾರ ಈ ಬಗ್ಗೆ ಉದಾಸೀನತೆ ತೋರುತ್ತಿದೆ. ನಮ್ಮಗಳ ಪರ ಶಾಸಕರು ಸದನದಲ್ಲಿ ದನಿಯಾಗಬೇಕು ಎಂದು ಮನವಿ ಮಾಡುತ್ತಾ, ಇಡೀ ರಾಜ್ಯದ 224 ಶಾಸಕರಿಗೂ ಮನವಿ ಸಲ್ಲಿಸಲಾಗುತ್ತಿದೆ. ಈ ನಿಟ್ಟಿನಲ್ಲಿ ಗುಬ್ಬಿ ಶಾಸಕರಿಗೂ ವಾಲ್ಮೀಕಿ ಸಮಾಜ ಪದಾಧಿಕಾರಿಗಳು ಮನವಿ ಸಲ್ಲಿಸಿದರು.

221 ದಿನಗಳ ಹೋರಾಟದಲ್ಲಿ ತಾಲ್ಲೂಕು ವಾಲ್ಮೀಕಿ ನಾಯಕ ಸಮಾಜದ ಅಧ್ಯಕ್ಷ ಕೆ.ಆರ್.ಗುರುಸ್ವಾಮಿ, ಪದಾಧಿಕಾರಿಗಳಾದ ಹೇರೂರು ನಾಗಣ್ಣ, ಎಚ್.ಡಿ.ಯಲ್ಲಪ್ಪ, ರಾಮಚಂದ್ರಪ್ಪ, ಕೃಷ್ಣಮೂರ್ತಿ, ರಂಗನಾಥ್, ಮೂರ್ತಪ್ಪ ಇತರರು ಇದ್ದರು.

Comment here