ತಿಪಟೂರು: ನಗರದ ಟ್ಯಾಗೋರ್ ವಿದ್ಯಾ ಸಂಸ್ಥೆಯ ಸಭಾಂಗಣದಲ್ಲಿ ತುಮಕೂರು ಜಿಲ್ಲೆಯ ಸಿ.ಐ.ಟಿ.ಯು. 7ನೇ ಜಿಲ್ಲಾ ಸಮ್ಮೇಳನ ಉದ್ಘಾಟನೆ ನೆರವೇರಿತು.
ಪ್ರಾರಂಭದಲ್ಲಿ ಎಸ್ ಡಿ ಪಾರ್ವತಮ್ಮ ಮತ್ತು ಪುಷ್ಪಾ ಸಂಗಡಿಗರು ಕ್ರಾಂತಿ ಗೀತೆ ಹಾಡಿದರು.
ಸಮ್ಮೇಳನ ಉದ್ಘಾಟನೆ ಮಾಡಿದ ಸಿ.ಐ.ಟಿ.ಯು. ರಾಜ್ಯ ಪ್ರಧಾನ ಕಾರ್ಯದರ್ಶಿ ಕಾಂ. ಮೀನಾಕ್ಷಿ ಸುಂದರಂ ಮಾತನಾಡಿ, ಜನರು ಅನುಭವಿಸುತ್ತಿರುವ ಸಮಸ್ಯೆಗಳು ಮುನ್ನೆಲೆಗೆ ಬಂದು ಪರಿಹಾರ ಕಾಣದಂತೆ ದೃಶ್ಯ ಮಾದ್ಯಮಗಳ ಮೂಲಕ ತೆಡೆಯಲಾಗುತ್ತಿದೆ. ಇಂದು ಸರ್ಕಾರ ನೀಡಿದ ಪತ್ರಿಕೆ ಜಾಹೀರಾತನ್ನು ಪ್ರಶ್ನಿಸಿದರು.
ದೇಶ ರಕ್ಷಿಸುವ ಸೈನ್ಯದ ನೇಮಕಾತಿಯನ್ನೇ ಗುತ್ತಿಗೆ ಆಧಾರದಲ್ಲಿ (ಅಗ್ನಿಪತ್) ಪ್ರಾರಂಬಿಸಿರುವುದನ್ನು ನೋಡಿದರೆ ಇನ್ನು ಮುಂದೆ ಯಾವ ಕಾರ್ಖಾನೆಯಲ್ಲಿ ಖಾಯಂ ಉದ್ಯೋಗ ಸಿಗುತ್ತಾ ಎನ್ನುವ ಅನುಮಾನ ಮೂಡುತ್ತಿದೆ. ಜನತೆ ಸೂಕ್ಷ್ಮವಾಗಿ ಗಮನಿಸಬೇಕಾದ ಹಾಗೂ ಪ್ರಶ್ನಿಸಲೇಬೇಕಾದ ಸಂದರ್ಭ ಬಂದಿದೆ ಎಂದರು.
ಸ್ವಾಗತ ಸಮಿತಿ ಪೋಷಕರು ಮತ್ತು ಜನಸ್ಪಂದನ ಟ್ರಸ್ಟ್ ಅಧ್ಯಕ್ಷ ಸಿ.ಬಿ. ಶೆಶಿಧರ್ ಮಾತನಾಡಿ ಸಂಘಟನೆಗಳ ಹೋರಾಟ ಆರ್ಥಿಕ ಬೇಡಿಕೆಗಳಿಗೆ ಸೀಮಿತಗೊಳಿಸದೆ ಪ್ರತಿ ಅನ್ಯಾಯದ ವಿರುದ್ಧ ಪ್ರಬಲ ಹಾಗೂ ಸಾರ್ವಜನಿಕ ಗಮನ ಸೆಳೆಯುವಂತೆ ಚಳುವಳಿ ಕಟ್ಟುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ ಎಂದರು.
ಸಮ್ಮೇಳನ ಸ್ವಾಗತ ಸಮಿತಿ ಅಧ್ಯಕ್ಷ ಡಾ. ಅನಿಲ್ ಹಿಂದಿನ ಚಳುವಳಿಗಾರರು ರೈತ ಕಾರ್ಮಿಕರ ಸಖ್ಯತೆಗೆ ಆದ್ಯತೆ ನೀಡುತ್ತಿದ್ದರು. ಇಂದು ಮುಖಂಡರಿಗೆ ಐಕ್ಯತೆ ಮತ್ತು ತಿಳುವಳಿಕೆ ಮಂತ್ರವಾಗಬೇಕೆಂದರು.
ಜಿಲ್ಲಾ ಕಾರ್ಯದರ್ಶಿ ಜಿ ಕಮಲ ಮಾತನಾಡಿ ಸಮ್ಮೇಳನ ಬೆಲೆ ಏರಿಕೆ, ರೈತ ಕಾರ್ಮಿಕರ ವಿರೋಧಿ ಕಾನೂನುಗಳು, ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತೆ, ಉದ್ಯೋಗ ಸೃಷ್ಟಿ, ತುಮಕೂರು ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಆಗ್ರಹಿಸಿ, ಕೋಮು ಸಾಮರಸ್ಯಕ್ಕೆ ಒತ್ತಾಯಿಸಿ ನಡೆಯುತ್ತಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಸೈಯದ್ ಮುಜೀಬ್ ದೇಶದಲ್ಲಿ ರೈತ ಕಾರ್ಮಿಕರ ಏಕತೆಗೆ ಕರೆ ನೀಡಿದೆ.
ದುಡಿಯುವ ವರ್ಗದ ರೈತರು, ಕಾರ್ಮಿಕರು ಸಂಕಷ್ಟಕ್ಕೆ ಸ್ಪಂದಿಸುವ ಬದಲು ಮಕ್ಕಳು ಮಹಿಳೆ ದಲಿತರ ಮೇಲೆ ಲೈಂಗಿಕ, ಜಾತಿ ದೌರ್ಜನ್ಯ ತಡೆಯುವಲ್ಲಿ ಕೇಂದ್ರ ರಾಜ್ಯ ಸರ್ಕಾರಗಳು ವಿಫಲವಾಗಿವೆ. ಅಮಾನುಷವಾಗಿ ಮಹಿಳೆಯ ಕುಟುಂಬದವರ ಎದುರೇ ಅತ್ಯಾಚಾರ ಮಾಡಿದ 11ಜನರನ್ನು ಸನ್ನಡತೆಯ ಮೇಲೆ ಜೀವಾವಧಿ ಶಿಕ್ಷೆಯಿಂದ ಬಿಡುಗಡೆ ಮಾಡಿರುವುದು ಅತ್ಯಂತ ಖಂಡನೀಯವೆಂದರು.
ವೇದಿಕೆಯಲ್ಲಿ ಪದಾಧಿಕಾರಿಗಳಾದ ಎಂ.ಲೋಕೇಶ್, ಬಿ.ಉಮೇಶ್, ಎಸ್.ಡಿ.ಪಾರ್ವತಮ್ಮ, ಯು. ಷಣ್ಮುಖಪ್ಪ, ಅಬ್ದುಲ್ ಮುನಾಫ್, ಅನುಸೂಯ ಗುಬ್ಬಿ, ಪ್ರಗತಿಪರ ಸಂಘಟನೆಗಳ ಅಲ್ಲಾಬಕಷ್ ಉಪಸ್ಥಿತರಿದ್ದರು.
ತಿಪಟೂರು ತಾಲ್ಲೂಕಿನ ಮುಖಂಡರಾದ ಬಿ.ಎಸ್.ಅನು ಸೂಯ ಸ್ವಾಗತಿಸಿ ಕಾರ್ಯದರ್ಶಿ ಎನ್.ಕೆ.ಸುಬ್ರಮಣ್ಯ ವಂದನಾ ರ್ಪಣೆ ಮಾಡಿದರು.
ಸಂಘಟನೆಯ ಮುಖಂಡರಾಗಿದ್ದ ಮಂಜುಳಾ ನಗರ, ನಿಸ್ಸಾರ್ ಅಹಮದ್ ಸಭಾಂಗಣ, ಕೋದಂಡರಾಮು ವೇದಿಕೆ, ಬಿ.ಡಿ. ರಾಮಯ್ಯನವರ ದ್ವಾರ ಎಂದು ಸ್ಥಾಪಿಸಿ ಸಮ್ಮೇಳನ ನಡೆದಿದೆ.