ಶೇಷಾದ್ರಿಪುರಂ ಪದವಿ ಪೂರ್ವ ಕಾಲೇಜಿನ ಬಸವ ಅಧ್ಯಯನ ಕೇಂದ್ರ ವತಿಯಿಂದ ತುಮಕೂರು ಜಿಲ್ಲಾ ಲೇಖಕಿಯರ ಸಂಘದ ಸಹಭಾಗಿತ್ವದಲ್ಲಿ ವಚನ ನಿರ್ವಚನ ಹಾಗೂ ವಚನ ಗಾಯನ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು .
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ತುಮಕೂರು ಜಿಲ್ಲಾ ಲೇಖಕಿಯರ ಸಂಘದ ಅಧ್ಯಕ್ಷರಾದ ಮಲ್ಲಿಕಾ ಬಸವರಾಜು ಅವರು ಬಸವಣ್ಣನವರ ಒಂದೆರಡು ವಚನಗಳನ್ನಾದರೂ ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು.
ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಸಮಸಮಾಜದ ಕಲ್ಪನೆ ಬರುವ ಮೊದಲೇ 12ನೇ ಶತಮಾನದಲ್ಲಿಯೇ ಶರಣರು ಸಮತೆಯ ಬಗ್ಗೆ , ವೃತ್ತಿ ಘನತೆಯ ಬಗ್ಗೆ ,ಲಿಂಗ ತಾರತಮ್ಯದ ವಿರುದ್ದ ಮಾತಾನಾಡಿದ್ದರು.
ಶರಣಚಳುವಳಿಗೆ ವಚನಗಳೇ ಸಂವಿಧಾನ ,ಅನುಭವ ಮಂಟಪವೇ ಸಂಸತ್ತು.
ಸಮಾಜದ ಎಲ್ಲಾ ವೃತ್ತಿಗಳಲ್ಲಿ ತೊಡಗಿಸಿಕೊಂಡವರಿಗೂ ಅನುಭವ ಮಂಟಪಕ್ಕೆ ಸೇರಲು ಅವಕಾಶವಿತ್ತು .
ಮಕ್ಕಳು ವಚನಗಳಲ್ಲಿ ಹೇಳಿರುವ ಒಳ್ಳೆಯ ಗುಣಗಳನ್ನು ಮೈಗೂಡಿಸಿಕೊಂಡು ಉತ್ತಮ ಪ್ರಜೆಗಳಾಗಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಬಸವರಾಜು ಬಿ ವಿ ಅವರು
ತುಮಕೂರಿನ ನಾವುಗಳೇ ಧನ್ಯರು ಬಸವತತ್ವಗಳನ್ನು ನಡೆಸಿಕೊಂಡು ಬಂದಿರುವ ತ್ರಿವಿಧ ದಾಸೋಹಿಗಳಾದ ಶ್ರೀ ಶ್ರೀ ಶಿವಕುಮಾರ ಸ್ವಾಮಿಗಳ ತವರೂರು. ಶ್ರೀ ಶ್ರೀ ಶಿವಕುಮಾರ ಸ್ವಾಮೀಜಿಯವರು ಲಕ್ಷಾಂತರ ಕುಟುಂಬಕ್ಕೆ ಬೆಳಕಾದವರು ಎಂದರು.
ಕಾರ್ಯಕ್ರಮದಲ್ಲಿ ವಚನ ಗಾಯನವನ್ನು ತುಮಕೂರು ಜಿಲ್ಲಾ ಲೇಖಕಿಯರ ಸಂಘದ ಲೇಖಕಿರ ಸಂಘದ ಸುಮಾ ಪ್ರಸನ್ನ ಮತ್ತು ರಾಗಿಣಿ ತಂಡದವರು ನಡೆಸಿಕೊಟ್ಟರು. ಕಾಲೇಜಿನ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.