Sunday, December 7, 2025
Google search engine
Home Blog Page 20

ಅಭಿಮಾನಿಗಳಿಂದ ಬೆಮೆಲ್ ಕಾಂತರಾಜು ಅವರ 44ನೇ ಹುಟ್ಟು ಆಚರಣೆ

ತುರುವೇಕೆರೆ:
ತಾಲ್ಲೂಕಿನ ಸೋಮೇನಹಳ್ಳಿಯಲ್ಲಿ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಮತ್ತು ಸ್ನೇಹಿತರು, ಅಪಾರ ಸಂಖ್ಯೆಯ ಅಭಿಮಾನಿಗಳು ಹಮ್ಮಿಕೊಂಡಿದ್ದ ವಿಧಾನ ಪರಿಷತ್ ಮಾಜಿ ಸದಸ್ಯ ಬೆಮೆಲ್ ಕಾಂತರಾಜು ಅವರ 44ನೇ ಹುಟ್ಟು ಹಬ್ಬಕ್ಕೆ ಬೆಮೆಲ್ ಕಾಂತರಾಜು ಅವರು ಭಾನುವಾರ ಪಾಲ್ಗೊಂಡು ಅದ್ಧೂರಿಯಾಗಿ ಹುಟ್ಟು ಹಬ್ಬ ಆಚರಿಸಿದರು.


ಬೆಮೆಲ್ ಕಾಂತರಾಜು ಅವರ ಹುಟ್ಟು ಹಬ್ಬದ ಹಿನ್ನೆಲೆಯಲ್ಲಿ ಕಾರ್ಯಕರ್ತರು ಮತ್ತು ಮುಖಂಡರು ಶಾಮಿಯಾನ ಹಾಕಿ ವೇದಿಕೆಯನ್ನು ಸಿದ್ದಗೊಳಿಸಿದ್ದರು. ಅವರ ಬೆಂಬಲಿಗರು ಬೆಮೆಲ್ ಕಾಂತರಾಜು ಅವರಿಗೆ ಬೃಹತ್ ಗುಲಾಬಿ ಹಾರ ಹಾಕಿ ಸಂಭ್ರಮಿಸಿದರು.


ನಂತರ ಬೆಮೆಲ್ ಕಾಂತರಾಜು ಪಕ್ಷದ ಮುಖಂಡರು, ಅಭಿಮಾನಿಗಳು, ಸ್ನೇಹಿತರು ತಂದಿದ್ದ ಸುಮಾರು 10 ಕೆ.ಜಿ ತೂಕದ ಕೇಕ್ ಕತ್ತರಿಸುವ ಮೂಲಕ ಹುಟ್ಟು ಹಬ್ಬ ಆಚರಿಸಿದರು. ನಂತರ ಕಾಂಗ್ರೆಸ್ ಪಕ್ಷದ ಮುಖಂಡರುಗಳು, ಅಭಿಮಾನಿಗಳು ಹೂ ಮಾಲೆ ಹಾಕಿ ಸಿಹಿ ತಿನ್ನಿಸಿ ಶುಭಾಶಯ ಕೋರಿದರು.


ಇದೇ ವೇಳೆ ದಲಿತ ಸಂಘರ್ಷ ಸಮಿತಿಯ ಸಂಚಾಲಕ ದಂಡಿನಶಿವರ ಕುಮಾರ್ ಸ್ನೇಹಿತರು ಬುದ್ದನ ಪೋಟೋ ನೀಡಿ ಶುಭ ಕೋರಿದರು.

ನಂತರ ಎಲ್ಲರಿಗೂ ಬೆಮೆಲ್ ಕಾಂತರಾಜು ಅವರು ಧನ್ಯವಾದ ಹೇಳಿ, ಹೊಸ ವರ್ಷದ ಶುಭ ಕೋರಿದರು.


ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಎಂ.ನಾಗರಾಜು, ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಗೋಣಿತುಮಕೂರು ಕಾಂತರಾಜು, ಕಾಂಗ್ರೆಸ್ ಮುಖಂಡರುಗಳಾದ ಕೊಂಡಜ್ಜಿಪುಟ್ಟರಾಜು, ಮಲ್ಲೂರ್ ತಿಮ್ಮೇಶ್, ನಂದೀಶ್, ರೈತ ಸಂಘದ ತಾಲ್ಲೂಕು ಅಧ್ಯಕ್ಷ ಶ್ರೀನಿವಾಸ್, ಅಕ್ಕಳಸಂದ್ರ ಗೊಲ್ಲರಹಟ್ಟಿ ಪ್ರಕಾಶ್ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.

ವೃದ್ಧಾಶ್ರಮ: ಎಸ್ ಪಿಎಂ ವಿಷಾದ

ತುರುವೇಕೆರೆ: ವೃದ್ದಾಶ್ರಮಗಳು ನಾಯಿಕೊಡೆಗಳಂತೆ ತಲೆ ಎತ್ತುವ ಮೂಲಕ ಸಾಮಾಜಿಕ ಮತ್ತು ಕೌಟುಂಬಿಕ ವ್ಯವಸ್ಥೆಗೆ ಪೆಟ್ಟು ನೀಡುತ್ತಿದೆ ಎಂದು ಮಾಜಿ ಸಂಸದ ಎಸ್.ಪಿ.ಮುದ್ದಹನುಮೇಗೌಡ ವಿಷಾಧ ವ್ಯಕ್ತಪಡಿಸಿದರು.


ತಾಲ್ಲೂಕಿನ ಸೋಮೇನಹಳ್ಳಿ ಗ್ರಾಮದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಶತಾಯುಷಿ ರೈತ ಮಹಿಳೆ ರಂಗಮ್ಮನವರ ಶತಮಾನೋತ್ಸವ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.


ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕಾಗಿ ಸಾಕಷ್ಟು ಸಾರ್ವಜನಿಕ ಹಾಸ್ಟೆಲ್ಗಳು ಹುಟ್ಟಿಕೊಳ್ಳುತ್ತಿವೆ ಅವುಗಳನ್ನೂ ಮೀರಿಸಿದ ರೀತಿ ವೃದ್ಧಾಶ್ರಮಗಳು ಬೆಳೆಯುತ್ತಿವೆ. ದೊಡ್ಡ ಶ್ರೀಮಂತರುಗಳಿಗೆ ಅನುಕೂಲವಾಗುವ ರೀತಿಯಲ್ಲಿ ನಗರ, ಪಟ್ಟಣಗಳಲ್ಲಿ ಹೈಟೆಕೆ ವೃದ್ದಾಶ್ರಮಗಳು ಸ್ಥಾಪಿತವಾಗುತ್ತಿರುವುದನ್ನು ನೋಡಿದರೆ ದಿಗಿಲು ಹುಟ್ಟಿಸುತ್ತದೆ. ಇದಕ್ಕೆ ಕಾರಣ ಸಮಾಜದಲ್ಲಿ ಹಿರಿಯರು, ಅಜ್ಜ, ಅಜ್ಜಿ, ತಂದೆ ತಾಯಿಯರನ್ನು ಗೌರವದಿಂದ ಅವರೆಗೆ ನೋವಾಗದಂತೆ ನೋಡಿಕೊಳ್ಳಬೇಕು ಎಂಬ ಮನಸ್ಥಿತಿ ಕೌಟುಂಬಿಕ ವ್ಯವಸ್ಥೆಯೊಳಗೆ ಕಣ್ಮರೆಯಾಗಿರುವುದೇ ಸಾಕ್ಷಿ ಎಂದರು.


ನಮ್ಮ ಪರಂಪರೆ ಹಾಗು ಸಂಸ್ಕೃತಿಯ ಒಂದು ಭಾಗವಾಗಿದ್ದು ಅವಿಭಕ್ತ ಕುಟಂಬಗಳಲ್ಲಿ ಸಂಬಂಧ, ಬಾಂಧವ್ಯ, ಪ್ರೀತಿ, ಸಹಕಾರ, ಜವಬ್ದಾರಿ, ಗೌರವದಂತಹ ಮೌಲ್ಯಗಳು ವಿನಾಶದತ್ತ ಸಾಗುತ್ತಿರುವುದರಿಂದಲೇ ವೃದ್ದಾಶ್ರಮಗಳ ಹುಟ್ಟಿಗೆ ಇಂಬು ನೀಡುತ್ತಿವೆ.


ಹೆತ್ತವರನ್ನು ಸಾಕುವುದು ನಮ್ಮ ಜವಬ್ದಾರಿಯಲ್ಲ ಅನ್ನುವ ಮಟ್ಟಕ್ಕೆ ನಮ್ಮ ಜನಾಂಗ ಬಂದು ನಿಂತು ಬಿಟ್ಟಿದ. ಇತ್ತೀಚಿಗಂತೂ ಕೆಲವು ಮಕ್ಕಳು ವೃದ್ದಾಶ್ರಮಗಳಿಗೆ ಪೋಷಕರನ್ನು ದೂಡಿ ಸತ್ತಾಗ ಶವ ಸಂಸ್ಕಾರಕ್ಕೂ ಬರಲಾಗದೆಂದು ಅದಕ್ಕೆ ಬೇಕಾದ ಹಣವನ್ನು ಮುಂಗಡವಾಗಿ ಕಟ್ಟುವ ಮಕ್ಕಳೂ ಇದ್ದಾರೆ ಎಂದು ವಿಷಾದಿಸಿದರು.
ತಂದೆ, ತಾಯಿ, ಅಜ್ಜ, ಅಜ್ಜಿ ಹೀಗೆ ಹಿರಿಯನ್ನು ಸಾಕಿ ಸಲಹುವ ಪರಂಪರೆ ಗ್ರಾಮೀಣ ಪ್ರದೇಶಗಳಲ್ಲಿ ಮಾತ್ರ ಕಾಣಲು ಸಾದ್ಯ ಎಂದರು.

ಹಾಗಾಗಿ ಪ್ರತಿಯೊಬ್ಬರಿಗೂ ತಮ್ಮ ಜೀವನದಲ್ಲಿ ಸಿಗುವ ಒಳ್ಳೆಯ ಅವಕಾಶವೆಂದರೆ ಹೆತ್ತವರನ್ನು ಕೊನೆಯ ತನಕ ಸೇವೆ ಮಾಡುವುದೇ ಆಗಿದೆ.
ಹಾಗಾಗಿ ರಂಗಮ್ಮನವರ ಸಾರ್ಥಕ ಬದುಕಿನ್ನು ವಿ.ಟಿ.ವೆಂಕಟರಾಮಯ್ಯ ಅವರು ಒಂದು ಕೃತಿಯ ರೂಪಿದಲ್ಲಿ ಕಟ್ಟಿಕೊಡುವ ಮೂಲಕ ಮುಂದು ತಲೆಮಾರುಗಳಿಗೆ ಅಜ್ಜಿಯ ನೆನೆಪುಗಳು ಶಾಶ್ವತವಾಗಿ ಉಳಿಯುವಂತೆ ಮಾಡಿದ್ದಾರೆಂದು ಶ್ಲಾಘಿಸಿದರು.


ಮಾಜಿ ಶಾಸಕ ಜಯರಾಮ್ ಎ.ಎಸ್. ಮಾತನಾಡಿ, ನಾವೆಲ್ಲಾ ಅವಿಭಕ್ತ ಕುಟಂಬದಲ್ಲಿ ಬದುಕಿ ಬಂದವರು. ಐ.ಎ.ಎಸ್, ಕೆ.ಎ.ಎಸ್, ಐಪಿಎಸ್ ಓದಿರು ಹಾಗು ವಿದೇಶಗಳಲ್ಲಿ ದುಡಿಯುತ್ತಿರುವ ಕೆಲ ಮಕ್ಕಳು ತಮ್ಮ ತಂದೆ, ತಾಯಿಯರನ್ನು ವೃದ್ದಾಶ್ರಮಕ್ಕೆ ದೂಡುತ್ತಿರುವ ಪರಿಯನ್ನು ನೋಡಿದರೆ ಈ ಸಮಾಜ ಎತ್ತ ಸಾಗುತ್ತಿದೆ ಎಂಬ ಸಂಗತಿ ಭಯ ಹುಟ್ಟಿಸುತ್ತಿದೆ ಎಂದು ಮರುಗಿದರು.


ಇದೇ ವೇಳೆ ಶತಾಯುಷಿ ರಂಗಮ್ಮನವರ ಬದುಕು ಕುರಿತು ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ವಿ.ಟಿ.ವೆಂಕಟರಾಮಯ್ಯ ಬರೆದಿರುವ ‘ಬೆವರ ಬದುಕು’ ಕೃತಿ ಬಿಡುಗಡೆ ಮಾಡಲಾಯಿತು. ಶಿವಾರ ಉಮೇಶ್ ಅವರ ಜಾನಪದ ಗಾಯನ ಎಲ್ಲರ ಮೆಚ್ಚುಗೆ ಪಡೆಯಿತು.

ಕಾರ್ಯಕ್ರಮಕ್ಕೆ ಬಂದಿದ್ದ ಎಲ್ಲರಿಗೂ ಸಿಹಿ ಊಟದ ವ್ಯವಸ್ಥೆ ಕಲ್ಪಿಸಲಾಗಿತ್ತು. ರಂಗಾಪುರ, ಕೆರೆಗೋಡಿಯ ಗುರುಪರದೇಶಿ ಕೇಂದ್ರ ಮಹಾಸ್ವಾಮಿಜಿಗಳು ಹಾಗು ಗುರುಕುಲಾನಂದಾಶ್ರಮದ ಕರಿಬಸವದೇಶಿ ಕೇಂದ್ರ ಮಹಾಸ್ವಾಮೀಜಿಗಳ ಆಶೀರ್ವಚನ ನೀಡಿದರು.


ಸಮಾರಂಭದಲ್ಲಿ ಮಾಜಿ ವಿಧಾನ ಪರಿಷತ್ ಸದಸ್ಯ ಬೆಮೆಲ್ ಕಾಂತರಾಜು, ನಿವೃತ್ತ ಜಂಟಿ ನಿರ್ದೇಶಕ ಎಚ್.ಬಿ.ದಿನೇಶ್, ಬಿಜೆಪಿ ಒ.ಬಿಸಿ ಕಾರ್ಯಕಾರಣಿ ಸದಸ್ಯ ಎಸ್.ಪಿ ಚಿದಾನಂದ್, ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ವಿ.ಟಿ.ವೆಂಕಟರಾಮಯ್ಯ, ಪಟ್ಟಣ ಪಂಚಾಯಿತಿ ಸದಸ್ಯ ಚಿದಾನಂದ್, ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷ ಮೃತ್ಯುಂಜಯ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಎಂ.ನಾಗರಾಜು, ಪ್ರೊ.ಕೆ.ಪುಟ್ಟರಂಗಪ್ಪ, ರಂಗಮ್ಮನವರ ಮೊಮ್ಮಗ ನಂದೀಶ್, ಹಾವಾಳ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಎಚ್.ಆರ್.ಶಿವಕುಮಾರ್, ರೈತಸಂಘದ ಅಧ್ಯಕ್ಷ ಶ್ರೀನಿವಾಸ್ ಗೌಡ ಮತ್ತು ಕುಟುಂಬದವರು ಪಾಳ್ಗೊಂಡಿದ್ದರು.

ಕೃಷ್ಣಾಕೊಳ್ಳದ ನೀರು: ತುಮಕೂರು ಕಸಾಪ ಹಕ್ಕೋತ್ತಾಯ

0

ತುಮಕೂರು: ಕೃಷ್ಣಾಕೊಳ್ಳದ ನೀರಿನ ಮೇಲಿನ ಹಕ್ಕೋತ್ತಾಯವನ್ನು ಜಿಲ್ಲಾ ಸಮ್ಮೇಳನದಲ್ಲಿ ಮಂಡಿಸುವ ಮೂಲಕ ಕಸಾಪ ಅಧ್ಯಕ್ಷ ಕೆ.ಎಸ್.ಸಿದ್ದಲಿಂಗಪ್ಪ ಜಿಲ್ಲೆಯ ನೀರಾವರಿ ಹೋರಾಟಕ್ಕೆ ಹೊಸ ದಿಕ್ಕು ತೋರಿದರು.

ಸಮ್ಮೇಳನದ ಸಮಾರೋಪದಲ್ಲಿ ಹಲವು ನಿರ್ಣಯಗಳನ್ನು ಮಂಡಿಸಿದರು. ಕಲಾ ಗ್ರಾಮಕ್ಕೆ 25 ಎಕರೆ ಭೂಮಿ ನೀಡುವುದು ಸಹ ಹಕ್ಕೋತ್ತಾಯದಲ್ಲಿ ಸೇರಿದೆ.

ಇದಕ್ಕೂ ಮುನ್ನ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಬೆಂಗಳೂರಿ ಕೇವಲ ಕನ್ನಡದ ನೆಲವಾಗಿಲ್ಲ. ಇಡೀ ವಿಶ್ವದಲ್ಲಿ ಬೆಂಗಳೂರಿಗೆ ಬಗ್ಗೆ ಮಾತನಾಡುತ್ತಾರೆ. ಈ ರೀತಿಯ ವರ್ತನೆ ಸರಿಯಲ್ಲ.ಅದನ್ನು ಸರಕಾರ ಸಹಿಸುವುದಿಲ್ಲ.ಸುಗ್ರಿವಾಜ್ಞೆಯ ಮೂಲಕ ಕನ್ನಡ ನಾಮಫಲಕ ಅಳವಡಿಸುವ ಕಾನೂನು ತಂದಿದ್ದೇವೆ. ನಮಗೆ ಯಾರು ಹೇಳಬೇಕಾಗಿಲ್ಲ. ಇದು ಕನ್ನಡಿಗರ ಸರಕಾರ. ಕನ್ನಡದ ನೆಲ, ಜಲ, ಭಾಷೆಯನ್ನು ರಕ್ಷಿಸದೇ ಹೋದರೆ ನಾವು ಯಾರು ಸರಕಾರದಲ್ಲಿ ಇರುವುದು ತರವಲ್ಲ.ಹಾಗಾಗಿ ಕನ್ನಡ ರಕ್ಷಣೆಗೆ ಸರಕಾರದ ಬದ್ದವಾಗಿದೆ. ಕನ್ನಡ ಕಲಾ ಗ್ರಾಮಕ್ಕೆ 5 ಎಕರೆ ಭೂಮಿ ನೀಡಲು ಜಿಲ್ಲಾಡಳಿತ ಸಿದ್ದವಿದೆ.ನೀರಾವರಿಗೆ ಅನೇಕ ರೀತಿಯ ಹೋರಾಟ ನಡೆದಿದೆ. ಮೇಕೆದಾಟು ಯೋಜನೆಗೆ ಸಾವಿರಾರು ಜನ ಪಾದಯಾತ್ರೆ ನಡೆಸಿದ್ದೇವೆ.ಎತ್ತಿನಹೊಳೆ ಯೋಜನೆ ನಿಧಾನವಾದರೂ ನಿರ್ಧಿಷ್ಟ ಅವಧಿಯಲ್ಲಿ ಯೋಜನೆ ಪೂರ್ಣಗೊಳ್ಳಲಿದೆ. ಮುಂದಿನ ಎರಡು ವರ್ಷದಲ್ಲಿ ಎತ್ತಿನಹೊಳೆಯ ನೀರು ಈ ಭಾಗಕ್ಕೆ ಹರಿಯಲಿದೆ ಎಂದು ಭರವಸೆ ನೀಡಿದರು.

ಸಹಕಾರ ಸಚಿವ ಕೆ.ಎನ್.ರಾಜಣ್ಣ, ಶಾಸಕರಾದ ಬಿ.ಸುರೇಶಗೌಡ ಇತರರು ಇದ್ದರು.

ಸಾಹಿತಿಗಳ ವಿಭಜಿಸುವ ಕೆಲಸ: ಬರಗೂರು

ತುಮಕೂರು: ಸಾಹಿತಿಯಾದವ ಸತ್ಯವನ್ನು ಜನರಿಗೆ ಹೇಳುವ ಮಧ್ಯವರ್ತಿಯಾಗಿ ಕಾರ್ಯನಿರ್ವಹಿಸಬೇಕಿದೆ.ಯಾವ ಸರಕಾರವಿದ್ದರೂ ದಿಟ್ಟವಾಗಿ ಸತ್ಯ ಹೇಳಿ,ಮರ್ಯಾದಸ್ತರಾಗಬೇಕು ಎಂದು ನಾಡೋಜ ಡಾ.ಬರಗೂರು ರಾಮಚಂದ್ರಪ್ಪ ಹೇಳಿದರು.

ನಗರದ ಗಾಜಿನಮನೆಯ ಹೆಚ್.ಎಮ್.ಗಂಗಾಧರಯ್ಯ ವೇದಿಕೆಯಲ್ಲಿ ನಡೆದ 15ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೆಳನದ ಸಮಾರೋಪ ಭಾಷಣ ಮಾಡಿದ ಅವರು,1963ರಲ್ಲಿಯೇ ಅಂದಿನ ಸರಕಾರ ಕನ್ನಡ ಭಾಷೆಯಲ್ಲಿ ನಾಮಫಲಕ ಅಳವಡಿಸಲು ಅವಕಾಶ ಕಲ್ಪಿಸಿದೆ.ಆದರೆ ಇದುವರೆಗೂ ನಮ್ಮನ್ನು ಆಳಿದ ಸರಕಾರಗಳು ನಿರ್ಲಕ್ಷ ಮಾಡಿಕೊಂಡು ಬಂದಿವೆ. ಹಾಗಾಗಿ ಇಂದು ನಾವು ಕನ್ನಡ ನಾಮಫಲಕಕ್ಕಾಗಿ ಪ್ರತಿಭಟನೆಗೆ ಇಳಿಯುವಂತಹ ಸ್ಥಿತಿ ಬಂದಿದೆ.ಸರಕಾರದ ನಿರ್ಧಾರ ಸ್ವಾಗಾತಾರ್ಹ.ಹಾಗೆಯೇ ಕನ್ನಡ ಭಾಷೆಯನ್ನು ಅನ್ನಭಾಷೆಯಾಗಿಸಿದರೆ ಮಾತ್ರ ಉಳಿಗಾಲ ಎಂಬುದನ್ನು ನಾವ್ಯಾರು ಮೆರೆಯುವಂತಿಲ್ಲ ಎಂದರು.

ಕನ್ನಡವೆಂಬುದು ಕೇವಲ ಬೋರ್ಡಿನಲ್ಲಿದ್ದರೆ ಸಾಲದು,ಅದು ಬದುಕಿಗೆ ಬರಬೇಕು.ಆಗ ಮಾತ್ರ ಜನ ತಮ್ಮ ತಾಯಿ ಭಾಷೆಯನ್ನು ಒಪ್ಪಿಕೊಂಡು,ಅಪ್ಪಿಕೊಳ್ಳಲು ಸಾಧ್ಯ,ನಾವೆಲ್ಲರೂ ಈ ನಿಟ್ಟಿನಲ್ಲಿ ನಡೆಯೋಣ.ಕನ್ನಡ ನಾಡಿನ ಸಾಹಿತಿಗಳು ಸ್ವಾತಂತ್ರ ಪೂರ್ವದಲ್ಲಿಯೂ ಮತ್ತು ಸ್ವಾತಂತ್ರ ನಂತರದಲ್ಲಿಯೂ ಸಾಹಿತ್ಯದ ಸ್ವಾಯತತ್ತೆ, ಸಾಹಿತ್ಯದಲ್ಲಿ ಜಾತ್ಯಾತೀತತೆ ಹಾಗೂ ಪ್ರಜಾಸತ್ತಾತ್ಮಕತೆಯನು ಉಳಿಸಿಕೊಂಡು ಬಂದಿದೆ.ಇಕ್ಕಟ್ಟು,ಬಿಕ್ಕಟ್ಟುಗಳ ಸಂದರ್ಭದಲ್ಲಿ ಕೆಲವರು ತಮ್ಮ ಸಾಹಿತ್ಯದ ಮೂಲಕ ಮಾತನಾಡಿದರೆ,ಕೆಲವರು ಭಾಷಣದ ಮೂಲಕ ಮಾತನಾಡುತ್ತಿದಾರೆ.ಆದರೆ ಕೆಲವೊಮ್ಮೆ ಮೌನವೂ ಪ್ರತಿಭಟನೆಯ ಸಂಕೇತವಾಗಿರುತ್ತದೆ ಎಂದ ಬರಗೂರು ರಾಮಚಂದ್ರಪ್ಪ,ಕೆಲ ಲೇಖಕರು ಸರಕಾರ ವನ್ನು ನಾವೇ ತಂದಿದ್ದು ಎಂಬಂತೆ ಮಾತನಾಡುತಿದ್ದಾರೆ. ಇದು ಸಲ್ಲದು ಎಂದರು.

ಪ್ರಸ್ತುತ ಬೌದ್ಧಿಕ ವಲಯವನ್ನು ವಿಭಜಿಸುವ ಪ್ರಕ್ರಿಯೆ ನಡೆಯುತ್ತಿದ್ದು,ಇದು ಆತಂಕಕಾರಿ ವಿಷಯವಾಗಿದೆ. ಭಿನ್ನಾಭಿಪ್ರಾಯ ಗಳ ನಡುವೆ ಸಂವಾದ ನಡೆದರೆ,ಆಗಿರುವ ತಪ್ಪುಗಳನ್ನು ಸರಿ ಪಡಿಸಿಕೊಳ್ಳುವ ಮಾರ್ಗವನ್ನು ಕಂಡುಕೊಳ್ಳಬಹುದು. ಪ್ರಗತಿಗಾಮಿಗಳು ಮತ್ತು ಪ್ರತಿಗಾಮಿಗಳ ನಡುವೆ ವಿಚಾರ ವಿನಿಮಯ ಆಗತ್ಯವಿದೆ ಎಂದು ಬರಗೂರು ರಾಮಚಂದ್ರಪ್ಪ ಪ್ರತಿಪಾದಿಸಿದರು.

ಶೇಷಾದ್ರಿಪುರಂ ಶಿಕ್ಷಣ ಸಂಸ್ಥೆ ನಳಂದಾ,ತಕ್ಷಶಿಲಾ ವಿ.ವಿಗೆ ಸಮ: ಮೆಚ್ಚುಗೆ

ಬೆಂಗಳೂರು: ಶೇಷಾದ್ರಿಪುರಂ ಶಿಕ್ಷಣದತ್ತಿ ಸಂಸ್ಥೆಯು ನಳಂದಾ ಹಾಗೂ ತಕ್ಷಶಿಲಾ ವಿಶ್ವವಿದ್ಯಾಯಲಕ್ಕೆ ಸರಿಸಮನಾಗಿ ಕೆಲಸ ನಿರ್ವಹಿಸುತ್ತಾ ಇದೆ ಎಂದು ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಪರಿಷತ್ ನ ಉಪಾಧ್ಯಕ್ಷರಾದ ಎಸ್.ಆರ್.ನಿರಂಜನ್ ಮೆಚ್ಚುಗೆ ಸೂಚಿಸಿದರು.

ಶೇಷಾದ್ರಿಪುರಂ ಶಿಕ್ಷಣ ದತ್ತಿಯು ಯಲಹಂಕದ ಶೇಷಾದ್ರಿಪುರಂ  ಕಾಲೇಜಿನಲ್ಲಿ ಶನಿವಾರ ಆಯೋಜಿಸಿದ್ದ ೨೫ನೆಯ ವಾರ್ಷಿಕ ಸ್ನೇಹ ಸಮ್ಮಿಲನ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.

ಅಂದಿನ ವಿದ್ಯಾಲಯಗಳಾದ ನಳಂದಾ, ತಕ್ಷಶಿಲಾವು ಬಹುಶಿಸ್ತೀಯ ಶಿಕ್ಷಣ ನೀಡುತ್ತಿದ್ದವು. ಈ ಕಾರಣದಿಂದ ವಿವಿಧ ದೇಶಗಳಿಂದ ವಿದ್ಯಾರ್ಥಿಗಳನ್ನು ಆಕರ್ಷಿಸಿತ್ತು. ದೇಶ- ವಿದೇಶದ ವಿದ್ಯಾರ್ಥಿಗಳು ಅಲ್ಲಿ ವ್ಯಾಸಂಗ ಮಾಡುತ್ತಿದ್ದರು.ಇಂಥದೇ ಮಹತ್ವ ಶೇಷಾದ್ರಿಪುರಂ ಶಿಕ್ಷಣ ಸಂಸ್ಥೆಗಳಿಗೂ ಇದೆ ಎಂದು ಅಭಿಪ್ರಾಯಪಟ್ಟರು.

ಶಿಕ್ಷಣದ ವಿಚಾರಕ್ಕೆ ಬಂದರೆ ನಮ್ಮ ದೇಶಕ್ಕೆ ಸಮೃದ್ದವಾದ ಇತಿಹಾಸವಿದೆ. ಡಾ. ಅಬ್ದುಲ್ ಕಲಾಂ, ಎಂ ಎಸ್ ಸ್ವಾಮಿನಾಥನ್ ಅವರ ಜೀವನ ನಮಗೆ ಮಾದರಿಯಾಗಬೇಕು ಎಂದರು.

ಮಕ್ಕಳನ್ನು ಮೊಬೈಲ್ ತಂತ್ರಜ್ಞಾನದಿಂದ ದೂರವಿಡಬೇಡಿ, ಹಿರಿಯರ ಮಾರ್ಗದರ್ಶನದಲ್ಲಿ ಮಕ್ಕಳಿಗೆ ಮೊಬೈಲ್ ತಂತ್ರಜ್ಞಾನದ ಶಿಕ್ಷಣದ ಅವಶ್ಯಕತೆ ಇದೆ ಎಂದು ಹೇಳಿದರು.

ಶಿಕ್ಣದಲ್ಲಿ ಹೊಸ ಹೊಸ ತಂತ್ರಜ್ಞಾನ ಮತ್ತು ಮಾಹಿತಿಗಳನ್ನು, ವಿಧಾನಗಳನ್ನು ಅಳವಡಿಸಿಕೊಳ್ಳಬೇಕು. ಕಷ್ಟವಾಗಿರುವುದನ್ನು ಕೈ ಬಿಡುವುದಲ್ಲ, ಅಳವಡಿಸಿಕೊಳ್ಳಬೇಕು. ನಮ್ಮ ದೇಶದಲ್ಲಿ ಉತ್ತಮ ವಿದ್ಯಾರ್ಥಿಗಳಿದ್ದಾರೆ ಅವರಿಗೆ ಸರಿಯಾದ ಮಾರ್ಗ ತೋರುವ ಜವಬ್ದಾರಿ ಶಿಕ್ಷಕರ ಮೇಲಿದೆ ಎಂದು ಅಭಿಪ್ರಾಯ ಪಟ್ಟರು. ಡಾ.ಅಬ್ದುಲ್ ಕಲಾಂ ಅವರ ” ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಜೊತೆ ಜೊತೆಯಲ್ಲಿ ಕಲಿಯುತ್ತಾ ಸಾಗಬೇಕು” ಎಂಬ ಮಾತನ್ನು ಸ್ಮರಿಸಿದರು.

ಶೇಷಾದ್ರಿಪುರಂ ಶಿಕ್ಷಣದತ್ತಿಯ ಗೌರವ ಪ್ರಧಾನ ಕಾರ್ಯದರ್ಶಿಗಳಾದ ನಾಡೋಜ ಡಾ. ವೂಡೇ ಪಿ ಕೃಷ್ಣ ಅವರು ಪ್ರಾಸ್ತಾವಿಕ ನುಡಿಗಳನ್ನಾಡಿದರು.

ಕಾರ್ಯಕ್ರಮದಲ್ಲಿ ಶೇಷಾದ್ರಿಪುರಂ ಶಿಕ್ಷಣ ಸಂಸ್ಥೆಯಲ್ಲಿ ಸೇವೆ ಸಲ್ಲಿಸಿ ಸೇವಾ ನಿವೃತ್ತರಾದವರಿಗೆ ಸೇವಾ ಪ್ರಶಸ್ತಿ ಪ್ರಧಾನ ಮಾಡಿ ಸನ್ಮಾನಿಸಲಾಯಿತು.

ಶಿಕ್ಷಣದತ್ತಿಯ ಅಧ್ಯಕ್ಷರಾದ ಎನ್. ಆರ್ ಪಂಡಿತಾರಾಧ್ಯ ಅವರು ಅಧ್ಯಕ್ಷೀಯ ನುಡಿಗಳನ್ನಾಡಿದರು.

ಟ್ರಸ್ಟಿಗಳಾದ ಶೇಷನಾರಾಯಣ್ ಎಸ್, ಹೆಂಜಾರಪ್ಪ ಟಿ ಎಸ್, ಪಾರ್ಥಸಾರಥಿ, ಎಂ ಎಸ್ ನಟರಾಜು, ಅನಂತರಾಮು, ಕೃಷ್ಣಸ್ವಾಮಿ.ಕೆ. ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಪೋಟೋ ಕೃಪೆ: ಬಾಲಾಜಿಶರ್ಮ

ಕಳಪೆಗುಣಮಟ್ಟದ ಟ್ರಾನ್ಸ್ ಫಾರ್ಮರ್

0

ತುರುವೇಕೆರೆ: ತಾಲ್ಲೂಕಿನ ಬೆಸ್ಕಾಂ ಇಲಾಖೆಯು ರೈತರಿಗೆ ಉತ್ತಮ ಗುಣಮಟ್ಟದ ಟ್ರಾನ್ಸ್ ಫಾರ್ಮರ್ ನೀಡಬೇಕು ಹಾಗು ತಕ್ಷಣ ಸುಟ್ಟ ಟ್ರಾನ್ಸ್ ಫಾರ್ಮರ್ ಗಳನ್ನು ಬದಲಾಯಿಸಿಕೊಡಬೇಕೆಂದು ಆಗ್ರಹಿಸಿ ಕಿಸಾನ್ ಸಂಘದ ತಾಲ್ಲೂಕು ಕಾರ್ಯದರ್ಶಿ ಅಜ್ಜೇನಹಳ್ಳಿ ತೋಂಟರಾಜು ಒತ್ತಾಯಿಸಿದ್ದಾರೆ.
ಪಟ್ಟಣದ ಬೆಸ್ಕಾಂ ಜೆಟಿಎ ಅಶೋಕ್ ಅವರಿಗೆ ಮನವಿ ಪತ್ರ ಸಲ್ಲಿಸಿ ಪತ್ರಕರ್ತರೊಂದಿಗೆ ಮಾತನಾಡುತ್ತಾ ಬೆಸ್ಕಾಂ ಇಲಾಖೆ ವಿರುದ್ದ ಆಕ್ರೋಶ ವ್ಯಕ್ತಪಡಿಸಿ ಇಲಾಖೆ ಇತ್ತೀಚೆಗೆ ನೀಡುತ್ತಿರುವ ಟ್ರಾನ್ಸ್ ಫಾರ್ಮರ್ ಗಳು ಪದೇ ಪದೇ ಸುಟ್ಟು ಹೋಗುತ್ತಿದ್ದು ಟ್ರಾನ್ಸ್ ಫಾರ್ಮರ್ ಗಳು ಕಳಪೆ ಗುಣಮಟ್ಟದಿಂದ ಕೂಡಿವೆ.
ಇದರಿಂದ ರೈತರಿಗೆ ತುಂಬಾ ತೊಂದರೆಯಾಗುತ್ತಿದೆ. ಬರಗಾಲದಿಂದ ರೈತರು ಮಳೆಯಿಲ್ಲದೆ ಕಂಗೆಟ್ಟಿದ್ದು ತೆಂಗು ಅಡಿಕೆ ಬೆಳೆ ಉಳಿಸಿಕೊಳ್ಳಲು ಶತಾಯ ಗತಾಯ ಹೋರಾಡುತ್ತಿದ್ದಾರೆ. ಆದರೆ ಬೆಸ್ಕಾಂ ಇಲಾಖೆ ನೀಡುತ್ತಿರುವ ಟ್ರಾನ್ಸ್ ಫಾರ್ಮರ್ ಗಳು ಪದೇ ಪದೇ ಸುಟ್ಟುಹೋಗುತ್ತಿವೆ.
ಟಿ.ಸಿ.ಸುಟ್ಟ 72 ಗಂಟೆಯೊಳಗೆ ಟ್ರಾನ್ಸ್ ಫಾರ್ಮರ್ಗಳನ್ನು ನೀಡಬೇಕೆಂಬ ನಿಯಮವಿದ್ದರೂ ತಿಂಗಳಾನುಗಟ್ಟಲೆ ರೈತರನ್ನು ಸತಾಯಿಸುತ್ತಾರೆ. ಮಾಚೇನಹಳ್ಳಿ ಗೊಲ್ಲರಹಟ್ಟಿಯಲ್ಲಿ 100ಕೆವಿ. ಟ್ರಾನ್ಸ್ ಫಾರ್ಮರ್ 3 ತಿಂಗಳಲ್ಲಿ 4ಬಾರಿ ಸುಟ್ಟುಹೋಗಿದೆ. ಕಳಪೆ ಗುಣಮಟ್ಟವೇ ಟ್ರಾನ್ಸ್ ಫಾರ್ಮರ್ ಸುಡಲು ಕಾರಣವಾಗಿದ್ದು ಶೀಘ್ರವೇ ಸಂಬಂಧಿಸಿದ ಅಧಿಕಾರಿಗಳು ತಕ್ಷಣ ಟ್ರಾನ್ಸ್ ಫಾರ್ಮರ್ ಬದಲಾಯಿಸಿಕೊಡಬೇಕು ಹಾಗೂ ಗುಣಮಟ್ಟದ ಟಿ.ಸಿ. ನೀಡಬೇಕು ಇಲ್ಲವಾದಲ್ಲಿ ಬೆಸ್ಕಾಂ ಕಚೇರಿ ಮುಂದೆ ತಾಲ್ಲೂಕಿನ ರೈತರರೊಂದಿಗೆ ಒಗ್ಗೂಡಿ ಪ್ರತಿಭಟನೆ ಮಾಡಲಾಗುವುದು ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಮಾಚೇನಹಳ್ಳಿ ಸತೀಶ್, ಮಲ್ಲಿಕಾರ್ಜುನ್, ಶಿವಣ್ಣ, ಮಾವಿನಹಳ್ಳಿ ಕಂಚೀರಾಯಪ್ಪ, ಶಿವಶಂಕರಪ್ಪ, ರವೀಶ್, ನಟರಾಜು, ತೀರ್ಥಕುಮಾರ್ ಸೇರಿದಂತೆ ಅನೇಕ ರೈತರು ಪಾಲ್ಗೊಂಡಿದ್ದರು.

ರೈತ ಮಹಿಳೆ ರಂಗಮ್ಮನವರ ಶತಮಾನೋತ್ಸವ ಆಚರಣೆ

ತುರುವೇಕೆರೆ: ತಂದೆ, ತಾಯಿ ಹಾಗು ಹಿರಿಯ ನಾಗರಿಕರ ಬಗ್ಗೆ ಸಮಾಜದಲ್ಲಿ ಗೌರವ ಭಾವನೆ ಮೂಡಿಸುವ ಸದಾಶಯಗಳೊಂದಿಗೆ ಶತಾಯುಷಿ ರೈತ ಮಹಿಳೆ ರಂಗಮ್ಮನವರ ಶತಮಾನೋತ್ಸವ ಸಮಾರಂಭವನ್ನು ತಾಲ್ಲೂಕಿನ ಸೋಮೇನಹಳ್ಳಿ ಗೇಟ್ ಬಳಿ ಡಿ.31 ರಂದು ಹಮ್ಮಿಕೊಳ್ಳಲಾಗಿದೆ ಎಂದು ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ವಿ.ಟಿ.ವೆಂಕಟರಾಮಯ್ಯ ತಿಳಿಸಿದರು.


ತಾಲ್ಲೂಕಿನ ಸೋಮೇನಹಳ್ಳಿ ಗ್ರಾಮದಲ್ಲಿ ಶುಕ್ರವಾರ ಶತಾಯುಷಿ ರೈತ ಮಹಿಳೆ ರಂಗಮ್ಮನವರ ಶತಮಾನೋತ್ಸವ ಸಮಾರಂಭದ ಆಹ್ವಾನ ಪತ್ರಿಕೆ ಬಿಡುಗಡೆಗೊಳಿಸಿ ಮಾತನಾಡಿದರು.


ಸೋಮೇನಹಳ್ಳಿ ದಿವಂಗತ ರಂಗಪ್ಪನವರ ಧರ್ಮ ಪತ್ನಿ ರಂಗಮ್ಮನವರಿಗೆ 106 ವರ್ಷಗಳ ತುಂಬು ಜೀವನ ನಡೆಸಿರುವ ಹಿನ್ನೆಲೆಯಲ್ಲಿ ಅವರ ಶತಮಾನೋತ್ಸವ ಕಾರ್ಯಕ್ರಮವನ್ನು ಗೆಳೆಯರು, ಕುಟುಂಬದವರು ಮತ್ತು ಗ್ರಾಮಸ್ಥರೊಂದಿಗೆ ಕೂಡಿ ಸಮಾರಂಭವನ್ನು ಮಾಡಲು ಉದ್ದೇಶಿಸಲಾಗಿದೆ.


ಇತ್ತೀಚಿನ ದಿನಗಳಲ್ಲಿ ತಂದೆ, ತಾಯಿಯವರನ್ನು ಸ್ವತಃ ಮಕ್ಕಳೇ ನಿರ್ಲಕ್ಷ್ಯ ಮಾಡಿ ವೃದ್ದಾಶ್ರಮಗಳಿಗೆ ದೂಡುತ್ತಿರುವ ಹೊತ್ತಿನಲ್ಲಿ ಗ್ರಾಮದ ಯುವ ಜನತೆಗೆ ಹೆತ್ತವರ ಬಗ್ಗೆ ಗೌರವ ಭಾವ ಮೂಡಿಸಲು ಸಾದ್ಯವಾಗಲಿದೆ ಎಂಬ ಆಶಯಗಳೊಂದಿಗೆ ಇಂತಹ ಕಾರ್ಯಕ್ರಮಗಳು ಅಗತ್ಯ.


ರಂಗಮ್ಮನವರು ಮಕ್ಕಳ ಭವಿಷ್ಯಕ್ಕಾಗಿ ತಮ್ಮ ಇಡೀ ಸುಖ ಸಂತೋಷಗಳನ್ನು ಬದಿಗಿಟ್ಟು ದಣಿವರಿಯ ದುಡಿಮೆ ಹಾಗು ಸಮಾಜದಲ್ಲಿ ಹೇಗೆ ಗೌರವಯುತವಾಗಿ ಬಾಳಿದರು ಎಂಬ ವಿಚಾರಗಳನ್ನೊಳಗೊಂಡ ಜೀವನ ಚರಿತ್ರೆಯ ಪುಸ್ತಕವನ್ನು ಇದೇ ವೇದಿಕೆಯಲ್ಲಿ ಗಣ್ಯರು ಲೋಕಾರ್ಪಗೊಳಿಸಲಿದ್ದಾರೆ. ಅಂದಿನ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯ ಗ್ರಾಮಸ್ಥರು, ತಾಲ್ಲೂಕಿನ ಯುವಕ ಮಿತ್ರರರು ಆಗಮಿಸಬೇಕೆಂದು ಮನವಿ ಮಾಡಿದರು,
ಶತಾಯುಷಿ ರಂಗಮ್ಮನವರ ಮೊಮ್ಮಗ ನಂದೀಶ್ ಮಾತನಾಡಿ, ಮಕ್ಕಳು, ಮೊಮ್ಮಕ್ಕಳು, ಮುಮ್ಮಕ್ಕಳನ್ನು ಸಾಕಿ ಸಲವಿರುವ ರಂಗಮ್ಮನವರು ಇಂದಿಗೂ ಆರೋಗ್ಯವಾಗಿದ್ದು ಮನೆಯ ಒಂದಲ್ಲಾ ಒಂದು ಚಟುವಟಿಕೆಯಲ್ಲಿ ಕ್ರಿಯಾಶೀಲರಾಗಿರುತ್ತಾರೆ. ಇದೇ ಕಾರ್ಯಕ್ರಮದಲ್ಲಿ ತಾಲ್ಲೂಕಿನ ಶತಾಯುಷಿಗಳನ್ನು ಗುರುತಿಸಿ ಸನ್ಮಾನಿಸಲಾಗುವುದು.
ಭಾನುವಾರ ಬೆಳಗ್ಗೆ 11 ಗಂಟೆಗೆ ನಡೆಯುವ ಕಾರ್ಯಕ್ರಮಕ್ಕೆ ಆದಿಚುಂಚನಗಿರಿ ಪೀಠಾಧ್ಯಕ್ಷರಾದ ನಿರ್ಮಲಾನಂದನಾಥ ಸ್ವಾಮಿ, ರಂಗಾಪುರ, ಕೆರೆಗೋಡಿಯ ಗುರುಪರದೇಶಿ ಕೇಂದ್ರ ಮಹಾಸ್ವಾಮಿಜಿಗಳು ದಿವ್ಯ ಸಾನ್ನಿಧ್ಯ ವಹಿಸಲಿದ್ದು. ಗುರುಕುಲಾನಂದಾಶ್ರಮದ ಇಮ್ಮಡಿ ಕರಿಬಸವ ದೇಶಿಕೇಂದ್ರ ಸ್ವಾಮೀಜಿ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ, ಪ್ರಸನ್ನನಾಥ ಸ್ವಾಮಿ ಆಶೀರ್ವಚನ ನೀಡಲಿದ್ದು, ‘ಶತಾಯುಷಿ ರಂಗಮ್ಮಾಜಿ ಕೃತಿ’ಯನ್ನು ಮಾಜಿ ಸಂಸದ ಎಸ್.ಪಿ.ಮುದ್ದಹನುಮೇಗೌಡ ಬಿಡುಗಡೆ ಮಾಡಲಿದ್ದಾರೆ. ಪ್ರೊ.ಕೆ.ಪುಟ್ಟರಂಗಪ್ಪ ಪ್ರಾಸ್ತಾವಿಕ ನುಡಿ ನುಡಿಯಲಿದ್ದು, ಮಾಜಿ ಶಾಸಕ ಜಯರಾಮ್ ಎ.ಎಸ್ ಅಧ್ಯಕ್ಷತೆ ವಹಿಸಲಿದ್ದಾರೆ.
ಮಾಜಿ ವಿಧಾನ ಪರಿಷತ್ ಸದಸ್ಯ ಬೆಮೆಲ್ ಕಾಂತರಾಜು ಶತಾಯುಷಿ ರಂಗಮ್ಮನವರಿಗೆ ಗೌರವಾರ್ಪಣೆ ನೆರವೇರಿಸಲಿದ್ದಾರೆ. ನಿವೃತ್ತ ಜಂಟಿ ನಿದರ್ೇಶಕ ಎಚ್.ಬಿ.ದಿನೇಶ್ ಸಾಧಕರನ್ನು ಗೌರವಿಸಲಿದ್ದಾರೆ. ತಹಶೀಲ್ದಾರ್ ವೈ.ಎಂ.ರೇಣುಕುಮಾರ್, ಬಿಜೆಪಿ ಒ.ಬಿಸಿ ಕಾರ್ಯಕಾರಣಿ ಸದಸ್ಯ ಎಸ್.ಪಿ ಚಿದಾನಂದ್ ಸೇರಿದಂತೆ ಗಣ್ಯರು ಭಾಗವಹಿಸಲಿದ್ದಾರೆ. ಇದೇ ವೇಳೆ ಶಿವಾರ ಉಮೇಶ್ ಅವರಿಂದ ಜಾನಪದ ಗಾಯನ ಕಾರ್ಯಕ್ರಮ ನಡೆಯಲಿದೆ ಎಂದರು.
ಈ ಸಂದರ್ಭದಲ್ಲಿ ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷ ಮೃತ್ಯುಂಜಯ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಎಂ.ನಾಗರಾಜು, ಹಾವಾಳ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಎಚ್.ಆರ್.ಶಿವಕುಮಾರ್, ರೈತಸಂಘದ ಅಧ್ಯಕ್ಷ ಶ್ರೀನಿವಾಸ್ ಗೌಡ, ಸೋಮೇನಹಳ್ಳಿ ರಘು ಮತ್ತು ಕುಟುಂಬಸ್ಥರು, ಗೆಳೆಯರು ಇದ್ದರು.

ಬೊಮ್ಮಲಿಂಗೇಶ್ವರ ದೇವಸ್ಥಾನಕ್ಕೆ ಆಯ್ಕೆ

0

ಪಟ್ಟನಾಯಕನಹಳ್ಳಿ: ಶಿರಾ ತಾಲ್ಲೂಕಿನ ನಾದೂರು ಗ್ರಾ.ಪಂ.ವ್ಯಾಪ್ತಿಯ ರಂಗಾಪುರ ಗ್ರಾಮದ ಐತಿಹಾಸಿಕ ಬೊಮ್ಮಲಿಂಗೇಶ್ವರ ದೇವಸ್ಥಾನದ ಅಭಿವೃದ್ಧಿ ಸಲುವಾಗಿ ಬೊಮ್ಮಲಿಂಗೇಶ್ವರ ಸೇವಾ ಟ್ರಸ್ಟ್ ಮಾಡಲಾಗಿದೆ ಎಂದು ಮುಖಂಡ ಶಿವು ಚಂಗಾವರ ಹೇಳಿದರು.
ಅವರು ರಂಗಾಪುರ ಗ್ರಾಮದ ಬೊಮ್ಮಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ಶಿರಾ, ಹಿರಿಯೂರು, ಪಾವಗಡ,ಮಧುಗಿರಿ ತಾಲ್ಲೂಕಿನಲ್ಲಿ ದೇವಾಲಯದ ಭಕ್ತರು ಇದ್ದು ದೇವಾಲಯದ ಜೀರ್ಣೋದ್ಧಾರದ ಸಲುವಾಗಿ ಹಿರಿಯರ ಮಾರ್ಗದರ್ಶನದಲ್ಲಿ ಟ್ರಸ್ಟ್ ರಚನೆ ಮಾಡಲಾಗಿದೆ ಎಂದರು.
ಪದಾಧಿಕಾರಿಗಳ ವಿವರ;
ಗೌರವಾಧ್ಯಕ್ಷರಾಗಿ ಕೆ. ರಾಮಚಂದ್ರಪ್ಪ, ಅಧ್ಯಕ್ಷ ಡಿ.ಎಲ್. ಅಶ್ವಥ್ ನಾರಾಯಣ ಬಾಬು, ಉಪಾಧ್ಯಕ್ಷ ಶಿವು ಚಂಗಾವರ, ಪ್ರಧಾನ ಕಾರ್ಯದರ್ಶಿ ಮಂಜಣ್ಣ, ಖಜಾಂಚಿ ರಾಮಕೃಷ್ಣ, ನಿರ್ದೇಶಕರುಗಳಾಗಿ ಎಸ್. ಬಿ .ಮೋಹನ್, ಎನ್. ನರಸಪ್ಪ, ಬಿ.ಜಿ. ಕರಿಯಣ್ಣ, ಲಿಂಗಣ್ಣ ,ಪುಟ್ಟ ಲಿಂಗಯ್ಯ, ಕೃಷ್ಣಪ್ಪ, ಕರಿಯಣ್ಣ ನಾಗರಾಜು, ಮನೋಹರ್ ನಾಯಕ ಬಸವರಾಜು, ನಾಯಕ, ಕುಮಾರ್ ನಾಯಕ, ಗುರುಸ್ವಾಮಿ, ಆರ್ .ಟಿ .ನಾರಾಯಣಪ್ಪ ಆಯ್ಕೆಯಾಗಿದ್ದಾರೆ.

ಗ್ರಾಮ ಸಭೆ ಪರ-ವಿರೋಧ, ಪ್ರತಿಭಟನೆ

ತುರುವೇಕೆರೆ ತಾಲ್ಲೂಕಿನ ಮಾಯಸಂದ್ರ ಹೋಬಳಿಯ ಸೊರವನಹಳ್ಳಿ ಗ್ರಾಮ ಪಂಚಾಯಿತಿ ಆವರಣದಲ್ಲಿ ಮಂಗಳವಾರ ಗ್ರಾಮಸಭೆ ಜರುಗಿತು. ಅದರ ಪಕ್ಕದಲ್ಲೇ ಇದೇ ಗ್ರಾಮ ಪಂಚಾಯ್ತಿಯ 8 ಸದಸ್ಯರು ತಮ್ಮನ್ನು ನಿರ್ಲಕ್ಷ್ಯ ಮಾಡಲಾಗುತ್ತಿದೆ ಎಂದು ಆರೋಪಿಸಿ ಹಾಗು ಗ್ರಾಮಸಭೆಯನ್ನು ವಿರೋಧಿಸಿ ಪ್ರತಿಭಟನೆ ನಡೆಸಿದರು.
ಗ್ರಾಮಪಂಚಾಯಿತಿಯ ಸಾಮಾನ್ಯ ಸಭೆಯಲ್ಲಿ ಗ್ರಾಮಸಭೆ ನಡೆಸುವ ಸಂಬಂಧ ಯಾವುದೇ ಚರ್ಚೆ ಮಾಡಿಲ್ಲ. ಅಲ್ಲದೇ ವಾರ್ಡ್ ಸಭೆಯನ್ನು ಕರೆಯದೇ ಗ್ರಾಮಸಭೆ ಕರೆಯುವುದು ಸರಿಯಲ್ಲ ಎಂದು ಸಹ ಸದಸ್ಯರು ಆರೋಪಿಸಿದರು.
ಗ್ರಾಮ ಪಂಚಾಯಿತಿಯಲ್ಲಿ ಹಲವಾರು ಪಿಡಿಓ ಗಳು ಕರ್ತವ್ಯ ನಿರ್ವಹಿಸಿದ್ದಾರೆ. ಅವರು ಬೇರೆಯವರಿಗೆ ಅಧಿಕಾರ ನೀಡುವ ಸಂದರ್ಭದಲ್ಲಿ ಎನ್ಆರ್ ಇಜಿ ಗೆ ಸಂಬಂಧಿಸಿದ ದಾಖಲೆಗಳನ್ನು ಪಡೆಯಲಾಗಿಲ್ಲ. ಎಲ್ಲ ಪಿಡಿಓಗಳೂ ಸಹ ಜವಬ್ದಾರಿಯಿಂದ ನುಳುಚಿಕೊಳ್ಳುತ್ತಿದ್ದಾರೆ. ಸೂಕ್ತ ದಾಖಲೆ ಕೇಳಿದರೆ ಸದಸ್ಯರ ವಿರುದ್ಧವೂ ಪಿತೂರಿ ನಡೆಸಿ ಅವರನ್ನು ಪೊಲೀಸ್ ಠಾಣೆಗೆ ಅಲೆಯುವಂತೆ ಮಾಡಲಾಗುತ್ತಿದೆ ಎಂದು ಸದಸ್ಯ ಸಂದೇಶ್ ದೂರಿದರು.
ಇಲ್ಲಿಯ ಗ್ರಾಮ ಪಂಚಾಯಿತಿಯ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಪಿಡಿಓ ರವರು ಸರ್ವಾಧಿಕಾರಿ ಧೋರಣೆ ತಾಳಿದ್ದಾರೆ. ಸದಸ್ಯರಿಗೆ ಗೌರವ ನೀಡುತ್ತಿಲ್ಲ. ಸೂಕ್ತ ದಾಖಲಾತಿಗಳನ್ನೂ ಸಹ ನೀಡುತ್ತಿಲ್ಲ. ಯಾರಿಂದ ದಾಖಲೆ ಪಡೆಯಬೇಕೆಂಬ ಗೊಂದಲ ಕಾಡುತ್ತಿದೆ. ಸದಸ್ಯರಿಗೆ ಜಿಲ್ಲಾ ಪಂಚಾಯಿತಿ ವತಿಯಿಂದ ತರಬೇತಿ ನೀಡಲಾಗುತ್ತಿದೆ.
ಅದನ್ನೂ ಸಹ ಗೌಪ್ಯವಾಗಿಟ್ಟು ಇತರೆ ಸದಸ್ಯರನ್ನು ವಂಚಿಸಲಾಗುತ್ತಿದೆ. ಎಲ್ಲಾ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ ಸರ್ವಾಧಿಕಾರಿಗಳಂತೆ ವರ್ತಿಸುತ್ತಿದ್ದಾರೆ. ಜನರಿಂದ ಆಯ್ಕೆಯಾಗಿರುವ ನಾವು ಜನರಿಗೆ ಉತ್ತರ ನೀಡಲು ಅಸಹಾಯಕರಾಗಿದ್ದೇವೆ ಎಂದು ಅಸಮಧಾನಿತ ಸದಸ್ಯರ ದೂರು.
ಗ್ರಾಮಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಪಿಡಿಓ ರವರು ಇದೇ ಪ್ರವೃತ್ತಿಯನ್ನು ಮುಂದುವರೆಸಿದಲ್ಲಿ ಹಾಗು ಕಳೆದ ಮೂರು ವರ್ಷಗಳ ಅವಧಿಯಲ್ಲಿ ಆಗಿರುವ ಎಲ್ಲಾ ಕಾಮಗಾರಿಗಳ ಕುರಿತು ಸಮಗ್ರ ತನಿಖೆ ನಡೆಸಬೇಕು. ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದೂ ಸಹ ಸದಸ್ಯ ಸಂದೇಶ್ ಆಗ್ರಹಿಸಿದ್ದರಲ್ಲದೆ ತಾಲ್ಲೂಕು ಪಂಚಾಯಿತಿ ಅಥವಾ ಜಿಲ್ಲಾ ಪಂಚಾಯಿತಿ ಎದುರೇ ಪ್ರತಿಭಟನೆಯನ್ನು ಮಾಡಲಾಗುವುದೆಂದು ಎಚ್ಚರಿಸಿದರು.
ಈ ಪ್ರತಿಭಟನೆಯಲ್ಲಿ ಸದಸ್ಯರಾದ ಮಹಾಲಕ್ಷ್ಮಮ್ಮ, ಸುಶೀಲಾ, ಎಸ್.ವಿ.ಸುರೇಶ್, ಬಾಲಾಜಿ, ಎನ್.ವಿ.ಶಶಿಕಲಾ, ಜಾಬೀರ್ ಹುಸೇನ್ ಮತ್ತು ಎಚ್.ಎಸ್.ಗೀತಾ ಸೇರಿದಂತೆ ಹಲವು ಮಂದಿ ಭಾಗವಹಿಸಿದ್ದರು.

ಸೊರವನಹಳ್ಳಿ: ಕಾಮಗಾರಿ ತನಿಖೆಗೆ ಶಿಫಾರಸು

0

ತುರುವೇಕೆರೆ: ತಾಲ್ಲೂಕಿನ ಮಾಯಸಂದ್ರ ಹೋಬಳಿಯ ಸೊರವನಹಳ್ಳಿ ಗ್ರಾಮಪಂಚಾಯಿತಿಯಲ್ಲಿ ಕಳೆದ ಮೂರು ವರ್ಷಗಳಿಂದ ನಡೆದಿರುವ ಆಡಳಿತ ಮತ್ತು ಕಾಮಗಾರಿಗಳ ಕುರಿತು ಸಮಗ್ರ ತನಿಖೆ ನಡೆಸಬೇಕೆಂದು ಶಿಫಾರಸ್ಸು ಮಾಡಿರುವುದಾಗಿ ಸೊರವನಹಳ್ಳಿ ಗ್ರಾಮ ಪಂಚಾಯಿತಿ ನೋಡಲ್ ಅಧಿಕಾರಿ ಹಾಗು ಅಕ್ಷರ ದಾಸೋಹದ ಸಹಾಯಕ ನಿರ್ದೇಶಕ ಜೆ.ಆರ್.ರವಿಕುಮಾರ್ ತಿಳಿಸಿದ್ದಾರೆ.
ಗ್ರಾಮ ಪಂಚಾಯಿತಿ ಆವರಣದಲ್ಲಿ ಮಂಗಳವಾರ ನಡೆಸಲಾದ ಗ್ರಾಮಸಭೆಯಲ್ಲಿ ಸಾರ್ವಜನಿಕರು ಮತ್ತು ಕೆಲವು ಗ್ರಾಮ ಪಂಚಾಯಿತಿ ಸದಸ್ಯರೇ ಪಂಚಾಯ್ತಿಯಲ್ಲಿ ಅವ್ಯವಹಾರವಾಗಿದೆ ಎಂದು ದೂರಿದ್ದರು. ಹಲವಾರು ಕಡೆ ಕಾಮಗಾರಿಗಳೇ ಆಗದೆ ಹಣ ಬಿಡುಗಡೆಯಾಗಿದೆ ಎಂದು ಆರೋಪಿಸಿದ್ದರು.
ಪಂಚಾಯಿತಿಗೆ ಎಂಟತ್ತು ಪಿಡಿಓಗಳು ಬಂದು ಹೋಗಿದ್ದಾರೆ. ಅವರುಗಳು ಏನೇನು ಕಾಮಗಾರಿಗಳನ್ನು ಮಾಡಿದ್ದಾರೆ ಎಂಬುದು ತಿಳಿದಿಲ್ಲ. ಅಧಿಕಾರಿಗಳು ಅಲ್ಲಿನ ಆಡಳಿತ ಮಂಡಳಿಗೂ ಸಹ ಸೂಕ್ತ ತಿಳವಳಿಕೆ ನೀಡದೆ ವಂಚಿಸಿರುವ ಪ್ರಕರಣವೂ ಇರುವುದರಿಂದ ಎಲ್ಲಾ ಆಯಾಮಗಳಿಂದ ತನಿಖೆ ನಡೆಸಲು ಜಿಲ್ಲಾ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆಯುವೆ.
ಸೊರವನಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ನಡೆದಿರುವ ಕಾಮಗಾರಿಗಳ ಹಾಗು ಅವುಗಳ ವಸ್ತುಸ್ಥಿತಿಯನ್ನು ಮಂಡಿಸಬೇಕೆಂದು ಹಲವು ಮಂದಿ ಪಿಡಿಓ ಚಂದ್ರಶೇಖರ್ ಗೆ ಆಗ್ರಹಿಸಿದ್ದಾರೆ. ಗ್ರಾಮ ಪಂಚಾಯಿತಿಯಲ್ಲಿ ಸದಸ್ಯರ ನಡುವೆ ಹೊಂದಾಣಿಕೆ ಇಲ್ಲದೇ ಗ್ರಾಮಗಳಲ್ಲಿ ಅಭಿವೃದ್ಧಿ ಎಂಬುದು ಮರೀಚಿಕೆಯಾಗಿದೆ ಎಂಬುದು ಹಲವರ ಆರೋಪವಾಗಿದೆ ಎಂದರು.