Thursday, October 3, 2024
Google search engine
Homeಜಿಲ್ಲೆವೃದ್ಧಾಶ್ರಮ: ಎಸ್ ಪಿಎಂ ವಿಷಾದ

ವೃದ್ಧಾಶ್ರಮ: ಎಸ್ ಪಿಎಂ ವಿಷಾದ

ತುರುವೇಕೆರೆ: ವೃದ್ದಾಶ್ರಮಗಳು ನಾಯಿಕೊಡೆಗಳಂತೆ ತಲೆ ಎತ್ತುವ ಮೂಲಕ ಸಾಮಾಜಿಕ ಮತ್ತು ಕೌಟುಂಬಿಕ ವ್ಯವಸ್ಥೆಗೆ ಪೆಟ್ಟು ನೀಡುತ್ತಿದೆ ಎಂದು ಮಾಜಿ ಸಂಸದ ಎಸ್.ಪಿ.ಮುದ್ದಹನುಮೇಗೌಡ ವಿಷಾಧ ವ್ಯಕ್ತಪಡಿಸಿದರು.


ತಾಲ್ಲೂಕಿನ ಸೋಮೇನಹಳ್ಳಿ ಗ್ರಾಮದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಶತಾಯುಷಿ ರೈತ ಮಹಿಳೆ ರಂಗಮ್ಮನವರ ಶತಮಾನೋತ್ಸವ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.


ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕಾಗಿ ಸಾಕಷ್ಟು ಸಾರ್ವಜನಿಕ ಹಾಸ್ಟೆಲ್ಗಳು ಹುಟ್ಟಿಕೊಳ್ಳುತ್ತಿವೆ ಅವುಗಳನ್ನೂ ಮೀರಿಸಿದ ರೀತಿ ವೃದ್ಧಾಶ್ರಮಗಳು ಬೆಳೆಯುತ್ತಿವೆ. ದೊಡ್ಡ ಶ್ರೀಮಂತರುಗಳಿಗೆ ಅನುಕೂಲವಾಗುವ ರೀತಿಯಲ್ಲಿ ನಗರ, ಪಟ್ಟಣಗಳಲ್ಲಿ ಹೈಟೆಕೆ ವೃದ್ದಾಶ್ರಮಗಳು ಸ್ಥಾಪಿತವಾಗುತ್ತಿರುವುದನ್ನು ನೋಡಿದರೆ ದಿಗಿಲು ಹುಟ್ಟಿಸುತ್ತದೆ. ಇದಕ್ಕೆ ಕಾರಣ ಸಮಾಜದಲ್ಲಿ ಹಿರಿಯರು, ಅಜ್ಜ, ಅಜ್ಜಿ, ತಂದೆ ತಾಯಿಯರನ್ನು ಗೌರವದಿಂದ ಅವರೆಗೆ ನೋವಾಗದಂತೆ ನೋಡಿಕೊಳ್ಳಬೇಕು ಎಂಬ ಮನಸ್ಥಿತಿ ಕೌಟುಂಬಿಕ ವ್ಯವಸ್ಥೆಯೊಳಗೆ ಕಣ್ಮರೆಯಾಗಿರುವುದೇ ಸಾಕ್ಷಿ ಎಂದರು.


ನಮ್ಮ ಪರಂಪರೆ ಹಾಗು ಸಂಸ್ಕೃತಿಯ ಒಂದು ಭಾಗವಾಗಿದ್ದು ಅವಿಭಕ್ತ ಕುಟಂಬಗಳಲ್ಲಿ ಸಂಬಂಧ, ಬಾಂಧವ್ಯ, ಪ್ರೀತಿ, ಸಹಕಾರ, ಜವಬ್ದಾರಿ, ಗೌರವದಂತಹ ಮೌಲ್ಯಗಳು ವಿನಾಶದತ್ತ ಸಾಗುತ್ತಿರುವುದರಿಂದಲೇ ವೃದ್ದಾಶ್ರಮಗಳ ಹುಟ್ಟಿಗೆ ಇಂಬು ನೀಡುತ್ತಿವೆ.


ಹೆತ್ತವರನ್ನು ಸಾಕುವುದು ನಮ್ಮ ಜವಬ್ದಾರಿಯಲ್ಲ ಅನ್ನುವ ಮಟ್ಟಕ್ಕೆ ನಮ್ಮ ಜನಾಂಗ ಬಂದು ನಿಂತು ಬಿಟ್ಟಿದ. ಇತ್ತೀಚಿಗಂತೂ ಕೆಲವು ಮಕ್ಕಳು ವೃದ್ದಾಶ್ರಮಗಳಿಗೆ ಪೋಷಕರನ್ನು ದೂಡಿ ಸತ್ತಾಗ ಶವ ಸಂಸ್ಕಾರಕ್ಕೂ ಬರಲಾಗದೆಂದು ಅದಕ್ಕೆ ಬೇಕಾದ ಹಣವನ್ನು ಮುಂಗಡವಾಗಿ ಕಟ್ಟುವ ಮಕ್ಕಳೂ ಇದ್ದಾರೆ ಎಂದು ವಿಷಾದಿಸಿದರು.
ತಂದೆ, ತಾಯಿ, ಅಜ್ಜ, ಅಜ್ಜಿ ಹೀಗೆ ಹಿರಿಯನ್ನು ಸಾಕಿ ಸಲಹುವ ಪರಂಪರೆ ಗ್ರಾಮೀಣ ಪ್ರದೇಶಗಳಲ್ಲಿ ಮಾತ್ರ ಕಾಣಲು ಸಾದ್ಯ ಎಂದರು.

ಹಾಗಾಗಿ ಪ್ರತಿಯೊಬ್ಬರಿಗೂ ತಮ್ಮ ಜೀವನದಲ್ಲಿ ಸಿಗುವ ಒಳ್ಳೆಯ ಅವಕಾಶವೆಂದರೆ ಹೆತ್ತವರನ್ನು ಕೊನೆಯ ತನಕ ಸೇವೆ ಮಾಡುವುದೇ ಆಗಿದೆ.
ಹಾಗಾಗಿ ರಂಗಮ್ಮನವರ ಸಾರ್ಥಕ ಬದುಕಿನ್ನು ವಿ.ಟಿ.ವೆಂಕಟರಾಮಯ್ಯ ಅವರು ಒಂದು ಕೃತಿಯ ರೂಪಿದಲ್ಲಿ ಕಟ್ಟಿಕೊಡುವ ಮೂಲಕ ಮುಂದು ತಲೆಮಾರುಗಳಿಗೆ ಅಜ್ಜಿಯ ನೆನೆಪುಗಳು ಶಾಶ್ವತವಾಗಿ ಉಳಿಯುವಂತೆ ಮಾಡಿದ್ದಾರೆಂದು ಶ್ಲಾಘಿಸಿದರು.


ಮಾಜಿ ಶಾಸಕ ಜಯರಾಮ್ ಎ.ಎಸ್. ಮಾತನಾಡಿ, ನಾವೆಲ್ಲಾ ಅವಿಭಕ್ತ ಕುಟಂಬದಲ್ಲಿ ಬದುಕಿ ಬಂದವರು. ಐ.ಎ.ಎಸ್, ಕೆ.ಎ.ಎಸ್, ಐಪಿಎಸ್ ಓದಿರು ಹಾಗು ವಿದೇಶಗಳಲ್ಲಿ ದುಡಿಯುತ್ತಿರುವ ಕೆಲ ಮಕ್ಕಳು ತಮ್ಮ ತಂದೆ, ತಾಯಿಯರನ್ನು ವೃದ್ದಾಶ್ರಮಕ್ಕೆ ದೂಡುತ್ತಿರುವ ಪರಿಯನ್ನು ನೋಡಿದರೆ ಈ ಸಮಾಜ ಎತ್ತ ಸಾಗುತ್ತಿದೆ ಎಂಬ ಸಂಗತಿ ಭಯ ಹುಟ್ಟಿಸುತ್ತಿದೆ ಎಂದು ಮರುಗಿದರು.


ಇದೇ ವೇಳೆ ಶತಾಯುಷಿ ರಂಗಮ್ಮನವರ ಬದುಕು ಕುರಿತು ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ವಿ.ಟಿ.ವೆಂಕಟರಾಮಯ್ಯ ಬರೆದಿರುವ ‘ಬೆವರ ಬದುಕು’ ಕೃತಿ ಬಿಡುಗಡೆ ಮಾಡಲಾಯಿತು. ಶಿವಾರ ಉಮೇಶ್ ಅವರ ಜಾನಪದ ಗಾಯನ ಎಲ್ಲರ ಮೆಚ್ಚುಗೆ ಪಡೆಯಿತು.

ಕಾರ್ಯಕ್ರಮಕ್ಕೆ ಬಂದಿದ್ದ ಎಲ್ಲರಿಗೂ ಸಿಹಿ ಊಟದ ವ್ಯವಸ್ಥೆ ಕಲ್ಪಿಸಲಾಗಿತ್ತು. ರಂಗಾಪುರ, ಕೆರೆಗೋಡಿಯ ಗುರುಪರದೇಶಿ ಕೇಂದ್ರ ಮಹಾಸ್ವಾಮಿಜಿಗಳು ಹಾಗು ಗುರುಕುಲಾನಂದಾಶ್ರಮದ ಕರಿಬಸವದೇಶಿ ಕೇಂದ್ರ ಮಹಾಸ್ವಾಮೀಜಿಗಳ ಆಶೀರ್ವಚನ ನೀಡಿದರು.


ಸಮಾರಂಭದಲ್ಲಿ ಮಾಜಿ ವಿಧಾನ ಪರಿಷತ್ ಸದಸ್ಯ ಬೆಮೆಲ್ ಕಾಂತರಾಜು, ನಿವೃತ್ತ ಜಂಟಿ ನಿರ್ದೇಶಕ ಎಚ್.ಬಿ.ದಿನೇಶ್, ಬಿಜೆಪಿ ಒ.ಬಿಸಿ ಕಾರ್ಯಕಾರಣಿ ಸದಸ್ಯ ಎಸ್.ಪಿ ಚಿದಾನಂದ್, ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ವಿ.ಟಿ.ವೆಂಕಟರಾಮಯ್ಯ, ಪಟ್ಟಣ ಪಂಚಾಯಿತಿ ಸದಸ್ಯ ಚಿದಾನಂದ್, ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷ ಮೃತ್ಯುಂಜಯ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಎಂ.ನಾಗರಾಜು, ಪ್ರೊ.ಕೆ.ಪುಟ್ಟರಂಗಪ್ಪ, ರಂಗಮ್ಮನವರ ಮೊಮ್ಮಗ ನಂದೀಶ್, ಹಾವಾಳ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಎಚ್.ಆರ್.ಶಿವಕುಮಾರ್, ರೈತಸಂಘದ ಅಧ್ಯಕ್ಷ ಶ್ರೀನಿವಾಸ್ ಗೌಡ ಮತ್ತು ಕುಟುಂಬದವರು ಪಾಳ್ಗೊಂಡಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?