Saturday, July 27, 2024
Google search engine
Homeಜಸ್ಟ್ ನ್ಯೂಸ್ರೈತ ಮಹಿಳೆ ರಂಗಮ್ಮನವರ ಶತಮಾನೋತ್ಸವ ಆಚರಣೆ

ರೈತ ಮಹಿಳೆ ರಂಗಮ್ಮನವರ ಶತಮಾನೋತ್ಸವ ಆಚರಣೆ

ತುರುವೇಕೆರೆ: ತಂದೆ, ತಾಯಿ ಹಾಗು ಹಿರಿಯ ನಾಗರಿಕರ ಬಗ್ಗೆ ಸಮಾಜದಲ್ಲಿ ಗೌರವ ಭಾವನೆ ಮೂಡಿಸುವ ಸದಾಶಯಗಳೊಂದಿಗೆ ಶತಾಯುಷಿ ರೈತ ಮಹಿಳೆ ರಂಗಮ್ಮನವರ ಶತಮಾನೋತ್ಸವ ಸಮಾರಂಭವನ್ನು ತಾಲ್ಲೂಕಿನ ಸೋಮೇನಹಳ್ಳಿ ಗೇಟ್ ಬಳಿ ಡಿ.31 ರಂದು ಹಮ್ಮಿಕೊಳ್ಳಲಾಗಿದೆ ಎಂದು ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ವಿ.ಟಿ.ವೆಂಕಟರಾಮಯ್ಯ ತಿಳಿಸಿದರು.


ತಾಲ್ಲೂಕಿನ ಸೋಮೇನಹಳ್ಳಿ ಗ್ರಾಮದಲ್ಲಿ ಶುಕ್ರವಾರ ಶತಾಯುಷಿ ರೈತ ಮಹಿಳೆ ರಂಗಮ್ಮನವರ ಶತಮಾನೋತ್ಸವ ಸಮಾರಂಭದ ಆಹ್ವಾನ ಪತ್ರಿಕೆ ಬಿಡುಗಡೆಗೊಳಿಸಿ ಮಾತನಾಡಿದರು.


ಸೋಮೇನಹಳ್ಳಿ ದಿವಂಗತ ರಂಗಪ್ಪನವರ ಧರ್ಮ ಪತ್ನಿ ರಂಗಮ್ಮನವರಿಗೆ 106 ವರ್ಷಗಳ ತುಂಬು ಜೀವನ ನಡೆಸಿರುವ ಹಿನ್ನೆಲೆಯಲ್ಲಿ ಅವರ ಶತಮಾನೋತ್ಸವ ಕಾರ್ಯಕ್ರಮವನ್ನು ಗೆಳೆಯರು, ಕುಟುಂಬದವರು ಮತ್ತು ಗ್ರಾಮಸ್ಥರೊಂದಿಗೆ ಕೂಡಿ ಸಮಾರಂಭವನ್ನು ಮಾಡಲು ಉದ್ದೇಶಿಸಲಾಗಿದೆ.


ಇತ್ತೀಚಿನ ದಿನಗಳಲ್ಲಿ ತಂದೆ, ತಾಯಿಯವರನ್ನು ಸ್ವತಃ ಮಕ್ಕಳೇ ನಿರ್ಲಕ್ಷ್ಯ ಮಾಡಿ ವೃದ್ದಾಶ್ರಮಗಳಿಗೆ ದೂಡುತ್ತಿರುವ ಹೊತ್ತಿನಲ್ಲಿ ಗ್ರಾಮದ ಯುವ ಜನತೆಗೆ ಹೆತ್ತವರ ಬಗ್ಗೆ ಗೌರವ ಭಾವ ಮೂಡಿಸಲು ಸಾದ್ಯವಾಗಲಿದೆ ಎಂಬ ಆಶಯಗಳೊಂದಿಗೆ ಇಂತಹ ಕಾರ್ಯಕ್ರಮಗಳು ಅಗತ್ಯ.


ರಂಗಮ್ಮನವರು ಮಕ್ಕಳ ಭವಿಷ್ಯಕ್ಕಾಗಿ ತಮ್ಮ ಇಡೀ ಸುಖ ಸಂತೋಷಗಳನ್ನು ಬದಿಗಿಟ್ಟು ದಣಿವರಿಯ ದುಡಿಮೆ ಹಾಗು ಸಮಾಜದಲ್ಲಿ ಹೇಗೆ ಗೌರವಯುತವಾಗಿ ಬಾಳಿದರು ಎಂಬ ವಿಚಾರಗಳನ್ನೊಳಗೊಂಡ ಜೀವನ ಚರಿತ್ರೆಯ ಪುಸ್ತಕವನ್ನು ಇದೇ ವೇದಿಕೆಯಲ್ಲಿ ಗಣ್ಯರು ಲೋಕಾರ್ಪಗೊಳಿಸಲಿದ್ದಾರೆ. ಅಂದಿನ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯ ಗ್ರಾಮಸ್ಥರು, ತಾಲ್ಲೂಕಿನ ಯುವಕ ಮಿತ್ರರರು ಆಗಮಿಸಬೇಕೆಂದು ಮನವಿ ಮಾಡಿದರು,
ಶತಾಯುಷಿ ರಂಗಮ್ಮನವರ ಮೊಮ್ಮಗ ನಂದೀಶ್ ಮಾತನಾಡಿ, ಮಕ್ಕಳು, ಮೊಮ್ಮಕ್ಕಳು, ಮುಮ್ಮಕ್ಕಳನ್ನು ಸಾಕಿ ಸಲವಿರುವ ರಂಗಮ್ಮನವರು ಇಂದಿಗೂ ಆರೋಗ್ಯವಾಗಿದ್ದು ಮನೆಯ ಒಂದಲ್ಲಾ ಒಂದು ಚಟುವಟಿಕೆಯಲ್ಲಿ ಕ್ರಿಯಾಶೀಲರಾಗಿರುತ್ತಾರೆ. ಇದೇ ಕಾರ್ಯಕ್ರಮದಲ್ಲಿ ತಾಲ್ಲೂಕಿನ ಶತಾಯುಷಿಗಳನ್ನು ಗುರುತಿಸಿ ಸನ್ಮಾನಿಸಲಾಗುವುದು.
ಭಾನುವಾರ ಬೆಳಗ್ಗೆ 11 ಗಂಟೆಗೆ ನಡೆಯುವ ಕಾರ್ಯಕ್ರಮಕ್ಕೆ ಆದಿಚುಂಚನಗಿರಿ ಪೀಠಾಧ್ಯಕ್ಷರಾದ ನಿರ್ಮಲಾನಂದನಾಥ ಸ್ವಾಮಿ, ರಂಗಾಪುರ, ಕೆರೆಗೋಡಿಯ ಗುರುಪರದೇಶಿ ಕೇಂದ್ರ ಮಹಾಸ್ವಾಮಿಜಿಗಳು ದಿವ್ಯ ಸಾನ್ನಿಧ್ಯ ವಹಿಸಲಿದ್ದು. ಗುರುಕುಲಾನಂದಾಶ್ರಮದ ಇಮ್ಮಡಿ ಕರಿಬಸವ ದೇಶಿಕೇಂದ್ರ ಸ್ವಾಮೀಜಿ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ, ಪ್ರಸನ್ನನಾಥ ಸ್ವಾಮಿ ಆಶೀರ್ವಚನ ನೀಡಲಿದ್ದು, ‘ಶತಾಯುಷಿ ರಂಗಮ್ಮಾಜಿ ಕೃತಿ’ಯನ್ನು ಮಾಜಿ ಸಂಸದ ಎಸ್.ಪಿ.ಮುದ್ದಹನುಮೇಗೌಡ ಬಿಡುಗಡೆ ಮಾಡಲಿದ್ದಾರೆ. ಪ್ರೊ.ಕೆ.ಪುಟ್ಟರಂಗಪ್ಪ ಪ್ರಾಸ್ತಾವಿಕ ನುಡಿ ನುಡಿಯಲಿದ್ದು, ಮಾಜಿ ಶಾಸಕ ಜಯರಾಮ್ ಎ.ಎಸ್ ಅಧ್ಯಕ್ಷತೆ ವಹಿಸಲಿದ್ದಾರೆ.
ಮಾಜಿ ವಿಧಾನ ಪರಿಷತ್ ಸದಸ್ಯ ಬೆಮೆಲ್ ಕಾಂತರಾಜು ಶತಾಯುಷಿ ರಂಗಮ್ಮನವರಿಗೆ ಗೌರವಾರ್ಪಣೆ ನೆರವೇರಿಸಲಿದ್ದಾರೆ. ನಿವೃತ್ತ ಜಂಟಿ ನಿದರ್ೇಶಕ ಎಚ್.ಬಿ.ದಿನೇಶ್ ಸಾಧಕರನ್ನು ಗೌರವಿಸಲಿದ್ದಾರೆ. ತಹಶೀಲ್ದಾರ್ ವೈ.ಎಂ.ರೇಣುಕುಮಾರ್, ಬಿಜೆಪಿ ಒ.ಬಿಸಿ ಕಾರ್ಯಕಾರಣಿ ಸದಸ್ಯ ಎಸ್.ಪಿ ಚಿದಾನಂದ್ ಸೇರಿದಂತೆ ಗಣ್ಯರು ಭಾಗವಹಿಸಲಿದ್ದಾರೆ. ಇದೇ ವೇಳೆ ಶಿವಾರ ಉಮೇಶ್ ಅವರಿಂದ ಜಾನಪದ ಗಾಯನ ಕಾರ್ಯಕ್ರಮ ನಡೆಯಲಿದೆ ಎಂದರು.
ಈ ಸಂದರ್ಭದಲ್ಲಿ ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷ ಮೃತ್ಯುಂಜಯ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಎಂ.ನಾಗರಾಜು, ಹಾವಾಳ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಎಚ್.ಆರ್.ಶಿವಕುಮಾರ್, ರೈತಸಂಘದ ಅಧ್ಯಕ್ಷ ಶ್ರೀನಿವಾಸ್ ಗೌಡ, ಸೋಮೇನಹಳ್ಳಿ ರಘು ಮತ್ತು ಕುಟುಂಬಸ್ಥರು, ಗೆಳೆಯರು ಇದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?