ತುಮಕೂರು: ಕೃಷ್ಣಾಕೊಳ್ಳದ ನೀರಿನ ಮೇಲಿನ ಹಕ್ಕೋತ್ತಾಯವನ್ನು ಜಿಲ್ಲಾ ಸಮ್ಮೇಳನದಲ್ಲಿ ಮಂಡಿಸುವ ಮೂಲಕ ಕಸಾಪ ಅಧ್ಯಕ್ಷ ಕೆ.ಎಸ್.ಸಿದ್ದಲಿಂಗಪ್ಪ ಜಿಲ್ಲೆಯ ನೀರಾವರಿ ಹೋರಾಟಕ್ಕೆ ಹೊಸ ದಿಕ್ಕು ತೋರಿದರು.
ಸಮ್ಮೇಳನದ ಸಮಾರೋಪದಲ್ಲಿ ಹಲವು ನಿರ್ಣಯಗಳನ್ನು ಮಂಡಿಸಿದರು. ಕಲಾ ಗ್ರಾಮಕ್ಕೆ 25 ಎಕರೆ ಭೂಮಿ ನೀಡುವುದು ಸಹ ಹಕ್ಕೋತ್ತಾಯದಲ್ಲಿ ಸೇರಿದೆ.
ಇದಕ್ಕೂ ಮುನ್ನ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಬೆಂಗಳೂರಿ ಕೇವಲ ಕನ್ನಡದ ನೆಲವಾಗಿಲ್ಲ. ಇಡೀ ವಿಶ್ವದಲ್ಲಿ ಬೆಂಗಳೂರಿಗೆ ಬಗ್ಗೆ ಮಾತನಾಡುತ್ತಾರೆ. ಈ ರೀತಿಯ ವರ್ತನೆ ಸರಿಯಲ್ಲ.ಅದನ್ನು ಸರಕಾರ ಸಹಿಸುವುದಿಲ್ಲ.ಸುಗ್ರಿವಾಜ್ಞೆಯ ಮೂಲಕ ಕನ್ನಡ ನಾಮಫಲಕ ಅಳವಡಿಸುವ ಕಾನೂನು ತಂದಿದ್ದೇವೆ. ನಮಗೆ ಯಾರು ಹೇಳಬೇಕಾಗಿಲ್ಲ. ಇದು ಕನ್ನಡಿಗರ ಸರಕಾರ. ಕನ್ನಡದ ನೆಲ, ಜಲ, ಭಾಷೆಯನ್ನು ರಕ್ಷಿಸದೇ ಹೋದರೆ ನಾವು ಯಾರು ಸರಕಾರದಲ್ಲಿ ಇರುವುದು ತರವಲ್ಲ.ಹಾಗಾಗಿ ಕನ್ನಡ ರಕ್ಷಣೆಗೆ ಸರಕಾರದ ಬದ್ದವಾಗಿದೆ. ಕನ್ನಡ ಕಲಾ ಗ್ರಾಮಕ್ಕೆ 5 ಎಕರೆ ಭೂಮಿ ನೀಡಲು ಜಿಲ್ಲಾಡಳಿತ ಸಿದ್ದವಿದೆ.ನೀರಾವರಿಗೆ ಅನೇಕ ರೀತಿಯ ಹೋರಾಟ ನಡೆದಿದೆ. ಮೇಕೆದಾಟು ಯೋಜನೆಗೆ ಸಾವಿರಾರು ಜನ ಪಾದಯಾತ್ರೆ ನಡೆಸಿದ್ದೇವೆ.ಎತ್ತಿನಹೊಳೆ ಯೋಜನೆ ನಿಧಾನವಾದರೂ ನಿರ್ಧಿಷ್ಟ ಅವಧಿಯಲ್ಲಿ ಯೋಜನೆ ಪೂರ್ಣಗೊಳ್ಳಲಿದೆ. ಮುಂದಿನ ಎರಡು ವರ್ಷದಲ್ಲಿ ಎತ್ತಿನಹೊಳೆಯ ನೀರು ಈ ಭಾಗಕ್ಕೆ ಹರಿಯಲಿದೆ ಎಂದು ಭರವಸೆ ನೀಡಿದರು.
ಸಹಕಾರ ಸಚಿವ ಕೆ.ಎನ್.ರಾಜಣ್ಣ, ಶಾಸಕರಾದ ಬಿ.ಸುರೇಶಗೌಡ ಇತರರು ಇದ್ದರು.