Friday, June 21, 2024
Google search engine
Homeಜಸ್ಟ್ ನ್ಯೂಸ್ಶೇಷಾದ್ರಿಪುರಂ ಶಿಕ್ಷಣ ಸಂಸ್ಥೆ ನಳಂದಾ,ತಕ್ಷಶಿಲಾ ವಿ.ವಿಗೆ ಸಮ: ಮೆಚ್ಚುಗೆ

ಶೇಷಾದ್ರಿಪುರಂ ಶಿಕ್ಷಣ ಸಂಸ್ಥೆ ನಳಂದಾ,ತಕ್ಷಶಿಲಾ ವಿ.ವಿಗೆ ಸಮ: ಮೆಚ್ಚುಗೆ

ಬೆಂಗಳೂರು: ಶೇಷಾದ್ರಿಪುರಂ ಶಿಕ್ಷಣದತ್ತಿ ಸಂಸ್ಥೆಯು ನಳಂದಾ ಹಾಗೂ ತಕ್ಷಶಿಲಾ ವಿಶ್ವವಿದ್ಯಾಯಲಕ್ಕೆ ಸರಿಸಮನಾಗಿ ಕೆಲಸ ನಿರ್ವಹಿಸುತ್ತಾ ಇದೆ ಎಂದು ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಪರಿಷತ್ ನ ಉಪಾಧ್ಯಕ್ಷರಾದ ಎಸ್.ಆರ್.ನಿರಂಜನ್ ಮೆಚ್ಚುಗೆ ಸೂಚಿಸಿದರು.

ಶೇಷಾದ್ರಿಪುರಂ ಶಿಕ್ಷಣ ದತ್ತಿಯು ಯಲಹಂಕದ ಶೇಷಾದ್ರಿಪುರಂ  ಕಾಲೇಜಿನಲ್ಲಿ ಶನಿವಾರ ಆಯೋಜಿಸಿದ್ದ ೨೫ನೆಯ ವಾರ್ಷಿಕ ಸ್ನೇಹ ಸಮ್ಮಿಲನ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.

ಅಂದಿನ ವಿದ್ಯಾಲಯಗಳಾದ ನಳಂದಾ, ತಕ್ಷಶಿಲಾವು ಬಹುಶಿಸ್ತೀಯ ಶಿಕ್ಷಣ ನೀಡುತ್ತಿದ್ದವು. ಈ ಕಾರಣದಿಂದ ವಿವಿಧ ದೇಶಗಳಿಂದ ವಿದ್ಯಾರ್ಥಿಗಳನ್ನು ಆಕರ್ಷಿಸಿತ್ತು. ದೇಶ- ವಿದೇಶದ ವಿದ್ಯಾರ್ಥಿಗಳು ಅಲ್ಲಿ ವ್ಯಾಸಂಗ ಮಾಡುತ್ತಿದ್ದರು.ಇಂಥದೇ ಮಹತ್ವ ಶೇಷಾದ್ರಿಪುರಂ ಶಿಕ್ಷಣ ಸಂಸ್ಥೆಗಳಿಗೂ ಇದೆ ಎಂದು ಅಭಿಪ್ರಾಯಪಟ್ಟರು.

ಶಿಕ್ಷಣದ ವಿಚಾರಕ್ಕೆ ಬಂದರೆ ನಮ್ಮ ದೇಶಕ್ಕೆ ಸಮೃದ್ದವಾದ ಇತಿಹಾಸವಿದೆ. ಡಾ. ಅಬ್ದುಲ್ ಕಲಾಂ, ಎಂ ಎಸ್ ಸ್ವಾಮಿನಾಥನ್ ಅವರ ಜೀವನ ನಮಗೆ ಮಾದರಿಯಾಗಬೇಕು ಎಂದರು.

ಮಕ್ಕಳನ್ನು ಮೊಬೈಲ್ ತಂತ್ರಜ್ಞಾನದಿಂದ ದೂರವಿಡಬೇಡಿ, ಹಿರಿಯರ ಮಾರ್ಗದರ್ಶನದಲ್ಲಿ ಮಕ್ಕಳಿಗೆ ಮೊಬೈಲ್ ತಂತ್ರಜ್ಞಾನದ ಶಿಕ್ಷಣದ ಅವಶ್ಯಕತೆ ಇದೆ ಎಂದು ಹೇಳಿದರು.

ಶಿಕ್ಣದಲ್ಲಿ ಹೊಸ ಹೊಸ ತಂತ್ರಜ್ಞಾನ ಮತ್ತು ಮಾಹಿತಿಗಳನ್ನು, ವಿಧಾನಗಳನ್ನು ಅಳವಡಿಸಿಕೊಳ್ಳಬೇಕು. ಕಷ್ಟವಾಗಿರುವುದನ್ನು ಕೈ ಬಿಡುವುದಲ್ಲ, ಅಳವಡಿಸಿಕೊಳ್ಳಬೇಕು. ನಮ್ಮ ದೇಶದಲ್ಲಿ ಉತ್ತಮ ವಿದ್ಯಾರ್ಥಿಗಳಿದ್ದಾರೆ ಅವರಿಗೆ ಸರಿಯಾದ ಮಾರ್ಗ ತೋರುವ ಜವಬ್ದಾರಿ ಶಿಕ್ಷಕರ ಮೇಲಿದೆ ಎಂದು ಅಭಿಪ್ರಾಯ ಪಟ್ಟರು. ಡಾ.ಅಬ್ದುಲ್ ಕಲಾಂ ಅವರ ” ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಜೊತೆ ಜೊತೆಯಲ್ಲಿ ಕಲಿಯುತ್ತಾ ಸಾಗಬೇಕು” ಎಂಬ ಮಾತನ್ನು ಸ್ಮರಿಸಿದರು.

ಶೇಷಾದ್ರಿಪುರಂ ಶಿಕ್ಷಣದತ್ತಿಯ ಗೌರವ ಪ್ರಧಾನ ಕಾರ್ಯದರ್ಶಿಗಳಾದ ನಾಡೋಜ ಡಾ. ವೂಡೇ ಪಿ ಕೃಷ್ಣ ಅವರು ಪ್ರಾಸ್ತಾವಿಕ ನುಡಿಗಳನ್ನಾಡಿದರು.

ಕಾರ್ಯಕ್ರಮದಲ್ಲಿ ಶೇಷಾದ್ರಿಪುರಂ ಶಿಕ್ಷಣ ಸಂಸ್ಥೆಯಲ್ಲಿ ಸೇವೆ ಸಲ್ಲಿಸಿ ಸೇವಾ ನಿವೃತ್ತರಾದವರಿಗೆ ಸೇವಾ ಪ್ರಶಸ್ತಿ ಪ್ರಧಾನ ಮಾಡಿ ಸನ್ಮಾನಿಸಲಾಯಿತು.

ಶಿಕ್ಷಣದತ್ತಿಯ ಅಧ್ಯಕ್ಷರಾದ ಎನ್. ಆರ್ ಪಂಡಿತಾರಾಧ್ಯ ಅವರು ಅಧ್ಯಕ್ಷೀಯ ನುಡಿಗಳನ್ನಾಡಿದರು.

ಟ್ರಸ್ಟಿಗಳಾದ ಶೇಷನಾರಾಯಣ್ ಎಸ್, ಹೆಂಜಾರಪ್ಪ ಟಿ ಎಸ್, ಪಾರ್ಥಸಾರಥಿ, ಎಂ ಎಸ್ ನಟರಾಜು, ಅನಂತರಾಮು, ಕೃಷ್ಣಸ್ವಾಮಿ.ಕೆ. ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಪೋಟೋ ಕೃಪೆ: ಬಾಲಾಜಿಶರ್ಮ

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?