Saturday, May 9, 2026
Google search engine
Home Blog Page 137

ಹೆಗಲ‌ ಮೇಲೆ ಶಾಲೆಗೆ ಒತ್ತು ನಡೆದ ಅಪ್ಪನೆಂದರೆ ನನಗೆ ಗರ್ವ

0

ಶಿಲ್ಪಾ ಎಂ.


ಇಂದು ಅಪ್ಪಂದಿರ ದಿನ ಅಂದರೆ ಸ್ವಾಭಿಮಾನದ ದಿನ ಕಾರಣ ಅಪ್ಪ ಅಂದರೆ ನೆನಪಾಗುವುದೆ “ಸ್ವಾಭಿಮಾನ ”
ನನ್ನ ಮಗನಿಗೆ ನಾವು ಇಂದು ತೋರುವ ಪ್ರೀತಿ ಕಾಳಜಿ ಶಿಸ್ತು. ಆಗ ನನ್ನ ಅಪ್ಪಾಜಿ ನಮ್ಮನ್ನು ಬೆಳೆಸಿದ ರೀತಿ ಮತ್ತು ಕಾಳಜಿಗೆ ಸಮವಿಲ್ಲ ಅನಿಸುತ್ತದೆ.

ಪ್ರಾಥಮಿಕ ಶಾಲೆಗೆ ನಾವು ಬರಲು ಒಂದು ಕಿ.ಲೋ ಮೀಟರ್ ನೆಡೆದು ಬರಬೇಕಿತ್ತು ದಿನಾಲು ನೆಡೆದು ಬರುತ್ತಿದ್ದ ನಮಗೆ ಕಷ್ಟವೇನು ಅನಿಸುತ್ತಿರಲಿಲ್ಲ. ಆದರೆ ಮಳೆ ಬಂದರೆ ಕೆರೆ ಕೋಡಿ ಹೋದರೆ ನಾವೇ ದಾರಿಯಲ್ಲಿ ಮುಳುಗುವಷ್ಟು ನೀರು ಆಗ ಶಾಲೆಗೆ ಬರುವುದೇ ಕಷ್ಟ. ಶಾಲೆ ತಪ್ಪಿಸದ ನನ್ನಪ್ಪ ನನ್ನ ಮತ್ತು ತಮ್ಮನನ್ನು ಎರಡು ಹೆಗಲ ಮೇಲು ಹೊತ್ತು ಶಾಲೆಗೆ ತಲುಪಿಸುತ್ತಿದ್ದರು.

ಪ್ರತಿ ಹಬ್ಬಕ್ಕೂ ಬಟ್ಟೆ ತರಲು ಆಗದಿದ್ದರೂ ಉಗಾದಿಗೂ ಮಹಾನವಮಿಗೂ ಬಟ್ಟೆಯನ್ನು ತಂದು ನಾವು ಉಟ್ಟು ಸಂಭ್ರಮಿಸುವಾಗ ಅವರೇ ನಮ್ನ ಖುಷಿಗೆ ಕಳೆದುಹೋಗುತ್ತಿದ್ದರು.

ಶಾಲೆಯಲ್ಲಿ ಹೇಳಿದ ಪುಸ್ತಕ ಪೆನ್ನು ತರಲು ಹೇಳಿದಾಗ ದುಡ್ಡಿಲ್ಲದೆ ಚಡಪಡಿಸಿ ನಮ್ಮ ಅಳು ನೋಡಲಾಗದೆ ಎಲ್ಲಾದರೂ ಸಾಲ ಮಾಡಿ ನಮಗೆ ಬೇಕಾದ ವಸ್ತು ಕೊಡಿಸುವ ಅಪ್ಪ ಎಲ್ಲೂ ನಮ್ಮ ಮುಂದೆ ಕಷ್ಟ ತೋರಿಸಲೇ ಇಲ್ಲ.

ಉಷಾರಿಲ್ಲದ ನನ್ನನ್ನು ಮಧ್ಯ ರಾತ್ರಿ ಹೊತ್ತು ದೇವಸ್ಥಾನಕ್ಕೆ ಹೋಗಿ ದೇವರಲ್ಲಿ ಬೇಡಿದ ಆ ಕೈಗಳು ಕಣ್ಣಲ್ಲಿನ ಮುಗ್ದತೆ ಇಂದು ಕಣ್ಣನ್ನು ತೇವವಾಗಿತ್ತವೆ.

ಕಾಲೇಜಿಗೆ ನಗರಕ್ಕೆ ಸೇರಿಸಿ ದುಬಾರಿ ಫೀ ಕಟ್ಟಿ ಓದಲು ಬಿಟ್ಟು ಹೋಗುವಾಗ ನಾನು ಬಿಕ್ಕಿ ಬಿಕ್ಕಿ ಅತ್ತಾಗ ಕಣ್ಣಲ್ಲಿನ ದುಖಃ ಅದುಮಿ ಗಟ್ಟಿ ಮನಸ್ಸು ಮಾಡಿ ಬಿಟ್ಟು ಹೋಗಿದ್ದರು. ವಾರಕ್ಕೆ ಒಮ್ಮೆ ಬಂದು ಕೈ ಯಲ್ಲಿ ಇದ್ದಷ್ಟು ದುಡ್ದು ಇಟ್ಟು ಚೆನ್ನಾಗಿ ಓದಲು ಹೇಳಿ ಹೋಟೆಲ್ನಲ್ಲಿ ಬಿಸಿ ಮಸಾಲಾ ದೋಸೆ ಕೊಡಿಸಿ ತಿನ್ನಿಸಿ ಹೋದ ನೆನಪು. ಪ್ರತಿ ವಾರ ಅಪ್ಪಾಜಿಯನ್ನು ಕಾಯುತ್ತಿದ್ದ ನನಗೆ ಮದುವೆ ಮಾಡಿ ಕೊಟ್ಟಾಗಲೂ ವಾರಕ್ಕೊಮ್ಮೆ ಕಾಯುವ ರೂಡಿ ಅಭ್ಯಾಸವಾಗಿತ್ತು.

ಇಂದು ನನ್ನ ಮಗನನ್ನು ತಾತನಾಗಿ ಅಪ್ಪ ಮುದ್ದಿಸುವಾಗ ನೀನು ನಮ್ಮನ್ನು ಇವನಷ್ಟು ಚೆನ್ನಾಗಿ ನೋಡಿಕೊಳ್ಳಲಿಲ್ಲ ಎಂದಾಗ ಅಪ್ಪನ ಪ್ರೀತಿಯ ನಗು ಇಂದು ನನ್ನ ಅಪ್ಪನ ಕಾಳಜಿ ಪ್ರೀತಿ ಸ್ವಾಭಿಮಾನ ನೆನಪಿಸಿಕೊಂಡಾಗ ಗವ೯ದಿಂದ ಶುಭಾಶಯ ತಲುಪಿಸಲು ಹೆಮ್ಮೆ ಆಗುತ್ತದೆ.

ಅಪ್ಪಂದಿರ ದಿನದ ವಿಶೇಷ: ನಾನು ಏನಾಗಿದ್ದೇನೋ‌ ಅದೆಲ್ಲವೂ ಅಪ್ಪನೇ…

1

ವಿಶ್ವ ಅಪ್ಪಂದಿರದ ದಿನದ ಅಂಗವಾಗಿ ಖ್ಯಾತ ವೈದ್ಯೆ, ಕವಯತ್ರಿ ಡಾ. ರಜನಿ ಅವರು ಅವರ ಅಪ್ಪನ ಕುರಿತದಾದ ಆಪ್ತ ಬರಹ ಬರೆದಿದ್ದಾರೆ.


ಜೂನ್ 20 ಅಪ್ಪಂದಿರ ದಿನ. ನಾನು ನನ್ನ ಅಪ್ಪನನ್ನು ಅಣ್ಣಾ ಎನ್ನುತ್ತಿದ್ದೆ. ಎಲ್ಲರೂ ಅಲ್ಲಿ ತಮ್ಮ ಅಪ್ಪಂದಿರನ್ನು ಹಾಗೆಯೇ ಕರೆಯುವುದು ರೂಢಿ.
ನನ್ನ ಅಪ್ಪ ಸ್ವಾಭಿಮಾನದ ಪ್ರತೀಕ ವಾಗಿದ್ದರು.
ನಾನು ಹೆಣ್ಣು ಮಗಳೆಂದು ಯಾವತ್ತೂ ಬೇಧ ಮಾಡಲಿಲ್ಲ.

ನಾನು ದೊಡ್ದವಳಾದ ದಿನ ನನ್ನನ್ನು ಅಮ್ಮ ವೆರಾಂಡದಲ್ಲಿ ಮಲಗಿಸಿದ್ದಳು. ಅಣ್ಣ ಬಂದಿದ್ದೇ , ನಾನು ನಿದ್ರೆ ಬಂದಂತೆ ನಟಿಸುತ್ತಿದ್ದೆ, ಯಾಕೇ ಇಲ್ಲಿ ಮಲಗಿಸಿದ್ದೀಯಾ? ನನ್ನ ಮಗಳನ್ನ… ಯಾವ ಸೂತಕ ? ಎಂದು ಎತ್ತಿಕೊಂಡು ನನ್ನ ಜಾಗದಲ್ಲಿ ಒಳಗಡೆ ಮಲಗಿಸಿದರು.

50 ಪೈಸೆ Readers Digest ಇದ್ದಾಗಿನಿಂದ ನನಗೆ ಇಂಗ್ಲಿಷ್ ಓದಲು ಆಸೆ ಮೂಡಿಸಿದರು. oxford English dictionary ತಂದು ಕೊಟ್ಟಿದ್ದು ನನ್ನ English ವ್ಯಾಮೋಹಕ್ಕೆ ಕಾರಣ.
10ನೇ ಕ್ಲಾಸಿನಲ್ಲೇ The Diary of Anne Frank ಪುಸ್ತಕ ಕೊಟ್ಟು ಭಾವನೆಗಳನ್ನು ಬರಹದ ಮೂಲಕ ವ್ಯಕ್ತ ಪಡಿಸಲು ಪ್ರೇರಣೆ ಆದರು.

ಉಂಡ ತಟ್ಟೆ ಎತ್ತಲೂ ಬಿಡದೆ ಬೇಟಿ ಬಚಾವೋ ಬೇಟಿ ಪಡಾವೋ ಪಾಲಿಸಿದರು.ಚೆಸ್ ಆಡಲು ಕಲಿಸಿದವರು.

ನಿವೃತ್ತಿ ನಂತರವೂ ದುಡಿದವರು. ಯಾರ ಮೇಲೂ
ಹೊಟ್ಟೆ ಕಿಚ್ಚು ಪಟ್ಟ ವರಲ್ಲ. ಮಂಡ್ಯದಿಂದ ಬಸ್ ನಲ್ಲಿ ಬೆಂಗಳೂರಿಗೆ ಬಂದು James Bond ಫಿಲಂ ತೋರಿಸಿದವರು. ನನಗೆ ಬಿರಿಯಾನಿ ರುಚಿ ಹತ್ತಿಸಿದವರು. ಅವರಿಗೆ ಮುಸ್ಲಿಂ ದೋಸ್ತಿಗಳು ಬಹಳ. ಉರ್ದು , ಗಜಲ್, ಮೇಲೆ ಇದೇ ಕಾರಣಕ್ಕೆಒಲವು.

ಮಕ್ಕಳನ್ನು ಓದಿಸಲು ಚಿನ್ನ ಮಾರಿದರೂ , ಅದೇ ದುಡ್ಡಿನಲ್ಲಿ ಜಿಲೇಬಿ ತಂದು ತಿನ್ನಿಸಿದ ನಿರ್ಲಿಪ್ತ ಭಾವ.
ಪ್ರತೀ ರಾತ್ರಿ ನಂಜನಗೂಡು ರಸಬಾಳೆ, ಚೌ ಚೌ, ಕ್ರೀಮ್ ಬಿಸ್ಕಿಟ್ , ಬೋಂಡ , ಬಜ್ಜಿ ತಂದು ತಿನ್ನಿಸಿದವರು.

ನನ್ನ ಮಾರ್ಕ್ಸ್ ಕಾರ್ಡ್ ನೋಡದೇ ನನ್ನ ಮಗಳು FIRST RANK ಅಂದವರು. ಯೂನಿವರ್ಸಿಟಿ ಫುಟ್ ಬಾಲ್ ಆಟಗಾರರು.
ನನಗೆ ಬಲವಂತವಾಗಿ ಸರ್ಕಾರಿ ಕೆಲಸಕ್ಕೆ ನೂಕಿದವರು.

Wills Filter ತರಲು ಅಂಗಡಿಗೆ ನನ್ನ ಓಡಿಸಿದವರು.
ನನಗೆ Poker ಆಡಲು ಹೇಳಿ ಕೊಟ್ಟ ವರು.
ನನ್ನ ಕೆಂಚುಗೂದಲು ಬಾಚಿ ಡಿಸೈನ್ ಹಣೆ ಬಟ್ಟು ಇಟ್ಟವರು. ಕೈ ಕಾಲು ತರಚಿಕೊಳ್ಳುತ್ತಾಳೆ ಎಂದು ಲೂನಾ ಕಲಿಯಲು ಬಿಡದವರು. paper back ಓದಲು ಬಿಡದೇ glazed pages ಪುಸ್ತಕ ಅಭ್ಯಾಸ ಮಾಡಿಸಿದವರು. ಒಂದೇ ,ಎರಡೇ.. ಜೀವನವನ್ನು ಅತಿಯಾಗಿ ವರ್ಣ ರಂಜಿತವಾಗಿ ಪ್ರೀತಿಸಿದವರು.
‘ಜಡೇ ಮುನಿ’ ಎಂಬ ಆತ್ಮಕಥೆ ಬರೆದು ಪ್ರಕಟಿಸದೇ ಹೋದವರು.

ಮುಂದಿನ ಎರಡು ಹಲ್ಲು ಬಿದ್ದಾಗ group study ಎಂದು ಹೇಳಿಸಿ ನಕ್ಕವರು. ಹಾರ್ಟ್ ಅಟ್ಯಾಕ್ ಆಗಿ ದುತ್ತೆಂದು ನಿರ್ಗಮಿಸಿದವರು. ವೆಂಟಿಲೇಟರ್ ಗೆ ಹಾಕುವ ಮುನ್ನ ರಾಮ, ರಾಮ ಎನ್ನು ಅಣ್ಣಾ ಎಂದರೆ ರಾಮ, ರಾಮ ಎಂದು ಕಡೆ ಮಾತು ಅಂದವರು. ಎಲ್ಲ ಹೆಣ್ಣು ಮಕ್ಕಳನ್ನು ಪ್ರೀತಿಸುವವರಿಗೆ ಈ ಲೇಖನ.

ಭಾನುವಾರದ ಕವಿತೆ: ಬೆಳಿಗ್ಗೆ

ಡಾ. ರಜನಿ ಅವರ ಈ ಕವನ ದೈನಂದಿನ ಜೀವನದಲ್ಲಿ ಜೀವ ಸೆಲೆ
ಎಲ್ಲೆಲ್ಲೂ ಇರುವುದನ್ನು ಗುರುತಿಸುತ್ತದೆ. ಮೇಲ್ನೋಟಕ್ಕೆ ಸರಳ ಕವನದಂತೆ ಕಂಡರೂ ಒಳ ಹೊಕ್ಕರೆ ಬದುಕು ಏನ್ನೆಂಬುದನ್ನು ಹೇಳುತ್ತದೆ.
ಬೈಕ್ ಕಾರ್ ಕುಕ್ಕರ್ ಏನೇ ಆಧುನಿಕತೆ ಬಂದರೂ ತಿನ್ನುವ ಅನ್ನ ಬದಲಾಗಲ್ಲ.
ಕೂಗುವ ಪಕ್ಷಿಗೆ ಕೊರೋನಾ ಗೊತ್ತಿಲ್ಲ.
ಬಾಗಿಲಿನ ರಂಗೋಲೆ ಹಾಕುವುದನ್ನು ಬಿಡಲ್ಲ ನಾರಿ.
ಯಾರು ಹೋದರೂ ಜೀವ ಚೈತನ್ಯ ಬತ್ತುವುದಿಲ್ಲ.
ಆಧುನಿಕತೆಗೂ ಜಿರಲೆ ಮುಕ್ತಿ ಹೊಂದಲಾಗಿಲ್ಲ.
ಜಿರಲೆ ಬದಲಾಗಲ್ಲ. ಕೆಮ್ಮಣ್ಣು ಕೊನೆಗೆ- ಇದೆಲ್ಲವನ್ನು ಕವನ ಹೇಳಿದೆ.

ಬೆಳಿಗ್ಗೆ

ಸಾವಂತಿಗೆ ,ಮಲ್ಲೇ ,ಚಂಡುವ್ವಾ
ಈರುಳ್ಳಿ ನೂರು ರೂ ಗೆ ನಾಲ್ಕು ಕೇಜಿ
ದಿಂಬಿಗೆ ಅಂಟಿದ ಮಲ್ಲಿಗೆ ವಾಸನೆ

ತೆಂಗಿನ ಮರದ ಮೇಲಿನ ಕೋಗಿಲೆ
ಕುಹೂ ಕುಹೂ…
ಯಾವುದೋ ಪಕ್ಷಿಗಳ ಚಿಲಿ ಪಿಲಿ

ಅಪರೂಪಕ್ಕೆ ಬಂದು ಸೇರಿರುವ
ಇಲಿಯ ಕೆರೆತ AC ಒಳಗೆ…
ಟಾಯ್ಲೆಟ್ನಲ್ಲಿ ಬಂದೇ ಬಂದ ಜಿರಲೆ

ಬಾತ್ ರೂಮಲ್ಲಿ ಗೋಡೆ ಮೇಲಿನ
ಸೊಳ್ಳೆ ತಿಂದು
ದಪ್ಪ ಆದ ಹಲ್ಲಿ…

ಒಗ್ಗರಣೆಗೆ ತೆಗೆದ ಕಡ್ಲೆಬೇಳೆ
ಕೊರೆದ ತೂತು..
ತೆಗೆಯದೇ ಬಿಟ್ಟ ಉಪ್ಪಿನಕಾಯಿ
ಬೂಸ್ಟ್..

ಪಕ್ಕದ ಮನೆಯಕುಕ್ಕರ್ ಸೀಟಿ
ಬೈಕ್ ರೊಂಯ್..
ನೀರಿನ ಸಪ್ಪಳ

ಆಲೂಗಡ್ಡೆಯ ಮೊಳಕೆ..
ಚಟ್ನಿಗೆ ಒಡೆದ ಕಾಯಿ
ಕೊಬ್ಬರಿ

ತಂತಿ ಮೇಲಿನ ಮಗುವಿನ
ಹುಚ್ಚೆ ಬಟ್ಟೆ…
ಒಣಗಿ ಹಾಕಿದ ಕಾಟನ್ ಮಾಸ್ಕ್

ಬಾಗಿಲಿಗೆ ಬಿದ್ದಿರುವ ಸುದ್ದಿ
ಪತ್ರಿಕೆ…
ಕರೆಂಟ್ ಬಿಲ್..

ಮೈನ್ ರೋಡಿನಿಂದ
ಆಂಬುಲೆನ್ಸ್
ಸೈರನ್..

ರಂಗೋಲೆ …ರಂಗೋಲೇ
ನುಣ್ಣನೇ
ಕೆಮ್ಮಣ್ಣು ಪುಡಿ…

ಮಳೆಗಾಲದಲ್ಲಿ ಸಾಂಕ್ರಾಮಿಕ ರೋಗ ಹರಡದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಿ;ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ಸೂಚನೆ

Public story


ತುಮಕೂರು: ಜಿಲ್ಲೆಯಲ್ಲಿ ಮಳೆಗಾಲ ಆರಂಭವಾಗಿರುವುದರಿಂದ ಮಳೆಗಾಲದಲ್ಲಿ ಸೊಳ್ಳೆಗಳಿಂದ ಹರಡುವ ಸಾಂಕ್ರಾಮಿಕ ರೋಗಗಳಾದ ಮಲೇರಿಯಾ, ಡೆಂಗ್ಯೂ, ಚಿಕುನ್ ಗುನ್ಯಾ, ಮೆದುಳುಜ್ವರ, ಆನೆಕಾಲು ರೋಗಗಳು ಹರಡದಂತೆ ನಿಯಂತ್ರಣಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಮಲೇರಿಯಾ, ಡೆಂಗ್ಯು, ಚಿಕುನ್ ಗುನ್ಯಾ ರೋಗಗಳ ನಿಯಂತ್ರಣ ಕ್ರಮ ಕುರಿತು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿಂದು ಜೂಮ್ ಆ್ಯಪ್ ಮೂಲಕ ಏರ್ಪಡಿಸಲಾಗಿದ್ದ ಅಂತರ್ ಇಲಾಖಾ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಸೊಳ್ಳೆಗಳಿಂದ ಹರಡುವ ರೋಗಗಳ ನಿಯಂತ್ರಣಕ್ಕೆ ಸಾರ್ವಜನಿಕರು ಅನುಸರಿಸಬೇಕಾದ ಕ್ರಮಗಳ ಕುರಿತು ಸಮುದಾಯಕ್ಕೆ ಆರೋಗ್ಯ ಇಲಾಖೆ ಸೇರಿದಂತೆ ಸಂಬಂಧಿಸಿದ ಇತರೆ ಇಲಾಖೆಗಳು ಹೆಚ್ಚಿನ ಅರಿವು‌ ಮೂಡಿಸಬೇಕು. ನಗರದಲ್ಲಿರುವ ಗುಂಡಿ‌ ಮತ್ತು ಕೆಸ್ಸಾರ್ಟಿಸಿ ಬಸ್ ನಿಲ್ದಾಣದಲ್ಲಿರುವ ಟೈರ್ ಗಳಲ್ಲಿ ಸೊಳ್ಳೆಗಳು ಉತ್ಪತ್ತಿಯಾಗುವ ಸಾಧ್ಯತೆಯಿದ್ದು, ನೈರ್ಮಲ್ಯತೆ ಕಾಪಾಡುವಲ್ಲಿ ಹೆಚ್ಚು ಜಾಗೃತರಾಗಬೇಕು. ಪಾಲಿಕೆ ಸೇರಿದಂತೆ ನಗರಸಭೆ, ಪಟ್ಟಣ ಪಂಚಾಯ್ತಿಗಳಲ್ಲಿಯೂ ಸ್ವಚ್ಛತೆಗೆ ಆದ್ಯತೆ ನೀಡಬೇಕು. ನೀರು ಸಂಗ್ರಹವಾಗುವ ಗುಂಡಿಗಳನ್ನು ಮುಚ್ಚಬೇಕು. ಕಸವನ್ನು ಎಲ್ಲೆಂದರಲ್ಲಿ ಎಸೆಯುವುದಕ್ಕೆ ಕಡಿವಾಣ ಹಾಕಬೇಕು.‌ ಖಾಲಿ ನಿವೇಶನ ಗಳಲ್ಲಿಯೂ ಸ್ವಚ್ಛತೆ ಕಾಪಾಡಬೇಕು. ಸೊಳ್ಳೆಗಳು ಉತ್ಪತ್ತಿಯಾಗದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಂಡು ರೋಗಗಳು ಉಲ್ಪಣವಾಗದಂತೆ ಕ್ರಮವಹಿಸಬೇಕು ಎಂದು ನಿರ್ದೇಶಿಸಿದರು.

ಕಳೆದ ಐದು ವರ್ಷಗಳಲ್ಲಿ ಜಿಲ್ಲೆಯಲ್ಲಿ ಡೆಂಗ್ಯೂ, ಮಲೇರಿಯಾ ಮತ್ತು ಚಿಕನ್ ಗುನ್ಯಾ ರೋಗಗಳ ತೀವ್ರತೆ ಇಳಿಕೆಯಾಗಿದ್ದು, 2020ನೇ ಸಾಲಿನಲ್ಲಿ 30 ಡೆಂಗ್ಯೂ, 78 ಚಿಕುಂಗುನ್ಯಾ, 6 ಮಲೇರಿಯಾ ಪ್ರಕರಣಗಳು ಹಾಗೂ 2021ಸಾಲಿನ ಮೇ ಅಂತ್ಯದವರೆಗೆ 4 ಡೆಂಗ್ಯೂ, 16 ಚಿಕುಂಗುನ್ಯಾ ಪ್ರಕರಣಗಳು ಕಂಡುಬಂದಿದೆ. ಆದರೆ, ಯಾವುದೇ ಮಲೇರಿಯಾ ಪ್ರಕರಣ ವರದಿಯಾಗಿಲ್ಲ. ದೇಶದಲ್ಲಿ 2030ನೇ ಇಸವಿಗೆ ಮಲೇರಿಯಾ ನಿವಾರಣಾ ಕಾರ್ಯಕ್ರಮದ ಗುರಿ ಹಮ್ಮಿಕೊಳ್ಳಲಾಗಿದೆ. ಕರ್ನಾಟಕದಲ್ಲಿ 2025ನೇ‌‌ ಇಸವಿಗೆ ಮಲೇರಿಯಾ ನಿವಾರಣಾ ಗುರಿ ಹಮ್ಮಿಕೊಳ್ಳಲಾಗಿದ್ದು, ತುಮಕೂರು ಜಿಲ್ಲೆಯಲ್ಲಿ 2022ನೇ ಇಸವಿಗೆ ಮಲೇರಿಯಾ ನಿವಾರಣಾ ಕಾರ್ಯಕ್ರಮದ ಗುರಿ ನಿಗಧಿಯಾಗಿದೆ. ಈ ಗುರಿ ಸಾಧಿಸಲು ಎಲ್ಲಾ ಇಲಾಖೆಗಳ ಪಾತ್ರ ಮುಖ್ಯವಾಗಿ ಇರಬೇಕು ಎಂದು ತಿಳಿಸಿದರು.

ವೈಯಕ್ತಿಕ ಸ್ವಚ್ಛತೆ ಕಾಪಾಡಿಕೊಳ್ಳುವುದು, ಸೊಳ್ಳೆ ಉತ್ಪತ್ತಿ ತಾಣಗಳ ನಾಶ, ಮನೆಯ ಸುತ್ತಮುತ್ತಲಿನ ಪರಿಸರದಲ್ಲಿ ನೀರು ನಿಲ್ಲದಂತೆ ಎಚ್ಚರಿಕೆ, ಉತ್ತಮ ಚರಂಡಿ ವ್ಯವಸ್ಥೆ, ಸೊಳ್ಳೆ ನಿರೋಧಕಗಳನ್ನು ಉಪಯೋಗಿಸಿ ಸೊಳ್ಳೆ ಕಚ್ಚುವಿಕೆಯಿಂದ ರಕ್ಷಣೆ, ಹದಿನೈದು ದಿನಗಳಿಗೊಮ್ಮೆ ಆರೋಗ್ಯ/ಆಶಾ ಕಾರ್ಯಕರ್ತೆಯರಿಂದ ಸಮೀಕ್ಷೆ,‌ ಲಾರ್ವಾಹಾರಿ ಗಬ್ಬಿ ಮತ್ತು ಗ್ಯಾಂಬೂಸಿಯಾ ಮೀನುಗಳ ಬಳಕೆ, ನೀರಿನ ಶೇಖರಣಾ ಪಾತ್ರೆ/ ತಾಣಗಳನ್ನು ಸೊಳ್ಳೆಗಳು ನುಸುಳದಂತೆ ಮುಚ್ಚಿಡುವುದು, ಹೆಚ್ಚು ದಿನಗಳ ಕಾಲ ನೀರು ಶೇಖರಿಸಿದಂತೆ ನೋಡಿಕೊಳ್ಳುವುದು, ಅನಿವಾರ್ಯವೆನಿಸಿದರೆ ನೀರನ್ನು ಶೋಧಿಸಿ ಮುಚ್ಚಳ ಮುಚ್ಚಿ ಬಳಸುವುದು, ತ್ಯಾಜ್ಯ ವಸ್ತುಗಳ ವಿಲೇವಾರಿ, ವಾರಕ್ಕೊಮ್ಮೆ‌‌ ಒಣ ದಿನಾಚರಣೆ, ಸ್ವಯಂ ವೈದ್ಯಕೀಯದ ಬದಲು ಆರೋಗ್ಯ ಕಾರ್ಯಕರ್ತರ ಸಲಹೆ/ ಚಿಕಿತ್ಸೆ‌ ಸೇರಿದಂತೆ ರೋಗ ನಿಯಂತ್ರಣಾ ಕ್ರಮಗಳ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮಾಡಬೇಕು ಎಂದು ಸೂಚಿಸಿದರು.

ಜ್ವರ ಸಮೀಕ್ಷೆ ಮತ್ತು ರೋಗ ಪತ್ತೆ, ಸಂಶಯಾಸ್ಪದ ಪ್ರಕರಣಗಳಿಂದ ರಕ್ತದ ಮಾದರಿಗಳ ಸಂಗ್ರಹಣೆ, ರೋಗ ಪೀಡಿತ ಪ್ರದೇಶಗಳಲ್ಲಿ ತಾತ್ಕಾಲಿಕ ಚಿಕಿತ್ಸಾಲಯ/ಸಂಚಾರಿ ಚಿಕಿತ್ಸಾಲಯ ತೆರೆದು ವೈದ್ಯಕೀಯ ಸೌಲಭ್ಯ ಒದಗಿಸುವುದು, ರೋಗ ಹಾಗು ರೋಗಲಕ್ಷಣಗಳಿಗೆ ಅನುಗುಣವಾಗಿ ಸೂಕ್ತ ಚಿಕಿತ್ಸೆ, ಎಲ್ಲಾ ಗ್ರಾಮಗಳಲ್ಲಿ ಮತ್ತು ಪಟ್ಟಣ ಪ್ರದೇಶಗಳಲ್ಲಿ 15 ದಿನಗಳಿಗೊಮ್ಮೆ ನಿಯಮಿತವಾಗಿ ಸಮೀಕ್ಷೆ ಮತ್ತು ಸೊಳ್ಳೆ ಉತ್ಪತ್ತಿ ತಾಣಗಳ ನಾಶ, ಅವಶ್ಯಕತೆಗನುಗುಣವಾಗಿ ಧೂಮೀಕರಣ ಕಾರ್ಯವನ್ನು ಜವಾಬ್ದಾರಿಯಿಂದ ನಿಭಾಯಿಸುವಂತೆ ಆರೋಗ್ಯ ಇಲಾಖೆಗೆ ಸೂಚಿಸಿದರು.

ನಿಯಮಿತ ಹಾಗೂ ಸಮರ್ಪಕ ನೀರು ಸರಬರಾಜು, ನೀರು ಸರಬರಾಜಾಗುವ ನಲ್ಲಿ/ ಪೈಪುಗಳು ಸೋರದಂತೆ ತಡೆಗಟ್ಟುವುದು, ಕೊಳವೆ ಬಾವಿಗಳು ಹಾಗೂ ನಲ್ಲಿ ಪೈಪುಗಳು ಒಳಚರಂಡಿ ಇರುವ ಜಾಗದಿಂದ ದೂರದಲ್ಲಿರುವಂತೆ ನಿರ್ಮಿಸುವುದು, ಮೇಲ್ಛಾವಣಿಯ ತೊಟ್ಟಿ ಹಾಗೂ ನೀರು ಸರಬರಾಜು ಮಾಡುವ ತೊಟ್ಟಿಗಳನ್ನು ಭದ್ರವಾದ ಮುಚ್ಚಳದಿಂದ ಮುಚ್ಚುವ ವ್ಯವಸ್ಥೆ ಮಾಡುವುದು, ಆರೋಗ್ಯ ಇಲಾಖೆ ಜೊತೆ ನಿರಂತರ ಸಂಪರ್ಕದಲ್ಲಿದ್ದು ಗ್ರಾಮದ ನೈರ್ಮಲ್ಯತೆ ಹಾಗೂ ಗ್ರಾಮದಲ್ಲಿ ಇರಬಹುದಾದ ಸಾಂಕ್ರಾಮಿಕ ರೋಗಗಳ ಪರಿಸ್ಥಿತಿ ಹಾಗೂ ಅದರ ಬಗ್ಗೆ ಚರ್ಚಿಸುವುದು, ನೀರು ಸರಬರಾಜು ಮಾಡುವ ಮೊದಲು ಸೂಕ್ತವಾದ ಪ್ರಮಾಣದಲ್ಲಿ ಕ್ಲೋರಿನ್ ಹಾಕುವ ಮೂಲಕ ನಿಯಂತ್ರಣ ಕ್ರಮಗಳನ್ನು ಕಟ್ಟುನಿಟ್ಟಾಗಿ ಅನುಷ್ಠಾನಕ್ಕೆ ತರುವಂತೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಹಾಗೂ ಆರೋಗ್ಯ ಇಲಾಖಾಧಿಕಾರಿಗಳಿಗೆ ನಿರ್ದೇಶಿಸಿದರು.

ಸೊಳ್ಳೆ ಉತ್ಪತ್ತಿ ನಿಯಂತ್ರಣಗೊಳಿಸುವ ಸಲುವಾಗಿ ಮಹಾನಗರ ಪಾಲಿಕೆಗಳಲ್ಲಿ ನಾಗರಿಕ ಹಾಗೂ ಕಟ್ಟಡ ಬೈಲಾಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವುದು, ಸೊಳ್ಳೆ ರಹಿತ ಓವರ್ ಹೆಡ್ ಟ್ಯಾಂಕ್ ಹಾಗೂ ಅಂಡರ್ ಗ್ರೌಂಡ್ ಟ್ಯಾಂಕ್ ಗಳನ್ನು ನಿರ್ಮಿಸುವಂತೆ ಅಗತ್ಯ ನಿಯಮಗಳನ್ನು ಜಾರಿಗೊಳಿಸುವುದು, ವಾರಕ್ಕೊಮ್ಮೆ ಸೊಳ್ಳೆ ನಾಶದ ದ್ರಾವಣವನ್ನು ಸೊಳ್ಳೆ ಉತ್ಪತ್ತಿ ತಾಣಗಳಿಗೆ ಸಿಂಪಡಿಸುವುದು, ನೀರು ಸರಬರಾಜು ಪೈಪುಗಳನ್ನು ಆಗಿಂದಾಗ್ಗೆ ಪರೀಕ್ಷಿಸುವುದರ ಮೂಲಕ ಸೋರಿಕೆಯನ್ನು ತಡೆಗಟ್ಟುವುದು, ನಗರದಲ್ಲಿರುವ ಉದ್ಯಾನವನಗಳಲ್ಲಿ ಸಾಂಕ್ರಾಮಿಕ ರೋಗಗಳ ಬಗ್ಗೆ ಮಾಹಿತಿಯುಳ್ಳ ಫಲಕಗಳನ್ನು ಹಾಕುವುದು, ಸಮರ್ಪಕ ಘನತ್ಯಾಜ್ಯ ವಸ್ತುಗಳ ವಿಲೇವಾರಿಗೆ ಸೂಕ್ತ ಕ್ರಮ ಕೈಗೊಳ್ಳುವುದು ಮತ್ತು ನೀರು ನಿಲ್ಲದಂತೆ ಎಚ್ಚರಿಕೆ ವಹಿಸುವುದು, ಸೊಳ್ಳೆ ಉತ್ಪತ್ತಿಗೆ ಕಾರಣವಾದ ಖಾಲಿ ನಿವೇಶನಗಳ ವಿವರ ಮತ್ತು ಅದರ ಮಾಲೀಕರಿಗೆ ಸ್ವಚ್ಛತೆ ಕಾಪಾಡಲು ನೋಟೀಸ್ ನೀಡುವ ಕ್ರಮಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸುವಂತೆ ನಗರಾಭಿವೃದ್ಧಿ ಇಲಾಖೆಗೆ ಸೂಚನೆ ನೀಡಿದರು.

ಶಿಕ್ಷಣ ಇಲಾಖೆಯ ಕಾರ್ಯಚಟುವಟಿಕೆಗಳು ಪ್ರಾರಂಭವಾದ ಬಳಿಕ ಶಾಲಾ-ಕಾಲೇಜುಗಳಲ್ಲಿ ನೀರು ಸಂಗ್ರಹಿಸುವ ಟ್ಯಾಂಕ್ ಗಳನ್ನು ಭದ್ರವಾಗಿ ಮುಚ್ಚಬೇಕು. ನಿಯಮಿತವಾಗಿ ಅವುಗಳನ್ನು ಸ್ವಚ್ಛಗೊಳಿಸಬೇಕು. ಶಾಲೆಯ ಸುತ್ತಮುತ್ತ ಲಾರ್ವಾ ಉತ್ಪತ್ತಿ ತಾಣಗಳು ಕಂಡುಬಂದಲ್ಲಿ ಆರೋಗ್ಯ ಸಹಾಯಕರು/ಆಶಾ ಕಾರ್ಯಕರ್ತರಿಂದ ಲಾರ್ವಾನಾಶಕ‌ ದ್ರಾವಣ ಹಾಕಿಸಬೇಕು ಮತ್ತು ಸ್ವಚ್ಛತೆ ಕಾಪಾಡಬೇಕು. ಶಾಲೆಯಲ್ಲಿ ಯಾವುದೇ ಜ್ವರ ಪ್ರಕರಣಗಳು ಇದ್ದಲ್ಲಿ ಹತ್ತಿರದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸುವುದು ಹಾಗೂ ಸಾಮೂಹಿಕ ಜ್ವರ ಪ್ರಕರಣಗಳು ಕಂಡುಬಂದಲ್ಲಿ ತಾಲೂಕು ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಮಾಹಿತಿ ತಿಳಿಸಬೇಕು. ಶಾಲೆಗಳಲ್ಲಿ ಆರೋಗ್ಯ ಶಿಕ್ಷಣ ಕಾರ್ಯಕ್ರಮಗಳನ್ನು ನಿರಂತರವಾಗಿ ಹಮ್ಮಿಕೊಳ್ಳಬೇಕು. ಶಾಲಾ ಮಕ್ಕಳಿಗೆ ಪ್ರಾರ್ಥನಾ ಸಮಯದಲ್ಲಿ ಲಾರ್ವ ಪ್ರಾತ್ಯಕ್ಷತೆ ಮತ್ತು ಆರೋಗ್ಯ ಶಿಕ್ಷಣ ನೀಡಬೇಕು ಎಂದು ತಿಳಿಸಿದರು.

ಸಮಾಜ ಕಲ್ಯಾಣ ಇಲಾಖೆಯು ತನ್ನ ವ್ಯಾಪ್ತಿಗೆ ಒಳಪಡುವ ಎಲ್ಲಾ ವಸತಿ ನಿಲಯಗಳಲ್ಲಿ ಟ್ಯಾಂಕ್ ಮತ್ತು ಸಂಪುಗಳನ್ನು ಭದ್ರವಾಗಿ ಮುಚ್ಚಬೇಕು ಮತ್ತು ಅವುಗಳನ್ನು ಸ್ವಚ್ಛಗೊಳಿಸಬೇಕು. ವಸತಿಗೃಹಗಳ ಕಿಟಕಿಗಳಿಗೆ ಸೊಳ್ಳೆ ನಿರೋಧಕ ಜಾಲರಿಗಳನ್ನು ಅಳವಡಿಸಬೇಕು. ಹಾಸ್ಟೆಲ್ ಆವಣದಲ್ಲಿ ಪರಿಸರ ನೈರ್ಮಲ್ಯ ಕಾಪಾಡಬೇಕು. ಅಂತೆಯೇ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ಸಂಪೂರ್ಣವಾಗಿ ತನ್ನ ಕಾರ್ಯಚಟುವಟಿಕೆಗಳು ಆರಂಭವಾದ ಬಳಿಕ ತಾಯಂದಿರ ಸಭೆಗಳಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಸಾಂಕ್ರಾಮಿಕ ರೋಗಗಳ ಬಗ್ಗೆ ಅರಿವು ಮೂಡಿಸಬೇಕು. ಅಂಗನವಾಡಿ ಕೇಂದ್ರದ ಮಕ್ಕಳಲ್ಲಿ ಜ್ವರ ಪ್ರಕರಣಗಳು ಕಂಡುಬಂದರೆ ತಕ್ಷಣ ಹತ್ತಿರದ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಮಕ್ಕಳಿಗೆ ಚಿಕಿತ್ಸೆ ಕೊಡಿಸಬೇಕು. ಅಂಗನವಾಡಿ ಕೇಂದ್ರದಲ್ಲಿ ನೀರು ಶೇಖರಿಸುವ ಮತ್ತು ಡ್ರಮ್, ತೊಟ್ಟಿ ಮತ್ತು ಸಂಪುಗಳನ್ನು ಭದ್ರವಾಗಿ ಮುಚ್ಚಬೇಕು ಎಂದು ಸೂಚಿಸಿದರು.
ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ. ಪುರುಷೋತ್ತಮ್ ಮಾತನಾಡಿ,‌ ರೋಗಗಳ ಲಕ್ಷಣಗಳು ಮತ್ತು ನಿಯಂತ್ರಣ ಕ್ರಮಗಳ ಬಗ್ಗೆ ಮಾಹಿತಿ ನೀಡಿದರು.

ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಕೆ.ವಿದ್ಯಾಕುಮಾರಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ನಾಗೇಂದ್ರಪ್ಪ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.

ವಾರದ ಪುಸ್ತಕ: ಶೌಚಾಲಯ ತಪಸ್ವಿ- ಪರಾಕುಗಳ ಹಂಗಿಲ್ಲದೆ ಹರಿವ ಪ್ರಬಂಧಗಳ ಹೊನಲು

-ಗೋವಿಂದರಾಜು ಎಂ ಕಲ್ಲೂರು ಅವರು ತುಮಕೂರು ವಿಶ್ವವಿದ್ಯಾಲಯ ದಲ್ಲಿ ಸಿನಿಮಾ ಕುರಿತು ಸಂಶೋಧನ ವಿದ್ಯಾರ್ಥಿ. ಕಥೆಗಾರರು ಹಾಗೂ ಲೇಖಕರು. ಈರಪ್ಪ ಎಂ ಕಂಬಳಿ ಅವರ ’ಶೌಚಾಲಯ ತಪಸ್ವಿ ಮತ್ತು ಇತರ ಪ್ರಬಂಧ ಪುಸ್ತಕ ಕುರಿತು ಬರೆದಿದ್ದಾರೆ.

“ಹದಿ ಹರೆಯದಲ್ಲಿ ಪದೇಪದೇ ಕಿತ್ತು ನಡುರಸ್ತೆಯಲ್ಲೇ ಮಾನ ತೆಗೆಯುತ್ತಿದ್ದ

ಹವಾಯಿ ಚಪ್ಪಲಿ ಮೆಟ್ಟಿದ ಕಾಲುಗಳೇ ಇಂದು ಮಿರಿಮಿರಿ ಮಿಂಚುವ ಬೂಟು

ತೊಟ್ಟಿರುವುದನ್ನು ಕಂಡು ಸೋಜಿಗಪಟ್ಟಿದ್ದೇನೆ!”

-ಲೇಖಕ

ಪ್ರಕಟಣೆ ವರ್ಷ : ೨೦೨೦

ಬೆಲೆ : ೨೬೦/-

ಪುಟ : ೨೭೦

ಪ್ರಕಾಶಕರು : ಪಲ್ಲವ

ಗೋವಿಂದರಾಜು ಎಂ.ಕಲ್ಲೂರು

ಪುಟ ತೆರೆಯುತ್ತಲೇ ಕಾಡುವ ಈ ಸಾಲುಗಳು ಈರಪ್ಪ ಎಂ ಕಂಬಳಿ ಅವರ ಆರನೇ ಲಲಿತ ಪ್ರಬಂಧದ ಉಪೋದ್ಘಾತ ನುಡಿಗಳು. ‘ಹೀಗೊಂದು ಟಾಪ್ ಪ್ರಯಾಣ’, ‘ಹೆದ್ದಾರಿಗುಂಟ’, ‘ಚಾಚಾ ನೆಹರು’,’ಈಚಲ ಮರ’, ‘ಹುರುಳಿಕಟ್ಟು’ ಪ್ರಬಂಧ ಸಂಕಲನಗಳ ಮೂಲಕ ನಾಡಿನಾದ್ಯಂತ ಮನ್ನಣೆ ಪಡೆದ ಕಂಬಳಿಯವರು ಲಲಿತ ಪ್ರಬಂಧಗಳಿಗಾಗಿಯೇ ತಮ್ಮ ಬಹುಪಾಲು ಬರಹ-ಬದುಕನ್ನು ಮೀಸಲಿಟ್ಟವರು.

ಇವರ ಇತ್ತೀಚಿನ ಲಲಿತ ಪ್ರಬಂಧಗಳ ಸಂಕಲನವಾದ ’ಶೌಚಾಲಯ ತಪಸ್ವಿ ಮತ್ತು ಇತರ ಪ್ರಬಂಧಗಳು’ ಎನ್ನುವ ಮುನ್ನುಡಿ ಬೆನ್ನುಡಿಗಳ ಪರಾಕುಗಳಿಲ್ಲದೆ ಓದುಗನ ಜೀವನಾನುಭವಗಳೊಂದಿಗೆ ಮಾತನಾಡುವ ಪ್ರಬಂಧಗಳೇ ತುಂಬಿ ನಿಂತ ಸಮೃದ್ಧ ಫಸಲಿನ ಚೀಲ. ಲಲಿತ ಪ್ರಬಂಧಕ್ಕೆ ಓದುಗರು ಕಡಿಮೆ, ಕಥೆ ಕವನಗಳಿಗೆ ಇರುವಷ್ಟು ’ಸ್ಪೇಸ್’ ಲಲಿತ ಪ್ರಬಂಧಗಳಿಗೆ ಇಲ್ಲವೆಂಬ ಮಿತಿಗಳ ನಡುವೆಯೂ ಇಲ್ಲಿನ ಪ್ರಬಂಧಗಳು ಅರಳಿವೆ.

ಲೇಖಕರು ತಮ್ಮ ಅರವತ್ತು ವರ್ಷಗಳ ಲೋಕಾನುಭವವನ್ನು ನಿರ್ಲಿಪ್ತವಾಗಿ ಮೆಲುಕು ಹಾಕಿದ ಪ್ರಬಂಧಗಳು ಇಲ್ಲಿವೆ. ಕಳೆದು ಹೋದ ಬಾಲ್ಯದ ಘಟನೆಗಳು, ಮಾಡಿದ ತುಂಟಾಟಗಳು, ಮಾವು, ಬೇವು, ಹುಣಸಿ, ನೇರಳೆ ಹಣ್ಣುಗಳನ್ನು ಕದ್ದು ಮುಚ್ಚಿ ಸವಿಯಲು ನಡೆಸಿದ ಪರದಾಟಗಳ, ಪಟ್ಟ ಕಷ್ಟಗಳ ದೇಸೀಯ ಅಭಿವ್ಯಕ್ತಿಯೇ ಈ ಪುಸ್ತಕ. ಇಡೀ ಪುಸ್ತಕದಲ್ಲಿರುವ ಬಾಲ್ಯದ ಕಥನಗಳ ಭಾಗಗಳನ್ನು ಆರಿಸಿ ಅನುಕ್ರಮವಾಗಿ ಜೋಡಿಸಿದರೆ ಇದು ಕಂಬಳಿಯವರ ಆತ್ಮಕಥನದ ಭಾಗವಾಗಿಯೂ ತೋರಿಬರುತ್ತದೆ.

‘ಕರಕೀ ಬೇರು’, ‘ಶೌಚಾಲಯ ತಪಸ್ವಿ’, ‘ಮನೆಯೊಳಗಾಡೋ’, ‘ಕಾಗೆ ಮತ್ತು ನಾನು’, ‘ನೀರಲಹಣ್ಣೆಂಬ ಕೃಷ್ಣ ಸುಂದರಿಯ ನೆನೆಪು’, ‘ಮೊಬೈಲ್ ಮೇನಿಯಾ’, ‘ಕೂದಲ ಸೇವೆಯೂ : ಮಡೆ ಸ್ನಾನವೂ’, ‘ಹೆಸರಿಡುವುದು’, ‘ಅಂಬಲಿ-ಕಂಬಳಿ’, ‘ಮಟ್ಟುಗಳೋ ಎಡವಟ್ಟುಗಳೋ’ ಮುಂತಾದ ಹದಿನೇಳು ಪ್ರಬಂಧಗಳಿರುವ ಈ ಪುಸ್ತಕ ತನ್ನ ಭಾಷಾ ಬಳಕೆ ಮತ್ತು ಹಾಸ್ಯ ಪ್ರಜ್ಞೆಯಿಂದ ಓದುಗರನ್ನು ಸೆಳೆಯಬಲ್ಲ ಶಕ್ತಿಹೊಂದಿವೆ.

ತಪಸ್ವಿಯೆಂದರೆ ದೇಹ-ಮನಸ್ಸು ದಂಡಿಸುತ್ತಾ ತನ್ನ ಗುರಿ ಸಾಧನೆಗಾಗಿ ನಿರಂತರ ಪ್ರಯತ್ನಿಸುವವನು/ವಳು ಶೌಚಾಲಯ ತಪಸ್ವಿಯೆಂದರೆ ಮಲಬದ್ಧತೆ ಮತ್ತು ಇತರ ಕಾರಣಗಳಿಂದ ಶೌಚಾಲಯದೊಳಗೆ ಗಂಟೆಗಟ್ಟಲೆ ಕೂರುವುದು! ಇದೇ ನಿಜವಾದ ತಪಸ್ಸು ಎನ್ನುತ್ತಾರೆ ಲೇಖಕರು. ದೇವರನ್ನು ಒಲಿಸಿಕೊಳ್ಳುವ ತಪಸ್ಸು ’ನೆಂಟರನ್ನು ಕಳಿಸುವ ತಪಸ್ಸು ಎರಡೂ ಒಂದೇ’ ಎನ್ನುವ ಅದ್ವೈತ ಕಲ್ಪನೆ ಇದು!.

ಇಲ್ಲಿನ ಪ್ರಬಂಧಗಳ ಒಳಗೆ ಬರುವ ಅನೇಕ ಸಂಗತಿಗಳು ಲೇಖಕರ ಅನುಭವವೂ, ಏಕ ಕಾಲಕ್ಕೆ ಓದುಗರ ಅನುಭವವೂ ಆಗುತ್ತವೆ. ಲವಲವಿಕೆಯ ಜೀವಂತಿಕೆಯ ಭಾಷೆ, ಓದಿಸಿಕೊಂಡು ಹೋಗುವ ನಿರೂಪಣೆ, ಓದುಗ ಮಹಾಶಯರಿಗೆ ರಸಾಸ್ವಾದನೆ ಉಂಟು ಮಾಡಲೇಬೇಕೆಂಬ ಪಣ ತೊಟ್ಟಂತಿರುವ ಮೊನಚು ಭಾಷೆ, ಪ್ರಬಂಧದೊಳಗೆ ಬರುವ ಜನಪದ ನುಡಿಗಟ್ಟುಗಳು, ನೀತಿ ಕಥೆಗಳು, ಹಿರಿಯ ಕವಿಗಳ ಪದ್ಯಗಳ ಸಾಲುಗಳು ಪ್ರಸ್ತುತ ಲಲಿತ ಪ್ರಬಂಧಗಳ ಮೂಲಕ ಲೇಖಕರು ಮಂಡಿಸುತ್ತಿರುವ ಸ್ವ-ಅನುಭವಗಳಿಗೆ ಹೆಗಲುಕೊಟ್ಟು ನಿಲ್ಲುತ್ತವೆ.

ಕಂಬಳಿಯವರ ಒಳಗೊಬ್ಬ ಶ್ರದ್ಧಾವಂತ ಓದುಗನಿದ್ದಾನೆ. ಪ್ರತಿ ಪ್ರಬಂಧಗಳಲ್ಲೂ ಗಂಭೀರ ಸಂಶೋಧನೆಯ ಬಂಧ ಇದೆ. ಹಾಗಾಗಿ ಈ ಪ್ರಬಂಧಗಳೊಳಗೆ ಜನಪದ, ವಚನ ಸಾಹಿತ್ಯ, ಕೀರ್ತನಾ ಸಾಹಿತ್ಯ, ಇತಿಹಾಸ, ಪುರಾಣ ಕಥೆಗಳು, ಜನಪ್ರಿಯ ಭಕ್ತಿಗೀತೆಗಳ ಸಾಲುಗಳು, ಶಿಶುಪ್ರಾಸ ಗೀತೆಗಳು, ಹಿಂದಿ, ಕನ್ನಡ ಸಿನಿಮಾದ ಅನೇಕ ಗೀತೆಗಳ ಸಾಲುಗಳು ಪ್ರಾಸಂಗಿಕವಾಗಿದ್ದು ಪ್ರತಿ ಬಂಧಗಳ ಸೊಗಸನ್ನು ಹೆಚ್ಚಿಸಿವೆ. ರಾಹುಲ ಸಾಂಕೃತ್ಯಾಯನ, ಷೇಕ್ಸ್‌ಫಿಯರ್, ಬಸವಣ್ಣ, ನವೋದಯ, ದಲಿತ-ಬಂಡಾಯದ ಕವಿಗಳು ಇನ್ನೂ ಹಲವಾರು ಹಿರಿ ಕಿರಿಯ ಬರಹಗಾರರು ಈ ಪುಸ್ತಕದಲ್ಲಿ ಬಂದು ತಂತಮ್ಮ ಪಾತ್ರ ನಿರ್ವಹಿಸುತ್ತಾರೆ. ಈ ಪುಸ್ತಕವನ್ನು ಓದುತ್ತಾ ಕನ್ನಡದ ಮತ್ತು ಇತರ ಭಾಷೆಗಳ ಪ್ರಮುಖ ಕವಿಗಳನ್ನು ಕಾದಂಬರಿಕಾರರನ್ನೂ, ಲೇಖಕರನ್ನು ಸ್ಪರ್ಷಿಸಿದ ಅನುಭವೂ ಆಗುತ್ತದೆ. ಇದು ಸಾಧ್ಯವಾಗಿರುವುದು ಕಂಬಳಿಯವರ ಅಪಾರ ಓದಿನ ಬಲದಿಂದಲೇ ಎನ್ನಬಹುದು.

‘ಶೌಚಾಲಯ ತಪಸ್ವಿ’ ಎಂಬ ಶೀರ್ಷಿಕೆಯ ಪ್ರಬಂಧವು ಮನುಷ್ಯನ ’ದೇಹ ಧರ್ಮವು’ ಯಾವೆಲ್ಲಾ ಪಾಡು ಅನುಭವಿಸಬೇಕು ಎಂಬುದನ್ನು ತಿಳಿಸುತ್ತದೆ. ಈ ಪ್ರಬಂಧದಲ್ಲಿ ಬರುವ ಮೂಲಂಗಿಯ ಕಥೆಯನ್ನು ಓದಲೇಬೇಕು. ಇದನ್ನು ಕೇವಲ ರಂಜನೆಯ ಉದ್ದೇಶದಿಂದಷ್ಟೇ ನೋಡದೆ ಶಿವನನ್ನು ಅಪಮೌಲ್ಯಗೊಳಿಸಲು ಕಾಲವೊಂದರ ಅನ್ಯಪಂಥೀಯರು ಹೆಣೆದಿರಬಹುದಾದ ಕಥೆಯಾಗಿಯೂ ತೋರುತ್ತದೆ.

ಪ್ರಸ್ತುತ ಸಂಕಲನದಲ್ಲಿರುವ ಪ್ರಬಂಧಗಳು ಓದುಗರನ್ನು ನಗಿಸುತ್ತಾ ಸಾಗುವುದಷ್ಟೇ ಅಲ್ಲ ವೈಚಾರಿಕ ಹೊಣೆಗಾರಿಕೆಯನ್ನೂ ಸಹ ನಿರ್ವಹಿಸಿವೆ. ‘ಹೆಸರಿಡುವುದು’!’ ಎಂಬ ಪ್ರಬಂಧದಲ್ಲಿ ಇದರ ಜಾಡನ್ನು ಸ್ಪಷ್ಟವಾಗಿ ಗುರುತಿಸಬಹುದು. ಮಗುವಿಗೆ ಒಂದು ಹೆಸರಿಡುವಾಗ ನಾವು ಪಡುವ ಪರಿಪಾಟಲುಗಳನ್ನು ವಿವರಿಸುವ ಬರಹ ಇದಾಗಿದ್ದರೂ ಜ್ಯೋತಿಷಿಗಳ ಆದೇಶದಂತೆ ಹೆಸರಿಡುವುದನ್ನು ’ಹೊಳೆ ನೀರಿಗೆ ದೊಣ್ಣೆ ನಾಯಕನ ಅಪ್ಪಣೆಬೇಕೇ ಎಂದು ಎಂದು ಕುಟುಕುತ್ತಾರೆ. ಹುಟ್ಟಿದ ನಕ್ಷತ್ರವೇ ಬದುಕಿನ ಗತಿ ನಿರ್ಧರಿಸುವುದಾದರೆ ಒಳ್ಳೆಯ ಸಮಯನೋಡಿ ಸಿಜೇರಿಯನ್ ಮಾಡಿಸಿದವರ ಭವಿಷ್ಯವನ್ನು ಇಷ್ಟ ಬಂದಂತೆ ತಿದ್ದಬಹುದೇ ಎಂಬ ಆಲೋಚನೆಯನ್ನು ಸಹ ಈ ಪ್ರಬಂಧವು ಹುಟ್ಟಿಸುತ್ತದೆ.

ಹೀಗೆ ಇಲ್ಲಿಯ ಲಲಿತ ಪ್ರಬಂಧಗಳು ಕೇವಲ ಓಘದಿಂದಷ್ಟೇ ಸಾಗುವುದಿಲ್ಲ. ಈ ನೆಲದಲ್ಲಿ ನಡೆದ ಅನೇಕ ಪಂಥಗಳ ಮುಷ್ಟಾಮುಷ್ಟಿ ಕಾದಾಟಗಳಿಂದ ಒಂದು ದೇವರನ್ನು ಪ್ರಧಾನ ಸ್ಥಾನದಿಂದ ಕೆಳಗಿಳಿಸಲು ಮಾಡಿದ ಅಣಕದಂತೆ ಹೆಣೆದ ಜನ ಕಥನಗಳನ್ನೂ ದಾಖಲಿಸುತ್ತವೆ, ಸಂಸ್ಕೃತಿ ಚಿಂತನೆಗೂ ಹಚ್ಚುತ್ತವೆ. ಇಲ್ಲಿನ ಯಾವುದೇ ಪ್ರಬಂಧದ ಒಳ ಹೊಕ್ಕರೂ ಪುಟ್ಟ ಪ್ರಪಂಚವೇ ಮೈದಾಳಿ ನಿಲ್ಲುತ್ತದೆ. ಪೂರ್ಣ ಬದುಕಲ್ಲಿ ಸವಿಯಲೇ ಬೇಕಾದ ಅನೇಕ ಲೋಕಾನುಭವವನ್ನು ನವಿರಾಗಿ ವಿವರಿಸುತ್ತವೆ.

ದಕ್ಷಿಣ ಕನ್ನಡ ಶಿಕ್ಷಕರಿಗೆ ಸ್ವಾಮಿ ವೀರೇಶಾನಂದ‌ ಅವರಿಂದ ಉಪನ್ಯಾಸ

0

Public story.in


ತುಮಕೂರು: ಶೈಕ್ಷಣಿಕ ಸಂವರ್ಧನಾ ಕಾರ್ಯಕ್ರಮದಡಿ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಆ ಜಿಲ್ಲೆಯ ಶಿಕ್ಷಕರಿಗೆ ತುಮಕೂರಿನ ರಾಮಕೃಷ್ಣ ಆಶ್ರಮದ ಸ್ವಾಮಿ ವೀರೇಶಾನಂದ ಸರಸ್ವತಿ ಅವರುಕಲಿಯುತ್ತಾ ಬದುಕೋಣ… ಬದುಕಲು ಕಲಿಸೋಣ ಕುರಿತು ಉಪನ್ಯಾಸ ನೀಡುವರು.

ದಕ್ಷಿಣ ಕನ್ನಡ ಜಿಲ್ಲೆಯ ಶಿಕ್ಷಕರಲ್ಲದೇ ನಾಡಿನ, ಹೊರ ರಾಜ್ಯಗಳ ಶಿಕ್ಷಕರು, ಉಪನ್ಯಾಸಕರು, ಶೈಕ್ಷಣಿಕ ತಜ್ಞ ರು ಉಪನ್ಯಾಸ ಕೇಳಬಹುದಾಗಿದೆ.

ದಿನಾಂಕ 19/06/20021 ರಂದು ಬೆಳಿಗ್ಗೆ 11 ಗಂಟೆಗೆ ಆಯೋಜಿಸಲಾಗಿದೆ. ಆನ್ ಲೈನ್ ಉಪನ್ಯಾಸವನ್ನು ಯೂ ಟ್ಯೂಬ್ ಲಿಂಕ್ ಮೂಲಕ ಕೇಳಬಹುದು ಲಿಂಕ್ ಗಾಗಿ ಇಲ್ಲಿ ಕ್ಲಿಕ್ ಮಾಡಿ https://youtu.be/FOTKAK8xKHK

ತುರುವೇಕೆರೆ PSI ಪ್ರೀತಂ ವಿರುದ್ಧ ದಸಂಸ ಆರೋಪ

Public story


ತುರುವೇಕೆರೆ: ಜಮೀನು ಸಂಬಂಧ ತಾಲ್ಲೂಕಿನ ಮಾಯಸಂದ್ರ ಹೋಬಳಿಯ ಹಂಚಿಹಳ್ಳಿ ಪರಿಶಿಷ್ಟ ಜಾತಿ ಕುಟುಂಬದ ಮೇಲೆ ಹಲ್ಲೆ ನಡೆಸಿದ ಸವರ್ಣೀಯನ ವಿರುದ್ದ ತುರುವೇಕೆರೆ psi ಪ್ರೀತಂ ಅವರು ಯಾವುದೇ ಕ್ರಮ ಕೈಗೊಂಡಿಲ್ಲವೆಂದು ದಸಂಸ ತಾಲ್ಲೂಕು ಸಂಚಾಲಕ ದಂಡಿನಶಿವರಕುಮಾರ್ ನೇರ ಆರೋಪ ಮಾಡಿದರು.

ಪಟ್ಟಣದಲ್ಲಿ ದಸಂಸ ಮತ್ತು ಹಲ್ಲೆಗೊಳಗಾದ ಕುಟುಂಬ ನ್ಯಾಯಕ್ಕಾಗಿ ಒತ್ತಾಯಿಸಿದ ವೇಳೆ ಮಾತನಾಡಿದ ಅವರು,
ತಾಲ್ಲೂಕಿನ ಹಂಚಿಹಳ್ಳಿ ಪರಿಶಿಷ್ಟ ಜಾತಿಯ ಹುಚ್ಚಯ್ಯ ಅವರು ಸರ್ವೇ ನಂ.135 ರಲ್ಲಿ ಸು. 30 ವರ್ಷಗಳಿಂದ ಅನುಭವದಲ್ಲಿದ್ದಾರೆ. ಪಕ್ಕದ ಜಮೀನಿನ ಸವರ್ಣೀಯನೊಬ್ಬ ಪರಿಶಿಷ್ಟ ಜಾತಿ ಕುಟುಂಬದ ಜಮೀನಿನಲ್ಲಿದ್ದ ತಗಡಿನ ಶೀಟ್ ಮನೆಗೆ ಹಾನಿ ಮಾಡಿದ್ದಾನೆ.
ಈ ಬಗ್ಗೆ ಜೂ. 15 ರಂದು ರಕ್ಷಣೆ ನೀಡುವಂತೆ ತುರುವೇಕೆರೆ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ. ಆದರೂ ಸಹ ಸಂಬಂದ ಆರೋಪಿಯನ್ನು ಠಾಣೆಗ ಕರೆದು ವಿಚಾರಣೆ ಮಾಡಲು ಪಿಎಸ್್ಟಐ ಪ್ರೀತಂ ಮೀನಾಮೇಷ ಎಣಿಸಿದ್ದಾರೆ.
ಈ ಬಗ್ಗೆ ಕುಣಿಗಲ್ ಡಿ.ವೈ.ಎಸ್.ಪಿ.ಯವರ ಬಳಿ ತಮ್ಮ ಅಳಲು ತೋಡಿಕೊಂಡರೆ ಅವರೂ ತಮ್ಮ ಜವಾಬ್ದಾರಿಯಿಂದ ನುಣುಚಿಕೊಂಡು ತುರುವೇಕೆರೆ ಠಾಣೆ ಕಡೆ ಬೊಟ್ಟು ಮಾಡುತ್ತಾರೆ. ಜೀವ ಭಯದಲ್ಲಿರುವ ಪರಿಶಿಷ್ಟ ಜಾತಿ ಕುಟುಂಬದ ರಕ್ಷಣೆ ಮಾಡಲು ಪೊಲೀಸರೇ ಹಿಂದೇಟು ಹಾಕಿದರೆ ಪರಿಶಿಷ್ಟರ ಹಕ್ಕುಗಳನ್ನು ರಕ್ಷಿಸುವವರು ಯಾರು ಎಂದು ಪ್ರಶ್ನಿಸಿದರು.

ತಾಲ್ಲೂಕು ಕಂದಾಯ ಇಲಾಖೆಗೆ ಬಗರ್ ಹುಕುಂ ಸಾಗುವಳಿ ಮಂಜೂರಾತಿಗೆ ಇದೇ ಪರಿಶಿಷ್ಟ ಜಾತಿ ಕುಟುಂಬ 1999 ರಲ್ಲಿ ಅರ್ಜಿ ಸಲ್ಲಿಸಿತ್ತು. ಅಂದಿನ ಶಾಸಕ ಎಂ.ಟಿ.ಕೃಷ್ಣಪ್ಪರು ಭೂ ಮಂಜೂರಾತಿ ನೀಡಲು ಕಡತ ಮಂಡಿಸುವಂತೆ ಸಹಿ ಹಾಕಿದ್ದರು.
ಇದಾದ ಕೆಲವೇ ದಿನಗಳಲ್ಲಿ ಕಂದಾಯ ಇಲಾಖೆಯಿಂದ ಶಾಸಕರು ಸಹಿ ಹಾಕಿದ್ದ ಕಡತವೇ ಮಾಯವಾಗಿದೆ. ಇದು ತಾಲ್ಲೂಕು ಕಂದಾಯ ಇಲಾಖೆಯ ಕಾರ್ಯವೈಖರಿಗೆ ಕೈಗನ್ನಡಿಯಾಗಿದೆ. ಈ ಬಗ್ಗೆ ಸಮಗ್ರ ತನಿಖೆಯಾಗಿ ತಪ್ಪಿತಸ್ಥರೆಲ್ಲರಿಗೂ ಶಿಕ್ಷೆಯಾಗಬೇಕು ಎಂದು ಒತ್ತಾಯಿಸಿದರು.
ಈ ಬಗ್ಗೆ ಪರಿಶಿಷ್ಟ ಜಾತಿ ಹುಚ್ಚಯ್ಯನಿಗೆ ನ್ಯಾಯ ಸಿಗದಿದ್ದರೆ ಪೊಲೀಸ್ ಹಾಗೂ ಕಂದಾಯ ಇಲಾಖೆ ವಿರುದ್ದ ಜಿಲ್ಲಾ ದ.ಸಂ.ಸ ವತಿಯಿಂದ ಬೃಹತ್ ತಮಟೆ ಚಳವಳಿ ನಡೆಸಲಾಗುವುದು ಅಗತ್ಯ ಬಿದ್ದರೆ ಎಸ್.ಪಿ. ಹಾಗೂ ಜಿಲ್ಲಾಧಿಕಾರಿಗಳ ಕಚೇರಿ ಬಳಿ ಹೋರಾಟ ನಡೆಸಲು ಹಿಂದೇಟು ಹಾಕುವುದಿಲ್ಲ ಎಂದು ಎಚ್ಚರಿಸಿದರು.

ಈ ಸಂದರ್ಭದಲ್ಲಿ ದ.ಸಂ.ಸ ಪದಾಧಿಕಾರಿಗಳಾದ ಮಲ್ಲೂರು ತಿಮ್ಮೇಶ್, ಬಡಾವಣೆಶಿವರಾಜ್,ಟಿ.ಬಿ.ಕ್ರಾಸ್ ಮಂಜು, ಪುಟ್ಟರಾಜ್, ಮುಳಕಟ್ಟಯ್ಯ, ಜಕ್ಕನಹಳ್ಳಿರವಿ, ಹುಚ್ಚಯ್ಯ ಕುಟುಂಬದ ಸದಸ್ಯರು ಇದ್ದರು.

ವೈದ್ಯರ ಮೇಲಿನ‌ ಹಲ್ಲೆ ಖಂಡಿಸಿ ಡೀಸಿಗೆ ಮನವಿ ಪತ್ರ

Public story


ತುಮಕೂರು: ಕೋವಿಡ್ ಸಂದರ್ಭದಲ್ಲಿ ದೇಶದಾದ್ಯಂತ ವೈದ್ಯರು ಹಾಗೂ ವೈದ್ಯಕೀಯ ಸಿಬ್ಬಂದಿಗಳ ಮೇಲೆ ನಡೆಯುತ್ತಿರುವ ಹಲ್ಲೆಯನ್ನು ಖಂಡಿಸಿ ವೈದ್ಯರಿಗೆ ಸೂಕ್ತ ರಕ್ಷಣೆ ಒದಗಿಸಬೇಕೆಂದು ಭಾರತೀಯ ವೈದ್ಯಕೀಯ ಸಂಘದ ಜಿಲ್ಲಾ ಘಟಕದಿಂದ ಜಿಲ್ಲಾಧಿಕಾರಿಗಳ ಮೂಲಕ ಮಾನ್ಯ ಪ್ರಧಾನಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಲಾಯಿತು.

ಇಂದು ವೈದ್ಯರು ಕಪ್ಪು ಪಟ್ಟಿ ಧರಿಸಿ ಕಾರ್ಯ ನಿರ್ವಹಿಸುವ ಮೂಲಕ ವೈದ್ಯರ ಮೇಲಾಗುತ್ತಿರುವ ಹಲ್ಲೆಯನ್ನು ಪ್ರತಿಭಟಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ವೈ ಎಸ್ ಪಾಟೀಲ, ಭಾರತೀಯ ವೈದ್ಯಕೀಯ ಸಂಘದ ಕಾರ್ಯದರ್ಶಿ ಡಾ.ಸನತ್ ಕುಮಾರ್, ಡಾ. ಬಸವರಾಜು, ಡಾ. ತ್ಯಾಗರಾಜ್, ಡಾ.ಭೂಷಣ್, ಡಾ.ಲಕ್ಷ್ಮಿಕಾಂತ್, ಡಾ.ಸತ್ಯನಾರಾಯಣ, ಡಾ. ಮೋಹನ್, ಡಾ. ಸಂಜಯ್, ಡಾ.ನರಸಿಂಹಮೂರ್ತಿ,
ಮತ್ತಿತರರಿದ್ದರು.

ವೈದ್ಯರ ಮೇಲಿನ‌ ಹಲ್ಲೆ ಖಂಡಿಸಿ ಡೀಸಿಗೆ ಮನವಿ ಪತ್ರ

Public story


ತುಮಕೂರು: ಕೋವಿಡ್ ಸಂದರ್ಭದಲ್ಲಿ ದೇಶದಾದ್ಯಂತ ವೈದ್ಯರು ಹಾಗೂ ವೈದ್ಯಕೀಯ ಸಿಬ್ಬಂದಿಗಳ ಮೇಲೆ ನಡೆಯುತ್ತಿರುವ ಹಲ್ಲೆಯನ್ನು ಖಂಡಿಸಿ ವೈದ್ಯರಿಗೆ ಸೂಕ್ತ ರಕ್ಷಣೆ ಒದಗಿಸಬೇಕೆಂದು ಭಾರತೀಯ ವೈದ್ಯಕೀಯ ಸಂಘದ ಜಿಲ್ಲಾ ಘಟಕದಿಂದ ಜಿಲ್ಲಾಧಿಕಾರಿಗಳ ಮೂಲಕ ಮಾನ್ಯ ಪ್ರಧಾನಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಲಾಯಿತು.

ಇಂದು ವೈದ್ಯರು ಕಪ್ಪು ಪಟ್ಟಿ ಧರಿಸಿ ಕಾರ್ಯ ನಿರ್ವಹಿಸುವ ಮೂಲಕ ವೈದ್ಯರ ಮೇಲಾಗುತ್ತಿರುವ ಹಲ್ಲೆಯನ್ನು ಪ್ರತಿಭಟಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ವೈ ಎಸ್ ಪಾಟೀಲ, ಭಾರತೀಯ ವೈದ್ಯಕೀಯ ಸಂಘದ ಕಾರ್ಯದರ್ಶಿ ಡಾ.ಸನತ್ ಕುಮಾರ್, ಡಾ. ಬಸವರಾಜು, ಡಾ. ತ್ಯಾಗರಾಜ್, ಡಾ.ಭೂಷಣ್, ಡಾ.ಲಕ್ಷ್ಮಿಕಾಂತ್, ಡಾ.ಸತ್ಯನಾರಾಯಣ, ಡಾ. ಮೋಹನ್, ಡಾ. ಸಂಜಯ್, ಡಾ.ನರಸಿಂಹಮೂರ್ತಿ,
ಮತ್ತಿತರರಿದ್ದರು.

ಸ್ಮಾಟ್ ಸಿಟಿ ಹಣದಲ್ಲಿ ಮಾರಿಯಮ್ಮ ನಗರದ ನಿವಾಸಿಗಳಿಗೆ ಪುನರ್ ವಸತಿ ಶೀಘ್ರ ಹಂಚಿಕೆ: ಶಾಸಕ ಜ್ಯೋತಿಗಣೇಶ್

ತುಮಕೂರು: ಜಿಲ್ಲಾ ಕೊಳೆಗೇರಿ ನಿವಾಸಿಗಳ ಹಿತರಕ್ಷಣಾ ಸಮಿತಿ ಮತ್ತು ಸ್ಲಂ ಜನಾಂದೋಲನ ಕರ್ನಾಟಕ ಹಾಗೂ ಎಪಿಪಿಐ ಸಹಯೋಗದಲ್ಲಿ ಕೋವಿಡ್ 19 ಎರಡನೆ ಅಲೆಯಲ್ಲಿ ಸಂಕಷ್ಟ ದಲ್ಲಿರುವ ಮಾರಿಯಮ್ಮ ನಗರದ ಅಸಂಘಟಿತ ಕೂಲಿ ಕಾರ್ಮಿಕ ಕುಟುಂಬಗಳಿಗೆ ಮುಖಂಡರಾದ ದಿ||ಕಾಶಿ (ಅಟ್ಟೇಕರ್)ರವರ ಶ್ರದ್ಧಾಂಜಲಿ ಸಭೆಯ ನಿಮಿತ್ತ ದಿನಸಿ ಕಿಟ್ ವಿತರಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ತುಮಕೂರು ಜಿ.ಬಿ ಜ್ಯೋತಿಗಣೇಶ್ ಅವರು ಸ್ಮಾಟ್ ಸಿಟಿ ಹಣದಲ್ಲಿ ಮಾರಿಯಮ್ಮ ನಗರದ ನಿವಾಸಿಗಳಿಗೆ ಪುನರ್ ವಸತಿ ಶೀಘ್ರ ಹಂಚಿಕೆ ಮಾಡಲಾಗುವುದು ಎಂದು ಭರವಸೆ ನೀಡಿದರು.

ಸ್ಲಂ ಜನಾಂದೋಲನ ಕರ್ನಾಟಕ ರಾಜ್ಯ ಸಂಚಾಲಕ ಎ.ನರಸಿಂಹಮೂರ್ತಿ, ಸಿಐಟಿಯು ಸಂಘಟನೆಯ ಸೈಯದ್ ಮುಜೀಬ್. ಯುವ ಮುಖಂಡರಾದ ವಿನಯ್ ಜೈನ್. ಮಂಜುನಾಥ್.ಸಮಿತಿಯ ಪದಾಧಿಕಾರಿಗಳಾದ ಅರುಣ್. ತಿರುಮಲಯ್ಯ.ಮಾರಿಯಮ್ಮ ಯುವಕರ ಸಂಘದ ಕಣ್ಣನ್. ಚಕ್ರಪಾಣಿ. ಕಾತಿರಾಜ್.ಮುರುಗನ್. ಕಾಶಿರವರ ಧರ್ಮಪತ್ನ ಮುರಗಮ್ಮ ಕುಟುಂಬಸ್ತರು
ಪಾಲ್ಗೊಂಡಿದ್ದರು.