ಶಿಲ್ಪಾ ಎಂ.
ಇಂದು ಅಪ್ಪಂದಿರ ದಿನ ಅಂದರೆ ಸ್ವಾಭಿಮಾನದ ದಿನ ಕಾರಣ ಅಪ್ಪ ಅಂದರೆ ನೆನಪಾಗುವುದೆ “ಸ್ವಾಭಿಮಾನ ”
ನನ್ನ ಮಗನಿಗೆ ನಾವು ಇಂದು ತೋರುವ ಪ್ರೀತಿ ಕಾಳಜಿ ಶಿಸ್ತು. ಆಗ ನನ್ನ ಅಪ್ಪಾಜಿ ನಮ್ಮನ್ನು ಬೆಳೆಸಿದ ರೀತಿ ಮತ್ತು ಕಾಳಜಿಗೆ ಸಮವಿಲ್ಲ ಅನಿಸುತ್ತದೆ.
ಪ್ರಾಥಮಿಕ ಶಾಲೆಗೆ ನಾವು ಬರಲು ಒಂದು ಕಿ.ಲೋ ಮೀಟರ್ ನೆಡೆದು ಬರಬೇಕಿತ್ತು ದಿನಾಲು ನೆಡೆದು ಬರುತ್ತಿದ್ದ ನಮಗೆ ಕಷ್ಟವೇನು ಅನಿಸುತ್ತಿರಲಿಲ್ಲ. ಆದರೆ ಮಳೆ ಬಂದರೆ ಕೆರೆ ಕೋಡಿ ಹೋದರೆ ನಾವೇ ದಾರಿಯಲ್ಲಿ ಮುಳುಗುವಷ್ಟು ನೀರು ಆಗ ಶಾಲೆಗೆ ಬರುವುದೇ ಕಷ್ಟ. ಶಾಲೆ ತಪ್ಪಿಸದ ನನ್ನಪ್ಪ ನನ್ನ ಮತ್ತು ತಮ್ಮನನ್ನು ಎರಡು ಹೆಗಲ ಮೇಲು ಹೊತ್ತು ಶಾಲೆಗೆ ತಲುಪಿಸುತ್ತಿದ್ದರು.
ಪ್ರತಿ ಹಬ್ಬಕ್ಕೂ ಬಟ್ಟೆ ತರಲು ಆಗದಿದ್ದರೂ ಉಗಾದಿಗೂ ಮಹಾನವಮಿಗೂ ಬಟ್ಟೆಯನ್ನು ತಂದು ನಾವು ಉಟ್ಟು ಸಂಭ್ರಮಿಸುವಾಗ ಅವರೇ ನಮ್ನ ಖುಷಿಗೆ ಕಳೆದುಹೋಗುತ್ತಿದ್ದರು.
ಶಾಲೆಯಲ್ಲಿ ಹೇಳಿದ ಪುಸ್ತಕ ಪೆನ್ನು ತರಲು ಹೇಳಿದಾಗ ದುಡ್ಡಿಲ್ಲದೆ ಚಡಪಡಿಸಿ ನಮ್ಮ ಅಳು ನೋಡಲಾಗದೆ ಎಲ್ಲಾದರೂ ಸಾಲ ಮಾಡಿ ನಮಗೆ ಬೇಕಾದ ವಸ್ತು ಕೊಡಿಸುವ ಅಪ್ಪ ಎಲ್ಲೂ ನಮ್ಮ ಮುಂದೆ ಕಷ್ಟ ತೋರಿಸಲೇ ಇಲ್ಲ.
ಉಷಾರಿಲ್ಲದ ನನ್ನನ್ನು ಮಧ್ಯ ರಾತ್ರಿ ಹೊತ್ತು ದೇವಸ್ಥಾನಕ್ಕೆ ಹೋಗಿ ದೇವರಲ್ಲಿ ಬೇಡಿದ ಆ ಕೈಗಳು ಕಣ್ಣಲ್ಲಿನ ಮುಗ್ದತೆ ಇಂದು ಕಣ್ಣನ್ನು ತೇವವಾಗಿತ್ತವೆ.
ಕಾಲೇಜಿಗೆ ನಗರಕ್ಕೆ ಸೇರಿಸಿ ದುಬಾರಿ ಫೀ ಕಟ್ಟಿ ಓದಲು ಬಿಟ್ಟು ಹೋಗುವಾಗ ನಾನು ಬಿಕ್ಕಿ ಬಿಕ್ಕಿ ಅತ್ತಾಗ ಕಣ್ಣಲ್ಲಿನ ದುಖಃ ಅದುಮಿ ಗಟ್ಟಿ ಮನಸ್ಸು ಮಾಡಿ ಬಿಟ್ಟು ಹೋಗಿದ್ದರು. ವಾರಕ್ಕೆ ಒಮ್ಮೆ ಬಂದು ಕೈ ಯಲ್ಲಿ ಇದ್ದಷ್ಟು ದುಡ್ದು ಇಟ್ಟು ಚೆನ್ನಾಗಿ ಓದಲು ಹೇಳಿ ಹೋಟೆಲ್ನಲ್ಲಿ ಬಿಸಿ ಮಸಾಲಾ ದೋಸೆ ಕೊಡಿಸಿ ತಿನ್ನಿಸಿ ಹೋದ ನೆನಪು. ಪ್ರತಿ ವಾರ ಅಪ್ಪಾಜಿಯನ್ನು ಕಾಯುತ್ತಿದ್ದ ನನಗೆ ಮದುವೆ ಮಾಡಿ ಕೊಟ್ಟಾಗಲೂ ವಾರಕ್ಕೊಮ್ಮೆ ಕಾಯುವ ರೂಡಿ ಅಭ್ಯಾಸವಾಗಿತ್ತು.
ಇಂದು ನನ್ನ ಮಗನನ್ನು ತಾತನಾಗಿ ಅಪ್ಪ ಮುದ್ದಿಸುವಾಗ ನೀನು ನಮ್ಮನ್ನು ಇವನಷ್ಟು ಚೆನ್ನಾಗಿ ನೋಡಿಕೊಳ್ಳಲಿಲ್ಲ ಎಂದಾಗ ಅಪ್ಪನ ಪ್ರೀತಿಯ ನಗು ಇಂದು ನನ್ನ ಅಪ್ಪನ ಕಾಳಜಿ ಪ್ರೀತಿ ಸ್ವಾಭಿಮಾನ ನೆನಪಿಸಿಕೊಂಡಾಗ ಗವ೯ದಿಂದ ಶುಭಾಶಯ ತಲುಪಿಸಲು ಹೆಮ್ಮೆ ಆಗುತ್ತದೆ.