Public story
ತುರುವೇಕೆರೆ: ಜಮೀನು ಸಂಬಂಧ ತಾಲ್ಲೂಕಿನ ಮಾಯಸಂದ್ರ ಹೋಬಳಿಯ ಹಂಚಿಹಳ್ಳಿ ಪರಿಶಿಷ್ಟ ಜಾತಿ ಕುಟುಂಬದ ಮೇಲೆ ಹಲ್ಲೆ ನಡೆಸಿದ ಸವರ್ಣೀಯನ ವಿರುದ್ದ ತುರುವೇಕೆರೆ psi ಪ್ರೀತಂ ಅವರು ಯಾವುದೇ ಕ್ರಮ ಕೈಗೊಂಡಿಲ್ಲವೆಂದು ದಸಂಸ ತಾಲ್ಲೂಕು ಸಂಚಾಲಕ ದಂಡಿನಶಿವರಕುಮಾರ್ ನೇರ ಆರೋಪ ಮಾಡಿದರು.
ಪಟ್ಟಣದಲ್ಲಿ ದಸಂಸ ಮತ್ತು ಹಲ್ಲೆಗೊಳಗಾದ ಕುಟುಂಬ ನ್ಯಾಯಕ್ಕಾಗಿ ಒತ್ತಾಯಿಸಿದ ವೇಳೆ ಮಾತನಾಡಿದ ಅವರು,
ತಾಲ್ಲೂಕಿನ ಹಂಚಿಹಳ್ಳಿ ಪರಿಶಿಷ್ಟ ಜಾತಿಯ ಹುಚ್ಚಯ್ಯ ಅವರು ಸರ್ವೇ ನಂ.135 ರಲ್ಲಿ ಸು. 30 ವರ್ಷಗಳಿಂದ ಅನುಭವದಲ್ಲಿದ್ದಾರೆ. ಪಕ್ಕದ ಜಮೀನಿನ ಸವರ್ಣೀಯನೊಬ್ಬ ಪರಿಶಿಷ್ಟ ಜಾತಿ ಕುಟುಂಬದ ಜಮೀನಿನಲ್ಲಿದ್ದ ತಗಡಿನ ಶೀಟ್ ಮನೆಗೆ ಹಾನಿ ಮಾಡಿದ್ದಾನೆ.
ಈ ಬಗ್ಗೆ ಜೂ. 15 ರಂದು ರಕ್ಷಣೆ ನೀಡುವಂತೆ ತುರುವೇಕೆರೆ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ. ಆದರೂ ಸಹ ಸಂಬಂದ ಆರೋಪಿಯನ್ನು ಠಾಣೆಗ ಕರೆದು ವಿಚಾರಣೆ ಮಾಡಲು ಪಿಎಸ್್ಟಐ ಪ್ರೀತಂ ಮೀನಾಮೇಷ ಎಣಿಸಿದ್ದಾರೆ.
ಈ ಬಗ್ಗೆ ಕುಣಿಗಲ್ ಡಿ.ವೈ.ಎಸ್.ಪಿ.ಯವರ ಬಳಿ ತಮ್ಮ ಅಳಲು ತೋಡಿಕೊಂಡರೆ ಅವರೂ ತಮ್ಮ ಜವಾಬ್ದಾರಿಯಿಂದ ನುಣುಚಿಕೊಂಡು ತುರುವೇಕೆರೆ ಠಾಣೆ ಕಡೆ ಬೊಟ್ಟು ಮಾಡುತ್ತಾರೆ. ಜೀವ ಭಯದಲ್ಲಿರುವ ಪರಿಶಿಷ್ಟ ಜಾತಿ ಕುಟುಂಬದ ರಕ್ಷಣೆ ಮಾಡಲು ಪೊಲೀಸರೇ ಹಿಂದೇಟು ಹಾಕಿದರೆ ಪರಿಶಿಷ್ಟರ ಹಕ್ಕುಗಳನ್ನು ರಕ್ಷಿಸುವವರು ಯಾರು ಎಂದು ಪ್ರಶ್ನಿಸಿದರು.
ತಾಲ್ಲೂಕು ಕಂದಾಯ ಇಲಾಖೆಗೆ ಬಗರ್ ಹುಕುಂ ಸಾಗುವಳಿ ಮಂಜೂರಾತಿಗೆ ಇದೇ ಪರಿಶಿಷ್ಟ ಜಾತಿ ಕುಟುಂಬ 1999 ರಲ್ಲಿ ಅರ್ಜಿ ಸಲ್ಲಿಸಿತ್ತು. ಅಂದಿನ ಶಾಸಕ ಎಂ.ಟಿ.ಕೃಷ್ಣಪ್ಪರು ಭೂ ಮಂಜೂರಾತಿ ನೀಡಲು ಕಡತ ಮಂಡಿಸುವಂತೆ ಸಹಿ ಹಾಕಿದ್ದರು.
ಇದಾದ ಕೆಲವೇ ದಿನಗಳಲ್ಲಿ ಕಂದಾಯ ಇಲಾಖೆಯಿಂದ ಶಾಸಕರು ಸಹಿ ಹಾಕಿದ್ದ ಕಡತವೇ ಮಾಯವಾಗಿದೆ. ಇದು ತಾಲ್ಲೂಕು ಕಂದಾಯ ಇಲಾಖೆಯ ಕಾರ್ಯವೈಖರಿಗೆ ಕೈಗನ್ನಡಿಯಾಗಿದೆ. ಈ ಬಗ್ಗೆ ಸಮಗ್ರ ತನಿಖೆಯಾಗಿ ತಪ್ಪಿತಸ್ಥರೆಲ್ಲರಿಗೂ ಶಿಕ್ಷೆಯಾಗಬೇಕು ಎಂದು ಒತ್ತಾಯಿಸಿದರು.
ಈ ಬಗ್ಗೆ ಪರಿಶಿಷ್ಟ ಜಾತಿ ಹುಚ್ಚಯ್ಯನಿಗೆ ನ್ಯಾಯ ಸಿಗದಿದ್ದರೆ ಪೊಲೀಸ್ ಹಾಗೂ ಕಂದಾಯ ಇಲಾಖೆ ವಿರುದ್ದ ಜಿಲ್ಲಾ ದ.ಸಂ.ಸ ವತಿಯಿಂದ ಬೃಹತ್ ತಮಟೆ ಚಳವಳಿ ನಡೆಸಲಾಗುವುದು ಅಗತ್ಯ ಬಿದ್ದರೆ ಎಸ್.ಪಿ. ಹಾಗೂ ಜಿಲ್ಲಾಧಿಕಾರಿಗಳ ಕಚೇರಿ ಬಳಿ ಹೋರಾಟ ನಡೆಸಲು ಹಿಂದೇಟು ಹಾಕುವುದಿಲ್ಲ ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ದ.ಸಂ.ಸ ಪದಾಧಿಕಾರಿಗಳಾದ ಮಲ್ಲೂರು ತಿಮ್ಮೇಶ್, ಬಡಾವಣೆಶಿವರಾಜ್,ಟಿ.ಬಿ.ಕ್ರಾಸ್ ಮಂಜು, ಪುಟ್ಟರಾಜ್, ಮುಳಕಟ್ಟಯ್ಯ, ಜಕ್ಕನಹಳ್ಳಿರವಿ, ಹುಚ್ಚಯ್ಯ ಕುಟುಂಬದ ಸದಸ್ಯರು ಇದ್ದರು.