ಕೆ.ಇ.ಸಿದ್ದಯ್ಯ
ತುಮಕೂರು: ಸುಮಾರು ಐದು ತಿಂಗಳಿಂದ ಸಂಬಳ ಇಲ್ಲ. ಈ ಸರ್ಕಾರ ನಮಗೆ ಮೋಸ ಮಾಡುತ್ತಿದೆ.
ನಾವಂತೂ ಇಲ್ಲಿಂದ ಎದ್ದೇಳಲ್ಲ. ನಾವು ಬೆಂಗಳೂರಿಗೆ ನಡೆದುಕೊಂಡು ಹೋದರೆ ಇವರಿಗೇನು.

ಅಮಾನಿಕೆರೆ ಆವರಣದಲ್ಲಿ ಕುಳಿತಿರುವ ಮಹಿಳೆಯರು
ವಿಜಯಪುರ ಜಿಲ್ಲೆಯಿಂದ ಬಂದಿರುವ ಅಂಗನವಾಡಿ ಮಹಿಳೆಯರ ಮಾತಿದು.
ನಾವು ದಿನಾಲು ಸಾಯುತ್ತಿದ್ದೇವೆ. ಹೀಗಾಗಿ ಊಟ ಇಲ್ಲದೇ ಇಲ್ಲೇ ಸಾಯೋಣ ಬಿಡಿ ಎಂದಾಗ ಅವರ ಕಣ್ಣಾಲಿಗಳು ತುಂಬಿ ಬಂದವು.






ುಮಕೂರು ನಗರದ ಕೋರ್ಟ್ ಆವರಣ, ಅಮಾನಿಕೆರೆ ತುಂಬೆಲ್ಲ ಕೆಂಪು ಸೀರೆ ತೊಟ್ಟ ಮಹಿಳೆಯರು ತುಂಬಿಹೋಗಿದ್ದಾರೆ. ಎರಡು ದಿನದಿಂದ ಸ್ನಾನ ಇಲ್ಲ, ಊಟ ಇಲ್ಲ. ಚಳಿಯಲ್ಲಿ ತತ್ತರಿಸುತ್ತಿದ್ದಾರೆ.
ಅವರ ಕಷ್ಟದ ಕೆಲವು ಚಿತ್ರಗಳು ಮೇಲಿನವು.
ಸರ್ಕಾರ ಈಗಲಾದರೂ ಇವರ ಕಡೆ ನೋಡಬೇಕಾಗಿದೆ.



