ಜಸ್ಟ್ ನ್ಯೂಸ್

ಆಟೋ ಚಾಲಕರ ಕನ್ನಡ ಪ್ರೇಮ

ತುಮಕೂರು ಜಿಲ್ಲೆ  ಪಾವಗಡ ತಾಲ್ಲೂಕಿನ ಲಿಂಗದಹಳ್ಳಿಯಲ್ಲಿ ಭಾನುವಾರ ಆಟೋ ಚಾಲಕರ ಸಂಘದ ವತಿಯಿಂದ ವಿಜೃಂಭಣೆಯಿಂದ  ಕನ್ನಡ ರಾಜ್ಯೋತ್ಸವ ಆಚರಿಸಲಾಯಿತು.

ಆಟೋಗಳನ್ನು ಕನ್ನಡ ಧ್ವಜ, ವಿವಿಧ ಹೂವುಗಳಿಂದ ಅಲಂಕರಿಸಿ ಚಾಲಕರು ಆಟೋಗಳನ್ನು ಹೂವಿನ ರಥಗಳನ್ನಾಗಿ ಮಾರ್ಪಡಿಸಿದ್ದರು.

ಅಲಂಕೃತ ಆಟೋಗಳೊಂದಿಗೆ ಲಿಂಗದಹಳ್ಳಿ, ಸಾಸಲಕುಂಟೆ ಸೇರಿದಂತೆ ಗಡಿಯ 30 ಕ್ಕೂ ಹೆಚ್ಚಿನ ಗ್ರಾಮಗಳಲ್ಲಿ ಮೆರವಣಿಗೆ ನಡೆಸಿದರು.

ಆಟೋ ಚಾಲಕರಾದ ಈರಣ್ಣ, ಮಂಜುನಾಥ್, ರಘು, ಯತೀಶ್, ಕೃಷ್ಣ, ಶಿವಕುಮಾರ್, ದೇವರಾಜ್, ಶ್ರೀಕಾಂತ್, ಲೋಕೇಶ್, ಕೆಂಚಪ್ಪ, ತಿಪ್ಪೇಸ್ವಾಮಿ, ರಾಜೇಶ್, ಕೆಂಚಣ್ಣ, ಮಂಜು, ಲೋಕೇಶ್, ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.

Comments (2)

  1. ಜೈ ಕನ್ನಡ ರಾಜ್ಯೋತ್ಸವದ ಶುಭಾಶಯಗಳು ಅಣ್ಣ

  2. ಜೈ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು ಅಣ್ಣ

Comment here