ತುರುವೇಕೆರೆ: ಪಟ್ಟಣದ ಸರ್ಕಾರಿ ಮೌಲಾನ ಆಜಾದ್ ಆಂಗ್ಲ ಮಾಧ್ಯಮ ಮಾದರಿ ಶಾಲಾ ವತಿಯಿಂದ 2024 -25 ನೇ ಸಾಲಿನ ತಾಲ್ಲೂಕು ಕಸಬಾ ಹೋಬಳಿ ಮಟ್ಟದ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆಗಳ ಕ್ರೀಡಾಕೂಟವನ್ನು ಇಲ್ಲಿನ ಜಿಜೆಸಿ ಕಾಲೇಜು ಮೈದಾನದಲ್ಲಿ ಶುಕ್ರವಾರ ಹಮ್ಮಿಕೊಳ್ಳಲಾಗಿತ್ತು.
ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ತಾಲ್ಲೂಕು ವಿಸ್ತರಣಾ ಅಧಿಕಾರಿ ಮೆಹಬೂಬಿ ಜಿ.ಆರ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಾ, ಮಕ್ಕಳ ದೈಹಿಕ ಮತ್ತು ಮಾನಸಿಕ ಸಮತೋಲವನ್ನು ಕಾಪಾಡಿಕೊಳ್ಳಲು ಕ್ರೀಡೆ ಅತ್ಯಮೂಲ್ಯವಾದ ಸಾಧನ. ಪಠ್ಯ ವಿಷಯಗಳ ಕಲಿಕೆಯ ಜೊತೆಗೆ ಕ್ರೀಡಾ ಶಿಕ್ಷಣವೂ ಅತ್ಯಗತ್ಯ. ಪ್ರಪಂಚದ ಮುಂದುವೆರೆ ದೇಶಗಳಲ್ಲಿ ಕ್ರೀಡೆಗೆ ಹೆಚ್ಚಿನ ಒತ್ತು ಕೊಡುತ್ತಾರೆ ಅದೇ ರೀತಿ ನಮ್ಮ ದೇಶದಲ್ಲಿಯೂ ಕ್ರೀಡೆಗೆ ವಿಶೇವಾದ ಸ್ಥಾನ ಮಾನ ನೀಡಲಾಗುತ್ತಿದೆ. ಅದನ್ನು ಪ್ರತಿಯೊಬ್ಬ ವಿದ್ಯಾರ್ಥಿಗಳು ಸದುಪಯೋಗ ಪಡಿಸಿಕೊಳ್ಳಬೇಕು. ಹಾಗು ಅಂತರರಾಷ್ಟ್ರೀಯ ಮಟ್ಟದಲ್ಲಿ ವಿವಿಧ ಕ್ರೀಡೆಗಳಲ್ಲಿ ಸಾಧನೆ ಮಾಡಿರುವ ಸಾಧಕರ ಜೀವನ ಯಶೋಗಾತೆಯನ್ನು ಪ್ರತಿಯೊಬ್ಬರು ಅಧ್ಯಯನ ಮಾಡಬೇಕು ಎಂದರು.
ತಾಲ್ಲೂಕು ದೈಹಿಕ ಶಿಕ್ಷಣ ಪರಿವೀಕ್ಷಕರಾದ ಸಿದ್ದಪ್ಪ ನಾಗಪ್ಪ ವಾಲೇಕರ್ ರವರು ಧ್ವಜಾರೋಹಣ ಮಾತನಾಡುತ್ತಾ ಹಳ್ಳಿಗಾಡಿನ ಮಕ್ಕಳು ಕ್ರೀಡಾಸಕ್ತಿಯಲ್ಲಿ ಸದೃಢರಾಗಿದ್ದು ಅವರಿಗೆ ಸೂಕ್ತ, ಮಾರ್ಗದರ್ಶನ ಹಾಗು ಪ್ರೋತ್ಸಾಹ ನೀಡಿದರೆ ರಾಷ್ಟ್ರದ ಕೀರ್ತಿಯನ್ನು ಹೆಚ್ಚಿಸುವ ಶಕ್ತಿ ಇದೆ ಎಂದರು.
ಕಸಬಾ ಹೋಬಳಿ ವ್ಯಾಪ್ತಿಯ 25 ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆಯ ವಿದ್ಯಾರ್ಥಿಗಳು ಕ್ರೀಡಾಕೂಟದಲ್ಲಿ ಭಾಗವಹಿಸಿ, ಬಹುಮಾನ ಗೆದ್ದರು. ಹೋಬಳಿ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿಗಳು ತಾಲ್ಲೂಕು ಮಟ್ಟಕ್ಕೆ ಆಯ್ಕೆಯಾದರು.
ಕಾರ್ಯಕ್ರಮದಲ್ಲಿ ತಾಲ್ಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಷಣ್ಮುಖಪ್ಪ, ಉಪಾಧ್ಯಕ್ಷರಾದ ನಜೀರ್, ಪ್ರಧಾನ ಕಾರ್ಯದರ್ಶಿ ಕೆ.ಎಸ್.ಭಾರತಿ, ನಿರ್ದೇಶಕ ಕಂಚಿರಾಯಪ್ಪ, ಕ್ಲಸ್ಟರ್ ಸಿ.ಆರ್.ಪಿಗಳಾದ ವಾಸ್ ಕೋಟ್ ರಾಜು, ಸುರೇಶ, ಮೌಲಾನಾ ಆಜಾದ್ ಶಾಲೆಯ ಮುಖ್ಯೋಪಾಧ್ಯಾಯ ಜಗನ್ನಾಥ್ ಡಿ.ಎಸ್ ಅಲ್ಪಸಂಖ್ಯಾರ ಇಲಾಖೆಯ ಸಿಬ್ಬಂದಿ ಅಸ್ಲಾಂಪಾಷಾ, ಶಿಕ್ಷಕರು ಮತ್ತು ಪೋಷಕರು ವಿದ್ಯಾರ್ಥಿಗಳು ಭಾಗವಹಿಸಿದ್ದರು.