Thursday, September 19, 2024
Google search engine
Homeಜನಮನತುಮಕೂರು ಎಸ್ಪಿ ಕೌರವನಾಗಿ ರಂಗಕ್ಕೆ ಬಂದಾಗ... ಹೀಗಿತ್ತು

ತುಮಕೂರು ಎಸ್ಪಿ ಕೌರವನಾಗಿ ರಂಗಕ್ಕೆ ಬಂದಾಗ… ಹೀಗಿತ್ತು

ಪೊಲೀಸ್ ವರಿಷ್ಠರೊಬ್ಬರು ರಂಗದ ಮೇಲೆ ಅದೂ ದುರ್ಯೋಧನನ ಪಾತ್ರದಲ್ಲಿ ಕಾಣಿಸಿಕೊಳ್ಳುವುದು ಅಂದರೆ ಮೆಚ್ಚಲೇ ಬೇಕು. ಒಬ್ಬ ಅಧಿಕಾರಿ ಸಾಮಾನ್ಯರನ್ನು ತಲುಪುವುದು ಅಂದರೆ ಹೀಗೇನೆ. ಡಾ.ವಂಶಿಕೃಷ್ಣ ಆಯ್ಕೆ ಮಾಡಿಕೊಂಡಿದ್ದು ದುರ್ಯೋದನ ಪಾತ್ರವನ್ನು ಅದು ಒಂದು ಹಾಡು ಮಾತ್ರ. ಆ ಒಂದು ಹಾಡಿಗೆ ಪ್ರೇಕ್ಷಕರಿಂದ ಚಪ್ಪಾಳೆ ಗಿಟ್ಟಿಸಿಕೊಂಡರು.

ಕಲೆ ಎಲ್ಲರನ್ನು ಆಕರ್ಷಿಸುತ್ತದೆ. ಸಾಹಿತ್ಯ, ಸಂಗೀತ ರಂಗಭೂಮಿ –ಹೀಗೆ ಕೆಲವು ಕಲೆಗಳು ಜನರಿಗೆ ಅನಂದ ಉಂಟು ಮಾಡುವ ಶಕ್ತಿ ಇರುತ್ತದೆ. ಅದೇ ರೀತಿ ರಂಗಭೂಮಿಗೂ ಅಂತಹ ಶಕ್ತಿ ಇದೆ. ಬಾಲರಿಂದ ವೃದ್ಧವರೆಗೂ, ಅನಕ್ಷರನಿಂದ ಅಧಿಕಾರಿವರೆಗೂ ಎಲ್ಲರೂ ರಂಗಭೂಮಿ ಕಲೆಗೆ ಸೋಲದವರಿಲ್ಲ. ನಾಟಕ ಪ್ರೇಕ್ಷಕರನ್ನು ತಲ್ಲೀನರನ್ನಾಗಿಸುವಂತೆ ಮಾಡುತ್ತದೆ. ಅದರಲ್ಲೂ ಪೌರಾಣಿಕ ನಾಟಕಗಳೆಂದರೆ ಜನರಿಗೆ ಇನ್ನಿಲ್ಲದ ಆಸಕ್ತಿ.

ಹೌದು, ನಾಟಕ ಎಲ್ಲರನ್ನು ವೇದಿಕೆ ಮೇಲೆ ಕುಣಿಯುವಂತೆ ಮಾಢುವ ವಿಶೇಷ ಶಕ್ತಿ ಇದೆ. ಹಳ್ಳಿಯ ಹೈದನೂ ರಂಗದ ಮೇಲೆ ನಿಂತು ಹಾಡುತ್ತಾನೆ. ಸರ್ಕಾರಿ ನೌಕರರು ನಟಿಸುತ್ತಾರೆ. ಹಾಗೆಯೇ ಪೊಲೀಸರು ಕೂಡ ನಾಟಕದಲ್ಲಿ ನಟಿಸುವುದು ಸಾಮಾನ್ಯ. ಆದರೆ ಒಬ್ಬ ಅಧಿಕಾರಿ ಅದೂ ಜಿಲ್ಲಾ ಮಟ್ಟದ ಪೊಲೀಸ್ ವರಿಷ್ಠರು ನಾಟದಲ್ಲಿ ಅಭಿನಯಿಸುತ್ತಾರೆಂದರೆ ವಿಶೇಷವೇ. ಅಂದಹಾಗೆ ತುಮಕೂರು ಜಿಲ್ಲಾ ಪೊಲೀಸ್ ವರಿಷ್ಟ ಡಾ.ವಂಶಿ ಕೃಷ್ಣ ಅವರು ಇಂದು ರಂಗದ ಮೇಲೆ ಕಾಣಿಸಿಕೊಂಡು ಗಮನ ಸೆಳೆದರು.

ವಂಶಿಕೃಷ್ಣ ಅವರು ಮೂಲತಃ ಆಂಧ್ರದವರು. ತೆಲುಗು ಮತ್ತು ಇಂಗ್ಲೀಷ್ ಚೆನ್ನಾಗಿ ಮಾತನಾಢಬಲ್ಲರು. ಆದರೆ ಕನ್ನಡ ಅಷ್ಟೊಂದು ಸರಾಗವಾಗಿ ಹೇಳಲು ಬರುವುದಿಲ್ಲ. ಅಂತಾಧ್ಧರಲ್ಲೂ ಅವರ ಯಾವುದೇ ಬಿಂಕವನ್ನು ಇಟ್ಟುಕೊಳ್ಳದೆ ರಂಗದ ಮೇಲೆ ದುರ್ಯೋಧನನ ಪೋಷಾಕಿನಲ್ಲಿ ಕಾಣಿಸಿಕೊಂಡು ತಮ್ಮಲ್ಲಿರುವ ಪ್ರತಿಭೆ ಪ್ರದರ್ಶಿಸಿದರು.

ಕೇವಲ ಜನರ ರಕ್ಷಣೆ ಮಾತ್ರವಲ್ಲ. ದುಷ್ಟರನ್ನು ಮಟ್ಟಹಾಕುವುದಲ್ಲ. ಪ್ರೇಕ್ಷಕರ, ನಾಟಕ ಪ್ರೇಮಿಗಳ ಹೃದಯವನ್ನೂ ಗೆಲ್ಲಬಲ್ಲೆ ಎಂಬುದನ್ನು ತೋರಿಸಿಕೊಟ್ಟರು. ದುರ್ಯೋಧನನ ಗತ್ತು, ಅವರಲ್ಲಿತ್ತು. ಮೊದಲೇ ಪೊಲೀಸ್ ಕಟ್ಟುಮಸ್ತಾದ ದೇಹ. ದುರ್ಯೋಧನನ ಪಾತ್ರಕ್ಕೆ ಮಾಡಿ ಹೇಳಿಸಿದಂತೆ ಇತ್ತು. ಅಂತೂ ಪೊಲೀಸ್ ವರಿಷ್ಠಾಧಿಕಾರಿ ವಂಶಿಕೃಷ್ಣ ರಂಗದ ಮೇಲಿದ್ದ ಕೆಲವೇ ಕ್ಷಣವಾದರೂ ಪ್ರೇಕ್ಷಕರ ಹೃದಯದಲ್ಲಿ ನೆಲೆಸಿದರು ಎಂದೇ ಹೇಳಬೇಕು.

RELATED ARTICLES

2 COMMENTS

  1. ಪಬ್ಲಿಕ್ ಸ್ಟೋರಿ ಸುದ್ಧಿ ವಾಹಿನಿ ವ್ಯವಸ್ಥಾಪಕರಿಗೆ ಹೃತ್ಪೂರ್ವಕ ಅಭಿನಂದನೆಗಳು. ತಾಜಾ ಸುದ್ಧಿ ಗಳನ್ನು ಕೂಡಲೇ ನಮಗೆ ತಲುಪುವಲ್ಲಿನ ತಮ್ಮ ತವಕ ನಿಜಕ್ಕೂ ಶ್ಲಾಘನೀಯ. ಅಂದ ಹಾಗೆ ಪೋಲಿಸ್ ಇಲಾಖೆಯವರ ಬದುಕು ಸದಾ
    ಒತ್ತಡದಲ್ಲಿರುವಂತದ್ದು. ಆದಾಗ್ಯೂ ಇಲಾಖೆ ಯ ಉನ್ನತಾಧಿಕಾರಗಳ ಕಲಾಭಿರುಚಿಯನ್ನು ಮೆಚ್ಚುಬೇಕು. ಕಲೆ ನಮ್ಮನ್ನು ನಿಜ ಮಾನವರಾಗುವುದಕ್ಕೆ ಪ್ರೇರೇಪಿಸುತ್ತದೆ. ಸಮಾಜವನ್ನು ಪ್ರೀತಿಸುವುದ ಕಲಿಸುತ್ತದೆ. ಇದು ನನಗೆ ಸ್ವತಃ ಅನುಭವಕ್ಕೆ ಬಂದಿದೆ.
    ಪಬ್ಲಿಕ್ ಸ್ಟೋರಿ ವಾಹಿನಿಗೆ ಮತ್ತೊಮ್ಮೆಅಭಿನಂದನೆಗಳು..

  2. Sir super. Duryodhana pathrakke fit agide personality. So marvelous makeup. I expect more characters such as angulimala, ravana, bhakton ambareesha, nirantar kasheepu, and if possible vidura from you in future. Any how thank you to encourage art artists.

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?