Publicstory/prajayoga
ವರದಿ, ಎ.ಶ್ರೀನಿವಾಸಲು, ಪಾವಗಡ
ಪಾವಗಡ: ಲಗೇಜ್ ಆಟೋ ಮತ್ತು ಕಾರ್ ನಡುವೆ ಭೀಕರ ಅಪಘಾತ ಸಂಭವಿಸಿ ಲಗೇಜ್ ಆಟೋದಲ್ಲಿ ಇದ್ದ 7 ಜನ ಪ್ರಯಾಣಿಕರು ತೀವ್ರವಾಗಿ ಗಾಯಗೊಂಡ ಘಟನೆ ತಾಲೂಕಿನ ಉಪ್ಪಾರಳ್ಳಿ ಗೇಟ್ ಬಳಿ ಇಂದು ನಡೆದಿದೆ.
ಕಾರು ಪಾವಗಡ ದಿಂದ ನಾಗಲಮಡಿಕೆ ಕಡೆ ಹೋಗುತ್ತಿರುವ ವೇಳೆ ಉಪ್ಪಾರಹಳ್ಳಿ ಕ್ರಾಸಿಂಗ್ ಬಳಿ ಎದುರಿಗೆ ಬರುತ್ತಿದ್ದ ಲಗೇಜ್ ಆಟೋಕ್ಕೆ ಡಿಕ್ಕಿ ಹೊಡೆದ ಪರಿಣಾಮ ಆಟೋದಲ್ಲಿದ್ದ ತಿರುಮಣಿಯ ಗ್ರಾಮದ ಪ್ರಿಯಾಂಕ, ವೃಷಾಂಕ, ಸುಬ್ರಮಣಿ, ನರಸಿಂಹಮೂರ್ತಿ, ರತ್ನಮ್ಮ, ಭಾಗ್ಯಮ್ಮ, ಸಂಧ್ಯಾ ವಾಣಿ ಗಂಭೀರವಾಗಿ ಗಾಯಗೊಂಡಿದ್ದು, ಗಾಯಾಳುಗಳಿಗೆ ಪಟ್ಟಣ ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಲಾಗಿದ್ದು, ತೀವ್ರವಾಗಿ ಗಾಯಗೊಂಡ ಸುಬ್ರಮಣಿಯನ್ನು ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿನ ನಿಮಾನ್ಸ್ ಗೆ ಕಳುಹಿಸಲಾಗಿದೆ.
ನರಸಿಂಹ ಎಂಬುವರನ್ನು ಹೆಚ್ಚಿನ ಚಿಕಿತ್ಸೆಗಾಗಿ ತುಮಕೂರಿಗೆ ಕಳಿಹಿಸಲಾಗಿದೆ. ಉಳಿದ ಗಾಯಾಳುಗಳಿಗೆ ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದು ಬಂದಿದೆ.
ಸ್ಥಳಕ್ಕೆ ತಿರುಮಣಿ ಪೋಲಿಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ರಾಜಣ್ಣ ಅವರು ಭೇಟಿ ಪರಿಶೀಲಿಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.

