Publicstory. in
Tumkuru: ಗ್ರಾಮೀಣ ಭಾರತದ ಅಳಿವು ಉಳಿವಿನ ಪ್ರಶ್ನೆ ಇದಾಗಿದೆ . ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದ ಭಾರತ ಸರ್ಕಾರ ರೈತರ ಗಮನಕ್ಕೆ ತರದೆ ಹೊಸ ಕಾನೂನು ಕಾಯ್ದೆಗಳನ್ನು ಜಾರಿಗೆ ತರಲಾಗಿದೆ ಎಂದು ರೈತ ಸಂಘಟನೆ ಕಿಡಿಕಾರಿದೆ.
ಈ ನೀತಿಗಳು ಸಂಪೂರ್ಣ ರೈತರ ವಿರೋಧಿ ನೀತಿಗಳಾಗಿವೆ . ಮುಂದಿನ ದಿನಗಳಲ್ಲಿ ಹೊಕ್ಕಲುತನ ಕೈತಪ್ಪಿ ಕಂಪನಿಗಳ ಕೈಸೇರಲಿದೆ.
ಅಂತ ಮೂರು ಹೊಸ ಕಾನೂನುಗಳು ಜಾರಿಗೆ ತರಲಾಗಿದ್ದು ಇದನ್ನು ಕೂಡಲೇ ವಾಪಸ್ಸು ಪಡೆಯಬೇಕೆಂದು ಒತ್ತಾಯಿಸಲು ರೈತರು ಹನ್ನೊಂದು ದಿನಗಳ ಹಿಂದೆ ದೆಹಲಿಯ ರಾಮ್ ಲೀಲಾ ಮೈದಾನದಲ್ಲಿ ಬರುವ ತಿರ್ಮಾನವಾಗಿತ್ತು .
ಅದರಂತೆ ರೈತರು ದೆಹಲಿಗೆ ಬರುತ್ತಿದ್ದರು , ಕೇಂದ್ರ ಸರ್ಕಾರ ರೈತರ ಮೇಲೆ ದೆಹಲಿ ಪ್ರವೇಶಕ್ಕೆ ಮುಂಚೆ ರಸ್ತೆ ಬಂದ್ ಮಾಡಿ ಬರುತ್ತಿರುವಂತ ರೈತರ ಮೇಲೆ ಜಲಪಿರಂಗಿ , ಅತ್ರುವಾಯು , ಲಾಟಿ ಏಟು ರೈತರಿಗೆ ನೀಡಿದರು , ರೈತ ಸಮುದಾಯ ರೋಚ್ಚಿಗೆಳದೆ ಶಾಂತಿಯಿಂದ ಚಳುವಳಿಯನ್ನು ಮುಂದುವರೆಸಿದೆ .
ರೈತರ ಸುದ್ದಿ ದೇಶದಲ್ಲಿ ತೀವ್ರ ಚರ್ಚೆಗೆ ಜನರು ಒಳಪಡಸಲಿಲ್ಲಾ , ಆದರೆ ಈ ವಿಚಾರ ಅಂತರಾಷ್ಟ್ರೀಯ ವಿಷಯವಾಗಿ ಚರ್ಚೆಯಾಗುತ್ತಿದ್ದು , ಕೆನಡ ಪ್ರಧಾನಿ ರೈತರ ಕಷ್ಟ ಪರಿಹಾರಿಸಿ ಎಂದು ಹೇಳಿದ್ದಾರೆ ವಿಶ್ವಸಂಸ್ಥೆ ಚರ್ಚೆ ಮಾಡುತ್ತಿದ್ದೆ , ಲಂಡನ್ ದೇಶದ 37 ಜನ ಸಂಸದರು ಆ ದೇಶದ ಪತ್ರವನ್ನು ಪ್ರಧಾನಿಗೆ ಬರೆದು , ಭಾರತದ ಪ್ರಧಾನಿಗೆ ತಿಳಿಸಬೇಕೆಂದು ಹೇಳಿರುವ ಸಂಧರ್ಭದಲ್ಲಿ ಸರ್ಕಾರ ಯಾವುದೇ ತೀರ್ಮಾನವನ್ನು ತೆಗೆದುಕೊಳ್ಳದೆ ಸುಮ್ಮನಿರುವುದು ಈ ದೇಶದ ದುರಂತವೇ ಆಗಿದೆ ಎಂದು ಹೇಳಿದೆ.
ಆದರಿಂದ ದೇಶದ ರೈತ ಸಂಘಟನೆಗಳು ಡಿಸೆಂಬರ್ 8 ನೇ ತಾರೀಖು ಮಂಗಳವಾರ ಭಾರತ್ ಬಂದ್‌ಗೆ ಕರೆ ನೀಡಿದೆ . ರೈತರು ಶ್ರಮದಿಂದ ಊಟ ಮಾಡುವ ಎಲ್ಲರೂ ಈ ಬಂದ್‌ಗೆ ಬೆಂಬಲಿಸಬೇಕು , ಹಾಗೂ ರಾಜ್ಯದ ರೈತ ಪರ ಎಲ್ಲಾ ಸಂಘಟನೆಗಳು ಈ ಬಂದ್‌ನಲ್ಲಿ ಭಾಗವಹಿಸಿವೆ .
ಈ ಬಂದ್‌ಗೆ ಕನ್ನಡ ಪರ ಸಂಘಟನೆಗಳು , ಕಾರ್ಮಿಕರ ಸಂಘಟನೆಗಳು , ಮಹಿಳಾ ಸಂಘಟನೆಗಳು , ಸ್ವಯಂ ಸೇವಾ ಸಂಸ್ಥೆಗಳು ಸಹಕರಿಸಬೇಕು. ಅಹಿಂಸ ರೀತಿಯಲ್ಲಿ ಶಾಂತಿಯಿಂದ ವರ್ತಿಸಬೇಕೆಂದು ಎಂದು ರೈತ ಸಂಘದ ಮುಖಂಡರಾದ .ಆನಂದ್ ಪಟೀಲ್ ದನಂಜಯ ಸಿದರಾಜು ಸುನಿಲ್ ಕುಮಾರ್ ತಿಳಿಸಿದರು.