ತುರುವೇಕೆರೆ-: ಬಾಯಲ್ಲಿ ಶಾಂತಿ ಮಂತ್ರ ಜಪಿಸಿದರೂ ಎಲ್ಲಾ ರಾಷ್ಟ್ರಗಳೂ ಶಸ್ತ್ರಾಸ್ತ್ರಗಳನ್ನು ಸಂಗ್ರಹಿಸುತ್ತಲೇ ಇವೆ.ಜಾಗತಿಕ ಮಟ್ಟದಲ್ಲಿ ಹಲವು ದೇಶಗಳು ಯುದ್ದೋನ್ಮತ್ತವಾಗಿಯೇ ವರ್ತಿಸುತ್ತಿವೆ.ಇಂತಹ ಪರ್ವಕಾಲದಲ್ಲಿ ನಮ್ಮ ಅಸ್ತಿತ್ವ ಉಳಿಸಿಕೊಳ್ಳಲು ನಾವೂ ಸಹ ಇಸ್ರೇಲ್ ಮಾದರಿಯಲ್ಲಿ ಸ್ವಾಭಿಮಾನ ಮತ್ತು ದೇಶಾಭಿಮಾನವನ್ನು ಮೈಗೂಡಿಸಿಕೊಳ್ಳಬೇಕಿದೆ ಎಂದು ಜನಪ್ರಿಯ ವೈದ್ಯ ಡಾ.ನಾಗರಾಜ್ ಅಭಿಪ್ರಾಯಪಟ್ಟರು.
ಪಟ್ಟಣದ ಶ್ರೀ ಚಿದಂಬರೇಶ್ವರ ಗ್ರಂಥಾಲಯದಲ್ಲಿ ‘ಇಸ್ರೇಲ್ ಕೆಣಕಿ ಗೆದ್ದವರಿಲ್ಲ’ ಎಂಬ ಕೃತಿಯ ಬಗ್ಗೆ ಪರಾಮರ್ಶೆ ನಡೆಸಿದ ಮಾತನಾಡಿದ ಅವರು ಇಸ್ರೇಲ್ ಅತ್ಯಲ್ಪ ಕಾಲದಲ್ಲೇ ಎಲ್ಲಾ ಕ್ಷೇತ್ರಗಳಲ್ಲಿ ಸ್ವಾವಲಂಭಿ ದೇಶವಾಗಿ ಬೆಳೆದಿದೆ. ತನ್ನ ಮೇಲೆ ನಡೆದ ಆಕ್ರಮಣಗಳನ್ನು ಸಮರ್ಥವಾಗಿ ಹತ್ತಿಕ್ಕಿದೆ. ಅಲ್ಲಿನ ಪ್ರತಿಯೊಬ್ಬ ನಾಗರಿಕನೂ ಸೈನಿಕ ತರಬೇತಿ ಹೊಂದಿದ್ದಾನೆ. ಸದಾ ಕಾಲ ಚೀನ ಮತ್ತು ಪಾಕೀಸ್ಥಾನದ ದ್ವೇಷದ ನೆರಳಲ್ಲಿ ಬದುಕುವ ನಾವು ಸಹ ಇಸ್ರೇಲ್ ಮಾದರಿಯನ್ನು ಅನುಸರಿಸಬೇಕು ಎಂದರು.
ಲೇಖಕ ತುರುವೇಕೆರೆ ಪ್ರಸಾದ್, ಗ್ಲೋಬಲ್ ವಿದ್ಯಾಸಂಸ್ಥೆಗಳ ಸಂಸ್ಥಾಪಕ ಪ್ರೊ. ಎಂ.ಎಸ್.ಗಂಗಾಧರ ದೇವರಮನೆ, ಮಂಜುನಾಥ್ ಮೊದಲಾದವರು ಸಂವಾದದಲ್ಲಿ ಪಾಲ್ಗೊಂದು ಪ್ರತಿಕ್ರಿಯಿಸಿದರು.
ಸಮಾರಂಭದಲ್ಲಿ ಶುಶ್ರೂಶಕಿ ಜಯಮ್ಮ ಮತ್ತು ಸಮಾಜಸೇವಕಿ ಎಸ್.ಎಂ. ನಾಗರತ್ನಮ್ಮ ಅವರನ್ನು ಸನ್ಮಾನಿಸಲಾಯಿತು. ಗ್ರಂಥಾಲಯ ಸಂಸ್ಥಾಪಕಿ ಲಲಿತಾ ರಾಮಚಂದ್ರ ಅಧ್ಯಕ್ಷತೆ ವಹಿಸಿದ್ದರು.
ಪ.ಪಂ.ಅಧ್ಯಕ್ಷ ಚಿದಾನಂದ್, ಇನ್ನರ್‍ವೀಲ್ ಅಧ್ಯಕ್ಷೆ ಗೀತಾ ಸುರೇಶ್, ಉಪನ್ಯಾಸಕಿ ರೂಪಾ, ಉಷಾ ಶ್ರೀನಿವಾಸ್, ಮಹಾಲಕ್ಷ್ಮೀ ನರಸಿಂಹಮೂರ್ತಿ. ಆನಂದರಾಜ್, ಎಸ್.ಎಂ.ಕುಮಾರಸ್ವಾಮಿ, ಮಂಜಣ್ಣ, ಸತ್ಯನಾರಾಯಣ, ಶ್ರೀನಿವಾಸ್, ಬೋರಲಿಂಗಯ್ಯ ಇತರರು ಭಾಗವಹಿಸಿದ್ದರು. ಕೃಷ್ಣಚೈತನ್ಯ ಸ್ವಾಗತಿಸಿದರು, ಸುಷ್ಮಾ ವಂದಿಸಿದರು. ಟಿ.ರಾಮಚಂದ್ರು ನಿರೂಪಿಸಿದರು.