ಕುಣಿಗಲ್ : ತಾಲ್ಲೂಕು ಅಮೃತೂರು ಪೊಲೀಸ್ ಠಾಣೆ ವ್ಯಾಪ್ತಿಯ ಬ್ಯಾಲದಕೆರೆ ಬಳಿ ಶುಕ್ರವಾರ 3 ಗಂಟೆ ವೇಳೆಯಲ್ಲಿ ಭೀಕರ ಅಪಘಾತ ಸಂಭವಿಸಿದೆ. 13 ಜನರು ಮೃತಪಟ್ಟಿದ್ದಾರೆ.
ಬೆಂಗಳೂರಿನಿಂದ ಧರ್ಮಸ್ಥಳಕ್ಕೆ ತೆರಳುತ್ತಿದ್ದ ನಾಲ್ಕು ಯುವಕರಿದ್ದ ಕಾರು ಬ್ಯಾಲದಕೆರೆ ಬಳಿ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದಿದೆ. ಈ ವೇಳೆ ಎದುರಿಗೆ ಬರುತ್ತಿದ್ದ ಟವೇರಾ ವಾಹನಕ್ಕೆ ಡಿಕ್ಕಿ ಆಗಿದೆ. ಟವೇರಾದಲ್ಲಿದ್ದ 9 ಹಾಗೂ ಕಾರಿನಲ್ಲಿದ್ದ 3 ಮಂದಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.
ಟವೇರಾದಲ್ಲಿದ್ದ ಪ್ರಯಾಣಿಕರು ತಮಿಳುನಾಡಿನ ಹೊಸೂರಿನವರಾಗಿದ್ದು ಅವರು ಸಹ ಧರ್ಮಸ್ಥಳ ಪ್ರವಾಸ ಮುಗಿಸಿ ಹೊಸೂರಿಗೆ ವಾಪಸ್ ಆಗುತ್ತಿದ್ದರು.
ಹೊಸೂರಿನ ಮಂಜುನಾಥ್ ತಮ್ಮ 9 ತಿಂಗಳ ಹೆಣ್ಣು ಮಗುವಿನ ಮುಡಿ ತೆಗೆಸಲು ಹಾಗೂ ನಾಮಕರಣ ಮಾಡಲು ಧರ್ಮಸ್ಥಳಕ್ಕೆ ತಮ್ಮ ಕುಟುಂಬ ಹಾಗೂ ಸಂಬಂಧಿಕರ ಜತೆ ಬಂದಿದ್ದರು.
ಕುಣಿಗಲ್ ಸಾರ್ವಜನಿಕ ಆಸ್ಪತ್ರೆಯ ಶವಾಗಾರದಲ್ಲಿ ಶವಗಳನ್ನು ಇಡಲಾಗಿದೆ. ಹೆಚ್ಚು ಜನರು ಸೇರುವ ಸಾಧ್ಯತೆ ಇದೆ ಎಂದು ಪೊಲೀಸರು ಶವಾಗಾರ ಮತ್ತು ಆಸ್ಪತ್ರೆ ಸುತ್ತ ಬ್ಯಾರಿಕೇಡ್‌ಗಳನ್ನು ಅಳವಡಿಸಿದ್ದಾರೆ.
ಮೃತರ ವಿವರ
ಮಂಜುನಾಥ್ (35), ತನುಜಾ (25), ಒಂಬತ್ತು ತಿಂಗಳ ಹೆಣ್ಣು ಮಗು, ಗೌರಮ್ಮ (60), ರತ್ನಮ್ಮ (52), ಸೌಂದರರಾಜ್ (48), ರಾಜೇಂದ್ರ (27), ಸರಳಾ (32), ಪ್ರಶನ್ಯಾ (14), ಮಾಲಾಶ್ರೀ (4) ಲಕ್ಷ್ಮೀಕಾಂತ್ (24), ಸಂದೀಪ (36), ಮಧು (28) ಮೃತರು.
ಶ್ವೇತಾ (32), ಹರ್ಷಿತಾ (12), ಗಂಗೋತ್ರಿ (14). ಕ ಪ್ರಕಾಶ ಗಾಯಗೊಂಡಿದ್ದಾರೆ.