ತುಮಕೂರು ಜಿಲ್ಲೆಯಲ್ಲಿ ಇಬ್ಬರು ಯುವಕರಿಗೆ ಕೋವಿಡ್ 19 ದೃಢಪಟ್ಟಿದೆ. ವೃದ್ಧರಿಗೆ ಸೋಂಕು ಹೆಚ್ಚಾಗಿ ತಗಲುತ್ತದೆ ಎಂಬ ಸಮೀಕ್ಷೆ ಇದೀಗ ಸುಳ್ಳಾಗಿದೆ.
ದೆಹಲಿಯಲ್ಲಿ ಬಿ ಎಸ್ ಎಫ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ವ್ಯಕ್ತಿ ರಜೆಯ ಮೇಲೆ ಪಾವಗಡ ತಾಲ್ಲೂಕಿಗೆ ಹಿಂದಿರುಗಿದ್ದರು. ಅವರನ್ನು ಕ್ವಾರಂಟೈನ್ ಮಾಡಿ ಗಂಟಲು ದ್ರವ ಪ್ರಯೋಗಾಲಯಕ್ಕೆ ಕಳುಹಿಸಿಕೊಡಲಾಗಿತ್ತು. ಅವರಿಗೆ ಸೋಂಕು ದೃಢಪಟ್ಟಿದೆ. ಕುಣಿಗಲ್ ನ ಮತ್ತೊಬ್ಬ ಯುವಕನಿಗೂ ಇಂದು ಸೋಂಕು ದೃಢಪಟ್ಟಿದೆ. ಇವರಿಬ್ಬರೂ 30 ಕ್ಕಿಂತ ಕಡಿಮೆ ವಯೋಮಾನದವರು.
ರಾಜ್ಯದಲ್ಲಿ ಕೊರೊನಾ ಸೋಂಕು ಹೆಚ್ಚುತ್ತಿದ್ದು ಇಂದು ಸಂಜೆಯ ವೇಳೆಗೆ 248 ಹೊಸ ಪ್ರಕರಣ ಪತ್ತೆಯಾಗಿದೆ. ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 2781 ಕ್ಕೆ ಏರಿಕೆಯಾಗಿದೆ.
ರಾಜ್ಯದ್ಯಂತ ಒಂದು ದಿನದಲ್ಲಿ 60 ಮಂದಿ ಸೋಂಕಿನಿಂದ ಸಂಪೂರ್ಣ ಗುಣಮುಖವಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಮೃತಪಟ್ಟವರ ಸಂಖ್ಯೆ 48 ಕ್ಕೆ ಏರಿಕೆಯಾಗಿದೆ.
ಶುಕ್ರವಾರ ಮಧ್ಯಾಹ್ನ ಆರೋಗ್ಯ ಇಲಾಖೆ ಬುಲೆಟಿನ್ ನಲ್ಲಿ 178 ಮಂದಿಗೆ ಕೋವಿಡ್ 19 ದೃಢಪಟ್ಟಿರುವುದಾಗಿ ಮಾಹಿತಿ ನೀಡಿತ್ತು. ಸಂಜೆಯ ವೇಳೆಗೆ 248 ಕ್ಕೆ ಸೋಂಕಿತರ ಸಂಖ್ಯೆ ತಲುಪಿದೆ.
ಕೊರೊನಾ ಸೋಂಕಿಗೆ ರಾಜ್ಯದಲ್ಲಿ ಮತ್ತೊಬ್ಬರು ಮೃತಪಟ್ಟಿದ್ದಾರೆ. ಮೃತರ ಸಂಖ್ಯೆ 48 ಕ್ಕೆ ಏರಿಕೆಯಾಗಿದೆ. ಚಿಕ್ಕಬಳ್ಳಾಪುರ ಮೂಲದ 50 ವರ್ಷದ ಮಹಿಳೆಗೆ ನಿಮೋನಿಯಾ ಹಾಗು ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದರು. ಬೆಂಗಳೂರಿನ ಆಸ್ಪತ್ರೆಗೆ ದಾಖಲಿಸಿ ಕೋವಿಡ್ ಪರೀಕ್ಷೆ ನಡೆಲಾಗಿತ್ತು. ರದಿಯಲ್ಲಿ ಕೊರೊನಾ ಸೋಂಕು ಇರುವುದು ಧೃಡಪಟ್ಟಿತ್ತು, ಆದರೆ ಚಿಕಿತ್ಸೆ ಫಲಕಾರಿಯಾಗದೇ ಅವರು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ಇಂದು ಪತ್ತೆಯಾದ  ಪ್ರಕರಣಗಳು:  ಕಲಬುರಗಿ – 61, ಯಾದಗಿರಿ - 60, ರಾಯಚೂರು – 62, ಬೆಂಗಳೂರು – 12, ಉಡುಪಿ – 15,
ಮಂಡ್ಯ – 2, ದಾವಣಗೆರೆ – 04, ಹಾಸನ – 04, ಚಿಕ್ಕಬಳ್ಳಾಪುರ – 05, ಮೈಸೂರು – 02, ವಿಜಯಪುರ – 04, ಬಳ್ಳಾರಿ – 09, ಧಾರವಾಡ – 01, ಶಿವಮೊಗ್ಗ – 01, ಚಿತ್ರದುರ್ಗ – 01, ತುಮಕೂರು – 02, ಚಿಕ್ಕಮಗಳೂರು – 02, ಬೆಂ. ಗ್ರಾಮಾಂತರ – 01 ಪತ್ತೆಯಾಗಿದೆ.



 

