Publicstory. in
Bengaluru: ರಕ್ಷಣಾ ಸಚಿವಾಲಯ ಆಯೋಜಿಸುವ ದ್ವೈವಾರ್ಷಿಕ ಏರ್ ಷೋ ಮತ್ತು ರಕ್ಷಣಾ ಪ್ರದರ್ಶನ ಏರೋ ಇಂಡಿಯಾ – 2021 ಬೆಂಗಳೂರಿನ ಯಲಹಂಕ ವಾಯುನೆಲೆಯಲ್ಲಿ 2021ರ ಫೆಬ್ರವರಿ 3 ರಿಂದ 7ರ ವರೆಗೆ ನಡೆಯಲಿದೆ.
ಏರೋ ಇಂಡಿಯಾ ಏಷ್ಯಾದ ಅತಿ ದೊಡ್ಡ ವೈಮಾನಿಕ ಪ್ರದರ್ಶನವಾಗಿದ್ದು, ಮಿಲಿಟರಿ ಮತ್ತು ನಾಗರಿಕ ವಿಮಾನಯಾನ, ಬಾಹ್ಯಾಕಾಶ, ವಿಮಾನ ಮೂಲಸೌಕರ್ಯ ಮತ್ತು ರಕ್ಷಣಾ ಇಂಜಿನಿಯರಿಂಗ್ ವಲಯದಲ್ಲಿನ ಜಾಗತಿಕ ಮುಂಚೂಣಿ ಕಂಪನಿಗಳ ಪ್ರದರ್ಶಕರನ್ನು ಅತಿ ದೊಡ್ಡ ಸಂಖ್ಯೆಯಲ್ಲಿ ಆಕರ್ಷಿಸುವ ಪ್ರದರ್ಶನವಾಗಿದೆ.
ಪ್ರದರ್ಶನದಲ್ಲಿ ಏರೋ ಸ್ಪೇಸ್ ವಲಯದಲ್ಲಿ ಭಾರೀ ಪ್ರಮಾಣದ ಮಿಲಿಟರಿ ಉಪಕರಣಗಳ ಪ್ರದರ್ಶನ ಮತ್ತು ಹಾರಾಟ ಒಳಗೊಂಡಿದೆ.
ಏರೋ ಇಂಡಿಯಾ ಪ್ರದರ್ಶನದ ಅಂಗವಾಗಿ 2020ರ ಡಿಸೆಂಬರ್ 17ರಿಂದ ವೆಬಿನಾರ್ ಸರಣಿ ಆರಂಭವಾಗಲಿದೆ. ಈ ವೆಬಿನಾರ್ ಗಳನ್ನು ಬಾಹ್ಯಾಕಾಶ ಮತ್ತು ರಕ್ಷಣೆಗೆ ಸಂಬಂಧಿಸಿದಂತೆ ಸಮಕಾಲೀನ ವಿಷಯಗಳನ್ನು ಆಧರಿಸಿ ನಡೆಸಲಾಗುವುದು. ಈ ವೆಬಿನಾರ್ ಗಳನ್ನು ಜಗತ್ತಿನಾದ್ಯಂತ ಸ್ಟ್ರೀಮ್ ಮಾಡಲಾಗುವುದು ಎಂದು ಪ್ರಕಟಣೆ ತಿಳಿಸಿದೆ.