Publicstory.in
ತುಮಕೂರು: ಲಾಕ್ ಡೌನ್ ನಿಂದ ತೀವ್ರ ಸಂಕಷ್ಟಕ್ಕೆ ಸಿಲುಕಿರುವ ತುಮಕೂರು ಗ್ರಾಮಾಂತರ ಕ್ಷೇತ್ರದ ರೈತರು ಹಾಗೂ ಜನರಿಗೆ ಮಾಜಿ ಶಾಸಕ ಬಿ.ಸುರೇಶ ಗೌಡ ಅವರ ನೆರವಿನ ಹಸ್ತ ಮುಂದುವರೆಸಿದ್ದು, ಕಂದಾಯ ಸಚಿವ ಆರ್.ಆಶೋಕ್ ಭಾನುವಾರ {ಏ.19) ಊರ್ಡಿಗೆರೆಗೆ ಬರಲಿದ್ದಾರೆ.
ಇದನ್ನೂ ಓದಿ:https://publicstory.in/ತುಮಕೂರು-ಗ್ರಾಮಾಂತರದಲ್ಲಿ-ಸ/
ಎಲ್ಲರೂ ಮಾಸ್ಕ್ ಧರಿಸುವುದು ಕಡ್ಡಾಯವಾಗಿರುವ ಹಿನ್ನೆಲೆಯಲ್ಲಿ ಯೂಸಬಲ್ ಮಾಸ್ಕ್ ಗಳನ್ನು ವಿತರಿಸುವ ಕೆಲಸದಲ್ಲಿ ಸುರೇಶ ಗೌಡರು ತೊಡಗಿದ್ದಾರೆ. ಕ್ಷೇತ್ರದಲ್ಲಿ ಒಂದು ಲಕ್ಷ ಮಾಸ್ಕ್ ವಿತರಿಸುವ ಗುರಿಯನ್ನು ಹಾಕಿಕೊಂಡಿದ್ದು ಈಗಾಗಲೇ 20/ಸಾವಿರದಷ್ಟು ಹಂಚಿಕೆ ಮಾಡಿದ್ದಾರೆ.
ಸಂಜೆ 4ಕ್ಕೆ ನಡೆಯುವ ಮಾಸ್ಕ್ ಹಂಚಿಕೆ ಸಮಾರಂಭಕ್ಕೆ ಕಂದಾಯ ಸಚಿವರಾದ ಆರ್.ಆಶೋಕ್ ಚಾಲನೆ ನೀಡಿದರು. ಊರ್ಡಿಗೆರೆ ಪಂಚಾಯತಿ ವ್ಯಾಪ್ತಿಯಲ್ಲಿ 20 ಸಾವಿರ ಮಾಸ್ಕ್ ಹಂಚಿಕೆಗೆ ಸಚಿವರು ಚಾಲನೆ ನೀಡುತ್ತಿದ್ದಾರೆ.
ಮಾಜಿ ಶಾಸಕ ಸುರೇಶಗೌಡ ಅವರ ಸ್ವಂತ ಹಣದಲ್ಲಿ ಈ ಕೆಲಸಕ್ಕೆ ಚಾಲನೆ ನೀಡಿದ್ದಾರೆ. ಇದೇ ಅಲ್ಲದೇ ರೈತರಿಂದ ತರಕಾರಿ, ಬಾಳೆಗೊನೆ ಖರೀದಿಸಿ ಅದನ್ನು ಕ್ಷೇತ್ರದ ಜನರಿಗೆ ಉಚಿತವಾಗಿ ನೀಡುತ್ತಿದ್ದಾರೆ.
ಇದೇ ಅಲ್ಲದೇ ಪಡಿತರ ಕಾರ್ಡ್ ಇಲ್ಲದ ಕುಟುಂಬಗಳಿಗೆ ಅಕ್ಕಿ, ಬೇಳೆ, ಅಡುಗೆ ಎಣ್ಣೆ, ತರಕಾರಿ ಮತ್ತಿತರ ಸಾಮಾಗ್ರಿಗಳನ್ನು ಕೊಡುತ್ತಿದ್ದಾರೆ.
ಮಾಜಿ ಶಾಸಕರ ಕೆಲಸಕ್ಕೆ ಬಿಜೆಪಿ ಸಂಸದೆ ಶೋಭಾ ಕರಂದ್ಲಾಜೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಬಡವರು, ರೈತರ ಕೈ ಹಿಡಿಯುವಂತೆ ಪ್ರಧಾನಿ, ಮುಖ್ಯಮಂತ್ರಿ ಅವರ ಸಲಹೆಯನ್ನು ಅಕ್ಷರಶಃ ಸುರೇಶ ಗೌಡ ಜಾರಿಗೆ ತಂದಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.
ಈಗ ಕಂದಾಯ ಸಚಿವ ಆರ್.ಆಶೋಕ್ ಬರುತ್ತಿರುವುದು ಗಮನ ಸೆಳೆದಿದೆ.
ಇದನ್ನು ಓದಿ: https://publicstory.in/ಒಂದೇ-ದಿನ-5-ಟನ್-ತರಕಾರಿ-3-ಟನ್-ಬ/