Wednesday, January 15, 2025
Google search engine
Homeಪೊಲಿಟಿಕಲ್ಶಿರಾ ಬೈ ಎಲೆಕ್ಷನ್ ಕಣದಲ್ಲಿ ಡಾ.ಕೆ ನಾಗಣ್ಣ ಹೆಸರು: ಕರೆತರಲಿವೆಯೇ ಜೆಡಿಎಸ್, ಬಿಜೆಪಿ!

ಶಿರಾ ಬೈ ಎಲೆಕ್ಷನ್ ಕಣದಲ್ಲಿ ಡಾ.ಕೆ ನಾಗಣ್ಣ ಹೆಸರು: ಕರೆತರಲಿವೆಯೇ ಜೆಡಿಎಸ್, ಬಿಜೆಪಿ!

ಶಿರಾ: ಶಿರಾ ಉಪ ಚುನಾವಣೆಯಲ್ಲಿ ಚತುರ ರಾಜಕಾರಣಿ, ಕಾಂಗ್ರೆಸ್ ನ ಟಿ.ಬಿ.ಜಯಚಂದ್ರ ಅವರನ್ನು ಸೋಲಿಸಲು ಪ್ರಬಲ ಅಭ್ಯರ್ಥಿಗಾಗಿ ಹುಟುಕಾಟ ನಡೆಸಿರುವ ಬಿಜೆಪಿ, ಜೆಡಿಎಸ್ ಗೆ ಡಾ.ನಾಗಣ್ಣ ಉತ್ತರವಾಗಬಲ್ಲರೇ ಎಂಬ ಮಾತುಗಳು ಶಿರಾ ಕ್ಷೇತ್ರದಲ್ಲಿ ಮೆಲ್ಲಗೆ ಕೇಳಿ ಬರತೊಡಗಿವೆ.

ಉಪ ಚುನಾವಣೆಯಲ್ಲಿ ಈ ಭಾರಿ ಸ್ಪರ್ಧಿಸಿಸಲು ಬಿಜೆಪಿ, ಜೆಡಿಎಸ್, ಕಾಂಗ್ರೇಸ್, ಜೆಡಿಎಸ್ ಪಕ್ಷಗಳಿಂದ ಅಭ್ಯರ್ಥಿಗಳು ತುದಿಗಾಲಲ್ಲಿ ನಿಂತಿರುವುದನ್ನು ಕಾಣಲಾಗುತ್ತಿದೆ.

ಶಿರಾ ಕ್ಷೇತ್ರದಲ್ಲಿ ಅತಿ ಹೆಚ್ಚು ಪಶುಪಾಲಕರು, ಕುರಿಗಾಯಿಗಳು ಹೈನುಗಾರಿಕೆಯನ್ನು ಮಾಡಿಕೊಂಡು ಬದುಕುತ್ತಿದ್ದಾರೆ.ಇಂತಹವರಿಗೆ ಹಲವಾರು ರೀತಿಯಲ್ಲಿ ಸರಕಾರಿ ಇಲಾಖೆಯಲ್ಲಿ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿರುವ ಹಾಗೂ ಹಾಲಿ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ಸಹಾಯಕ ನಿರ್ದೇಶಕ ಡಾ.ಕೆ ನಾಗಣ್ಣರವರ ಹೆಸರು ಸಹ ಕೇಳಿ ಬರ ತೊಡಗಿದೆ

ಸರ್ಕಾರಿ ಅಧಿಕಾರಿಯಾದರೂ ಜನರ ಜತೆ ಅವರ ಒಡನಾಟ ಹೆಚ್ಚಿದೆ. ಕಳೆದ ಚುನಾವಣೆಯ ಸಂದರ್ಭದಲ್ಲೂ ಅವರು ಸ್ಪರ್ಧಿಸುವಂತೆ ಜನರೇ ಒತ್ತಡ ಹಾಕಿದ್ದರು. ಆದರೆ ಅವರು ಯಾವುದೇ ಪಕ್ಷದ ಜತೆ ಗುರುತಿಸಿಕೊಳ್ಳದ ಕಾರಣ ಮೌನವಹಿಸಿದ್ದರು.

ಡಾ.ಕೆ ನಾಗಣ್ಣ ಮೂಲತಃ ಶಿರಾ ತಾಲೂಕಿನ ಹುಲಿಕುಂಟೆ ಹೋಬಳಿಯ ರಾಗನಹಳ್ಳಿ ಗ್ರಾಮದ ರೈತ ಕುಟುಂಬದವರು.

ಇವರು ಪಶು ವೈದ್ಯಕೀಯ ಇಲಾಖೆಯಲ್ಲಿ ಪಶು ವೈದ್ಯರಾಗಿ ವೃತ್ತಿ ಆರಂಭಿಸಿದವರು,ಇವರು ಕ್ರೀಯಾಶೀಲ ಅಧಿಕಾರಿಯಾಗಿದ್ದು,ಇವರು ಜಲಾನಯನ ಇಲಾಖೆಯಲ್ಲಿ ಅಧಿಕಾರಿಯಾಗಿ ಕೆಲಸ ಮಾಡಿದ್ದಾರೆ.

*ಶಿರಾ ಕ್ಷೇತ್ರದ ಜನತೆಗೆ ತುಂಬಾ ಹತ್ತಿರ*:

ಈ ಹಿಂದೆ ಮಾಜಿ ಸಚಿವ ಟಿ.ಬಿ ಜಯಚಂದ್ರ ಸಚಿವರಾಗಿದ್ದಾಗ ಸಚಿವರ ವಿಶೇಷ ಕರ್ತವ್ಯ ಅಧಿಕಾರಿಯಾಗಿ ಎರಡು ವರ್ಷಗಳ ಕಾಲ ಕರ್ತವ್ಯ ನಿರ್ವಹಿಸಿದ್ದಾರೆ.ಇವರು ಆ ದಿನಗಳಲ್ಲಿ ಶಿರಾ ಜನತೆಗೆ ಕುರಿಸಾಕಾಣಿಕೆ ಮಾಡಲು ಸಾಲ ಸೌಲಭ್ಯ,ಕೃಷಿಕರಿಗೆ ನೀರಾವರಿ ಸೌಲಭ್ಯ,ಗಂಗಾ ಕಲ್ಯಾಣ ಯೋಜನೆ ಸೇರಿದಂತೆ ಹಲವಾರು ಸೌಲಭ್ಯಗಳನ್ನು ಒದಗಿಸುವಲ್ಲಿ ಜನರಿಗೆ ತುಂಬಾ ಹತ್ತಿರವಾಗಿದ್ದರು.

ತುಮಕೂರು ತಾಲೂಕಿನಲ್ಲಿ ಸೈ ಅನ್ನಿಸಿಕೊಂಡವರು

ತುಮಕೂರು ತಾಲ್ಲೂಕನ್ನು ಬಯಲು ಶೌಚ ಮುಕ್ತ ಮಾಡಲು ಇವರು ನಡೆಸಿದ ಗಾಂಧಿ ಮಾರ್ಗದ ಪ್ರಯೋಗ ಇಡೀ ರಾಜ್ಯದ ಗಮನ ಸೆಳೆದಿತ್ತು.

ಇವರು ಈ ಹಿಂದೆ ಬಿ.ಸುರೇಶ್‌ಗೌಡ ರವರು ಶಾಸಕರಾಗಿದ್ದ ಸಂದರ್ಭದಲ್ಲಿ ೩ ವರ್ಷಗಳ ಕಾಲ ತುಮಕೂರು ತಾಲೂಕು ಪಂಚಾಯಿತಿಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಉತ್ತಮ ಸೇವೆ ಸಲ್ಲಿಸಿದ್ದಾರೆ.ಅಲ್ಲದೇ ತುಮಕೂರು ಗ್ರಾಮಾಂತರದಲ್ಲಿ ಎಲ್ಲಾ ಅಧಿಕಾರಿಗಳ ಸಹಭಾಗಿತ್ವದಲ್ಲಿ ಎಲ್ಲಾ ಹಳ್ಳಿಗಳಿಗೂ ಭೇಟಿ ನೀಡಿ ರೈತರಿಗೆ ಸಿಗಬೇಕಾದ ಸೌಲಭ್ಯಗಳನ್ನು ವಿತರಿಸುವಲ್ಲಿ ಹಾಗೂ ಅರಿವು ಮೂಡಿಸುವಲ್ಲಿ ಹೆಚ್ಚಿನದಾಗಿ ನರೇಗಾದ ಯೋಜನೆಗಳನ್ನು ತಲುಪಿಸುವಲ್ಲಿ ಯಶಸ್ವಿಯಾಗಿದ್ದರು.

ಬಿ.ಸುರೇಶಗೌಡರು ಈಗ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷರಾಗಿದ್ದು, ಮನಸ್ಸು ಮಾಡಿದರೆ ನಾಗಣ್ಣ ಅವರನ್ನು ಕರೆತಂದು ಚುನಾವಣೆಗೆ ನಿಲ್ಲಿಸಬಹುದಾಗಿದೆ.‌ಪಕ್ಷದಲ್ಲಿ ಪ್ರಬಲ ಕುಂಚಿಟಿಗ ಅಭ್ಯರ್ಥಿಯೂ ಸಿಕ್ಕಂತಾಗಲಿದೆ.

*ನಿರಂತರ ಸಂಪರ್ಕದಲ್ಲಿದ್ದಾರೆ*:

ಇವರು ಸರಕಾರಿ ಇಲಾಖೆಯಲ್ಲಿ ಸೇವೆ ಸೇರಿ ೨೩ ವರ್ಷ ಕಳೆದಿದೆ. ಅಂದಿನಿಂದ ಇವರು ಶಿರಾ ಜನರೊಂದಿಗೆ ಉತ್ತಮ ಬಾಂಧವ್ಯ ಬೆಳೆಸಿಕೊಂಡಿದ್ದಾರೆ. ಇವರು ಸದ್ಯಕ್ಕೆ ತುಮಕೂರಿನ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ಸಹಾಯಕ ನಿರ್ದೇಶಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.ಇವರ ಕಚೇರಿಗೆ ಪ್ರತಿದಿನ ಜಿಲ್ಲೆಯ ಎಲ್ಲಾ ತಾಲೂಕಿನಿಂದಲೂ ಕುರಿಗಾಯಿಗಳು,ಹೈನುಗಾರರು,ಯುವಕರು ಬಂದು ಇಲಾಖೆಯಲ್ಲಿರುವ ಸೌಲಭ್ಯಗಳ ಬಗ್ಗೆ ಕೇಳಿ ಸೌಲಭ್ಯ ಪಡೆಯುತ್ತಾರೆ.

ಮೌನ ಮುರಿಯದ ನಾಗಣ್ಣ

ಕುಂಚಿಟಿಗ ಸಮುದಾಯಕ್ಕೆ ಸೇರಿದ ಡಾ.ಕೆ ನಾಗಣ್ಣನವರನ್ನು ಶಿರಾ ಚುನಾವಣೆಗೆ ಸ್ಪರ್ಧೆ ಮಾಡಲು ಬರುವಂತೆ ಕ್ಷೇತ್ರದ ಒತ್ತಾಯ ಮಾಡುತ್ತಿದ್ದರು,ಸರಕಾರಿ ಅಧಿಕಾರಿಯಾಗಿರುವ ಡಾ.ಕೆ ನಾಗಣ್ಣನವರು ಮತದಾರರಿಗೆ ಯಾವುದೇ ಉತ್ತರ ನೀಡದೇ ಮೌನ ತಾಳಿದ್ದಾರೆ.
*ಜಯ ಸಿಗುವದೇ..!*: ಡಾ.ಕೆ ನಾಗಣ್ಣನವರನ್ನು ಯಾವುದಾದರೂ ಒಂದು ಪಕ್ಷ ಅಭ್ಯರ್ಥಿಯಾಗಿ ಘೋಷಣೆ ಮಾಡಿದರೆ.ನಾಗಣ್ಣರವರು ಸರಕಾರಿ ಹುದ್ದೆಗೆ ಸ್ವಯಂ ನಿವೃತ್ತಿ ಪಡೆದು ಚುನಾವಣೆಯ ಅಖಾಡಕ್ಕೆ ದುಮುಕಿದರೆ ಗೆಲುವು ಸಿಗಬಹುದೇ ಎಂಬ ಮಾತುಗಳು ಹೊರ ಬರುತ್ತಿವೆ.

ಶಿರಾಗೆ ಆಧುನಿಕ ಕುರಿ ವಧಾಗಾರಾ ಸ್ಥಾಪನೆ ಮಾಡಲು ಜಯಚಂದ್ರ ಅವರು ಸಚಿವರಾಗಿ ತೋರಿದ ಆಸಕ್ತಿ ಹಿಂಸೆ ಇದೇ ನಾಗಣ್ಣ ಕಾರಣರು ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರವೇ ಆಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

ಇನ್ಸ್ಪೆಕ್ಟರ್ ಸಲ್ಮಾನ್ ಕೆ ಎನ್ on ಕ್ರೀಡಾಕೂಟ ಝಲಕ್
Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?