Sunday, December 22, 2024
Google search engine
Homeಜಸ್ಟ್ ನ್ಯೂಸ್ಹೊತ್ತು ಊಟಕ್ಕೂ ಪರದಾಡುತ್ತಿದ್ದೆ: ಸಿದ್ದರಾಮಯ್ಯ

ಹೊತ್ತು ಊಟಕ್ಕೂ ಪರದಾಡುತ್ತಿದ್ದೆ: ಸಿದ್ದರಾಮಯ್ಯ

  • ಹರೀಶ್ ಕಮ್ಮನಕೋಟೆ

ತುಮಕೂರು: ನಮ್ಮ ಸರ್ಕಾರದ ಅವಧಿಯಲ್ಲಿ 165 ಭರವಸೆಗಳನ್ನು ಈಡೇರಿಸುವ ಮೂಲಕ ನುಡಿದಂತೆ ನಡೆದಿದ್ದೇವೆ ಎಂದು ಮಾಜಿ ಮುಖ್ಯಂಮತ್ರಿ ಸಿದ್ದರಾಮಯ್ಯ ತಿಳಿಸಿದರು.

ನಗರದ ಬಾಲಭವನದಲ್ಲಿ ಭಾನುವಾರ ಆಯೋಜಿಸಿದ್ದ ಸಿದ್ದರಾಮಯ್ಯ ಆಡಳಿತ: ಅಂತರಂಗ ಬಹಿರಂಗ ಸಂಕಿರಣ- ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದೇವರಾಜ ಅರಸು, ಅಂಬೇಡ್ಕರ್, ವಾಲ್ಮೀಕಿ ಮತ್ತು ಅಲ್ಪಸಂಖ್ಯಾತರ ಹೆಸರಿನಲ್ಲಿ ತೆಗೆದುಕೊಂಡಿದ್ದ ಸಾಲವನ್ನು ಬಡ್ಡಿ ಸಮೇತ ಮನ್ನಾ ಹಾಗೂ ಜನತಾ ಮನೆಗಳ ಸಾಲವನ್ನೂ ಮನ್ನಾ ಮಾಡಿದ್ದೇನೆ. ಅನ್ನಭಾಗ್ಯ, ಕ್ಷೀರ ಭಾಗ್ಯ, ಕೃಷಿ ಭಾಗ್ಯ ಒಳಗೊಂಡಂತೆ ನಾನು ಅಧಿಕಾರಕ್ಕೆ ಬಂದ ಒಂದು ಗಂಟೆಯಲ್ಲಿ ವಿವಿಧ ಕಾರ್ಯಕ್ರಮಗಳನ್ನು ಜಾರಿ ಮಾಡಿದ್ದೇನೆ ಎಂದರು.

ನಾನು ಬಿಎಸ್ಸಿ ಓದುವಾಗ ಬಾಡಿಗೆ ಮನೆಮಾಡಿಕೊಂಡಿದ್ದೆ. ಊಟಕ್ಕೆ ಪರದಾಡುವ ಸ್ಥಿತಿ ಇತ್ತು. ಕಾಲೇಜು ಸಮಯದ ಕಷ್ಟದ ದಿನಗಳ ಅನುಭವ ನನಗಿದ್ದುದ್ದರಿಂದ, ಹಾಸ್ಟೆಲ್ ಸಿಗದೆ ಬಾಡಿಗೆ ರೂಂ ಮಾಡಿಕೊಂಡು ಓದುತ್ತಿರುವ ವಿದ್ಯಾರ್ಥಿಗಳಿಗೆ ಅನುಕೂಲ ವಾಗಲೆಂದು ತಿಂಗಳಿಗೆ ಒಂದೂವರೆ ಸಾವಿರದಂತೆ ವರ್ಷಕ್ಕೆ ಹದಿನೈದು ಸಾವಿರ ದೊರಕಿಸಲು ವಿದ್ಯಾಸಿರಿ ಯೋಜನೆಯನ್ನು ಜಾರಿಗೆ ತಂದೆ. ಶಿಕ್ಷಣವು ಹಣವಂತರಿಗೆ ಮಾತ್ರ ದಕ್ಕುವುದಲ್ಲ. ಅದು ಎಲ್ಲ ಸಮುದಾಯದ ಮಕ್ಕಳಿಗೆ ದೊರೆಯಬೇಕೆಂಬ ಉದ್ದೇಶದಿಂದ 1994ರಲ್ಲಿ ಹಣಕಾಸು ಮಂತ್ರಿಯಾಗಿದ್ದಾಗ ಮುರಾರ್ಜಿ ದೇಸಾಯಿ ವಸತಿಶಾಲೆಗಳನ್ನು ನಿರ್ಮಾಣ ಮಾಡಲು ಹೋಬಳಿಗೊಂದರಂತೆ ಅನುದಾನ ಘೋಷಿಸಿದೆ. ಮುಖ್ಯಮಂತ್ರಿಯಾದ ಮೇಲೆ ರಾಜ್ಯದಲ್ಲಿ ಎಷ್ಟು ಹೋಬಳಿಗಳಿವೆ ಅದಕ್ಕಿಂತಲೂ ಹೆಚ್ಚು ವಸತಿ ಶಾಲೆಗಳನ್ನು ನಿರ್ಮಾಣ ಮಾಡಿದ್ದೇನೆ ಎಂದು ತಿಳಿಸಿದರು.

ಅಂಬೇಡ್ಕರ್ ರಚನೆ ಮಾಡಿರುವ ಸಂವಿಧಾನ ಅವರ ಅನುಭವದ ಆಧಾರದ ಮೇಲೆ ನಿರ್ಮಿತವಾದಂತೆ ನಾನು ಜಾರಿಗೆ ತಂದ ಯೋಜನೆಗಳೂ ನನ್ನ ಅನುಭವದ ಮೇಲೆ ನಿರ್ಮಾಣವಾಗಿದೆ‌. ಸರ್ಕಾರಗಳು ಸಂವಿಧಾನದ ಆಶಯದಂತೆ ನಡೆಯಬೇಕು ಹಾಗೂ ಅನ್ಯಾಯಕ್ಕೊಳಗಾದವರು, ಶೋಷಿತರು, ವಂಚಿತರ ಪರವಾಗಿ ನಿಲ್ಲಬೇಕು, ಸಾಮಾಜಿಕ ನ್ಯಾಯಕ್ಕಾಗಿ ಹೋರಾಡಬೇಕು ಎಂದರು.

#ಎಸ್ಸಿ ಎಸ್ಟಿ ಸಬಲೀಕರಣಕ್ಕೆ ಕಾನೂನು#

ಪರಿಶಿಷ್ಟ ಜಾತಿ ಮತ್ತು ಪಂಗಡದವರು ಆರ್ಥಿಕವಾಗಿ ಸಬಲರಾಗದೇ ಹೋದರೆ ಮುಖ್ಯವಾಹಿನಿಗೆ ಬರುವುದು ಸಾಧ್ಯವಿಲ್ಲ. ಅದಕ್ಕಾಗಿಯೇ ಅವರಿಗೆ ಕಾಂಟ್ರಾಕ್ಟ್ ಮೀಸಲಾತಿಯನ್ನು ತಂದೆವು. ಬಡ್ತಿ ನೀಡಲಿಕ್ಕಾಗಿಯೇ ಕಾನೂನನ್ನು ಮಾಡಿದೆ. ಇಂಥ ಯೋಜನೆಗಳು ದೇಶದಲ್ಲಿಯೇ‌ ಮೊದಲು ನಮ್ಮ ಸರ್ಕಾರದ ಅವಧಿಯಲ್ಲಿ ರೂಪಿತವಾದವು. ಕರ್ನಾಟಕದಲ್ಲಿ ಎಸ್ಸಿ, ಎಸ್ಟಿ ಜನಾಂಗ 24.1ರಷ್ಟಿದೆ. ಜನಸಂಖ್ಯಾ ಅನುಗುಣವಾಗಿ ಹಣವನ್ನು ಖರ್ಚು ಮಾಡಬೇಕೆಂದು ಎಸ್‌ಸಿಪಿ-ಟಿಎಸ್‌ಪಿಯ ಕಡ್ಡಾಯ ಕಾನೂನನ್ನು ಜಾರಿ ಮಾಡಲಾಯಿತು. ನಮ್ಮ ಕಾಲದಲ್ಲಿ ಬಜೆಟ್ ಗಾತ್ರ 2.2ಲಕ್ಷ ಕೋಟಿ ಇತ್ತು. ಆಗ ಎಸ್ಸಿಪಿ ಟಿಎಸ್ಪಿಗಾಗಿ 30 ಸಾವಿರ ಕೋಟಿಯಷ್ಟು ಮೀಸಲಿಟ್ಟಿದ್ದೆವು. ಈಗಿನ ಸರ್ಕಾರದ ಬಜೆಟ್ ಗಾತ್ರ 2,65,720 ಕೋಟಿ ಇದೆ. ಆದರೂ 28 ಸಾವಿರ ಕೋಟಿಯನ್ನು ಮೀಸಲಿಟ್ಟಿದ್ದಾರೆ. ಅಲ್ಲದೆ 7,885 ಕೋಟಿ ಹಣವನ್ನು ಡೈವರ್ಟ್ ಮಾಡಲಾಗಿದೆ ಎಂದು ತಿಳಿಸಿದರು.

#ಸಿದ್ದರಾಮಯ್ಯ ಬೇಸರ#

ಸಂವಿಧಾನದ ಆಶಯದಂತೆ ನಡೆದಕೊಂಡಿದ್ದೇನೆ. ಜನಪರ ನಿಲುವುಗಳನ್ನು ತಳೆದಿದ್ದೇನೆ ಆದರೂ ನನ್ನನ್ನು ಚುನಾವಣೆಯಲ್ಲಿ ಸೋಲಿಸಿದರು ಎಂದು ಬೇಸರ ವ್ಯಕ್ತಪಡಿಸಿದರು.

ಜಾತಿ ವ್ಯವಸ್ಥೆ ಎಲ್ಲೀವರೆಗೆ ಇರುತ್ತದೆಯೋ ಅಲ್ಲಿವರೆಗೆ ಪಾರದರ್ಶಕ ಆಡಳಿತ, ಭ್ರಷ್ಟಾಚಾರ ಮುಕ್ತ ಹಾಗೂ ಜನಪರ ಆಡಳಿತ ನೀಡಲು ಸಾಧ್ಯವಿಲ್ಲ. ದೇಶದಲ್ಲಿ ಯಾರು ಜೈಲಿಗೆ ಹೋಗಿ ಬಂದಿರುತ್ತಾರೋ ಅವರೆಲ್ಲ ಜನಪ್ರಿಯರಾಗುತ್ತಿದ್ದಾರೆ. ಇಂದು ಸಾಧನೆಗಳ ಆಧಾರದ ಮೇಲೆ ಚುನಾವಣೆಗಳು ನಡೆಯುತ್ತಿಲ್ಲ. ಒಬ್ಬ ವ್ಯಕ್ತಿಯ ಯೋಗ್ಯತೆಯನ್ನು ಜಾತಿಯಿಂದ ಅಳೆಯಲಾಗುತ್ತಿದೆ. ಈ ವಿಚಾರಗಳು ಸಮಾಜದಲ್ಲಿ ಸರ್ವೇ ಸಾಮಾನ್ಯವಾಗಿವೆ.
ನಾನು ಕುರುಬ ಎಂಬ ಕಾರಣಕ್ಕೆ ತನಗೆ ನೂರು ಕುರಿ ಲೆಕ್ಕಹಾಕಲು ಬರುವುದಿಲ್ಲ ಎಂದಿದ್ದರು ಎಂದು ಸಿದ್ದರಾಮಯ್ಯ ಹಿಂದಿನ ದಿನಗಳನ್ನು ನೆನಪಿಸಿಕೊಂಡರು.

ಈ ವೇಳೆ ಮಾಜಿ ಶಾಸಕ ಕೆ.ಎನ್.ರಾಜಣ್ಣ, ಕಡೂರು ಮಾಜಿ ಶಾಸಕ ವೈ.ಎಸ್.ವಿ ದತ್ತಾ, ಗ್ರಂಥ ಸಂಪಾದಕ ಕಾ ತಾ ಚಿಕ್ಕಣ್ಣ ಹಾಗೂ ಚಿಂತಕರಾದ ನಟರಾಜ ಭೂದಾಳು, ಮೋಹನ ಚಂದ್ರಗುತ್ತಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

ಇನ್ಸ್ಪೆಕ್ಟರ್ ಸಲ್ಮಾನ್ ಕೆ ಎನ್ on ಕ್ರೀಡಾಕೂಟ ಝಲಕ್
Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?